Author: admin

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ ಕಳೆದ ಶನಿವಾರ ಸಂಜೆ ಪೇಂಟ್‌ಟೌನ್‌ನ ಪೂರ್ವದ ಲೇಕ್ ಮನ್ರೋನಲ್ಲಿ ಅವರು ನಾಪತ್ತೆಯಾಗಿದ್ದಾರೆ. ಮಂಗಳವಾರ ಅವರ ಮೃತದೇಹಗಳು ಪತ್ತೆಯಾಗಿವೆ ಎಂದು  ಯುಎಸ್ಎ ಟುಡೇ ಸುದ್ದಿಯನ್ನು ವರದಿ ಮಾಡಿದೆ. ಸಿದ್ಧಾಂತ್ ಶಾ (19) ಮತ್ತು ಆರ್ಯನ್ ವೈದ್ಯ (20) ಮೃತದೇಹಗಳು ಬೆಳಿಗ್ಗೆ 11.20 ರ ಸುಮಾರಿಗೆ ಪತ್ತೆಯಾಗಿವೆ. ಸರೋವರವು ಬ್ಲೂಮಿಂಗ್ಟನ್‌ನಲ್ಲಿರುವ ಅವರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಸುಮಾರು 10 ಮೈಲುಗಳಷ್ಟು ದೂರದಲ್ಲಿದೆ. ಕಳೆದ ಶನಿವಾರ ತನ್ನ ಸ್ನೇಹಿತರೊಂದಿಗೆ ದೋಣಿ ವಿಹಾರಕ್ಕೆ ತೆರಳಿದ್ದ ವೇಳೆ ಅವಘಡ ಸಂಭವಿಸಿತ್ತು. ಸ್ನೇಹಿತರು ಅವರನ್ನು ರಕ್ಷಿಸಲು ಯತ್ನಿಸಿದರೂ ವಿಫಲರಾದರು. ನಂತರ ಭದ್ರತಾ ಸಿಬ್ಬಂದಿ ಆ ರಾತ್ರಿ 10 ಗಂಟೆಯವರೆಗೆ ಮತ್ತು ಭಾನುವಾರದವರೆಗೆ ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಶವಗಳು ಪತ್ತೆಯಾಗಿಲ್ಲ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್…

Read More

ಪೂರ್ವ ಲಡಾಖ್‌ನ ಚುಶುಲ್‌ನಲ್ಲಿ ನಿನ್ನೆ ಭಾರತ-ಚೀನಾ ಮಿಲಿಟರಿ ಮಟ್ಟದ 18 ನೇ ಮಾತುಕತೆ ನಡೆಯಿತು. ಶಾಂಘೈ ಕಾರ್ಪೊರೇಷನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾದ ರಕ್ಷಣಾ ಸಚಿವರು ಭಾರತಕ್ಕೆ ಆಗಮಿಸುವ ಮುನ್ನ ಸೇನಾ ಮಟ್ಟದ ಮಾತುಕತೆ ನಡೆದಿದೆ. ಭಾರತೀಯ ಸೇನೆ ಮತ್ತು ಚೈನೀಸ್ ಪೀಪಲ್ಸ್ ಪಾರ್ಟಿ ನಡುವೆ ನಾಲ್ಕು ತಿಂಗಳ ವಿರಾಮದ ನಂತರ ಈ ಮಾತುಕತೆ ನಡೆದಿದೆ. ಉಭಯ ದೇಶಗಳು ಡಿಸೆಂಬರ್ 2022 ರಲ್ಲಿ ಕೊನೆಯದಾಗಿ ಮಿಲಿಟರಿ ಮಟ್ಟದ ಮಾತುಕತೆ ನಡೆಸಿದ್ದವು. ಚರ್ಚೆಯಲ್ಲಿ, ಭಾರತವು ದೇಪಾಸಾಂಗ್ ಬಲ್ಗೆ, ಚಾರ್ಡಿಂಗ್ ನಿಂಗ್ಲುಂಗ್ ನಲ್ಲಾ ಮತ್ತು ಡೆಮ್‌ಚೋಕ್ ಪ್ರದೇಶಗಳಿಂದ ಚೀನಾದ ಸೈನಿಕರನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು. ಚೀನಾದ ರಕ್ಷಣಾ ಸಚಿವ ಲಿ ಶಾಂಗ್ಫು ಅವರು ಇದೇ ತಿಂಗಳ 27 ಮತ್ತು 28 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್…

