Author: admin

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂದ ಕುಂಟೆ ನಾಗರಾಜಯ್ಯ ನುಡಿ ನಮನ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಆಯೋಜನೆ ಮಾಡಲಾಗಿತ್ತು. ಹಿರಿಯ ದಲಿತ ಮುಖಂಡ ಹೋರಾಟಗಾರ ಕುಂದೂರು ತಿಮ್ಮಯ್ಯ ನೇತೃತ್ವದಲ್ಲಿ ನಾಗರಾಜಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮ ಸಲ್ಲಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಕುಂದೂರು ತಿಮ್ಮಯ್ಯ ಮಾತನಾಡಿ, 1972 –73 ರಲ್ಲಿ ತುಮಕೂರು ನಗರದ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದ ಬಂದ ಕುಂಟೆ ನಾಗರಾಜಯ್ಯ ಆ ದಿನಗಳಲ್ಲಿ ಕೆಲವು ದಲಿತ ವಿದ್ಯಾರ್ಥಿಗಳೊಂದಿಗೆ ಸೇರಿ ಅಸ್ಪೃಶ್ಯತಾ ನಿವಾರಣಾ ಸಂಘ ಹಾಗೂ 1974– 75 ರಲ್ಲಿ ದಲಿತ ವಿದ್ಯಾರ್ಥಿ ಸಂಘ ಸ್ಥಾಪಿಸುವ ಮೊದಲ ಹೋರಾಟದೊಂದಿಗೆ ನಾಗರಾಜಯ್ಯನವರ ಸಾಮಾಜಿಕ ನ್ಯಾಯದ ಹೋರಾಟ ಆರಂಭವಾಯಿತು. ನಂತರದ ದಿನಗಳಲ್ಲಿ ಇವರ ಹೋರಾಟ ಶಿಖರ ಶೃಂಗ ತಲುಪಿದ್ದು , ನಮ್ಮ ತುರುವೇಕೆರೆ ತಾಲೂಕಿನಲ್ಲೂ ಸಹ ಅನೇಕ ಹೋರಾಟಗಳ ಮುಂದಾಳತ್ವವನ್ನು ವಹಿಸಿ ಹೋರಾಟಕ್ಕೆ ಮುನ್ನುಡಿ ಬರೆದ ಏಕೈಕ ವ್ಯಕ್ತಿ ಬಂದ…

Read More

ತುರುವೇಕೆರೆ: ಪಟ್ಟಣದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ತುರುವೇಕೆರೆ ತಾಲೂಕು ಮತ್ತು ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರ ತುಮಕೂರು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಡಿ.7 ಮತ್ತು 8 ರಂದು ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ತಾಲೂಕಿನ ರೈತರಿಗೆ ಉಚಿತವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ರೈತರು ತಮ್ಮ ವ್ಯಾಪ್ತಿಯ ಪಶುವೈದ್ಯರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಲು ಕೋರಿದೆ. ತರಬೇತಿಗೆ ಬರುವ ಆಸಕ್ತ ರೈತರು 1. ಆಧಾರ್ ಕಾರ್ಡ್, 2. ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿ, 3. ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, 4. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿದ್ದರೆ ಜಾತಿ ಪ್ರಮಾಣ ಪತ್ರ ಇವುಗಳನ್ನು ಕಡ್ಡಾಯವಾಗಿ ತರಬೇಕಾಗಿದೆ. ಆಸಕ್ತ ರೈತರು ತರಬೇತಿಯ ಸದುಪಯೋಗವನ್ನು ಪಡೆಯಲು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ರೇವಣಸಿದ್ದಯ್ಯ ಕೋರಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ತುಮಕೂರು: ಕಲುಷಿತ ನೀರು, ಮಾಲಿನ್ಯ ಸೇರಿದಂತೆ ಯಾವುದೇ ಪ್ರಕೃತಿ ವಿಕೋಪದಂತಹ ದೂರುಗಳಿದ್ದಲ್ಲಿ ಸಾರ್ವಜನಿಕರು ಕಂಟ್ರೋಲ್ ರೂಮ್ ನಂಬರಿಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಕಲುಷಿತ ನೀರು, ಮಾಲಿನ್ಯ ಸೇರಿದಂತೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಜಿಲ್ಲೆಯಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 7304975519 ಅಥವಾ 0816–2213400, 155304 ಈ ನಂಬರಿಗೆ ಸಾರ್ವಜನಿಕರು ದೂರು ಸಲ್ಲಿಸಬೇಕು. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಬಹುದಾಗಿದೆ ಎಂದರು. ಮಧುಗಿರಿ, ಶಿರಾ, ಕೊರಟಗೆರೆ ಭಾಗಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜಾಗುತ್ತಿರುವ ಬಗ್ಗೆ ಪ್ರಯೋಗಾಲಯದ ವರದಿ ಬಂದಿದ್ದು, ಈಗಾಗಲೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಅಲ್ಲದೆ ಬಯಲು ಶೌಚ ಇನ್ನಿತರ ಸಾಂಕ್ರಾಮಿಕ ರೋಗ ಹರಡಬಹುದಾದ ವಿಷಯಗಳ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಸಾಂಕ್ರಾಮಿಕ ರೋಗಗಳು ಹರಡಬಹುದಾದ ವಿದ್ಯಾರ್ಥಿನಿಲಯಗಳ…

