Author: admin

ಪಾವಗಡ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ಖಂಡಿಸಿ, ತಾಲ್ಲೂಕಿನ ವೈ.ಎನ್ ಹೊಸಕೋಟೆ ಹೋಬಳಿ ಕೇಂದ್ರದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಪಾವಗಡ ತಾಲ್ಲೂಕು ಬಿಜೆಪಿ ಅಧ್ಯಕ್ಷ ದೊಡ್ಡಹಳ್ಳಿ ಅಶೋಕ್, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ಅತ್ಯಂತ ಖಂಡನೀಯ. ಅಲ್ಲಿನ ಹಿಂದೂಗಳ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಿದರು. ಈಶಾನ್ಯ ರಾಜ್ಯಗಳನ್ನು ವಶಪಡಿಸಿಕೊಳ್ಳುವ ಬಾಂಗ್ಲಾದ ಬೆದರಿಕೆಗೆ ಉತ್ತರಿಸಿದ ಅವರು, “ಇದೇ ರೀತಿ ದೌರ್ಜನ್ಯ ಮುಂದುವರೆದರೆ ಇಡೀ ಬಾಂಗ್ಲಾದೇಶವನ್ನೇ ವಶಪಡಿಸಿಕೊಳ್ಳುವ ತಾಕತ್ತು ಮೋದಿ ಸರ್ಕಾರಕ್ಕಿದೆ” ಎಂದು ಕಿಡಿಕಾರಿದರು. ವರದಿ: ನಂದೀಶ್ ನಾಯ್ಕ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಔರಾದ್: ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ ಔರಾದ ತಾಲೂಕು ಘಟಕ ಪದಾಧಿಕಾರಿಗಳನ್ನು ನಗರದ ಕನ್ನಡ ಭವನದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿ, ಡಾ.ಚನ್ನಬಸವ ಪಟ್ಟದೇವರ ಜಯಂತಿ ಉತ್ಸವ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರು ಪಂಡರಿ ಆಡೆ, ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘವು 371(ಜೆ) ವಿಶೇಷ ಸ್ಥಾನಮಾನದ ಸಮಸ್ಯೆಗಳು ಎದುರಾದಾಗ ಈ ಭಾಗದ ಎಲ್ಲಾ ಸರ್ಕಾರಿ ನೌಕರರ ಸಮಸ್ಯೆಯನ್ನು  ಸಂಘಟನಾತ್ಮಕವಾಗಿ  ಪರಿಹಾರ ಕಂಡುಕೊಳ್ಳುವ  ಸಂಘವಾಗಿದೆ,  ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಸಂವಿಧಾನದ ವಿಶೇಷ ಸ್ಥಾನಮಾನದ ಆಶಯ ಈಡೇರಿಸಲು ದುಡಿಯುವ ಸಂಘವಾಗಿದೆ ಎಂದರು. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಬಡ್ತಿ, ವರ್ಗಾವಣೆ ಎಲ್ಲಾ ಆದೇಶಗಳು 371(ಜೆ) ವಿಶೇಷ ಸ್ಥಾನಮಾನ 2013 ರಿಂದಲೂ  ಪ್ರತ್ಯೇಕ ಆದೇಶಗಳು ಹೊರ ಬೀಳುತ್ತಿದ್ದು ಸಮಸ್ಯೆಗಳು ಎದುರಾದಾಗ ಅವುಗಳು ಪರಿಹಾರ ಆಗದೆ ಉಳಿಯುತ್ತಿವೆ, ಇಂತಹ ಸಂದರ್ಭ ಎದುರಾದಾಗ ಈ ಭಾಗದ ಸಂಘಟನೆಯ ಅವಶ್ಯಕತೆ ಇದೆ…

