Subscribe to Updates
Get the latest creative news from FooBar about art, design and business.
- ಹನೂರು ಶೂಟೌಟ್ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
- ಜೈಲಿನಲ್ಲೇ ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ‘ಸ್ಪೆಷಲ್ ಕ್ಲಾಸ್’!
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ
- ಸಚಿನ್ ಮನೋಲ್ಕರ್ ಕಲಾಕೃತಿಗಳಿಗೆ ಕಲಾಸಕ್ತರ ಮೆಚ್ಚುಗೆ: ಕಲಾ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ ಎಂದ ದತ್ತಾತ್ರಿ ಬೆಳ್ಳೂರೆ
- ತುಮಕೂರು–ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ: ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರ ಪತ್ರ!
- ಅಂಗನವಾಡಿ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಕುಸಿತ: ನಾಲ್ವರು ಮಕ್ಕಳು, ಕಾರ್ಯಕರ್ತೆಗೆ ಗಾಯ
- RSS ಅಷ್ಟೊಂದು ಉತ್ತಮವಾಗಿದ್ದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಸ್ವಯಂ ಸೇವಕರಾಗುತ್ತಿಲ್ಲ?: ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ
- ಸತ್ತವರು ಬೇಟೆಗಾರರಲ್ಲ, ರೈತರು: ಹನೂರು ಶೂಟೌಟ್ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿ ವಿರುದ್ಧ ಮೃತರ ಕುಟುಂಬಸ್ಥರ ಗಂಭೀರ ಆರೋಪ
Author: admin
ತುಮಕೂರು: ಬೈಕ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯರನ್ನು ಕುಳ್ಳಿರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರ ಬಳಿ ಇದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದ ಅಂತರರಾಜ್ಯ ಕಳ್ಳನನ್ನು ವೈ.ಎನ್. ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ಅನಂತಪುರ ಜಿಲ್ಲೆ ರಾಯದುರ್ಗ ಮಂಡಲದ ಸೋಮಲದೊಡ್ಡಿ ಗ್ರಾಮದ ಬಂಡಿಸುಬ್ರಹ್ಮಣ್ಯಂ (30) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 3.20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ತಾಲ್ಲೂಕಿನ ಸೂಲನಾಯಕನಹಳ್ಳಿ ಗೇಟ್‌ನಿಂದ ನವೆಂಬರ್ 23 ರಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ದುರ್ಗಮ್ಮ ಹಾಗೂ ಡಿಸೆಂಬರ್ 8 