nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ: 9 ಮಂದಿಗೆ ಗಾಯ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ

    September 30, 2026

    ಬೆಂಗಳೂರಿಗರ ನಿದ್ದೆಗೆಡಿಸಿದ್ದ, ವೃದ್ಧನನ್ನು ಕೊಂದ ಕಾಡಾನೆ ಕೊನೆಗೂ ಬನ್ನೇರುಘಟ್ಟ ಅರಣ್ಯಕ್ಕೆ ವಾಪಸ್!

    September 30, 2026

    ಬಸ್ ಟಿಕೆಟ್ ದರ ಏರಿಕೆ ಫಿಕ್ಸ್? ಸಚಿವ ಬೈರತಿ ಸುರೇಶ್  ಹೇಳಿದ್ದೇನು?

    September 30, 2026
    Facebook Twitter Instagram
    ಟ್ರೆಂಡಿಂಗ್
    • ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ: 9 ಮಂದಿಗೆ ಗಾಯ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ
    • ಬೆಂಗಳೂರಿಗರ ನಿದ್ದೆಗೆಡಿಸಿದ್ದ, ವೃದ್ಧನನ್ನು ಕೊಂದ ಕಾಡಾನೆ ಕೊನೆಗೂ ಬನ್ನೇರುಘಟ್ಟ ಅರಣ್ಯಕ್ಕೆ ವಾಪಸ್!
    • ಬಸ್ ಟಿಕೆಟ್ ದರ ಏರಿಕೆ ಫಿಕ್ಸ್? ಸಚಿವ ಬೈರತಿ ಸುರೇಶ್  ಹೇಳಿದ್ದೇನು?
    • 2028ಕ್ಕೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ
    • ಚಾಮುಂಡಿ ಬೆಟ್ಟಕ್ಕೆ ಸೂಪರ್‌ ಸ್ಟಾರ್ ರಜನಿಕಾಂತ್ ಭೇಟಿ: ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ತಲೈವಾ!
    • ಬೀದರ್: ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ನಕಲಿ ವೈದ್ಯನ ಅಡ್ಡೆ ಮೇಲೆ ದಿಢೀರ್ ದಾಳಿ; ಔರಾದ್‌ ನಲ್ಲಿ ಕ್ಲಿನಿಕ್ ಸೀಜ್!
    • ಬೆಳಕುಣಿ ಚೌದ್ರಿ ಗ್ರಾ.ಪಂ. ಎದುರು ಮಾಹಿತಿ ಕೋರಿ ಧರಣಿ: ಸುಡು ಬಿಸಿಲಿನ ತಾಪಕ್ಕೆ ಅಸ್ವಸ್ಥರಾದ ಪ್ರತಿಭಟನಾಕಾರ
    • ಅ.1 ವಿಶ್ವ ಹಿರಿಯ ನಾಗರಿಕರ ದಿನಾಚರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊಡಿಗೇನಹಳ್ಳಿಯಲ್ಲಿ ಅಪರೂಪದ ಚಿಪ್ಪು ಹಂದಿ (ಪ್ಯಾಂಗೊಲಿನ್) ಪ್ರತ್ಯಕ್ಷ : ಜನರಲ್ಲಿ ಕುತೂಹಲ, ಆತಂಕ
    ಮಧುಗಿರಿ June 26, 2026

    ಕೊಡಿಗೇನಹಳ್ಳಿಯಲ್ಲಿ ಅಪರೂಪದ ಚಿಪ್ಪು ಹಂದಿ (ಪ್ಯಾಂಗೊಲಿನ್) ಪ್ರತ್ಯಕ್ಷ : ಜನರಲ್ಲಿ ಕುತೂಹಲ, ಆತಂಕ

    By adminJune 26, 2026No Comments2 Mins Read
    pangolin

    ಮಧುಗಿರಿ : ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ Indian Pangolin (ಚಿಪ್ಪು ಹಂದಿ) ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಆತಂಕವೂ ಮೂಡಿಸಿದೆ.

    ದೇಹದ ತುಂಬಾ ಗಟ್ಟಿಯಾದ ಕೆರಾಟಿನ್ ಚಿಪ್ಪುಗಳಿಂದ ಆವೃತವಾಗಿರುವ ಈ ವಿಶಿಷ್ಟ ಪ್ರಾಣಿ ಗ್ರಾಮಸ್ಥರ ಗಮನ ಸೆಳೆದಿದ್ದು, ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಜನಜಂಗುಳಿ ಜಮಾಯಿಸಿತು. ಜನರ ಗದ್ದಲ ಮತ್ತು ಸದ್ದನ್ನು ಕೇಳಿದ ಪ್ಯಾಂಗೊಲಿನ್ ತನ್ನ ಸಹಜ ರಕ್ಷಣಾ ಕ್ರಮವಾಗಿ ಚೆಂಡಿನಂತೆ ಸುರುಳಿಯಾಗಿ ಸುತ್ತಿಕೊಂಡು ನಿಶ್ಚಲವಾಗಿ ಮಲಗಿರುವ ದೃಶ್ಯ ಕಂಡು ಬಂದಿತು.

