Author: admin

ತುಮಕೂರು: ದೇಶದ ಜನತೆಗೆ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಇಂತಿಯಾಜ್ ಅಹಮದ್ ಅಭಿಪ್ರಾಯಪಟ್ಟರು. ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 140ನೇ ಸ್ಥಾಪನಾ ದಿನ ಆಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಮ್ಮ ದೇಶದಲ್ಲಿ ಎಲ್ಲಾ ಧರ್ಮ, ಜಾತಿಯವರು ಉತ್ತಮ ಬಾಂಧವ್ಯದಿಂದ ಸಂವಿಧಾನದ ಆಶಯಗಳೊಂದಿಗೆ ನೆಮ್ಮದಿಯ ಬದುಕು ಸಾಗಿಸುವಂತಹ ಸದಾವಕಾಶವನ್ನು ಒದಗಿಸಿಕೊಟ್ಟಿದೆ ಎಂದು ನುಡಿದರು. 1885ರಲ್ಲಿ ಎ.ಒ. ಹ್ಯೂಮ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷವು, ಭಾರತದ ಸ್ವಾತಂತ್ರ್ಯ ಹೋರಾಟದ ಹೃದಯವಾಗಿತ್ತು, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹಾನ್ ನಾಯಕರ ತ್ಯಾಗ, ಬಲಿ ಮತ್ತು ಆದರ್ಶಗಳ ಫಲವಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ,…

Read More

ತುರುವೇಕೆರೆ: ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರ ತಾಲೂಕಿನ ಕರಡು ಮತದಾರರ ಪಟ್ಟಿ ಪ್ರಕಟಗೊಳಿಸಲಾಗಿದೆ ಎಂದು ತಹಶೀಲ್ದಾರ್ ಕುಂಞಿ ಅಹಮದ್ ತಿಳಿಸಿದರು. ಅವರು ತಾಲೂಕು ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೊದಲ ಪಟ್ಟಿಯಲ್ಲಿ ಪುರುಷ ಮತ್ತು ಮಹಿಳೆ ಸೇರಿ ಒಟ್ಟು 2258 ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ತಯಾರಿಸುವ ಸಂಬಂಧ ದಿ. 30—9–25 ರಿಂದ ದಿ. 6—11–25 ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ನೋಂದಣಿ ಅವಧಿ ಮುಕ್ತಾಯಗೊಂಡ ನಂತರ ಅಂತಿಮವಾಗಿ ದಿ. 25—11–25 ರಂದು ಅರ್ಹ ಪದವೀಧರರ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ತಾಲೂಕಿನಲ್ಲಿ ಪುರುಷರು-1464 ಮತ್ತು ಮಹಿಳೆಯರು-1086 ಸೇರಿ ಒಟ್ಟು 2258 ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದರು. 76–ತುರುವೇಕೆರೆ ಟೌನ್ ವ್ಯಾಪ್ತಿ– ಪುರುಷರು 705 ಮತದಾರರು ಮತ್ತು ಮಹಿಳೆಯರು–563 ಮತದಾರರು 77-ಮಾಯಸಂದ್ರ ಹೋಬಳಿ–ಪುರುಷ–705 ಮತ್ತು ಮಹಿಳೆಯರು-88 ಮತದಾರರು 78–ದಂಡಿನಶಿವಾರ ಹೋಬಳಿ-ಪುರುಷರು–320 ಮತ್ತು ಮಹಿಳೆಯರು–257 ಮತದಾರರು 79–ದಬ್ಬೇಘಟ್ಟ ಹೋಬಳಿ–ಪುರುಷರು–274 ಮತ್ತು ಮಹಿಳೆಯರು–178 ಅಂತಿಮ ಆಗ್ನೇಯ ಪದವೀಧರರ ಮತದಾರರ ಪಟ್ಟಿಯನ್ನು…

