Author: admin

ಕಾರವಾರ: ಅಪರೂಪದ ಹಾರುವ ಅಳಿಲೊಂದನ್ನು ಕಾರವಾರ ತಾಲೂಕಿನ ಕದ್ರಾ ಅರಣ್ಯ ವಲಯದ ವಿರ್ಜೆ ಬೀಟ್ನ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರು ರಕ್ಷಣೆ ಮಾಡಿದ್ದಾರೆ. ಕೈಗಾ ಟೌನ್ ಶಿಪ್ ನಲ್ಲಿ ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ಹಾರುವ ಅಳಿಲನ್ನು ಕಂಡ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅಚ್ಚರಿಗೀಡಾಗಿದ್ದಾರೆ. ಮರದಿಂದ ಮರಕ್ಕೆ ಹಾರುವ ಈ ಅಪರೂಪದ ಅಳಿಲು ಮಲ್ಲಾಪುರ ಟೌನ್ ಶಿಪ್ನ ಎನ್ಪಿಸಿಐಎಲ್ ಸಿಬ್ಬಂದಿಯೋರ್ವರ ಮನೆಯ ಮೇಲೆ ಬಿದ್ದಿತ್ತು. ಈ ಬಗ್ಗೆ ಸ್ಥಳೀಯರು ಬಿಲಾಲ್ ಶೇಖ್ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಬಿಲಾಲ್ ಹಾಗೂ ನಾಗರಾಜ್ ಅವರು ಅಳಿಲಿಗೆ ಚಿಕಿತ್ಸೆ ನೀಡಿದ್ದು, ಬಳಿಕ ಕಾಡಿಗೆ ಬಿಟ್ಟಿದ್ದಾರೆ. ಹಾರುವ ಅಳಿಲನ್ನು ನೋಡಿ ಆಶ್ಚರ್ಯಗೊಂಡೆ. ಕೆಳಗೆ ಬಿದ್ದ ಪರಿಣಾಮ ಅಳಿಗೆ ತೀವ್ರವಾಗಿ ಗಾಯವಾಗಿತ್ತು. ಅದು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಸುತ್ತಲೂ ಜನರು ನಿಂತಿರುವುದನ್ನು ನೋಡಿ ಆತಂಕಕ್ಕೊಳಗಾಗಿತ್ತು. ಹ್ಯಾಂಡ್ ಗ್ಲೌಸ್ ಧರಿಸಿ ಅಳಿಲಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಿದೆ. ಗಾಯಗೊಂಡಿದ್ದ ಜಾಗದಲ್ಲಿ ಇರುವೆಗಳು ಮುತ್ತಿಕೊಂಡು ಮತ್ತಷ್ಟು ಗಾಯಗೊಳ್ಳುವಂತೆ…

