Subscribe to Updates
Get the latest creative news from FooBar about art, design and business.
- ಪಾವಗಡ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ
- ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಹರಿಂದ ಅರ್ಜಿ ಆಹ್ವಾನ
- ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಎಸ್.ಅಪ್ಪೇನಹಳ್ಳಿ: ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನವಿಲು ನರ್ತನ; ಗ್ರಾಮಸ್ಥರಲ್ಲಿ ಕುತೂಹಲ
- ನಾಲ್ಕು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದ ಬೆಟ್ಟಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಂಗನಾಥ್ ಚಾಲನೆ
- ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ
- ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ
- ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರಕ್ಕೆ ನಮನ: ಭಾವುಕರಾದ ಕೆ.ಎನ್.ರಾಜಣ್ಣ, ಕಂಬನಿ ಮಿಡಿದ ಜಿ.ಪರಮೇಶ್ವರ್
Author: admin
ವೈ.ಎನ್.ಹೊಸಕೋಟೆ: ಬೆಟ್ಟಗುಡ್ಡಗಳ ಬೆಂಕಿ ಹಾಕುವುದರಿಂದ ಪರಿಸರ ನಾಶವಾಗಲಿದ್ದು, ಬೆಟ್ಟಕ್ಕೆ ಬೆಂಕಿ ಹಚ್ಚಬಾರದು ಎಂದು ಉಪಅರಣ್ಯ ವಲಯ ವಿಭಾಗಾಧಿಕಾರಿ ಬಸವರಾಜು ತಿಳಿಸಿದರು. ಪರಿಸರಪ್ರಿಯರು ಸಂಘ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಹೋಬಳಿಯ ಇಂದ್ರಬೆಟ್ಟ ಮತ್ತು ಹೊಸದುರ್ಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಜಾಗೃತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಟ್ಟ ಗುಡ್ಡಗಳಲ್ಲಿ ಬೆಂಕಿ ಹಾಕುವುದರಿಂದ ಪ್ರಕೃತಿಯ ಜೊತೆಗೆ ಪ್ರಾಣಿ–ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ಬೆಟ್ಟದಲ್ಲಿ ವಾಸಿಸುವ ಕರಡಿ ಚಿರತೆ ಗ್ರಾಮಗಳ ಕಡೆ ಬರುತ್ತವೆ. ಅದರಿಂದ ಬೆಟ್ಟ ಗುಡ್ಡಗಳಿಗೆ ಬೇಸಿಗೆಯಲ್ಲಿ ಅಲ್ಲಿನ ಸ್ಥಳಿಯ ಗ್ರಾಮಸ್ಥರು ರಕ್ಷಣೆ ಕೈಪಿಸಬೇಕು. ಹತ್ತು ವರ್ಷಗಳ ಕಾಲ ಬೆಟ್ಟ ಗುಡ್ಡಗಳನ್ನು ಸಂರಕ್ಷಿಸಿದರೆ ಪಾವಗಡ ತಾಲ್ಲೂಕು ಮಲೆನಾಡಾಗಿ ಮಾರ್ಪಡುತ್ತದೆ ಎಂದರು. ಬೆಕ್ಕಿ ಹಚ್ಚುವುದರಿಂದ ಮೇವು ಚಿಗುರುತ್ತದೆ ಎಂಬ ನಂಬಿಕೆ ಇದೆ. ಆದರೆ ಇದರಿಂದ ಅಲ್ಲಿ ವಾಸ ಮಾಡುತ್ತಿರುವ ಜೀವಜಂತುಗಳು ನಾಶವಾಗುತ್ತವೆ. ಆದ್ದರಿಂದ ಕನಿಷ್ಠ 2–3 ವರ್ಷಗಳ ಕಾಲ ಈ ರೀತಿಯ ಕೃತ್ಯ ಮಾಡಬೇಡಿ. ಆಗ ಇಡೀ ಪರಿಸರ ಸಂಪೂರ್ಣ ಹಸಿರುಮಯವಾಗುತ್ತದೆ. ಆಗ…
