nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೆಂಪೇಗೌಡರ ಜನಪರ ಆಡಳಿತ ರಾಜಕಾರಣಿಗಳಿಗೆ ಮಾದರಿ: ಶಾಸಕ ಬಿ.ಸುರೇಶ್‌ ಗೌಡ

    June 28, 2026

    ಸತ್ತಿ ದೇವರ ಮಹೋತ್ಸವ ಊಟ ಸೇವಿಸಿ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಪಾವಗಡದಲ್ಲಿ ಆತಂಕ

    June 28, 2026

    ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ಮಾದರಿ ನಗರ ನಿರ್ಮಾತೃ ಕೆಂಪೇಗೌಡ

    June 28, 2026
    Facebook Twitter Instagram
    ಟ್ರೆಂಡಿಂಗ್
    • ಕೆಂಪೇಗೌಡರ ಜನಪರ ಆಡಳಿತ ರಾಜಕಾರಣಿಗಳಿಗೆ ಮಾದರಿ: ಶಾಸಕ ಬಿ.ಸುರೇಶ್‌ ಗೌಡ
    • ಸತ್ತಿ ದೇವರ ಮಹೋತ್ಸವ ಊಟ ಸೇವಿಸಿ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಪಾವಗಡದಲ್ಲಿ ಆತಂಕ
    • ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ಮಾದರಿ ನಗರ ನಿರ್ಮಾತೃ ಕೆಂಪೇಗೌಡ
    • ಕಾರಲ್ಲೇ ಪ್ರೇಮಿಗಳ ಗಲಾಟೆ: ಸ್ಫೋಟಕ ಸಿಡಿಸಿಕೊಂಡು ಯುವಕ ಸಜೀವ ದಹನ, ಯುವತಿಗೆ ಗಾಯ
    • ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ
    • ತುಮಕೂರು: ಜೂ.29ರಂದು ವಿವಿಧ ಹುದ್ದೆಗಳಿಗೆ ಕಾರ್ಯಾಗಾರ
    • ವಚನ ಗಾಯನ, ಪ್ರಬಂಧ ಸ್ಪರ್ಧೆ: ನೋಂದಾಯಿಸಲು ಸೂಚನೆ
    • ತೋಟಗಾರಿಕಾ ಬೆಳೆಗಳಿಗೆ ವಿಮಾ ಸೌಲಭ್ಯ: ರೈತರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿವಾಜಿ ಭಕ್ತರಿಗೆ, ಶಿವಾಜಿ ವಂಶಸ್ಥರಿಗೆ ಎಂಇಎಸ್ ಅವಮಾನ : ಮರಾಠಿ ಭಾಷಿಕರ ತೀವ್ರ ಆಕ್ರೋಶ
    ಜಿಲ್ಲಾ ಸುದ್ದಿ March 11, 2023

    ಶಿವಾಜಿ ಭಕ್ತರಿಗೆ, ಶಿವಾಜಿ ವಂಶಸ್ಥರಿಗೆ ಎಂಇಎಸ್ ಅವಮಾನ : ಮರಾಠಿ ಭಾಷಿಕರ ತೀವ್ರ ಆಕ್ರೋಶ

    By adminMarch 11, 2023No Comments2 Mins Read
    chatrapathi shivaji

    Provided by
    Provided by

    ಬೆಳಗಾವಿ: ಕರ್ನಾಟಕ ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿದ್ದೆಯಿಂದ ಎಚ್ಚೆತ್ತಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ, ಲಕ್ಷಾಂತರ ಛತ್ರಪತಿ ಶಿವಾಜಿ ಅನುಯಾಯಿಗಳಿಗೆ ಮತ್ತು ಛತ್ರಪತಿ ಶಿವಾಜಿ ವಂಶಸ್ಥರಿಗೆ ಅವಮಾನ ಮಾಡಲು ಮುಂದಾಗಿದೆ.

    ಛತ್ರಪತಿ ಶಿವಾಜಿಯ ವಂಶಸ್ಥರೇ ಆಗಿರುವ ಯುವರಾಜ ಸಂಭಾಜಿರಾಜೇ ಛತ್ರಪತಿಯವರೇ ಲೋಕಾರ್ಪಣೆ ಮಾಡಿರುವ ಮೂರ್ತಿಯನ್ನು ಮಾರ್ಚ್ 19ರಂದು ಶುದ್ಧೀಕರಣ ಮಾಡುವುದಾಗಿ ಘೋಷಿಸುವ ಮೂಲಕ ಎಂಇಎಸ್ ಛತ್ರಪತಿ ಶಿವಾಜಿ ವಂಶಸ್ಥರಿಗೇ ಅವಮಾನ ಮಾಡಲು ಮುಂದಾಗಿದೆ. ಅಲ್ಲದೆ, ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಯಿಂದಾಗಿ ಖುಷಿಯಲ್ಲಿದ್ದ ಶಿವ ಭಕ್ತರಿಗೂ ಎಂಇಎಸ್ ಮುಖಂಡರು ಅವಮಾನ ಮಾಡುತ್ತಿದ್ದಾರೆ.

