Author: admin

ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ರಸ್ತೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ನೂರಾರು ವಿದ್ಯಾರ್ಥಿಗಳು ಕೆಎಸ್ ಆರ್‌ ಟಿಸಿ ಬಸ್ಸುಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಶಾಲಾ-ಕಾಲೇಜುಗಳಿಗೆ ತೆರಳಲು ಸಕಾಲಕ್ಕೆ ಬಸ್ ಸೌಲಭ್ಯ ಇಲ್ಲದಿರುವುದನ್ನು ಖಂಡಿಸಿ, ಜೆಡಿಎಸ್ ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಹೃತ್ವಿಕ್ ಗೌಡ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯಿತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಕಿಡಿ: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹೃತ್ವಿಕ್ ಗೌಡ, “ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳಿಗ್ಗೆ ಕಾಲೇಜಿಗೆ ಬರಲು ಮತ್ತು ಸಂಜೆ ಗ್ರಾಮಗಳಿಗೆ ಮರಳಲು ಸರಿಯಾದ ಸಮಯಕ್ಕೆ ಬಸ್ಸುಗಳಿಲ್ಲ. ಈ ಬಗ್ಗೆ ಡಿಪೋ ಮ್ಯಾನೇಜರ್‌ಗೆ ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮನವಿ ನೀಡಿದ ಎರಡು ದಿನ ಮಾತ್ರ ಸರಿಯಾಗಿ ಬಸ್ ಬಿಟ್ಟು, ನಂತರ ಮತ್ತೆ ಹಳೆ ಚಾಳಿ ಮುಂದುವರಿಸುತ್ತಾರೆ. ಅಧಿಕಾರಿಗಳ ಈ ಉದಾಸೀನತೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ,” ಎಂದು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಮತ್ತು…

Read More

ಸರಗೂರು:  ಈ ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ ಹಾಗೂ ಜನಪರತೆಯ ಆಧಾರದ ಮೇಲೆ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ ಸಮಾನ ಅವಕಾಶಗಳನ್ನು ಸೃಷ್ಟಿಸಿದ ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯದ ನಂತರದಲ್ಲಿ ಅತ್ಯಂತ ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಎಂದರು. ಪಟ್ಟಣ ಪ್ರವಾಸಿ ಮಂದಿರದಲ್ಲಿ ಸೋಮವಾರ ದಂದು 140ನೇ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಜ್ಯ ಹಾಗೂ ಜಿಲ್ಲಾ  ಅಧ್ಯಕ್ಷರ ಆದೇಶ ಮೇರೆಗೆ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ಹಾಗೂ ಸರಗೂರು ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ರವರ ನೇತೃತ್ವದಲ್ಲಿ ಹಿರಿಯರಿಗೆ ಸನ್ಮಾನಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ರಾಷ್ಟ್ರನಿರ್ಮಾಣದಲ್ಲಿ ನಿರ್ವಹಿಸಿದ ಪಾತ್ರ ಅನನ್ಯ. ಸ್ವಾತಂತ್ರ್ಯದ ಬಳಿಕ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ಎಂದರು. ಕಾಂಗ್ರೆಸ್ ಇಂದಿಗೂ ಬಡವರು, ಶೋಷಿತರು, ಅವಕಾಶ ವಂಚಿತರು ಸೇರಿದಂತೆ ದೇಶದ ನಾಗರಿಕರ…

Read More

ಸರಗೂರು:  ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಅವರ ಕಾವ್ಯಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗಲಿದೆ’ ಎಂದು ಮಾಜಿ ರಾಜ್ಯ ನಿರ್ದೇಶಕ ಹಾಗೂ ಯುವ ಸಬಲೀಕರಣ ಇಲಾಖೆ ಎಂ.ಎಂ.ನಟರಾಜು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ದಂದು ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ರವರ ಜಯಂತಿಯನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಹದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಮಾನವ ಕುವೆಂಪು ರವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಾತಿ–ಮತಗಳನ್ನು ಬಹಿಷ್ಕರಿಸುವ ಬಸವ, ಬುದ್ಧ, ಅಂಬೇಡ್ಕರ್ ಅವರ ವಿಚಾರಗಳನ್ನು ಹೊಸ ರೂಪದಲ್ಲಿ ಕುವೆಂಪು ಅವರು ನಾಡಿಗೆ ಪರಿಚಯಿಸಿದ್ದಾರೆ’ ಎಂದು ನುಡಿದರು. ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ/ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. ‘ಮನುಜ ಮತ ವಿಶ್ವಪಥ’ ಸಂದೇಶ ಸಾರಿದ…

