Author: admin

ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಭಕ್ತರು ಸತತ 9ನೇ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅವರ ಈ ಭಕ್ತಿ ಮಾರ್ಗಕ್ಕೆ ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್ ಕೆ. ಹಾರ್ದಿಕ ಶುಭ ಹಾರೈಸಿದರು. ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಯೋಜನಾಧಿಕಾರಿಗಳು, “ಹಿಂದಿನ ಕಾಲದಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನಕ್ಕೆ ತೆರಳುವುದೆಂದರೆ ಅದೊಂದು ಪವಿತ್ರ ಕಾರ್ಯವಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ ಇಂದಿನ ವೇಗದ ಬದುಕಿನಲ್ಲಿ ಭಕ್ತಿ ಮತ್ತು ಸಂಪ್ರದಾಯಗಳು ಮಾಸುತ್ತಿವೆ. ಇಂತಹ ಸಮಯದಲ್ಲಿ ಇತಿಹಾಸವನ್ನು ಮರುಕಳಿಸುವಂತೆ ಮತ್ತಿಹಳ್ಳಿ ಗ್ರಾಮಸ್ಥರು ಸುಮಾರು 165 ಕಿಲೋ ಮೀಟರ್ ದೂರವನ್ನು ಕೇವಲ ಮೂರು-ನಾಲ್ಕು ದಿನಗಳಲ್ಲಿ ಕ್ರಮಿಸಿ ಭಗವಂತನ ಆಶೀರ್ವಾದ ಪಡೆಯಲು ಹೊರಟಿರುವುದು ಶ್ಲಾಘನೀಯ,” ಎಂದರು. ಪಾದಯಾತ್ರಿಗಳು  ಸರಿಸುಮಾರು 165 ಕಿ.ಮೀ ಕಾಲ್ನಡಿಗೆಯ ಪ್ರಯಾಣ ಮಾಡಲಿದ್ದಾರೆ. ಈ ಪಾದಯಾತ್ರೆ ತಾಲ್ಲೂಕು ಮತ್ತು ರಾಜ್ಯದ ಜನತೆಗೆ ಮಾದರಿಯಾಗಿದೆ ಎಂದು ಉದಯ್ ಕೆ. ಹರ್ಷ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಮತ್ತಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಹರೀಶ್ ಕುಮಾರ್ ಸೇರಿದಂತೆ ಗ್ರಾಮದ…

Read More

ಸರಗೂರು:   ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ದಂತ(ಹಲ್ಲು)ವನ್ನು ಸ್ವಚ್ಛಗೊಳಿಸಬೇಕು, ದಿನಕ್ಕೆರಡು ಬಾರಿ ದಂತವನ್ನು  ಸ್ವಚ್ಛಗೊಳಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ  ತಿಳಿಸಿದರು. ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ‌ ಕಚೇರಿ ಹೆಚ್.ಡಿ.ಕೋಟೆ  ಮತ್ತು ಸಾರ್ವಜನಿಕ ಆಸ್ಪತ್ರೆ ಹೆಚ್.ಡಿ.ಕೋಟೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಡಗಲಪುರ  ಸಹಯೋಗದೊಂದಿಗೆ ,ಉಚಿತ ದಂತ ತಪಾಸಣೆ  ಮತ್ತು ಚಿಕಿತ್ಸೆ ಶಿಬಿರ ಹಾಗೂ  ಬಾಯಿ ಆರೋಗ್ಯ  ಕಾರ್ಯ ಕ್ರಮವನ್ನು  ಗುರುವಾರ ದಂದು ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಶಿಬಿರ ವನ್ನು ನಿಮಗಾಗಿ ಆಯೋಜನೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ವಿಶ್ವಬಾಯಿ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ಘೋಷವಾಕ್ಯ ಬಿಡುಗಡೆ ಮಾಡುತ್ತದೆ.  (ಸಂತೋಷದ ಬಾಯಿ, ಸಂತೋಷದ ದೇಹ) ಇದರ ಅರ್ಥ ಏನೆಂದರೆಬಾಯಿ ಆರೋಗ್ಯದಿಂದ ಇದ್ದರೆ ಸಂತೋಷ ವಾಗಿರುತ್ತದೆ ,ಬಾಯಿ ಸಂತೋಷ ವಾಗಿದ್ದರೆ, ದೇಹವು ಸಹ ಸಂತೋಷವಾಗಿರುತ್ತದೆ ,ಆದುದರಿಂದ ನಾವೆಲ್ಲರೂ ಬಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಬಾಯಿ ಆರೋಗ್ಯ…

