Subscribe to Updates
Get the latest creative news from FooBar about art, design and business.
- ಚಿರತೆಗಳ ಕಾದಾಟ: ಎರಡು ವರ್ಷದ ಗಂಡು ಚಿರತೆ ಸಾವು
- ತುಮಕೂರು| ಪತ್ರಕರ್ತರ ಸಂಘದ ಚುನಾವಣೆ: ಕೊರಟಗೆರೆಯ ಮೂವರು ಪತ್ರಕರ್ತರ ಆಯ್ಕೆ
- ಸರಗೂರು: ಕಾಡಾನೆ ದಾಳಿಯಿಂದ ಲಕ್ಷಾಂತರ ರೂ. ಬೆಳೆ ನಾಶ: ರೈತರಿಂದ ಆಕ್ರೋಶ
- ಬೀದರ್ | 96,510 ರೈತರ ಖಾತೆಗೆ ₹69 ಕೋಟಿ ಬೆಳೆ ಪರಿಹಾರದ ಹಣ ಜಮೆ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
- ನಂದಿಹಳ್ಳಿ ಮಲ್ಲಸಂದ್ರ ಬೈಪಾಸ್ ರಸ್ತೆಗೆ ವಿರೋಧ: ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳು ವಾಪಸ್
- ಕುಣಿಗಲ್ | ನರೇಗಾ ಯೋಜನೆ ಬಿಲ್ ಪಾವತಿಗೆ ಒತ್ತಾಯಿಸಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ
- ಅಂತರ್ಜಲ ಹೆಚ್ಚಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ: ಶಾಸಕ ಟಿ.ಬಿ.ಜಯಚಂದ್ರ
- ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ಕಾನೂನಾತ್ಮಕವಾಗಿರಬೇಕು: ಶಾಸಕ ಸಿ.ಬಿ.ಸುರೇಶ್ ಬಾಬು
Author: admin
ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನ ಘೋಷಿಸುವ ಅಧಿಕಾರ ನನಗಾಗಲಿ, ಸಿದ್ಧರಾಮಯ್ಯರಿಗಾಗಲಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಿನ್ನೆ ಅಭ್ಯರ್ಥಿಯನ್ನ ಸಿದ‍್ಧರಾಮಯ್ಯ ಘೋಷಿಸಿದ್ಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿ.ಕೆ ಶಿವಕುಮಾರ್, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನ ಘೋಷಿಸುವ ಅಧಿಕಾರ ನನಗಾಗಲಿ ಸಿದ್ಧರಾಮಯ್ಯರಿಗಾಗಲಿ ಇಲ್ಲ. ಎಐಸಿಸಿಗೆ ಮಾತ್ರ ಅಭ್ಯರ್ಥಿಗಳನ್ನ ಘೋಷಿಸುವ ಅಧಿಕಾರವಿದೆ. ಮಲ್ಲಿಕಾರ್ಜುನ ಖರ್ಗೆಯೇ ನಮ್ಮ ಹೈಕಮಾಂಡ್ ಎಂದರು. ಸಿದ್ದರಾಮಯ್ಯ ಅವರು ಗಂಗಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕೆಲ ಸಂದರ್ಭಗಳಲ್ಲಿ ಕಳೆದ ಬಾರಿ ಸೋಲು ಕಂಡವರಿಗೆ ಉತ್ತೇಜನ ನೀಡುವ ಉದ್ದೇಶದಿಂದಲೂ ಹೇಳಿರಬಹುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ವಿಶೇಷ ವರದಿ : ಚಂದ್ರಶೇಖರ ಮದ್ಲಾಪೂರ ಮಾನವಿ: ತಾಲೂಕಿನ ನೀರಮಾನವಿ ಗ್ರಾಮದ ಅಶ್ವಥಾಮ ( ಪೂಜಾ ) ತಂದೆ ಮಾರೆಪ್ಪ ಇವರು ತೃತೀಯ ಲಿಂಗ ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ರಾಜ್ಯ ಶಿಕ್ಷಣ ಮಾರ್ಚ್ ತಿಂಗಳಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಧಿಕೃತ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು ಸಮಾಜ ವಿಜ್ಞಾನ ವಿಷಯದ ಶಿಕ್ಷಕರಾಗಿ ಆಯ್ಕೆಯಾಗಿದ್ದು, ನೀರಮಾನವಿ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದರು. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಗ್ರಾಮದಲ್ಲಿ ಜನಿಸಿದ ಇವರು, 1 ರಿಂದ 10ನೇ ತರಗತಿಯವರೆಗೆ ನೀರಮಾನವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಮಾನವಿ ಪಟ್ಟಣದಲ್ಲಿ ಪದವಿ ಪೂರ್ವ, ಪದವಿಯನ್ನು ಪೂರ್ಣಗೊಳಿಸಿದ ಇವರು, ರಾಯಚೂರಿನ ಸರ್ವೋದಯ ಕಾಲೇಜಿನಲ್ಲಿ ಬಿ ಇ ಎಡ್ ಪೂರ್ಣಗೊಳಿಸಿ ಇಂದು ತೃತೀಯ ಲಿಂಗಿಯ ಮೀಸಲಾತಿಯಲ್ಲಿ ರಾಜ್ಯದ ಮೂರು ಜನರಲ್ಲಿ ಇವರೊಬ್ಬರಾಗಿ ಆಯ್ಕೆಯಾಗಿ ತಮ್ಮ ಜೀವನದ ಗುರಿಯನ್ನು ತಲುಪಿ ಎಲ್ಲರಲ್ಲೂ ಅಚ್ಚರಿಯುಟ್ಟು ಮಾಡಿದ್ದಾರೆ. ಈ ಬಗ್ಗೆ ಅವರ…
ಶಾರಿಕ್ ವಿದೇಶಿ ಉಗ್ರ ಸಂಘಟನೆ ಪ್ರಭಾವಕ್ಕೆ ಒಳಗಾಗಿದ್ದ: ಸದ್ಯ ಒಂದು ದೊಡ್ಡ ಅನಾಹುತ ತಪ್ಪಿದೆ- ಎಡಿಜಿಪಿ ಅಲೋಕ್ ಕುಮಾರ್
ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ರೂವಾರಿಯೇ ಶಾರಿಕ್. ಶಾರಿಕ್ ವಿದೇಶಿ ಉಗ್ರ ಸಂಘಟನೆ ಪ್ರಭಾವಕ್ಕೆ ಒಳಗಾಗಿದ್ದ. ಸದ್ಯ ಒಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. ಪ್ರಕರಣ ಕುರಿತು ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ನವೆಂಬರ್ 19ರಂದು ಸಂಜೆ 4.40ರಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕ, ಆಟೋ ಚಾಲಕನಿಗೆ ಗಾಯಗಳಾಗಿವೆ. ತಕ್ಷಣ ಪೊಲೀಸ್ ಅಧಿಕಾರಿಗಳಿಂದ ಗುರುತು ಪತ್ತೆ ಮಾಡುವ ಕೆಲಸ ನಡೆದಿದೆ. ಆರೋಪಿ ಶಾರಿಕ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶಾರಿಕ್ ಸಂಬಂಧಿಕರು ಆಗಮಿಸಿ ಗುರುತು ಪತ್ತೆ ಹಚ್ಚಿದ್ದಾರೆ. ಮೈಸೂರಿನಲ್ಲಿ ಮೋಹನ್ ಕುಮಾರ ಮನೆಯಲ್ಲಿ ಆರೋಪಿ ಶಾರಿಕ್ ವಾಸವಾಗಿದ್ದ. ಶಾರಿಕ್ ವಿಚಾರ ಮೋಹನ್ ಗೂ ಗೊತ್ತಿಲ್ಲ. ಶಂಕಿತ ವಾಸವಿದ್ದ ಮನೆಯಲ್ಲಿ ಹಲವು ಸ್ಪೋಟಕ ವಸ್ತು ಸಿಕ್ಕಿವೆ. ಆರೋಪಿ ಮೈಸೂರಿನಿಂದ ಮಂಗಳೂರಿಗೆ ಬಂದಿದ್ದಾನೆ. ಮತ್ತೊಂದು ನಕಲಿ ಐಡಿ ಪಡೆದು ಕೊಯಮುತ್ತೂರಿನಲ್ಲೂ ಶಾರಿಕ್ ವಾಶವಿದ್ದ ಎಂದು ಮಾಹಿತಿ ನೀಡಿದರು. ಆರೋಪಿ…