Read More

ತುರುವೇಕೆರೆ: “ತುಮಕೂರು ಜಿಲ್ಲೆಯಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ರಥವನ್ನು ಮುನ್ನಡೆಸಿದ ಸಾಲಿನಲ್ಲಿ ಬಂದಕುಂಟೆ ನಾಗರಾಜುರವರು ಅಗ್ರಸ್ಥಾನದಲ್ಲಿದ್ದಾರೆ,” ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರ ಕುಮಾರ್ ನುಡಿದರು. ತುರುವೇಕೆರೆ ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ), ಆದಿ ಜಾಂಬವ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ದಲಿತ ಹೋರಾಟಗಾರ ಮತ್ತು ಶಿಕ್ಷಕ ಬಂದಕುಂಟೆ ನಾಗರಾಜು ಅವರಿಗೆ ಆಯೋಜಿಸಲಾಗಿದ್ದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬಂದಕುಂಟೆ ನಾಗರಾಜಯ್ಯನವರು ಕೇವಲ ಹೋರಾಟಗಾರರಲ್ಲದೆ, ಒಬ್ಬ ಉತ್ತಮ ಲೇಖಕರೂ ಆಗಿದ್ದರು. ತಮ್ಮ ಬದುಕಿನ ಅನುಭವಗಳನ್ನು ‘ಬಿತ್ತನೆ ಬೀಜ’ ಎಂಬ ಕೃತಿಯ ಮೂಲಕ ದಾಖಲಿಸಿ ದಲಿತ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. 70ರ ದಶಕದಲ್ಲಿ ತಳ ಸಮುದಾಯಗಳು ದಬ್ಬಾಳಿಕೆಗೆ ಒಳಗಾಗಿದ್ದಾಗ, ಪ್ರೊ. ಬಿ. ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಹೋರಾಟದ ದೀಪವನ್ನು ಹಚ್ಚಿದವರು ಇವರು  ಎಂದರು.…

