Author: admin

ತಿಪಟೂರು: ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಇಂದು ನಡೆಯುತ್ತಿದ್ದು, ಇಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ರವರೆಗೆ ನಡೆಯಲಿದೆ. ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಆರು ಮಂದಿ ಮತ್ತು ರಾಜ್ಯಾಧ್ಯಕ್ಷರ ಸ್ಥಾನಕ್ಕೆ 21 ಮಂದಿ ಸ್ಪರ್ಧಿಸಲಿದ್ದಾರೆ. ಜಿಲ್ಲಾ ಅಧ್ಯಕ್ಷರ ಸ್ಥಾನದ ಮತಪತ್ರ ಗುಲಾಬಿ ಬಣ್ಣ ಮತ್ತು ರಾಜ್ಯಾಧ್ಯಕ್ಷರ ಸ್ಥಾನದ  ಬಿಳಿ ಬಣ್ಣದ ಮತಪತ್ರವಾಗಿದೆ. ಕರ್ನಾಟಕ ಸಾಹಿತ್ಯ ಪರಿಷತ್ತು ಚುನಾಯಿತ ಅಭ್ಯರ್ಥಿಗಳು ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಿದ್ದಾರೆ. ಇಂದು ಸಂಜೆ 6 ಗಂಟೆಯ ಒಳಗಡೆ ಚುನಾಯಿತ ಅಭ್ಯರ್ಥಿಗಳ ಗೆಲುವಿನ ಮತ ಎಣಿಕೆ ನಡೆಯುತ್ತದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ ಇಂದು ಬೆಳಗ್ಗೆ 8 ಗಂಟೆಯಿಂದಲೇ ತಿಪಟೂರಿನಲ್ಲಿ ಸಹ ಮತಗಟ್ಟೆಗಳ ಮುಂದೆ ಮತದಾರರು ಮತ ಹಾಕಲು ಬರುತ್ತಿದ್ದಾರೆ. ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ವರದಿ: ಮಂಜು ಗುರಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಪಾವಗಡ: ಪಾವಗಡ ರೊಪ್ಪ ಗ್ರಾಮ ಪಂಚಾಯಿತಿ ಹಾಗೂ ಪಾವಗಡ ಪುರಸಭೆ ವ್ಯಾಪ್ತಿಯ ಮಧ್ಯ ಭಾಗದಲ್ಲಿ ಇರುವಂತ ಸುಪ್ರಸಿದ್ದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ಹುಲಿಬೆಟ್ಟ ತಾಂಡಾಕ್ಕೆ ಹೋಗುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಈ ರಸ್ತೆ ದುರಸ್ತಿ ಮಾಡುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಒತ್ತಾಯಿಸಿದ್ದಾರೆ. ರಸ್ತೆಯ ಎರಡು ಎಕ್ಕಲಗಳಲ್ಲಿ ಸೀಮೆ ಜಾಲಿ ಗಿಡ ಬೆಳೆದು ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ತೆರಳಲು ತೀವ್ರ ಸಂಕಷ್ಟ ಉಂಟಾಗಿದೆ. ರಸ್ತೆಯ ನಡುವೆ ಗುಂಡಿಗಳು ಏರ್ಪಟ್ಟು ಮಳೆಯ ನೀರು ನಿಂತು ಅವ್ಯವಸ್ಥೆಯ ಆಗರದಂತೆ ಕಂಡು ಬಂದಿದೆ. ಈ ರಸ್ತೆಯಲ್ಲಿರುವ ಗುಂಡಿಗಳಿಂದ ವಾಹನ ಸವಾರರು ಸಂಕಷ್ಟಕ್ಕೀಡಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು. ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿರುವಂತಹ ಘಟನೆಗಳು ಕೂಡ ನಡೆದಿವೆ. ಹೀಗಾಗಿ ದೊಡ್ಡ ಅನಾಹುತಗಳು ನಡೆಯುವ ಮುನ್ನವೇ ಸಂಬಂಧ ಪಟ್ಟವರು ಎಚ್ಚೆತ್ತುಕೊಂಡು  ರಸ್ತೆಯನ್ನು ಸರಿಪಡಿಸಿ ಹಾಗೂ ರಸ್ತೆಯ ಎರಡು ಭಾಗದಲ್ಲಿ ಇರುವಂತಹ ಸೀಮೆ ಜಾಲಿ ಗಿಡಗಳನ್ನು…