ಮಾಜಿ ಪ್ರೇಯಸಿಯನ್ನು ಕೊಂದು 6 ತುಂಡುಗಳಾಗಿ ಕತ್ತರಿಸಿ ಬಾವಿಗೆ ಎಸೆದಿದ್ದ ಕಿರಾತಕ ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡು ಹಾರಿಸಿದ್ದಾರೆ. ಕೊಲೆಯಾದ ಯುವತಿಯ ತಲೆಬುರಡೆ ಹಾಗೂ ದೇಹದ ತುಂಡುಗಳ ಪತ್ತೆಗೆ ಬಾವಿ ಬಳಿ ಕರೆದೊಯ್ಯುವಾಗ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಪೊಲೀಸರ ಗುಂಡು ಆರೋಪಿಗೆ ತಗುಲಿದೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳದಲ್ಲಿ ಆರೋಪಿ ಪ್ರಿನ್ಸ್ ಯಾದವ್ ನಾಡ ಪಿಸ್ತೂಲನ್ನು ಅಡಗಿಸಿದ್ದ. ಪರಿಶೀಲನೆ ವೇಳೆ ಈ ನಾಡ ಪಿಸ್ತೂಲನ್ನು ಬಳಸಿ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಎಂದು ಪೊಲೀಸರು ವಿವರಿಸಿದ್ದಾರೆ. ಪಶ್ಚಿಮಿ ಗ್ರಾಮದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಶನಿವಾರ ಬಂಧಿಸಿದ್ದರು. ಸೋಮವಾರ ಸ್ಥಳದ ಮಹಜರು ಹಾಗೂ ಮೃತ ಯುವತಿಯ ರುಂಡ ಪತ್ತೆಗೆ ಮುಂದಾಗಿದ್ದರು. ಅರೆಬೆತ್ತಲೆ ಅವಸ್ಥೆಯಲ್ಲಿ ಆರಾಧಾನಾ ಎಂಬ ಯುವತಿಯನ್ನು ಎರಡು-ಮೂರು ದಿನಗಳ ಹಿಂದೆ ಹತ್ಯೆ ಮಾಡಿ ಬಾವಿಯಲ್ಲಿ ಶವ…
ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಉಗ್ರ ಚಟುವಟಿಕೆಯಲ್ಲಿ ತೊಡಗುವವರಿಗೆ ಗಲ್ಲುಶಿಕ್ಷೆ ಅಥವಾ ಎನ್ ಕೌಂಟರ್ ರೀತಿಯ ಶಿಕ್ಷೆ ಕಾನೂನೂ ಜಾರಿಯಾಗಲಿ ಎಂದು ಆಗ್ರಹಿಸಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಜನರನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದೆ. ಉಗ್ರ ಶಾರಿಕ್ ಸೇರಿ ನಾಲ್ವರನ್ನ ಬಂಧಿಸಲಾಗಿದೆ. ಜನರಾಗಲಿ ಬಿಜೆಪಿಯಾಗಲಿ ಬೆದರಿಕೆಗೆ ಬಗ್ಗಲ್ಲ ಮುಸ್ಲಿಂ ಹಿರಿಯರು ಮಕ್ಕಳಿಗೆ ಬುದ್ದಿ ಹೇಳಬೇಕು ಎಂದರು. ರಾಜ್ಯ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ ಕೇಂದ್ರ ಗೃಹಸಚಿವರಿಗೆ ಮಾಹಿತಿ ನೀಡಲಾಗಿದೆ. ಇಂತಹ ಗೂಂಡಾಗಳನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಉಗ್ರ ಚಟುವಟಿಕೆಯಲ್ಲಿ ತೊಡಗುವವರಗೆ ಗಲ್ಲುಶಿಕ್ಷೆ ಅಥವಾ ಎನ್ ಕೌಂಟರ್ ರೀತಿಯ ಶಿಕ್ಷೆ ಜಾರಿಯಾಗಲಿ ಎಂದರು. ವರದಿ : ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ವಯ ಟ್ರಸ್ಟ್ ಗೆ ನೋಟಿಸ್ ನೀಡಲಾಗಿದೆ. ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ವಯ ಟ್ರಸ್ಟ್ ಗೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ನೋಟಿಸ್ ನೀಡಲಾಗಿದೆ. ಚಿಲುಮೆ ಸಂಸ್ಥೆಗೆ ನೀಡಿದ್ದಅನುಮತಿ ದುರ್ಬಳಕೆ ಆರೋಪ ಚಿಲುಮೆ ಸಂಸ್ಥೆ ವಿರುದ್ದ ಸಮನ್ವಯ ಟ್ರಸ್ಟ್ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರ, ಸಂಗ್ರಹಿಸಿರುವ ದಾಖಲೆ ಸಲ್ಲಿಸುವಂತೆ ಸಮನ್ವಯ ಟ್ರಸ್ಟ್ ಗೆ ಸೂಚನೆ ನೀಡಲಾಗಿದೆ. ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯೋಗ ಭೇಟಿ ನೀಡುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಡಿಲಿಟ್ ಆಗಿರುವ ವೋಟರ್ ಐಡಿಗಳ ಪರಿಶೀಲನೆ ನಡೆಸುತ್ತಿದ್ದು, ಚಿಲುಮೆಗೆ ಅನುಮತಿ ಬಳಿಕ 15 ಸಾವಿರ ವೋಟರ್ ಡಿಲೀಟ್ ಆಗಿದೆ. ಇದರ ಹಿಂದೆ ಚಿಲುಮೆ ಸಂಸ್ಥೆ ಕೈವಾಡ ಇದೇಯಾ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ವರದಿ : ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ತಮಿಳುನಾಡು ಚಿತ್ರರಂಗದ ಹಿರಿಯ ಚಿತ್ರಕಥೆಗಾರ ಅರೂರ್ ದಾಸ್ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ತಮಿಳುನಾಡು ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದ ಅರೂರ್ ದಾಸ್ ತಮ್ಮ ವೃತ್ತಿಜೀವನದಲ್ಲಿ ಸುಮಾರು 1000 ಚಿತ್ರಗಳಿಗೆ ಚಿತ್ರಕತೆ ಬರೆದ ದಾಖಲೆ ಹೊಂದಿದ್ದರು. ಅರೂರ್ ದಾಸ್ ನಿಧನಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ಶೋಕ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ತಿರುವೂರ್ ನಲ್ಲಿ ಜನಿಸಿದ್ದ ಅರೂರ್ ದಾಸ್ ತಮ್ಮ ಹೆಸರಿಗೆ ತಿರುವೂರ್ ಹೆಸರನ್ನು ಸೇರಿಸಿಕೊಂಡಿದ್ದರು. 16ನೇ ವಯಸ್ಸಿಗೆ ಬರವಣಿಗೆ ಬಗ್ಗೆ ಆಸಕ್ತಿ ಹೊಂದಿದ್ದ ಆರೂರ್ ನಾಟಕಗಳನ್ನು ಬರೆಯಲು ಆರಂಭಿಸಿದ್ದರು. ನಂತರ ಡಬ್ಬಿಂಗ್ ಸಹಾಯಕರಾಗಿ ವೃತ್ತಿ ಆರಂಭಿಸಿದರು. ನಂತರ ಕೈದಿ ಮುಂತಾದ ಡಬ್ಬಿಂಗ್ ಚಿತ್ರಗಳಿಗೆ ಸಂಭಾಷಣೆ ಭಾಷಾಂತರ ಮಾಡುವ ಕೆಲಸ ಮಾಡಿದರು. ಜೆಮಿನಿ ಗಣೇಶನ್ ಮತ್ತು ಬಿ. ಸರೋಜಾದೇವಿ ಅಭಿನಯದ ವಜಾ ವೈತಾ ದೇವಿಯಂ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಚಿತ್ರಕಥೆಗಾರನಾಗಿ ಗುರುತಿಸಿಕೊಂಡರು. ತಮಿಳುನಾಡಿನ ಸ್ಟಾರ್ ಗಳಾಗಿದ್ದ ಎಂಜಿಆರ್, ಶಿವಾಜಿ ಗಣೇಶನ್ ಅವರಿಗೆ ನಿರ್ದಿಷ್ಟವಾಗಿ ಅರೂರ್ ಬೇಕಿದ್ದರು. ಶಿವಾಜಿ ಗಣೇಶನ್ ಅಭಿನಯದ…
ಝೀ ಟಿವಿಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋ ಮೂಲಕ ಬೆಳಕಿಗೆ ಬಂದ ನಯನಾ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡಿದ್ದಕ್ಕಾಗಿ ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ನಯನಾ ಮತ್ತು ಟೀಮ್ ಬಹುಮಾನ ರೂಪದಲ್ಲಿ 3 ಲಕ್ಷ ರೂ. ಗಳಿಸಿತ್ತು. ತಂಡದಲ್ಲಿದ್ದ ಸೋಮಶೇಖರ್ ಸರಿಯಾದ ಪಾಲು ಕೊಟ್ಟಿಲ್ಲ ಎಂದು ಇಬ್ಬರ ನಡುವೆ ಮನಸ್ತಾಪ ಆಗಿತ್ತು. ಪೊಲೀಸರು ಬಂದು ನಿನ್ನ ಅರೆಸ್ಟ್ ಮಾಡುತ್ತಾರೆ. ನಾನು ಸ್ಟೇಶನ್ ನಲ್ಲೇ ಇದ್ದೇನೆ. ನೀನು ಹಣ ಕೊಡದೇ ಇದ್ದರೆ, ನಿನ್ನನ್ನು ಏನು ಬೇಕಾದರೂ ಮಾಡುವುದಕ್ಕೆ ರೆಡಿ ಎಂದು ನಯನಾರ ಧ್ವನಿ ಎಂದು ಹೇಳಲಾದ ಆಡಿಯೋದಲ್ಲಿ ಧಮ್ಕಿ ಹಾಕಿರುವ ನಯನಾ ಧ್ವನಿ ಎಂದು ಹೇಳಲಾಗಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.…
ಬೆಂಗಳೂರು: ಈ ಬಾರಿ ಮಳೆಯ ಅಬ್ಬರದಂತೆಯೇ ಉತ್ತರ ಕರ್ನಾಟಕ ಭಾಗದಲ್ಲಿ ಮೈಕೊರೆಯುವ ಚಳಿಗೆ ಜನರು ತತ್ತರಿಸಲಿದ್ದಾರೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ಮುನ್ಸೂಚನಾ ಕೇಂದ್ರದ ಡಾ.ಆರ್.ಹೆಚ್.ಪಾಟೀಲ್ ಈ ಬಾರಿ ಚಳಿ ಬಗ್ಗೆ ಮುನ್ಸೂಚನೆ ನೀಡಿದ್ದು, ರಾಜ್ಯದಲ್ಲಿ ಚಳಿ ಡಿಸೆಂಬರ್ ಮೂರನೇ ವಾರದ ಬಳಿಕ ಹೆಚ್ಚಾಗಬೇಕಿತ್ತು. ಆದರೆ ಈ ಬಾರಿ ನವೆಂಬರ್ ಆರಂಭದಿಂದಲೇ ಶುರುವಾಗಿದೆ. ನವೆಂಬರ್ 24ರ ಬಳಿಕ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದ್ದು, ಜನರನ್ನು ನಡುಗಿಸಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಹುಬ್ಬಳ್ಳಿ-ಧಾರವಾಡ, ಗದಗ, ರಾಯಚೂರು, ಕೊಪ್ಪಳ, ಬೆಳಗಾವಿ ಸೇರಿದಂತೆ ಹಲವೆಡೆಗಳಲ್ಲಿ ಮೈ ಕೊರೆಯುವ ಚಳಿಗೆ ಜನರು ಬೆಳಿಗ್ಗೆ 10 ಗಂಟೆಯಾದರೂ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ನವೆಂಬರ್ 24ರ ಬಳಿಕ ಆರಂಭವಾಗಲಿರುವ ಚಳಿ ಜನರ ಇನ್ನಿಲ್ಲದಂತೆ ಕಾಡಲಿದೆ ಎಂದು ಹೇಳಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ಮಂಗಳೂರು ಆಟೋದಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾರೀಕ್ ಜೊತೆ ಸಂಪರ್ಕದಲ್ಲಿದ್ದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ . ಶನಿವಾರ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆಟೋ ಚಾಲಕ ಮತ್ತು ಮತ್ತೋರ್ವ ಗಾಯಗೊಂಡಿದ್ದರು. ಈ ಇಬ್ಬರ ಪೈಕಿ 24 ವರ್ಷದ ಶಂಕಿತ ಆರೋಪಿ ಮೊಹಮ್ಮದ್ ಶಾರಿಕ್ ಕೂಡ ಒಬ್ಬನಾಗಿದ್ದು ಈತನನ್ನ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಶಾರೀಕ್ ನ ಗುರುತನ್ನ ಕುಟುಂಬಸ್ಥರು ಪತ್ತೆಹಚ್ಚಿದ್ದಾರೆ. ಗುರುತು ಪತ್ತೆ ಹಚ್ಚುವ ಸಲುವಾಗಿ ಶಾರಿಕ್ ಸಹೋದರಿ ಮತ್ತು ಚಿಕ್ಕಮ್ಮನನ್ನ ಪೊಲೀಸರು ಕರೆತಂದಿದ್ದರು. ಮೈಸೂರಿನಿಂದ ಮಂಗಳೂರಿಗೆ ಬಂದಿದ್ದ ಶಾರಿಕ್ ಮಂಗಳೂರಿನ ಪಂಪ್ ವೆಲ್ ಬಳಿ ಇಳಿದಿದ್ದನು. ನಂತರ ಅಲ್ಲಿಂದ ಬೇರೆಡೆ ಆಟೋದಲ್ಲಿ ತೆರಳುವಾಗ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy