Author: admin

ತುಮಕೂರು: ತರಕಾರಿ ಬೆಲೆ ಮತ್ತೆ ಗಗನಕ್ಕೆ ಏರಿದ್ದು,  ಇದೀಗ ಕೊತ್ತಂಬರಿ ಸೊಪ್ಪು ಬಿಟ್ಟರೆ ಬೇರೆಲ್ಲ ತರಕಾರಿಗಳು ದುಬಾರಿ ಎನ್ನುವಂತಾಗಿದೆ. ಈ ಪೈಕಿ ಕ್ಯಾಪ್ಸಿಕಂಗೆ ಭಾರೀ ಬೆಲೆ ಏರಿಕೆಯಾಗಿದ್ದು, ಒಂದು ಕೆ.ಜಿ. ಕ್ಯಾಪ್ಸಿಕಂಗೆ ಬರೊಬ್ಬರಿ 100 ರೂಪಾಯಿಗಳಾಗಿವೆ. ಕ್ಯಾಪ್ಸಿಕಂ ಬೆಲೆ 100 ರೂ ಆಗಿದ್ದರೆ, ಚಿಲ್ಲರೆಯಾಗಿ ಇದು ಮಾರಾಟವಾಗುತ್ತಿರುವ ಸಂದರ್ಭದಲ್ಲಿ  120–140ರವರೆಗೂ ಹಣ ಪೀಕಿಸಲಾಗುತ್ತಿದೆ. ಇನ್ನೊಂದೆಡೆ ಹೂ ಕೋಸಿಗೆ ಕೂಡ ತೀವ್ರ ಬೆಲೆ ಏರಿಕೆಯಾಗಿದೆ. ಒಂದು ಹೂಕೋಸು ಬೆಲೆ 50 ರೂಪಾಯಿಗೂ ಅಧಿಕವಾಗಿ ಏರಿಕೆಯಾಗಿದೆ. ಸದ್ಯ ತರಕಾರಿ ಮಾರುಕಟ್ಟೆಯಲ್ಲಿ  ಬಹುತೇಕ ತರಕಾರಿಗಳು 80ರಿಂದ 100 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇನ್ನೊಂದು ಅಚ್ಚರಿಯ ವಿಚಾರ ಏನೆಂದರೆ, ಸೊಪ್ಪುಗಳಿಗೆ ಕೂಡ ಬೆಲೆ ಏರಿಕೆಯಾಗಿದೆ. ಇನ್ನೊಂದೆಡೆ ಮೀನು, ಮಾಂಸಗಳಿಗೂ ಬೆಲೆ ಏರಿಕೆಯಾಗಿದೆ. ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ

Read More

ತಿಪಟೂರು: ಅಂಗನವಾಡಿ ಕಾರ್ಯಕರ್ತೆಯರನ್ನು ಪೋಷಣ ಅಭಿಯಾನದ ಪ್ರಚಾರದ ಗೊಂಬೆಗಳಂತೆ ಬಳಸಿಕೊಳ್ಳಲು ಬ್ಯಾನರ್‌ ನಂತಹ ಸೀರೆಗಳನ್ನು ವಿತರಣೆ ಮಾಡಲಾಗಿದೆ ಎಂದು ಕರ್ನಾಟಕ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಬಳಿ ಪ್ರತಿಭಟನೆ ನಡೆದಿದ್ದು, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಬಿ.ಎಸ್.ಅನಸೂಯ ಮಾತನಾಡಿ, ಅಂಗನವಾಡಿ ನೌಕರರು ಪೋಷಣ ಅಭಿಯಾನವನ್ನು 2019ರಿಂದ ಯಶಸ್ವಿ ಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇಲಾಖೆಯಿಂದ ಕಳೆದ ವಾರ ಅಭಿಯಾನಕ್ಕೆ ಸಮವಸ್ತ್ರವಾಗಿ ಸೀರೆ ವಿತರಿಸಿದ್ದಾರೆ. ಆದರೆ ಈ ಸೀರೆ ಬ್ಯಾನರ್‌ ನಂತೆ ಇದ್ದು, ಸೀರೆಯ ತುಂಬೆಲ್ಲಾ ಪೋಷಣ ಅಭಿಯಾನ ಎಂದು ಮುದ್ರಿಸಿ ಅಂಗನವಾಡಿ ನೌಕರರನ್ನು ಜಾಹೀರಾತು ಗೊಂಬೆಗಳಂತೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಇಂತಹ ಸಮವಸ್ತ್ರ ಬಳಸದೇ ಇಲಾಖೆಗೆ ಹಿಂದಿರುಗಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು. ಮುಂದಿನ ಸೋಮವಾರದಿಂದ ಯಾರೂ ಇಲಾಖೆ ನೀಡಿರುವ ಸಮವಸ್ತ್ರ ಧರಿಸದೆ ನಮ್ಮ ಸೀರೆಗಳನ್ನು ತೊಟ್ಟು ಕಾರ್ಯನಿರ್ವಹಣೆ ಮಾಡುತ್ತೇವೆ.…