Read More

ತಿಪಟೂರು: ಬುದ್ಧ, ಬಸವ ಮತ್ತು ಅಂಬೇಡ್ಕರ್ ರವರು ಜಗತ್ತಿನ ಬೆಳಕು. ಇವರುಗಳು ಸಮಾಜದಲ್ಲಿ ದೊಡ್ಡ ಪಿಡುಗಾಗಿದ್ದ ಅಸಮಾನತೆಯ ವಿರುದ್ಧ ಹೋರಾಡಿದ ಮಹಾ ಪುರುಷರು ಎಂದು ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು. ಅವರು ಕಲ್ಪತರು ಕಾಲೇಜು ಆಡಿಟೋರಿಯಂನಲ್ಲಿ ಡಾ. ಅಂಬೇಡ್ಕರ್ ಸೇನೆ(ರಿ.) ವತಿಯಿಂದ ಹಮ್ಮಿಕೊಂಡಿದ್ದ ಭೀಮೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ತಮ್ಮ ಜೀವಿತದವರೆಗೂ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಬುದ್ಧ ಶಾಂತಿ ಸಮಾನತೆಗೆ ಹೋರಾಟ ಮಾಡಿದರೆ, ಬಸವಣ್ಣ ಸಮಾನತೆಗೆ ಹೋರಾಟ ಮಾಡಿ ದಮನಿತರಿಗೆ ಧ್ವನಿಯಾದರು ಎಂದು ತಿಳಿಸಿದರು. ಡಾ.ಅಂಬೇಡ್ಕರ್ ಸೇನೆ ರಾಜ್ಯಧ್ಯಕ್ಷ ಪಿ.ಮೂರ್ತಿ ಮಾತನಾಡಿ, ಶೋಷಿತ ಸಮುದಾಯಗಳ ಆಶಾಕಿರಣ, ಭಾರತದ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ್ ತಾವು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಶ್ಯತೆ ನೋವು, ನಮ್ಮ ದೇಶದ ಜನ ಅನುಭವಿಸಬಾರದು, ದೇಶದಲ್ಲಿ ಅಸಮಾನತೆ ಸಂಪೂರ್ಣವಾಗಿ ಹೋಗಲಾಡಿಸಬೇಕು ಎಂದು ತಮ್ಮ ಸುಖ ದುಃಖವನ್ನೆಲ್ಲ ತ್ಯಾಗ ಮಾಡಿದ್ದಾರೆ ಎಂದರು. ಕೆಪಿಸಿಸಿ ಸದಸ್ಯ ಎ.ಯೋಗೇಶ್ ಮಾತನಾಡಿ, ಸಮಾಜದಲ್ಲಿ ಬಡವ…

Read More

ತುಮಕೂರು: ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಇಂದು ಅಂಬೇಡ್ಕರ್ ಯುವ ಸೇನೆ ವತಿಯಿಂದ 208ನೇ ಭೀಮ–ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು. ತಮ್ಮನ್ನು ಅವಮಾನ ಮಾಡಿ, ಸಮಾನತೆಯನ್ನು ನಿರಾಕರಿಸಿದ ಮರಾಠರ ಎರಡನೇ ಬಾಜೀರಾಯನ 28 ಸಾವಿರ ಮರಾಠ ಸೈನಿಕರ ವಿರುದ್ಧ ಐದು ನೂರು ಜನ ಮಹರ್ ಸೈನಿಕರು, ಸ್ವಾಭಿಮಾನಕ್ಕಾಗಿ ಭೀಮಾ ನದಿ ತೀರದ ಕೋರೆಗಾಂವ್ ಬಳಿ ನಡೆಸಿದ ಯುದ್ಧದ 208ನೇ ವಿಜಯೋತ್ಸವದ ಅಂಗವಾಗಿ ಭೀಮಕೋರೆಗಾಂವ್ ಯುದ್ಧಸ್ಮಾರಕದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸೂಚಿಸುವ ಮೂಲಕ ಯುದ್ಧದಲ್ಲಿ ಮಡಿದ ಮಹರ್ ಸೈನ್ಯದ 22 ಜನರನ್ನು ಸ್ಮರಿಸಲಾಯಿತು. ಈ ವೇಳೆ ಮಾತನಾಡಿದ ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್.ಜಿ., ಭೀಮ ಕೋರೆಗಾಂವ್ ವಿಜಯೋತ್ಸವ ದೇಶದ ದಲಿತರಿಗೆ ಸ್ವಾಭಿಮಾನದ ಸಂಕೇತವಾಗಿದೆ. ದಲಿತರ ಸ್ವಾಭಿಮಾನಕ್ಕೆ, ಆತ್ಮ ಗೌರವಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬುದಕ್ಕೆ ಈ ಯುದ್ಧ ಸಾಕ್ಷಿಯಾಗಿದೆ. ಲಂಡನ್‌ನ ಕೊಲಂಬಿಯಾ ವಿವಿಯಲ್ಲಿ ಅಂಬೇಡ್ಕರ್ ಕಲಿಯುವ ವೇಳೆ ಅಲ್ಲಿನ ಲೈಬ್ರರಿಯಲ್ಲಿ ದೊರೆತ ಪುಸ್ತಕದಿಂದ ಎರಡನೇ ಬಾಜೀರಾಯನ ಸೈನ್ಯದ ವಿರುದ್ಧ ದಲಿತರು…

Read More

ಸರಗೂರು:  ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ಶಾಸಕ ಅನಿಲ್ ಚಿಕ್ಕಮಾದು ಶ್ರಮ ಪಡುತ್ತಿದ್ದಾರೆ. ಅದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನವನ್ನು ನೀಡಿ ತಾಲೂಕನ್ನು ಅಭಿವೃದ್ಧಿಪಡಿಸಲು ಸಹಕರಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಎಸ್.ಎನ್.ನಾಗರಾಜು ಒತ್ತಾಯಿಸಿದ್ದಾರೆ. ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ದಿ.ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೋಟೆ ಎಂ.ಶಿವಣ್ಣ ವರಿಗೆ ಸಚಿವ ಸ್ಥಾನ ನೀಡಲಾಗಿತ್ತು.ಅಲ್ಲಿದ ಇಲ್ಲಿವರೆಗೂ ಯಾವುದೇ ಸ್ಥಾನ ಮಾನ ನೀಡಿಲ್ಲ.  ಅನೀಲ್ ಚಿಕ್ಕಮಾದು ರವರು ಹಿಂದುಳಿದ ತಾಲ್ಲೂಕು ಹಣೆಪಟ್ಟಿಯನ್ನು ಹೋಗಲಾಡಿಸಿಕೊಂಡು ಹಂತ ಹಂತವಾಗಿ ಬರುತ್ತಿದ್ದಾರೆ. ಅವರಿಗೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರವರು ಸಹಕಾರ ನೀಡುತ್ತಾ ಬರುತ್ತಿರುವುದರಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಅವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಚಿವ ಸ್ಥಾನ ನೀಡಿ. ಶಾಸಕರ ರಾಜಕೀಯ ಗುರುಗಳಾದ ದಿ ಲೋಕಸಭಾ ಸದಸ್ಯ ದಿ ಆರ್.ಧ್ರುವನಾರಾಯಣ್ ಕ್ಷೇತ್ರಕ್ಕೆ ಅಭಿವೃದ್ಧಿಗೊಳಿಸಲು ಬುನಾದಿ…