ರಂದು ಪಳವಳ್ಳಿ ಕಟ್ಟೆಯ ಬಳಿ ಬಸ್‌ಗಾಗಿ ಕಾಯುತ್ತಿದ್ದ ದೊಡ್ಡಹಳ್ಳಿಯ ಗುಂಡಮ್ಮ ಎಂಬುವವರನ್ನು ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ, ಜಮೀನೊಂದರ ಬಳಿ ಆಕೆಯನ್ನು ಕರೆದುಕೊಂಡು ಹೋಗಿ, ಚಿನ್ನದ ಒಡವೆ ಬಿಚ್ಚಿಸಿಕೊಂಡು, ಕಿವಿಯಲ್ಲಿನ ಓಲೆ ಕಿತ್ತಿದ್ದನು. ಗುಂಡಮ್ಮ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರದಲ್ಲಿ ಅರ್ಧ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.…
ತುಮಕೂರು: ಮನೆಯ ಹಕ್ಕು ಪತ್ರ ನೀಡುವಲ್ಲಿ ತಾರತಮ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ಯಾತ್ಸಂದ್ರದ ಎಳ್ಳಾರಬಂಡೆಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಕ್ಯಾತ್ಸಂದ್ರದಲ್ಲಿರುವ ಎಳ್ಳಾರ ಬಂಡೆ, ಮಾರುತಿ ನಗರ, ಇಂದಿರಾ ನಗರ, ವಾರ್ಡ್ ನಂಬರ್ 34ರಲ್ಲಿ ಕಳೆದ 40 ವರ್ಷಗಳಿಂದ ಇದೇ ಗ್ರಾಮಗಳಲ್ಲಿ ವಾಸವಾಗಿದ್ದು, ಸದರಿ 40 ಗ್ರಾಮಸ್ಥರುಗಳಿಗೆ ಖಾತೆ ಮಾಡಿಕೊಟ್ಟು ಹಕ್ಕು ಪತ್ರಗಳನ್ನು ಪಾಲಿಕೆ ನೀಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇನ್ನುಳಿಕೆ 40 ಗ್ರಾಮಸ್ಥರಿಗೆ ಯಾವುದೇ ಹಕ್ಕು ಪತ್ರ ನೀಡಿಲ್ಲ. ಒಂದು ಮನೆಗಳಿಗೆ ಪಾಲಿಕೆಯು 3, 4 ಹಕ್ಕುಪತ್ರಗಳನ್ನು ನೀಡಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ವಂಚನೆಗೆ ಒಳಗಾಗಿರುವವರು ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ನಿವಾರಿಸಬೇಕೆಂದು ಕೋರಿ ಮಾಜಿ ಸಚಿವ ಕೆ.ಎನ್. ರಾಜಣ್ಣರವರಿಗೆ, ಶಾಸಕ ಜ್ಯೋತಿಗಣೇಶ್‌ರವರಿಗೆ ಹಾಗೂ ಪಾಲಿಕೆ ಆಯುಕ್ತರಿಗೂ ಮನವಿ ಸಲ್ಲಿಸಿದ್ದಾಗಿ ಎಳ್ಳಾರಬಂಡೆಯ ಮುಖಂಡ ಜಯಸಿಂಹ ತಿಳಿಸಿದ್ದಾರೆ. ತಮ್ಮ ಸಮಸ್ಯೆಯನ್ನು ಪಾಲಿಕೆ ಸರಿಪಡಿಸದಿದ್ದರೆ ಲೋಕಾಯುಕ್ತಕ್ಕೂ ಹೋಗಲು ಸಿದ್ಧವಿರುವುದಾಗಿ ಹೇಳಿದ್ದಾರೆ. ನಮ್ಮತುಮಕೂರಿನ…
ಶಿರಾ: ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಇರಬಾರದು. ಪಕ್ಷಾತೀತವಾಗಿ ಅಭಿವೃದ್ಧಿ ಆಗಬೇಕು. ಶಾಸಕರಿಗೆ ಇರುವಷ್ಟು ಅಧಿಕಾರ ಗ್ರಾಮ ಪಂಚಾಯಿತಿ ಸದಸ್ಯರಿಗೂ ಇದೆ. ಈ ನಿಟ್ಟಿನಲ್ಲಿ ಗ್ರಾಮಸಭೆಗಳನ್ನು ಪಂಚಾಯಿತಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು. ಗ್ರಾಮ ಪಂಚಾಯ್ತಿಗಳೇ ಗ್ರಾಮಗಳ ಸರ್ಕಾರವಾಗಬೇಕು ಎಂದು ದೆಹಲಿ ವಿಶೇಷ ಪ್ರತಿನಿಧಿ ಡಾ. ಟಿ.