Author: admin

ಬೆಳಗಾವಿ : ಬೀದಿಬದಿ ವ್ಯಾಪಾರಿಗಳು ಮುಂಬರುವ ದಿನಗಳಲ್ಲಿ ದೊಡ್ಡ ವ್ಯಾಪಾರಿಗಳಾಗುವ ಯೋಜನೆ ರೂಪಿಸಿ, ಬೃಹತ್ ವ್ಯಾಪಾರದಲ್ಲಿ ತೊಡಗಿಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಮೂಲಕ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಬೀದಿಬದಿ ವ್ಯಾಪಾರಸ್ಥರಿಗೆ ಸಲಹೆ ನೀಡಿದರು. ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸೋಮವಾರ (ಜ9) ನಡೆದ ಆತ್ಮನಿರ್ಭರ ಬೀದಿಬದಿ ವ್ಯಾಪಾರಸ್ಥರ ಸಂಭ್ರಮ ಆಚರಣೆ 2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹುಟ್ಟಿನಿಂದಲೂ ಯಾರು ದೊಡ್ಡ ವ್ಯಕ್ತಿಗಳಾಗಿರುವುದಿಲ್ಲ ಚಹಾ ಮಾರುವಂತ ವ್ಯಕ್ತಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿದ್ದಾರೆ, ಹಾಗೇ ನೀವು ಏಕೆ ದೊಡ್ಡ ವ್ಯಾಪಾರಿಗಳಾಗಬಾರದು? ನೀಮ್ಮಲ್ಲಿಆತ್ಮಸ್ಥೈರ್ಯ ಇಚ್ಚಾಶಕ್ತಿ ಇಟ್ಟುಕೊಂಡು ನೀವು ಸಹ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳುವುದು ಖಚಿತ ಎಂದು ಶಾಸಕ ಅನೀಲ ಬೆನಕೆ ಅವರು ಹೇಳಿದರು. ಕೋವಿಡ್ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳು ಅನೇಕ ಸಮಸ್ಯೆಗಳಿಗೆ ತುತ್ತಾದಾಗ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ 10 ಸಾವಿರ ರೂ…

Read More

ಕೊರಟಗೆರೆ: ತಾಲೂಕಿನಲ್ಲಿ ಹಲವು ಪ್ರಕರಣಗಳ ಅಡಿಯಲ್ಲಿ ದ್ವಿಚಕ್ರ ವಾಹನಗಳನ್ನು ಕೆಲವು ತಿಂಗಳ ಹಿಂದೆ ಅಮಾನತುಪಡಿಸಲಾಗಿರುತ್ತದೆ. ಇದುವರೆಗೂ ದ್ವಿಚಕ್ರವಾಹನ ಮಾಲೀಕರು ಯಾರು ಕೂಡ ಬಂದು ತಮ್ಮ ವಾಹನಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ತೋರಿಸಿ ಬಿಡಿಸಿಕೊಳ್ಳದ ಕಾರಣ ಅಂತಹ ದ್ವಿಚಕ್ರ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಬಹಿರಂಗ ಹರಾಜು ಮಾಡಲಾಗುತ್ತದೆ.. ಈ ಕೆಳಕಂಡ ಪ್ರಕರಣಗಳ ಅಡಿಯಲ್ಲಿ ವಾಹನಗಳನ್ನು ಅಮಾನತು ಪಡಿಸಲಾಗಿದೆ: ಜಿ. ಎಸ್. ಸಿ. ನಂಬರ್ :-po1643220600296/2022 ಜಿ. ಎಸ್. ಸಿ. ನಂಬರ್:-po1643220600300/2022 ಜಿ. ಎಸ್. ಸಿ. ನಂಬರ್:-po1643220600304/2022 ಜಿ. ಎಸ್. ಸಿ. ನಂಬರ್:-po1643220600316/2022 ಜಿ. ಎಸ್. ಸಿ. ನಂಬರ್:-po1643220600326/2022 ಈ ಪ್ರಕರಣದ ಅಡಿಯಲ್ಲಿ ಅಮಾನತು ಪಡಿಸಲಾಗಿರುವ ವಾಹನಗಳ ವಾರಸುವುದಾರರು ಒಂದು ವಾರದ ಒಳಗಾಗಿ ತಮ್ಮಲ್ಲಿ ದ್ವಿಚಕ್ರ ವಾಹನಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ತಂದು ಪೊಲೀಸ್ ಠಾಣಾ ಅಧಿಕಾರಿಗಳಿಗೆ ತೋರಿಸಿ ತಮ್ಮ ವಾಹನವನ್ನು ತೆಗೆದುಕೊಂಡು ಹೋಗಬಹುದು. ಒಂದು ವಾರದ ಒಳಗೆ ಯಾರು ಬಾರದೆ ಹೋದರೆ, ತದನಂತರ ಆ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಸಾರ್ವಜನಿಕರ ಬಹಿರಂಗ ಹರಾಜು ಮಾಡಲಾಗುತ್ತದೆ…