Read More

ತುಮಕೂರು: ಜ್ಯೊತಿ‌ಗಣೇಶ ಸಜ್ಜನ ರಾಜಕಾರಣಿ. ಅವರು ಯಾರ ಮನಸಿಗೂ ನೋವಾಗದಂತೆ ನಡೆದುಕೊಂಡಿದ್ದಾರೆ. ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರಲು ಸಂಸದ ಬಸವರಾಜ ಪ್ರಮುಖ ಪಾತ್ರ ವಹಿಸಿದ್ದಾರೆ. ಶೇ 95%ರಷ್ಟು ಕಾಮಗಾರಿ ಪೂರ್ಣಗೊಳ್ಳಲು ಜ್ಯೊತಿಗಣೇಶ್ ಕಾರಣ. ತುಮಕೂರಿನ ಜ್ಯೋತಿ ಬೆಳಗಲು ಜ್ಯೋತಿ ಗಣೇಶರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ತುಮಕೂರು ನಗರ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಅವರ ಪರ ರೋಡ್ ಶೋ ನಡೆಸಿ ಅವರು ಮತಯಾಚಿಸಿದರು. ಕೇಂದ್ರದ ಡಬಲ್ ಎಂಜಿನ್ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತಂದಿದೆ. ಅದಕ್ಕೆ ಯಡಿಯೂರಪ್ಪನವರ ನೇತೃತ್ವದಲ್ಲಿ ಸ್ಮಾರ್ಟ್ ಸಿಟಿಗೆ ಶೇ 50% ರಷ್ಟು ಅನುದಾನ ನೀಡಲಾಗುತ್ತಿದೆ. ತುಮಕೂರು ಇನ್ನು ಹತ್ತು ವರ್ಷದಲ್ಲಿ ಬೆಂಗಳೂರು ರೀತಿಯಲ್ಲಿ‌ ಬೃಹತ್ ಮಹಾನಗರವಾಗಿ ಅಭಿವೃದ್ಧಿ ಆಗಲಿದೆ ಎಂದರು. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಮಾಡದೇ ಭ್ರಷ್ಟಾಚಾರ ಮಾಡಿದ್ದರು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅವರನ್ನು ಓಡಿಸಬೇಕು. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅವರಿಗೆ ಮತ ಹಾಕಿದರೆ…

Read More

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ತುಮಕೂರು ಕಛೇರಿಯಲ್ಲಿ ಇಂದು(ಭಾನುವಾರ) ಜಗಜ್ಯೋತಿ ಬಸವೇಶ್ವರವರ 890ನೇ ಜಯಂತ್ಯೋತ್ಸವನ್ನು ಸರಳವಾಗಿ ಆಚರಿಸಲಾಯಿತು. ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ ಲೋಕೇಶ ಆರ್ ರವರು ಮಹಾನ್ ಮಾನವತಾ ವಾದಿ, ಕ್ರಾಂತಿಯೋಗಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ತುಮಕೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್ ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ: ಬಸಣ್ಣನವರು ಜಗತ್ತಿಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಅವರ ಪ್ರತಿಯೊಂದು ವಾಕ್ಯ ನಮಗೆಲ್ಲಾ ದಾರಿದೀಪ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ತಿಳಿಸಿದರು. ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿ ಮುಂಚಿತವಾಗಿ ಬಸವಣ್ಣ ಜಯಂತಿ ಪ್ರಯುಕ್ತ ಬಸವಣ್ಣನವರ ಪುಷ್ವಾರ್ಚನೆಯನ್ನು ಮಾಡಿ ನಂತರ ಮಾತನಾಡಿದ ಅವರು, ನಮ್ಮ ಪಕ್ಷದ ಪಂಚರತ್ನ ಮಹತ್ವ ಯೋಜನೆಯ ಬಗ್ಗೆ ಜನರಿಗೆ ತಿಳಿಸಲು ಪಕ್ಷದ ವತಿಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಹೊಳವನಹಳ್ಳಿ ಗ್ರಾಮದಲ್ಲಿ ಸಭೆಯನ್ನು ಆಯೋಜಿಸಿದ್ದು, ಈ ಸಭೆಗೆ ಮುಖ್ಯ ಅತಿಥಿಗಳಾಗಿ ಮಣ್ಣಿನ ಮಗ ಮಾಜಿ ಪ್ರಧಾನಿ ದೇವಗೌಡ ಅಪ್ಪಾಜಿ ಅವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ ಆಗಮಿಸಲಿದ್ದು, ಹೆಚ್ಚಿನ ಸಂಖೈಯಲ್ಲಿ ಕಾರ್ಯಕರ್ತರು, ಮುಖಂಡರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ಜೆಡಿಎಸ್ ಪಕ್ಷದ ಪ್ರಚಾರವನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಹೊಳವನಹಳ್ಳಿ ಗ್ರಾಮದಲ್ಲಿ ಸಭೆಯನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವಗೌಡರು ಹಾಗೂ…