ಬಿ.ಜಯಚಂದ್ರ ಹೇಳಿದರು. ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹುಯಿಲ್‌ದೊರೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಎಸ್ ರಂಗನಹಳ್ಳಿ, ದೇವಿ ತಾಂಡ ಗ್ರಾಮಗಳ ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಹೆಚ್ಚು ಗ್ರಾಮ ಪಂಚಾಯಿತಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದುವರೆಗೂ ಸುಮಾರು 17 ಗ್ರಾಪಂ ನೂತನ ಕಟ್ಟಡಗಳು ಪೂರ್ಣಗೊಂಡಿವೆ. ಇದು ರಾಜ್ಯದಲ್ಲಿಯೇ ಮಾದರಿ ಕೆಲಸವಾಗಿದ್ದು, ನೂತನ ಪಂಚಾಯಿತಿ ಕಟ್ಟಡಗಳಿಗೆ ಸರ್ಕಾರದಿಂದ 25 ಲಕ್ಷ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಇರುವಂತಾಗಬೇಕು. ಗ್ರಾಮ ಪಂಚಾಯಿತಿ ಕೆಲಸ ಹಾಗೂ ಕಂದಾಯ…
ತುಮಕೂರು: ಇಂದಿನ ವೇಗದ ಬದುಕಿನಲ್ಲಿ ಮರೆಯಾಗುತ್ತಿರುವ ಪೌಷ್ಟಿಕ ಆಹಾರಗಳನ್ನು ಮರಳಿ ನೆನಪಿಸಲು ತುಮಕೂರಿನ ಗಾಜಿನ ಮನೆಯಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ ಮತ್ತು ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜನವರಿ 7 ಮತ್ತು 8ರಂದು ನಡೆಯುತ್ತಿರುವ ಈ ಮೇಳವನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಲಕ್ಷ್ಮಣ್ ಎಸ್.ಕೆ. ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಔಷಧವೇ ಆಹಾರವಾಗುವ ಮುನ್ನ, ಪೌಷ್ಟಿಕ ಆಹಾರವನ್ನೇ ಔಷಧಿಯಂತೆ ಸೇವಿಸಬೇಕು. ಸಮತೋಲಿತ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತ ಜೀವನ ಸಾಧ್ಯ,” ಎಂದು ತಿಳಿಸಿದರು. ಸಿರಿಧಾನ್ಯಗಳು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ರೋಗಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಜಿಲ್ಲೆಯ 10 ತಾಲೂಕುಗಳಿಂದ ಆಗಮಿಸಿದ 106ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡು 40ಕ್ಕೂ ಹೆಚ್ಚು ಬಗೆಯ ಸಿರಿಧಾನ್ಯ ಖಾದ್ಯಗಳನ್ನು ಸಿದ್ಧಪಡಿಸಿದ್ದರು. ಮಿಲ್ಲೆಟ್ ಪಾಯಸ, ರೊಟ್ಟಿ ಹಾಗೂ ವಿವಿಧ ನವಣೆ ಖಾದ್ಯಗಳು ಜನರ ಗಮನ ಸೆಳೆದವು. ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಬಾಯಿರುಚಿಗೆ ಮಾರುಹೋಗಿ ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳನ್ನು ಜನರು ಕಡೆಗಣಿಸುತ್ತಿರುವುದು ಆತಂಕಕಾರಿ…