Read More

ತುಮಕೂರು: ಎಂ.ಕಾಂ. ಪದವಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಪರಿಣಿತರಿಂದ ಕೌಶಲ್ಯ ಜ್ಞಾನ ಸಂಪಾದಿಸಿದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಿಒ/ಕ್ಲರಿಕಲ್ ಹುದ್ದೆಗಳಿಗೆ ವಿಪುಲ ಅವಕಾಶಗಳಿದ್ದು ನೌಕರಿ ಪಡೆಯಲು ಸುಲಭ ಎಂದು ಕೆಎಸ್‌ಎಫ್ ತುಮಕೂರು ಶಾಖೆಯ ಶೈಕ್ಷಣಿಕ ಸಮಿತಿ ಅಧ್ಯಕ್ಷ ಪ್ರೊ. ಕೆ. ಚಂದ್ರಣ್ಣ ಹೇಳಿದರು. ಶ್ರೀ ಸಿದ್ದಗಂಗಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಕೃಷಿಕ್ ಸರ್ವೋದಯ ಫೌಂಡೇಶನ್ (ರಿ). ಇವರ ಸಹಯೋಗದೊಂದಿಗೆ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ಐ.ಬಿ.ಪಿ.ಎಸ್.) ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರ್ದಿಷ್ಟ ಹುದ್ದೆಯ ಗುರಿಯೊಂದಿಗೆ ಮತ್ತು ಪಠ್ಯಕ್ರಮಗಳಿಗೆ ವಿಷಯವಾರು ವೇಳೆಗಳನ್ನು ನಿಗದಿಪಡಿಸಿ ಪರಿಶ್ರಮದೊಂದಿಗೆ ಕೌಶಲ್ಯ ಜ್ಞಾನವನ್ನು ಪಡೆದರೆ ಪರೀಕ್ಷೆಗಳನ್ನು ತೇರ್ಗಡೆ ಹೊಂದಲು ಸುಲಭವಾಗುತ್ತದೆ ಎಂದರು. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿದ್ದು, ತಮ್ಮ ವೃತ್ತಿಯನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾರಂಭಿಸಿದರೆ, ಬ್ಯಾಂಕಿಂಗ್ ಕ್ಷೇತ್ರದ ಸೇವೆಯು ಎಲ್ಲಾ ಕ್ಷೇತ್ರಗಳ ಕೆಲಸಗಳಿಗಿಂತ ಅತ್ಯುತ್ತಮ ಮತ್ತು ಎಲ್ಲಾ ಸೌಲಭ್ಯದೊರೆಯುವ ಕ್ಷೇತ್ರವಾಗಿರುತ್ತದೆ ಎಂದು ತಿಳಿಸಿದರು. ಶ್ರೀ…

Read More

ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ನಗರದ ವಾರ್ಡ್ ನಂ. 34ರ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಂನಲ್ಲಿ ಎ ನ್‌ಹೆಚ್–4 ಕಾಯ್ದಿರಿಸಿದ ರಸ್ತೆ ಜಾಗದಲ್ಲಿ ಅನಧಿಕೃತ ಶೆಡ್‌ ಗಳನ್ನು ನಿರ್ಮಿಸಿದ್ದು ತೆರವುಗೊಳಿಸಲು ಹಾಗೂ ಹಿಂದೂ–ಮುಸ್ಲಿಂ ಎಂದು ದ್ವೇಷ ಬಿತ್ತುವ ಸಮಾಜ ಘಾತಕ ಜಯಸಿಂಹ ಎನ್ನುವವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ,  ತುಮಕೂರು ನಗರದ ವಾರ್ಡ್ ನಂ. 34 ರಲ್ಲಿರುವ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಂ ಘೋಷಿತ ಕೊಳಚೆ ಪ್ರದೇಶವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಈ ಹಿಂದೆ ಎನ್‌ಹೆಚ್–4 ಗೆ ಬಂದ 12 ಗುಡಿಸಲುಗಳಿಗೆ ಪರಿಹಾರ ಹಣವಾಗಿ 1 ಲಕ್ಷದ ವರೆವಿಗೂ ಪಡೆದುಕೊಂಡು ಪರ್ಯಾಯವಾಗಿ ಕ್ಯಾತ್ಸಂದ್ರ ಎಸ್.ಎಲ್ ನಗರದಲ್ಲಿ ಹಕ್ಕುಪತ್ರಗಳನ್ನು ಇತ್ತೀಚೆಗೆ ಪಡೆದಿರುವ ಕೆಲವೊಬ್ಬರನ್ನು ಸ್ವಯಂ ಘೋಷಿತ ಸಮಾಜ ಸೇವಕ…