Read More

ಬೆಳಗಾವಿ: ವಿಶ್ವಗುರು, ಕ್ರಾಂತಿಯೋಗಿ, ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಹಿರೇಬಾಗೇವಾಡಿಯ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ‌ ಮಾಡಿ, ಗೌರವ ಸಲ್ಲಿಸಿದರು. ಅನುಭವ ಮಂಟಪ’ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ನೀಡಿ, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ‌ ವಿರುದ್ಧ ಸಮರ ಸಾರಿದ ಬಸವಣ್ಣನವರ ತತ್ವಾದರ್ಶಗಳು ಸದಾಕಾಲವೂ ಸ್ಮರಣೀಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು. 12 ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿಹಾಡಿದವರು ವಿಶ್ವಗುರು ಬಸವಣ್ಣನವರು. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ, ಕಾಯಕ, ಸ್ತ್ರೀ ಸಮಾನತೆಗೆ ಮಹತ್ವ ಕೊಡುವ ಮೂಲಕ ಜಾತೀಯತೆ ಅಳಿಸಲು ಪ್ರಧಾನ ಆದ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ವಿಶ್ವಗುರು ಬಸವಣ್ಣನವರು. ಬಸವಣ್ಣ ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರವಲ್ಲ ರಾಜಕೀಯವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದವರು. ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವ ವಚನ ಸಾಹಿತ್ಯದ ಮೂಲಕ ಜನರಲ್ಲಿನ ಅಂಧ ಶ್ರದ್ಧೆ ತೊಡೆದು…

