Subscribe to Updates
Get the latest creative news from FooBar about art, design and business.
- ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ: 9 ಮಂದಿಗೆ ಗಾಯ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ
- ಬೆಂಗಳೂರಿಗರ ನಿದ್ದೆಗೆಡಿಸಿದ್ದ, ವೃದ್ಧನನ್ನು ಕೊಂದ ಕಾಡಾನೆ ಕೊನೆಗೂ ಬನ್ನೇರುಘಟ್ಟ ಅರಣ್ಯಕ್ಕೆ ವಾಪಸ್!
- ಬಸ್ ಟಿಕೆಟ್ ದರ ಏರಿಕೆ ಫಿಕ್ಸ್? ಸಚಿವ ಬೈರತಿ ಸುರೇಶ್ ಹೇಳಿದ್ದೇನು?
- 2028ಕ್ಕೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ
- ಚಾಮುಂಡಿ ಬೆಟ್ಟಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ: ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ತಲೈವಾ!
- ಬೀದರ್: ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ನಕಲಿ ವೈದ್ಯನ ಅಡ್ಡೆ ಮೇಲೆ ದಿಢೀರ್ ದಾಳಿ; ಔರಾದ್ ನಲ್ಲಿ ಕ್ಲಿನಿಕ್ ಸೀಜ್!
- ಬೆಳಕುಣಿ ಚೌದ್ರಿ ಗ್ರಾ.ಪಂ. ಎದುರು ಮಾಹಿತಿ ಕೋರಿ ಧರಣಿ: ಸುಡು ಬಿಸಿಲಿನ ತಾಪಕ್ಕೆ ಅಸ್ವಸ್ಥರಾದ ಪ್ರತಿಭಟನಾಕಾರ
- ಅ.1 ವಿಶ್ವ ಹಿರಿಯ ನಾಗರಿಕರ ದಿನಾಚರಣೆ
Author: admin
ಬೆಂಗಳೂರು: ಕೊವಿಡ್ 19 ಮತ್ತು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚರ್ಚೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೊವಿಡ್ 19 ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧರಿಸಿಲ್ಲ. ಇನ್ನೊಂದು ವಾರದ ಬೆಳವಣಿಗೆ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮುಂದಿನ ಪರಿಸ್ಥಿತಿ ನೋಡಿಕೊಂಡು ಕಠಿಣ ಕ್ರಮಗಳ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಯ ಬಗ್ಗೆ ನಿರ್ಧಾರ ಮಾಡಲಾಗುವುದು ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮುಂದುವರಿಯುತ್ತದೆ. ಮೂವರಿಗೆ ಕೊರೊನಾ ಪಾಸಿಟಿವ್ ಬಂದರೆ, ಕ್ಲಸ್ಟರ್ ಮಾಡುತ್ತೇವೆ. ಸದ್ಯಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಇದೇ ವೇಳೆ ಸಿಎಂ ತಿಳಿಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಮಡಿಕೇರಿ: ಒಮಿಕ್ರಾನ್ ಸೋಂಕು ರಾಜ್ಯದ ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಕೊರೊನಾ ಸೋಂಕಿಗಿಂತಲೂ ಒಮಿಕ್ರಾನ್ ವೇಗವಾಗಿ ಹರಡುವುದರಿಂದ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ. ಅದರಂತೆ ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಶಾಲೆಯೊಂದರಲ್ಲಿ 9 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆರ್ಭಟ ಕೂಡ ಜೋರಾಗಿದೆ. ಹೀಗಾಗಿ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.