Read More

ತುಮಕೂರು: ಗೊಲ್ಲರ ಹಟ್ಟಿಗಳಲ್ಲಿ ಇನ್ನೂ ಜೀವಂತವಿರುವ ಕೆಲವು ಹಿಂದಿನ ಆಚರಣೆಗಳು ಹಾಗೂ ಈಗಿನ ಸನ್ನಿವೇಶಕ್ಕೆ ಅವುಗಳ ಅಪ್ರಸ್ತುತತೆ ಬಗ್ಗೆ ಬೆಳಕು ಚೆಲ್ಲಲು ಗುಬ್ಬಿ ತಾಲ್ಲೂಕು ಸಮುದಾಯದ ಕೆಲವು ಮುಖಂಡರು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾಲ್ಲೂಕಿನ ಶ್ರೀ ಯಾದವ ಸಂಸ್ಥಾನ ಮಠದ ಭಕ್ತ ವೃಂದವು ಈ ಅಭಿಯಾನ ಆರಂಭಿಸುತ್ತಿದ್ದು ಜನವರಿ 8 ರಿಂದ 14 ರ ವರೆಗೆ ಗುಬ್ಬಿ ತಾಲ್ಲೂಕಿನ ವಿವಿಧ ಗೊಲ್ಲರಹಟ್ಟಿಗಳಲ್ಲಿ ಈ ಕಾರ್ಯಕ್ರಮ ನಡೆಸಲು ಇತ್ತೀಚೆಗೆ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಜೊತೆಗೆ ಚಿತ್ರದುರ್ಗದಲ್ಲಿರುವ ಶ್ರೀ ಮಠಕ್ಕೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ಶ್ರೀ ಕೃಷ್ಣಯಾದವಾನಂದ ಸ್ವಾಮಿಗಳನ್ನು ಬರಮಾಡಿಕೊಂಡು ಅವರಿಗೆ ದವಸ ಧಾನ್ಯ ನೀಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಶ್ರೀ ಮಠದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೆ ಪ್ರೋತ್ಸಾಹ ನೀಡಬೇಕಿದೆ. ಅಲ್ಲಿ ಗೋ ಶಾಲೆ ತೆರೆದಿದ್ದು ಅವುಗಳ ಬಗ್ಗೆ ನಿಗಾ ವಹಿಸಬೇಕಾಗಿದೆ. ನಿತ್ಯ ಹಲವಾರು ಭಕ್ತರು ಮಠಕ್ಕೆ ಬರುತ್ತಿದ್ದು ಅವರಿಗೆಲ್ಲ ಪ್ರಸಾದ ವ್ಯವಸ್ಥೆ ಮಾಡಬೇಕಿದೆ. ಇದೇ ರೀತಿಯಲ್ಲಿ ಗುಬ್ಬಿ ತಾಲ್ಲೂಕಿನಲ್ಲಿಯೂ ಶ್ರೀ…

Read More

ತುಮಕೂರು: ನಮ್ಮ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ‘ಕರ್ನಾಟಕ ಕ್ರೀಡಾಕೂಟ 2025–26’ ಆಯೋಜನೆಯಾಗುತ್ತಿದೆ. ಜನವರಿ 16ರಿಂದ 22ರವರೆಗೆ ಒಟ್ಟು 7 ದಿನಗಳ ಕಾಲ ನಗರದ ವಿವಿಧ ಕ್ರೀಡಾಂಗಣಗಳಲ್ಲಿ ಈ ಕ್ರೀಡಾ ಹಬ್ಬ ನಡೆಯಲಿದೆ. ಉದ್ಘಾಟನೆ: ಜ. 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಸಮಾರೋಪ: ಜ. 22ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹಲೋಟ್ ಭಾಗವಹಿಸಲಿದ್ದಾರೆ. ಲಾಂಛನ: ಜಿಲ್ಲೆಯ ಹೆಮ್ಮೆಯಾದ ‘ಕೃಷ್ಣಮೃಗ’ವನ್ನು ಕ್ರೀಡಾಕೂಟದ ಅಧಿಕೃತ ಲಾಂಛನವಾಗಿ ಬಳಸಲಾಗಿದೆ. ಕ್ರೀಡಾಪಟುಗಳು: ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 9,000ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಆಗಮಿಸುವ ನಿರೀಕ್ಷೆಯಿದೆ. ಯಾವೆಲ್ಲಾ ಕ್ರೀಡೆಗಳು ನಡೆಯಲಿವೆ?: ಒಟ್ಟು 27 ಬಗೆಯ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಅಥ್ಲೆಟಿಕ್, ಕಬಡ್ಡಿ, ಖೋಖೋ, ಫುಟ್‌ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಬಾಕ್ಸಿಂಗ್ ಮುಂತಾದವುಗಳು ತುಮಕೂರಿನಲ್ಲಿ ನಡೆಯಲಿವೆ. ಹಾಕಿ ಮತ್ತು ಈಜು ಸೇರಿದಂತೆ ಕೆಲವು ಕ್ರೀಡೆಗಳು ಮಾತ್ರ ಬೆಂಗಳೂರಿನಲ್ಲಿ ನಡೆಯಲಿವೆ. ಕ್ರೀಡಾಂಗಣಗಳು: ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಸ್ಮಾರ್ಟ್ ಸಿಟಿ…