Read More

ತಿಪಟೂರು: ನಗರದ ಮಾರನಗೆರೆ ಸಮೀಪ ಹಿಂದಿನ ರೈಲ್ವೆ ಗೇಟ್ ಮುಚ್ಚಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ ರಾತ್ರಿ ವೇಳೆಯಲ್ಲಿ ಈ ಮಾರ್ಗವಾಗಿ ತೆರಳುವ ಸಾರ್ವಜನಿಕರು ಮತ್ತು ವಾಹನ ಸವಾರರು ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಸಂಜೆಯಾಗುತ್ತಿದ್ದಂತೆ ಈ ಪ್ರದೇಶದಲ್ಲಿ ಕತ್ತಲು ಆವರಿಸುತ್ತಿದ್ದು, ಹೀಗಾಗಿ ಇಲ್ಲಿಂದ ತೆರಳುತ್ತಿರುವ ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೀಡಾಗುವಂತಾಗಿದೆ. ಹೀಗಾಗಿ ಅಂಡರ್ ಪಾಸ್ ತೆರಳುವ ಎರಡು ಕಡೆಗಳಲ್ಲಿ ವಿದ್ಯುತ್ ದೀಪ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರ ಸಂಬಂಧಪಟ್ಟವರು ಈ ಬಗ್ಗೆ ತಕ್ಷಣವೇ ಗಮನ ಹರಿಸಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಚಿಕ್ಕಬಳ್ಳಾಪುರ: ಜಿಲ್ಲೆy ಗೌರಿಬಿದನೂರು ತಾಲೂಕಿನ ಅಲ್ಕಾಪುರದ ಬಳಿ ಹರಿಯುವ ಉತ್ತರ ಪಿನಾಕಿನಿ ನೀರಿನಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ರಾಯರೇಖಲಹಳ್ಳಿ ನಿವಾಸಿ ಕುಂಬಿ (55) ಕೊಚ್ಚಿ ಹೋದ ವ್ಯಕ್ತಿ. ಧಾರಾಕಾರ ಮಳೆಯಿಂದ ನದಿ ತುಂಬಿ ಹರಿಯುತ್ತಿರುವಾಗ ರಸ್ತೆ ದಾಟಲು ಹೋಗಿ ಕುಂಬಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಚಿಕ್ಕಬಳ್ಲಾಪುರ ನಗರಕ್ಕೆ ಜಲಕಂಟಕ ಎದುರಾಗಿದೆ. ಕೆರೆಯ ನೀರು ನಗರದ ಬಿಬಿ ರಸ್ತೆಯ ಮೇಲೆ ಹರಿಯುತ್ತಿದ್ದು ಮುಂಜಾಗೃತಾ ಕ್ರಮವಾಗಿ ಚಿಕ್ಕಬಳ್ಳಾಪುರ ನಗರಸಭೆ ಬಿಬಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣ ವ್ಯಾಪ್ತಿಯ ಗುಂಡುತೋಪು ಒಂದರಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದು, ಅವರಿಗೆ ತಾತ್ಕಾಲಿಕ ಪುನರ್ವಸತಿ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಭೂಮಿ ವಸತಿ ಹೋರಾಟ ಸಮಿತಿ ತುಮಕೂರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದು, ಈ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿದೆ. ಸಮಿತಿಯ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ, ತಕ್ಷಣವೇ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಗಂಜಿಕೇಂದ್ರ ತೆರೆಯಲು ಸೂಚನೆ ನೀಡಿದ್ದು, ಇದರನ್ವಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಚಿ.ನಾ.ಹಳ್ಳಿ ತಹಸಿಲ್ದಾರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ತುರ್ತು ಕ್ರಮ ವಹಿಸಿ ಚಿ.ನಾ.ಹಳ್ಳಿ ಪಟ್ಟಣದ ಶ್ರೀಶಕ್ತಿ ಭವನದಲ್ಲಿ ಈ ಕುಟುಂಬಗಳಿಗೆ ಗಂಜಿಕೇಂದ್ರ ತೆರೆದು, ಇಂದಿರಾ ಕ್ಯಾಂಟಿನ್ ನಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಸಮಿತಿ ಮುಖಂಡರು ತಿಳಿಸಿದ್ದಾರೆ. ಚಿಕ್ಕನಾಯಕನಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 12 ದಿನಗಳಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಅಲೆಮಾರಿಗಳ ಗುಡಿಸಲಿಗೆ ನೀರು ನುಗ್ಗಿತ್ತು. ಇವರ ಸಂಕಷ್ಟವನ್ನು ಮನಗಂಡ…