ಪಾವಗಡ: ತಾಲ್ಲೂಕಿನ್ಯಾದಂತ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಬೇಕೆಂದು ಇಂದು ಪಾವಗಡ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯನ್ನು ಉದ್ದೇಶಿಸಿ ಎನ್.ಎ.ಈರಣ್ಣ ಮಾತನಾಡಿ, ನಮ್ಮ ಮಾಜಿ ಶಾಸಕರ ತಿಮ್ಮರಾಯಪ್ಪರ ಅವಧಿಯಲ್ಲಿ ತಾಲ್ಲೂಕಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಅಧಿವೇಶನ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳು ಅನುಮೋದನೆ ಮಾಡಿಸಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡಿಸಿದ್ದರು ಎಂದರು. ತಾಲ್ಲೂಕಿಕು ಅಧ್ಯಕ್ಷರಾದ ಬಲರಾಮರೆಡ್ಡಿ ಮಾತನಾಡಿ, ನಮ್ಮ ಮಾಜಿ ಶಾಸಕರ ಅವಧಿಯಾದ ನೀರಿನ ಘಟಕಗಳು ಹಾಲಿ ಶಾಸಕರ ಅವಧಿಯಲ್ಲಿ ದುರಸ್ತಿ ಪಡಿಸಲಾಗದೆ ಕೆಟ್ಟು ನಿಂತಿವೆ ಎಂದರು. ಹಾಲಿ ಶಾಸಕರು ಜನರಿಗೆ ಕನಿಷ್ಠ ಕುಡಿಯುವ ನೀರನ್ನು ಕೊಡಲಾಗದೆ ನಿಸ್ಸೀಮರಾಗಿದ್ದಾರೆಂದರು. ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಲರಾಮರೆಡ್ಡಿ, ಎನ್.ಎ. ಈರಣ್ಣ, ರಾಜಶೇಖರಪ್ಪ, ಅಕ್ಕಲಪ್ಪನಾಯ್ಡು, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯೂನಸ್, ನಗರ ಘಟಕದ ಅಧ್ಯಕ್ಷರಾದ ಗಡ್ಡಂ ತಿಮ್ಮ, ನಲ್ಲಪ್ಪ, ಲಕ್ಷ್ಮೀ ನರಸಪ್ಪ, ಕಾವಗೇರಿ ರಾಮಾಂಜಿ, ವಸಂತ, ಮನು, ಜಿ.ಎ.ವೆಂಕಟೇಶ್,…
ಸರಗೂರು: ತಾಲೂಕಿನ ಕಂದೇಗಾಲ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಕೊಂಡೋತ್ಸವ ಜರುಗಿತು. ಮಹದೇಶ್ವರ ರಥಗೆ ಸಂಪ್ರದಾಯದಂತೆ ರಥಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಸಮುದಾಯದ ಪುಟ್ಟ ಬಾಲಕಿಯರು ರಥಕ್ಕೆ ಬೆಲ್ಲದ ಆರತಿ ಬೆಳಗಿದರು. ಜಾತ್ರಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೇತೃತ್ವದಲ್ಲಿ ರಥ ಮುಂಭಾಗ ಬೂದುಗುಂಬಳ ಕಾಯಿಯನ್ನು ಒಡೆಯುವ ಮೂಲಕ ಬೆಳಗ್ಗೆ 9:15ಕ್ಕೆ ಮಹಾರಥೋತ್ಸವಕ್ಕೆ ಚಾಲನೆ ಸಿಕ್ಕಿತು. ನೂರಾರು ಭಕ್ತರು ಉಘೇ ಮಾದಪ್ಪ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದರು. ದೇವಾಲಯ ಆವರಣ ಸೇರಿದಂತೆ ಸುತ್ತಮುತ್ತ ನೆರೆದಿದ್ದ ಸಾವಿರಾರು ಭಕ್ತರು ಮೊಳಗಿಸಿದ ‘ಉಘೇ ಮಾದಪ್ಪ, ಉಘೇ ಮಾಯ್ಕಾರ.. ಉಘೇ ಉಘೇ..’ ಎಂಬ ಉದ್ಗಾರ ಕೂಗಿ ಕೊಂಡವನ್ನು ಆದಿದರು . ಹೂವು, ಬಾಳೆ ಕಂದು, ಬಣ್ಣ ಬಣ್ಣಗಳ ವಸ್ತ್ರಗಳಿಂದ ಅಲಂಕೃತಗೊಂಡಿದ್ದ ರಥವು ದೇವಾಲಯದ ಸುತ್ತ ಒಂದು ಸುತ್ತು ಸಾಗಿತು. ರಥ ಸಾಗಿದ ಬಳಿಕ ಪಲ್ಲಕ್ಕಿ…
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರ ಆತ್ಮಹತ್ಯಾ ದಾಳಿಯಿಂದ 40 ಮಂದಿ ಸಿಆರ್ಪಿಎಫ್ ಯೋಧರು ಅಸುನೀಗಿ ಇಂದಿಗೆ 4 ವರ್ಷಗಳು ಗತಿಸಿದ್ದು ಪ್ರೇಮಿಗಳ ದಿನಾಚರಣೆ ದಿನವು ಭಾರತೀಯರ ಪಾಲಿಗೆ ಕಪ್ಪು ದಿನದಂತಾಗಿದೆ. ಪ್ರತಿವರ್ಷ ಈ ಘಟನೆ ನೆನಸಿಕೊಂಡು ಭಾರತೀಯರ ಆಕ್ರೋಶ ಉಕ್ಕುವುದು ಸಾಮಾನ್ಯ. 2019 ಫೆಬ್ರುವರಿ 14ರಂದು ನಡೆದ ಅಂದಿನ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದು 4 ವರ್ಷಗಳ ಹಿಂದೆ ಇದೇ ದಿನ 40 ಮಂದಿ ಸಿಆರ್ಪಿಎಫ್ ಜವಾನರನ್ನು ಬಲಿತೆಗೆದುಕೊಂಡು ಉಗ್ರ ಆತ್ಮಹತ್ಯಾ ದಾಳಿ ಘಟನೆಯನ್ನು ಎಂದಾದರೂ ಮರೆಯಲು ಸಾಧ್ಯವಾ? ಪ್ರತೀ ವರ್ಷವೂ ಇಡೀ ದೇಶ ಈ ಘಟನೆಯನ್ನು ನೆನಪಿಸಿಕೊಂಡು ಕುದಿದುಹೋಗುತ್ತದೆ., ಅಭಿವೃದ್ಧಿಯತ್ತ ದೇಶ ಸಾಗಲು ವೀರಯೋಧರ ಬಲಿದಾನ ಪ್ರೇರಣೆಯಾಗಲಿ ಎಂದಿದ್ದಾರೆ. ಪುಲ್ವಾಮದಲ್ಲಿ ಈ ದಿನ ನಾವು ಕಳೆದುಕೊಂಡ ವೀರರನ್ನು ಸ್ಮರಿಸುತ್ತಿದ್ದೇನೆ. ಅವರ ಮಹಾ ಬಲಿದಾನವನ್ನು ನಾವ್ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಎದೆಗಾರಿಕೆಯು ಪ್ರಬಲ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ ಎಂದು ನರೇಂದ್ರ ಮೋದಿ ಟ್ವೀಟ್…
ಆಕ್ಲೆಂಡ್: ನ್ಯೂಜಿಲೆಂಡ್ ದೇಶದಲ್ಲಿ ಗೇಬ್ರಿಯೆಲ್ ಚಂಡಮಾರುತದ ಆರ್ಭಟ ನಡೆದಿದ್ದು, ದೇಶದ ಹಲವು ಭಾಗಗಳಿಗೆ ಹಾನಿಯಾಗಿದೆ. ವಿದ್ಯುತ್ ಗ್ರಿಡ್ ವ್ಯವಸ್ಥೆ ಹಾಳಾಗಿದ್ದು ಲಕ್ಷಾಂತರ ಮನೆಗಳು ಕತ್ತಲಲ್ಲಿ ಮುಳುಗಿವೆ. ಚಂಡಮಾರುತದಿಂದ ಅತಿಹೆಚ್ಚು ಹಾನಿಯಾಗಿದೆ. ಅದರಲ್ಲೂ ಆಕ್ಲೆಂಡ್, ನಾರ್ತ್ಲ್ಯಾಂಡ್, ಕೋರೋಮಂಡೆಲ್, ಗಿಸ್ಬೋರ್ನ್, ಟೈರಾವಿಟಿ, ಹಾಕ್ಸ್ ಬೇ ಮೊದಲಾದ ಕಡೆ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮ ಆಕ್ಲೆಂಡ್ ಮತ್ತು ನಾರ್ತ್ಲ್ಯಾಂಡ್ನಲ್ಲಿ ಪ್ರವಾಹ ಮತ್ತು ಭೂಕುಸಿತ ಘಟನೆಗಳು ಬಹಳ ವರದಿಯಾಗಿವೆ. ಆದರೆ, ಗಿಸ್ಬೋರ್ನ್, ಕೋರೋಮಂಡೆಲ್, ಹಾಕ್ಸ್ ಬೇ ಪ್ರದೇಶಗಳು ಸಂಪೂರ್ಣ ಕಟ್ ಆಫ್ ಆಗಿವೆ. ಗಾರ್ಡಿಯನ್ ವರದಿ ಪ್ರಕಾರ ಗೇಬ್ರಿಯೆಲ್ ಚಂಡಮಾರುತದ ಪರಿಣಾಮ ನ್ಯೂಜಿಲೆಂಡ್ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದು ನಾರ್ತ್ಲ್ಯಾಂಡ್, ಆಕ್ಲೆಂಡ್ ಮತ್ತು ಹಾಕ್ಸ್ಬೇ ಪ್ರದೇಶಗಳಿಂದ ಬಂದಿರುವ ಮಾಹಿತಿ. ಚಂಡಮಾರುತದಿಂದ ಬಹಳ ಹಾನಿಗೊಂಡಿರುವ ಗಿಸ್ಬೋರ್ನ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ ಎಂಬ ಪ್ರದೇಶಗಳಲ್ಲಿ ವಿದ್ಯುತ್ ಗ್ರಿಡ್ ಕಾರ್ಯನಿರ್ವಹಣೆ ಎಷ್ಟು ಸ್ಥಗಿತಗೊಂಡಿದೆ. ನ್ಯೂಜಿಲೆಂಡ್ನಲ್ಲಿ ಗೇಬ್ರಿಯೆಲ್ ಚಂಡಮಾರು ಅಪ್ಪಳಿಸಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಾಷ್ಟ್ರೀಯ…
ಬೆಳಗಾವಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಾಧಕರಿಗೆ ಕೊಡಮಾಡುವ ವಿಪ್ರಶ್ರೀ ಪ್ರಶಸ್ತಿಗೆ ಪ್ರಗತಿ ವಾಹಿನಿ ವೆಬ್ ನ್ಯೂಸ್ ಪ್ರಧಾನ ಸಂಪಾದಕ ಹಾಗೂ ಪ್ರಗತಿ ಮೀಡಿಯಾ ಹೌಸ್ ಸಂಸ್ಥಾಪಕ, ಹಿರಿಯ ಪತ್ರಕರ್ತ ಎಂ.ಕೆ. ಹೆಗಡೆ ಭಾಜನರಾಗಿದ್ದಾರೆ. ಭಾನುವಾರ ಬೆಳಗಾವಿಯ ಸಿಟಿ ಹಾಲ್‌ನಲ್ಲಿ ನಡೆದ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಮಾರಂಭದಲ್ಲಿ ಮಂಡಳಿಯ ಅಧ್ಯಕ್ಷ ಎಚ್. ಎಸ್. ಸಚ್ಚಿದಾನಂದಮೂರ್ತಿ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್. ಎಂ. ಕುಲಕರ್ಣಿ,ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಹಲವು ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮೂಲತಃ ಶಿರಸಿ ತಾಲೂಕಿನ ಕಲ್ಮನೆಯವರಾದ ಎಂ.ಕೆ. ಹೆಗಡೆ ಕಳೆದ 28 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಜನಾಂತರಂಗ ಪತ್ರಿಕೆಯ ಹಿರಿಯ ವರದಿಗಾರರಾಗಿ, ಬೆಳಗಾವಿಯಲ್ಲಿ ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ವರದಿಗಾರಾಗಿ, ವಿಜಯವಾಣಿ ಪತ್ರಿಕೆಯ ಬೆಳಗಾವಿ ಸ್ಥಾನಿಕ ಸಂಪಾದಕರಾಗಿ, ವಿಜಯ ಕರ್ನಾಟಕದ ಸೀನಿಯರ್ ಅಸಿಸ್ಟಂಟ್ ಎಡಿಟರ್…