Read More

ಅಪಹರಣಕಾರರ ಕಾರನ್ನು ಬೆನ್ನಟ್ಟಿದ ಪೊಲೀಸರು ಯುವಕನನ್ನು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಬಂಡೆಪಾಳ್ಯ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬುಧವಾರ ರಾತ್ರಿ 11.40ರ ಸುಮಾರಿಗೆ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆರೋಪಿಗಳು ಯುವಕನೋರ್ವನನ್ನು ಅಪಹರಿಸಿ ಅದೇ ರಸ್ತೆಯಲ್ಲಿ ಆಗಮಿಸುತ್ತಿದ್ದರು. ಪೊಲೀಸರನ್ನು ಕಂಡ ತಕ್ಷಣವೇ ಗಾಬರಿಯಿಂದ ಕಾರಿನ ಚಾಲಕ ಭದ್ರತಾ ಬ್ಯಾರಿಕೇಡ್ ಇದ್ದ ಸ್ಥಳಕ್ಕೆ ನುಗ್ಗಿ ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಕಾರಿನಲ್ಲಿದ್ದ ಯುವಕ ಸಹಾಯಕ್ಕಾಗಿ ಪೊಲೀಸರನ್ನು ಕೂಗಿಕೊಂಡಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಕಾರನ್ನು 2 ಕಿ.ಮೀ. ದೂರದ ವರೆಗೆ ಬೆನ್ನಟ್ಟಿದ್ದು, ಕೋರಮಂಗಲ ವಾಟರ್ ಟ್ಯಾಂಕ್ ಕಾರನ್ನು ತಡೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮೂವರು ಆರೋಪಿಗಳು ಕಾರಿನಿಂದ ಪರಾರಿಯಾಗಿದ್ದಾರೆ. ಯುವಕನನ್ನು ರಕ್ಷಿಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಗೋಪಿ ಎಂದು ಗುರುತಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಬೀದರ್: ಕೆ ಎಸ್ ಆರ್ ಟಿ ಸಿ ಬಸ್ಸುಗಳ ಸಂಚಾರ ಅವ್ಯವಸ್ಥೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ತಾಲೂಕು ಘಟಕ ವತಿಯಿಂದ ಔರಾದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ತಾಲೂಕಿನಲ್ಲಿ ಬಸ್ ಸಂಚಾರದ ಅವ್ಯವಸ್ಥೆ ಕುರಿತು ಹಲವಾರು ಬಾರಿ ತಾಲೂಕಿನ ಸಾರಿಗೆ ವ್ಯವಸ್ಥಾಪಕರನ್ನು ಸಂಪರ್ಕಿಸಿ ಮನವಿ ಪತ್ರ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು. ಬಸ್ ಪಾಸ್ ಇರುವ ಮಕ್ಕಳಿಗೆ ಶಾಲಾ ಅವಧಿಯಲ್ಲಿ ಬಸ್ಸುಗಳು ಸಿಗಬೇಕು, ಸಾರ್ವಜನಿಕರ ಸಂಚಾರಕ್ಕೆ ಸಮರ್ಪಕವಾಗಿ ಬಸ್ ಗಳು ಓಡಾಡಬೇಕು. ತಾಲೂಕಿನ ಹಳೆಯ ಬಸ್ ಗಳನ್ನು ಹಿಂಪಡೆದು ಹೊಸ ಬಸ್ ನೀಡಬೇಕು, ಬಸ್ ನಿಲ್ದಾಣವನ್ನು ಸ್ವಚ್ಛತೆಯಿಂದ ಕಾಪಾಡಬೇಕು, ಬಸ್ ನಿಲ್ದಾಣದ ನಿರ್ವಹಣೆಯನ್ನು ಹೊಸಬರಿಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ತಾಲೂಕಿನ ಗಡಿ ಭಾಗದಲ್ಲಿ ಹಳ್ಳಿಗಳು, ತಾಂಡಾಗಳಿಗೆ ಬಸ್ ಗಳ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು, ದೂರದ ಮುಂಬೈ, ಬೆಂಗಳೂರು, ಗುಲ್ಬರ್ಗ, ಹೈದರಾಬಾದ್ ಈ ಊರುಗಳಿಗೆ ಹೋಗಲು ಉತ್ತಮ ಬಸ್ ಗಳ…

Read More

ತುಮಕೂರು: ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಿರಿ ಎಂದು ಅಚರ್ಡ್ ಮಾದಕ ದ್ರವ್ಯ ವ್ಯಸನಿಗಳ ಪುನರ್ವಸತಿ ಕೇಂದ್ರದ ನಿರ್ದೇಶಕರಾದ ಡಾ. ಸದಾಶಿವಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪಟ್ಟಣದ  ಅಶೋಕನಗರದಲ್ಲಿರುವ ಮಹೇಶ್ ಪಿಯು ಕಾಲೇಜಿನಲ್ಲಿ ಜೆ ಸಿ ಐ ತುಮಕೂರು ಮೆಟ್ರೋ ನೇತೃತ್ವದಲ್ಲಿ ಹಾಗೂ ಮಹೇಶ್ ಪಿಯು ಕಾಲೇಜಿನ ಸಹಯೋಗದೊಂದಿಗೆ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು, ಶ್ರೀ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಡಾ. ಸದಾಶಿವಯ್ಯ, ನಿಖಿಲ್ ಶರ್ಮಾ, ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಪಟೇಲ್ ಉದ್ಘಾಟಿಸಿ ಚಾಲನೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ಡಾ.ಸದಾಶಿವಯ್ಯ ಮಾತನಾಡಿ, ಭಾರತ ದೇಶದಲ್ಲಿ ಮಾದಕ ದ್ರವ್ಯಕ್ಕೆ ದಾಸರಾಗಿ ಲಕ್ಷಾಂತರ ಮಂದಿ ಹದಿ ಹರೆಯದ ವಯಸ್ಸಿನವರು ತುತ್ತಾಗಿದ್ದಾರೆ. ಇದರಿಂದ ಅವರ ಸಂಪೂರ್ಣ ಭವಿಷ್ಯ ಹಾಳಾಗಿದೆ. ವಿದ್ಯಾರ್ಥಿಗಳು ಸಹ ಧೂಮಪಾನ, ಮದ್ಯಪಾನ, ತಂಬಾಕು ಹಾಗೂ ಡ್ರಗ್ಸ್ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳ ದುಶ್ಚಟಕ್ಕೆ ದಾಸರಾಗದೆ, ವ್ಯಾಯಾಮ, ಯೋಗಾಸನ, ಕ್ರೀಡೆಗಳಲ್ಲಿ ಭಾಗವಹಿಸಿ, ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ತಂದೆ ತಾಯಿ,…