Read More

ಹೊಳೆನರಸೀಪುರ: ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಕೆಎಸ್‌ ಆರ್‌ ಟಿಸಿ ಬಸ್ ನಿಲ್ದಾಣಕ್ಕೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ  ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದು ಮತ್ತು ನಿರ್ವಹಣೆಯ ಕೊರತೆಯನ್ನು ಕಂಡ ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರು ದಿನನಿತ್ಯ ಬಳಸುವ ಈ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡದಿರುವುದಕ್ಕೆ ಅಧಿಕಾರಿಗಳನ್ನು ಮತ್ತು ಟೆಂಡರ್ ದಾರರನ್ನು ತರಾಟೆಗೆ ತೆಗೆದುಕೊಂಡರು. “ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣವನ್ನು ಪ್ರತಿ ಗಂಟೆಗೊಮ್ಮೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು” ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಶೌಚಾಲಯಗಳ ದುಸ್ಥಿತಿಗೆ ಗರಂ: ನಿಲ್ದಾಣದ ಶೌಚಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಧೂಳು ಮತ್ತು ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಶೌಚಾಲಯಗಳನ್ನು ಕೂಡಲೇ ಶುಚಿಗೊಳಿಸಿ ಸಾರ್ವಜನಿಕ ಬಳಕೆಗೆ ಯೋಗ್ಯವಾಗುವಂತೆ ಸಿದ್ಧಪಡಿಸಬೇಕು ಎಂದು ಆದೇಶಿಸಿದರು. ಇದೇ ವೇಳೆ ಪ್ರಯಾಣಿಕರೊಂದಿಗೆ ಚರ್ಚಿಸಿದ ಅವರು, ಬಸ್ ನಿಲ್ದಾಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ…

Read More

ತಿಪಟೂರು: ನಗರದ ಪ್ರತಿಷ್ಠಿತ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ 17ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಜನವರಿ 8 ರಿಂದ ಒಟ್ಟು ಮೂರು ದಿನಗಳ ಕಾಲ ಅತ್ಯಂತ ಅದ್ದೂರಿಯಾಗಿ ಜರುಗಲಿದೆ ಎಂದು ಶಾಲೆಯ ಸಂಸ್ಥಾಪಕ ಟಿ.ಆರ್.ಕೇಶವಕುಮಾರ್ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳು: ಈ ಬಾರಿಯ ವಾರ್ಷಿಕೋತ್ಸವವನ್ನು ‘ಮಕ್ಕಳ ಪ್ರತಿಬಿಂಬ ಅನಾವರಣ’ ಹಾಗೂ ‘ಕೌಶಲ್ಯ 2026’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ನಗರದ ಈಡೇನಹಳ್ಳಿ ಗೇಟ್ ಬಳಿ ಇರುವ ಎಸ್.ಎನ್.ಎಸ್. (SNS) ಕನ್ವೆನ್ಷನ್ ಹಾಲ್‌ನಲ್ಲಿ ನಿರ್ಮಿಸಲಾಗಿರುವ ‘ಯೋಗೇಶ್ ವೇದಿಕೆ’ಯಲ್ಲಿ ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ: ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ, ಕಳೆದ ಸಾಲಿನ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಗುವುದು: ಸಮ್ಮಪ್ರಸಾದ್ (96.33%): ಚಿನ್ನದ ಪದಕ. ಎಸ್. ಭುವನ್ (95.33%): ಬೆಳ್ಳಿ ಪದಕ. ಮೂರು ದಿನಗಳ ಕಾಲ ನಡೆಯುವ ಈ ಸಂಭ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಶಾಲೆಯ ಸಿಬ್ಬಂದಿ ವರ್ಗ ಹಾಗೂ…

Read More