Read More

ತಿಪಟೂರು: ನಿರಂತರ ಮಳೆಯ ಹಿನ್ನೆಲೆಯಲ್ಲಿ ನಗರದ ಹಳೆ ಪಾಳ್ಯ ಸರ್ಕಲ್ ಬಳಿಯಲ್ಲಿ ಕೃಷ್ಣಮೂರ್ತಿ ಎಂಬವರ ಮನೆ ಕುಸಿದಿದ್ದು, ಪರಿಣಾಮವಾಗಿ ಮನೆಯೊಳಗಿದ್ದ ಆಹಾರ ಸಾಮಗ್ರಿಗಳು ಸೇರಿದಂತೆ ವಿವಿಧ ವಸ್ತುಗಳು ನೀರುಪಾಲಾಗಿ ಅವರು ಸಂಕಷ್ಟಕ್ಕೀಡಾಗಿದ್ದಾರೆ. ಕೃಷ್ಣಮೂರ್ತಿ ಹಾಗೂ ಅವರ ಪತ್ನಿ ಹಳೆಯ ಕಾಲದ ಮನೆಯಲ್ಲಿ ಜೀವಿಸಿಸುತ್ತಿದ್ದರು. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದೆ. ಇದರಿಂದಾಗಿ ಅವರು ಸಂಕಷ್ಟಕ್ಕೀಡಾಗಿದ್ದರು. ಘಟನೆಯ ಮಾಹಿತಿ ತಿಳಿದು ಅಸಂಘಟಿತ ಕಾರ್ಮಿಕರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ನೊಂದ ಕುಟುಂಬಕ್ಕೆ ಸಮಾಧಾನ ಹೇಳಿದ್ದಾರೆ. ಜೊತೆಗೆ ಧನ ಸಹಾಯ ಮಾಡುವ ಮೂಲಕ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ. ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಸಿರಾ: ನಗರದ ಭಾರತ್ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ಸಂಘದ SMS ಪಾಸ್ ಬುಕ್ ವಿತರಣೆ ಕಾರ್ಯಕ್ರಮವನ್ನು ಶಾಸಕರಾದ ಡಾ.ಸಿ.ಎಂ.ರಾಜೇಶ್ ಅವರು ಇಂದು ಉದ್ಘಾಟಿಸಿದರು. ಇದೇ ವೇಳೆ ಅವರು, ಬ್ಯಾಂಕ್ ವತಿಯಿಂದ ಕೋವಿಡ್ ವಾರಿಯರ್ಸ್ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷರು ಸದಸ್ಯರು ಹಾಗೂ ಬಿ.ಜೆ.ಪಿ. ಗ್ರಾಮಾಂತರ ಅಧ್ಯಕ್ಷರು ರಂಗಸ್ವಾಮಿ ಯವರು, ಮದ್ದೇವಳ್ಳಿ ರಾಮಕೃಷ್ಣ ರವರು, ಡಿ.ಎಂ.ಗೌಡ ರವರು ಸದ್ದಾಂ, ಮುಬಾರಕ್, ಮುಂತಾದವರು ಹಾಜರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700  