Read More

ವರದಿ: ಹಾದನೂರು ಚಂದ್ರ ಎಚ್.ಡಿ.ಕೋಟೆ: ಸಾಮಾಜಿಕ ಜಾಲತಾಣ, ಎಲೆಕ್ಟ್ರಿಕ್ ಮಾಧ್ಯಮಗಳ ನಡುವೆಯೂ ಇಂದಿಗೂ ಮುದ್ರಣ ಮಾಧ್ಯಮಗಳು ಜನರ ನಂಬಿಕೆ ಮತ್ತು ವಿಶ್ವಾಸರ್ಹತೆಯನ್ನು ಉಳಿಸಿಕೊಂಡಿವೆ ಎಂದು ಕನ್ನಡಪ್ರಭ ದಿನ ಪತ್ರಿಕೆ ಸ್ಥಾನಿಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ತಿಳಿಸಿದರು. ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ವನ್ಯಜೀವಿ ವಲಯದ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಆಯೋಜಿಸಿದ್ದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಪತ್ರಕರ್ತರ ಸಂಘದ ಹೊರ ತಂದಿರುವ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತಿವಹಿಸಿ ಮಾತನಾಡಿದ ಅವರು, ಮಾಧ್ಯಮಗಳು ಜನರು ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡಬೇಕು. ಆ ಮೂಲಕ ಜನರ ನಂಬಿಕೆ ಸಂಪಾದಿಸಬೇಕು. ಸಮಸಮಾಜದ ನಿರ್ಮಾಣದ ಕನಸ್ಸಿಗೆ ಮಾಧ್ಯಮಗಳು ಶ್ರಮಿಸಬೇಕು ಎಂದರು. ಈ ತಾಲೂಕಿನಲ್ಲಿ ಪತ್ರಕರ್ತರು ಮತ್ತು ಶಾಸಕ ಸಂಬಂಧ ಉತ್ತಮವಾಗಿದೆ. ಅನಿಲ್ ಚಿಕ್ಕಮಾದು ಅವರು, ಪತ್ರಕರ್ತರಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರ ತಂದೆ ಕೂಡ ಪತ್ರಕರ್ತರ ಪರ, ಸಮಾಜ ಪರವಾಗಿದ್ದರು. ಪತ್ರಕರ್ತರಲ್ಲಿ ನೈತಿಕತೆ ಇರಬೇಕು. ಯಾವುದೇ ಆಸೆಗಳಿಗೆ ಬಲಿಯಾಗದೆ, ಸಮಾಜಮುಖಿಯಾಗಿ ಕೆಲಸ ಮಾಡಿದಾಗ…

Read More

ಕೊರಟಗೆರೆ : ಇತ್ತೀಚಿಗೆ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಚುನಾವಣೆಯಲ್ಲಿ ಆಯ್ಕೆಯಾದ ತಾಲೂಕು ಸಂಘದ ಪದಾಧಿಕಾರಿಗಳಿಗೆ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಭಿನಂದನೆ ತಿಳಿಸಿದರು. ತುಮಕೂರಿನ ಪ್ರವಾಸಿ ಮಂದಿರದಲ್ಲಿ ಕೊರಟಗೆರೆ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು, ಸೇರಿದಂತೆ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನ ಭೇಟಿ ಮಾಡಿ ಸಚಿವರಿಗೆ ಪದಾಧಿಕಾರಿಗಳಿಂದ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ನೂತನವಾಗಿ ಆಯ್ಕೆಯಾದ ಪತ್ರಕರ್ತ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನ ತಿಳಿಸಿದರು. ಇದೇ ವೇಳೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಶ್ವಥ್‌ ನಾರಾಯಣ್, ಮಹೇಶ್, ಟೈಗರ್‌ ನಾಗ್, ರಘುವೀರ್, ಕೆ.ಎಲ್.ಎಂ ಮಂಜು, ನಿಕಟ ಪೂರ್ವ ಅಧ್ಯಕ್ಷ ಹಾಗೂ ಜಿಲ್ಲಾ ನಿರ್ದೇಶಕ ಕೆ.ವಿ.ಪುರುಷೋತ್ತಮ್, ರಂಗಧಾಮಯ್ಯ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ…

Read More

ತುಮಕೂರು: ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ತುಷ್ಟೀಕರಣವನ್ನೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ ಎಂದು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಟೀಕಿಸಿದರು. ತುಮಕೂರಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇವರಾಜ ಅರಸು ಅವರು ರಾಜ್ಯದ ಶ್ರೇಷ್ಠ ಮುತ್ಸದ್ದಿಗಳಲ್ಲಿ ಒಬ್ಬರು. ಸಿದ್ದರಾಮಯ್ಯ ಅವರು ಅರಸು ಅವರ 2,792 ದಿನಗಳ ಆಡಳಿತದ ದಾಖಲೆಯನ್ನು ಮುರಿದು ಹೆಚ್ಚು ದಿನ ಅಧಿಕಾರ ನಡೆಸಿದ ದಾಖಲೆ ನಿರ್ಮಿಸಿರಬಹುದು. ಆದರೆ, “ಅಧಿಕಾರದಲ್ಲಿ ಎಷ್ಟು ದಿನ ಇದ್ದರು ಎನ್ನುವುದು ಮುಖ್ಯವಲ್ಲ, ಆ ಅವಧಿಯಲ್ಲಿ ಜನರಿಗಾಗಿ ಏನು ಮಾಡಿದರು ಎನ್ನುವುದು ಮುಖ್ಯ” ಎಂದು ಶಾಸಕರು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಹಿಂದೂ ಮತ್ತು ಮುಸ್ಲಿಮರ ನಡುವೆ ಒಡಕು ಮೂಡಿಸಿ ‘ಒಡೆದು ಆಳುವ ರಾಜಕಾರಣ’ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯ ಇಂದು ಕೋಮು ಸಂಘರ್ಷದ ಬೇಗೆಯಲ್ಲಿ ಬೇಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಮಕೃಷ್ಣ ಹೆಗಡೆ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಆಡಳಿತವನ್ನು ನೆನಪಿಸಿಕೊಂಡ ಸುರೇಶ್…

Read More

ಪಾವಗಡ: ತಾಲ್ಲೂಕಿನ ಅರಸೀಕೆರೆಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಹೃತಿಕ್ ಎಚ್. ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಧಾರವಾಡದ ಡಯಟ್ (DIET) ವತಿಯಿಂದ ರಾಯಾಪುರದ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ನಡೆದ ವೈಯಕ್ತಿಕ ವಿಭಾಗದ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಹೃತಿಕ್ ಪಾಲ್ಗೊಂಡಿದ್ದನು. ಈತ ಪ್ರದರ್ಶಿಸಿದ ‘ಶಾಲೆ ಮತ್ತು ಆಸ್ಪತ್ರೆ ಸೂಚನಾ ವ್ಯವಸ್ಥೆ’ ಹಾಗೂ ‘ಅಗ್ನಿನಂದಕ’ (Fire Extinguisher) ಮಾದರಿಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ವಿಜೇತನಾಗಿ ಹೊರಹೊಮ್ಮಿದ್ದಾನೆ. ಮುಂದಿನ ಹಂತ: ರಾಜ್ಯ ಮಟ್ಟದಲ್ಲಿ ಜಯಗಳಿಸಿರುವ ಹೃತಿಕ್, ಇನ್ನುಳಿದ ವಿಜೇತರೊಂದಿಗೆ ಜನೆವರಿ 19 ರಿಂದ 23 ರವರೆಗೆ ತೆಲಂಗಾಣದ ಹೈದರಾಬಾದ್‌ ನಲ್ಲಿ ನಡೆಯಲಿರುವ ದಕ್ಷಿಣ ಭಾರತ ವಿಭಾಗೀಯ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾನೆ. ಹೃತಿಕನ ಈ ಸಾಧನೆಗೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರೇಣುಕ ರಾಜ್ ಜಿ.ಹೆಚ್., ಎಸ್‌ಡಿಎಂಸಿ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷೆ ಕವಿತಮ್ಮ ಹಾಗೂ…