Read More

ಪಾವಗಡ: ತಾಲ್ಲೂಕು ನಿಡಗಲ್ಲು ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹರಿಹರಪುರ ಗ್ರಾಮದ ಯುವಕರು, ಸಾರ್ವಜನಿಕರು ಸೇರಿ ಚಿತ್ರದುರ್ಗ ಜಿಲ್ಲೆಯ ಶ್ರೀಆದಿಜಾಂಬವ ಕೋಡಿಹಳ್ಳಿ ಮಹಾ ಸಂಸ್ಥಾನದ  ಶ್ರೀ ಶ್ರೀ ಶ್ರೀ ಮಾರ್ಕಂಡೇಯ ಮುನಿ ಸ್ವಾಮೀಜಿ ಅವರ ನಿಧನಕ್ಕೆ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಸ್ವಾಮೀಜಿಗಳ ನಿಧನ ವಾರ್ತೆ ಆಘಾತವನ್ನುಂಟು ಮಾಡಿದೆ ಹಾಗೂ ನಮ್ಮ ಸಮಾಜಕ್ಕು ಭಾರಿ ನಷ್ಟವಾಗಿದೆ. ಶ್ರೀ ಶ್ರೀ ಶ್ರೀ ಸ್ವಾಮೀಜಿರವರ ಪಾದಪದ್ಮಾಂಬಗಳಿಗೆ ಕೋಟಿ ಕೋಟಿ ನಮನಗಳನ್ನು ಅರ್ಪಿಸುತ್ತ ಶ್ರೀಗಳ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಇದೇ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತಿ ಅಧ್ಯಕ್ಷ  ಲಕ್ಷ್ಮಮ್ಮ/ಈರಣ್ಣ, ಗ್ರಾ.ಪಂ. ಸದಸ್ಯ ಆರುದಂತಿ, ನಾಗಲಿಂಗಪ್ಪ,  ದೊಡ್ಡಣ್ಣ, ಗ್ರಾ.ಪಂ.ಕೊಡಿನೇಟರ್  ಹನುಮಂತರಾಯ, ಸಿ.ಕೆ.ಪುರ.  ಹರಿಹರಪುರ ಗ್ರಾಮದ ಈರಣ್ಣ, ನಾಗರಾಜ, ಹನುಮಂತರಾಯ, ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ

Read More

ತಿಪಟೂರು: ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ವತಿಯಿಂದ ವತಿಯಿಂದ ಕಾರ್ಯಕಾರಣಿ ಸಭೆ ನಡೆಯಿತು ಹಾಗೂ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಕಾರ್ಯಕ್ರಮವನ್ನು ನಗರದ ಸರ್ಕಾರಿ ನೌಕರರ ಭವನದಲ್ಲಿ ಮಾಜಿ ಶಾಸಕರು ಕೆ.ಷಡಕ್ಷರಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷರಾದ ಪುಟ್ಟಸ್ವಾಮಿ ಪ್ರಧಾನ ಕಾರ್ಯದರ್ಶಿ ದಿನೇಶ್ ತುಮಕೂರು ಜಿಲ್ಲಾ ಕಾರ್ಯದರ್ಶಿ ದಾದಾಪೀರ್ ತಿಪಟೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾಂತರಾಜು ಸದಸ್ಯ ಯೋಗೀಶ್ ಮಾಜಿ ಅಧ್ಯಕ್ಷ ಪ್ರಕಾಶ್ ಮಾದಿಹಳ್ಳಿ ಪ್ರಕಾಶ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಫುಲ್ಲಾ ವೆಂಕಟೇಶ್ ಮತ್ತಿತರಿದ್ದರು. ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ

Read More

ತುಮಕೂರು: ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರು ಮಾಡಿ  ಸೂಕ್ತ ಕಟ್ಟಡ  ನಿರ್ಮಿಸಿ ಕೊಡುವ ಬಗ್ಗೆ  ಉನ್ನತ ಶಿಕ್ಷಣ ಇಲಾಖೆಯ ಸಚಿವರು ಡಾ. ಸಿ.ಎನ್. ಅಶ್ವಥ್‍ನಾರಾಯಣ್, ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ್, ಶಾಸಕ ಜ್ಯೋತಿಗಣೇಶ್ ಹಾಗೂ ಜಿಲ್ಲಾಧಿಕಾರಿಗಳಿಗೆ ಅವರಿಗೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ ಪತ್ರ ಬರೆದು ಮನವಿ ಮಾಡಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 1993 ರಿಂದ ಪ್ರಾರಂಭಗೊಂಡಿರುವ “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ”ವು ಕಳೆದ 27 ವರ್ಷಗಳಿಂದ ಇದೇ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತದೆ. ಜೊತೆಗೆ ಗುಣಮಟ್ಟದ ಚಿತ್ರಕಲಾ ಶಿಕ್ಷಣವನ್ನು ನೀಡುತ್ತಿದೆ. ಮತ್ತು ಈ ಕಾಲೇಜಿನಲ್ಲಿ ಚಿತ್ರಕಲಾಭ್ಯಾಸ ಮಾಡಿದ ವಿದ್ಯಾರ್ಥಿಗಳು “ತುಮಕೂರು ವಿಶ್ವವಿದ್ಯಾನಿಲಯದ ಬಿ.ಎಫ್.ಎ. (ಬ್ಯಾಚುಲರ್ ಆಫ್ ಫೈನ್ ಆರ್ಟ್) ಪದವಿ ಪರೀಕ್ಷೆಯಲ್ಲಿ ಪ್ರಥಮ ಮತ್ತು ತೃತೀಯ ರ್ಯಾಂಕ್ ನೊಂದಿಗೆ ಗೋಲ್ಡ್‍ ಮೆಡಲ್ ಪಡೆದುಕೊಂಡಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ”. ಸರ್ಕಾರಿ ಚಿತ್ರಕಲಾ…

