Author: admin

ತುಮಕೂರು: ಮಹಿಳೆಯರು ಶಿಕ್ಷಣದ ಜೊತೆಗೆ, ಆರ್ಥಿಕ ಸ್ವಾವಲಂಬನೆ ಬೆಳೆಸಿಕೊಳ್ಳಬೇಕು. ಪದವಿ, ಸ್ನಾತಕೋತ್ತರ ಪದವಿ ನಂತರ ಮನೆಯಲ್ಲಿಯೇ ಕುಳಿತುಕೊಳ್ಳದೆ ತನ್ನ ಅರ್ಹತೆಗೆ ತಕ್ಕಂತೆ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರಾದ ನೂರುನ್ನಿಸಾ ಸಲಹೆ ನೀಡಿದ್ದಾರೆ. ನಗರದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಪರಿವರ್ತನಾ ವಾದ ತುಮಕೂರು ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಭಾರತದ ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆಗಳು ಎಂಬ ವಿಚಾರ ಸಂಕಿರಣವನ್ನು ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗ ಪಡೆದರೆ, ಇನ್ನೊಬ್ಬರ ಮೇಲೆ ಅವಲಂಬನೆಯಾಗುವುದು ತಪ್ಪುತ್ತದೆ. ಸ್ವಾವಲಂಬಿ ಬದುಕು ಸಾಧ್ಯ ಎಂದರು. ಭಾರತದ ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆಗಳು ಎಂಬ ವಿಚಾರ ಕುರಿತು ಮಾತನಾಡಿದ ತುಮಕೂರು…

Read More

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ವಿಷಪೂರಿತ ಮೇವು ಸೇವಿಸಿ 50ಕ್ಕೂ ಹೆಚ್ಚು ಕುರಿಗಳು ಅಸುನೀಗಿರುವ ಘಟನೆ ಪೆನ್ನೋಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಘಟನೆಯ ವಿವರ: ಪೆನ್ನೋಬನಹಳ್ಳಿ ಗ್ರಾಮದ ನಿವಾಸಿ ರಾಮಣ್ಣ ಅವರ ಪತ್ನಿ ಜಂಪಕ್ಕ ಅವರು ಕುರಿ ಸಾಕಾಣಿಕೆಯಿಂದಲೇ ತಮ್ಮ ಜೀವನೋಪಾಯ ನಡೆಸುತ್ತಿದ್ದರು. ಎಂದಿನಂತೆ ಶನಿವಾರ ಬೆಳಗ್ಗೆ ತಮ್ಮ 300 ಕುರಿಗಳ ಹಿಂಡನ್ನು ಮೇವಿಗಾಗಿ ಗ್ರಾಮದ ಹೊರವಲಯಕ್ಕೆ ಕರೆದೊಯ್ದಿದ್ದರು. ಈ ವೇಳೆ ಹೊಲದಲ್ಲಿದ್ದ ಸುಮಾರು ಎರಡು ತಿಂಗಳ ಪ್ರಾಯದ ಮೆಕ್ಕೆಜೋಳದ ಎಳೆಯ ಪೈರನ್ನು ಕುರಿಗಳು ತಿಂದಿವೆ. ಪೈರು ತಿಂದ ಕೆಲವೇ ಕ್ಷಣಗಳಲ್ಲಿ ಕುರಿಗಳಲ್ಲಿ ಹೊಟ್ಟೆ ಉಬ್ಬರ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ 45 ರಿಂದ 50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಮೃತ ಕುರಿಗಳ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಏಕಾಏಕಿ ಸಂಭವಿಸಿದ ಈ ದುರಂತದಿಂದ ಬಡ ಮಹಿಳೆ ಜಂಪಕ್ಕ ಆಘಾತಕ್ಕೊಳಗಾಗಿದ್ದು, ಕಣ್ಣೀರು ಹಾಕುತ್ತಾ ಸರ್ಕಾರದ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ. ಪರಿಹಾರದ ಭರವಸೆ: ವಿಷಯ ತಿಳಿಯುತ್ತಿದ್ದಂತೆಯೇ ತಾಲ್ಲೂಕು ಪಶುಪಾಲನಾ ಇಲಾಖೆಯ ಸಹಾಯಕ…

Read More

ಪಾವಗಡ: ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಸುಸಜ್ಜಿತ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ ಮತ್ತು ಡಾ. ಪ್ರಭಾಕರ್ ರೆಡ್ಡಿ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇದೇ ಜನವರಿ 7ರಂದು ಬೆಳಗ್ಗೆ 11 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಅಂಬ್ಯುಲೆನ್ಸ್ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಪಾವಗಡದ ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತಾಲೂಕಿನಾದ್ಯಂತ ಪ್ರತಿ ವಾರ ಹಳ್ಳಿಗಳಲ್ಲಿ ನಡೆಸಲಾಗುವ ಮಧುಮೇಹ (Diabetes), ರಕ್ತದೊತ್ತಡ (BP) ಮತ್ತು ಅತಿಯಾದ ದೇಹದ ತೂಕದ ಉಚಿತ ತಪಾಸಣಾ ಶಿಬಿರಗಳಿಗೆ ಚಾಲನೆ ನೀಡಲಾಗುವುದು. ದಿವ್ಯ ಸಾನಿಧ್ಯ: ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಆರೋಗ್ಯ ಸಂಸ್ಥೆಗಳ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ವಹಿಸಲಿದ್ದಾರೆ. ಯೋಜನೆಗಳ ಉದ್ಘಾಟನೆ: ಮಧುಗಿರಿ ಉಪ ವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ ಅವರು ಆರೋಗ್ಯ ಶಿಬಿರದ ಯೋಜನೆಗಳನ್ನು ಉದ್ಘಾಟಿಸುವರು. ಅಂಬ್ಯುಲೆನ್ಸ್ ಲೋಕಾರ್ಪಣೆ:…

Read More

ತುಮಕೂರು: ಬಳ್ಳಾರಿ ಫೈರಿಂಗ್ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಎಸ್ಪಿಯಾಗಿ ಅಧಿಕಾರವಹಿಸಿಕೊಂಡ ಒಂದೇ ದಿನಕ್ಕೆ ಅಮಾನತ್ತು ಶಿಕ್ಷೆಗೆ ಗುರಿಯಾಗಿದ್ದ ಐಪಿಎಸ್ ಅಧಿಕಾರಿ ಪವನ್ ಸಜ್ಜನ್ ಅವರು ಮನನೊಂದು ತುಮಕೂರು ಜಿಲ್ಲೆಯಲ್ಲಿ ಆತ್ಮಹತ್ಯೆ ಯತ್ನ ನಡೆಸಿದ್ದಾರೆಂಬ ಸುಳ್ಳು ಸುದ್ದಿ ಶನಿವಾರ ವ್ಯಾಪಕವಾಗಿ ಹರಡಿತ್ತು.  ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ವದಂತಿ ಏನು? ಅಮಾನತ್ತಾದ ಬಳಿಕ ಬೇಸರಗೊಂಡಿದ್ದ ಪವನ್ ಸಜ್ಜನ್ ಬಳ್ಳಾರಿಯಿಂದ ಸಿರಾ ತಾಲ್ಲೂಕಿನ ಬರಗೂರು ಅಗ್ರಹಾರದ ಖಾಸಗಿ ಫಾರಂ ಹೌಸ್‌ನಲ್ಲಿ ತಂಗಿದ್ದರು. ಈ ವೇಳೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ನಡೆಸಿದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ರಾಜ್ಯದ ಪ್ರಮುಖ ಸುದ್ದಿವಾಹಿನಿಗಳಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿತ್ತು. ಇದರ ಬೆನ್ನಲೇ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಹತ್ತಿಕೊಂಡಿತ್ತು. ಜಿ.ಪರಮೇಶ್ವರ್ ಸ್ಪಷ್ಟನೆ: ಈ ಕುರಿತಾಗಿ ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬಳ್ಳಾರಿ ಘಟನೆ, ಅಮಾನತ್ತು ಪ್ರಕ್ರಿಯೆಯಿಂದ ಸಹಜವಾಗಿ ಐಪಿಎಸ್ ಅಧಿಕಾರಿ ಪವನ್ ಸಜ್ಜನ್ ಬೇಸರಗೊಂಡಿದ್ದಾರೆ. ಮಾಧ್ಯಮದವರು…

