ಮಧುಗಿರಿ: ತುಮಕೂರಿನ ಸೈಬರ್ ಠಾಣೆಯ ಪೊಲೀಸರು ಭರ್ಜರಿಯಾಗಿ ಕಾರ್ಯಾಚರಣೆ ನಡೆಸಿ ನಸುಕಿನ ಜಾವದಲ್ಲಿ ಜೂಜಾಟ ಆಡುತ್ತಿದ್ದವರನ್ನು ಬಂಧಿಸಿ ಗಡಿ ಭಾಗದಲ್ಲಿ ಜೂಜಾಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ತಾಲೂಕಿನ ಕೊಡಿಗೇನಹಳ್ಳಿ ಹೊಬಳಿಯ ಹಾಗೂ ತಾಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಇರುವ ತೆರೆಯೂರು ಗ್ರಾಮದ ಚೆನ್ನಾವರ ಕೆರೆಯ ಅಂಗಳದಲ್ಲಿ ಶುಕ್ರವಾರ ನಸುಕಿನ ಜಾವದಲ್ಲಿ ಸೈಬರ್ ಕ್ರೈಂ ಅಪರಾಧ ವಿಭಾಗದ ಡಿವೈಎಸ್‌ಪಿ ಜಯಲಕ್ಷ್ಮಮ್ಮ ನೇತೃತ್ವದ ತಂಡವು ಜೂಜಾಟದಲ್ಲಿ ತೊಡಗಿದ್ದ 12 ಮಂದಿ ಜೂಜುಕೋರರು ಹಾಗೂ 11 ದ್ವಿಚಕ್ರವಾಹನ, 8 ಮೊಬೈಲ್, 3 ಚಾರ್ಜರ್ ಲೈಟ್ ಸೇರಿದಂತೆ ಪಣಕ್ಕಿಟ್ಟಿದ್ದ 2,02,250 ರೂಗಳನ್ನು ವಶಕ್ಕೆ ಪಡೆದುಕೊಂಡು ಜೂಜು ಕೋರರ ವಿರುದ್ಧ ಕಾನೂನು ಕೈಗೊಂಡಿದ್ದಾರೆ.
ಇತ್ತೀಚೆಗೆ ನೆರೆಯ ಆಂಧ್ರದಿಂದ ಜೂಜು ಕೋರರ ತಂಡವೊಂದು ತಾಲೂಕಿನ ಗಡಿಭಾಗದ ಪ್ರದೇಶಗಳಲ್ಲಿ ಜುಜೂಟ ಆಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ಜೊತೆಗೂಡಿ ಜೂಜಾಟಕ್ಕೆ ಕಡಿವಾಣ ಹಾಕುತ್ತಿರುವುದು ಕಂಡುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




