Author: admin

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರಲ್ಲ ಔಷಧಿ ಗುಣವಿದೆ ಎಂದು ವರದಿ ನೀಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ವಿಧಾನಪರಿಷತ್ ನಲ್ಲಿ ಇಂದು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಒಂದು ವರ್ಷದ ಹಿಂದೆ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಲು  ರಾಮಯ್ಯ ತಾಂತ್ರಿಕವಿವಿಗೆ ಹೇಳಿದ್ದೆವು . ತಾಂತ್ರಿಕ ವಿವಿ ಸಂಶೋಧನಾ ವರದಿ ನೀಡಿದೆ. ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಇರಲ್ಲ ಔಷಧಿ ಇರುತ್ತೆ ಎಂದು ವರದಿ ಸಲ್ಲಿಕೆ ಮಾಡಿದೆ. ಆದರೆ ಹಿಂದಿನ ಸರ್ಕಾರ ಅಡಿಕೆಯಲ್ಲಿ ಕ್ಯಾನ್ಸರ್ ಗುಣ ಇದೆ ಎಂದಿತ್ತು . ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ನಾವು ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ ಎಂದು ಅರಗ ಜ್ಞಾನೇಂದ್ರ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಾಜ್ಯ ಸರ್ಕಾರದ ವಿರುದ್ಧ ಟೆಂಡರ್ ಗೋಲ್ಮಾಲ್ ಆರೋಪ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿರುವ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರು ಹುಚ್ಚರು,ತಲೆ ತಿರುಕರು. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ, ತಲೆ ಸರಿ ಇದ್ದವರು ಈ ರೀತಿ ಮಾತನಾಡೋದಿಲ್ಲ, ಅಧಿಕಾರದ ಭ್ರಮೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಅಂತಾ ಕನಸು ಕಾಣ್ತಿದ್ದಾರೆ. ಕಾಂಗ್ರೆಸ್​ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸದನದಲ್ಲಿ ಮಾತನಾಡಲಿ ತಕ್ಕ ಉತ್ತರ ಕೊಡುತ್ತೇವೆ ಎಂದರು. ವಿಪಕ್ಷ ನಾಯಕರಾಗಿ ಈ ರೀತಿಯ ಹೇಳಿಕೆ ಸರಿಯಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆ ರೀತಿಯಾಗಿ ನಡೆದುಕೊಳ್ಳಬಹುದಾ..? ಕಾಂಗ್ರೆಸ್ ಪಕ್ಷದವರಿಗೆ ಕೇವಲ ಚುನಾವಣೆಯೇ ಮುಖ್ಯಾವಾಯಿತಾ..? ಆರೋಪ ಮಾಡಿ ಹುಚ್ಚು ಹುಚ್ಚಾಗಿ ಆಡೋದು ಜಾಸ್ತಿಯಾಗಿದೆ. ಡಿ.ಕೆ ಶಿವಕುಮಾರ್ ಈ ಮಟ್ಟಕ್ಕೆ ಇಳಿದಿರುವುದು ನನಗೆ ತುಂಬಾ ನೋವಾಗಿದೆ ಇನ್ನಾದ್ರೂ ಜವಾಬ್ದಾರಿಯುತ ಮಾತನಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಕಳೆದ ಎರಡು ದಿನಗಳಿಂದ ಫ‍್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದು ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಬ್ಯಾರಿಕೇಡ್ ತಳ್ಳಿ ವಿಧಾನಸೌಧಕ್ಕೆ ಮುತ್ತಿಗೆಗೆ ಮುಂದಾದ ಪ್ರತಿಭಟನಾನಿರತ ಕಾರ್ಯಕರ್ತೆಯರನ್ನ ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಬೇರೆಡೆಗೆ ಸ್ಥಳಾಂತರಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಉತ್ತರ ಪ್ರದೇಶ : ಹಾಳಾದ ಮೊಬೈಲ್ ಫೋನ್ ರಿಪೇರಿ ಮಾಡಲು ಮನೆಯವರು ನಿರಾಕರಿಸಿದ್ದರಿಂದ 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಬಾಲಕ ಮೊಬೈಲ್ ಗೇಮ್‌ಗಳಿಗೆ ದಾಸನಾಗಿದ್ದ ಎಂದು ಮನೆಯವರು ಹೇಳಿದ್ದಾರೆ. ಓದುವ ಕಡೆ ಗಮನ ಕೊಡದೆ ಮೊಬೈಲ್‌ನಲ್ಲಿ ಗೇಮ್‌ ಆಡುತ್ತಿದ್ದ ಮಗುವಿಗೆ ಮನೆಯವರು ನಿರಂತರವಾಗಿ ನಿಂದಿಸುತ್ತಿದ್ದರು. ಮೊಬೈಲ್ ಫೋನ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಮನೆಯವರಿಗೆ ಫೋನ್ ರಿಪೇರಿ ಮಾಡಲು ಒತ್ತಾಯಿಸಿದರು, ಆದರೆ ಅವರು ಅದನ್ನು ಮಾಡಲು ನಿರಾಕರಿಸಿದರು. ಇದರಿಂದ ಮನನೊಂದ ಬಾಲಕ ತನ್ನ ಕೊಠಡಿಗೆ ತೆರಳಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ. ಮೃತದೇಹವನ್ನು ಪೊಲೀಸರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳು ತಂತ್ರ, ರಣ ತಂತ್ರ ಹೆಣಿಯುತ್ತಿವೆ. ಅಧಿಕಾರಕ್ಕಾಗಿ ಮತದಾರರ ಮನೆ ಭಾಗಿಲಿಗೆ ಹೋಗೋದು ಒಂದು ಕಡೆಯಾದರೆ ಎದುರಾಳಿ ಅಭ್ಯರ್ಥಿಗಳನ್ನು ಮಟ್ಟ ಹಾಕಲು ತಮ್ಮ ಪಕ್ಷದಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂಬ ಲೆಕ್ಕಾಚಾರ ಮತ್ತೊಂದೆಡೆ ಭರ್ಜರಿಯಾಗಿ ನಡೆದಿದೆ. ಇನ್ನು ಸಾರ್ವಜನೀಕ ಸಭೆಗಳಲ್ಲಿ ಸೌಲಭ್ಯಗಳ ಸುರಿಮಳೆ ಯಥೆಚ್ಚವಾಗಿ ಸುರಿಯುತ್ತದೆ. ಇವುಗಳ ಮಧ್ಯೆಯೆ ಎಚ್. ಡಿ ಕುಮಾರಸ್ವಾಮಿ ಅವರನ್ನು ಸೋಲಿಸೋಕೆ ಸಿದ್ದರಾಮಯ್ಯ ಅವರು ಹೊಸ ಅಸ್ತ್ರ ಉಪಯೋಗಿಸಲು ಮುಂದಾಗಿದ್ದು ಇದಕ್ಕೆ ಹೈಕಮಾಂಡ್ ಅಸ್ತು ಅನ್ನುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದ್ರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮಣಿಸಿ ದೊಡ್ಡ ಮಟ್ಟದಲ್ಲಿ ಜಯಭೇರಿ ಭಾರಿಸಬೇಕು. ಅದಕ್ಕೆ ಮಂಡ್ಯ, ರಾಮನಗರದಂತಹ ಭದ್ರ ಕೋಟೆಯಲ್ಲಿ ಜೆಡಿಎಸ್ ಮಣಿಸಬೇಕು. ರಮ್ಯಾ ಅವರನ್ನ ಚನ್ನಪಟ್ಟಣದಿಂದ ಕಣಕ್ಕಿಳಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ. ಇದು ಮಂಡ್ಯದ ಮೇಲೂ ಪರಿಣಾಮ ಬೀರಲಿದೆ ಅನ್ನೋದು ಸಿದ್ದರಾಮಯ್ಯ ವಾದ ಎಂದು ಹೇಳಲಾಗುತ್ತಿದೆ. ತ್ರಿಕೋನ ಸ್ಪರ್ಧೆಯಲ್ಲಿ ರಮ್ಯಾ ಗೆಲುವಿಗೆ ಅವಕಾಶ ಜಾಸ್ತಿ…