    ಲಕ್ಷಾಂತರ ಜನರ ಬಹುವರ್ಷದ ಕನಸಾಗಿದ್ದ ರಾಜಹಂಸಗಡ ಕೋಟೆಯ ಮೇಲೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ನಿರಂತರ ಪ್ರಯತ್ನದಿಂದಾಗಿ ಛತ್ರಪತಿ ಶಿವಾಜಿ ಮೂರ್ತಿ ಇದೀಗ ಸ್ಥಾಪನೆಯಾಗಿದೆ. ಅದರಲ್ಲೂ, ಛತ್ರಪತಿ ಶಿವಾಜಿಯ 13ನೇ ವಂಶಸ್ಥರಾಗಿರುವ ಯುವರಾಜ ಸಂಭಾಜಿರಾಜೇ ಛತ್ರಪತಿ ಸ್ವತಃ ಆಗಮಿಸಿ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದಾರೆ.

    2 ದಿನಗಳ ಕಾಲ ಶಾಸ್ತ್ರೋಕ್ತ ವಿಧಿವಿಧಾನಗಳ ಮೂಲಕ, ರಾಜದರ್ಭಾರದಲ್ಲಿ ನಡೆಯುವ ಪಟ್ಟಾಭಿಷೇಕದ ಮಾದರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಅಭೂತಪೂರ್ವ ರೀತಿಯಲ್ಲಿ ಕಾರ್ಯಕ್ರಮ ನಡೆದಿದೆ. ಯುವರಾಜ ಸಂಭಾಜಿರಾಜೇ ಛತ್ರಪತಿ ಸ್ವತಃ ಈ ಎಲ್ಲ ಕಾರ್ಯಗಳನ್ನು ಮೆಚ್ಚಿದ್ದಲ್ಲದೆ, ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ತಮಗೆ ಎಲ್ಲಿಲ್ಲದ ಖುಷಿ ತಂದಿದೆ ಎಂದಿದ್ದರು. ಛತ್ರಪತಿ ಶಿವಾಜಿ ಎಲ್ಲ ಎಲ್ಲೆಗಳನ್ನು ಮೀರಿದವರು. ಅಂತಹ ಮಹಾನ್ ವ್ಯಕ್ತಿಗೆ ಇಂದು ಸಂದ ಗೌರವ ಎಂದೂ ಹೇಳಿದ್ದರು.


    Provided by
    Provided by

    ಇಂತಹ ಸಂದರ್ಭದಲ್ಲಿ, ಇದು ನಿಜವಾದ ಶಿವ ಸೈನಿಕರು, ಛತ್ರಪತಿ ಶಿವಾಜಿ ಅನುಯಾಯಿಗಳು ಸಂಭ್ರಮಿಸಬೇಕಾದ ಕ್ಷಣ. ಹಾಗಾಗಿಯೇ ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಬಿರು ಬಿಸಿಲೆನ್ನದೆ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ತಮ್ಮ ಕನಸು ಈಡೇರಿದ್ದಕ್ಕೆ, ಛತ್ರಪತಿ ಶಿವಾಜಿ ಮಹಾರಾಜರಿಗೆ ನಿಜವಾದ ಗೌರವ ಸಂದಿದ್ದಕ್ಕೆ, ಇಷ್ಟೊಂದು ಸುಂದರ ಮೂರ್ತಿ ಐತಿಹಾಸಿಕ ಕೋಟೆಯ ಮೇಲೆ ವಿಜ್ರಂಭಿಸುತ್ತಿರುವುದಕ್ಕೆ ಅವರ ಖುಷಿ ನೂರ್ಮಡಿಸಿತ್ತು.

    ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಛತ್ರಪತಿ ಶಿವಾಜಿ ಮೂರ್ತಿಯನ್ನು ಶುದ್ಧೀಕರಣ ಮಾಡಲು ಮುಂದಾಗಿರುವುದು ಮರಾಠಿ ಭಾಷಿಕರಷ್ಟೇ ಅಲ್ಲ, ಸಮಸ್ತ ಶಿವಾಜಿ ಅನುಯಾಯಿಗಳಿಗೆ ತೀವ್ರ ನೋವುಂಟುಮಾಡಿದೆ. ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಛತ್ರಪತಿ ಶಿವಾಜಿ ಕುರಿತ ಎಂಇಎಸ್ ಮುಖಂಡರ ಹುಸಿ ಭಕ್ತಿ ಅನಾವರಣವಾಗಿದೆ ಎಂದು ತೀವ್ರವಾಗಿ ಕಿಡಿಕಾರುತ್ತಿದ್ದಾರೆ.