ಬೆಂಗಳೂರು: ರಾಜ್ಯಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತುಮಕೂರು ಎಸ್ಪಿ ಕೆ.ವಿ.ಅಶೋಕ್ ಅವರಿಗೂ ಹೊಸ ವರ್ಷದ ಸಂದರ್ಭದಲ್ಲಿ ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಶ್ರೇಣಿಯಲ್ಲಿ ಮುಂಬಡ್ತಿ ದೊರೆತಿದ್ದು, ತುಮಕೂರು ಎಸ್ಪಿ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ತದ ಬದಲಾವಣೆಗಳನ್ನು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪಟ್ಟಿಗೆ ಅನುಮೋದನೆ ನೀಡಿದ್ದಾರೆ. ಈ ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 23 ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ಮತ್ತು ನೇಮಕಾತಿ ನೀಡಲಾಗಿದ್ದರೆ, ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್ಪಿ ಮತ್ತು ಡಿಸಿಪಿಗಳನ್ನು ಬದಲಾಯಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ತುಮಕೂರು: ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಅವರು ಜಿಲ್ಲಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದು, ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡಿದ್ದಾರೆ. ಸಿಇಒ ಜಿ.ಪ್ರಭು ವರ್ಗಾವಣೆ ಹಿನ್ನೆಲೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ತುಮಕೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಹೊಸ ವರ್ಷಕ್ಕೆ ಮುನ್ನಾ ದಿನವೇ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳಿಗೆ ಮಹತ್ವದ ಹೊಣೆಗಾರಿಕೆ ದೊರೆತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ ಮಧುಗಿರಿಯಿಂದ ಕೇಳಿಬರುವ ಏಕತೆಯ ಮೌನ ಸಂದೇಶ ಧರ್ಮವು ಮಾನವನನ್ನು ಒಗ್ಗೂಡಿಸಬೇಕಾದ ಶಕ್ತಿಯಾಗಬೇಕಾದರೆ, ಅದು ಭೇದಗಳನ್ನು ಮೀರಿ ಸಾಗಬೇಕು. ಆದರೆ ಇಂದಿನ ಸಮಾಜದಲ್ಲಿ ಧರ್ಮದ ಅರ್ಥವು ಕೆಲವೊಮ್ಮೆ ವಿಭಜನೆಯ ದಾರಿಯಲ್ಲಿ ಸಾಗುತ್ತಿರುವುದು ವಿಷಾದಕರ. ಇಂತಹ ಸಂದರ್ಭದಲ್ಲೇ ಶತಮಾನಗಳಿಂದ ಯಾವುದೇ ಘೋಷಣೆ ಇಲ್ಲದೆ ಏಕತೆಯ ಸಂದೇಶವನ್ನು ಸಾರುತ್ತಾ ಬಂದಿರುವ ಪವಿತ್ರ ಕ್ಷೇತ್ರವೇ ಮಧುಗಿರಿಯ ಹರಿಹರೇಶ್ವರ ದೇವಸ್ಥಾನ. “ಹರಿ” ಮತ್ತು “ಹರ” ಎಂಬ ಎರಡು ಮಹಾತತ್ತ್ವಗಳು ಒಂದೇ ಸ್ವರೂಪದಲ್ಲಿ ಅಡಗಿರುವ ಹರಿಹರೇಶ್ವರ, ಶೈವ–ವೈಷ್ಣವ ಭೇದಗಳಿಗೆ ತತ್ತ್ವಶಾಸ್ತ್ರೀಯ ಉತ್ತರವಾಗಿದೆ. ಇಲ್ಲಿ ದೇವರು ವಿಭಿನ್ನನಲ್ಲ; ದರ್ಶನದ ಮಾರ್ಗಗಳು ಮಾತ್ರ ವಿಭಿನ್ನ. ಆದರೆ ಗುರಿ ಒಂದೇ — ಮಾನವನ ಒಳಿತಿಗೆ. ಮಧುಗಿರಿ ಕೇವಲ ಕೋಟೆಗಳ ನಗರವಲ್ಲ; ಅದು ಸಹಬಾಳ್ವೆಯ ಸಂಸ್ಕೃತಿಯನ್ನು ಬೆಳೆಸಿದ ನೆಲ. ಹರಿಹರೇಶ್ವರ ದೇವಸ್ಥಾನವು ಧರ್ಮವನ್ನು ಸಂಘರ್ಷದ ಸಾಧನವಾಗಿ ಬಳಸದೆ, ಸಮನ್ವಯ, ಸಹಿಷ್ಣುತೆ ಮತ್ತು ಸಾಮಾಜಿಕ ಸೌಹಾರ್ದತೆಯ ಮಾರ್ಗವಾಗಿ ರೂಪಿಸಿಕೊಂಡ ಸಮಾಜದ ಪ್ರತೀಕವಾಗಿದೆ. ಇಂದಿನ ದಿನಗಳಲ್ಲಿ ಧರ್ಮವನ್ನು ರಾಜಕೀಯದ ಅಸ್ತ್ರವನ್ನಾಗಿ ಮಾಡುತ್ತಿರುವ…
ತಿಪಟೂರು: ಜೆಡಿಎಸ್ ಪಕ್ಷದ ವರಿಷ್ಠರ ನಿರ್ದೇಶನದಂತೆ ತಿಪಟೂರು ತಾಲೂಕು ಜೆಡಿಎಸ್ ಘಟಕದಲ್ಲಿ ಪ್ರಮುಖ ನೇಮಕಾತಿಗಳನ್ನು ಮಾಡಲಾಗಿದ್ದು, ಪಕ್ಷದ ಸಂಘಟನೆಗೆ ವೇಗ ನೀಡಲಾಗಿದೆ. ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷರಾಗಿ ಜಕ್ಕನಹಳ್ಳಿ ಮೋಹನ್ ಹಾಗೂ ನಗರ ಘಟಕದ ಉಪಾಧ್ಯಕ್ಷರಾಗಿ ರಾಜಶೇಖರಯ್ಯ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ನಿರುದ್ಯೋಗದ ವಿರುದ್ಧ ಕೆ.ಟಿ. ಶಾಂತಕುಮಾರ್ ಕಳಕಳಿ: ನೇಮಕಾತಿ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. “ವಿದ್ಯಾವಂತ ಯುವಜನತೆ ಉದ್ಯೋಗವಿಲ್ಲದೆ ಆಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಂಡ ಪಾಲಕರು ಇಂದು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ದೇಶದಲ್ಲಿ ಶೇ. 70 ರಷ್ಟು ಯುವಕರು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು. ಜನವರಿ 31ರಂದು 3ನೇ ಹಂತದ ಉದ್ಯೋಗ ಮೇಳ: ನಿರುದ್ಯೋಗಿ ಯುವಕರಿಗೆ ಆಸರೆಯಾಗುವ ನಿಟ್ಟಿನಲ್ಲಿ ತಿಪಟೂರಿನಲ್ಲಿ ಈಗಾಗಲೇ ಎರಡು ಬಾರಿ ಯಶಸ್ವಿಯಾಗಿ ಉದ್ಯೋಗ ಮೇಳ ನಡೆಸಲಾಗಿದ್ದು, ಈಗ ಮೂರನೇ ಭಾಗವಾಗಿ ಬೃಹತ್ ಮೇಳವನ್ನು…
ತುಮಕೂರು: ರಾಜ್ಯದ ಬಹುಪಾಲು ಜಿಲ್ಲೆಗಳಿಗೆ ಹೆಬ್ಬಾಗಿಲಿನಂತಿರುವ ತುಮಕೂರಿನಲ್ಲಿ ಮುದ್ರಕರು ಮುದ್ರಣ ಕ್ಷೇತ್ರದಲ್ಲಿನ ನೂತನ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಂಡು ಗ್ರಾಹಕರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದರ ಮೂಲಕ ತುಮಕೂರನ್ನು ‘ಪ್ರಿಂಟಿಂಗ್ ಹಬ್’ ಆಗಿ ರೂಪಿಸಬೇಕೆಂದು ಸಮಾಲೋಚಕರಾದ ಸಿ.