    ಸಾಮಾನ್ಯವಾಗಿ ಕರ್ನಾಟಕದ ಗಡಿ ಭಾಗಗಳಾದ ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಗೋವಾ ಗಡಿಭಾಗಗಳಲ್ಲಿ, ಜೊತೆಗೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಚಾಮರಾಜನಗರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಈ ಪ್ರಭೇದದ ಪ್ಯಾಂಗೊಲಿನ್‌ ಗಳು ಕಂಡು ಬರುತ್ತವೆ. ಆದರೆ ಕೊಡಿಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂತಹ ಪ್ರಾಣಿ ಈ ಹಿಂದೆ ಕಾಣಿಸಿಕೊಂಡಿರದ ಕಾರಣ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.

    ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಪ್ಯಾಂಗೊಲಿನ್ ಮನುಷ್ಯರಿಗೆ ಹಾನಿ ಉಂಟುಮಾಡದ, ಅತ್ಯಂತ ನಾಚಿಕೆ ಸ್ವಭಾವದ ಪ್ರಾಣಿಯಾಗಿದೆ. ಆದರೆ ಅದರ ಬಗ್ಗೆ ಅರಿವು ಇಲ್ಲದ ಕಾರಣ ಕೆಲವೆಡೆ ಅಪಾಯಕಾರಿ ಪ್ರಾಣಿ ಎಂದು ಭಾವಿಸಿ ಹೊಡೆದು ಕೊಲ್ಲುವುದು ಅಥವಾ ಸುಟ್ಟು ಹಾಕುವಂತಹ ದುರ್ಘಟನೆಗಳು ನಡೆದಿರುವುದು ವಿಷಾದನೀಯ.

    ಚಿಪ್ಪು ಹಾಗೂ ಮಾಂಸಕ್ಕಾಗಿ ಈ ಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಲಾಗುತ್ತಿದ್ದು, ಇದರ ಪರಿಣಾಮವಾಗಿ ಪ್ಯಾಂಗೊಲಿನ್‌ಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದೇ ಕಾರಣಕ್ಕೆ ಈ ಪ್ರಾಣಿಗೆ Wildlife Protection Act, 1972 ಅಡಿಯಲ್ಲಿ ಶೆಡ್ಯೂಲ್–1 ಪಟ್ಟಿಯಲ್ಲಿ ಸ್ಥಾನ ನೀಡಲಾಗಿದ್ದು, ಸಂಪೂರ್ಣ ಕಾನೂನು ರಕ್ಷಣೆ ಒದಗಿಸಲಾಗಿದೆ.

    ವನ್ಯಜೀವಿ ತಜ್ಞರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪ್ಯಾಂಗೊಲಿನ್ ಕಂಡು ಬಂದಲ್ಲಿ ಅದನ್ನು ಹಿಡಿಯಲು ಅಥವಾ ಕಿರುಕುಳ ನೀಡಲು ಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಪರೂಪದ ಈ ಜೀವಿಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬುಡುಬುಡಿ ವೇಷಧಾರಿ ಕಳ್ಳರ ಬಂಧನ

    September 26, 2026

    ಮಧುಗಿರಿ: ಪೌತಿ ಖಾತೆಗೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಅಧಿಕಾರಿ ನಾಗೇಶ್!

    September 24, 2026

    ದಲಿತ ಯುವಕ ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ  ವಿವಿಧ ಸಂಘಟನೆಗಳಿಂದ ಮನವಿ

    September 24, 2026

    Leave A Reply Cancel Reply

    Our Picks

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ: 9 ಮಂದಿಗೆ ಗಾಯ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ

    September 30, 2026

    ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ ಪಿಎಲ್) ಆವರಣದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ…

    ಬೆಂಗಳೂರಿಗರ ನಿದ್ದೆಗೆಡಿಸಿದ್ದ, ವೃದ್ಧನನ್ನು ಕೊಂದ ಕಾಡಾನೆ ಕೊನೆಗೂ ಬನ್ನೇರುಘಟ್ಟ ಅರಣ್ಯಕ್ಕೆ ವಾಪಸ್!

    September 30, 2026

    ಬಸ್ ಟಿಕೆಟ್ ದರ ಏರಿಕೆ ಫಿಕ್ಸ್? ಸಚಿವ ಬೈರತಿ ಸುರೇಶ್  ಹೇಳಿದ್ದೇನು?

    September 30, 2026

    2028ಕ್ಕೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    September 30, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.