ಇತ್ತ ಜಿಲ್ಲೆಯ ಜನತೆ ಹೆಚ್ಚಾಗಿ ನೆರೆಯ ಕೇರಳ ರಾಜ್ಯದೊಂದಿದೆ ಹೆಚ್ಚಿನ ವ್ಯವಹಾರ ನಡೆಸುತ್ತಾರೆ. ಜತೆಗೆ ಕೇರಳದಿಂದ ಕೊಡಗಿಗೆ ಸಾಕಷ್ಟು ಮಂದಿ ಆಗಮಿಸುತ್ತಾರೆ. ಹಾಗಾಗಿ, ಕೊಡಗಿನ 3 ಗಡಿಯಲ್ಲಿ ಹೈಅಲರ್ಟ್ ಮಾಡಲಾಗಿದೆ. ವರದಿ: ಆಂಟೋನಿ ಬೇಗೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಮಧುಗಿರಿ: ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಗೊಲ್ಲ-ಕಾಡುಗೊಲ್ಲರ ಅಭಿವೃದ್ಧಿ ನಿಗಮ ಎಂದು ಮರು ಆದೇಶ ಮಾಡಿರುವುದನ್ನು ತಡೆಹಿಡಿಯಬೇಕು ಎಂದು ಕಾಡುಗೊಲ್ಲರ ಸಂಘದ ವತಿಯಿಂದ ತಹಸಿಲ್ದಾರ್ ವೈ.ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬುಡಕಟ್ಟು ನೆಲೆಯುಳ್ಳ ಕಾಡುಗೊಲ್ಲರು ಆರ್ಥಿಕವಾಗಿ ಹಿಂದುಳಿದಿರುವುದನ್ನು ಮನಗಂಡು ಕಾಡುಗೊಲ್ಲರು ಆರ್ಥಿಕವಾಗಿ ಮುಂದೆ ಬರಬೇಕು ಎಂಬ ಸದುದ್ದೇಶದಿಂದ ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪನೆಮಾಡಿ ಆದೇಶ ಹೊರಡಿಸಿದ್ದರು. ಆದರೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾ ಅವರು ಗೊಲ್ಲಾ-ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಬೇಕು ಎಂದು ಪತ್ರ ಬರೆದಿದ್ದು, ಈ ಸಂಬಂಧ ಸರ್ಕಾರದ ಆಪ್ತ ಕಾರ್ಯದರ್ಶಿಯವರು ಮರು ನಾಮಕರಣ ಮಾಡಲು ಆದೇಶ ಹೊರಡಿಸಿದ್ದಾರೆ, ಆದ್ದರಿಂದ ಕೂಡಲೇ ಈ ಆದೇಶವನ್ನು ತಡೆಹಿಡಿಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುತ್ತುರಾಜ್, ಚಿತ್ತಪ್ಪ, ಈರ ದಾಸಪ್ಪ, ಗೌಡ ಮುದ್ದಯ್ಯ ಹಾಗೂ ಪೂಜಪ್ಪ ಇದ್ದರು.…
ಚೆನ್ನೈ: ತಮಿಳುನಾಡು ಸರ್ಕಾರವು ತಮ್ಮ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟವರ ಕುಟುಂಬದವರಿಗೆ 50 ಸಾವಿರ ರೂಪಾಯಿಗಳ ಪರಿಹಾರವನ್ನ ಘೋಷಣೆ ಮಾಡಿದೆ. ಈ ಕುರಿತು ತಮಿಳುನಾಡಿನ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಡಿಸೆಂಬರ್ 3ರಂದೇ ಆದೇಶ ಹೊರಡಿಸಿದೆ. ಪರಿಹಾರ ನೀಡಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೋವಿಡ್ ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ಸಂದರ್ಭ ಹಾಗೂ ಕೋವಿಡ್ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದವರೂ ಸೇರಿದಂತೆ ಕೋವಿಡ್ ನಿಂದ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ 2021ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿರುವ ಮಾರ್ಗಸೂಚಿಗೆ ಅನುಗುಣವಾಗಿಯೇ ಪರಿಹಾರ ವಿತರಣೆ ನಡೆಯಲಿದೆ. ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದ ದಿನದಿಂದ ಅನ್ವಯವಾಗುವಂತೆ ಪರಿಹಾರ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ವರದಿ: ಆಂಟೋನಿ ಬೇಗೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ತಿಪಟೂರು: ಪ್ರಪಂಚದಲ್ಲಿಯೇ ಮೊದಲ ವಿಶ್ವವಿದ್ಯಾಲಯ ಪ್ರಾರಂಭವಾಗಿದ್ದು ನಮ್ಮ ದೇಶದಲ್ಲೇ ( ನಳಂದ ವಿಶ್ವವಿದ್ಯಾಲಯ ಕ್ರಿ.ಶ. 427) ಎಂಬ ಹೆಗ್ಗಳಿಕೆ ಎಲ್ಲಾ ಭಾರತೀಯರಿಗು ಹೆಮ್ಮೆಯ ವಿಷಯ. ಆದರೆ ಇಂದಿನ ನಮ್ಮ ದೇಶದ ಕೆಲವು ಸರ್ಕಾರಿ ಶಾಲೆಗಳ ಕಟ್ಟಡಗಳ ಅವಸ್ಥೆಯನ್ನು ನೋಡಿ ಸ್ವತಃ ಭಾರತೀಯರಿಗೆ ನಾಚಿಕೆ ಆಗುತ್ತಿದೆ. ಇದಕ್ಕೆ ಕಾರಣ ಶಾಸಕಾಂಗವೋ, ಕಾರ್ಯಾಂಗವೋ ಇಲ್ಲ ಪ್ರಜೆಗಳೋ ಎಂಬ ಒಂದಕ್ಕೊಂದು ಸರಪಳಿ ಕಾರಣಗಳು ನಮ್ಮ ಕಣ್ಣೆದುರಿಗೆ ಕಾಣುತ್ತವೆ. ತಿಪಟೂರು ತಾಲ್ಲೂಕಿನ ಕೋಟೆನಾಯಕನಹಳ್ಳಿಯ ಸರ್ಕಾರಿ “ಮಾದರಿ” ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ನೋಡಿದರೆ ಇಲ್ಲಿನ ಜನಪ್ರತಿನಿದಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಹೆಸರಲ್ಲಿ ಮಾತ್ರ ” ಮಾದರಿ ” ಎಂಬುದು ಕಾಣುತ್ತಿದೆ. ಆದರೆ, ಇಂತಹ ಅಪಾಯಕಾರಿ ಕಟ್ಟಡವನ್ನು ವಿದ್ಯಾರ್ಥಿಗಳಿಗೆ ಕೊಟ್ಟ ಸರ್ಕಾರದ ನಡೆ ಮಾದರಿಯೇ? ಇಲ್ಲಿನ ಜನಪ್ರತಿನಿಧಿಗಳು ಮಾದರಿಯೇ ಎಂದು ಇಲ್ಲಿನ ಜನರು ಪ್ರಶ್ನಿಸುವಂತಾಗಿದೆ. ಕೇವಲ 15 ವರ್ಷಗಳ ಹಿಂದೆ ಉದ್ಘಾಟನೆಯಾದ ಶಾಲಾ ಕಟ್ಟಡ…
ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸಿಮೆಂಟ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಹೀಗಾಗಿ ಮನೆ ಕಟ್ಟುವವರಿಗೆ ಇದೊಂದು ಸಂತಸದ ಸುದ್ದಿಯಾಗಿ ಪರಿಣಮಿಸಿದೆ. 50 ಕೆಜಿ ಸಿಮೆಂಟ್ ಚೀಲದ ಬೆಲೆಯಲ್ಲಿ 20-40 ರೂ. ವರೆಗೆ ಇಳಿಕೆಯಾಗಿದೆ. ಕರ್ನಾಟಕದಲ್ಲಿ 20-40 ರೂ. ನಷ್ಟು ಇಳಿಕೆಯಾಗಿದ್ದರೆ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪ್ರತಿ ಚೀಲಕ್ಕೆ 40 ರೂ. ತಮಿಳುನಾಡಿನಲ್ಲಿ 20 ರೂ.ಗಳವರೆಗೆ ಕಡಿತವಾಗಿದೆ ಎಂದು ವರದಿಯಾಗಿದೆ. ಬೆಲೆ ಇಳಿಕೆಯ ಪರಿಣಾಮ ಕರ್ನಾಟಕದಲ್ಲಿ 50 ಕೆ.ಜಿ. ಸಿಮೆಂಟ್ ಚೀಲದ ಬೆಲೆ 340 ರೂ.ನಿಂದ 380 ರೂ.ಗೆ ಇಳಿಕೆಯಾಗಿದೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 280 ರೂ.ನಿಂದ 320 ರೂ. ಇಳಿಕೆಯಾಗಿದೆ. ಕೇರಳದಲ್ಲಿ 340 ರೂ.ನಿಂದ 380 ರೂ.ಗೆ ಇಳಿಕೆಯಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬುಧವಾರ ಮಧ್ಯಾಹ್ನ ಹೆಲಿಕಾಪ್ಟರ್ ಅಪಘಾತದ ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಕೆಲವು ಗಂಟೆಗಳ ನಂತರ ದಟ್ಟ ಮಂಜು, ಹೊಗೆ ತೆರವುಗೊಂಡಿತು. ಸತ್ಯ ಹೊರಬಂದ ನಂತರ ದೇಶದ ಜನರ ಕಣ್ಣಾಲಿಗಳು ತೇವವಾದವು. ಭಾರತೀಯ ಸೇನೆಗೆ ಸೇರಿದ ಎಂಐ-17 ಹೆಲಿಕಾಪ್ಟರ್ ತಮಿಳುನಾಡಿನ ಕಣ್ಣೂರಿನ ಅರಣ್ಯದಲ್ಲಿ ಪತನಗೊಂಡಿತು. ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್. ಜನರಲ್ ಬಿಪಿನ್ ರಾವತ್ ಎಂದು ನಮಗೆಲ್ಲ ಪರಿಚಯ.. ಜನರಲ್ ರಾವತ್ ಅವರು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಚೌಹಾನ್ ರಜಪೂತ್ ಕುಟುಂಬದಲ್ಲಿ 16 ಮಾರ್ಚ್ 1958 ರಂದು ಜನಿಸಿದರು. ಜನರಲ್ ರಾವತ್ ಅವರ ತಾಯಿ ಪರ್ಮಾರ್ ರಾಜವಂಶದವರು. ಬಿಪಿನ್ ರಾವತ್ ಪೂರ್ವಜರು ಮಾಯಾಪುರ/ಹರಿದ್ದಾರ್ ನಿಂದ ಬಂದು ಗರ್ವಾಲ್ ನ ಪರ್ಸಾಯಿ ಗ್ರಾಮದಲ್ಲಿ ನೆಲೆಸಿದ್ದರು. ಅವರನ್ನು ಪರಸರ ರಾವತ್ ಎಂದು ಕರೆಯಲಾಗುತ್ತಿತ್ತು.…
ಭಾರತೀಯ ಸೇನೆಗೆ ಸೇರಿದ ಎಂಐ-17 ಹೆಲಿಕಾಪ್ಟರ್ ತಮಿಳುನಾಡಿನ ಕಣ್ಣೂರಿನ ಅರಣ್ಯದಲ್ಲಿ ಪತನಗೊಂಡಿತು. ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಸಂಜಯ್ ಗಾಂಧಿ ಇಂದಿರಾ ಗಾಂಧಿಯವರ ಕಿರಿಯ ಮಗ. ಅವರ ತಾಯಿಯಂತೆಯೇ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ನಿಜವಾದ ಅರ್ಥದಲ್ಲಿ, ಅವರನ್ನು ಇಂದಿರಾ ಗಾಂಧಿಯವರ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಜೂನ್ 1980 ರಲ್ಲಿ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ನಿಧನರಾದರು. ಸೆಪ್ಟೆಂಬರ್ 2001 ರಲ್ಲಿ, ಮೈನ್ ಪುರಿ ಜಿಲ್ಲೆಯಲ್ಲಿ ಖಾಸಗಿ ವಿಮಾನವೊಂದು ಪತನಗೊಂಡಿತು. ಈ ಅಪಘಾತದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ ಮಾಧವರಾವ್ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದರು. ತಂದೆಯ ಮರಣದ ನಂತರವೇ ಜ್ಯೋತಿರಾದಿತ್ಯ ರಾಜಕೀಯ ಪ್ರವೇಶಿಸಿದರು. ವೈ.ಎಸ್. ರಾಜಶೇಖರ ರೆಡ್ಡಿ ಎರಡು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2009ರಲ್ಲಿ, ಅವರ ಹೆಲಿಕಾಪ್ಟರ್ ರಾಜ್ಯದ ರುದ್ರಕೊಂಡ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು. ಅದರಲ್ಲಿ ಅವರು ನಿಧನರಾದರು.…