Read More

ಬೆಂಗಳೂರು: ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕಾಮಗಾರಿಗಳ ವಿಳಂಬವನ್ನು ತಪ್ಪಿಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಹಣ ಬಿಡುಗಡೆ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಪ್ರಮುಖ ಅಂಕಿಅಂಶಗಳು ಮತ್ತು ಮಾಹಿತಿಗಳು ಇಲ್ಲಿವೆ: 2023-24ನೇ ಸಾಲು: ಈ ಅವಧಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ರೂ. 25 ಕೋಟಿಯಂತೆ ಒಟ್ಟು ರೂ. 3,510 ಕೋಟಿ ಅನುಮೋದಿಸಲಾಗಿತ್ತು. ಇದರಲ್ಲಿ ಶೇ. 58 ರಷ್ಟು (ರೂ. 2,040 ಕೋಟಿ ಮೌಲ್ಯದ) ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಬಾಕಿ ಅನುದಾನ: ಬೆಳಗಾವಿ ಅಧಿವೇಶನದ ವೇಳೆ ರೂ. 1,205 ಕೋಟಿ ಬಿಡುಗಡೆಗೆ ಆದೇಶ ನೀಡಲಾಗಿದ್ದು, ಮುಗಿದಿರುವ ಕೆಲಸಗಳ ಬಿಲ್ಲುಗಳನ್ನು ಕೂಡಲೇ ಪಾವತಿಸಲು ಸೂಚಿಸಲಾಗಿದೆ. 2024-25ನೇ ಸಾಲು: ಮಳೆ ಹಾನಿ ರಸ್ತೆಗಳ ದುರಸ್ತಿಗಾಗಿ ರೂ. 1,890 ಕೋಟಿ ಅನುಮೋದಿಸಲಾಗಿದ್ದು, ಈಗಾಗಲೇ ರೂ. 250…

Read More

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ದೊಡ್ಡ ತಿರುವು ಕಂಡುಬಂದಿದೆ. ದೊಡ್ಮನೆಯಿಂದ ಹೊರಬಂದಿರುವ ಸ್ಪರ್ಧಿ ಮಾಳು ನಿಪನಾಳ್ ಅವರು ತಮ್ಮ ಸಹ-ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪಂದನಾ ಸೋಮಣ್ಣ ಅವರು ಮನೆಯಲ್ಲಿ ಇನ್ನೂ ಮುಂದುವರಿಯುತ್ತಿರುವುದರ ಬಗ್ಗೆ ವೀಕ್ಷಕರಲ್ಲಿ ಮತ್ತು ಹೊರಬಂದ ಸ್ಪರ್ಧಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾಳು ನಿಪನಾಳ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, “ಸ್ಪಂದನಾ ಸೋಮಣ್ಣ ಅವರು ಮನೆಯಲ್ಲಿ ಏನೇನೂ ಮಾಡುತ್ತಿಲ್ಲ. ಅವರು ಕೇವಲ ಕುಳಿತುಕೊಳ್ಳುತ್ತಾರೆ ಮತ್ತು ಮಲಗುತ್ತಾರೆ. ಅಂತಹವರು ಇನ್ನೂ ಮನೆಯ ಒಳಗಿದ್ದಾರೆ ಎನ್ನುವುದೇ ಆಶ್ಚರ್ಯ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪಂದನಾ ಅವರು ಟಾಸ್ಕ್‌ ಗಳಲ್ಲಿ ಸರಿಯಾಗಿ ಭಾಗವಹಿಸುತ್ತಿಲ್ಲ ಮತ್ತು ಮನೆಯ ಕೆಲಸಗಳಲ್ಲೂ ಆಲಸ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. “ಅವರಿಗಿಂತ ಚೆನ್ನಾಗಿ ಆಡುವವರು ಮನೆಯಿಂದ ಹೊರಬರುತ್ತಿದ್ದಾರೆ, ಆದರೆ ಏನೂ ಮಾಡದ ಸ್ಪಂದನಾ ಸೇಫ್ ಆಗುತ್ತಿರುವುದು ಹೇಗೆ?” ಎಂದು ಮಾಳು ಪ್ರಶ್ನಿಸಿದ್ದಾರೆ. ದೊಡ್ಮನೆಯಲ್ಲಿ ಸ್ಪಂದನಾ ಅವರ ‘ಸೈಲೆಂಟ್’…

Read More

ಜಮೈಕಾದಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 158 ಮಿಲಿಯನ್ ಡಾಲರ್ (ಸುಮಾರು 14,190 ಕೋಟಿ ರೂಪಾಯಿ) ಲಾಟರಿ ಗೆದ್ದಿದ್ದು, ಈ ಹಣವನ್ನು ಸ್ವೀಕರಿಸಲು ಆತ ಅನುಸರಿಸಿದ ಮಾರ್ಗ ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ. ತಾನು ಇಷ್ಟು ದೊಡ್ಡ ಮೊತ್ತದ ಹಣ ಗೆದ್ದಿರುವ ವಿಚಾರ ತನ್ನ ಕುಟುಂಬಸ್ಥರಿಗಾಗಲಿ ಅಥವಾ ಸ್ನೇಹಿತರಿಗಾಗಲಿ ತಿಳಿಯಬಾರದು ಎಂಬ ಕಾರಣಕ್ಕೆ ಆತ ‘ಸ್ಕ್ರೀಮ್’ (Scream) ಸಿನೆಮಾದ ಭೀಕರ ಮುಖವಾಡ ಧರಿಸಿ ಹಣವನ್ನು ಪಡೆದಿದ್ದಾನೆ. ಕ್ಯಾಂಪೆಬೆಲ್ ಎಂಬ ಹೆಸರಿನ ಈ ವ್ಯಕ್ತಿ, ಜಮೈಕಾದ ಸ್ಪ್ಯಾನಿಷ್ ಕೋರ್ಟ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಆಯೋಜಕರಿಂದ ಚೆಕ್ ಪಡೆದರು. ಲಾಟರಿ ಗೆದ್ದ ನಂತರದ 54 ವಾರಗಳ ಕಾಲ ತಾನು ತೀವ್ರ ಭಯ ಮತ್ತು ಒತ್ತಡದಲ್ಲಿ ಬದುಕಿದ್ದಾಗಿ ಅವರು ತಿಳಿಸಿದ್ದಾರೆ. “ನನಗೆ ಹಣ ಸಿಕ್ಕಿದೆ ಎಂದು ಗೊತ್ತಾದರೆ ಎಲ್ಲರೂ ಸಹಾಯ ಕೇಳಲು ಬರುತ್ತಾರೆ ಅಥವಾ ಹಣಕ್ಕಾಗಿ ನನ್ನ ಜೀವಕ್ಕೆ ಅಪಾಯವಾಗಬಹುದು ಎಂಬ ಭಯವಿತ್ತು. ಹೀಗಾಗಿ ನನ್ನ ಗುರುತನ್ನು ಗೌಪ್ಯವಾಗಿಡಲು ಈ ನಿರ್ಧಾರ ಮಾಡಿದೆ” ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಲಾಟರಿ…

Read More

ತುಮಕೂರು: ಗೆಲುವು ಹವ್ಯಾಸವಾಗಬೇಕು, ಗೆಲ್ಲುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಕು. ಆತ್ಮವಿಶ್ವಾಸ, ಛಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ಕಟ್ಟಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್‌ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು. ಶನಿವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳು, ಒಂದು ಕೆಲಸವನ್ನು ಹೇಗೆ ಬೇಕಾದರೂ ಮಾಡಿ ಮುಗಿಸಬಹುದು. ಆದರೆ ಅದನ್ನು ಹೀಗೆ ಮಾಡಿ ಮುಗಿಸಬೇಕು ಎಂದು ತಿಳಿದು ಮುಗಿಸುವುದು ಮುಖ್ಯ. ಅಂತಹ ಚಾಣಾಕ್ಷತನ, ಬುದ್ಧಿವಂತಿಕೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಅವಕಾಶಗಳಿಗಾಗಿ ಕಾಯಬಾರದು ಸಿಗುವ ಸಣ್ಣ ಅವಕಾಶವನ್ನೂ ಬಿಡದೆ ಬಳಸಿಕೊಂಡು ಯಶಸ್ವಿಯಾದರೆ ದೊಡ್ಡ ಅವಕಾಶಗಳಿಗೆ ನಾಂದಿಯಾಗುತ್ತದೆ. ಈಗ ನಿಮ್ಮ ಮುಂದಿನ ಗುರಿ ಚೆನ್ನಾಗಿ ಓದಿ ಉತ್ತಮ ಅಂಕ ಪಡೆಯುವುದು. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ನೂರಕ್ಕೆ ನೂರು ಅಂಕ ಪಡೆಯಬೇಕು. ಅಂತಹ ಫಲಿತಾಂಶ ಪಡೆದರೆ ಶಾಲೆಯಲ್ಲಿ ಮತ್ತೊಂದು ಕಾರ್ಯಕ್ರಮ ಮಾಡೋಣ ಎಂದರು. ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್ ಗೌಡ, ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು…