Read More

ದೇವರ ಬಗ್ಗೆ ಈ ಲೌಕಿಕ ಜಗತ್ತಿನಲಲ್ಲಿ ನಾ ಕಂಡ ಕೆಲವು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ, ನನಗೆ ಅನಿಸಿದ್ದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ, ಸಮಾಜದಲ್ಲಿ ನನ್ನ ಪ್ರಕಾರ 4 ವರ್ಗದ ಜನರು ಅನುಭವಿಸುತ್ತಿರುವ ಜೀವನವನ್ನು ಕಂಡಿದ್ದೇನೆ. ಒಂದೊಂದಾಗಿ ಗಮನಿಸುತ್ತಾ, ನನಗೆ ತಿಳಿದಿದ್ದನ್ನು ಇಲ್ಲಿ ತಿಳಿಸುವ ಯತ್ನ ಮಾಡಿದ್ದೇನೆ. ದೇವರನ್ನು ನಂಬಿ ಕೆಡದೇ ಹೋದವರು. ದೇವರನ್ನು ನಂಬದೇ ಕೆಡದೇ ಹೋದವರು. ದೇವರನ್ನು ನಂಬಿ ಕೆಡುಕ ಅನುಭವಿಸುವವರು. ದೇವರನ್ನು ನಂಬದೇ ಕೆಡುಕ ಅನುಭವಿಸುವವರು. ಮೊದಲನೆಯದಾಗಿ ದೇವರನ್ನು ನಂಬಿ ಕೆಡದೇ ಹೋದವರು, ಮತ್ತು ಅವರು ನಂಬಿದಷ್ಟೂ ಅವರಿಗೆ ಒಳ್ಳೆಯದು ಆಗುತ್ತಿರುವುದು, ಇವರು ಆಸ್ತಿಕರು ಎನ್ನಿಸಿಕೊಂಡವರು ಮತ್ತು ಇವರಿಗೆ ದೇವರೇ ನಮಗೆ ಎಲ್ಲವನ್ನು ಕೊಡುತ್ತಿದ್ದಾನೆ, ದೇವರಿಲ್ಲದಿದ್ದರೆ ನಮಗೆ ಜೀವನ ಕಲ್ಪಸಿಕೊಳ್ಳಲೂ ಸಾಧ್ಯವಿಲ್ಲ, ಭಯ ಭಕ್ತಿ ಪ್ರಕಟಿಸುವವರು ಮತ್ತು ದೇವರ ಬಗ್ಗೆ ಸ್ವಲ್ಪವೂ ನಕಾರಾತ್ಮ ಯೋಚನೆ ಮಾಡದಿರುವುದು, ಮತ್ತು ನಕಾರಾತ್ಮಕವಾಗಿ ಮಾತನಾಡುವವರನ್ನು ಕಂಡರೆ ಹಾಗೆಲ್ಲಾ ಮಾತನಾಡಬಾರದು ಎಂಬ ತಿಳುವಳಿಕೆ ಹೇಳುವ ಗುಣ ಹೊಂದಿರುತ್ತಾರೆ. ಇವರಿಗೆ ಸ್ವಲ್ಪ ಕಷ್ಟ ಎದುರಾದಾಗ ದೇವರಿಗೆ ನಾನು…

Read More

ಕೊರಟಗೆರೆ: ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಡಿ.31ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ನಗರಾಭಿವೃದ್ಧಿ ಯೋಜನಾ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಯೋಗಾನಂದ್‌ ಅವರು ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿರುವ ಅಧಿಕೃತ ಅಧಿಸೂಚನೆಯ ಮಾಹಿತಿ ನೀಡಿದ್ದು, ದಿ. 31–12–2025ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್‌ ಅವರ ಸಹಿಯೊಂದಿಗೆ ಪ್ರಕಟಗೊಂಡಿರುವ ವಿಶೇಷ ರಾಜ್ಯ ಪತ್ರಿಕೆ ಸಂಖ್ಯೆ: ನಅಇ 73 ಎಂಎಲ್‌ ಆರ್ 2025(ಇ)ರಲ್ಲಿ ಕರ್ನಾಟಕ ಪೌರಸಭೆಗಳ ಕಾಯ್ದೆ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನವೆತ್ತ ರಾಜ್ಯಪಾಲರು ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಸಣ್ಣ ನಗರ ಪ್ರದೇಶವೆಂದು ಉದ್ಘೋಷಿಸಿ, ಕೊರಟಗೆರೆ ಪುರಸಭೆಯಾಗಿ ಪದನಾಮೀಕರಿಸಿ ಉದ್ಘೋಷಿಸಿರುತ್ತಾರೆ ಎಂದು ತಿಳಿಸಿದ್ದಾರೆ. 14 ಗ್ರಾಮಗಳು ಪುರಸಭೆ ವ್ಯಾಪ್ತಿಗೆ: ನೂತನ ಪುರಸಭೆ ವ್ಯಾಪ್ತಿಗೆ ಸದರಿ ಕೊರಟಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 17.53 ಚದರ ಕಿಲೋಮೀಟರ್ ಪಟ್ಟಣ ಪ್ರದೇಶದ ಜೊತೆಗೆ ಕೊರಟಗೆರೆ ತಾಲ್ಲೂಕಿನ ಹೂಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಳ್ಳಿ, ಹೊಸಹಳ್ಳಿ, ಕಾಮೇನಹಳ್ಳಿ, ಒಬ್ಬರದೇವರಹಳ್ಳಿ, ಗುಂಡಿನಪಾಳ್ಯ, ಹೂಲಿಕುಂಟೆ,…

