Author: admin

ಬೆಂಗಳೂರು: ಇಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಬೃಹತ್ ನಾ-ನಾಯಕಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯುವ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ಈ ಸಮಾವೇಶದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮಹಿಳಾ ಕಲ್ಯಾಣಕ್ಕಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಒಂದು ಲಕ್ಷ ಮಹಿಳಾ ಕಾರ್ಯಕರ್ತರನ್ನು ಕಾರ್ಯಕ್ರಮದಲ್ಲಿ ಸೇರಿಸುವ ಯೋಜನೆಯನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಇದ್ಯಾಕೋ ಅತೀಯಾಯ್ತು ಅಂತ ಅನ್ನಿಸುವಷ್ಟರ ಮಟ್ಟಿಗೆ ಬಟ್ಟೆ ಇಲ್ಲದೇ ಓಡಾಡುವ ಉರ್ಫಿ ಜಾವೇದ್  ಇದೀಗ ತಮ್ಮ ಹೊಸ ಪೋಸ್ಟ್ ನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎರಡು ರೆಕ್ಕೆಯಂತಹ ಬಟ್ಟೆಯಿಂದ ಎದೆ ಭಾಗವನ್ನು ಅರೆ ಬರೆಯಾಗಿ ಮುಚ್ಚಿಕೊಂಡಿರುವ ಅವರು, ಮತ್ತೊಮ್ಮೆ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ. ಮಹಿಳೆಗೆ ಸ್ವಾತಂತ್ರ್ಯದ ರೆಕ್ಕೆಗಳಿವೆ. ಅವಳು ಮಾತ್ರ ಅವುಗಳನ್ನು ಹರಡಬೇಕು, ಅವಳ ಕನಸುಗಳನ್ನು ನನಸಾಗಿಸಬೇಕು  ಎಂದು ನೆಟ್ಟಿಗರೊಬ್ಬರು ಉರ್ಫಿಯ ಪರವಾಗಿ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಉರ್ಫಿ ಮಹಿಳೆಯರ ಗೌರವ ಕುಗ್ಗಿಸುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಉರ್ಫಿಯ ವಿರುದ್ಧ ಕೇಸು ದಾಖಲಿಸಿದ್ದರು. ಇದಾಗಿ ಎರಡು ದಿನಗಳ ಬಳಿಕ ಉರ್ಫಿ ಇಂತಹದ್ದೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಅಂಚೆ ಇಲಾಖೆ ಪೋಸ್ಟ್‌ಮ್ಯಾನ್, ಮೈಲ್ ​ಗಾರ್ಡ್ ಮತ್ತು ಇತರ ಹಲವು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಿದೆ. ಅಂಚೆ ಇಲಾಖೆಯು 2023 ರಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಿದೆ. ಹುದ್ದೆಗಳವಿವರಗಳು: ಪೋಸ್ಟ್​ಮ್ಯಾನ್- 59,099 ಹುದ್ದೆಗಳು, ಮೈಲ್​ಗಾರ್ಡ್​- 1,445 ಹುದ್ದೆಗಳು, ಮಲ್ಟಿ ಟಾಸ್ಕಿಂಗ್ (MTS)- 37,539 ಹುದ್ದೆಗಳು, ಒಟ್ಟು ಹುದ್ದೆಗಳು- 98,083 ಹುದ್ದೆಗಳು.  