Subscribe to Updates
Get the latest creative news from FooBar about art, design and business.
- ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ: ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ
- ತಿಪಟೂರು: ಜೆಡಿಎಸ್ ಎಸ್ಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಜನವರಿ 31ರಂದು ಬೃಹತ್ ಉದ್ಯೋಗ ಮೇಳ
- ತುಮಕೂರು ಪ್ರಿಂಟಿಂಗ್ ಹಬ್ ಆಗಲಿ: ಸಿ.ಸಿ.ಪಾವಟೆ
- ತುಮಕೂರು ಜಿಲ್ಲೆಯಲ್ಲಿ 46 ಸಾವಿರ ಮಂದಿ ವಿಕಲಚೇತನರಿದ್ದಾರೆ: ಡಾ.ಸಿದ್ಧರಾಮಣ್ಣ ಕೆ.
- ಸರ್ಕಾರಗಳಿಂದ ರೈತರ ಸಂಘಟನೆಗಳ ದುರುಪಯೋಗ: ಹೆಚ್.ಎ.ಜಯರಾಮಯ್ಯ
- ತುಮಕೂರು: ಕನ್ನಡ ಶಾಲೆಗಳ ಬಲವರ್ಧನೆಗೆ ಸಮ್ಮೇಳನದಲ್ಲಿ ಪ್ರಮುಖ ನಿರ್ಣಯಗಳ ಅಂಗೀಕಾರ
- ಅಶ್ಲೀಲ ವಿಡಿಯೋ ನೋಡಿ ಅದೇ ರೀತಿ ಮಾಡಲು ಪೀಡಿಸುತ್ತಿದ್ದ ‘ಸೈಕೋ’ ಪತಿ; ಪೊಲೀಸ್ ಮೆಟ್ಟಿಲೇರಿದ ಪತ್ನಿ!
- ಬೆಂಗಳೂರು: ಬಯೋಕಾನ್ ಕಂಪನಿಯ 5ನೇ ಮಹಡಿಯಿಂದ ಬಿದ್ದು ಉದ್ಯೋಗಿ ಸಾವು
Author: admin
ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ಆಗಸ್ಟ್ 15ರಿಂದ ನಿಷೇಧ ಮಾಡಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 15 ರಿಂದ ಪ್ಲಾಸ್ಟಿಕ್ ಮುಕ್ತ ದೇವಾಲಯ ಪ್ರಾರಂಭ ಮಾಡುತ್ತಿದ್ದೇವೆ. ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಸೂಚಿಸಿದರು. ಈ ಆದೇಶ ಜಾರಿಗೆ 2 ತಿಂಗಳು ಸಮಯ ಕೊಡಲಾಗಿದ್ದು, ಈಗಾಗಲೇ ಪ್ಲಾಸ್ಟಿಕ್ ಪದಾರ್ಥಗಳು ತೆಗೆದುಕೊಂಡಿದ್ದರೆ ಅದನ್ನು ಬಳಕೆ ಮಾಡಬಹುದು. ಆಗಸ್ಟ್ 15 ರಿಂದ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಔರಾದ: ಡಾ.ಸಿಂಧೆ ಭೀಮಸೇನ್ ರಾವ್ ಅವರು ಸೋಮವಾರ ರಾಜ್ಯ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಔರಾದ ಮತ್ತು ಕಮಲನಗರ ತಾಲ್ಲೂಕುಗಳ ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಗುಣಮಟ್ಟದ ಸೋಯಾಬೀನ್ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವಂತೆ ಮನವಿ ಪತ್ರ ಸಲ್ಲಿಸಿದರು. ರಾಜ್ಯಾದಾದ್ಯಂತ ಮುಂಗಾರು ಮಳೆ ಪ್ರಾರಂಭವಾಗಿದ್ದು, ಬೀದರ್ ಜಿಲ್ಲೆಯ ಔರಾದ (ಬಿ) ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ರೈತರು ಹೊಲಗಳನ್ನು ಹಸನು ಮಾಡಿಕೊಂಡು ರೈತರ ಪ್ರಮುಖ ಬೆಳೆಯಾದ ಸೋಯಾ ಬೀನ್ ಬಿತ್ತನೆ ಮಾಡಲು ಉತ್ತಮ ಗುಣಮಟ್ಟದ ಸೋಯಬೀನ್ ಬಿತ್ತನೆ ಬೀಜಕ್ಕಾಗಿ ರೈತರು ಕಾಯುತ್ತಿದ್ದಾರೆ. ರೈತರಿಗೆ ಬಿತ್ತನೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಕೃಷಿ ಇಲಾಖೆಯಿಂದ ತ್ವರಿತವಾಗಿ ಹಾಗೂ ಸಮರ್ಪಕ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಸೋಯಾ ಬೀಜದ ಲಭ್ಯತೆ ಅವಶ್ಯಕವಾಗಿರುತ್ತದೆ. ಆದರೆ ಪ್ರಸ್ತುತ ಈ ಭಾಗದಲ್ಲಿ ಹಲವಾರು ರೈತರು ಬೀಜದ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದುದರಿಂದ ಕೃಷಿ ಇಲಾಖೆಯ ಮೂಲಕ ಶಾಶ್ವತವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಸೋಯಾ ಬೀಜಗಳನ್ನ, ಸರಕಾರದಿಂದ ಅನುಮೋದಿತ, ಪ್ರಮಾಣಿತ ಹಾಗೂ ತಪಾಸಣೆಯಾದ…
ಬೆಂಗಳೂರು: ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸುವ ಕುರಿತಂತೆ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವರಾದ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದೇನೆ ಎಂದು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು. ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಲು ಸ್ಮಾರ್ಟ್ ಸಿಟಿಯಿಂದ 5 ಕೋಟಿ ರೂ. ಒದಗಿಸಿಕೊಂಡಿದ್ದೇವೆ. ರಾಷ್ಟ್ರೀಯ ಹೆದ್ದಾರಿಯ ಸ್ಥಳೀಯ ನಿರ್ದೇಶಕರು ಆಗುವುದಿಲ್ಲ ಎಂದು ನಮಗೆ ತಿಳಿಸಿದ್ದರು. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿಯಾಗಬೇಕಿದೆ. ಕೇಂದ್ರದ ಸಚಿವರಾದ ವಿ.ಸೋಮಣ್ಣ ಅವರು ನಮ್ಮ ಜಿಲ್ಲೆಯ ಸಂಸದರು. ಕೇಂದ್ರದ ಭೂಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ವಿ.ಸೋಮಣ್ಣ ಅವರ ಮೂಲಕ ಮನವಿ ನೀಡಿ, ಅನುಮತಿಯನ್ನು ಕೊಡಿಸುವಂತೆ ಕೇಳಿದ್ದೇನೆ. ಅನುಮತಿ ಕೊಟ್ಟರೆ ತುಮಕೂರಿನ ಆರಂಭದಲ್ಲಿ ಸ್ವಾಗತ ಕಮಾನು ನಿರ್ಮಿಸುತ್ತೇವೆ ಎಂದು ತಿಳಿಸಿದರು. ನಮ್ಮ ಜಿಲ್ಲೆಗೆ ಕೇಂದ್ರದ ಅನೇಕ ಯೋಜನೆಗಳು ಆಗಬೇಕಿದೆ. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಅನೇಕ ಯೋಜನೆಗಳು ಕೇಂದ್ರ…
ತುಮಕೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಮೊಮ್ಮಗ ಮನೋಜ್ ಸಾವಿನ ಸುದ್ದಿಗೆ ಆಘಾತಕ್ಕೆ ಒಳಗಾಗಿದ್ದ ಅಜ್ಜಿ ಮೃತಪಟ್ಟಿರೋ ಘಟನೆ ಕುಣಿಗಲ್ ತಾಲ್ಲೂಕಿನ ನಾಗಸಂದ್ರದಲ್ಲಿ ನಡೆದಿದೆ. ಮನೋಜ್ ಅಜ್ಜಿ ದೇವಿರಮ್ಮ (70) ಮೃತಪಟ್ಟ ವೃದ್ಧೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದಿದ್ದ ಕಾಲ್ತುಣಿತ ಪ್ರಕರಣದಲ್ಲಿ ಮನೋಜ್ ಸೇರಿದಂತೆ 11 ಮಂದಿ ಮೃತಪಟ್ಟಿದ್ದರು. ಮೊಮ್ಮಗ ಮನೋಜ್ ಮೃತಪಟ್ಟ ಸುದ್ದಿಯಿಂದ ಆಘಾತಗೊಂಡಿದ್ದ ಅಜ್ಜಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದೀಗ ಕೊನೆ ಉಸಿರು ಎಳೆದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಡೆಸಲಿದೆ. ಕೇಂದ್ರ ಗೃಹ ಸಚಿವಾಲಯ ಭಾನುವಾರ ಈ ಸಂಬಂಧ ಆದೇಶ ಹೊರಡಿಸಿದೆ. ಸುಮಾರು ಒಂದು ತಿಂಗಳ ಹಿಂದೆ ನಡೆದ ಈ ಕೊಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನತೆಯ ವಾತಾವರಣವನ್ನು ಸೃಷ್ಟಿಸಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಎಂಟು ಜನರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ. 2025ರ ಆರಂಭದಲ್ಲಿ ಮಂಗಳೂರಿನಲ್ಲಿ 42 ವರ್ಷದ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಘಟನೆಯ ನಂತರ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಯಿತು. ವಿಶ್ವ ಹಿಂದೂ ಪರಿಷತ್ (VHP) ಮತ್ತು ಇತರ ಹಿಂದೂ ಸಂಘಟನೆಗಳು ಮೇ 3 ರಂದು ಜಿಲ್ಲಾದ್ಯಂತ ಬಂದ್ ಗೆ ಕರೆ ನೀಡಿದ್ದವು. ಪ್ರತಿಭಟನೆ ವೇಳೆ ಪ್ರಕರಣವನ್ನು ಎನ್ ಐಎಗೆ ವಹಿಸಬೇಕು ಎಂದು ಪಟ್ಟುಹಿಡಿದಿದ್ದವು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ತುಮಕೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ ತುಮಕೂರು ಮೂಲದ ಮನೋಜ್ ಕುಟುಂಬಕ್ಕೆ ಸರ್ಕಾರದ ಆದೇಶದಂತೆ 25 ಲಕ್ಷ ರೂ ಹಣದ ಚೆಕ್ ಅನ್ನು ತುಮಕೂರು ಎಸ್ಪಿ ಶುಭ ಕಲ್ಯಾಣ್ ರಿಂದ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೃತ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದಾರೆ ಸರ್ ಮಗ ಬರೊಲ್ವಲ್ಲ. ಚೆಕ್ ಕೊಟ್ಟರೆ ಮಗಾ ಬರ್ತಾನಾ, ಇದ್ದೊನು ಒಬ್ಬನೇ ಮಗ ಎಂದು ನೊಂದು ನುಡಿದರು. 25 ಲಕ್ಷ ಚೆಕ್ ಕೊಟ್ಟಿದ್ದಾರೆ, ಈ ಹಣ ನನ್ನ ಉಪಯೋಗಕ್ಕೆ ನಾನೇನು ಮಾಡಿಕೊಳ್ಳಲ್ಲ. ನನ್ನ ಮಗಳು, ಅವರ ಅಮ್ಮನಾಕೌಂಟ್ ಗೆ ಹಾಕುತ್ತೇನೆ. ಅವರ ಜೀವನಾಂಶಕ್ಕೆ ಹಣ ಇಡುತ್ತೇನೆ ಎಂದರು. ಬಂದ ಚೆಕ್ ಹಣದ ಒಂದು ರೂಪಾಯಿ ಸಹ ಖರ್ಚು ಮಾಡಿಕೊಳ್ಳಲ್ಲ. ದುಡ್ಡು ಕೊಟ್ಟರೆ ಯಾರು ಬರಲ್ಲೊ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿತ್ತು. ನಮ್ಮಂತವರು ಎಷ್ಟೋ ಜನ ಇದ್ದಾರೆ. ಅವರ ಪರಿಸ್ಥಿತಿ ಹೇಗಿರುತ್ತೆ ಅಂತ ಯೋಚನೆ ಮಾಡಬೇಕು ಎಂದರು. ಇನ್ನೊಂದೆರೆಡು ವರ್ಷಕ್ಕೆ ಓದು ಮುಗಿಯುತಿತ್ತು. ಕೆಲಸಕ್ಕೂ ಸಹ…
