Author: admin

ದುಡ್ಡಿನ ದುರಾಸೆ ಹೊಂದಿದ್ದ ಹೆಂಡತಿಯ ಕಾಟಕ್ಕೆ ಬೇಸತ್ತು ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಶ್ರೀನಗರ ಬಳಿಯ ಅವಲಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯಎಂದು ಗುರುತಿಸಲಾಗಿದೆ. ಬೆಂಗಳೂರಿನ ಬಾರ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಅಣ್ಣಯ್ಯ ಮತ್ತು ಉಮಾ 5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆ ಬಳಿಕ ಹಣದ ವಿಷಯದಲ್ಲಿ ಗಂಡ-ಹೆಂಡತಿ ನಡುವೆ ಪದೇಪದೆ ಜಗಳ ಆಗುತ್ತಿದ್ದು, ಹೆಂಡತಿಯ ನಿರಂತರ ಕಾಟಕ್ಕೆ ಅಣ್ಣಯ್ಯ ಬೇಸತ್ತಿದ್ದ. ‘ನಾನು ಎಷ್ಟು ದುಡಿದರೂ ನನ್ನ ಹೆಂಡತಿ ದುಡ್ಡು ದುಡ್ಡು ಎನ್ನುತ್ತಾಳೆ. ಎಷ್ಟು ದುಡಿದರೂ ಆಕೆಗೆ ಸಾಕಾಗುತ್ತಿಲ್ಲ. ಹೀಗಾಗಿ ನನಗೆ ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ. ನನ್ನ ಸಾವಿಗೆ ನಾನೇ ಕಾರಣ’ ಅಂತಾ ಅಣ್ಣಯ್ಯ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಮೈಸೂರು: ಪ್ರಧಾನಿ ಮೋದಿಯವರು ನಿಂತು ಭಾಷಣ ಮಾಡೋ ಕೆಂಪು ಕೋಟೆಯನ್ನು ಕಟ್ಟಿದ್ದೇ ಮುಸ್ಲಿಮರು.ಇಂತಹ ಕೆಂಪು ಕೋಟೆಯನ್ನು ಸಂಸದ ಪ್ರತಾಪ್ ಸಿಂಹ ಒಡೆಸಿ ಹಾಕುತ್ತಾರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ. ನಗರದಲ್ಲಿಂದು ಮೈಸೂರಿನಲ್ಲಿ ನಿರ್ಮಿಸಿರುವಂತ ಮಸೀದಿ ಗೋಪುರದ ರೀತಿಯ ಬಸ್ ನಿಲ್ದಾಣ ವಿವಾದ ಸಂಬಂಧ ಮಾತನಾಡಿ, ಮೈಸೂರು ಸಾಂಸ್ಕೃತಿಕ ನಗರಿಯಾಗಿದೆ. ಅಲ್ಲದೇ ವಿದ್ಯಾ ನಗರಿ ಕೂಡ ಹೌದು. ಆದ್ರೇ ಸಂಸದ ಪ್ರತಾಪ್ ಸಿಂಹ ಮಾತ್ರ ಅಜ್ಞಾನದ ಕಡೆಗೆ ಕರೆದೊಯ್ಯುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಟಿಪ್ಪು ನಂಜುಂಡೇಶ್ವರನಿಗೆ ಕೊಟ್ಟ ಪಂಚ ವಜ್ರವನ್ನು ಪ್ರತಾಪ್ ಸಿಂಹ ವಾಪಾಸ್ ಇಸ್ಕೊಕೊಳ್ಳುತ್ತಾರಾ.ಪ್ರಧಾನಿ ಮೋದಿಯವರು ನಿಂತು ಮಾತನಾಡುವಂತ ಕೆಂಪು ಕೋಟೆಯನ್ನು ಮುಸ್ಲೀಮರು ಕಟ್ಟಿದ್ದು. ಹಾಗಂತ ಅದನ್ನು ಪ್ರತಾಪ್ ಸಿಂಹ ಒಡೆಸಿ ಬಿಡುತ್ತಾರಾ ಎಂಬುದಾಗಿ ಪ್ರಶ್ನಿಸಿದರು. ಮುಸ್ಲಿಮರಲ್ಲಿ ಜಯಂತಿ, ಮೆರವಣಿಗೆಗೆ ಅವಕಾಶವಿಲ್ಲ. ಹೀಗಿದ್ದೂ ಟಿಪ್ಪು ಜಯಂತಿ ಮಾಡಿದ್ದು ದೊಡ್ಡ ತಪ್ಪು. ಮತ ರಾಜಕಾರಣಕ್ಕಾಗಿ ಟಿಪ್ಪು ಜಯಂತಿ ಮಾಡಿದ್ದಾರೆ. ನಾನು ಇದು ಬೇಡ ಅಂತ ಹೇಳಿದ್ದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ…

Read More

ತುಮಕೂರು: ರಾಜ್ಯದ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಸಹಾಯವಾಣಿ ಆರಂಭಿಸಲಾಗುವುದು. ನಿತ್ಯ 4 ಸಿಬ್ಬಂದಿ ಹಗಲು-ರಾತ್ರಿ ಎರಡು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ರೋಗಿಗಳ ಕುಟುಂಬದವರು ಬಂದಾಗ ಅವರಿಗೆ ನೆರವು ನೀಡಲಾಗುತ್ತದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ತುಮಕೂರಿನ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಸಿ ಸೆಕ್ಷನ್‌ ಹೆರಿಗೆ ಕುರಿತು ನಿಗಾ ವಹಿಸಲು ಸಮಿತಿ ರಚಿಸಲಾಗುವುದು. ಸಿ ಸೆಕ್ಷನ್‌ ಪ್ರಮಾಣ 20-40% ಒಳಗೆ ಇರಬೇಕಾಗುತ್ತದೆ. ಇದರಲ್ಲಿ ಉದ್ದೇಶಪೂರ್ವಕ ಅಥವಾ ಭ್ರಷ್ಟಾಚಾರ ಇರಬಾರದು. ಇದಕ್ಕೆ ಕಡಿವಾಣ ಹಾಕಲಾಗುವುದು. ಜಿಲ್ಲಾ ಸರ್ಜನ್‌, ಎಲ್ಲಾ ವಿಭಾಗದ ಮುಖ್ಯಸ್ಥರೊಂದಿಗೆ ಪ್ರತಿ ಶುಕ್ರವಾರ ಸಭೆ ನಡೆಸಿ ಚರ್ಚಿಸಬೇಕು. ಲೋಪಗಳು ಕಂಡುಬಂದರೆ ಕೂಡಲೇ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾಸ್ಪತ್ರೆಯನ್ನು ಪರಿಶೀಲಿಸಬೇಕೆಂದು ಸೂಚಿಸಲಾಗಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಧಾರವಾಡ: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ತಾಲಿಬಾನ್ ಕೃತ್ಯಕ್ಕಿಂತಲೂ ಕೆಟ್ಟದಾಗಿದೆ. ಆದ್ದರಿಂದ ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು. ಪ್ರೀತಿ ಮಾಡುವಾಗ, ಡೇಟಿಂಗ್ ಮಾಡುವಾಗ ವಿಚಾರ ಮಾಡಿ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಯಲ್ಲಿ ಗೆಳತಿಯನ್ನು 35 ಪೀಸ್‌ಗಳಾಗಿ ಮಾಡಿ ಹತ್ಯೆಮಾಡಿರುವ ಘಟನೆ ತಾಲಿಬಾನಿಗಳ ಕೃತ್ಯಕ್ಕಿಂತೂ ಕೆಟ್ಟದಾದದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್‌ಗೆ ಬಲಿಯಾಗುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ನಾನು ಕಳೆದ 15 ವರ್ಷಗಳಿಂದಲೂ ಎಚ್ಚರಿಕೆ ಕೊಡುತ್ತಲೇ ಬಂದಿದ್ದೇನೆ. ಇಷ್ಟೆಲ್ಲಾ ಎಚ್ಚರಿಕೆ ಕೊಟ್ಟರೂ ದೆಹಲಿಯಲ್ಲಿ ನಡೆದ ಇದೊಂದು ಘಟನೆ ದೊಡ್ಡ ದುರಂತವೇ ಸರಿ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ನೀತಿಯಲ್ಲಿ ಕಂಬಳವನ್ನು ಸೇರಿಸಲು ಕ್ರಮ ಕೈಗೊಳ್ಳುವ ಕುರಿತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಭರವಸೆ ನೀಡಿದ್ದಾರೆ. ಈ ಮೂಲಕ ಕರ್ನಾಟಕದ ಕರಾವಳಿಯ ಪ್ರಮುಖ ಜಾನಪದ ಸಂಸ್ಕೃತಿ ಕಂಬಳಕ್ಕೆ ಹೆಚ್ಚಿನ ಸ್ಥಾನಮಾನ ದೊರೆಯುವ ಆಶಾಭಾವನೆ ದೊರೆತಿದೆ. ಕಂಬಳವನ್ನು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ನೀತಿಯ ಭಾಗವಾಗಿ ಸೇರ್ಪಡೆಗೊಳ್ಳಲು ಒಂದು ಹೆಜ್ಜೆ ಮುಂದಿಡಲಾಗಿದೆ. ಕೇಂದ್ರ ಸರ್ಕಾರದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯಕ್‌ ಈ ಕುರಿತು ಉಳ್ಳಾಲದಲ್ಲಿ ಭರವಸೆ ನೀಡಿದ್ದಾರೆ. ಉಳ್ಳಾಲದಲ್ಲಿ ಕಂಬಳ ಗದ್ದೆಯೊಂದರ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಈ ಮಾಹಿತಿ ನೀಡಿದ್ದಾರೆ. ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಜೋಡಿ ಕೋಣಗಳನ್ನು ಕೆಸರು ಗದ್ದೆಯಲ್ಲಿ ಸ್ಪರ್ಧೆಗಿಳಿಸುವುದಾಗಿದೆ. ಹೊನಲು ಬೆಳಕಿನ ಸ್ಪರ್ಧೆಯೂ ನೆಯುವುದು. ಕನೆ ಹಲಗೆ, ಎರಡು ಜೋಡಿ ಕೋಣಗಳ ಓಟ ಹೀಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆಯು ನಡೆಯುತ್ತದೆ. ನವೆಂಬರ್ 26 ಕ್ಕೆ ಆರಂಭವಾಗಲಿರುವ ಕಂಬಳ ಕ್ರೀಡೆಯು ಎಪ್ರಿಲ್ 8 ರ ವರೆಗೆ ನಡೆಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಪ್ರತಿ ವರ್ಷ ಭಾರತದಿಂದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಚಾಲನೆ ನೀಡಿದ್ದಾರೆ. ಯುಕೆ-ಭಾರತ ಯುವ ವೃತ್ತಿಪರರ ಯೋಜನೆಯನ್ನು ದೃಢೀಕರಿಸಲಾಗಿದೆ. ಜಿ20 ಶೃಂಗಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 18-30 ವರ್ಷ ವಯಸ್ಸಿನ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಯುಕೆಗೆ ಬರಲು ಮತ್ತು ಎರಡು ವರ್ಷಗಳವರೆಗೆ ಕೆಲಸ ಮಾಡಲು 3,000 ವೀಸಾಗಳನ್ನು ನೀಡುತ್ತದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. 17ನೇ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಡೌನಿಂಗ್ ಸ್ಟ್ರೀಟ್ ರೀಡೌಟ್‌ನಲ್ಲಿ ಈ ಪ್ರಕಟಣೆ ಹೊರಬಿದ್ದಿದೆ. ಸುನಕ್‌ ಬ್ರಿಟಿಷ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಸಭೆಯಾಗಿದೆ. ಈ ಯೋಜನೆಯು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ಎರಡೂ ದೇಶಗಳ ಆರ್ಥಿಕತೆಯನ್ನು ಬಲಪಡಿಸಲು…

Read More

ಚಳಿಗಾಲದಲ್ಲಿ ಎಳ್ಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಅದರಲ್ಲೂ ಕಪ್ಪು ಎಳ್ಳಿಗೆ ಆದ್ಯ. ಚಳಿಗಾಲದಲ್ಲಿ ಎಳ್ಳು ಉಂಡೆ ಸೇವನೆ ಮೂಳೆಗಳನ್ನು ಬಲಪಡಿಸುತ್ತದೆ, ನೋವನ್ನು ಉಂಟು ಮಾಡುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಕಪ್ಪು ಎಳ್ಳು ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಷಿಯಮ್, ತಾಮ್ರ, ಮ್ಯಾಂಗನೀಸ್ ಮತ್ತು ಫೈಬರ್ ಮೊದಲದ ಅಂಶಗಳನ್ನು ಹೊಂದಿರುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಚಳಿಗಾಲ ಬಂದ ತಕ್ಷಣ, ಮೂಳೆಗಳಲ್ಲಿ ನೋವು ಉಂಟಾಗುತ್ತದೆ. ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ಚಳಿಗಾಲವು ತುಂಬಾ ನೋವಿನಿಂದ ಕೂಡಿರುತ್ತೆ. ಕಪ್ಪು ಎಳ್ಳನ್ನು ತಿನ್ನುವುದು ಅಥವಾ ಅದರ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಈ ನೋವಿಗೆ ಪರಿಹಾರ ಸಿಗುತ್ತದೆ. ಸಂಧಿವಾತದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಎಳ್ಳು ಬೀಜಗಳಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ತಾಮ್ರ ಮತ್ತು ಕ್ಯಾಲ್ಸಿಯಂ ಒಟ್ಟಿಗೆ ಮೂಳೆಗಳನ್ನು ಬಲಪಡಿಸುತ್ತವೆ. ಕಪ್ಪು ಎಳ್ಳು ಬೆಳೆಯುತ್ತಿರುವ ಮಕ್ಕಳಿಗೆ ತುಂಬಾ ಪ್ರಯೋಜನಕಾರಿ. ಕಪ್ಪು ಎಳ್ಳು ಹೃದಯದ ಆರೋಗ್ಯಕ್ಕೂ ಉತ್ತಮವಂತೆ. ಚಳಿಗಾಲದಲ್ಲಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಹೃದಯದ ಸಮಸ್ಯೆಯ ಸಾಧ್ಯತೆ ಹೆಚ್ಚಾಗುತ್ತದೆ. ಕಪ್ಪು ಎಳ್ಳು ದೇಹವನ್ನು…

Read More

ಮಧುಗಿರಿ: ಬಹುಜನ ಸಮಾಜ ಪಾರ್ಟಿ(BSP) ವತಿಯಿಂದ ಮಧುಗಿರಿ ತಾಲೂಕಿನ ರಾಜ ಬೀದಿಗಳಲ್ಲಿ ‘ಸಂವಿಧಾನ ಸಂರಕ್ಷಣಾ ಜನಜಾಗೃತಿ’ ಜಾಥಾ ನಡೆಯಿತು. ಜಾಥಾವನ್ನುದ್ದೇಶಿಸಿ ಮಾತನಾಡಿದ ಬಿಎಸ್ ಪಿ ಮುಖಂಡರು,  ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಇಷ್ಟು ವರ್ಷ ಮತ ನೀಡಿ ತೊಂದರೆಗೆ ಅನುಭವಿಸಿದ್ದೀರಿ, ಇನ್ನು ಮುಂದೆ ಬಿಎಸ್ ಪಿ ಪಕ್ಷಕ್ಕೆ ಮತ ನೀಡಿ, ರೈತರಿಗೆ ಸಾಲ ಮನ್ನಾ, ಬಡವರಿಗೆ ಗುಡಿಸಲು ಮುಕ್ತ ಯೋಜನೆ ಮೂಲಕ ಮನೆ ಮಂಜೂರು ಮಾಡುತ್ತೇವೆ. ಬಡವರ ಅಭಿವೃದ್ಧಿಯಾಗಬೇಕಾದರೆ ಕರ್ನಾಟಕದಲ್ಲಿ  ಬಿಎಸ್ ಪಿ ಅಧಿಕಾರ ವಹಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಮ್ ಜಿ. ಗೌತಮ್ , ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ,  ರಾಜ್ಯ ಕಾರ್ಯದರ್ಶಿ ವಾಸು,  ನಾಗೇಂದ್ರಪ್ಪ, ಮಂಜುನಾಥ,  ರಾಜಸಿಂಹ ಬೆಲ್ಲದ  ಮಡುಗು ಶಿವಕುಮಾರ್,  ತಾಲೂಕ್ ಅಧ್ಯಕ್ಷರು ಗೋಪಾಲ್ ಚಂದ ಪಾಶ,  ನಾಗರಾಜು, ಶಿವು ಸೇರಿದಂತೆ ಹಲವು  ಬಿಎಸ್ಪಿ ಮುಖಂಡರು ಜಾಥಾದಲ್ಲಿ ಭಾಗವಹಿಸಿದ್ದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಪಾವಗಡ : ಕೆ.ಎಸ್.ಆರ್. ಟಿ.ಸಿ. ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮಾಪುರ ಗೇಟ್ ಬಳಿ ಬುಧವಾರ ಸಂಜೆ ನಡೆದಿದೆ. ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ಪವನ್ ಕುಮಾರ್ (26) ಅಪಘಾತದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. KA 06, KSRTC ಬಸ್ ಸಂಖ್ಯೆ F1168 ಮತ್ತು ಬೈಕ್ ಸಂಖ್ಯೆ KA64 F3422 ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಸರಗೂರು : ತಾಲ್ಲೂಕಿನ ಪಟ್ಟಣದ ಬಸ್ ನಿಲ್ದಾಣ ಎದುರು ಬಳಿ ತಾಲ್ಲೂಕಿನ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಹಾಗೂ ಅಪ್ಪಾಜಿ ಕ್ಯಾಂಟಿನ್ ಸಂಸ್ಥಾಪಕ ಹಾಗೂ ಜೆಡಿಎಸ್ ಮುಖಂಡ ಕೆ ಎಂ ಕೃಷ್ಣನಾಯಕ ರವರ ಉಪಸ್ಥಿತಿಯಲ್ಲಿ ನಮ್ಮ ಅಪ್ಪಾಜಿ ಕ್ಯಾಂಟಿನ್ ಉದ್ಘಾಟನೆ ನೆರವೇರಿತು. ಸರಗೂರು ತಾಲ್ಲೂಕಿನ ನಾಗದೇವತೆ ಚಿಕ್ಕದೇವಮ್ಮನ ಸನ್ನಿಧಾನಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ಅಂಬೇಡ್ಕರ್ ಭವನದಿಂದ ವಾದ್ಯ ನಗರಿ ಮತ್ತು ಪೂಜೆ ಕುಣಿತ ವೀರಗಾಸೆ ನೃತ್ಯ ಪ್ರದರ್ಶನ ದೊಂದಿಗೆ ಬಂದ ಮೆರವಣಿಗೆ ಬಸ್ ನಿಲ್ದಾಣ ಬಳಿ ತಲುಪಿತು. ಅಪ್ಪಾಜಿ ಕ್ಯಾಂಟಿನ್ ಉದ್ಘಾಟನೆ ಬಳಿಕ ಪಡಗಲು ವಿರಕ್ತಮಠದ ಶ್ರೀ ಮಹದೇವಸ್ವಾಮಿ ಸ್ವಾಮೀಜಿ ಮಾತನಾಡಿ, ಈ ಕ್ಯಾಂಟಿನ್ ನಿಂದಾಗಿ ಬಡವರು ಹಾಗೂ ಶಾಲಾ ಕಾಲೇಜುಗಳ ಮಕ್ಕಳಿಗೆ ಅನುಕೂಲವಾಗಲಿದೆ. ಎಂ ಕೃಷ್ಣನಾಯಕರವರು ಅಪ್ಪಾಜಿ ಕ್ಯಾಂಟೀನ್ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಯಾಂಟಿನ್ ಸಂಸ್ಥಾಪಕ ಕೆ.ಎಂ.ಕೃಷ್ಣನಾಯಕ ಮಾತನಾಡಿ, ನಾನು ತಾಲ್ಲೂಕಿಗೆ ಬಡವರ ಸೇವೆ ಮಾಡಲು ಬಂದಿದ್ದೇನೆಯೇ ಹೊರತು ರಾಜಕೀಯ ಮಾಡಲು ಅಲ್ಲ.…

Read More