    ಮಾರ್ಚ್ 19ರಂದು ನಡೆಸಲುದ್ದೇಶಿಸಿರುವ ಶುದ್ಧೀಕರಣ ಕಾರ್ಯವನ್ನು ಕೈಬಿಡದಿದ್ದರೆ ಎಂಇಎಸ್ ಮುಖಂಡರ ವಿರುದ್ಧ ಮರಾಠಿ ಭಾಷಿಕರು ಬೆಳಗಾವಿ ಜಿಲ್ಲೆಯಾದ್ಯಂತ ನಿಷೇಧ ನಿರ್ಣಯ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸುತ್ತಿದ್ದಾರೆ. ತಮ್ಮ ರಾಜಕೀಯ ತೆವಲಿಗಾಗಿ ಇಂತಹ ಅಚಾತುರ್ಯ ಕೆಲಸಕ್ಕೆ ಮುಂದಾಗಿರುವ ಎಂಇಎಸ್ ನ ಕೆಲವೇ ಕೆಲವು ನಾಯಕರು ಮುಗ್ದ ಮರಾಠಿಗರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಒಳ್ಳೆಯ ಕೆಲಸವನ್ನು ಯಾರೇ ಮಾಡಿದರೂ ಪ್ರಶಂಸಿಸಬೇಕು.

    ಅದರಲ್ಲೂ ಇಷ್ಟೊಂದು ಸುಂದರವಾದ ಛತ್ರಪತಿ ಶಿವಾಜಿ ಮೂರ್ತಿ ಸ್ಥಾಪನೆಯಂತಹ ಕೆಲಸಕ್ಕೆ ಪಕ್ಷ ಬೇಧ ಮರೆತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಬೇಕು. ಅದನ್ನು ಬಿಟ್ಟು ಒಳ್ಳೆಯ ಕೆಲಸಕ್ಕೂ ಕಲ್ಲು ಹಾಕಲು ಮುಂದಾದರೆ ಎಂಇಎಸ್ ನ್ನು ನಿರ್ಮೂಲನೆ ಮಾಡಬೇಕಾದೀತು ಎಂದು ಮರಾಠಿ ಭಾಷಿಕರು, ಶಿವಸೈನಿಕರು ಎಚ್ಚರಿಕೆ ನೀಡಿದ್ದಾರೆ.

    ದೇವರು ಮೈಲಿಗೆಯಾಗಲು ಸಾಧ್ಯವೇ?

    ಮರಾಠಿ ಭಾಷಿಕರು ಛತ್ರಪತಿ ಶಿವಾಜಿಯನ್ನು ದೇವರೆಂದೇ ಪರಿಗಣಿಸುತ್ತಾರೆ. ಇದೀಗ ಎಂಇಎಸ್ ಮುಖಂಡರು ಅಂತಹ ದೇವರನ್ನೇ ಶುದ್ಧೀಕರಣಗೊಳಿಸಲು ಮುಂದಾಗಿದ್ದಾರೆ. ದೇವರು ಮೈಲಿಗೆಯಾಗಲು ಸಾಧ್ಯವೇ? ಅಥವಾ ಛತ್ರಪತಿ ಶಿವಾಜಿಯನ್ನು ಎಂಇಎಸ್ ಮುಖಂಡರು ದೇವರೆಂದು ಒಪ್ಪುವುದಿಲ್ಲವೇ? ಈ ಗೊಂದಲವನ್ನು ಅವರು ಪರಿಹರಿಸಬೇಕಿದೆ ಎನ್ನುವುದು ಶಿವಭಕ್ತರ ಆಗ್ರಹವಾಗಿದೆ.

    ಒಟ್ಟಾರೆ ನೆಲೆ ಕಳೆದುಕೊಂಡಿರುವ ಮಹಾರಾಷ್ಟ್ರ ಏಕಿಕರಣ ಸಮಿತಿ ನಾಯಕರು ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ಛತ್ರಪತಿ ಶಿವಾಜಿ ವಿಷಯವನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿರುವುದು ವಿಪರ್ಯಾಸವಾಗಿದೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ಮಾದರಿ ನಗರ ನಿರ್ಮಾತೃ ಕೆಂಪೇಗೌಡ

    June 28, 2026

    ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ

    June 27, 2026

    ವಚನ ಗಾಯನ, ಪ್ರಬಂಧ ಸ್ಪರ್ಧೆ: ನೋಂದಾಯಿಸಲು ಸೂಚನೆ

    June 27, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕೆಂಪೇಗೌಡರ ಜನಪರ ಆಡಳಿತ ರಾಜಕಾರಣಿಗಳಿಗೆ ಮಾದರಿ: ಶಾಸಕ ಬಿ.ಸುರೇಶ್‌ ಗೌಡ

    June 28, 2026

    ತುಮಕೂರು: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಅವರ ಜನಪರ ಆಡಳಿತ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಬಿ.ಸುರೇಶ್‌ ಗೌಡ ತಿಳಿಸಿದರು.…

    ಸತ್ತಿ ದೇವರ ಮಹೋತ್ಸವ ಊಟ ಸೇವಿಸಿ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಪಾವಗಡದಲ್ಲಿ ಆತಂಕ

    June 28, 2026

    ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ಮಾದರಿ ನಗರ ನಿರ್ಮಾತೃ ಕೆಂಪೇಗೌಡ

    June 28, 2026

    ಕಾರಲ್ಲೇ ಪ್ರೇಮಿಗಳ ಗಲಾಟೆ: ಸ್ಫೋಟಕ ಸಿಡಿಸಿಕೊಂಡು ಯುವಕ ಸಜೀವ ದಹನ, ಯುವತಿಗೆ ಗಾಯ

    June 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.