Read More

ಬೆಳಗಾವಿ: ಇವನಾರವ ಇವನಾರವ ಎನ್ನದೆ ಇವ ನಮ್ಮ ಮನೆಯ ಮಗನೆಂದು ಜಾತಿ ಮತ ಪಂಥಗಳನ್ನ ಹೋಗಲಾಡಿಸಿ ಸಮಾನತೆಯ ಜಾತಿ ವರ್ಣರಹಿತ ಸಮಾಜ ನಿರ್ಮಾಣ ಮಾಡಿದ ಜಗಜ್ಯೋತಿ ಬಸವಣ್ಣ ಜಗಕ್ಕೆ ಬೆಳಕುತೊರಿದ 12 ಶತಮಾನದ ಅವರ ವಚನ ಸಾಹಿತ್ಯ ಎಂದೆಂದಿಗೂ ಅಜರಾಮರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು. ನಗರದ ಆರ್.ಪಿ.ಡಿ ವೃತ್ತದಲ್ಲಿರುವ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಬಸವ ಜಯಂತಿ ನಿಮಿತ್ಯ ಹಮ್ಮಿಕೊಂಡ ಸಭೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸಿ ಮಾತನಾಡಿ,ಸಮಾಜದಲ್ಲಿದ್ದ ಅಮಾನವೀಯ ವ್ಯವಸ್ಥೆಯ ವಿರುದ್ಧ ಹೋರಾಡಿ ಮಾನವೀಯತೆಯ ಜೀವನ ಮಾರ್ಗಗಳನ್ನೇ ರೂಪಿಸಿದರು. ಸಮಾಜ ಸುಧಾರಕರ ಸಾಲಿನಲ್ಲಿ ಬಸವಣ್ಣನವರು ಅನನ್ಯತೆಯ ವ್ಯಕ್ತಿತ್ವ ಸಂಪನ್ನರಾಗಿ ಕರ್ನಾಟಕದ ನೆಲದಲ್ಲಿ ಲಿಂಗಾಯತ ಧರ್ಮಸ್ಥಾಪಿಸಿ ಹೋರಾಟ ಮಾಡಿರುವುದು ಚಾರಿತ್ರಿಕ ಸತ್ಯ ಎಂದರು. ವಿಭಾಗ ಪ್ರಭಾರಿ ಚಂದ್ರಶೇಖರ ಕವಾಟಗಿ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ಮಾತನಾಡಿ, ಬಸವಣ್ಣನವರು ಕಟ್ಟಿ ಬೆಳೆಸಿದ ಸಂಘಟನೆಯೇ ಶರಣ ಚಳವಳಿ. ಬಸವಣ್ಣನವರು ಈ ದೇಶದ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ಚರಿತ್ರೆಯನ್ನು ಬಲ್ಲವರು. ಮಾನವೀಯ ವಿವೇಕದ…

Read More

ಬೆಂಗಳೂರು : ಸೀರೆ ಎಂದರೆ ಮಹಿಳೆಯರಿಗೆ ಬಹಳ ಅಚ್ಚುಮೆಚ್ಚು , ರೇಟು ಎಷ್ಟಾದರೂ ತೊಂದರೆ ಇಲ್ಲ ಸೀರೆ ಬೇಕೇ ಬೇಕು ಎಂದು ಹಠ ಹಿಡಿಯುವ ಮಹಿಳೆಯರನ್ನು ನೋಡುತ್ತೆವೆ. ಆದರೆ ಇನ್ನೂ, ಡಿಸ್ಕೌಂಟ್ ಸೇಲ್ ನಲ್ಲಿ ಸೀರೆ ಕೊಡ್ತೀವಿ ಅಂದರೆ ಈ ಮಹಿಳೆಯರು ಬಿಡ್ತಾರಾ..? ಹೌದು, ಬೆಂಗಳೂರಿನಲ್ಲಿ ಡಿಸ್ಕೌಂಟ್ ಸೇಲ್ ಗೆ ಹಾಕಿರುವ ಸಿಲ್ಕ್ ಸೀರೆಯನ್ನು ತೆಗೆದುಕೊಳ್ಳಲು ಮಹಿಳೆಯರು ಮುಗಿಬಿದ್ದು ಮಹಿಳೆಯರು ಸೀರೆಗಾಗಿ ತುಂಬಾ ಜಗಳ ಕೂಡ ಆಡಿದ್ದಾರೆ ಎಂದು ವರದಿಯಾಗಿದೆ. ಮಲ್ಲೇಶ್ವರಂ ನ 8 ನೇ ಕ್ರಾಸ್ ನಲ್ಲಿರುವ ಕೆನರಾ ಯೂನಿಯನ್ ಹಾಲ್ ನಲ್ಲಿ ಕರ್ನಾಟಕ ಸಿಲ್ಕ್ ಎಂಪೋರಿಯಮ್ ಡಿಸ್ಕೌಂಟ್ ಸೇಲ್ ಹಾಕಿದ್ದು, ಸಿಲ್ಕ್ ಸೀರೆ ಮೇಲೆ ಶೇ 35 ರಷ್ಟು ಡಿಸ್ಕೌಂಟ್ ಘೋಷಿಸಿದ ಹಿನ್ನೆಲೆ ಮಹಿಳೆಯರು ಮುಗಿಬಿದ್ದಿದ್ದಾರೆ. ಸೀರೆ ಕೊಂಡುಕೊಳ್ಳುವ ವೇಳೆ ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆದು ಜಡೆ ಹಿಡಿದು ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ…

Read More

ಶಿವಮೊಗ್ಗದ ವಿಕಾಸ ಪಿಯುಸಿ ಕಾಂಪೊಸಿಟ್‌ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಅನ್ವಿತಾ.ಡಿ.ಎನ್‌ ಅವರು 600ಕ್ಕೆ 596 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಎರಡನೇ ರ‍್ಯಾಂಕ್  ಪಡೆದಿದ್ದಾರೆ. ರಾಜ್ಯದಲ್ಲಿ ಒಂಭತ್ತು ವಿದ್ಯಾರ್ಥಿಗಳು 596 ಅಂಕಗಳನ್ನು ಗಳಿಸಿದ್ದಾರೆ. ಅನ್ವಿತಾ.ಡಿ.ಎನ್‌ ಅವರು ತೀರ್ಥಹಳ್ಳಿ ತಾಲೂಕು ಮಲ್ಲೇಸರ ಗ್ರಾಮದವರು. ತಂದೆ ನಾಗರಾಜ ಅವರು ಕೃಷಿಕರು. ತಾಯಿ ಅನುಸೂಯ. ಮಗಳು ರ‍್ಯಾಂಕ್‌ ಪಡೆದ ವಿಚಾರ ತಿಳಿದು ತುಂಬಾ ಖುಷಿಯಾಗಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮ ದ ಜೊತೆಗೆ ಮಾತನಾಡಿದ ಅನ್ವಿತಾ.ಡಿ.ಎನ್‌ ಅವರು, ʼಕಾಲೇಜಿನ ಉಪನ್ಯಾಸಕರು ತುಂಬ ಸಪೋರ್ಟಿವ್‌ ಆಗಿದ್ದರು. ಯಾವುದೇ ಸಂದೇಹಗಳಿದ್ದರು ಕೇಳಿದಾಗಲೆ ಅದನ್ನು ಬಗೆಹರಿಸುತ್ತಿದ್ದರು. ಇನ್ನು, ಆಯಾ ದಿನದ ಪಾಠಗಳನ್ನು ಅಂದೇ ವರ್ಕ್‌ ಮಾಡುತ್ತಿದ್ದೆ. ಊರಿನಿಂದ ಓಡಾಡುವುದು ತುಂಬಾ ಕಷ್ಟ ವಾಗಿತ್ತು. ಹಾಗಾಗಿ ವಿಕಾಸ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದೆ.  ಅದ್ದರಿಂದ ಓದಲು ತುಂಬಾ ಅನುಕೂಲವಾಯಿತು. ಹೆಚ್ಚು ಅಂಕ ಪಡೆದ ವಿಚಾರ ತಿಳಿದು ಅಪ್ಪ, ಅಮ್ಮ ತುಂಬಾ ಖುಷಿಯಾಗಿದ್ದಾರೆ. ಮುಂದೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಇದೆ.ʼ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಬೆಂಗಳೂರು ಗ್ರಾಮಾಂತರ : ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ, ಅದೃಷ್ಟವಶಾತ್‌ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾ ಗಿದ್ದಾರೆಂದು ಹೇಳಲಾಗಿದೆ ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗೌರಿಬಿದನೂರು ರಸ್ತೆ ಮಾಕಳಿ ತಿರುವಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ ಪಲ್ಟಿಯಾಗಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಬಸ್‌ ಚಾಲಕನಿಗೆ ನಿಯಂತ್ರಣ ಸಿಗದೆ ಬಸ್‌ ಪಲ್ಟಿ ಯಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.ಅಷ್ಟೇ ಅಲ್ಲದೇ ಬಸ್‌ ಪಲ್ಟಿಯಾಗಿದ್ದಕ್ಕೆ ಪ್ರಯಾಣಿಕರೆಲ್ಲರೂ ಹೆದರಿ ಕಂಗಾಲಾಗಿದ್ದಾರೆ. ಘಟನಾಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More