nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಾಸನ: ಮುಸುಕಿನ ಜೋಳಕ್ಕೆ ‘ಬಿಳಿಸುಳಿ’ ರೋಗ ಬಾಧೆ: 7 ತಾಲೂಕು ಬರಪೀಡಿತ ಎಂದು ಘೋಷಿಸಿ: ಸಿಎಂಗೆ ಸಚಿವ ಶಿವಲಿಂಗೇಗೌಡ ಮನವಿ

    August 26, 2026

    ಹೆಡಗಾಪೂರದಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ: ಕೂಲಿಕಾರ್ಮಿಕರಿಗೆ ಹಳ್ಳಿಯಲ್ಲೇ ಸಿಗಲಿದೆ ಹೆಚ್ಚಿನ ಉದ್ಯೋಗಾವಕಾಶ

    August 26, 2026

    ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ನಡೆಯುತ್ತದೆ: ಸಚಿವ ಡಾ. ಯತೀಂದ್ರ ಸ್ಪಷ್ಟನೆ

    August 26, 2026
    Facebook Twitter Instagram
    ಟ್ರೆಂಡಿಂಗ್
    • ಹಾಸನ: ಮುಸುಕಿನ ಜೋಳಕ್ಕೆ ‘ಬಿಳಿಸುಳಿ’ ರೋಗ ಬಾಧೆ: 7 ತಾಲೂಕು ಬರಪೀಡಿತ ಎಂದು ಘೋಷಿಸಿ: ಸಿಎಂಗೆ ಸಚಿವ ಶಿವಲಿಂಗೇಗೌಡ ಮನವಿ
    • ಹೆಡಗಾಪೂರದಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ: ಕೂಲಿಕಾರ್ಮಿಕರಿಗೆ ಹಳ್ಳಿಯಲ್ಲೇ ಸಿಗಲಿದೆ ಹೆಚ್ಚಿನ ಉದ್ಯೋಗಾವಕಾಶ
    • ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ನಡೆಯುತ್ತದೆ: ಸಚಿವ ಡಾ. ಯತೀಂದ್ರ ಸ್ಪಷ್ಟನೆ
    • ಕಿಕ್ಕೇರಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆ: ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದ ಪೊಲೀಸರ ಪಥಸಂಚಲನ
    • ಅರಕಲಗೂಡು: ಚಿರತೆ ದಾಳಿಗೆ ನಡುಗಿದ ಗ್ರಾಮಸ್ಥರು; ಜಾನುವಾರು ಸಾವು, ಅರಣ್ಯ ಇಲಾಖೆಯಿಂದ ಪಂಜರ ಸ್ಥಾಪನೆ
    • ಹೊಳೆನರಸೀಪುರ ಪುರಸಭೆ: ಶಾಸಕರ ಅಸಮಾಧಾನಕ್ಕೆ ಬಲಿಯಾಯಿತೇ ಅಧಿಕಾರಿಯ ದಕ್ಷತೆ? ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ!
    • ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
    • ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
    ರಾಜ್ಯ ಸುದ್ದಿ June 25, 2026

    ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ

    By adminJune 25, 2026No Comments2 Mins Read
    book.jpg

    ಬೆಂಗಳೂರು: ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ (ಬೆಂ.ಕೋ.ಶ್ರೀ) ಅವರ ಸಿನಿಮಾ ಜಗತ್ತಿನ ಪಯಣ, ವ್ಯಾಪಾರ, ಹೋರಾಟ ಹಾಗೂ ಅವರ ಅಜೇಯ ಮನೋಬಲದ ಯಶೋಗಾಥೆಯನ್ನು ಒಳಗೊಂಡ ‘ಬಿ.ಕೆ.ಶ್ರೀನಿವಾಸ ಒಂದು ಅಸಾಮಾನ್ಯ ಜೀವನಯಾನ’ ಪುಸ್ತಕದ ಬಿಡುಗಡೆ ಸಮಾರಂಭವು ನಗರದ ಗಾಂಧಿ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

    ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಕೆ.ವಿ. ಚಂದ್ರಶೇಖರ್, ಸಾ.ರಾ. ಗೋವಿಂದು, ಹಿರಿಯ ಪತ್ರಕರ್ತ ಜೋಗಿ, ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ತಮ್ಮ ಜೀವನದ ಹಾದಿಯನ್ನು ನೆನೆದು ಭಾವುಕರಾಗಿ ಮಾತನಾಡಿದ ಬೆಂಕೋಶ್ರೀ, “ನಾನು ಕಡುಬಡತನದ ಕುಟುಂಬದಿಂದ ಬಂದವನು. ಗುಡಿಸಲಿನಲ್ಲಿ ಹುಟ್ಟಿ, ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿದ ನನಗೆ ಸಿನಿಮಾದ ಮೇಲೆ ಅಪಾರ ಹುಚ್ಚಿತ್ತು. ಆ ಸಿನಿಮಾ ವ್ಯಾಮೋಹದಲ್ಲೇ ಗಳಿಸಿದ್ದರಲ್ಲಿ ಸ್ವಲ್ಪವನ್ನು ಕಳೆದುಕೊಂಡೆ. ಆರು ವರ್ಷಗಳ ಹಿಂದೆ ನನಗೆ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀಗಳ ಭೇಟಿಯಾಗಿತ್ತು, ಇಂದು ಅವರೇ ಇಲ್ಲಿಗೆ ಬಂದು ನನ್ನನ್ನು ಆಶೀರ್ವದಿಸುತ್ತಿರುವುದು ನನ್ನ ಸೌಭಾಗ್ಯ” ಎಂದು ತಮ್ಮ ಹಳೆಯ ದಿನಗಳನ್ನು ಬಿಚ್ಚಿಟ್ಟರು.
    ಪತ್ರಕರ್ತ ಜೋಗಿ ಮಾತನಾಡಿ, “ಬೆಂಕೋಶ್ರೀ ಅವರ ಸಿನಿಮಾಗಳನ್ನು ನೋಡಿ ನಾವು ಅದರ ಬಗ್ಗೆ ಬರೆದಿದ್ದೇವೆ. ಅವರು ಕೇವಲ ‘ಹಾಲು ಶ್ರೀನಿವಾಸ್’ ಅಲ್ಲ, ಬದಲಿಗೆ ಎಲ್ಲವನ್ನೂ ಒಳಗೊಂಡ ‘ಆಲ್ ಶ್ರೀನಿವಾಸ್’. ಒಳ್ಳೆಯ ಸಿನಿಮಾಗಳನ್ನು ಮಾಡುವುದು ಅವರ ಫ್ಯಾಷನ್ ಆಗಿತ್ತು. ಅವರ ಸಾಧನೆ ನಿಜಕ್ಕೂ ದೊಡ್ಡದು” ಎಂದು ಬಣ್ಣಿಸಿದರು.

    ಸಾ.ರಾ. ಗೋವಿಂದು ಮಾತನಾಡಿ, “ಶ್ರೀನಿವಾಸ್ ಅವರು ತಳಮಟ್ಟದಿಂದ ಬೆಳೆದು ಬಂದವರು. ಹಿಂದೆ ನಾನು ಡಾ. ರಾಜ್ಕುಮಾರ್ ಅವರ ಹತ್ತು ಸಾವಿರ ಅಭಿಮಾನಿಗಳ ಸಂಘವನ್ನು ಕಟ್ಟಿದಾಗ, ಇವರೂ ಸುರ್ವೆ ಅವರ ಜೊತೆಗೂಡಿ ಅಭಿಮಾನಿ ಸಂಘ ಮಾಡಿದ್ದರು. ಇವರ ಅಂದಿನ ಚಟುವಟಿಕೆಗಳನ್ನು ನೋಡಿದಾಗಲೇ ಇವರು ಮುಂದೆ ದೊಡ್ಡ ವ್ಯಕ್ತಿಯಾಗುತ್ತಾರೆ ಎಂದುಕೊಂಡಿದ್ದೆ. ಇವರು ನನ್ನ ಮಗನನ್ನು ಮೊದಲ ಬಾರಿಗೆ ಹೀರೊ ಮಾಡಿದ್ದರು. ಚಿತ್ರರಂಗ ಇವರನ್ನು ಕೈಹಿಡಿಯದಿದ್ದರೂ, ಇವರು ಆ ನೋವನ್ನು ಎಲ್ಲೂ ತೋಡಿಕೊಳ್ಳದೆ ಮುನ್ನಡೆದರು” ಎಂದರು.

    ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಮಾತನಾಡಿ, “ಬೆಂಕೋಶ್ರೀ ಅವರು ನಮ್ಮೆಲ್ಲರಿಗೂ ದೊಡ್ಡ ಸ್ಫೂರ್ತಿ. ಹೆಚ್ಚಾಗಿ ಓದಲು ಬಾರದ ಒಬ್ಬ ವ್ಯಕ್ತಿ, ಇಂದು ತಮ್ಮ ಜೀವನದ ಗಾಥೆಯನ್ನು ನಾವೆಲ್ಲರೂ ಓದುವಂತೆ ಮಾಡಿರುವುದು ಅವರ ಅಸಾಮಾನ್ಯ ಸಾಧನೆಗೆ ಸಾಕ್ಷಿ” ಎಂದು ಪ್ರಶಂಸಿಸಿದರು.

    ಕಾರ್ಯಕ್ರಮದ ಕೊನೆಯಲ್ಲಿ ಪೂಜ್ಯ ಶ್ರೀಗಳು ನೆರೆದಿದ್ದ ಸಭಿಕರಿಗೆ ಮತ್ತು ಪುಸ್ತಕದ ಯಶಸ್ಸಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    —

    admin
    • Website

    Related Posts

    ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ನಡೆಯುತ್ತದೆ: ಸಚಿವ ಡಾ. ಯತೀಂದ್ರ ಸ್ಪಷ್ಟನೆ

    August 26, 2026

    ಮತದಾರರ ಕರಡು ಪಟ್ಟಿ ಪ್ರಕಟ: 2.37 ಲಕ್ಷ ಮತದಾರರು ಕರಡಿನಿಂದ ಡಿಲೀಟ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ಕೊನೆಯ ದಿನ

    August 25, 2026

    “ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ?”: ಶಾಸಕ ಎಚ್.ಡಿ. ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

    August 25, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಹಾಸನ: ಮುಸುಕಿನ ಜೋಳಕ್ಕೆ ‘ಬಿಳಿಸುಳಿ’ ರೋಗ ಬಾಧೆ: 7 ತಾಲೂಕು ಬರಪೀಡಿತ ಎಂದು ಘೋಷಿಸಿ: ಸಿಎಂಗೆ ಸಚಿವ ಶಿವಲಿಂಗೇಗೌಡ ಮನವಿ

    August 26, 2026

    ಹಾಸನ:  ಹಾಸನ ಜಿಲ್ಲೆಯ ರೈತರ ಪ್ರಮುಖ ಜೀವನಾಧಾರವಾಗಿರುವ ಮುಸುಕಿನ ಜೋಳದ ಬೆಳೆಗೆ ಬಿಳಿಸುಳಿ (Downy Mildew) ರೋಗ ತೀವ್ರವಾಗಿ ವ್ಯಾಪಿಸಿದ್ದು,…

    ಹೆಡಗಾಪೂರದಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ: ಕೂಲಿಕಾರ್ಮಿಕರಿಗೆ ಹಳ್ಳಿಯಲ್ಲೇ ಸಿಗಲಿದೆ ಹೆಚ್ಚಿನ ಉದ್ಯೋಗಾವಕಾಶ

    August 26, 2026

    ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ನಡೆಯುತ್ತದೆ: ಸಚಿವ ಡಾ. ಯತೀಂದ್ರ ಸ್ಪಷ್ಟನೆ

    August 26, 2026

    ಕಿಕ್ಕೇರಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆ: ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದ ಪೊಲೀಸರ ಪಥಸಂಚಲನ

    August 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.