Read More

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ವಿಪಕ್ಷ ನಾಯಕ ಸಿದ್ಧರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸುವ ನಿರ್ಧಾರವನ್ನ ಬಿಜೆಪಿ ಮುಖಂಡ ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ವಾಗತಿಸಿದರು. ಈ ಕುರಿತು ಮಾತನಾಡಿದ ವರ್ತೂರು ಪ್ರಕಾಶ್, ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ ಸ್ವಾಗತ, ಸಿದ್ಧರಾಮಯ್ಯ ಅವರದ್ದು ತಪ್ಪು ತೀರ್ಮಾನ.  ಸಿದ್ದರಾಮಯ್ಯ  ನನ್ನ ಗುರುವಲ್ಲ ಕೋಲಾರದಲ್ಲೇ ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯವಾಗುತ್ತದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ನಲ್ಲೇ  ಅವರ ವಿರೋಧಿಗಳಿದ್ದಾರೆ. ಸಿದ್ಧರಾಮಯ್ಯ ಅಹಿಂದ ನಾಯಕನೇ ಅಲ್ಲ . ಅದೃಷ್ಟದ ನಾಯಕ . ಸಿದ್ದು ಕುರುಬರ ಲೀಡರ್ ಅಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ವಿಜಯಪುರ: ಇತ್ತೀಚಿಗೆ ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿಗಳನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಾಣ ಮಾಡಿದ್ದ ಕಟ್ಟೆಯನ್ನು ಇಂದು ತೆರವುಗೊಳಿಸಲಾಗಿದೆ. ಯಾವುದೇ ಮಠ, ಮಂದಿರ ತಮ್ಮ ಹೆಸರಲ್ಲಿ ನಿರ್ಮಾಣ ಮಾಡಬಾರದು ಎಂದು ಸಿದ್ದೇಶ್ವರ ಶ್ರೀಗಳು 2014ರಲ್ಲಿ ಉಯಿಲು ಬರೆದಿದ್ದರು. ಅದರಂತೆ ಜನವರಿ 2ರಂದು ಲಿಂಗೈಕ್ಯರಾದ ಶ್ರೀಗಳ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗಿತ್ತು. ನಂತರ ಅವರ ಚಿತಾಭಸ್ಮವನ್ನು ಭಾನುವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಕೂಡಮ ಸಂಗಮ ಗ್ರಾಮದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಲಾಗಿತ್ತು. ಶ್ರೀಗಳ ಆಶಯದಂತೆ ಅವರನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಿಸಿದ್ದ ಕಟ್ಟೆಯೂ ತೆರವುಗೊಳಿಸಲಾಗಿದೆ. ನಿನ್ನೆ ತಡರಾತ್ರಿ ಗೋಕರ್ಣದಿಂದ ಬಂದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಕಟ್ಟೆಯನ್ನು ತೆರವು ಮಾಡಲಾಗಿದೆ. ನಂತರ ಆಶ್ರಮದ ಸಿಬ್ಬಂದಿ ಅಂತ್ಯ ಸಂಸ್ಕಾರ ಮಾಡಿದ ಸ್ಥಳವನ್ನು ನೀರಿನಿಂದ ಶುಚಿಗೊಳಿಸುತ್ತಿದ್ದಾರೆ. ಇದರ ನಡುವೆಯೂ ಆಶ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಆಶ್ರಮ ಭೇಟಿ ನೀಡಿದವರು ಶ್ರೀಗಳನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳ ದರ್ಶನ ಮಾಡುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ತುರುವೇಕೆರೆ: ಜನವರಿ 2ರಂದು ನಡೆದ ಆದಿ ಜಾಂಬವ ಸಮ್ಮೇಳನ ಯಶಸ್ವಿಯ ಹಿನ್ನೆಲೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಸಾಲ ಜಯರಾಮ್ ಮಾದಿಗ ಸಮಾಜದ ಮುಖಂಡರುಗಳಿಗೆ ಶಾಲು ಹಾಕಿ ಸನ್ಮಾನಿಸಿದರು. ತಾಲೂಕು ಆದಿಚಾಂಬವ ಸಮಾಜದ ಅಧ್ಯಕ್ಷರಾದ ವಿ.ಟಿ.ವೆಂಕಟರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಮಾದಿಗ ಸಮಾಜವನ್ನು ಒಂದೇ  ವೇದಿಕೆಯಲ್ಲಿ ಒಗ್ಗೂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರಿಗೆ ಶಾಸಕರು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿ,  ಶಾಸಕ ಮಸಾಲ ಜಯರಾಮ್,  ನಾನು ಕೂಡ ನಿಮ್ಮ ಸಮಾಜದ ಯಾವುದೇ ಹೋರಾಟದಲ್ಲಿ ಸದಾ ನಿಮ್ಮೊಂದಿಗೆ ಭಾಗಿಯಾಗಿ ಇರುತ್ತೇನೆ. ಈಗ ನಡೆಸುತ್ತಿರುವ ಒಳ ಮೀಸಲಾತಿಯ ಹೋರಾಟವನ್ನು ಬರುವ ಚುನಾವಣೆಯೊಳಗೆ ಜಾರಿಗೆ ತರಲಾಗುತ್ತದೆ. ಇದರ ಬಗ್ಗೆ ನಮ್ಮ ಕೇಂದ್ರ ಹಾಗೂ ಆಯೋಗದ ಅಧ್ಯಕ್ಷರು ಕೂಡ ನನ್ನೊಂದಿಗೆ ಚರ್ಚಿಸಿ ಭರವಸೆಯನ್ನು ನೀಡಿದ್ದಾರೆ  ಎಂದರು. ಈ ಸಂದರ್ಭದಲ್ಲಿ ಆದಿ ಜಾಂಬವ ಸಮಾಜದ ತಾಲೂಕು ಅಧ್ಯಕ್ಷರಾದ ವಿ.ಟಿ.ವೆಂಕಟರಾಮಯ್ಯ, ಗೌರವಾಧ್ಯಕ್ಷರಾದ ನೊಣವಿನಕೆರೆ ರಾಮಕೃಷ್ಣಯ್ಯ,  ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾದ ಟಿ.ಕೆ.ಚಿದಾನಂದ, ಮುಲ್ಲೂರು ತಿಮ್ಮೇಶ್,…