ಮೈಸೂರು: ದೇವೇಗೌಡರ ಕುಟುಂಬದವರ ಜೊತೆಗೆ ನನ್ನದು ಸೈದ್ಧಾಂತಿಕ ವಿರೋಧವಷ್ಟೆ, ಆರ್‌ಎಸ್‌ಎಸ್ ಅನ್ನು ಟೀಕಿಸುವ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಸರ್ಕಾರ ರಚಿಸಿದ್ದನ್ನು ಹಾಗೂ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಳ್ಳುವುದನ್ನು ವಿರೋಧಿಸಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಯು ಮುಸ್ಲಿಮರು ಮತ್ತು ಕ್ರೈಸ್ತರನ್ನು ಗುರಿಯಾಗಿಟ್ಟುಕೊಂಡ ಹುನ್ನಾರ. ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಆಕ್ರೋಶವಿರುವುದರಿಂದ ಹಿಂದುತ್ವದ ಪ್ರತಿಪಾದನೆ ಮೂಲಕ ಮತಗಳಿಸುವ ಪ್ರಯತ್ನಕ್ಕೆ ನಡೆದಿದೆ ಎಂದು ಅವರು ಆರೋಪಿಸಿದರು. ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದೇ ನಮ್ಮ ಸರ್ಕಾರ. ಯೋಜನೆಯ ಶೀಘ್ರ ಜಾರಿಗೆ ಒತ್ತಾಯಿಸಿ ಡಿ.ಕೆ.ಶಿವಕುಮಾರ್ ಜತೆ ನಾನೂ ಪಾದಯಾತ್ರೆಗೆ ಹೋಗುತ್ತೇನೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಹೇಳುತ್ತಾರಷ್ಟೇ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿಯ ನೆಲ್ಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗ್ಗಾವೆ ಗ್ರಾಮದ ಕಾಲೋನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಗಿಡಗಂಟೆಗಳ ಮಧ್ಯೆ ಮುಚ್ಚಿ ಹೋದ ಸ್ಥಿತಿಯಲ್ಲಿದ್ದ ಬಗ್ಗೆ ‘ನಮ್ಮ ತುಮಕೂರು.ಕಾಂ’ ವರದಿ ಪ್ರಕಟಿಸಿತ್ತು. ವರದಿ ಪ್ರಕಟಿಸಿ ಕೇವಲ ಎರಡೇ ದಿನದಲ್ಲಿ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತ್ ಅಧಿಕಾರಿಗಳು ಗಿಡಗಂಟಿಗಳಿಂದ ಅಂಬೇಡ್ಕರ್ ಭವನಕ್ಕೆ ಮುಕ್ತಿ ನೀಡಿದ್ದಾರೆ. “ಗಿಡಗಂಟಿಗಳ ಮಧ್ಯೆ ‘ಕಾಣದಂತೆ ಮಾಯವಾದ ಅಂಬೇಡ್ಕರ್ ಭವನ’” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಇಲ್ಲಿನ ಅಂಬೇಡ್ಕರ್ ಭವನದ ದುಸ್ಥಿತಿಯನ್ನು ತೆರೆದಿಟ್ಟಿದ್ದು, ಈ ವರದಿ ಪ್ರಕಟಗೊಂಡ ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ಜೆಸಿಬಿ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಿ, ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಾ.ಎನ್.ಮೂರ್ತಿ ಸ್ಥಾಪಿತ)ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಗ್ಗಾವೆ ಪುಟ್ಟಸ್ವಾಮಿ, ನ್ಯಾಯದ ಪರವಾಗಿ ಹೋರಾಟ ಮಾಡಿ, ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ ನಮ್ಮ ತುಮಕೂರು.ಕಾಂ ಮಾಧ್ಯಮಕ್ಕೆ ನಮ್ಮ ಸಮುದಾಯ ಹಾಗೂ ಸಂಘಟನೆ ಎಂದೆಂದಿಗೂ ಆಭಾರಿಯಾಗಿದ್ದೇವೆ ಎಂದು ಧನ್ಯವಾದಗಳನ್ನು ತಿಳಿಸಿದರು. ವರದಿ: ಮಂಜು…