Read More

ತುಮಕೂರು:  ಮಾರುತಿ ನಗರದ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಬಾಂಧವ್ಯ ಮಹಿಳಾ ಇವರ ಸಹಯೋಗದೊಂದಿಗೆ ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾರುತಿ ನಗರ ನಾಗರಿಕ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ನಾರಾಯಣ ನಾಯ್ಕ ಡಿ. ಅವರು, ಪ್ರತಿವರ್ಷದಂತೆ ಈ ವರ್ಷವೂ ಕೂಡ ನಮ್ಮ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ಮಾಡಲಾಗುತ್ತಿದೆ, ದಯವಿಟ್ಟು ಮಾರುತಿ ನಗರದ ಎಲ್ಲಾ ಸಾರ್ವಜನಿಕರು ಬಂದು ಈ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಹಾಗೂ  ಆರೋಗ್ಯ ತಪಾಸಣಾ ಮಾಡಿಕೊಳ್ಳಬೇಕು ಎಂದು ಸಂಘದ ಪರವಾಗಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು. ಶ್ರೀ ವೆಂಕಟೇಶ್ವರ ಆಸ್ಪತ್ರೆ ವತಿಯಿಂದ ಮೂಳೆ ತಪಾಸಣೆ,ಡಾಕ್ಟರ್ ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣನ ತಪಾಸಣೆ, ಮಧು ಸೂಪರ್ ಸ್ಪೆಷಾಲಿಟಿ ದಂತ ಚಿಕಿತ್ಸಾ ಕೇಂದ್ರ ವತಿಯಿಂದ ದಂತ ತಪಾಸಣೆ, ಜೆ.ಪಿ. ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಮಧುಮೇಹ…

Read More

ತುಮಕೂರು: ತುಮಕೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.29 ಮತ್ತು 30 ರಂದು ಇಲ್ಲಿನ ಗಾಜಿನ ಮನೆಯಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಡಾ. ಕರೀಗೌಡ ಬೀಚನಹಳ್ಳಿ ಇವರು ಸಮ್ಮೇಳನದ ಅಧ್ಯಕ್ಷರಾಗಿದ್ದು, ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಸಮ್ಮೇಳನದಲ್ಲಿ ಮಕ್ಕಳ ಗೋಷ್ಠಿಗೂ ಅವಕಾಶ ನೀಡಲಾಗಿದೆ. ಕವಿ, ಸಾಹಿತಿಗಳು ಮತ್ತು ಓದುಗರನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದರು. ಸಮ್ಮೇಳನಕ್ಕೆ ಅಂದಾಜು 3 ರಿಂದ 4 ಸಾವಿರ ಜನ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಶಾಲಾ ಮಕ್ಕಳು, ಶಿಕ್ಷಕರೂ ಸಹ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ತಿಳಿಸಲಾಗಿದೆ ಎಂದರು. ಸಮ್ಮೇಳನದ ಅಂಗವಾಗಿ ಡಿಸೆಂಬರ್ 29ರ ಬೆಳಗ್ಗೆ 7.30 ಗಂಟೆಗೆ ಗಾಜಿನ ಮನೆ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ 8…

Read More

ತುರುವೇಕೆರೆ: ಇತಿಹಾಸ ಪ್ರಸಿದ್ಧ ತಾಲೂಕಿನ ಸಂಪಿಗೆ ಗ್ರಾಮದ ಶ್ರೀ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಡಿ.30 ಮಂಗಳವಾರ ವೈಕುಂಠ ಏಕಾದಶಿ ಮಹೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಸಂಚಾಲಕ ಹರೀಶ್ ತಿಳಿಸಿದ್ದಾರೆ. ಪಟ್ಟಣದ ಬೇಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿದ ಅವರು, ಶ್ರೀನಿವಾಸ ಸ್ವಾಮಿಯವರ ವೈಕುಂಠ ಏಕಾದಶಿ ಮಹೋತ್ಸವದಲ್ಲಿ ಈ ಬಾರಿ ವಿಶೇಷವಾಗಿ ಅಮ್ಮನವರಿಗೆ ಹಾಗೂ ಸ್ವಾಮಿಗೆ ವಜ್ರಾಂಗಿ ಅಲಂಕಾರ ನಡೆಸಲಾಗುತ್ತದೆ. ಸ್ವಾಮಿಯ ಭಕ್ತರು ತುಮಕೂರು ಜಿಲ್ಲೆ ಅಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದರು. ಅಂದು ಬೆಳಿಗ್ಗೆ 5 ಗಂಟೆಯಿಂದ ಸ್ವಾಮಿಯವರಿಗೆ ಮತ್ತು ಅಮ್ಮನವರಿಗೆ ವಿವಿಧ ಧಾರ್ಮಿಕ ಪೂಜಾದಿಗಳೂ ಆರಂಭವಾಗುತ್ತವೆ. ಸಂಜೆ 5-30 ಘಂಟೆಗೆ ತುಮಕೂರಿನ ಸಾಯಿರಾಮನ್ ನೃತ್ಯ ಕೇಂದ್ರದ ವತಿಯಿಂದ ವೆಂಕಟೇಶ್ವರ ಕಲ್ಯಾಣ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಬ್ಯಾಂಕ್ ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾಗರಾಜು, ರಾಜೇಶ್, ಭಾಸ್ಕರ್, ಬಾಲಾಜಿ, ಯಶವಂತ್,…