Read More

ತುಮಕೂರು: ಜಿಲ್ಲೆಯಾದ್ಯಂತ ಬಿಡದೇ ಮಳೆ ಸುರಿಯುತ್ತಿದ್ದು, ಇದೇ ಸಂದರ್ಭದಲ್ಲಿತುಮಕೂರಿನ ಸರ್ಕಾರಿ ಚಿತ್ರಕಲಾ ಕಾಲೇಜು ಜಲಾವೃತವಾಗಿದ್ದು, ಮೊದಲೇ ಸರ್ಕಾರದ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಗೆ ತಲುಪಿರುವ ಕಾಲೇಜಿನೊಳಗೆ ಮಳೆ ನೀರು ನುಗ್ಗಿ ಆತಂಕ ಸೃಷ್ಟಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೇವಲ ಎರಡೇ ಸರ್ಕಾರಿ ಚಿತ್ರಕಲಾ ಕಾಲೇಜುಗಳಿದ್ದು, ಇದರಲ್ಲಿ ತುಮಕೂರಿನ ಸರ್ಕಾರಿ ಚಿತ್ರಕಲಾ ಕಾಲೇಜು ಕೂಡ ಒಂದಾಗಿದೆ. ಈ ಕಾಲೇಜಿಗೆ ಕಳೆದ 27 ವರ್ಷಗಳಿಂದ ಮಾತೃ ಸಂಸ್ಥೆಯಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯಿಂದ ಸುಸಜ್ಜಿತ ಕಟ್ಟಡ ಮತ್ತು ನಿವೇಶನ ನೀಡದೇ, ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಸೈಕಲ್ ಸ್ಟ್ಯಾಂಡ್ ಕಟ್ಟಡವನ್ನು ಒದಗಿಸಿದೆ. ಶಿಥಿಲವಾದ ಕಟ್ಟಡದ ಹಂಚುಗಳು ಒಡೆದಿರುವುದರಿಂದ ಕಟ್ಟಡದ ಎಲ್ಲ ತರಗತಿಗಳು ಪ್ರಾಚಾರ್ಯರ ಕೊಠಡಿ ಸೇರಿದಂತೆ ಕಾಲೇಜಿನೊಳಗೆ ನೀರು ನುಗ್ಗಿದ್ದು, ಕಾಲೇಜಿನ ಹೊರ ಆವರಣ ಜಲಾವೃತವಾಗಿದೆ. ಈ ಕಾಲೇಜು ಸರ್ಕಾರಿ ನಿವೇಶನದಲ್ಲಿದ್ದರೂಕಾಲೇಜನ್ನು ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ.ಚಿತ್ರ ಕಲಾ ಪದವಿ ಶಿಕ್ಷಣಕ್ಕೆ ಇಷ್ಟೊಂದು ನಿರ್ಲಕ್ಷ್ಯ ತೋರುತ್ತಿರುವುದರಕ್ಕೆ ಚಿತ್ರ ಕಲಾ ಕಾಲೇಜಿನಹಳೆಯ ವಿದ್ಯಾರ್ಥಿಗಳ…

