ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸಿಮೆಂಟ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಹೀಗಾಗಿ ಮನೆ ಕಟ್ಟುವವರಿಗೆ ಇದೊಂದು ಸಂತಸದ ಸುದ್ದಿಯಾಗಿ ಪರಿಣಮಿಸಿದೆ.
50 ಕೆಜಿ ಸಿಮೆಂಟ್ ಚೀಲದ ಬೆಲೆಯಲ್ಲಿ 20-40 ರೂ. ವರೆಗೆ ಇಳಿಕೆಯಾಗಿದೆ. ಕರ್ನಾಟಕದಲ್ಲಿ 20-40 ರೂ. ನಷ್ಟು ಇಳಿಕೆಯಾಗಿದ್ದರೆ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪ್ರತಿ ಚೀಲಕ್ಕೆ 40 ರೂ. ತಮಿಳುನಾಡಿನಲ್ಲಿ 20 ರೂ.ಗಳವರೆಗೆ ಕಡಿತವಾಗಿದೆ ಎಂದು ವರದಿಯಾಗಿದೆ.
ಬೆಲೆ ಇಳಿಕೆಯ ಪರಿಣಾಮ ಕರ್ನಾಟಕದಲ್ಲಿ 50 ಕೆ.ಜಿ. ಸಿಮೆಂಟ್ ಚೀಲದ ಬೆಲೆ 340 ರೂ.ನಿಂದ 380 ರೂ.ಗೆ ಇಳಿಕೆಯಾಗಿದೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 280 ರೂ.ನಿಂದ 320 ರೂ. ಇಳಿಕೆಯಾಗಿದೆ. ಕೇರಳದಲ್ಲಿ 340 ರೂ.ನಿಂದ 380 ರೂ.ಗೆ ಇಳಿಕೆಯಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700