Subscribe to Updates
Get the latest creative news from FooBar about art, design and business.
- ಕಾರಲ್ಲೇ ಪ್ರೇಮಿಗಳ ಗಲಾಟೆ: ಸ್ಫೋಟಕ ಸಿಡಿಸಿಕೊಂಡು ಯುವಕ ಸಜೀವ ದಹನ, ಯುವತಿಗೆ ಗಾಯ
- ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ
- ತುಮಕೂರು: ಜೂ.29ರಂದು ವಿವಿಧ ಹುದ್ದೆಗಳಿಗೆ ಕಾರ್ಯಾಗಾರ
- ವಚನ ಗಾಯನ, ಪ್ರಬಂಧ ಸ್ಪರ್ಧೆ: ನೋಂದಾಯಿಸಲು ಸೂಚನೆ
- ತೋಟಗಾರಿಕಾ ಬೆಳೆಗಳಿಗೆ ವಿಮಾ ಸೌಲಭ್ಯ: ರೈತರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿಗಾಗಿ ಮಹಿಳೆಯರ ಪರದಾಟ: ಅಧಿಕಾರಿಗಳ ವಿರುದ್ಧ ಆಕ್ರೋಶ
- ಪಂಚಗ್ಯಾರಂಟಿ ಯೋಜನೆಗಳ ಸ್ಥಗಿತ ಸಾಧ್ಯವಿಲ್ಲ: ಸಿ.ಡಿ. ಚಂದ್ರಶೇಖರ್
- ಜೂಜಾಟ: 12 ಮಂದಿ ಆರೋಪಿಗಳ ಬಂಧನ
Author: admin
ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಕೇವಲ ಕಾಫೀ – ತಿಂಡಿ – ಬಿಸ್ಕೆಟ್ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಎನ್.ಆರ್ ರಮೇಶ್, ಸಿದ್ಧರಾಮಯ್ಯ ಮತ್ತು ಅವರ ಕಛೇರಿಯ ಸಿಬ್ಬಂದಿವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಯ ಅಂದಿನ ಅಧಿಕಾರಿಗಳು ಭಾಗಿಗಳಾಗಿ ಬೃಹತ್ ಹಗರಣ ನಡೆದಿದೆ. 2013-14 ರಿಂದ 2017-18 ರವರೆಗಿನ 05 ವರ್ಷಗಳ ಅವಧಿಯಲ್ಲಿ – ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ / ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ. ಈ 05 ವರ್ಷಗಳ ಅವಧಿಯಲ್ಲಿ ಕೇವಲ…
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಮನೆಯಲ್ಲಿ 8 ಕೋಟಿ ರೂ. ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ಮಾಡಾಳ್ ಮಿಸ್ಸಿಂಗ್ ಪೋಸ್ಟರ್’ ಅಭಿಯಾನ ನಡೆಯುತ್ತಿದೆ. ಪ್ರಕರಣದ ಎ1 ಆರೋಪಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಈ ಮಧ್ಯೆ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಪೋಸ್ಟರ್ ಅಭಿಯಾನ ನಡೆಸುತ್ತಿದ್ದು, ಮಾಡಾಳ್ ಮಿಸ್ಸಿಂಗ್ ಪೋಸ್ಟರ್ ಅಂಟಿಸುತ್ತಿದ್ದಾರೆ. ಲೋಕಾಯುಕ್ತ ಪ್ರಕರಣದಲ್ಲಿ A1 ಆರೋಪಿಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ 6ನೇ ದಿನವಾದರೂ ಪತ್ತೆ ಇಲ್ಲ. ಅವರನ್ನು ಹುಡುಕಿಕೊಡಿ ಎಂದು ದಾವಣಗೆರೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ನೇತೃತ್ವದಲ್ಲಿ ಅಭಿಯಾನ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮಿಸ್ಸಿಂಗ್ ಪೋಸ್ಟರ್ ಅಂಟಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಣೆಯಾದವರ ಪಟ್ಟಿ ಮಾದರಿಯಲ್ಲಿ ಪೋಸ್ಟರ್ ಅಂಟಿಸಿದ ಕಾಂಗ್ರೆಸ್, ಕೊನೆ ಬಾರಿ ಕಾಣಿಸಿಕೊಂಡಿದ್ದು ಸಿಎಂ ಕಚೇರಿಯಲ್ಲಿ.…
ಹಲವು ದಿನಗಳ ಅನಿಶ್ಚಿತತೆಯ ನಂತರ ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಸಚಿವ ಸಂಪುಟ ಇಂದು ಅಧಿಕಾರ ವಹಿಸಿಕೊಳ್ಳಲಿದೆ. ಹಾಲಿ ಮುಖ್ಯಮಂತ್ರಿಗಳಾದ ಕಾನ್ರಾಡ್ ಸಂಗ್ಮಾ ಮತ್ತು ಸೋದರಳಿಯ ರಿಯೊ ನಾಗಾಲ್ಯಾಂಡ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇಘಾಲಯದ ವಿವಿಧ ರಾಜಕೀಯ ಪಕ್ಷಗಳ ಒಕ್ಕೂಟವಾದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (MDA) ಅನ್ನು ಕ್ಯಾಬಿನೆಟ್ ರಚನೆಗೆ ಮುಂಚಿತವಾಗಿ ಪುನರ್ರಚಿಸಲಾಯಿತು. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅಧ್ಯಕ್ಷತೆಯ ಸಮಿತಿಯು ಬಿಜೆಪಿ, ಯುಡಿಪಿ, ಎಚ್‌ಎಸ್‌ಪಿಡಿಪಿ ಮತ್ತು ಪಿಡಿಎಫ್‌ಗಳನ್ನು ಒಳಗೊಂಡಿದೆ. ಹೊಸ ಸಂಪುಟದಲ್ಲಿ ಸಂಗ್ಮಾ ಅವರ ಎನ್‌ಪಿಪಿ 8 ಸಚಿವರನ್ನು ಪಡೆಯಲಿದೆ. ಯುಡಿಪಿ, ಎಚ್‌ಎಸ್‌ಪಿಡಿಪಿ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಗಲಿದೆ. ಮುಖ್ಯಮಂತ್ರಿ ಸೇರಿದಂತೆ 12 ಸಚಿವರಲ್ಲಿ 4 ಮಂದಿ ಗಾರೋ ಹಿಲ್ಸ್‌ನಿಂದ ಮತ್ತು 8 ಮಂದಿ ಖಾಸಿ-ಜೈನ್ತಿಯಾ ಹಿಲ್ಸ್‌ನವರು. 11 ಶಾಸಕರನ್ನು ಹೊಂದಿರುವ ಯುಡಿಪಿ ಮತ್ತು 2 ಶಾಸಕರನ್ನು ಹೊಂದಿರುವ ಪಿಡಿಎಫ್ ಬೆಂಬಲದೊಂದಿಗೆ ಸಂಗ್ಮಾ ಸರ್ಕಾರಕ್ಕೆ 45 ಶಾಸಕರ ಬೆಂಬಲವಿದೆ. ನಾಗಾಲ್ಯಾಂಡ್‌ನ ದೀರ್ಘಾವಧಿಯ ಮುಖ್ಯಮಂತ್ರಿ ನೆಫ್ಯೂ ರಿಯೊ…
ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್ ಕಟ್ಟಿಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಮಕ್ಕಳನ್ನು ಹೊಂದುವ ಸಾಮರ್ಥ್ಯ ಇಲ್ಲದ ಕಾರಣ ರಾಹುಲ್ ಗಾಂಧಿ ಮದುವೆಯಾಗಿಲ್ಲ ಎಂದು ನಳಿನ್ ಕುಮಾರ್ ಅವಮಾನಿಸಿದ್ದಾರೆ. ಬಿಜೆಪಿಯ ಸಂಕಲ್ಪ ಯಾತ್ರೆಯ ಭಾಗವಾಗಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕರ್ನಾಟಕ ಎಂಎಲ್‌ಸಿ ಮಂಜುನಾಥ್ ಅವರನ್ನು ಉಲ್ಲೇಖಿಸಿ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ. ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಈ ಹಿಂದೆ ಕೋವಿಡ್ ಲಸಿಕೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದರು. ಲಸಿಕೆ ಹಾಕಿದರೆ ಮಕ್ಕಳಾಗುವುದಿಲ್ಲ ಎಂದರು. ಆದರೆ ನಂತರ ಅವರು ಲಸಿಕೆ ತೆಗೆದುಕೊಂಡರು. ರಾಹುಲ್ ಗಾಂಧಿ ಮದುವೆಯಾಗದೇ ಇರಲು ಅವರಿಗೆ ಮಕ್ಕಳಾಗುವ ಸಾಮರ್ಥ್ಯ ಇಲ್ಲದಿರುವುದೇ ಕಾರಣ ಎಂದು ಎಂಎಲ್ ಸಿ ಮಂಜುನಾಥ್ ಕಳೆದ ದಿನ ಹೇಳಿದ್ದರು. ನಳಿನ್‌ಕುಮಾರ್ ನಿಂದನೆ ವಿರುದ್ಧ ಕಾಂಗ್ರೆಸ್ ಹರಿಹಾಯ್ದರು. ನಳಿನ್ ಕುಮಾರ್ ಅವರಿಗೆ ಗಂಭೀರ ಮಾನಸಿಕ ಸಮಸ್ಯೆಗಳಿವೆ ಎಂದು ಕಾಂಗ್ರೆಸ್ ಶಾಸಕ ಮತ್ತು ರಾಜ್ಯ ಸಂವಹನ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟ್ವೀಟ್…
ಅಂತರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8 ರಂದು ತೆಲಂಗಾಣ ಸರ್ಕಾರ ಮಹಿಳಾ ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಈ ಸಂಬಂಧ ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಮುಖ್ಯ ಕಾರ್ಯದರ್ಶಿ ಎ.ಶಾಂತಿ ಕುಮಾರಿ ಸಹಿ ಹಾಕಿದ್ದಾರೆ. ತೆಲಂಗಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಜೆ ಘೋಷಿಸಲಾಗಿದೆ. ತೆಲಂಗಾಣ ಸರ್ಕಾರವು ಒಂದು ವಾರದ ಆಚರಣೆಯನ್ನು ಪ್ರಾರಂಭಿಸುತ್ತಿದೆ. ಸಮಾಜಕ್ಕೆ ಮಹಿಳೆಯ ಮಹತ್ವವನ್ನು ಸಾರಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ನಗರ, ಗ್ರಾಮೀಣ ಮತ್ತು ಸ್ಥಳೀಯ ಪ್ರದೇಶಗಳಲ್ಲಿನ ಮಹಿಳಾ ಪ್ರತಿನಿಧಿಗಳು, ಸ್ವ-ಸಹಾಯ ಗುಂಪುಗಳು ಮತ್ತು ವಿವಿಧ ಎನ್‌ಜಿಒಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲಾಗುವುದು. ತೆಲಂಗಾಣದ ವಿವಿಧ ಸ್ಥಳಗಳಲ್ಲಿ ವಿವಿಧ ಸ್ವಸಹಾಯ ಗುಂಪಿನ ಕಾರ್ಯಕರ್ತರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಸಹ ಆಯೋಜಿಸಲಾಗಿದೆ. ಇದಲ್ಲದೆ, ಸರ್ಕಾರವು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಂತೆ ವಿಸ್ತಾರವಾದ ಆಚರಣೆಗಳನ್ನು ಸಹ ಆಯೋಜಿಸಿದೆ. ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣದ ಕುರಿತು ವಿವಿಧ ವಿಚಾರ ಸಂಕಿರಣಗಳನ್ನೂ ಆಯೋಜಿಸಲಾಗಿದೆ ಎಂದು…
ತಿಪಟೂರು: ಬಡವರ ಪಾಲಿನ ಸಂಜೀವಿನಿ ಎಂದರೆ ಸರ್ಕಾರಿ ಆಸ್ಪತ್ರೆ ಆದರೆ ಅಲ್ಲಿನ ದಂತ ವೈದ್ಯರೊಬ್ಬರು ದಿನನಿತ್ಯ ಕುಡಿದಿರುತ್ಥಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇಂದು ಕರ್ತವ್ಯದ ವೇಳೆಯಲ್ಲಿಯೇ ಕುಡಿದು ಟೇಬಲ್ ಮೇಲೆ ಕಾಲು ಹಾಕಿಕೊಂಡು ಬಂದ ರೋಗಿಗಳಿಗೆ ಕೈಮುಗಿದು ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿನ ಕರ್ತವ್ಯನಿರತ ದಂತ ವೈದ್ಯ ಡಾ.ಜಯಪ್ರಕಾಶ್ ಇಷ್ಟೆಲ್ಲಾ ಅವಾಂತರ ಮಾಡಿಕೊಂಡಿದ್ದಾರೆ. ಈ ವೈದ್ಯ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಬಂದಾಗಿನಿಂದಲೂ ಈತ ಯಾವಾಗಲು ಪಾನ ಮತ್ತನಾಗಿರುತ್ತಾನೆಂದು ಚಿಕಿತ್ಸೆ ಪಡೆದ ರೋಗಿಗಳು ಹೇಳುತ್ತಿದ್ದರು. ಇನ್ನು ಯಾವಾಗ ಹೋದರು ಇನ್ನೊಂದು ದಿನ ಬನ್ನಿ ಎನ್ನುತ್ತಾ ದಿನವನ್ನು ತಳ್ಳುತ್ತಿದ್ದರು. ಆದರೆ ಇಂದು ಕರ್ತವ್ಯದ ವೇಳೆಯಲ್ಲಿಯೇ ಪಾನಮತ್ತನಾಗಿ ಛೇರ್ಮೇಲೆ ಕುಳಿತು ಟೇಬಲ್ ಮೇಲೆ ಕಾಲು ಹಾಕಿಕೊಂದ್ದಾರೆ. ಕೊಠಡಿಯ ಹೊರಗೆ ಬಂದಿರುವ ಹೊರ ರೋಗಿಗಳು ಸರದಿಯ ಸಾಲಿನಲ್ಲಿ ನಿಂತಿದ್ದಾರೆ. ಹೀಗೆ ಮಲಗಿರುವ ವೈದ್ಯರನ್ನು ರೋಗಿಯೊಬ್ಬರು ಎಚ್ಚರಿಸಲು ಹೋದಾಗ ಅವರನ್ನು ಮಾತನಾಡಿಸಲು ಸಾಧ್ಯವಾಗದಷ್ಟು ಪಾನಮತ್ತನಾದ ವೈದ್ಯ ಕೈ ಸನ್ನೆಯಲ್ಲಿಯೇ…
ತಿಪಟೂರು: ಕೈ ಕೊಟ್ಟಿರುವ ಕೊಬ್ಬರಿ ಬೆಲೆ ರೈತರ ಜೀವನ ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದೆ ಎಂದು ಜನಸ್ಪಂದನ ಟ್ರಸ್ಟ್ಅಧ್ಯಕ್ಷ ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ತಿಳಿಸಿದರು. ತಾಲೂಕಿನಲ್ಲಿ ಗ್ರಾಮಸ್ಥರೊಂದಿಗೆ ಕೊಬ್ಬರಿ ಬೆಂಬಲ ಬೆಲೆ 13ನೇ ದಿನಕ್ಕೆ ಕಾಲಿಟ್ಟಿರುವ ರೈತ ಧರಣಿಗೆ ಬೆಂಬಲ ನೀಡಿದ ಅವರು, ಮೂರು ನಾಲ್ಕು ತಿಂಗಳ ಹಿಂದೆ ಕುಂಟರಿಗೆ 18,000 ಪಡೆಯುತ್ತಿದ್ದ ರೈತರು ಇದೀಗ ಬೆಲೆ ಶೇಕಡ 55 ಕಡಿಮೆ ಆಗಿರುವುದರಿಂದ ಸಂಕಷ್ಟದಲ್ಲಿದ್ದಾರೆ. ಬೆಲೆ ಕಡಿಮೆಯಾಗಿರುವುದು ರೈತರಿಗೆ ಸಂಕಷ್ಟವಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು. ಕೇಂದ್ರ ಸಚಿವ ಅಮಿತ್ ಶಾ ಅವರನ್ನ ಕರೆಸಿ ತಿಪಟೂರಿನಲ್ಲಿ ಅದ್ದೂರಿ ತೆಂಗು ಬೆಳೆಗಾರರ ಸಮಾವೇಶ ಮಾಡಿ, ರೈತರಿಗೆ ಭರವಸೆ ನೀಡಿದರು. ಆದರೆ ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ಜಿಲ್ಲೆಯ ಮೂವರು ಸಚಿವರು ಕೂಡ ಮಾತಿಗೆ ತಪ್ಪಿದ್ದಾರೆ. ಕೊಬ್ಬರಿ ಬೆಲೆ ಇಳಿಕೆಯ ಬಗ್ಗೆ ಶಾಸಕರಾಗಲಿ ಮಂತ್ರಿಗಳಾಗಲಿ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಧರಣಿಯಲ್ಲಿ ಬೈರನಾಯಕನಹಳ್ಳಿ ಗ್ರಾಮಸ್ಥರು, ಮಹಿಳೆಯರು ಭಾಗವಹಿಸಿದ್ದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ದೊಡ್ಡಬಳ್ಳಾಪುರದ ಮದುರಹೊಸಹಳ್ಳಿ ನಿವಾಸಿ ಮುನಿಆಂಜನೇಯ(65) ಧರ್ಮಸ್ಥಳಕ್ಕೆ ಹೊರಟಿದ್ಧ ನಿವೃತ್ತ ಪೊಲೀಸ್ ಸಿಬ್ಬಂದಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುನಿಅಂಜನೇಯ ಗೆಳೆಯರ ಜೊತೆ ಧರ್ಮಸ್ಥಳಕ್ಕೆ ಹೊರಟಿದ್ದರು. ನಿನ್ನೆ ಮಧ್ಯಾಹ್ನ 2ಗಂಟೆಗೆ ಮನೆ ಬಿಟ್ಟಿದ್ದ ಮುನಿಅಂಜನೇಯ ಇಂದು ಬೆಳಿಗ್ಗೆ 3ಗಂಟೆಯಲ್ಲಿ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನು ಮುನಿಆಂಜನೇಯ ಅವರ ಬಳಿ ಇದ್ದ ನಗದು ಚಿನ್ನಾಭರಣ ನಾಪತ್ತೆಯಾಗಿದೆ. ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ನಾಲ್ಕರಿಂದ ಆರು ಶಾಸಕರನ್ನ ಬಿಟ್ಟು ಬಹುತೇಕರಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿ ಬಿಎಸ್ ಯಡಿಯೂರಪ್ಪ, ಬಿಜೆಪಿಗೆ ಯಾರು ಬರ್ತಾರೋ ಅವರನ್ನ ನಾವು ಸ್ವಾಗತಿಸುತ್ತೇವೆ. ವರಿಷ್ಠರು ಎಲ್ಲಿ ಹೇಳ್ತಾರೋ ಅಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ. ಬಹುತೇಕ ಶೀಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸಬಹುದು . ಮೋದಿ ಬಗ್ಗೆ ಮಲ್ಲಿಕಾರ್ಜುನ ರ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಜನ ಸೇರುತ್ತಿಲ್ಲ. ಕಾಂಗ್ರೆಸ್ಸಿಗರು ರಾಜ್ಯಕ್ಕೆ ರಾಹುಲ್ ಗಾಂಧಿ ಯಾಕೆ ಕರೆತರುತ್ತಿಲ್ಲ. ಕಾಂಗ್ರೆಸ್ಸಿಗರು ಬೇಕಾದರೇ ತಮ್ಮ ನಾಯಕರನ್ನ ಕರದು ಪ್ರಚಾರ ಮಾಡಲಿ ಎಂದು ಬಿಎಸ್ ವೈ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ರಾಯಬಾಗ: ಚುನಾವಣಾ ಸಮೀಪಿಸುತ್ತಿದ್ದಂತೆ ಈಗ ಎಲ್ಲೆಡೆ ಗಿಫ್ಟ್ ಪಾಲಿಟಿಕ್ಸ್ ತಾರಕಕ್ಕೇರುತ್ತಿದೆ. ಒಂದೆಡೆ ಪ್ರಾಮಾಣಿಕತೆಯ ಮಂತ್ರ, ಇನ್ನೊಂದೆಡೆ ಆಮಿಷದ ತಂತ್ರ ಮುಂದುವರಿದಿದೆ. ಹೊಸಹೊಸ ಆಕಾಂಕ್ಷಿಗಳು ತಮ್ಮ ಜಾಗ ಭದ್ರಪಡಿಸಿಕೊಳ್ಳಲು ಹೈ ಕಮಾಂಡ್ ಪಾದಪೂಜೆಯ ಜೊತೆಜೊತೆಗೇ ಜನರ ನಿಯತ್ತನ್ನೇ ಹಾಳುಗೆಡವುತ್ತಿದ್ದಾರೆ. ಇದೀಗ ರಾಯಬಾಗ ಕ್ಷೇತ್ರದಲ್ಲಿ ನಡೆದ ವಿದ್ಯಮಾನವೊಂದು ಯಾರು ಪ್ರಾಮಾಣಿಕರು? ಅಧಿಕಾರ ಮುಖ್ಯವೋ, ಪ್ರಾಮಾಣಿಕತೆ ಮುಖ್ಯವೋ ಎಂಬೆಲ್ಲ ವಿಷಯಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತಮಿಳುನಾಡು ಸರಕಾರದ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಮತದಾರರಿಗೆ ಆಮಿಷವೊಡ್ಡಿರುವ ಘಟನೆ ರಾಯಬಾಗ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ನಡೆದಿದೆ. ಇದಕ್ಕಾಗಿಯೇ ಅವರು ಜೋಡಟ್ಟಿ ಗ್ರಾಮದಲ್ಲಿ ಕಲ್ಲೋಳಿಕರ ತೋಟದಲ್ಲಿ ಬಾವಿ ಪೂಜೆ ಹಾಗೂ ಸುಮಂಗಲಿಯರ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಿಸೀರೆಗಳನ್ನು ಹಂಚಲು ಮುಂದಾಗಿದ್ದಾರೆ. ಈ ವಿಷಯ ಒಬ್ಬರಿಂದೊಬ್ಬರಿಗೆ ಹರಡಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಹಿಳಾ ಮಣಿಗಳು ಸೀರೆಗಾಗಿ ಮುಗಿಬಿದ್ದಿದ್ದಾರೆ. ಇದ್ದ ಸೀರೆ ಲೆಕ್ಕಕ್ಕೂ ಬಂದ ಮಹಿಳೆಯರ ಲೆಕ್ಕಕ್ಕೂ ತಾಳಮೇಳವಾಗದೇ ತಬ್ಬಿಬ್ಬಾದ ಶಂಭು…