Read More

ತುರುವೇಕೆರೆ: ತುರುವೇಕೆರೆ ತಾಲ್ಲೂಕು ಸಂಪಿಗೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಮತ್ತು ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಇವರ ಸಹಯೋಗದಲ್ಲಿ  ರೋಟರಿ ಕ್ಲಬ್ ತುರುವೇಕೆರೆ , ನಿಟ್ಟೂರು ರೋಟರಿ ಕ್ಲಬ್, ತುಮಕೂರು ಸೆಂಟ್ರಲ್ ಕ್ಲಬ್, ತುಮಕೂರು ಈಸ್ಟ್ ಕ್ಲಬ್,ಸಿದ್ದರಬೆಟ್ಟ ರೋಟರಿ ಕ್ಲಬ್,  ಈ ಕ್ಲಬ್ ಗಳು ಸಿದ್ದಗಂಗಾ ಆಸ್ಪತ್ರೆ ತುಮಕೂರು ಮತ್ತು ಚನಾರೆ ಆಸ್ಪತ್ರೆ ರಾಜಾಜಿ ನಗರ , ಇಮ್ಯುನಾಲಜಿ&ಆರಥೈಟಿಸ್& ಎಜುಕೇಶನ್ ಟ್ರಸ್ಟ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಚಂಪಕಾ ಪ್ರೌಢಶಾಲೆ ಯಲ್ಲಿ ನಡೆಯಿತು. ಇಮ್ಯುನಾಲಜಿ&ಆರಥೈಟಿಸ್& ಎಜುಕೇಶನ್ ಟ್ರಸ್ಟ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಚಂಪಕಾ ಪ್ರೌಢಶಾಲೆ ಯಲ್ಲಿಉಚಿತ ಮಂಡಿನೋವು, ಬಾಡಿ ಕ್ಯಾಲ್ಸಿಯಂ, ಕೀಲು ಮೂಳೆ, ಸಂಧಿವಾತ, ಸ್ತ್ರೀ ರೋಗ,ಬಿಪಿ,ಸುಗರ್,ಬಿಎಂಡಿ&screening  ತಪಾಸಣೆ ಹಾಗೂ ಉಚಿತವಾಗಿ ಔಷಧಿ ಹಾಗೂ ನೀ ಪ್ಯಾಡ್ ಗಳನ್ನು ನೀಡಲಾಯಿತು  ಕಾರ್ಯಕ್ರಮವನ್ನು ಸಂಪಿಗೆ ಗ್ರಾಮ ಪಂಚಾಯಿತಿ  ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಚಂಪಕ ಪ್ರೌಢಶಾಲೆ ಶಿಕ್ಷಕರು ಹಾಗೂ ಪ್ರಸಾದ್ ಕೆಜೆ…

Read More

ಚಿಕ್ಕನಾಯಕನಹಳ್ಳಿ: ಗ್ರಾಮ ಪಂಚಾಯತ್ ಉಪಾಧ್ಯಕ್ಷನನ್ನು ಟಾಟಾ ಏಸ್ ವಾಹನ ಡಿಕ್ಕಿ ಹೊಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಕೃತ್ಯವನ್ನು ಎಸಗಲಾಗಿದೆ ಎಂದು ವರದಿಯಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ 46 ವರ್ಷ ವಯಸ್ಸಿನ ಅಶೋಕ್ ಎಂಬವರು ಸೋಮಶೇಖರ್ ಎಂಬವರ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಟಾಟಾ ಏಸ್ ವಾಹನದಿಂದ ಹಿಂಬದಿಯಿಂದ ಡಿಕ್ಕಿ ಹೊಡೆಸಲಾಗಿದ್ದು, ಪರಿಣಾಮವಾಗಿ ಅಶೋಕ್ ಅವರು ಸ್ಥಳದಲ್ಲೇ ಸಾವನ್ನಪ್ಪಿ ಸೋಮಶೇಖರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯದ ವರದಿಗಳ ಪ್ರಕಾರ, ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಹಾಗೂ ಭೀಮಾ ನಾಯ್ಕ್ ತಾಂಡದ ನಾಗರಾಜ್ ನಾಯ್ಕ್ ಎಂಬವರ ನಡುವೆ ಹಣಕಾಸಿನ ವಿಚಾರಕ್ಕಾಗಿ ವೈಷಮ್ಯವಿದ್ದು, ಈ ಹಳೆಯ ವೈಷಮ್ಯದಿಂದ ಈ ಹತ್ಯೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ

Read More

ಕೊರಟಗೆರೆ: ಬಸ್ ಹರಿದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರು ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆಯ ಕೊರಟಗರೆ ತಾಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆಂಪಕ್ಕ ಮೃತಪಟ್ಟ ಮಹಿಳೆಯಾಗಿದ್ದು, ಜೆಟ್ಟಿ ಅಗ್ರಹಾರ ಪೋಸ್ಟ್ ಆಫೀಸ್ ಗೆ ಆಗಮಿಸಿದ್ದ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಬಂದ ಖಾಸಗಿ ಬಸ್ಸೊಂದು ಕೆಂಪಕ್ಕ ಅವರ ಮೇಲೆ ಹರಿದಿದ್ದು, ಪರಿಣಾಮವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಂಪಕ್ಕ ಅವರು ಥರಟಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆಯಾಗಿದ್ದರು ಎಂದು ತಿಳಿದು ಬಂದಿದೆ. ತಮ್ಮ ಪೆನ್ಷನ್ ಹಣವನ್ನು ಪಡೆಯಲು ಅವರು ಜೆಟ್ಟಿ ಅಗ್ರಹಾರ ಪೋಸ್ಟ್ ಆಫೀಸ್ ಗೆ ಆಗಮಿಸಿದ್ದರು ಎನ್ನಲಾಗಿದೆ. ರಸ್ತೆ ದಾಟಲು ಮುಂದಾಗುತ್ತಿದ್ದಂತೆಯೇ ಅತೀ ವೇಗದಿಂದ ಬಂದ ಬಸ್ ಕೆಂಪಕ್ಕ ಮೇಲೆ ಹರಿದಿದೆ. ಇನ್ನೂ ಘಟನೆ ನಡೆದ ತಕ್ಷಣವೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು…