ಕರ್ನಾಟಕದಲ್ಲಿ 3,887 ಪೋಸ್ಟ್​ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹಾಗೆಯೇ 90 ಮೈಲ್ ​ಗಾರ್ಡ್ ಹಾಗೂ 1754 ಮಲ್ಟಿ ಟಾಸ್ಕಿಂಗ್ (MTS) ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ ಸೈಟ್ indiapost.gov.in ಗೆ ಭೇಟಿ ನೀಡಬಹುದು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ರಾಯಚೂರು: ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ತಾಯಿ–ಮಗ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಬಳಿಯ ಇಳಕಲ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಯರದೊಡ್ಡಿ ತಾಂಡಾದ ಭಾರತಿ (29), ಆಕೆಯ ಪುತ್ರ ಉದಯ್ ಸಿಂಗ್ (11) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಸ್ನಾನ ಮಾಡುವ ವೇಳೆ ಸಾಕಷ್ಟು ಜನರು ಅನೇಕ ತಪ್ಪುಗಳನ್ನು ಮಾಡುತ್ತಾರೆ. ಇಂತಹ ತಪ್ಪುಗಳಿಂದ ಅವರು ಬೇಗನೇ ತಮ್ಮ ತಲೆ ಕೂದಲನ್ನು ಕಳೆದುಕೊಳ್ಳುತ್ತಾರೆ.  ಕೆಲವೊಂದು ವಿಚಾರಗಳು ನಮಗೆ ಗಂಭೀರ ಅಂತ ಅನ್ನಿಸದೇ ಇದ್ದರೂ ಕೂಡ, ಅದು ನಮ್ಮ ಕೂದಲಿಗೆ ಗಂಭೀರವಾದ ಹಾನಿಯನ್ನು ಮಾಡಬಹುದು. ನಾವು ಸ್ನಾನ ಮಾಡುವ ವೇಳೆ ಕೆಲವೊಂದು ವಿಚಾರಗಳನ್ನು ಗಮನಿಸಲೇ ಬೇಕು. ಕೆಲವರು ಅತೀ ಹೆಚ್ಚು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುತ್ತಾರೆ. ಇದರಿಂದ ತಲೆಗೂದಲಿಗೆ ಹಾನಿಯಾಗಬಹುದು. ಹೇರ್ ಡ್ರೈಯರ್ ಗಳು ಮತ್ತು ಹೇರ್ ಸ್ಟ್ರೈಟ್ ನರ್ ಗಳ ಶಾಖವು ಕೂದಲನ್ನು ಬಹು ಬೇಗನೇ ಹಾನಿ ಮಾಡುತ್ತದೆ. ಹೆಚ್ಚು ಬಿಸಿ ನೀರಿನಿಂದ ತಲೆಯನ್ನು ಪದೇ ಪದೇ ತೊಳೆಯುವುದರಿಂದ ಕೂದಲು ದೌರ್ಬಲ್ಯಗೊಂಡು ಉದುರುತ್ತವೆ. ಇನ್ನೂ ಹೆಚ್ಚಿನ ಜನರು ತಪ್ಪಾದ ಶ್ಯಾಂಪುಗಳನ್ನು ಉಪಯೋಗಿಸುತ್ತಾರೆ. ಇದರಿಂದ ಕೂದಲು ಉದುರುವಿಕೆ ಹೆಚ್ಚಳವಾಗಬಹುದು. ಸಾಧ್ಯವಾದರೆ ಶ್ಯಾಂಪುಗಳನ್ನು ಬಳಸದೇ ಇರುವುದೇ ಅತ್ಯುತ್ತಮ. ಶ್ಯಾಂಪು ಬದಲು ತಲೆ ಕೂದಲಿಗೆ ಪ್ರಕೃತಿ ದತ್ತವಾದ ವಸ್ತುಗಳನ್ನು ಬಳಸುವುದು ಉತ್ತಮ. ಒಂದು ವೇಳೆ ಶ್ಯಾಂಪು ಬಳಸ…