Read More

ತುಮಕೂರು: ಜಿಲ್ಲೆಯ ಛಲವಾದಿ ಮಹಾಸಭಾ (ಟಿ.ಸಿ.ಎಂ.ಎಸ್) ವತಿಯಿಂದ ಹಮ್ಮಿಕೊಳ್ಳಲಾಗಿರುವ 25ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಂಗವಾಗಿ, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆಗಳು ಮತ್ತು ಮಾನದಂಡಗಳು: ಶೈಕ್ಷಣಿಕ ವರ್ಷ: 2024-25ನೇ ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು. ಕನಿಷ್ಠ ಅಂಕಗಳು: ಎಸ್.ಎಸ್.ಎಲ್.ಸಿ (SSLC), ಪಿಯುಸಿ (PUC), ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಶೇ. 75 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ವಿಶೇಷ ಸಾಧನೆ: ಕಳೆದ ಶೈಕ್ಷಣಿಕ ಅವಧಿಯಲ್ಲಿ ಪಿ.ಹೆಚ್‌ಡಿ (Ph.D) ಪದವಿ ಪಡೆದ ಸಮುದಾಯದ ಸದಸ್ಯರಿಗೂ ಸಹ ಗೌರವ ಸಲ್ಲಿಸಲಾಗುವುದು. ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ (Marks Card) ಮತ್ತು ಜಾತಿ ಪ್ರಮಾಣ ಪತ್ರದ (Caste Certificate) ಪ್ರತಿಯೊಂದಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ತಲುಪಿಸಬೇಕಾದ ವಿಳಾಸ: ಅಧ್ಯಕ್ಷರು, ಶಿರಡಿ ಸಾಯಿಬಾಬಾ ನಗರ, ಬೆಳಗುಂಬ ರಸ್ತೆ, ತುಮಕೂರು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:…

Read More

ತುಮಕೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಇಕ್ಬಾಲ್ ಮಜೀದ್ ಫೌಂಡೇಶನ್ ಹಾಗೂ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಸಿಐಟಿಯು ಜಿಲ್ಲಾ ಶಾಖೆ, ಜಶನ್ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್ ಸಹಯೋಗದಲ್ಲಿ ಈ ತಿಂಗಳ 9ರಂದು ನಗರದ ಮೆಳೇಕೋಟೆ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್‌ ನಲ್ಲಿ ವಿಕಲಚೇತನರ ಸಮಾವೇಶ ಏರ್ಪಾಡಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಇಕ್ಬಾಲ್ ಮಜೀದ್ ಫೌಂಡೇಶನ್‌ ನ ಇಕ್ಬಾಲ್ ಅಹಮ್ಮದ್ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಜಿಲ್ಲೆಯಲ್ಲಿ ಸುಮಾರು 49 ಸಾವಿರ ವಿಕಲಚೇತನರಿದ್ದಾರೆ ಇವರಲ್ಲಿ ಬಹಳಷ್ಟು ಮಂದಿ ಕ್ರೀಡಾಪಟುಗಳಿದ್ದಾರೆ. ಇಂತಹವರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟಗಳಿಗೆ ಹೋಗಿಬರಲು ಸರ್ಕಾರ ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ವಿಕಲಚೇತನ ಕಲಾವಿದರು, ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ, ಅವಕಾಶ ದೊರಕಿಸಿ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿ ಅವರಲ್ಲಿ ಆತ್ಮ ವಿಶ್ವಾಸ ಬೆಳೆಸಬೇಕೆನ್ನುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು. 9ರಂದು ಬೆಳಿಗ್ಗೆ 10.30ಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಕಲಚೇತನರ…