Read More

ಕೊರಟಗೆರೆ : ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರು ಮುಖ್ಯಮಂತ್ರಿಯಾಗಲಿ ಎಂದು ಹೊಸ ವರ್ಷದ ಮೊದಲ ದಿನವೇ ಕ್ಯಾಮೇನಹಳ್ಳಿ ಆಂಜಿನೇಯ ಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮತ್ತು ಮುಖಂಡರು ವಿಶೇಷ ಪೂಜೆ ಸಲ್ಲಿಸಿ 108 ತೆಂಗಿನ ಕಾಯಿ ಹೊಡೆದು ಹರಕೆಯನ್ನು ತೀರಿಸಿದ್ದಾರೆ. ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವಥನಾರಾಯಣ ಮಾತನಾಡಿ, ಡಾ.ಜಿ.ಪರಮೇಶ್ವರರವರು 8 ವರ್ಷಗಳ ಕಾಲ ಕೆ.ಪಿ.ಸಿ.ಸಿ ಅದ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ, 2013ರಲ್ಲಿ ಮತ್ತು 2018 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿದ್ದಾರೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಿಲ್ಲ ಈಗ ಸಿದ್ದಾರಾಮಯ್ಯ ನವರು ಮುಖ್ಯಮಂತ್ರಿ ಸ್ಥಾನದಿಂದ ಬದಲಾದರೆ ಡಾ.ಜಿ.ಪರಮೇಶ್ವರ ರವರನ್ನೇ ಮುಖ್ಯಮಂತ್ರಿ ಮಾಡುವಂತೆ ಲಕ್ಷಾಂತರ ಜನರ ಕೂಗಾಗಿದೆ ಅದರಿಂದ ಹೊಸವರ್ಷದ ದಿನದಂದು ನಾವು ಕ್ಯಾಮೆನಹಳ್ಳಿ ಆಂಜಿನೇಯಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸದ್ದೇವೆ ಎಂದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕರೆ ಶಂಕರ್ ಮಾತನಾಡಿ, ಡಾ.ಜಿ.ಪರಮೇಶ್ವರ ರವರು ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದು ಎಲ್ಲಾ ಜನಾಂಗದ…

Read More

ತುಮಕೂರು: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಉಪವಿಭಾಗ ಮತ್ತು ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ಜಾಗೃತಿ ಉಸ್ತುವಾರಿ ಸಮಿತಿ ಸಭೆಗಳನ್ನು ನಡೆಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಜಿಲ್ಲೆಯ ಮಧುಗಿರಿ ಹಾಗೂ ತಿಪಟೂರು ಉಪವಿಭಾಗ ಮಟ್ಟದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಕುರಿತು ಜಾಗೃತಿ ಉಸ್ತುವಾರಿ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ನಡೆಸಿ ಸಭೆಗಳಲ್ಲಿ ಸಲ್ಲಿಕೆಯಾಗುವ ದೂರುಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭವನಗಳ ನಿರ್ಮಾಣಕ್ಕಾಗಿ ಜಾಗವನ್ನು ಗುರುತಿಸಿ ಮಾಹಿತಿ ನೀಡುವಂತೆ ಎಲ್ಲ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು. ತುಮಕೂರು ವಿಶ್ವವಿದ್ಯಾಲಯದಲ್ಲಿ ಎಸ್‍ಸಿ/ಎಸ್‍ಟಿ…

Read More

ತುಮಕೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜನವರಿ 1ರಿಂದ 31ರವರೆಗೆ ರಾಜ್ಯ ವ್ಯಾಪಿ ರಸ್ತೆ ಸುರಕ್ಷಾ ಮಾಸಾಚರಣೆ ನಡೆಸಲಾಗುತ್ತದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶಶಿಧರ್ ಶೆಟ್ಟಿ ಹೇಳಿದ್ದಾರೆ. ಬುಧವಾರ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕುರಿತು ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, 2019 ರಿಂದ ಇಂದಿನವರೆಗೆ ರಾಜ್ಯದಲ್ಲಿ ಒಟ್ಟು 2,13,192 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 60,115 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಬೆಂಗಳೂರು ನಂತರ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ದಾಖಲಾಗುತ್ತಿವೆ ಎಂದ ಅವರು, ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಹಾಗೂ ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಅಧಿಕಾರಿಗಳ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ, ರ‍್ಯಾಲಿ,…

Read More