Read More

ಕಠ್ಮಾಂಡ್ : ನೇಪಾಳದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಭಾರತ ಮೂಲದ ಒಂದು ಕುಟುಂಬವೇ ಸುಟ್ಟು ಕರಕಲಾದ ಹೃದಯ ವಿದ್ರಾವಕ ಘಟನೆ ನಡೆದಿದೆ.  ಕಠ್ಮಂಡುದಿಂದ ಪೋಖಾರಾಗೆ ಹೊರಟಿದ್ದ ಯೇತಿ ಏರ್ ಲೈನ್ಸ್ ನ  ಎಟಿಆರ್ 72 ವಿಮಾನವು ಇಂದು ಬೆಳಿಗ್ಗೆ ಕಾಸ್ಕಿ ಜಿಲ್ಲೆಯ ಪೋಖಾರಾದಲ್ಲಿ ಅಪಘಾತಕ್ಕೀಡಾಗಿತ್ತು. ಅಪಘಾತದ ವೇಳೆ ವಿಮಾನದಲ್ಲಿ ಒಟ್ಟು 68 ಮಂದಿ ಇದ್ದರು. ಅಪಘಾತದ ವೇಳೆ ಇಬ್ಬರು ಪೈಲೆಟ್ ಗಳು ಸೇರಿದಂತೆ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.  ಮೃತಪಟ್ಟವರ ಪೈಕಿ ಭಾರತದ ಮಹಾರಾಷ್ಟ್ರದ ಥಾಣೆ ಮೂಲದ ಒಂದೇ ಕುಟುಂಬದ ಆಶೋಕ್ ಕಲುಮಾರ್, ತ್ರಿಪಾಠಿ, ಪತ್ನಿ ವೈಭವಿ ಬಾಂಡೇಕರ್ ಮಕ್ಕಳಾದ ಧನುಷ್, ರಿತಿಕಾ ಸೇರಿದಂತೆ ಐವರು ಸಜೀವ ದಹನವಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1  

Read More

ಕಣ್ಣೂರು: 26 ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನೋರ್ವ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೇರಳ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಜಿಲ್ಲಾ ಚೈಲ್ಡ್ಲೈನ್ ಅಧಿಕಾರಿಗಳ ದೂರುಗಳ ಆಧಾರದ ಮೇಲೆ ಜನವರಿ 12 ಆರೋಪಿಯನ್ನು ಬಂಧಿಸಲಾಗಿದೆ.  ವಿದ್ಯಾರ್ಥಿನಿಯೋರ್ವಳು ಶಿಕ್ಷಕನಿಂದ ಎದುರಿಸಿದ ದೌರ್ಜನ್ಯವನ್ನು ಶಾಲಾ ಶಿಕ್ಷಕಿ ಬಳಿ ಹೇಳಿಕೊಂಡ ಬಳಿ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯು ತನಗೆ ಶಿಕ್ಷಕ ನೀಡುತ್ತಿರುವ ಲೈಂಗಿಕ ದೌರ್ಜನ್ಯವನ್ನು ಶಿಕ್ಷಕಿಗೆ ತಿಳಿಸಿದ್ದು, ಶಿಕ್ಷಕಿ ಚೈಲ್ಡ್ ಲೈನ್ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಜನವರಿ 12ರಂದು ಒಟ್ಟು 5 ಪ್ರಕರಣ ದಾಖಲಾಗಿತ್ತು. ಇದೇ ವೇಳೆ ಶಾಲೆಯ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ನೀಡಿದ ವೇಳೆ ಮತ್ತೆ 21 ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಸ್ವತಂತ್ರ ಭಾರತದ ಮೊದಲ ವೈಯಕ್ತಿಕ ಕ್ರೀಡಾಪಟು ಖಾಶಾಬಾ ದಾದಾಸಾಹೇಬ್ ಜಾಧವ್ ಅವರ 97ನೇ ಜನ್ಮ ದಿನಾಚರಣೆಯಂದು ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಖಾಶಾಬಾ ದಾದಾಸಾಹೇಬ್ ಜಾಧವ್ ಅವರು 1926, ಜನವರಿ 15ರಂದು ಭಾರತದ ಮಹಾರಾಷ್ಟ್ರ ರಾಜ್ಯದ ಗೋಲೇಶ್ವರ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಗ್ರಾಮದ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. ಇವರಿಗೆ ತಂದೆಯೇ ಗುರುವಾಗಿದ್ದು, ತಂದೆಯಿಂದಲೇ ಕುಸ್ತಿ ತರಬೇತಿಯನ್ನು ಪಡೆದುಕೊಂಡರು. ಪ್ರೌಢ ಶಾಲೆ ವಿಭಾಗದಲ್ಲೇ ಖಾಶಾಬಾ ದಾದಾಸಾಹೇಬ್ ಜಾಧವ್ ಅವರು ಅತ್ಯುತ್ತಮ ಕುಸ್ತಿಪಟುವಾಗಿ ಹೊರಹೊಮ್ಮಿದ್ದರು. ದೇಶದ ಅನೇಕ ರಾಜ್ಯಗಳಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಅವರು  ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದರು. ಖಾಶಾಬಾ ದಾದಾಸಾಹೇಬ್ ಜಾಧವ್ ಅವರ ಕುಸ್ತಿ ಪ್ರತಿಭೆಯು ಕೊಲ್ಲಾಪುರದ ಮಹಾರಾಜರ ಗಮನ ಸೆಳೆಯಿತು ಅವರ ವಿಶೇಷ ಪ್ರೋತ್ಸಾಹವು ಖಾಶಾಬಾ ಅವರ ಕುಸ್ತಿ ಪ್ರತಿಭೆಗೆ ಶಕ್ತಿ ತುಂಬಿತು. ಲಂಡನ್ ನಲ್ಲಿ 1948ರಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಲ್ಲಾಪುರದ ಮಹಾರಾಜರೇ ಇವರಿಗೆ ಹಣ ನೀಡುತ್ತಾರೆ. ಅಂತಿಮವಾಗಿ ಹೆಲ್ಸಿಂಕಿ ಒಲಿಪಿಂಕ್ಸ್ ನಲ್ಲಿ ಘಟಾನುಘಟಿ…