Read More

ಮುಂಬೈ: ನಿರಂತರ ನಷ್ಟಕ್ಕೆ ಸಿಲುಕಿದ್ದ ಅದಾನಿ ಎಂಟರ್‌ಪ್ರೈಸಸ್‌ ಮತ್ತೆ ಲಾಭದತ್ತ ಹೆಜ್ಜೆ ಹಾಕಿದ್ದು ಅಕ್ಟೋಬರ್‌-ಡಿಸೆಂಬರ್‌ ಮೂರನೇ ತ್ರೈಮಾಸಿಕದಲ್ಲಿ 820 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಶೇ.42ರಷ್ಟು ಏರಿಕೆಯಾಗಿದ್ದು 26,612.2 ಕೋಟಿ ರೂ. ಹೆಚ್ಚಾಗಿದ್ದು 2022-23ರ ಹಣಕಾಸು ವರ್ಷದಲ್ಲಿ ಅದಾನಿ ಎಂಟರ್‌ಪ್ರೈಸಸ್‌ 29,245 ಕೋಟಿ ರೂ. ಆದಾಯ ಮತ್ತು 582.80 ಕೋಟಿ ನಿವ್ವಳ ಲಾಭವನ್ನು ಗಳಿಸಬಹುದು ಎಂದು ಬ್ಲೂಮ್‌ಬರ್ಗ್ ಅಂದಾಜಿಸಿದೆ. 2021ರ ಈ ಅವಧಿಯಲ್ಲಿ11.63 ಕೋಟಿ ರೂ. ನಷ್ಟ ಅನುಭವಿಸಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಕನಸಿನ ಯೋಜನೆ ಸಾಕಾರಗೊಳ್ಳಲು ದಿನಗಣನೆ ಆರಂಭವಾಗಿದೆ. ಬೆಳಗಾವಿ ಹೊರವಲಯದ ರಾಜಹಂಸಗಡದಲ್ಲಿ ನಿರ್ಮಾಣವಾಗಿರುವ, ರಾಷ್ಟ್ರದಲ್ಲೇ ಬೃಹತ್ ಆಗಿರುವ ಛತ್ರಪತಿ ಶಿವಾಜಿ ಮಹಾರಾಜ ಭವ್ಯ ಮೂರ್ತಿ ಅನಾವರಣಕ್ಕೆ ಮುಹೂರ್ತ ನಿಗದಿಯಾಗಿದೆ. ತನ್ನಿಮಿತ್ತ ಮಾರ್ಚ್ 4 ಮತ್ತು 5ರಂದು 2 ದಿನಗಳ ಕಾಲ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾಜಹಂಸಗಡ ಕೋಟೆ ಆವರಣದಲ್ಲಿ ಹಬ್ಬದ ಸಂಭ್ರಮ ನಿರ್ಮಾಣವಾಗಲಿದೆ. ಮಾರ್ಚ್ 5ರಂದು ಬೆಳಗ್ಗೆ 10 ಗಂಟೆಗೆ 50 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣಗೊಳ್ಳಲಿದೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕರೂ, ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ, ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಸತೇಜ್ (ಬಂಟಿ) ಪಾಟೀಲ, ಖ್ಯಾತ ಮರಾಠಿ ನಟ ಹಾಗೂ ಲೋಕಸಭಾ ಸದಸ್ಯ ಡಾ. ಅಮೋಲ್ ಕೋಲ್ಲೆ,…