Read More

ಮಧುಗಿರಿ: ಚೆಕ್ ಡ್ಯಾಂ ಕಮ್ ಬ್ರಿಡ್ಜ್ ನಿರ್ಮಾಣದಿಂದ ಈ ಭಾಗದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ, ಕಾಮಗಾರಿಯು ಜನರ ಮನಸ್ಸಿನಲ್ಲಿ ಸದಾಕಾಲ ನೆನಪಿನಲ್ಲಿ ಉಳಿಯುವಂಥದ್ದಾಗಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು. ಕೊಡಿಗೇನಹಳ್ಳಿ ಹೋಬಳಿ, ಮುದ್ದೇನಹಳ್ಳಿ, ಶಾನ ಗಾನಹಳ್ಳಿ ನಡುವೆ ಜಯಮಂಗಲಿ ನದಿಗೆ ಅಡ್ಡಲಾಗಿ 18.50 ಕೋಟಿ ರೂ. ವೆಚ್ಚದ ಚೆಕ್ ಡ್ಯಾಂ ಕಮ್ ಬ್ರಿಡ್ಜ್, ಕುಮುದ್ವತಿ ನದಿಗೆ ಅಡ್ಡಲಾಗಿ ತಿಂಗಳುರು-ಕಲಿದೇವಪುರ ನಡುವೆ 8 ಕೋಟಿ ರೂ. ವೆಚ್ಚದ ಚೆಕ್ ಡ್ಯಾಂ ಕಮ್ ಬ್ರಿಡ್ಜ್ ಹಾಗೂ ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿ ಮತ್ತು ಶಂಕರಪುರ ನಡುವೆ 3 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ಕಮ್ ಬ್ರಿಡ್ಜ್ ನಿರ್ಮಾಣ ಸೇರಿ ಒಟ್ಟು 29.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಮುದ್ದೇನಹಳ್ಳಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದು ಎರಡೂವರೆ ವರ್ಷಗಳು ಕಳೆದಿದ್ದು ಹಳ್ಳಿಗಾಡಿನ ಜನರಿಗೆ ಅಗತ್ಯವಿರುವ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ತಾಲೂಕಿನಲ್ಲಿ ಹರಿಯುವ…

Read More

ತುಮಕೂರು: ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ತುಮಕೂರು ಗ್ರಾಮಾಂತರದ ದೇವರಾಯನದುರ್ಗದ ಮೀಸಲು ಅರಣ್ಯ ಪ್ರದೇಶ ಈಗ ಶೋಕಸಾಗರದಲ್ಲಿ ಮುಳುಗಿದೆ. ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ ‘ನಾಮದ ಚಿಲುಮೆ’ ಬಳಿ ಏಕಕಾಲಕ್ಕೆ 11 ಕೋತಿಗಳು ಶವವಾಗಿ ಪತ್ತೆಯಾಗಿರುವುದು ಕೇವಲ ಅರಣ್ಯ ಇಲಾಖೆಯನ್ನು ಮಾತ್ರವಲ್ಲದೆ ಪರಿಸರ ಪ್ರೇಮಿಗಳನ್ನೂ ಆತಂಕಕ್ಕೆ ತಳ್ಳಿದೆ. ಇದು ಕೇವಲ ಸಾವುಗಳಲ್ಲ, ಬದಲಾಗಿ ಮಾನವ ಮತ್ತು ವನ್ಯಜೀವಿಗಳ ನಡುವೆ ನಡೆಯುತ್ತಿರುವ ಸಂಘರ್ಷದ ಮತ್ತೊಂದು ಕರಾಳ ಮುಖ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಹಿನ್ನೆಲೆ: ಕಳೆದ ಶುಕ್ರವಾರ ಸಂಜೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಶುಕ್ರವಾರ ಸಂಜೆಯಿಂದ ತಡರಾತ್ರಿಯವರೆಗೆ ನಡೆದ ಶೋಧ ಕಾರ್ಯ ಶನಿವಾರವೂ ಮುಂದುವರಿಯಿತು. ಅಂತಿಮವಾಗಿ ಐದು ಸಾಮಾನ್ಯ ಮಂಗಗಳು ಮತ್ತು ಎರಡು ಹನುಮಾನ್ ಲಂಗೂರ್‌ಗಳು ಸೇರಿದಂತೆ ಒಟ್ಟು 11 ಕೋತಿಗಳ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳು ಒಂದೇ ವಲಯದಲ್ಲಿ ಸಿಕ್ಕಿರುವುದು ಇವುಗಳ ಸಾವಿನ ಹಿಂದೆ ಯಾವುದೋ ಸಂಚು ಇರುವುದನ್ನು ಪುಷ್ಟೀಕರಿಸುವಂತಿದೆ. ವಿಷಪ್ರಾಶನದ ಶಂಕೆ: ಪತ್ತೆಯಾದ ಕೋತಿಗಳ…

Read More

ತುಮಕೂರು: ನವೋದಯದ ಮಹಾನ್ ವ್ಯಕ್ತಿತ್ವ ಸಾವಿತ್ರಿಬಾಯಿ ಅವರ 195 ನೇ ಜನ್ಮದಿನವನ್ನು  ಇಂದು ತುಮಕೂರಿನ ವಿವಿಧ ಮೈದಾನ, ಶಾಲಾ ಕಾಲೇಜುಗಳಲ್ಲಿ, ಹಾಸ್ಟೆಲ್ ಹಾಗೂ ಬಡಾವಣೆಗಳಲ್ಲಿ ಪ್ರತಿರೋಧ ದಿನವನ್ನಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ,  ಸಾವಿತ್ರಿಬಾಯಿ ಫುಲೆ ಅವರು ಕೇವಲ ಶಾಲೆಯನ್ನು ತೆರೆಯಲಿಲ್ಲ. ಬದಲಾಗಿ ಸಾವಿರಾರು ವರ್ಷಗಳ ಶೋಷಣೆ ವಿರುದ್ಧ ಕೇವಲ ಒಂದು ಪುಸ್ತಕ ಮತ್ತು ಎದೆಯ ತುಂಬಾ ಧೈರ್ಯವನ್ನು ಅಸ್ತ್ರವನ್ನಾಗಿ  ಮಾಡಿಕೊಂಡು ಯುದ್ಧವನ್ನೇ ಸಾರಿದರು. ಅವರು ಪುಣೆಯ ಬೀಡೆವಾಡ ಶಾಲೆಗೆ ನಡೆದುಕೊಂಡು ಹೋಗುವಾಗ ಜನ ಅವರಿಗೆ ಕೆಸರು, ಸಗಣಿ ಮತ್ತು ಕಲ್ಲುಗಳನ್ನ ಎಸೆದಿದ್ದಾರೆ, ಆದರೆ ಅವರು ಯಾವುದೇ ಅವಮಾನಕ್ಕೆ ಹಿಂಜರಿಯದೆ  ಅಂದು ಹೆಣ್ಣುಮಕ್ಕಳ ಹಾಗೂ ಕೆಳ ವರ್ಗದ ಮಕ್ಕಳಿಗಾಗಿ ಶಾಲೆಗಳನ್ನು ತೆರೆದರು. ಜೊತೆಗೆ  ಅಂದಿನ ಸಮಾಜದಲ್ಲಿದ್ದ ಆಳವಾಗಿ ಬೀರೂರಿದ್ದ  ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು ಹಾಗೂ  ಅನ್ಯ ಜಾತಿಯ ವಿವಾಹವನ್ನು ಬೆಂಬಲಿಸಿ ಸ್ವತಃ ತನ್ನ ಮಗನಿಗೆ ಅನ್ಯ ಜಾತಿ ವಿವಾಹವನ್ನು ಮಾಡಿಸುವುದರ ಮೂಲಕ ಸಮಾಜದಲ್ಲಿ ಜಾತಿ ವ್ಯವಸ್ಥೆ,…

Read More

ಬೆಂಗಳೂರು: ಮಧ್ಯರಾತ್ರಿ ರಸ್ತೆ ಬದಿ ಕಾಣಿಸಿದ ಮಹಿಳೆಯನ್ನು ಕರೆದೊಯ್ದು ಜೀಪ್‌ನಲ್ಲೇ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಸಹಾಯಕ ಸಬ್ ಇನ್‌ ಸ್ಪೆಕ್ಟರ್‌ ಗೆ 62 ವರ್ಷ ತುಂಬಿರುವ ಜೊತೆಗೆ ವಯೋವೃದ್ಧ ತಾಯಿ, ಪತ್ನಿಯ ಆರೈಕೆ ಮತ್ತು ಮಕ್ಕಳ ಮದುವೆ ಮಾಡಬೇಕಾದ ಕಾರಣ ಪರಿಗಣಿಸಿರುವ ಹೈಕೋರ್ಟ್ ಶಿಕ್ಷಾ ಅವಧಿಯನ್ನು 10 ವರ್ಷಕ್ಕೆ ಇಳಿಸಿದೆ. ತನಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಂದಿನ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಶಿಕ್ಷಾವಧಿಯನ್ನು ಇಳಿಸಿದೆ. ಇದರಿಂದ ಈಗಾಗಲೇ 9 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಪೊಲೀಸ್ ಅಧಿಕಾರಿ ಇನ್ನೊಂದು ವರ್ಷ ಶಿಕ್ಷೆ ಪೂರೈಸಿದ ಬಳಿಕ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಅಮಿತ್ ರಾಣಾ ಮತ್ತು ಹರಿಯಾಣ ಸರ್ಕಾರದ ನಡುವಿನ ಪ್ರಕರಣದಲ್ಲಿ ಕಾನೂನಿನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲ್ಪಟ್ಟ ಸಂದರ್ಭದಲ್ಲಿ ಶಿಕ್ಷೆ ಪ್ರಮಾಣ ಇಳಿಸಲು…

Read More

ತುಮಕೂರು: ಬ್ಲ್ಯಾಕ್ ಮೇಲ್‌ಗೆ ಹೆದರಿ ಮಹಿಳೆಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ಶಿರಾ ತಾಲ್ಲೂಕು ಕಳ್ಳಂಬೆಳ್ಳದಲ್ಲಿ ನಡೆದಿದೆ. ಕಳ್ಳಂಬೆಳ್ಳದಲ್ಲಿ ತಾಯಿ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಪರ ಪುರುಷನ ಸಹವಾಸ ಮಾಡಿದ್ದೇ ಆಕೆಯ ಸಾವಿಗೆ ಮುಳುವಾಗಿದೆ. ದೂರವಾಣಿ ಸಂಭಾಷಣೆ, ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಇದರಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಹಂಸಲೇಖ (32) ಹಾಗೂ ಆಕೆಯ 8 ವರ್ಷದ ಪುತ್ರ ಗುರುಪ್ರಸಾದ್ ಎಂದು ಗುರುತಿಸಲಾಗಿದೆ. ಹಂಸಲೇಖ ಅವರು ಮಲ್ಲಿಕಾರ್ಜುನ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಆತ ತನ್ನ ಬಳಿ ಇರುವ ಸಂಭಾಷಣೆ ಮತ್ತು ವಿಡಿಯೋಗಳನ್ನು ಆಧಾರವಾಗಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಇದರಿಂದ ಹಂಸಲೇಖ ಭಯಗೊಂಡು ಮಗನೊಂದಿಗೆ ಮನೆ ತೊರೆದು ಕಳ್ಳಂಬೆಳ್ಳ ಕೆರೆಯಲ್ಲಿ ತಾಯಿ ಮತ್ತು ಮಗ ಇಬ್ಬರೂ ನೀರಿಗೆ ಹಾರಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ…

Read More

ತುಮಕೂರು: ಜಿಲ್ಲೆಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನೀಡುವ ಧನಸಹಾಯಕ್ಕೆ ಅರ್ಜಿ ಸಲ್ಲಿಸುವ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಆಸಕ್ತರು ಈಗ ಜನವರಿ 9ರವರೆಗೆ ಆನ್‌ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಾಡಿನ ಭಾಷಾ ಸಂವರ್ಧನೆ, ಸಂಗೀತ, ಜಾನಪದ, ನೃತ್ಯ ಹಾಗೂ ವಿವಿಧ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವವರಿಗೆ ಈ ಧನಸಹಾಯ ನೀಡಲಾಗುವುದು. ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ಮತ್ತು ಸಂಸ್ಥೆಗಳು ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ವೆಬ್‌ಸೈಟ್: www.Sevasindhu.karnataka.gov.in ಅರ್ಜಿಗೆ ಸಂಬಂಧಿಸಿದ ಹೆಚ್ಚಿನ ಮಾರ್ಗಸೂಚಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅರ್ಜಿ ಸಲ್ಲಿಕೆ ಅಥವಾ ಯೋಜನೆಯ ಬಗ್ಗೆ ಯಾವುದೇ ಗೊಂದಲಗಳಿದ್ದಲ್ಲಿ ಸಾರ್ವಜನಿಕರು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು: ದೂರವಾಣಿ ಸಂಖ್ಯೆ: 0816-2275204 ಈ ಬಗ್ಗೆ ಮಾಹಿತಿ ನೀಡಿರುವ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಕು.…

Read More