ತಮಿಳುನಾಡಿನಲ್ಲಿ ತನ್ನ ಗೆಳತಿಗೆ ಪ್ರೇಮಿಗಳ ದಿನದ ಉಡುಗೊರೆಯನ್ನು ಖರೀದಿಸಲು ಮೇಕೆಯನ್ನು ಕದ್ದಿದ್ದಕ್ಕಾಗಿ ಕಾಲೇಜು ವಿದ್ಯಾರ್ಥಿ ಮತ್ತು ಅವನ ಸ್ನೇಹಿತನನ್ನು ಬಂಧಿಸಲಾಗಿದೆ. ಜಿಂಗಿ ತಾಲೂಕಿನ ಬಿರಂಗಿ ಮೆಡ್ ಗ್ರಾಮದ ಎರಡನೇ ವರ್ಷದ ಕಾಲೇಜು ವಿದ್ಯಾರ್ಥಿ ಎಂ.ಅರವಿಂದ್ ರಾಜ್ (20) ಮತ್ತು ಆತನ ಸ್ನೇಹಿತ ಎಂ.ಮೋಹನ್ (20) ಬಂಧಿತರು.ಮಲಯರಸನ್ ಕುಪ್ಪಂ ಗ್ರಾಮದ ಎಸ್ ರೇಣುಕಾ ಎಂಬುವವರ ಮೇಕೆಯನ್ನು ಭಾನುವಾರ ಬೆಳಗ್ಗೆ ಇವರಿಬ್ಬರು ಕದ್ದಿದ್ದಾರೆ. ರೇಣುಕಾ ಗಲಾಟೆ ಮಾಡಿದಾಗ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿ ನಿವಾಸಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಧ್ಯಾಹ್ನ ಇಬ್ಬರನ್ನೂ ಬಂಧಿಸಿ ಮೇಕೆಯನ್ನು ರಕ್ಷಿಸಿ ಅವರು ಬಳಸುತ್ತಿದ್ದ ಬೈಕ್ ವಶಪಡಿಸಿಕೊಳ್ಳಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೇರಳ :ಮಲಪ್ಪುರಂನ ಎಡಕ್ಕರ ಎಂಬಲ್ಲಿ ಯುವಕನೊಬ್ಬ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪರಲಿ ಮೂಲದ ವಿಪಿನ್ ಮೃತರು. ಅಪೂರ್ಣ ಮನೆಯಲ್ಲಿ ವಿಐಪಿ ಶವ ಪತ್ತೆಯಾಗಿದೆ. ಫೋರೆನ್ಸಿಕ್ ವಿಭಾಗ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ವಿಐಪಿ ಸಹೋದರಿಗಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡದಲ್ಲಿ ಮೃತದೇಹ ಪತ್ತೆಯಾಗಿದೆ. ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾ.ಪಂ.ಗೆ ಮಾಹಿತಿ ನೀಡಲು ಯಾವುದೇ ಬಾಧ್ಯತೆಗಳಿಲ್ಲ ಮತ್ತು ಸಾವು ನಿಗೂಢವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಎಡಕ್ಕರ ಪೊಲೀಸರು ಸಹ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: “ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿಯ ಹೆಸರು ಬೆಳಗಿಸಿದ ಕುಸ್ತಿ ಕ್ರೀಡೆ ಪ್ರಸ್ತುತದಲ್ಲಿ ಹಿಂದಿನ ಪ್ರಾಮುಖ್ಯತೆ ಕಳೆದುಕೊಂಡಿದ್ದು ಗ್ರಾಮೀಣ ಭಾಗದಲ್ಲಿ ಇದರ ಅಸ್ತಿತ್ವ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ. ಕುಸ್ತಿ ಕ್ರೀಡೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಲಭಿಸಬೇಕಿದೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಕುಸ್ತಿ ಕಮಿಟಿಯವರು ಆಯೋಜಿಸಿದ್ದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. “ಹಿಂದಿನ ದಿನಗಳಲ್ಲಿ ಗ್ರಾಮದಲ್ಲಿ ಕನಿಷ್ಠ ಒಂದಾದರೂ ಗರಡಿ ಮನೆ ಇರುತ್ತಿತ್ತು. ಇಂದು ಅವು ಮಾಯವಾಗಿವೆ. ಅಪರೂಪಕ್ಕೆಂಬಂತೆ ಅಲ್ಲಲ್ಲಿ ಗರಡಿಮನೆಗಳು ಕಾಣಸಿಗುತ್ತಿವೆ. ಬೆಳಗಾವಿ ಜಿಲ್ಲೆಯ ಅನೇಕ ಕುಸ್ತಿ ಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ದಿಸೆಯಲ್ಲಿ ಹೆಚ್ಚೆಚ್ಚು ಗರಡಿಮನೆಗಳನ್ನು ಆರಂಭಿಸಿ ಕುಸ್ತಿ ಕ್ರೀಡೆಯ ಹಿಂದಿನ ವೈಭವ ಮರುಕಳಿಸುವಂತೆ ಮಾಡಬೇಕಿದೆ. ಇದಕ್ಕೆ ತಾವು ಸಂಪೂರ್ಣ ಸಹಕಾರ ನೀಡಲು ಬದ್ಧ” ಎಂದರು. ವಿವಿಧೆಡೆಗಳಿಂದ ಆಗಮಿಸಿದ್ದ ಖ್ಯಾತನಾಮ ಪೈಲ್ವಾನರ ಕುಸ್ತಿ ಪಂದ್ಯ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು.…
27ರ ಹರೆಯದ ಇಂಜಿನಿಯರಿಂಗ್ ಪದವೀಧರಳಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಲಾಗಿದೆ. ಹರಿಯಾಣದ ಗುರುಗ್ರಾಮ್‌ನ ಶಾಪಿಂಗ್ ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಕಾರಿನೊಳಗೆ ಕಿರುಕುಳ ನಡೆದಿದೆ. ಕೆಲಸದ ನಿಮಿತ್ತ ಸಂದರ್ಶನದ ನೆಪದಲ್ಲಿ ಮಹಿಳೆಗೆ ಕರೆ ಮಾಡಿ ಮಾದಕ ದ್ರವ್ಯ ಬೆರೆಸಿ ನೀರು ನೀಡಿ ಅತ್ಯಾಚಾರ ಎಸಗಿದ್ದಾನೆ. ಯುವತಿ ಆನ್‌ಲೈನ್‌ನಲ್ಲಿ ಕೆಲಸ ಹುಡುಕುತ್ತಿದ್ದಳು. ಅಷ್ಟರಲ್ಲಿ ಆರೋಪಿ ತುಷಾರ್ ಶರ್ಮಾ ಫೋನ್ ನಂಬರ್ ಸಿಕ್ಕಿತ್ತು. ಅವರನ್ನು ಸಂಪರ್ಕಿಸಿದಾಗ ಸಹಾರಾ ಮಾಲ್‌ನಲ್ಲಿ ಸಂದರ್ಶನ ನಡೆಸುವುದಾಗಿ ಹೇಳಿ ಕೆಲಸ ಕೊಡಿಸುವುದಾಗಿ ತಿಳಿಸಿದರು. ಯುವತಿ ಸಂದರ್ಶನಕ್ಕಾಗಿ ದಾಖಲೆಗಳೊಂದಿಗೆ ಮಾಲ್‌ಗೆ ಬಂದಳು. ಮಾಲ್‌ನ ಗೇಟ್‌ನಲ್ಲಿ ತುಷಾರ್ ಅವರನ್ನು ಭೇಟಿಯಾದರು ಮತ್ತು ಅವರು ಯುವತಿಯನ್ನು ನೆಲಮಾಳಿಗೆಗೆ ಕರೆದೊಯ್ದರು. ಯುವತಿಗೆ ನೆಲಮಾಳಿಗೆಯಲ್ಲಿ ಅಮಲು ನೀರು ನೀಡಲಾಗಿತ್ತು. ಇದನ್ನು ಕುಡಿದ ಬಳಿಕ ಪ್ರಜ್ಞೆ ತಪ್ಪಿದ್ದಾಳೆ. ಬಳಿಕ ಆಕೆಯನ್ನು ಕಾರಿನೊಳಗೆ ತಳ್ಳಿ ಅತ್ಯಾಚಾರ ಎಸಗಿದ್ದಾನೆ. ನಂತರ ಯುವತಿಯನ್ನು ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.…