Read More

ಮಧುರೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಸ್ಪರ್ಧೆ ವೇಳೆ ಅನಾಹುತ ಸಂಭವಿಸಿದ್ದು,  ಹೋರಿ ತಿವಿದ ಪರಿಣಾಮ 19 ಮಂದಿ ಸ್ಪರ್ಧಿಗಳು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ತಮಿಳುನಾಡಿನ ಮಧುರೈನ ಅವನಿಯಪುರಂನಲ್ಲಿ ಈ ಘಟನೆ ನಡೆದಿದ್ದು,  ಗಾಯಗೊಂಡ 11 ಮಂದಿ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಂಗಲ್ ಹಬ್ಬದ ಅಂಗವಾಗಿ ಮಧುರೈನ ಮೂರು ಗ್ರಾಮಗಳಲ್ಲಿ ಜಲ್ಲಿಕಟ್ಟು ಅದ್ದೂರಿಯಾಗಿ ಆರಂಭವಾಯಿತು. ಇದು ಸ್ಥಳೀಯ ಹೋರಿ ಪಳಗಿಸುವ ಕ್ರೀಡೆಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಬೆಂಗಳೂರು: ಇತಿಹಾಸದಲ್ಲಿ ಮೊದಲ ಬಾರಿಗೆ 51,000 ಕುಟುಂಬಗಳಿಗೆ ಒಂದೇ ಬಾರಿಗೆ ಆಸ್ತಿಯ ಹಕ್ಕು ಪತ್ರಗಳನ್ನು ನೀಡಲಿದ್ದು, ಜನವರಿ 19ರಂದು ಕಲಬುರಗಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ತಳ ಸಮುದಾಯಗಳ ಒಟ್ಟು 50,999 ಕುಟುಂಬಗಳಿಗೆ ಒಂದೇ ಬಾರಿಗೆ ಆಸ್ತಿಯ ಹಕ್ಕು ಪತ್ರ ವಿತರಿಸಲಾಗುವುದು. 51,000 ಕುಟುಂಬಗಳ ತಲಾ ಇಬ್ಬರಂತೆ ಒಂದು ಲಕ್ಷಕ್ಕೂ ಅಧಿಕ ಜನ ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಇಷ್ಟೊಂದು ಬೃಹತ್ ಸಂಖ್ಯೆಯ ಫಲಾನುಭವಿಗಳಿಗೆ ಒಂದೇ ಸಲ ಹಕ್ಕು ಪತ್ರ ವಿತರಿಸುತ್ತಿರುವುದು ದಾಖಲೆಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕುರುಬರಹಟ್ಟಿ, ಹಾಡಿ, ಲಂಬಾಣಿ ತಾಂಡಾ ಸೇರಿ ಸಾವಿರಾರು ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ಅವರು ವಾಸಿಸುವ ಜಾಗದ ಮೇಲೆ ಹಕ್ಕು ನೀಡಲು ಹಕ್ಕು ಪತ್ರ ವಿತರಿಸಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More