ಸಿ.ಪಾವಟೆ ಸಲಹೆ ನೀಡಿದರು. ತುಮಕೂರು ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ಏರ್ಪಡಿಸಿದ್ದ ‘ಮುದ್ರಣಕಾರರ ಕುಂದುಕೊರತೆಗಳ ಕುರಿತ ಸಮಾಲೋಚನಾ ಸಭೆ’ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಗತೀಕರಣ ಮತ್ತು ತಾಂತ್ರಿಕ ಪ್ರಗತಿ ಮುದ್ರಣ ಉದ್ಯಮವು ತನ್ನ ವ್ಯಾಪ್ತಿ ಹಾಗೂ ಸಾಮರ್ಥ್ಯವನ್ನು ವಿಸ್ತರಿಸಲು ಅನುವು ಮಾಡಿದೆ. ಗ್ರಾಹಕರ ಬೇಡಿಕೆಗಳು ಮುದ್ರಣ ಉದ್ಯಮದಲ್ಲಿ ಅನೇಕ ಹೊಸ ಅವಕಾಶಗಳಿಗೆ ಅನುವು ಮಾಡಿಕೊಟ್ಟಿವೆ. ಸಾಂಪ್ರದಾಯಿಕ ಆಫ್ ಸೆಟ್‌ನಿಂದ ಡಿಜಿಟಲ್ ಮುದ್ರಣದವರೆಗೆ ಅನೇಕ ಬದಲಾವಣೆಗಳಾಗಿವೆ. ಇದಕ್ಕನುಗುಣವಾಗಿ ಮುದ್ರಕರು ಮುದ್ರಣ ಕ್ಷೇತ್ರದಲ್ಲಿ ದೈನಂದಿನ ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರತಿನಿತ್ಯ ಅಪ್ ಡೇಟ್ ಆಗಬೇಕೆಂದು ಅವರು, ನಿಮ್ಮ ವೃತ್ತಿಯಲ್ಲಿ ಪ್ರೀತಿ, ಭಕ್ತಿ, ವಿಶ್ವಾಸ, ಬದ್ಧತೆ ಹಾಗೂ ಶರಣಾಗತಿಯಿರಬೇಕು. ಅದೇ ರೀತಿ ದುಶ್ಚಟಗಳಿಂದ ದೂರವಿರಬೇಕು ಎಂದು…
ತುಮಕೂರು: ರಾಜ್ಯದಲ್ಲಿ 21 ರೀತಿಯ ನ್ಯೂನತೆಯುಳ್ಳ 11,45,208 ಜನ ವಿಕಲಚೇತನರಿದ್ದರೆ, ತುಮಕೂರು ಜಿಲ್ಲೆಯಲ್ಲಿ 46 ಸಾವಿರ ಮಂದಿ ವಿಕಲಚೇತನರಿದ್ದಾರೆ. ಎಲ್ಲವೂ ಸರಿಯಾಗಿರುವ ನಾವು ವಿಕಲಚೇತನರನ್ನು ಅವರ ದೃಷ್ಟಿಕೋನದಲ್ಲಿ ನೋಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಸಿದ್ಧರಾಮಣ್ಣ ಕೆ. ತಿಳಿಸಿದರು. ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೊಬಿಲಿಟಿ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಕಾಯ್ದೆ ಅರಿವು ಮತ್ತು ಸೌಲಭ್ಯ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಎಲ್ಲವೂ ಕಾನೂನಿನಿಂದಲೇ ಪರಿಹಾರವಾಗುವುದಿಲ್ಲ. ಮಹಿಳೆಯರು, ಮಕ್ಕಳು, ವಿಕಲಚೇತನರು ಇವರೆಲ್ಲರಿಗೂ ವಿಶೇಷ ಕಾನೂನುಗಳಿವೆ. ಆದರೆ ಅದರ ಅನುಷ್ಠಾನ ಮುಖ್ಯವಾಗಿದೆ ಎಂದರು. ಶೇ. 90 ಕ್ಕಿಂತಲೂ ಹೆಚ್ಚು ಅಂಗವೈಕಲ್ಯ ಹೊಂದಿರುವ ಪೋಷಕರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ವಿಕಲಚೇತನರ ಪುನರ್ವಸತಿಗಾಗಿ 222 ಜನ ವಿಆರ್‌ಡಬ್ಲ್ಯೂ, 8 ಜನ ಎಂ.ಆರ್.ಡಬ್ಲ್ಯೂ, 18 ಜನ ಯುಆರ್‌ಡಬ್ಲ್ಯೂಗಳು, 7 ವಿವಿಧ ಸಂಘ ಸಂಸ್ಥೆಗಳು ಸರ್ಕಾರದ ಅನುದಾನ ಪಡೆದು…