ತುಮಕೂರು: ಒಬ್ಬ ವ್ಯಕ್ತಿಯ ದೃಷ್ಟಿಕೋನ, ಜೀವನದ ಬಗ್ಗೆ ಇರುವ ಆಳವಾದ ಅರಿವು, ಅನಿಸಿಕೆ, ಲೋಕದೃಷ್ಟಿ ಮುಂತಾದವುಗಳ ಮೊತ್ತ ಜೀವನದರ್ಶನವಾಗಿದೆ. ಜೀವ ಜಗತ್ತಿನಲ್ಲಿ ಮನುಷ್ಯನ ಪಾತ್ರ, ಸುಖ ದುಃಖಗಳ ಅರ್ಥ, ಬದುಕಿನಲ್ಲಿ ಅವುಗಳ ಪರಿಣಾಮ ಇಂತಹ ವಿಚಾರವನ್ನು ಸಾಹಿತ್ಯದಲ್ಲಿ ಹುಡುಕುವ ಪ್ರಕ್ರಿಯೆ ಉಂಟಾಗಿದೆ. ಸಾಹಿತ್ಯವು ಜೀವನದ ದೃಷ್ಟಿಕೋನದ ಜೊತೆ ಬದುಕಿನ ಪ್ರತಿಬಿಂಬದಂತೆ ಕಾರ್ಯನಿರ್ವಹಿಸುತ್ತದೆ ಎಂದು ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಡಾ. ಎನ್.ಆರ್.ಲಲಿತಾಂಬ ಅಭಿಪ್ರಾಯ ಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ದಿ. ಗುಬ್ಬಿ ಬೊಮ್ಮಣ್ಣಯ್ಯ ಸ್ಮಾರಕ ಹಳಗನ್ನಡ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳಗನ್ನಡ ಸಾಹಿತ್ಯದಲ್ಲಿ ಪ್ರಮುಖವಾಗಿ ನೈತಿಕ ಮತ್ತು ನಾಗರಿಕ ಜೀವನ ದರ್ಶನ ತತ್ವಗಳು, ಯಾವುದು ಹಿತ ಯಾವುದು ಅಹಿತ ಎಂಬುದನ್ನು ಕಾಣಬಹುದು. ಮಾನವನು ವೈರಾಗ್ಯ, ಮೋಹ, ದ್ವೇಷವನ್ನು ತ್ಯಜಿಸಿ ಆತ್ಮಶುದ್ಧಿ, ತ್ಯಾಗ, ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದರು. ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕವಿರಾಜಮಾರ್ಗ ಇಂತಹ ಮಹಾನ್…
ಶ್ರವಣಬೆಳಗೊಳ: ಇಂದು ಪರಿಸರ ನಾಶ ಮಾಡಿದರೆ ಮುಂದೆ ಕ್ರಮೇಣ ಮನುಕುಲದ ನಾಶವಾಗಲಿದೆ ಎಂದು ಶ್ರವಣಬೆಳಗೊಳ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಾಹುಬಲಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಗುರುವಾರ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರ, ಗಿಡ, ಕಲ್ಲು, ಮಣ್ಣು, ನದಿ ಹೀಗೆ ಪ್ರಕೃತಿಯನ್ನು ಆರಾಧಿಸುವ ದೇಶ ಭಾರತ. ನಮ್ಮ ಪೂರ್ವಜರು ಪರಿಸರಕ್ಕೆ ದೈವತ್ವ ಹಾಗೂ ಪೂಜನೀಯ ಸ್ಥಾನ ನೀಡಿದ್ದರು. ಮನುಷ್ಯ ನಿರ್ಮಾಣ ಮಾಡಲು ಸಾಧ್ಯವಾಗದ ಪ್ರತಿಯೊಂದು ವಸ್ತುವೂ ಪರಿಸರವಾಗಿದ್ದು, ಆಧುನಿಕತೆಯ ಭರಾಟೆಯಲ್ಲಿ ಇಂದು ಮನುಷ್ಯ ಈ ಪರಿಸರವನ್ನು ನಾಶ ಮಾಡುತ್ತಿರುವುದು ವಿಷಾದನೀಯ ಎಂದರು. ಮುಂದಿನ ಪೀಳಿಗೆಗೆ ಬದುಕಲು ಅತ್ಯಾವಶ್ಯಕವಾದ ಉತ್ತಮ ಗಾಳಿ, ನೀರು ದೊರೆಯಬೇಕಾದರೆ ಪರಿಸರ ರಕ್ಷಣೆ ಹಾಗೂ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಆರ್.ಯುವರಾಜ್ ಮಾತನಾಡಿ,…