Read More

ಕೋಲಾರ : 2023ರ ಮುಂಬರುವ ವಿಧಾನಸಭಾ ಚುನಾವಣೆಗೆ ಕೋಲಾರ ಜಿಲ್ಲೆಯಿಂದ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಕೋಲಾರ ಜಿಲ್ಲೆಯಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ. ನಿಮ್ಮ ಪ್ರೀತಿ ಅಭಿಮಾನ ತಿರಸ್ಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮಾತುಗಳನ್ನು ಕೇಳಿದ ಬಳಿಕ ಕ್ಷೇತ್ರ ಘೋಷಣೆ ಬೆನ್ನಲ್ಲೆ ಜೈಕಾರ ಕೇಳಿಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸೀಮಿತ ಪ್ರಮಾಣದಲ್ಲಿ ಆಕ್ಕೋಹಾಲ್ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ ಇಲ್ಲ ಎನ್ನುವುದನ್ನು WHO ತಳ್ಳಿ ಹಾಕಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಒಂದು ಹನಿ ಆಸ್ಕೋಹಾಲ್ ಕುಡಿಯುವುದು ಕೂಡ ಅತ್ಯಂತ ಅಪಾಯಕಾರಿ. ಆಸ್ಕೋಹಾಲ್ ಸೇವನೆಯು ಬಾಯಿ, ಗಂಟಲು, ಯಕೃತ್, ಅನ್ನನಾಳ, ಸ್ತನ ಮತ್ತು ಕರುಳಿನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಹೇಳಿದೆ. ಎಷ್ಟೇ ದುಬಾರಿ ಆಸ್ಕೋಹಾಲ್ ಆಗಿದ್ದರೂ ಅದರ ಸೇವನೆಯಿಂದ ಕ್ಯಾನ್ಸರ್ ಅಪಾಯ ಇದ್ದೇ ಇದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, “ನೀವು ಆಲ್ಕೋಹಾಲ್ ಸೇವಿಸಿದಾಗ, ನಿಮ್ಮ ದೇಹವು ಅಸೆಟಾಲ್ಡಿಹೈಡ್ ಎಂಬ ರಾಸಾಯನಿಕವಾಗಿ ಅದನ್ನು ವಿಭಜಿಸುತ್ತದೆ. ಅಸಿಟಾಲ್ಡಿಹೈಡ್ ನಿಮ್ಮ ಡಿಎನ್ಎಗೆ ಹಾನಿ ಮಾಡುತ್ತದೆ ಮತ್ತು ಹಾನಿಯನ್ನು ಸರಿಪಡಿಸದಂತೆ ನಿಮ್ಮ ದೇಹವನ್ನು ತಡೆಯುತ್ತದೆ. ಡಿಎನ್ಎ ನಿಯಂತ್ರಿಸುವ ಜೀವಕೋಶದ “ಸೂಚನೆ ಕೈಪಿಡಿ” ಆಗಿದೆ. ಜೀವಕೋಶದ ಸಾಮಾನ್ಯ ಬೆಳವಣಿಗೆ ಮತ್ತು ಕಾರ್ಯಚಟುವಟಿಕೆಗಳು ಡಿಎನ್ಎ ಹಾನಿಗೊಳಗಾದಾಗ, ಜೀವಕೋಶವು ನಿಯಂತ್ರಣದಿಂದ ಹೊರಬರಲು ಪ್ರಾರಂಭಿಸಬಹುದು ಮತ್ತು ಕ್ಯಾನ್ಸರ್ ಗೆಡ್ಡೆಯನ್ನು ರಚಿಸಬಹುದು.” ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಸ್ಯಾಂಟ್ರೋ ರವಿ ಪ್ರಕರಣ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು. ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಎಚ್ ಡಿಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ನಾನು ಯಾವ ಇಲ್ಲಸಲ್ಲದ ಆರೋಪ ಮಾಡಿದ್ದೇನೆ. ಸ್ಯಾಂಟ್ರೋ ರವಿ ಮಂತ್ರಿಗಳ ಜತೆ ಇರುವ ಫೋಟೊ ಸಿಕ್ಕಿದೆ. ಈ ಫೋಟೊವನ್ನ ನಾನು ಬಿಡುಗಡೆ ಮಾಡಿದ್ದಲ್ಲ ಸಾರ್ವಜನಿಕವಾಗಿ ಹರಿದಾಡುತ್ತಿದೆ. ರವಿ ಸರ್ಕಾರ ಆಡಳಿತದಲ್ಲಿ ಶಾಮೀಲಾಗಿದ್ದಾನೆ. ನಾನು ಗೃಹಸಚಿವರ ತೆಜೋವಧೆ ಮಾಡಲು ಮಾತನಾಡುತ್ತಿಲ್ಲ. ಪೊಲೀಸರೇ ಆತನೊಂದಿಗೆ ವ್ಯವಹಾರ ಮಾಡಿದ್ದಾರೆ ಅಂತಹ ಪೊಲೀಸರಿಂದ ತನಿಖೆ ಹೇಗೆ ಸಾಧ್ಯ..? ಹೈಕೋರ್ಟ್ ಸುಪರ್ದಿಯಲ್ಲಿ ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ಬಿಜೆಪಿ ನಾಯಕರು ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾರೆ. ಆದರೇ ರವಿ ಪ್ರಕರಣ ಅದಕ್ಕಿಂತ ಟೆರರಿಸಂ. ಸಮಾಜಘಾತಕ ಕೃತ್ಯಗಳು ಸಮಾಜವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದು ಕಿಡಿಕಾರಿದರು. ಬಿಜೆಪಿಯಿಂದ ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ…

Read More

ಬಜರಂಗದಳದ ಕಾರ್ಯಕರ್ತರೊಬ್ಬರ ಮೇಲೆ ಯುವಕನೋರ್ವ ತಲ್ವಾರ್ ನಿಂದ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸಾಗರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಯುವಕ ಸಮೀರ್ ತಲ್ವಾರ್ ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಶೌರ್ಯ ಪಥ ಸಂಚಲನದಲ್ಲಿ ಸುನೀಲ್ ಭಾಗಿಯಾಗಿದ್ದರು. ಈ ಮಧ್ಯೆ ಸಾಗರ ಬಸ್ ನಿಲ್ದಾಣಕ್ಕೆ ಬಂದ ಸುನೀಲ್ ಮೇಲೆ ಸಮೀರ್ ತಲ್ವಾರ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಸಮೀರ್ ನೋಡಿ ಸುನೀಲ್ ತಪ್ಪಿಸಿಕೊಂಡಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸುನೀಲ್ ಮೇಲೆ ದಾಳಿ ಖಂಡಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಾಗರದಲ್ಲಿನ ಸಮೀರ್ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಆನ್‌ಲೈನ್ ಜೂಜಾಟದ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ದಂಪತಿಯನ್ನು ಮಲಪ್ಪುರಂನಲ್ಲಿ ಬಂಧಿಸಲಾಗಿದೆ. ಪೊನ್ವಾಲಾ ಮೂಲದ ಮುಹಮ್ಮದ್ ರಶೀದ್ ಮತ್ತು ಅವರ ಪತ್ನಿ ರಮ್ಲತ್ ಅವರನ್ನು ತಮಿಳುನಾಡಿನ ಎರ್ವಾಡಿ ಪೊಲೀಸರು ಬಂಧಿಸಿದ್ದಾರೆ. ವಡಕಂಗರ ಮಂಕಡ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಕಳೆದ ನವೆಂಬರ್‌ನಲ್ಲಿ ನಡೆದಿದೆ. ವಿಐಪಿ ಇನ್ವೆಸ್ಟ್‌ಮೆಂಟ್ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಗೋವಾದ ಕ್ಯಾಸಿನೋದಲ್ಲಿ ಆನ್‌ಲೈನ್ ಜೂಜಾಟದಲ್ಲಿ ಹಣ ತೊಡಗಿಸಿದರೆ ಕೆಲವೇ ಗಂಟೆಗಳಲ್ಲಿ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ನಂಬಿಸಿ 5 ಲಕ್ಷ ರೂಪಾಯಿ ವಂಚನೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ರಮ್ಲಾ ಅವರ ಸಹೋದರ ರಶೀದ್ ನನ್ನು ಮಂಕಡ ಪೊಲೀಸರು ಕಳೆದ ದಿನ ಬಂಧಿಸಿದ್ದರು. ಮೊಹಮ್ಮದ್ ರಶೀದ್ ಕೂಡ ವಂಚನೆಗೆ ಯೋಜನೆ ರೂಪಿಸಿದ್ದು, ಯೂಟ್ಯೂಬ್ ಟ್ರೇಡಿಂಗ್ ವೀಡಿಯೋಗಳ ಮೂಲಕ ತಮ್ಮ ವಾಟ್ಸಾಪ್ ಗ್ರೂಪ್ ಲಿಂಕ್ ಗಳನ್ನು ಹರಡಿ ಹಣ ವಸೂಲಿ ಮಾಡುವ ಮೂಲಕ ಹಲವರ ಜೊತೆ ಸೇರಿ ಸಂಚು ರೂಪಿಸಿದ್ದರು…

Read More