Read More

ಒಮ್ಮೆ ಒಬ್ಬ ರಾಜ ಕುದುರೆ ಏರಿ ವನವಿಹಾರ ಮಾಡುತ್ತಾ, ಸೈನಿಕರಿರುವ ತನ್ನ ಬಿಡಾರದಿಂದ ಕಾಡಿನ ಸೌಂದರ್ಯ ಸವಿಯಲು ಬಹಳ ದೂರ ಒಬ್ಬನೇ ಬಂದು ಬಿಡುತ್ತಾನೆ. ಇತ್ತ ಬಿಡಾರಗಳಲ್ಲಿ ವಿಹರಿಸುತ್ತಿದ್ದ ಸೈನಿಕರು ರಾಜನಿಲ್ಲದಿರುವುದನ್ನು ಕಂಡು ರಾಜನನ್ನು ಹುಡುಕುತ್ತಾ ಹೊರಡುತ್ತಾರೆ. ಇತ್ತ ರಾಜ ಕಾಡಿನ ಒಂದು ಪ್ರದೇಶಕ್ಕೆ ಬಂದು ಒಂದು ಮರದ ಕೆಳಗೆ ಕುದುರೆ ನಿಲ್ಲಿಸುತ್ತಾನೆ. ಇದ್ದಕ್ಕಿದ್ದಂತೆ ಮರೆಯಲ್ಲಿದ್ದ ಅಡಗಿದ್ದ ಶತ್ರುಗಳು ಕುದುರೆ ಏರಿಕೊಂಡು ಬಂದು ರಾಜನನ್ನು ಮುತ್ತಿಗೆ ಹಾಕುತ್ತಾರೆ, ಆದರೆ ರಾಜ ಖತ್ತಿಯನ್ನು ಬಿಡಾರದಲ್ಲೇ ಬಿಟ್ಟು ಬಂದಿರುತ್ತಾನೆ, ಖತ್ತಿ ಹಿಡಿದ ಶತ್ರುಗಳು ಸುತ್ತಲೂ  ರಾಜನನ್ನು ಸುತ್ತುವರಿಯುತ್ತಾರೆ, ಈಗೇನು ಮಾಡುವುದು ಅಂದುಕೊಳ್ಳುವಾಗ ಅದೇ ಮರದ ಮೇಲೆ ಕಟ್ಟಿಗೆ ಕಡಿಯಲೆಂದು ಖತ್ತಿ ಹಿಡಿದು ಹತ್ತಿದ್ದ ಜವರನೆಂಬ ವ್ಯಕ್ತಿ ಮಹಾರಾಜರೇ ತೆಗೆದುಕೊಳ್ಳಿ ಎಂದು ತನ್ನ ಕೈಲಿದ್ದ ಖತ್ತಿಯನ್ನು ರಾಜನ ಎದುರು ಬೀಳುವಂತೆ ಕೆಳಗೆ ಎಸೆಯುತ್ತಾನೆ. ರಾಜ ಆ ಖತ್ತಿಯನ್ನು ತೆಗೆದುಕೊಂಡು ಶತ್ರುಗಳನ್ನು ಸದೆಬಡಿಯುತ್ತಾನೆ, ಉಳಿದ ಶತ್ರುಗಳು ಅಲ್ಲಿಂದ ಪಲಾಯನಗೈಯುತ್ತಾರೆ. ನಂತರ, ಜವರನು ಮರದಿಂದ ಕೆಳಗೆ ಇಳಿದು ಬರುತ್ತಾನೆ.…

Read More

ತುಮಕೂರು: ಜಿಲ್ಲಾ ಬಂಜಾರ (ಲಂಬಾಣಿ) ಸೇವಾಲಾಲ್ ಸೇವಾ ಸಂಘ (ರಿ) ಹಾಗೂ ತುಮಕೂರು ಶ್ರೀ ಸೇವಾಲಾಲ್ ಪತ್ತಿನ ಸಹಕಾರ ಸಂಘ (ರಿ)ಗಳ ನೂತನ ವರ್ಷದ ಕ್ಯಾಲೆಂಡರ್ ಅನ್ನು ನಗರದ ಶಾಸಕರಾದ ಜ್ಯೋತಿ ಗಣೇಶ್ ಅವರು ಬುಧವಾರ ಗಾಂಧಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಬಿಡುಗಡೆಗೊಳಿಸಿದರು. ಕ್ಯಾಲೆಂಡರ್ ಬಿಡುಗಡೆ ಸಂದರ್ಭದಲ್ಲಿ ಸಂಘದ ಚಟುವಟಿಕೆಗಳು ಹಾಗೂ ಸಮಾಜದ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸಮಾಜದ ಏಕತೆ ಹಾಗೂ ಪ್ರಗತಿಗೆ ಇಂತಹ ಸಂಘಟನೆಗಳ ಪಾತ್ರ ಮಹತ್ವದ್ದೆಂದು ಶಾಸಕರು ಈ ವೇಳೆ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ನಾರಾಯಣ್ ನಾಯ್ಕ ಡಿ., ಪ್ರಧಾನ ಕಾರ್ಯದರ್ಶಿ ಶಂಕರ್ ಬಿ. ಉಪಾಧ್ಯಕ್ಷರಾದ ಕುಬೇಂದ್ರ ನಾಯ್ಕ, ಸಂಘಟನಾ ಕಾರ್ಯದರ್ಶಿಗಳಾದ ಸ್ವಾಮಿ ಲಾಲ್, ಶ್ರೀ ಸೇವಾಲಾಲ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಬೇಂದ್ರ ನಾಯ್ಕ, ಉಪಾಧ್ಯಕ್ಷರಾದ ಶಂಕರ್ ಆರ್. ನಾಯ್ಕ, ಹಿರಿಯ ಮುಖಂಡ ದೇನಾ ನಾಯ್ಕ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಜನಾಂಗದ ಮುಖಂಡರು ಹಾಜರಿದ್ದು, ಕಾರ್ಯಕ್ರಮಕ್ಕೆ ಶೋಭೆ…

Read More