Read More

ಪ್ರತಿಯೊಬ್ಬರು ಸಮಾಜಕ್ಕೆ ಕೈಲಾದ ಕೊಡುಗೆಯನ್ನು ನೀಡಿ: ನಿವೃತ್ತ ಜಾನುವಾರು ಅಧಿಕಾರಿ ವೆಂಕಟೇಗೌಡ ತುರುವೇಕೆರೆ: ಪ್ರತಿಯೊಬ್ಬರು ಸಮಾಜಕ್ಕೆ ತಮ್ಮ ಕೈಲಾದ ಕೊಡುಗೆ ನೀಡಬೇಕು ನಿವೃತ್ತ ಜಾನುವಾರು ಅಧಿಕಾರಿ ವೆಂಕಟೇಗೌಡ ಹೇಳಿದರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ತುರುವೇಕೆರೆ ನೇತೃತ್ವದಲ್ಲಿ ಪಶು ಆಸ್ಪತ್ರೆ ಮಾಯಸಂದ್ರ ಸಹಯೋಗದೊಂದಿಗೆ ತಾಲೂಕಿನ ದೊಡ್ಡಶೆಟ್ಟಿಕೆರೆ ಗ್ರಾಮದಲ್ಲಿ ಹಾಲು ಉತ್ಪದಕರ ಸಹಕಾರ ಸಂಘದ ಆವರಣದಲ್ಲಿ ಜಾನುವಾರುಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಮಾಜಕ್ಕೆ ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು, ಸಮಾಜವೇ ಕೊಡುಗೆದಾರರನ್ನು ಗೌರವಿಸುತ್ತದೆ ನಿವೃತ್ತ ಅಧಿಕಾರಿಯಾದರೂ ಸಹ ಇಂದಿಗೂ ಸಹ ಜಾನುವಾರುಗಳ ಕಾಯಿಲೆ ಮುಂತಾದ ಸಮಸ್ಯೆಗಳಿಗೆ ಸಾರ್ವಜನಿಕರು ಕರೆ ಮಾಡುತ್ತಾರೆ, ನಾವು ಸಹ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ತುರ್ತು ಸಂದರ್ಭದಲ್ಲಿ ಜಾನುವಾರಗಳನ್ನು ಪರೀಕ್ಷಿಸುವ ಮೂಲಕ ಉತ್ತಮ ಚಿಕಿತ್ಸೆ ನೀಡುವ ಕಾರ್ಯವನ್ನು ಮುಂದುವರಿಸಿದ್ದೇನೆ. ರೈತರಿಗೆ ಉಪಯುಕ್ತ ಮಾಹಿತಿಗಳನ್ನು ತಿಳಿಸಿದ್ದೇನೆ, ನನ್ನ ಸೇವೆಗೆ ಸಮಾಜ ಗುರುತಿಸಿರುವುದು ನನ್ನ ಸೌಭಾಗ್ಯ ಎಂದರು. ಈ ವೇಳೆ ಮಹಿಳಾ ಹಾಲು…

Read More

ಚೀನಾದ ಬ್ಯುಸಿನೆಸ್ ಮ್ಯಾಗ್ನೇಟ್ ಝಾಂಗ್ ಲಿ ತನ್ನ ಸ್ವಂತ ಮನೆಯನ್ನು ಜೈಲಾಗಿ ಪರಿವರ್ತಿಸಿದ. ಲಂಚದ ಆರೋಪದ ಮೇಲೆ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸುವಂತೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಆದೇಶದಲ್ಲಿ, ಲಂಡನ್ ಜೈಲಿನಲ್ಲಿ ಉಳಿಯಲು ನಿರಾಕರಿಸಿದ ಚೀನಾ ಅಧ್ಯಕ್ಷರು ತಮ್ಮದೇ ಆದ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಬೀಗ ಹಾಕಲ್ಪಟ್ಟರು. ಜಾಂಗ್ ಲಿ ಜಾಮೀನು ಸಮಸ್ಯೆ ಬಗೆಹರಿಯುವವರೆಗೂ ಜಾಂಗ್ ಲಿ ಅವರ ಮನೆಯಲ್ಲೇ ಇರಲು ಅವಕಾಶ ನೀಡುವಂತೆ ಜಾಂಗ್ ಲಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊಚ್ಚಿ: ಆಹಾರ ಸುರಕ್ಷತಾ ಇಲಾಖೆಯ ತನಿಖೆ ಒಂದೆಡೆ ಮುಂದುವರಿದಿರುವಾಗಲೇ ತಮಿಳುನಾಡಿನಿಂದ ಕೊಚ್ಚಿ ಸೇರಿದಂತೆ ನಗರಗಳಿಗೆ ‘ಸುನಾಮಿ ಮಾಂಸ’ ಆಗಮಿಸಿದೆ. ಸುನಾಮಿ ಮೀಟ್ ಎಂದರೆ ತಮಿಳುನಾಡಿನ ಕೋಳಿ ಫಾರಂಗಳಿಂದ ಸತ್ತ ಕೋಳಿಗಳನ್ನು ಕಡಿಮೆ ವೆಚ್ಚದಲ್ಲಿ ಮಾಂಸವಾಗಿ ಕೇರಳಕ್ಕೆ ತರುವುದು. ವಿವಿಧೆಡೆ 500 ಕೆಜಿ ಕೊಳೆತ ಮಾಂಸವನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕಲಬುರಗಿ : ಇದೇ ಜನವರಿ 19ಕ್ಕೆ 30 ಸಾವಿರ ಸೇರಿದಂತೆ ವಿವಿಧ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಮಳಖೇಡ ಬಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 60 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಧಾನಮಂತ್ರಿಗಳು ಅಂದು ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮತ್ತು ಜಿಲ್ಲೆಯ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ಇಂದು ವಿಧಾನಸೌಧದ ಮುಂದೆ ಜಗಜ್ಯೋತಿ ಬಸವಣ್ಣ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುದ್ದಲಿ ಪೂಜೆ ನೆರವೇರಸಲಿದ್ದಾರೆ. 24 ಅಡಿ ಎತ್ತರದ ಬಸವಣ್ಣ ಮತ್ತು ಕೆಂಪೇಗೌಡ ಪುತ್ಥಳಿಗಳನ್ನು 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಈ ಸಂಬಂಧ ಕಂದಾಯ ಸಚಿವ ಆರ್. ಅಶೋಕ್ ಸ್ಥಳಪರಿಶೀಲನೆ ನಡೆಸಿದ್ದರು. ಸಂವಿಧಾನಶಿಲ್ಪಿ ಅಂಬೇಡ್ಕರ್ ಹಾಗೂ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಪ್ರತಿಮೆಗಳಿವೆ. ಇವೆರಡು ಪ್ರತಿಮೆಗಳ ನಡುವೆ ಬಸವಣ್ಣ ಮತ್ತು ಕೆಂಪೇಗೌಡ ಪ್ರತಿಮೆ ನಿರ್ಮಾಣವಾಗಲಿವೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪರಮಪೂಜ್ಯರಾದ ಮಹಾ ತಪಸ್ವಿ ಚಿಮ್ಮಲಗಿ ಅರಳಲೇ ಕಟ್ಟಿಮನಿ. ಹಿರೇಮಠದ ಷಟಸ್ಥಲ ಬ್ರಹ್ಮ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಯವರು ಚಿಮ್ಮಲಗಿಯ ಶ್ರೀಮಠದಲ್ಲಿ ರಾತ್ರಿ 10: 02 ನಿಮಿಷಕ್ಕೆ ಲಿಂಗೈಕ್ಯರಾಗಿರುತ್ತಾರೆ. ಶುಕ್ರವಾರ 13/01/2023ರ ಸಂಜೆ ನಾಲ್ಕು ಗಂಟೆಗೆ ಲಿಂಗೈಕ್ಯ ಪೂಜ್ಯರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಶ್ರೀ ಮಠದ ಭಕ್ತಾಧಿಗಳು ತಿಳಿಸಿದ್ದಾರೆ. 15 ದಿನಗಳಿಂದ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಶ್ರೀಗಳ ಅಂತ್ಯಕ್ರಿಯೆ ಜನವರಿ 13ರಂದು ಸಂಜೆ 4ಕ್ಕೆ ಚಿಮ್ಮಲಗಿ ಭಾಗ-2ರಲ್ಲಿ ನಡೆಯಲಿದೆ. ಶ್ರೀಗಳು ಕಳೆದ ವರ್ಷವಷ್ಟೇ ಮಠಕ್ಕೆ ಸಿದ್ಧ ರೇಣುಕ ದೇವರನ್ನು ತಮ್ಮ ಮುಂದಿನ ಪೀಠಾಧಿಕಾರಿಯನ್ನಾಗಿ ನೇಮಿಸಿ ಪಟ್ಟಾಭಿಷೇಕ ಮಾಡಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More