Read More

ಬೆಂಗಳೂರು: ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಪುತ್ರ ಮನುರಂಜನ್ ರವಿಚಂದ್ರನ್ ಅವರ ನಟನೆಯ ‘ಮುಗಿಲ್ ಪೇಟೆ’ ಚಿತ್ರಕ್ಕೆ ಚಿತ್ರ ಪ್ರೇಕ್ಷಕ ಫಿದಾ ಆಗಿದ್ದು, ಸಿನಿಮಾ ಸಕ್ಸಸ್ ಆಗಿದೆ ಎಂದು ಚಿತ್ರ ವೀಕ್ಷಿಸಿದ ಸಿನಿಪ್ರಿಯರು ಹೇಳಿದ್ದು, ಈ ಚಿತ್ರ 100 ಡೇಸ್ ಓಡುವುದರಲ್ಲಿ ಅನುಮಾನವಿಲ್ಲ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ನವಿರಾದ ಪ್ರೇಮ ಕಥೆ, ಕಚಗುಳಿ ಇಡುವ ಹಾಸ್ಯ ದೃಶ್ಯಗಳು, ಪ್ರೀತಿ, ಯುದ್ಧ ಹೀಗೆ ಕಥೆಯು ಸರಾಗವಾಗಿ ಸಾಗುತ್ತಲೇ ಇರುತ್ತದೆ. ಎಲ್ಲಿ ಕೂಡ ಪ್ರೇಕ್ಷಕನಿಗೆ ಬೋರ್ ಹೊಡೆಸುವುದಿಲ್ಲ ಎಂದು ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬರುತ್ತಿದ್ದಂತೆಯೇ ಸಿನಿ ಪ್ರಿಯರು ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಚಿತ್ರದಲ್ಲಿ ಬಹುದೊಡ್ಡ ತಾರಾಗಣವೇ ಇದ್ದು, ನಟಿ ತಾರಾ, ಅವಿನಾಶ್, ಸಾಧುಕೋಕಿಲಾ, ರಂಗಾಯಣ ರಘು, ರಿಷಿ ಹಾಗೂ ಚಿತ್ರದ ನಾಯಕಿ ಕಯಾದು ಚಿತ್ರಕ್ಕೆ ಬಲ ತುಂಬಿದ್ದಾರೆ. ಮನುರಂಜನ್ ಅವರ ಅಭಿನಯದ ಬಗ್ಗೆ ನೋ ಕಮೆಂಟ್ಸ್ ಎಂದೇ ಹೇಳಬಹುದು. ಮನುರಂಜನ್ ಅವರನ್ನು ನೋಡಿದರೆ, ರವಿ ಚಂದ್ರನ್ ತಮ್ಮ ಯವ್ವನದಲ್ಲಿ ಹೇಗೆ…

Read More

ಮಧುಗಿರಿ: ದೊಡ್ಡೇರಿ ಹೋಬಳಿ ದೊಡ್ಡೇರಿ ಈರೆಕೆರೆ ಸುಮಾರು ಹತ್ತು ವರ್ಷಗಳಿಂದ ಬರಿದಾಗಿದ್ದು, ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಕೆರೆ ಭರ್ತಿಯಾಗಿವೆ ಹರಿಯುತ್ತಿವೆ ಈ ಹಿನ್ನೆಲೆಯಲ್ಲಿ ಇಂದು ಕೆರೆ ವೀಕ್ಷಿಸಲು ಆಗಮಿಸಿದ್ದ ಯುವ ಮುಖಂಡ ಚೇತನ್ ಅವರು ಹರ್ಷ ವ್ಯಕ್ತಪಡಿಸಿದರು. ಮಳೆಯ ಹಿನ್ನೆಲೆಯಲ್ಲಿ ರಂಗಪುರ ಕೆರೆ, ಕವಣದಾಲಕೆರೆ, ತಿಮ್ಮಾಲಾಪುರ ಕೆರೆ, ರಂಗಪುರ ಕೆರೆ ತುಂಬಿ ನೀರು ಹರಿಯುತ್ತಿದೆ. ಕೆರೆಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲಕರವಾಗಲಿದೆ ಎಂದು ಅವರು ಹೇಳಿದರು. ವಿಡಿಯೋ ನೋಡಿ:  ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More