Read More

ತುಮಕೂರು: ವಿಘ್ನೇಶ್ವರ ಕಂಫರ್ಟ್ಸ್‌ನಲ್ಲಿ 26ನೇ ವಾರ್ಡಿನ ಕಾರ್ಯಕರ್ತರ ಪರಿಚಯ ಸಭೆ ಮತ್ತು ಸುಶಾಸನ ದಿನ ರಾಷ್ಟ್ರ ರಾಜಕೀಯ ಕ್ಷೇತ್ರದ ಶ್ರೇಷ್ಠ ನಾಯಕ ಅಜಾತಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜಯಂತಿಯನ್ನು ಆಚರಿಸಲಾಯಿತು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪ್ರದೀಪ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾಜಿ ಪ್ರಧಾನಮಂತ್ರಿಗಳಾದ ವಾಜಪೇಯಿ ಅವರ ಆದರ್ಶ ಗುಣಗಳು ಅವರ ಸೈದ್ಧಾಂತಿಕ ನೆಲೆ, ಅವರು ನಡೆದು ಬಂದದಾರಿ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ. ಅವರ ಆದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗುತ್ತದೆ. ಕವಿಯಾಗಿ ಆದರ್ಶ ವ್ಯಕ್ತಿಯಾಗಿ ಬೇರೆ ಬೇರೆ ಪಕ್ಷದ ರಾಜಕಾರಣಿಗಳಿಗೂ ಇಷ್ಟವಾದ ವ್ಯಕ್ತಿಯಾಗಿ ಎಂದಿಗೂ ಪ್ರಾತ ಸ್ಮರಣೀಯರು, ಕವಿಯಾಗಿ ಉತ್ತಮ ವಾಗ್ಮಿಯಾಗಿ ಸದಾ ರಾಷ್ಟ್ರೀಯತೆಯನ್ನೇ ಉಸಿರಾಗಿಸಿಕೊಂಡಿದ್ದರು ಸದಾಕಾಲವೂ ಕೆಲಸದಲ್ಲಿ ನಿರತವಾಗಿದ್ದು ವಿಚಾರವಂತಿಕೆ ಸಿದ್ಧಾಂತ ಎಲ್ಲವನ್ನು ಮೈಗೂಡಿಸಿಕೊಂಡು ಅದನ್ನೇ ಎಲ್ಲರಿಗೂ ಹಂಚುತ್ತಿದ್ದ ಮೇರು ವ್ಯಕ್ತಿತ್ವದವರು. ಅವರು ಈ ದೇಶದ ಪ್ರಧಾನಮಂತ್ರಿಯಾಗಿದ್ದಾಗ ರಸ್ತೆ ನಿರ್ಮಾಣದಲ್ಲಿ ಮಹತ್ತರ ಕಾರ್ಯವನ್ನು ಮಾಡಿದವರು. ಇಂತಹ ಮಹಾನ್ ವ್ಯಕ್ತಿಯ 101ನೇ ವರ್ಷದ…

Read More

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಗರೇಟ್ ಬೆಲೆ ಏರಿಕೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಸಿಗರೇಟ್ ಮೇಲೆ ಹೊಸ ತೆರಿಗೆ ವಿಧಿಸಲು ಮುಂದಾಗಿದ್ದು, ಇದರಿಂದ ಒಂದು ಸಿಗರೇಟ್ ಬೆಲೆ ಬರೋಬ್ಬರಿ 72 ರೂಪಾಯಿಗೆ ಏರಿಕೆಯಾಗಲಿದೆ ಎಂಬ ಸುದ್ದಿಗಳು ವೈರಲ್ ಆಗಿದ್ದವು. ಆದರೆ, ಈ ಸುದ್ದಿಗಳು ಕೇವಲ ವದಂತಿಯಾಗಿದ್ದು, ವಾಸ್ತವದಲ್ಲಿ ಬೆಲೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಏರಿಕೆಯಾಗುವುದಿಲ್ಲ ಎಂದು ವರದಿಗಳು ಸ್ಪಷ್ಟಪಡಿಸಿವೆ. ತೆರಿಗೆ ಲೆಕ್ಕಾಚಾರ ಹೇಗಿದೆ? ಭಾರತದಲ್ಲಿ ಸಿಗರೇಟ್ ಮೇಲೆ ಅಬಕಾರಿ ಸುಂಕವನ್ನು ಪ್ರತಿ 1,000 ಸಿಗರೇಟ್‌ಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಹಳೆಯ ಸುಂಕದ ಪ್ರಕಾರ ಪ್ರತಿ ಸಾವಿರ ಸಿಗರೇಟ್‌ಗೆ 200 ರಿಂದ 735 ರೂಪಾಯಿ ಇತ್ತು (ಅಂದರೆ ಪ್ರತಿ ಸಿಗರೇಟ್‌ಗೆ ಅಂದಾಜು 0.20 ರಿಂದ 0.73 ಪೈಸೆ). ಈಗ ಪ್ರಸ್ತಾವಿತ ಹೊಸ ಸುಂಕವು ಪ್ರತಿ ಸಾವಿರ ಸಿಗರೇಟ್‌ಗೆ 2,700 ರಿಂದ 11,000 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ವಾಸ್ತವ ಬೆಲೆ ಏರಿಕೆ ಎಷ್ಟು? ಈ ಹೊಸ…

Read More

ಕೊರಟಗೆರೆ: ನಮ್ಮ ಊರು ಸ್ವಚ್ಛವಾಗಿಬೇಕು ಎಂದರೆ ಪಟ್ಟಣದ ಪೌರಕಾರ್ಮಿಕ ಕೊಡುಗೆ ದೊಡ್ಡದು, ಗ್ರಾಮಗಳು ಸುಂದರವಾಗಿಬೇಕು ಎನ್ನವ ಉದ್ದೇಶದಿಂದ ಪತ್ರಿದಿನ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸಣ್ಣ ಉಡುಗರೆ ಎಂದು ಮಾಜಿ ಜಿ.ಪಂ. ಸದಸ್ಯ ಪಿ.ಎನ್.ಕೃಷ್ಣ ಮೂರ್ತಿ ತಿಳಿಸಿದರು. ಕೊರಟಗೆರೆ ಪಟ್ಟಣದಲ್ಲಿ ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಅಭಿಮಾನಿ ಬಳಗ ಏರ್ಪಡಿಸಲಾಗಿದ್ದ ಕೊರಟಗೆರೆ ಪ.ಪಂ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬೆಡ್‌ ಶೀಟ್, ಜರ್ಕಿನ್ ವಿತರಣೆ ಮಾಡಿ ಮಾತನಾಡಿದರು. ಪೌರಕಾರ್ಮಿಕರು ಚಳಿ, ಗಾಳಿ, ಮಳೆ ಎನ್ನದೆ ಬೆಳಿಗ್ಗೆ 5 ಗಂಟೆಗೆ ಎದ್ದು ಪಟ್ಟಣವನ್ನ ಸ್ವಚ್ಛಗೊಳಿಸಿ ನಮಗೆ ಉತ್ತಮ ಪರಿಸರ ಸೃಷ್ಠಿ ಮಾಡಿಕೊಡುತ್ತಾರೆ. ಅವರು ಚಳಿಯಲ್ಲಿ ನಡುಗಬಾರದು ಎನ್ನವ ಉದ್ದೇಶದಿಂದ ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಬೆಡ್‌ ಶೀಟ್, ಜರ್ಕಿನ್ ವಿತರಣೆ ಮಾಡಲಾಗಿದೆ. ಕೊರಟಗೆರೆ ಹಾಗೂ ತುಮಕೂರಿನ ನನ್ನ ಅಭಿಮಾನಿ ಬಳಗ ಸರಳವಾಗಿ ಆಚರಣೆ ಮಾಡಲು ತಿಳಿಸಿದ್ದೇನೆ ಎಂದರು. ಕೊರಟಗೆರೆ ಕ್ಷೇತ್ರದ ಜನತೆಯ ಅಭಿಮಾನಕ್ಕೆ ನಾನು ಚಿರಋಣಿ ಯಾಗಿದ್ದೇನೆ. ನಾನು 30 ವರ್ಷದಿಂದ ಕೊರಟಗೆರೆ ಜನತೆಯ…

Read More