Read More

ತಿಪಟೂರು: ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಿ.ಎನ್.ಪ್ರೇಮ ಮಾತನಾಡಿ, ಸಮುದಾಯದ ಯೋಗ ಕ್ಷೇಮಕ್ಕಾಗಿ ಆರೋಗ್ಯ ಅಮೃತ ಅಭಿಯಾನ ಮಾಡಲಾಗುತ್ತಿದ್ದು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಬಾಲ್ಯ ವಿವಾಹ ನಿಷೇಧ, ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆಗಟ್ಟುವಿಕೆಗೆ ಸಂಬಂಧಿಸಿದ ವಿಷಯಗಳ ಕುರಿತು ತರಬೇತಿಯಲ್ಲಿ ಪ್ರೇಮ ಮಾಹಿತಿ ನೀಡಿದರು. ತರಬೇತಿಯ ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾದ ನೇತ್ರಾವತಿ ಮಾತನಾಡಿ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆರೋಗ್ಯಕ್ಕೆ ಕಿಟ್ ಬಳಸಿ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯತಿ ಸದಸ್ಯರುಗಳಾದ ಜ್ಯೋತಿ, ರೇಣುಕಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಿನಾಥ್, ಕಾರ್ಯದರ್ಶಿ ವಿಜಯಕುಮಾರ್, ಆರೋಗ್ಯ ಇಲಾಖೆಯ ಮಂಜುಳಾ, ಸೌಜನ್ಯ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ತರಬೇತಿಯಲ್ಲಿ ಹಾಜರಿದ್ದರು . ಆರೋಗ್ಯ ಇಲಾಖೆಯ ಸಿಬ್ಬಂದಿ, ಆರೋಗ್ಯ ಕಿಟ್ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ವರದಿ: ಆನಂದ, ತಿಪಟೂರು ನಮ್ಮತುಮಕೂರು.ಕಾಂನ…

Read More

ಬೆಂಗಳೂರು: ಡಿಸಿಸಿ ಬ್ಯಾಂಕ್ ನೇಮಕಾತಿ ಮತ್ತು ವ್ಯವಹಾರಗಳ ಕುರಿತು ಸರಕಾರ ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಸಹಕಾರಿ ಸಚಿವ ಸೋಮಶೇಖರ್ ಹೇಳಿದ್ಧಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ನಡೆದ ಅಕ್ರಮಗಳ ತನಿಖೆಯನ್ನ ಸರ್ಕಾರ ಸಿಬಿಐಗೆ ಕೊಡಬೇಕು ಜೆಡಿಎಸ್ ಸದಸ್ಯ ಶರವಣ ಪ್ರಶ್ನೆ ಕೇಳಿದರು. , 5 ಡಿಸಿಸಿ ಬ್ಯಾಂಕ್ ಗಳಲ್ಲಿ ಅಕ್ರಮ ಆಗಿದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಅಕ್ರಮ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನ ವಜಾ ಮಾಡಲಾಗಿದೆ. ಅಕ್ರಮ ಮಾಡಿರೋ ಡಿಸಿಸಿ ಬ್ಯಾಂಕ್ ನಿಂದ ರಿಕವರಿ ಮಾಡೋ ಕೆಲಸ ಆಗ್ತಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪೆ.6 ರಂದು ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ನಡೆದ ಭೂಕಂಪದಿಂದ ಎರಡು ದೇಶಗಳು ಅಕ್ಷರಶಃ ನಲುಗಿದ್ದು ಸಾವಿನ ಸಂಖ್ಯೆ 41,000 ತಲುಪಿದೆ. ಅವಶೇಷಗಳಡಿಯಿಂದ ಬದುಕುಳಿದವರ ಆಕ್ರಂದನ ಮುಗಿಲು ಮುಟ್ಟಿದೆ. ಅವರ ರಕ್ಷಣೆಗಾಗಿ ರಕ್ಷಣಾ ತಂಡಗಳು ಕಳೆದೊಂದು ವಾರದಿಂದ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿವೆ. ನಿರಾಶ್ರಿತರು ಈಗ ಕೊರೆಯುವ ಚಳಿಯಲ್ಲಿ ಹಾಗೂ ಆಹಾರದ ಕೊರತೆಯಿಂದಾಗಿ ಹೆಣಗಾಡುತ್ತಿದ್ದಾರೆ. ನಗರವಿಡೀ ಸತ್ತ ಜನರ ವಾಸನೆ ಬರುತ್ತಿದೆ. ಅವಶೇಷಗಳಡಿ ಇನ್ನೂ ಹಲವರು ಜೀವಂತವಾಗಿರುವ ಸಾಧ್ಯತೆಯಿದ್ದು, ಎಲ್ಲರನ್ನೂ ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More