Read More

ತಿಪಟೂರು: ಅಪ್ಪುವಿನ ಮೇಲಿನ ಪ್ರೀತಿಗಾಗಿ  ಅಪ್ಪ ಮಗ ಇಬ್ಬರು ಕೇಶ ಮುಂಡನ ಮಾಡಿಸಿಕೊಂಡು ಬಡಾವಣೆಯ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಸಿದ ಘಟನೆ ತುಮಕೂರಿನ ತಿಪಟೂರಿನ ವಿವೇಕಾನಂದ ನಗರದಲ್ಲಿ ನಡೆದಿದೆ. ಅಪ್ಪು ಅಭಿಮಾನಿ ರವಿ ಎಂಬವರು ಹಾಗೂ ಅವರ ಪುತ್ರ ನಟರಾಜ್ ಅವರು ಈ ಕಾರ್ಯ ಮಾಡಿದ್ದು, ಕೇಶಮುಂಡನೆ ಮಾಡಿಕೊಂಡು, ಅನ್ನಸಂತರ್ಪಣೆ ನಡೆಸಿ, ಅಪ್ಪುವಿನ ಮೇಲಿನ ವಿಶೇಷ ಪ್ರೀತಿಯನ್ನು ಹೀಗೆ ತೋರ್ಪಡಿಸಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ತಿಥಿಕಾರ್ಯ ನೆರವೇರಿಸಿ, ಕೇಶಮುಂಡನ ಮಾಡಿ, ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಅನ್ನ ಸಂತರ್ಪಣೆ ನಡೆಸಿದ್ದಾರೆ. ಇನ್ನೂ 11ನೇ ದಿನದ ತಿಥಿ ಕಾರ್ಯಕ್ಕೆ ನಾವು ಅಪ್ಪು ಸಮಾಧಿ ಬಳಿಗೆ ಹೋಗಬೇಕು ಹೀಗಾಗಿ ಇಂದೇ ಕಾರ್ಯಮಾಡಿ ಕೇಶ ಮುಂಡನ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದರು. ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ

Read More

ಶಿವಮೊಗ್ಗ: ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿಯ ನಾಯಕರ ಬಗ್ಗೆ ಅವಹೇಳನಕಾರಿ ಮಾತುಗಳಾಡುವುದನ್ನೇ ಸಿದ್ದರಾಮಯ್ಯ ವೃತ್ತಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶವನ್ನು ಸಿದ್ಧರಾಮಯ್ಯ ತಪ್ಪಿಸಿದರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಬ್ಲ್ಯಾಕ್‌ ಮೇಲ್ ಮಾಡಿ ಮುಖ್ಯಮಂತ್ರಿಯಾದರು. ಅವರೊಬ್ಬ ಕಪಟ ರಾಜಕಾರಣಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 2006 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕೇವಲ 257 ಮತಗಳ ಅಂತರದಲ್ಲಿ ಗೆಲುವು ಕಂಡರು. ಕಾಂಗ್ರೆಸ್ ಪಕ್ಷದ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮಹಾದೇವಪ್ಪ ಇಲ್ಲದಿದ್ದರೆ ಅಂದೇ ರಾಜಕೀಯದಿಂದ ಕಳೆದುಹೋಗುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ

Read More