Read More

ಕುಣಿಗಲ್: ಪಟ್ಟಣದ ಕೋಟೆ ತುಡಿಕೆ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಡಿ.30 ರಂದು 20 ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವ ಅಂಗವಾಗಿ ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸೇವಾ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ ದೇವಾಲಯದ ಬಳಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾರಾಯಣ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸ್ (ವಾಸು), ಖಜಾಂಚಿ ಕೆ.ಎನ್.ನಾಗರಾಜು (ನಾಗಣ್ಣ) ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿ ಮಹೋತ್ಸವ ಅಂಗವಾಗಿ ಡಿ.29 ರಂದು ಸಂಜೆ 4 ಗಂಟೆಗೆ ವಿವಿಧ ಧಾರ್ಮಿಕ ವಿಧಿವಿಧಾನ ಹಮ್ಮಿಕೊಳ್ಳಲಾಗಿದೆ. ನಂತರ ಡಿ. 30 ರಂದು ಬೆಳಗ್ಗೆ 5 ಗಂಟೆಗೆ ಗೋ ಪೂಜೆಯಿಂದ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಪ್ತದ್ವಾರದ ಮೂಲಕ ಸ್ವಾಮಿಯ ದರ್ಶನ ಹಾಗೂ ನಿರಂತರ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ತಿರುಪ್ಪಾವಡೆ ಸೇವೆ: ಡಿ.31 ರಂದು…

Read More

ತುರುವೇಕೆರೆ: ತಾಲೂಕಿನ ಎಲ್ಲಾ ಜನಾಂಗಗಳ ಮುಖಂಡರುಗಳು ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ತಾಲೂಕು ಕೇಂದ್ರದಲ್ಲಿ ಸಂವಿಧಾನ ಶಿಲ್ಪಿಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಒಮ್ಮತದ ತೀರ್ಮಾನ ಕೈಗೊಂಡರು. ರಾಜ್ಯದ ವಿವಿಧ ತಾಲೂಕು ಕೇಂದ್ರಗಳಲ್ಲಿ ಇರುವಂತೆ ತುರುವೇಕೆರೆ ತಾಲೂಕು ಕೇಂದ್ರ ಭಾಗದಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಸ್ಥಾಪನೆಗೆ ಹಾಗೂ ಅದಕ್ಕೆ ಸೂಕ್ತ ಸ್ಥಳ ಗುರುತಿಸಲು ಸಭೆ ಕರೆಯಲಾಗಿತ್ತು. ಭೀಮೋತ್ಸವ ಆಚರಣಾ ಸಮಿತಿಯ ನೆಮ್ಮದಿ ಗ್ರಾಮದ ಸಿ.ಎಸ್.ಮೂರ್ತಿರವರ ಸಮ್ಮಖದಲ್ಲಿ ನಡೆದ ಸಭೆಯಲ್ಲಿ ಹಲವಾರು ಸಮಾಜದ ಮುಖಂಡರು, ಹೋರಾಟಗಾರರು, ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪುತ್ಥಳಿ ಸ್ಥಾಪನೆಗೆ ಸಮಿತಿ ರಚನೆ: ಬಾಬಾ ಸಾಹೇಬರು ಕೇವಲ ಒಂದು ಜಾತಿಗೆ ಸೀಮಿತವಾಗಿದ್ದವರಲ್ಲ. ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ನಾವು ಜೀವಿಸುವ ಹಕ್ಕನ್ನು ಪಡೆದಿದ್ದೇವೆ. ಅವರ ಪುತ್ಥಳಿ ಸ್ಥಾಪನೆಯಂತಹ ಮಹತ್ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಲು ಮತ್ತು ಇಂತಹ ಕಾರ್ಯಕ್ಕೆ ರಾಜಕೀಯ ಮುಖಂಡರುಗಳ ಸಹಕಾರ ಪಡೆದುಕೊಳ್ಳಲು ಪಕ್ಷ ಭೇದ ಮರೆತು…

Read More

ತುಮಕೂರು: ಅತಿ ವೇಗವಾಗಿ ಬಂದಿರುವ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಬೈಪಾಸ್ ರಸ್ತೆಯ ಸರ್ವೀಸ್ ರಸ್ತೆಗೆ ನುಗ್ಗಿ ರಸ್ತೆ ಬದಿಯಲ್ಲಿದ್ದ3 ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಗಂಗಸಂದ್ರ ಸಿಗ್ನಲ್‌ ನಲ್ಲಿ ನಡೆದಿದೆ. ಗುಬ್ಬಿ ಗೇಟ್ ಕಡೆಯಿಂದ ಬೈಪಾಸ್ ರಸ್ತೆಯಲ್ಲಿ ಅತಿ ವೇಗವಾಗಿ ಬಂದಿರುವ ಪೋರ್ಸ್ ಒನ್ ಕಾರು ನಿಂತಿದ್ದ ಮತ್ತೊಂದು ಕಾರಿಗೆ ಅಪ್ಪಳಿಸಿದೆ. ನಂತರ ವೇಗವಾಗಿಯೇ ಸರ್ವೀಸ್ ರಸ್ತೆಗೆ ನುಗ್ಗಿ ರಸ್ತೆಬದಿಯಲ್ಲಿದ್ದ ಮೂರು ವಿದ್ಯುತ್ ಕಂಬಗಳಿಗೂ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್‌ ಕಂಬಗಳು ಮುರಿದು ಮುದ್ದಿವೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ರಸ್ತೆಯಲ್ಲಿ ಯಾರೂ ಓಡಾಡದಿದ್ದರಿಂದ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ವಿದ್ಯುತ್‌ ಕಂಬಗಳಿಗೆ ಗುದ್ದಿದ ಕಾರಿನಲ್ಲಿ4 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ ಚಾಲಕ ಮತ್ತಿಬ್ಬರಿಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಈ ಕಾರು ಅಪ್ಪಳಿಸಿದ ಮತ್ತೊಂದು ಕಾರಿನಲ್ಲಿದ್ದವರು ಸಹ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ವೇಳೆ ಗುಬ್ಬಿಗೇಟ್ ಕಡೆಯಿಂದ ಕಾರು ವೇಗವಾಗಿ…