ಬೆಂಗಳೂರು: ಆರ್‌ಸಿಬಿ ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದು, ಇಡೀ ಸರ್ಕಾರವನ್ನು ವಜಾ ಮಾಡಲು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಿಲ್ಲಿ ನಲವತ್ತು ಜನ ಪ್ರತಿಭಟನೆ ಮಾಡ್ತಿದೀವಿ, ಪೊಲೀಸರು 150 ಜನ ಬಂದಿದ್ದಾರೆ, ಗನ್ ಗಳನ್ನೂ ತಂದಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ, ನಮ್ಮನ್ನೂ ಬಂಧಿಸಬಹುದು. ಸಿಎಂ, ಡಿಸಿಎಂ ವಿಸ್ಕಿ ಬಾಟಲಿ ಆರ್‌ಸಿಬಿ ಪ್ರಮೋಷನ್ ಗೆ ವಿಧಾನಸೌಧ ಕಾರ್ಯಕ್ರಮ ಮಾಡಿದ್ದಾರೆ. ಆರ್ ಸಿಬಿ ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು ಎಂದು ವ್ಯಂಗ್ಯ ಮಾಡಿದ್ದಾರೆ. ಪೊಲೀಸರ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೊಲೀಸರ ರಕ್ಷಣೆ ಯಾರು ಮಾಡ್ತಾರೆ? ನಾವು ಪೊಲೀಸರ ಜೊತೆ ನಿಲ್ತೇವೆ. ಈ ಪ್ರಕರಣದಲ್ಲಿ ಪೊಲೀಸರ ಪರ ನಮ್ಮ ಹೋರಾಟ, ದುರಂತದಲ್ಲಿ ಪೊಲೀಸರ ಪಾತ್ರ ಇಲ್ಲ. ವಿಧಾನಸೌಧ ಡಿಸಿಪಿ ಕ್ಲೀನಾಗಿ ಪತ್ರದಲ್ಲಿ ಬರೆದಿದ್ದಾರೆ. ಸಿಬ್ಬಂದಿ ಇಲ್ಲ ಅಂದ್ರೂ ಹೇಗೆ ಕಾರ್ಯಕ್ರಮ ಮಾಡಿದ್ರಿ? ಎಂದು ಪ್ರಶ್ನಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ…
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಬಲಿಯಾದ 11 ಜನ ಅಮಾಯಕರ ಬಗ್ಗೆ ಮರುಕ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿ ಅವರು, ಕಾಲ್ತುಳಿತ ಪ್ರಕರಣದಲ್ಲಿ ಮೃತರ ಪರಿಹಾರದ ಮೊತ್ತ 25 ಲಕ್ಷ ಅಲ್ಲ. ಇಡೀ ಬಜೆಟ್ ಅನ್ನೇ ಪರಿಹಾರವಾಗಿ ಕೊಟ್ಟರು ಹೋಗಿರುವ ಜೀವ ವಾಪಸ್ ಬರುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಇಡೀ ಘಟನೆಯಿಂದ ಬೆಂಗಳೂರಿಗೆ ಅತ್ಯಂತ ಕೆಟ್ಟ ಹೆಸರು ಬಂದಿದೆ. ಸಿಎಂ ಪಟಾಲಾಂ ಮಾಡಿದ ಎಡವಟ್ಟಿನಿಂದ ಇಷ್ಟೆಲ್ಲಾ ಘಟನೆಗಳು ನಡೆದಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರಿಂದ ನಾವು ಇಂತಹ ಆಡಳಿತ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ನಿಮ್ಮ ಒಳ ಜಗಳ ನಿಮ್ಮ ಒಳ ಒಪ್ಪಂದಗಳು ನಿಮ್ಮ ನಡುವಿನ ಗೊಂದಲಗಳಿಂದ ಅಮಾಯಕರ ಜೀವ ಹೀಗಾಗಿದೆ. ಇದಕ್ಕೆ ಯಾರು ಹೊಣೆ ಮೊದಲು ಹೇಳಿ. ಸಿದ್ದರಾಮಯ್ಯನವರೇ ಇದಕ್ಕೆ ಹೊಣೆ ಅಲ್ವಾ. ಕಾಲ್ತುಳಿತ ಘಟನೆಗೆ ಡಾ.ರಾಜ್ ಕುಮಾರ್ ಅವರ ಸಾವಿನ ಘಟನೆಯನ್ನ…