Author: admin

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಗುತ್ತಿಗೆ ಕಾಮಗಾರಿಗಳ ಮೊತ್ತದ ಶೇಕಡ 40ರಷ್ಟು ಲಂಚದ ರೂಪದಲ್ಲೇ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೇಬು ಸೇರುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸುವ ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ನಗರಾಭಿವೃದ್ಧಿ, ಆರೋಗ್ಯ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಂಜೂರಾದ ಅನುದಾನದ ಅರ್ಧದಷ್ಟು ಮೊತ್ತ ಲಂಚದ ರೂಪದಲ್ಲೇ ಕೊಳ್ಳೆಯಾಗುತ್ತಿದೆ ಎಂದು ಸಂಘಟನೆ ದೂರಿನಲ್ಲಿ ಆರೋಪಿಸಿದೆ. ಅನುದಾನ ಮಂಜೂರಾತಿಯಿಂದ ಬಿಲ್‌ ಪಾವತಿಯವರೆಗೆ ಲಂಚವೇಎಲ್ಲವನ್ನೂ ನಿರ್ಧರಿಸುತ್ತಿದ್ದು, ‘ಗುತ್ತಿಗೆದಾರರ ಬಳಿ ಹಣ ಸೃಷ್ಟಿಸುವ ಮಂತ್ರದಂಡವಿದೆ ಎಂದು ಭಾವಿಸಿ ಸುಲಿಗೆ ಮಾಡಲಾಗುತ್ತಿದೆ’ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ರಾಜ್ಯದಲ್ಲಿ ಸಿವಿಲ್‌, ಎಲೆಕ್ಟ್ರಿಕ್‌ ಸೇರಿದಂತೆ ವಿವಿಧ ಬಗೆಯ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು ಸದಸ್ಯರಾಗಿರುವ 52 ಅಸೋಸಿಯೇಷನ್‌ ಗಳು ರಾಜ್ಯ ಗುತ್ತಿಗೆದಾರರ…

Read More

ಪಾವಗಡ: ಗುರುವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿದು 26 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಶ್ರೀರಂಗಪುರ ತಾಂಡದಲ್ಲಿದಲ್ಲಿ ನಡೆದಿದೆ. ಕಷ್ಟಪಟ್ಟು ಬೆಳೆಸಿದ್ದ 26 ಕುರಿಗಳು ಅನ್ಯಾಯವಾಗಿ ಮೃತಪಟ್ಟಿದ್ದು, ಇದರಿಂದ ಕುರಿಗಳ ಮಾಲಿಕರಾಗಿರುವ ಗೋವಿಂದ ನಾಯ್ಕ್ ಅವರಿಗೆ ಸುಮಾರು 3 ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದ್ದು, ಅವರು ಕಂಗಾಲಾಗಿದ್ದಾರೆ.  ಇನ್ನೂ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ತಹಶಿಲ್ದಾರ್ ನಾಗರಾಜ್ ಭೇಟಿ ನೀಡಿದ್ದು, ರೈತಗೆ ಆಗಿರುವ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಎಲ್ಲ ರೀತಿಯಲ್ಲಿಯೂ ಕ್ರಮಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು; ಕಟ್ಟೆಗೆ ಕಾಲು ಜಾರಿ ಬಿದ್ದು ಸಹೋದರಿಯರಿಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ವರಣಸಂದ್ರದಲ್ಲಿ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಮೃತರನ್ನು ಕವನ (7), ಯೋಕ್ಷಿತಾ (3)  ಎಂದು ಗುರುತಿಸಲಾಗಿದೆ. ತಾಯಿ ಮಂಜುಳ ಕಟ್ಟೆ ಯಲ್ಲಿ ಬಟ್ಟೆ ತೊಳೆಯುವ ವೇಳೆ ಸ್ಥಳಕ್ಕೆ ಹೋಗಿದ್ದ ಕವನ, ಯೋಕ್ಷಿತಾ ಆಟವಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಕಟ್ಟೆಯೊಳಗೆ ಬಿದ್ದಿದ್ದಾರೆ. ಈ ವೇಳೆ ಮಕ್ಕಳನ್ನು ಕಾಪಾಡಲು ತಾಯಿ ಮಂಜುಳಾ ಕೂಡ ಕಟ್ಟೆಗೆ  ಹಾರಿದ್ದಾರೆ. ಮೂವರು ಕಟ್ಟೆಗೆ  ಬಿದ್ದಿರುವುದನ್ನು ಕಂಡು ಸ್ಥಳೀಯರು ಕೂಡಲೇ  ಮೂವರನ್ನು ರಕ್ಷಿಸಲು ಯತ್ನಿಸಿದ್ಧಾರೆ.   ಆದರೆ ತಾಯಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ದುರಾದೃಷ್ಟವಶಾತ್ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ದೆಹಲಿ: ವಾಹನದ ದಾಖಲೆ ತೋರಿಸು ಎಂದು ಕೇಳಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್​ ಪೊಲೀಸ್​ ಸಹಾಯಕ ಸಬ್​ ಇನ್​ಸ್ಪೆಕ್ಟರ್​ ಮೇಲೆಯೇ ಹಲ್ಲೆ ನಡೆಸಿದ ಘಟನೆಯು ರೋಹಿಣಿ ಎಂಬಲ್ಲಿ ನಡೆದಿದೆ. ಪಿಯೂಷ್ ಎಂಬಾತನ ವಾಹನವನ್ನು ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ವಾಹನದ ದಾಖಲೆಯನ್ನು ತೋರಿಸುವಂತೆ ಕೇಳಿದ್ದಾರೆ. ಆದರೆ ಆರೋಪಿಯು ವಾಹನದ ದಾಖಲೆಯನ್ನು ತೋರಿಸಲು ನಿರಾಕರಿಸಿದ್ದು ಮಾತ್ರವಲ್ಲದೇ, ಟ್ರಾಫಿಕ್ ಪೊಲೀಸ್ ಜೊತೆ ವಾದಕ್ಕೆ ಇಳಿದಿದ್ದಾನೆ. ವಾದ ತಾರಕಕ್ಕೆ ಏರುತ್ತಿದ್ದಂತೆಯೇ ಆರೋಪಿ ಪಿಯೂಷ್​ ಎಎಸ್​ಐಯ  ಕೆನ್ನೆಗೆ ಬಾರಿಸಿ, ಅವರ ಬೆರಳನ್ನು ಕಚ್ಚಿದ್ದಾನೆ ಎಂದು ತಿಳಿದು ಬಂದಿದೆ. ಬುಧವಾರ ಈ ಘಟನೆ ಸಂಭವಿಸಿದ್ದು  30 ವರ್ಷದ  ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ನವದೆಹಲಿ: ರೈತರ ನಿರಂತರ ಹೋರಾಟದ ಬಳಿಕ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಾಗಿ ಕೊನೆಗೂ ಪ್ರಧಾನಿ ಮೋದಿ ಘೋಷಿಸಿದ್ದು, ರೈತರ ತೀವ್ರ ಹೋರಾಟಕ್ಕೆ ಸರ್ಕಾರ ಅನಿವಾರ್ಯವಾಗಿ ತಲೆ ಬಾಗಿದೆ. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇವೆ.ಇದೇ ತಿಂಗಳು ಸಂಸತ್ತಿನಲ್ಲಿ ಈ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇನ್ನೂ ಕೃಷಿ ಕಾಯ್ದೆಗಳ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲುಕೇಂದ್ರ ಹಾಗೂ ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರ ಸಮಿತಿಯನ್ನು ರಚಿಸುತ್ತೇವೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ತಿಳಿಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ದೊಡ್ಡೇರಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ದೊಡ್ಡೇರಿ ಹೋಬಳಿ ಬಡವನಹಳ್ಳಿಯ ಸುವರ್ಣ ಮುಖಿನದಿ ತುಂಬಿ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ನದಿಯನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸಿದ್ದಾರೆ.  ನದಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಕೆರೆಗಳಿಗೂ ನೀರು ತುಂಬಿದ್ದು, ಸುಮಾರು 15 ವರ್ಷಗಳಿಂದ ಬತ್ತಿ ಹೋಗಿದ್ದ ಕೆರೆಗಳು ತುಂಬಿದ್ದು, ಇದರಿಂದಾಗಿ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಈರೆಕೆರೆ, ಲಕ್ಷ್ಮಿ ಪುರಕೆರೆ, ಗುಬಲಗುಟ್ಟೆಕೆರೆ, ರಂಗಾಪುರ ಕೆರೆ, ನಾಗೇನಹಳ್ಳಿಕೆರೆ ಮೊದಲಾದ ಕೆರೆಗಳು ಭರ್ತಿಯಾಗಿವೆ.  ಇನ್ನೂ ಬಗರ್ ಹುಕ್ಕು ಸದಸ್ಯರಾದ ಪ್ರಸನ್ನಕುಮಾರ್,  ಜಯಕುಮಾರ್, ಮಂಜುನಾಥ, ಮಾರುತಿ, ಚೇತನ್, ಉಮೇಶ್, ಜಯರಾಮಯ್ಯ, ಡಿ.ಟಿ.ಮಾರಣ್ಣ ದೊಡ್ಡೇರಿ, ಮಹಾಲಿಂಗಯ್ಯ, ಶಿವಲಿಂಗಯ್ಯ, ನಾಗೇನಹಳ್ಳಿ ಅಶೋಕ್ ಮತ್ತಿತರರು ಭೇಟಿ ನೀಡಿ ಹರ್ಷ ವ್ಯಕ್ತಪಡಿಸಿದರು.  ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ  ಇಂದು ಹಾಗೂ ನಾಳೆ  ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದ್ದು,  ನವೆಂಬರ್ 19 ಮತ್ತು 20ರಂದು ಜಿಲ್ಲೆಯಾದ್ಯಂತ ಅಂಗನವಾಡಿ/ಶಿಶುವಿಹಾರ ಹಾಗೂ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಕಿರಿಯ, ಹಿರಿಯ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಆದೇಶಿಸಲಾಗಿದೆ. ರಜೆ ಘೋಷಿಸಲಾದ ದಿನಗಳ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಳ್ಳುವಂತೆ ಇದೇ ಸಂದರ್ಭದಲ್ಲಿ ಸೂಚಿಸಲಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಪಾವಗಡ: ಪಾವಗಡ ಪಟ್ಟಣದ 23ನೇ ವಾರ್ಡಿನ ಕನ ಮನಚರವು ವಾಸಿಯಾದ ಮುಸ್ಲಿಂ ಸಮುದಾಯದ ಬಾಬಾ ಪಕೃದ್ದಿನ್ ಎಂಬುವವರು ರಸ್ತೆ ಬದಿಗಳಲ್ಲಿ, ಶುಭಕಾರ್ಯಗಳ ಕಲ್ಯಾಣ ಮಂಟಪಗಳ ಮುಂಭಾಗ ಬಲೂನ್ ವ್ಯಾಪಾರ ನಡೆಸುತ್ತಿದ್ದು, ಆಕಸ್ಮಿಕವಾಗಿ ಕಾಲಿಗೆ ಪೆಟ್ಟು ಬಿದ್ದು ಕಾಲಿನ ಮೂಳೆ ಮುರಿತಗೊಂಡಿದ್ದು,  ಪತ್ನಿ ಹಾಗೂ ಮೂರು ಚಿಕ್ಕ ಮಕ್ಕಳೊಂದಿಗೆ ಮನೆಯಲ್ಲಿ ಕಷ್ಟ ಅನುಭವಿಸುತ್ತಿದ್ದರು. ಈ ಮಾಹಿತಿ ಪಡೆದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಇಂದು ಸ್ಥಳಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆಆತ್ಮ ಸ್ಟೈರ್ಯ ತುಂಬಿ ಶಸ್ತ್ರ ಚಿಕೆತ್ಸೆಗೆ ಸಹಾಯ ಹಸ್ತ ನೀಡಲಾಯಿತು. ಸದರಿ ಕುಟುಂಬದ ನಾಲ್ಕು ವರ್ಷದ ಬಾಲಕ ಮೂರ್ಚೆ ರೋಗ ಹಾಗೂ ಅಪೌಷ್ಟಿಕ ದಿಂದ ನರಳುತ್ತಿದ್ದ ಕಣ್ಣಾರೆ ಕಂಡ ಹೆಲ್ಪ್ ಸೊಸೈಟಿ ತಂಡ ಬಾಲಕನ ಆರೋಗ್ಯ ವೃದ್ಧಿಗಾಗಿ ಪೌಷ್ಟಿಕಂಶ ಹೆಚ್ಚಿಸುವ ಔಷಧಿಗಳನ್ನು ನೀಡುವುದಾಗಿ ಹಾಗೂ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಬ್ಯಾಗ್, ಹಾಗೂ ನೋಟ್ ಬುಕ್, ಪರಿಕರಗಳನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು. ನೆರವು ಪಡೆದ ಬಾಬಾ ಪಕೃದ್ದಿನ್ ಮಾತನಾಡಿ,…

Read More

ತಿಪಟೂರು: ಗುಬ್ಬಿ ತಾಲ್ಲೂಕು ‘ತುಮಕೂರು ಮಿತ್ರ’ ದಿನಪತ್ರಿಕೆ ವರದಿಗಾರ ರಮೇಶ್ ಗೌಡರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಕೃತ್ಯ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಿಪಟೂರು ತಾಲೂಕು ಶಾಖೆಯಿಂದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ವಸ್ತುನಿಷ್ಠ ವರದಿ ನೀಡುವ ಪತ್ರಕರ್ತರ ಮೇಲೆ ಹಲ್ಲೆ ದೌರ್ಜನ್ಯ ಪ್ರಕರಣಗಳು ನಿರತವಾಗಿ ನಡೆಯುತ್ತಿವೆ. ಸರ್ಕಾರ ಪತ್ರಕರ್ತರ ರಕ್ಷಣೆಗೆ ಕಠಿಣ ಕಾನೂನು ರೂಪಿಸಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ ಎಂದು ಇದೇ ವೇಳೆ ಒತ್ತಾಯಿಸಲಾಯಿತು ವಸ್ತುನಿಷ್ಠ ಪ್ರಾಮಾಣಿಕ ಮಾಧ್ಯಮರಂಗ ಉಳಿಯಬೇಕಾದರೆ ಸರ್ಕಾರ ಪತ್ರಕರ್ತರಿಗೆ ಸೂಕ್ತ ಕಾನೂನು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭ ತಾಲೂಕು ಅಧ್ಯಕ್ಷ  ಬಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ  ಮಂಜುನಾಥ ಹಾಲ್ಕುರಿಕೆ  ನಿರ್ದೇಶಕರಾದ ರಾಜಣ್ಣ ಉಪಸ್ಥಿತರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಬೆಂಗಳೂರು: ಎಐಸಿಸಿ ಶಿಸ್ತು ಸಮಿತಿಯ ಸದಸ್ಯರಾಗಿ ಮಾಜಿ ಉಪ ಮುಖ್ಯಮಂತ್ರಿ ಕಾಂಗ್ರೆಸ್ ನ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ್ ಅವರನ್ನು ನೇಮಕ ಮಾಡಲಾಗಿದೆ. ಪಕ್ಷದ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ ಅವರು, ಎಐಸಿಸಿ ಶಿಸ್ತು ಸಮಿತಿಯ ಸದಸ್ಯರಾಗಿ ಡಾ.ಜಿ.ಪರಮೇಶ್ವರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಎ.ಕೆ.ಆಂಟೋನಿ ನೇಮಕಗೊಂಡಿದ್ದಾರೆ. ಜಿ.ಪರಮೇಶ್ವರ್ , ಅಂಬಿಕಾ ಸೋನಿ, ತರೀಖ್ ಅನ್ವರ್, ಜೈ ಪ್ರಕಾಶ್ ಅಗ್ಗಾರ್ ವಾಲ್ ಶಿಸ್ತು ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More