Read More

ಸರಗೂರು:  ಸರಕಾರಿ ಭೂಮಿಗೆ ವಾರಸುದಾರರಾಗಿರುವ ಬಡ ರೈತರಿಗೆ ಸರಕಾರ ಹಕ್ಕು ನೀಡುವ ಮೂಲಕ ಅವರನ್ನು ಬದುಕಲು ಬಿಡಬೇಕು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಕ್ಷೇತ್ರ ಮಟ್ಟದ ಉಪಾಧ್ಯಕ್ಷ ಬಸವರಾಜಪ್ಪ  ಹೇಳಿದರು. ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ಮನುಗನಹಳ್ಳಿ ಗ್ರಾಮದ ಬಸವರಾಜಪ್ಪ ಎಂಬುವರ ಜಮೀನಿನಲ್ಲಿ  ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಶನಿವಾರ ದಂದು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಸುಮಾರು ಏಳು ವರ್ಷಗಳ ಹಿಂದೆಯೇ ಬಗರ್‌ ಹುಕುಂ ಸಮಿತಿ ರಚಿಸಲಾಗಿತ್ತು. ಇದರಲ್ಲಿ ಮನುಗನಹಳ್ಳಿ ಲಂಕೆ ಹುನಗಹಳ್ಳಿ ಭಾಗದ 103 ಫಲಾನುಭವಿಗಳ ಪೈಕಿ 50 ಫಲಾನುಭವಿಗಳಿಗೆ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ. ಆದರೂ ಏಳು ವರ್ಷಗಳಿಂದ ಇನ್ನೊಂದು ಕಮಿಟಿ ರಚಿಸಿ, ಪಹಣಿ ಕೊಡಿಸುವ ಕೆಲಸ ಮಾಡದೆ ಮೀನಮೇಷ ಎಣಿಸಲಾಗುತ್ತಿದೆ ಎಂದು ದೂರಿದರು. ಅರ್ಹರಿಗೆ ಅನ್ಯಾಯವಾಗದಿರಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಂತಹ ರೈತರ ಬಗ್ಗೆ ಗಮನಹರಿಸದೆ ತಮ್ಮ ಪಾಡಿಗೆ ಇದ್ದಾರೆ. ಈಗ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಡಿ–ಫಾರೆಸ್ಟ್ ಎಂಬ ಪಟ್ಟ ಕಟ್ಟಿ ರೈತರಿಗೆ…

Read More

ಸರಗೂರು:  ಬಡ ಕುಟುಂಬಗಳ ಶಿಕ್ಷಣ, ಆರ್ಥಿಕಾಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದು ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಭಾಸ್ಕರ್  ವಿ. ತಿಳಿಸಿದರು. ತಾಲೂಕಿನ ಸಾಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರೆ ಹೊಸ ಕಾಲೋನಿಯಲ್ಲಿರುವ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹಂಚಿಪುರ ಶಾಲೆಯ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾತನಾಡಿದರು. ಜ್ಞಾನ ಸಾಕ್ಷ ರತಾ, ಜ್ಞಾನ ದೀಪ ಇಂತಹ ಯೋಜನೆಗಳ ಮೂಲಕ ಶಿಕ್ಷ ಣಕ್ಕೆ ಒತ್ತು ನೀಡಲಾಗಿದೆ. ಸ್ವಸಹಾಯ ಸಂಘದ ಸದಸ್ಯರಿದ್ದು ಅವರಲ್ಲಿ ಬಹಳಷ್ಟು ಮಂದಿಯ ಮಕ್ಕಳು ವೃತ್ತಿ ಶಿಕ್ಷ ಣ ಪಡೆಯುವುದಕ್ಕೆ ನೆರವು ಪಡೆಯುತ್ತಿದ್ದಾರೆ. ಇದರಿಂದ ಬಡ ಮಕ್ಕಳು ಸಹ ಉನ್ನತ ಶಿಕ್ಷ ಣ ಪಡೆದು ಒಳ್ಳೆಯ ಉದ್ಯೋಗ, ಸ್ಥಾನಮಾನ ಪಡೆಯುವುದಕ್ಕೆ ಸಾಧ್ಯವಾಗಲಿ ಎಂಬುದು ಯೋಜನೆಯ ಆಶಯವಾಗಿದೆ ಎಂದರು. ಗ್ರಾಮಾಭಿವೃದ್ಧಿ ಯೋಜನೆ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕೃಷಿ, ಮೂಲಸೌಲಭ್ಯ ಅಭಿವೃದ್ಧಿ ದೃಷ್ಟಿಯಲ್ಲಿ ಇಟ್ಟುಕೊಂಡು ಸ್ವ ಸಹಾಯ ಸಂಘಗಳು…

Read More