Subscribe to Updates
Get the latest creative news from FooBar about art, design and business.
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
- ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
- ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ
- ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್
- ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್
- ಆಗ್ನೆಯ ಪದವೀಧರರ ಮತದಾರರರ ನೋಂದಣಿ: ನ.25ರಿಂದ ಡಿ.10ರವರೆಗೆ ಮುಂದೂಡಿಕೆ
Author: admin
ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಅಂತಿಮ ಪಟ್ಟಿಯ ಸಿದ್ದವಾಗಿದ್ದು 229 ಮತಗಟ್ಟೆಗಳ ಅಧಿಕಾರಿಗಳು ಮತಗಟ್ಟೆಗಳ ಮತದಾರರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ ಎಂದು ತಹಶೀಲ್ದಾರ್ ರೇಣುಕುಮಾರ್ ತಿಳಿಸಿದ್ದಾರೆ. 2022ರ ನವೆಂಬರ್ 9 ರಂದು ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ. ಹಾಗೆಯೇ ಮರಣ ಹೊಂದಿರುವ ಮತ್ತು ಸ್ಥಳಾಂತರ ಹೊಂದಿರುವ ವ್ಯಕ್ತಿಗಳನ್ನೂ ಪಟ್ಟಿಯಿಂದ ಕೈಬಿಟ್ಟಿದ್ದು ಹಾಗೂ ಹೊಸದಾಗಿ ಮತದಾನದ ಹಕ್ಕನ್ನು 18 ವರ್ಷ ತುಂಬಿರುವ ಹೊಸ ಮತದಾರರ ಪಟ್ಟಿಯ ಸಿದ್ದವಾಗಿದ್ದು, ಅವರುಗಳು ಪಟ್ಟಿಯನ್ನು ಪರಿಶೀಲಿಸಿ ಕೊಳ್ಳಬೇಕೆಂದು ಮನವಿ ಮಾಡಿದರು. ಪಟ್ಟಿಯಲ್ಲಿ 88,801 ಗಂಡು ಮತ್ತು 88,847ಹೆಣ್ಣು ಇತರೆ 3 ಒಟ್ಟು 1,77,651ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈಗ ಅಂತಿಮ ಮತದಾರರ ಪಟ್ಟಿ ಸಿದ್ದವಾಗಿದ್ದು ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗಂಡು 89,769 ಹಾಗೂ ಹೆಣ್ಣು 90,185 ಇತರೆ 4 ಮತದಾರರು ಒಟ್ಟು 1,79,958 ಮತದಾರರ ಪಟ್ಟಿ ಸಿದ್ದವಾಗಿ ಪ್ರಕಟಿಸಲಾಗಿದೆ. ಜೊತೆಗೆ…
ಮಧ್ಯಪ್ರದೇಶದಲ್ಲಿ ಸಣ್ಣ ವಿಮಾನ ಪತನ, ಪೈಲಟ್ ಸಾವು ಸಹ ಪೈಲಟ್ ಗಾಯಗೊಂಡಿದ್ದಾರೆ. ಫಾಲ್ಕನ್ ಏವಿಯೇಷನ್ ಅಕಾಡೆಮಿಯ ತರಬೇತಿ ವಿಮಾನ ಅಪಘಾತವಾಗಿದೆ. ಮಧ್ಯಪ್ರದೇಶದ ರಿವಾದಲ್ಲಿನ ದೇವಸ್ಥಾನದ ಮೇಲೆ ವಿಮಾನ ಪತನಗೊಂಡಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಪೈಲಟ್ ಮತ್ತು ಸಹ ಪೈಲಟ್ ಮಾತ್ರ ವಿಮಾನದಲ್ಲಿದ್ದರು. ತರಬೇತಿ ಹಾರಾಟದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಿಮಾನ ಹಾರಿಸಿದ ಟ್ರೈನಿ ಪೈಲಟ್ ಸಾವನ್ನಪ್ಪಿದ್ದಾರೆ. ಸಹ ಪೈಲಟ್ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪೈಲಟ್ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆ ಕುರಿತು ಡಿಜಿಸಿಎ ವರದಿ ಕೇಳಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ಆರೋಪಿ ಶಂಕರ್ ಮಿಶ್ರಾ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ನಾಲ್ವರು ಗಗನಸಖಿಯರ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಇಂದು ಹೆಚ್ಚಿನ ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು. ಆರೋಪಿ ಪೊಲೀಸರಿಗೆ ನಕಲಿ ವಿಳಾಸ ನೀಡಿದ್ದಾನೆ. ಆರೋಪಿಯು ಮುಂಬೈನಲ್ಲಿರುವ ತನ್ನ ಸಂಬಂಧಿಕರ ಬಾಡಿಗೆ ವಿಳಾಸವನ್ನು ತನ್ನ ಸ್ವಂತ ವಿಳಾಸವೆಂದು ನೀಡಿದ್ದಾನೆ. ಆದರೆ ಅವರು ಲಕ್ನೋದಲ್ಲಿ ವಾಸಿಸುತ್ತಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ. ಇದೇ ವೇಳೆ ತನ್ನ ಮೇಲೆ ಹಲ್ಲೆ ನಡೆದ ನಂತರ ಸೀಟು ಬದಲಾಯಿಸಲು ಅರ್ಧ ಗಂಟೆ ಕಾಯಬೇಕಾಯಿತು ಎಂದು ದೂರುದಾರರು ತಿಳಿಸಿದ್ದಾರೆ. ಪ್ರಕರಣದ ಆರೋಪಿ ಶಂಕರ್ ಮಿಶ್ರಾ ಭಾರತದಲ್ಲಿ ಅಮೆರಿಕದ ಕಂಪನಿಯೊಂದರ ಉಪಾಧ್ಯಕ್ಷರಾಗಿದ್ದಾರೆ. ಮುಂಬೈ ತಲುಪಿದ ದೆಹಲಿ ಪೊಲೀಸರ ತಂಡಕ್ಕೆ ಆತನ ಪತ್ತೆಯೇ ಆಗಲಿಲ್ಲ. ಏರ್ ಇಂಡಿಯಾದ ನಾಲ್ವರು ಉದ್ಯೋಗಿಗಳ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಟಾಟಾ ಒಡೆತನದ ಏರ್ ಇಂಡಿಯಾದ ಪೈಲಟ್ ಮತ್ತು ಇತರ ಸಿಬ್ಬಂದಿಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿದೆ. ಎರಡು ವಾರಗಳಲ್ಲಿ…
ಸೌದಿ ಅರೇಬಿಯಾದಲ್ಲಿ ದೇಶೀಯ ಹಜ್ ಯಾತ್ರಿಕರ ಬುಕ್ಕಿಂಗ್ ಪ್ರಾರಂಭವಾಗಿದೆ. ಸೌದಿ ಹಜ್ ಉಮ್ರಾ ಸಚಿವಾಲಯವು 4 ಪ್ಯಾಕೇಜ್‌ಗಳನ್ನು ಪ್ರಕಟಿಸಿದೆ. ಪ್ಯಾಕೇಜ್‌ಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಸಚಿವಾಲಯ ಪ್ರಕಟಿಸಿದೆ. ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಈ ವರ್ಷ ಹಜ್ ನಿರ್ವಹಿಸುವ ದೇಶೀಯ ಯಾತ್ರಿಕರ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಹಜ್ ಮಾಡಲು ಉದ್ದೇಶಿಸಿರುವ ಸೌದಿ ಪ್ರಜೆಗಳು ಮತ್ತು ವಿದೇಶಿಯರು ಸಚಿವಾಲಯದ ವೆಬ್‌ಸೈಟ್ https://localhaj.haj.gov.sa/ ಮೂಲಕ ಅಥವಾ ನುಸುಕ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬಹುದು. ಸಚಿವಾಲಯವು 4 ಪ್ಯಾಕೇಜ್‌ಗಳನ್ನು ಸಿದ್ಧಪಡಿಸಿದೆ. ಮೊದಲ ಪ್ಯಾಕೇಜ್‌ನಲ್ಲಿ 10596 ರಿಂದ 11841 ರಿಯಾಲ್‌ಗಳನ್ನು ವಿಧಿಸಲಾಗುತ್ತದೆ. ಎರಡನೇ ಪ್ಯಾಕೇಜ್ ಬೆಲೆ 8092 ರಿಯಾಲ್‌ಗಳಿಂದ 8458 ರಿಯಾಲ್‌ಗಳವರೆಗೆ ಇರುತ್ತದೆ. ಮಿನಾ ಟವರ್‌ನಲ್ಲಿ ವಸತಿ ಸೌಕರ್ಯವಿರುವ ಮೂರನೇ ಪ್ಯಾಕೇಜ್‌ನ ಬೆಲೆ 13,150 ರಿಯಾಲ್‌ಗಳು. ಅಗ್ಗದ ನಾಲ್ಕನೇ ಪ್ಯಾಕೇಜ್‌ನ ಬೆಲೆ 3984 ರಿಯಾಲ್‌ಗಳು. ಇದು ವ್ಯಾಟ್ ಅನ್ನು ಒಳಗೊಂಡಿದೆ. ದರ ವ್ಯತ್ಯಾಸವನ್ನು ಅವಲಂಬಿಸಿ ಸೇವೆಗಳು ಮತ್ತು ಸೌಕರ್ಯಗಳು ಬದಲಾಗುತ್ತವೆ. ಅರ್ಜಿದಾರರ ಕನಿಷ್ಠ…
ತಮಿಳುನಾಡು :ಪ್ರಾಣೇಶ್ ಕಾರೈಕುಡಿಯ 15 ವರ್ಷದ ಬಾಲಕ. ಅವರು ಕಾಮನ್‌ವೆಲ್ತ್ ಚೆಸ್ ಟೂರ್ನಮೆಂಟ್‌ನಲ್ಲಿ ಬೆಳ್ಳಿ ಪದಕ, ಏಷ್ಯನ್ ಚೆಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಮತ್ತು 16 ವರ್ಷದೊಳಗಿನವರ ಅಂತರರಾಷ್ಟ್ರೀಯ ಚೆಸ್ ಸರಣಿಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಪ್ರಾಣೇಶ್ ಭಾರತದ 79ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ. ಅವರು ತಮಿಳುನಾಡಿನ 28 ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿಕ್ಕಬಳ್ಳಾಪುರದಲ್ಲಿ ಸದ್ಗುರು ಸನ್ನಿಧಿ, ಅಕಾ ಇಶಾ ಫೌಂಡೇಶನ್’ನಿಂದ ಸ್ಥಾಪಿಸಿಸುತ್ತಿರುವ ಆದಿ ಯೋಗಿ ಪ್ರತಿಮೆ ಹಾಗೂ ನಾಗ ಪ್ರತಿಷ್ಠೆ ಬೆಂಗಳೂರಿಗರಿಗೆ ಪ್ರಮುಖ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆದಿಯೋಗಿ ಪ್ರತಿಮೆ ಹಾಗೂ ನಾಗಪ್ರತಿಷ್ಠೆ ನಿಮಾರ್ಣಕ್ಕೆ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ನಂದಿ ಬೆಟ್ಟದ ಕಣಿವೆಯಲ್ಲಿ ನೂರಾರು ವಾಹನಗಳ ಓಡಾಟ ಕಂಡು ಬಂದಿದೆ. ಜನವರಿ 15 ರಂದು ಪ್ರತಿಮೆಯನ್ನು ಔಪಚಾರಿಕವಾಗಿ ಅನಾವರಣಗೊಳಿಸಿದ ನಂತರ ಇಲ್ಲಿಗೆ ಭೇಟಿ ನೀಡುವ ಸಂದರ್ಶಕರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ ಎಂದು ಕರೆದರೆ ಬೆಂಗಳೂರಿನಲ್ಲಿ ( ಚಿಕ್ಕಬಳ್ಳಾಪುರ ಭಾಗದಲ್ಲಿ) ಸದ್ಗುರು ಸನ್ನಿಧಿ ಎಂದು ಕರೆಯಲಾಗುತ್ತದೆ. ಈ ಎರಡೂ ಸ್ಥಳಗಳಿಗೆ ಹೋದವರು ಸಾಕಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಎರಡೂ ಸ್ಥಳಗಳ ಸುತ್ತಲೂ ಬೆಟ್ಟಗಳಿವೆ. ಸನ್ನಿಧಿಯು ಕಣಿವೆಯಲ್ಲಿ ನೆಲೆಗೊಂಡಿದ್ದು, ಪರ್ವತ ಶ್ರೇಣಿ ಪ್ರತಿಮೆ ಹಿನ್ನೆಲೆಯಾಗಿ ಕಾಣುತ್ತದೆ. ವಸತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತದೆ. ಈ ಯೋಜನೆಗೆ ಫೆಬ್ರವರಿ 2022 ರಲ್ಲಿ ಸದ್ಗುರು ಜಗ್ಗಿ ವಾಸುದೇವ್ ಭೂಮಿಪೂಜೆ ನೆರವೇರಿಸಿದ್ದರು. ನಾಗ ದೇಗುಲವನ್ನು…
ನಮ್ಮತುಮಕೂರು ಎಕ್ಸ್’ಕ್ಲೂಸಿವ್ ರಿಪೋರ್ಟ್: ಮೇಕೆ ಸಾಕಾಣಿಕೆಗಾಗಿ ಮುದ್ರಾ ಲೋನ್ ಗೆ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಸರಿಯಾದ ಸಮಯಕ್ಕೆ ಲೋನ್ ನ ಹಣವನ್ನು ಬಿಡುಗಡೆ ಮಾಡದೇ ಸತಾಯಿಸಿದ ಮಧುಗಿರಿ ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುರವರ ಬ್ಯಾಂಕ್ ಶಾಖೆಗೆ ತುಮಕೂರು ಗ್ರಾಹಕರ ನ್ಯಾಯಾಲಯವು ಬಿಸಿ ಮುಟ್ಟಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಪುರವರ ಬ್ರಾಂಚ್ ನ ಮುಂದೆ ಮಹಿಳೆಯೊಬ್ಬರು ತೀವ್ರವಾಗಿ ದುಃಖಿತರಾಗಿರುವುದನ್ನು ಕಂಡ ಅಡ್ವಕೇಟ್ ಎಂ.ಎಸ್.ಗಣೇಶ್ ಹಾಗೂ ಅಡ್ವಕೇಟ್ ಶಿವಕುಮಾರ್ ಮೇಷ್ಟ್ರುಮನೆ ಅವರು, ಮಹಿಳೆಯ ಬಳಿ ಏನು ಸಮಸ್ಯೆ ಎಂದು ವಿಚಾರಿಸಿದ್ದಾರೆ. ಈ ವೇಳೆ ತನ್ನ ಹೆಸರು ಲಕ್ಷ್ಮೀನರಸಮ್ಮ ಎಂದು ತಿಳಿಸಿದ್ದು, ತನಗೆ ಬ್ಯಾಂಕ್ ನಿಂದಾದ ಅನ್ಯಾಯವನ್ನು ವಿವರಿಸಿದ್ದಾರೆ… ಲಕ್ಷ್ಮೀನರಸಮ್ಮ ಮೇಕೆ ಸಾಕಾಣಿಕೆಗಾಗಿ 6 ಲಕ್ಷ ರೂಪಾಯಿಗಾಗಿ ಮುದ್ರಾ ಯೋಜನೆಯಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುರವರ ಬ್ರಾಂಚ್ ಗೆ ಅರ್ಜಿ ಸಲ್ಲಿಸುತ್ತಾರೆ. ಬ್ಯಾಂಕ್ ವೆರಿಫಿಕೇಷನ್ ಮಾಡಿ 3 ಲಕ್ಷ ಮಂಜೂರು ಮಾಡ್ತೀವಿ ಎಂದು ಹೇಳಿ ಮಂಜೂರು ಮಾಡ್ತಾರೆ.…
ಮಂಡ್ಯದಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ.ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಚಿಕ್ಕಕೊಪ್ಪಲಿನ ಗ್ರಾಮದವರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಿವರಾಮ್ ಎಂಬುವವರ ಜಮೀನಿನಲ್ಲಿ ಬೋನ್ ಇರಿಸಿದ್ದರು. ಇದೀಗ ಬೋನಿಗೆ ಚಿರತೆ ಬಿದ್ದಿದೆ. ಕಳೆದ 30 ದಿನಗಳಲ್ಲಿ ಮಂಡ್ಯದಲ್ಲಿ ಮೂರು ಚಿರತೆ ಸೆರೆಯಾಗಿವೆ. ಡಿಸೆಂಬರ್ 12 ರಂದು ಡಿಸೆಂಬರ್ 27 ರಂದು ಹಾಗೂ ಇಂದು ಚಿರತೆ ಸೆರೆಯಾಗಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬಾಗಲಕೋಟೆ: ಕ್ಯಾಂಟರ್ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡು, ಹಲವರಿಗೆ ಗಾಯಗಳಾದ ಘಟನೆ ಗದ್ದನಕೇರಿ ಸಮೀಪವಿರುವ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ನಡೆದಿದೆ. ಅರಕೇರಿ ಗ್ರಾಮದ ವಿದ್ಯಾರ್ಥಿ ರಾಹುಲ್ ಮೃತಪಟ್ಟ ದುರ್ದೈವಿ. ಬಸ್ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿದ್ದ ವೇಳೆ ಕ್ಯಾಂಟರ್ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಕ್ಯಾಂಟರ್ ಅತಿ ವೇಗದಿಂದಾಗಿ ಅದು ಹೋಗಿ ಬಸ್ಸಿಗೆ ಗುದ್ದಿದೆ. ಬಸ್ ನಿಯಂತ್ರಣ ತಪ್ಪಿ ಕೆಳಗಿನ ತಗ್ಗಿನ ಪ್ರದೇಶಕ್ಕೆ ಬಿದ್ದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬೀಳಗಿ ತಾಲೂಕಿನ ಅರಕೇರಿ ಗ್ರಾಮದ ರಾಹುಲ್ ಅಪಘಾತದ ರಭಸಕ್ಕೆ ದೇಹ ತುಂಡು ತುಂಡಾಗಿ ಬಿದ್ದಿರುವ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿತ್ತು. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು:ರಾಜ್ಯ ಸರ್ಕಾರ 216 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗಿದ್ದು, ಶಾಲೆಗಳು ಆರಂಭವಾದ ಎರಡು ಮೂರು ವರ್ಷಗಳ ಬಳಿಕ ಸರ್ಕಾರ ಉಪ ಪ್ರಾಂಶುಪಾಲರ ಹುದ್ದೆಯನ್ನು ಸೃಜಿಸಿ ಆದೇಶ ಹೊರಡಿಸಿದೆ. 276 ಶಾಲೆಗಳಿಗೆ ಈಗಾಗಲೇ 156 ಉಪ ಪ್ರಾಂಶುಪಾಲರ ಸಮಾನಾಂತರ ಹುದ್ದೆಗಳು ಮಂಜೂರಾಗಿವೆ. ಹೊಸದಾಗಿ 120 ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದ್ದು, ಈ ಹಿಂದೆ ಇದ್ದ 279 ಹುದ್ದೆಗಳನ್ನು ರದ್ದು ಮಾಡಿ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. 500ಕ್ಕೂ ಕಡಿಮೆ ದಾಖಲಾತಿ ಹೊಂದಿದ 35 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮುಖ್ಯೋಪಾಧ್ಯಾಯ ಉಪ ಪ್ರಾಂಶುಪಾಲರ ವೃಂದದ ಹುದ್ದೆಗಳನ್ನು ಸ್ಥಳಾಂತರಿಸುವ ಷರತ್ತಿಗೆ ಒಳಪಡಿಸಿ ಸರ್ಕಾರದಿಂದ ಮಂಜೂರಾತಿ ನೀಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy