Author: admin

ಚೆನ್ನೈ: ನಳಿನಿ ಶ್ರೀಹರನ್ ಸೇರಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸ್ವಾಗತಿಸಿದ್ದಾರೆ. ‘ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ, ಜನರಿಂದ ಆಯ್ಕೆಯಾದ ಸರ್ಕಾರದ ನಿರ್ಧಾರಗಳು ಮತ್ತು ನಿರ್ಧಾರಗಳನ್ನು ರಾಜ್ಯಪಾಲರು ನೇಮಿಸಿದ ಸ್ಥಾನಗಳಲ್ಲಿ ಕೈಬಿಡಬಾರದು ಎಂಬುದಕ್ಕೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಮತ್ತು ಇತರ ಐವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಜೈಲಿನಲ್ಲಿ ಅವರ ಉತ್ತಮ ನಡತೆ ಹಿನ್ನೆಲೆಯಲ್ಲಿ ಅವರನ್ನು ಸುಪ್ರೀಂ ಬಿಡುಗಡೆಗೊಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಚಿತ್ರದುರ್ಗ: ಶ್ರೀ ಆಂಜನೇಯ ವಿದ್ಯಾ ಸಂಸ್ಥೆ ಚಿತ್ರದುರ್ಗ,  ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಹಿರೇಗುಂಟನೂರು, ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 1988-89ನೇ ಸಾಲಿನಿಂದ 2022-23ನೇ ಸಾಲಿ ನ ವರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮವು ಹಿರೇಗುಂಟನೂರು ಕಾಲೇಜಿನ ಆವರಣದಲ್ಲಿ ನವೆಂಬರ್ 12ರಂದು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರದುರ್ಗದ ಮದಕರಿ ನಾಯಕ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್. ಸಂದೀಪ್, ಚಿತ್ರದುರ್ಗ  ಶ್ರೀ ಆಂಜನೇಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ದಿವ್ಯ ಸರಸ್ವತಿ ಎಸ್. ಸಂದೀಪ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್‌ ಅಧೀಕ್ಷಕರಾದ ಡಾ. ಕವಿತ ಬಿ.ಟಿ, ಐ.ಪಿ.ಎಸ್., ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎನ್.ರಾಜು,  ತ್ರದುರ್ಗಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ  ಬಿ.ಮಲ್ಲೇ‌ಶ್ , ಹಿರೇಗುಂಟನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ. ಜ್ಯೋತಿ ಚಂದ್ರಶೇಖ‌ರ್, ಹಿರೇಗುಂಟನೂರು ಪಿ.ಡಿ.ಓ. ವನಜಾಕ್ಷಿ ಬಿ., ಶ್ರೀ ದ್ಯಾಮಲಾಂಬ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ವಸಂತ್…

Read More

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಣದಲ್ಲಿ ವಂದೇ ಭಾರತ ಎಕ್ಸ್‌ಪ್ರೆಸ್‌ ಮತ್ತು ಭಾರತ ಗೌರವ್ ಕಾಶಿ ದರ್ಶನ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇಂದು ಬೆಂಗಳೂರಿನ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಪ್ರಧಾನಿ ಮೋದಿ ಅವರು, ಕನಕದಾಸರು ಮತ್ತು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ವಿಧಾನಸೌಧದಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ, ವಂದೇ ಭಾರತ ಎಕ್ಸ್‌ಪ್ರೆಸ್‌ ಹಾಗೂ ಭಾರತ ಗೌರವ್ ಕಾಶಿ ದರ್ಶನ ರೈಲ್ವೆಗೆ ಚಾಲನೆ ನೀಡಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ , ಸಿಎಂ ಬಸವರಾಜ ಬೊಮ್ಮಾಯಿ, ಕೇಂಧ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ಶಶಿಕಲಾ ಜೊಲ್ಲೆ ಕಾಮದೇನು ಸ್ಮರಣಿಕೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ತಮ್ಮ 32 ವರ್ಷಗಳ ಸೇವಾ ಅವಧಿಯಲ್ಲಿ ಅಗ್ನಿಶಾಮಕ ದಳದಲ್ಲಿ ಜನರ ಪ್ರಾಣ ಜನ ರಕ್ಷಣೆ,ಆಸ್ತಿಪಾಸ್ತಿ ರಕ್ಷಣೆ ಸೇರಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಸಂಕೇಶ್ವರದ ಅಗ್ನಿಶಾಮಕ ನಿವೃತ್ತ ಠಾಣಾಧಿಕಾರಿ ಮಹಾಲಿಂಗಪ್ಪ ಮುಧೋಳ ಅವರು ಈ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ನಡೆದ ಪದಕ ಪ್ರಧಾನ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪದಕ ಪ್ರಧಾನ ಮಾಡಿ ಗೌರವಿಸಿದರು.ಗೃಹ ಸಚಿವ ಅರಗ ಜ್ಞಾನೇಂದ್ರ ಉಪಸ್ಥಿತರಿದ್ದರು. ಜುಲೈ 13,1988ರಿಂದ ಅಗ್ನಿ ಶಾಮಕ ಇಲಾಖೆಯಲ್ಲಿ ಸೇವೆಗೆ ಸೇರಿದ ಮಹಾಲಿಂಗಪ್ಪ ಮುಧೋಳ ತಮ್ಮ 32ವರ್ಷಗಳ ಸುಧೀರ್ಘ ಅವಧಿಯಲ್ಲಿ ಪ್ರಮುಖ ಅಗ್ನಿಶಾಮಕ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿಯಾಗಿ ಇತ್ತೀಚಿಗೆ ನಿವೃತ್ತಿಯಾಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿ ಜನರ ಪ್ರಾಣ, ಆಸ್ತಿಪಾಸ್ತಿ ರಕ್ಷಣೆ ಮಾಡಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ.ಇವರ ನಿಸ್ವಾರ್ಥ ಸೇವೆ ಗುರ್ತಿಸಿ ಈ ಪದಕಪ್ರಧಾನ ಮಾಡಲಾಗಿದೆ.ಪದಕ ಪಡೆದ ಮಹಾಲಿಂಗಪ್ಪ ಮುಧೋಳ್ ಗೆ ಅಗ್ನಿಶಾಮಕ…

Read More

ರಾಯಚೂರು: ನಗರದ ನೀರಾವರಿ ನಿಗಮದ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ನಾಲ್ಕು ಜನ ನೀರಾವರಿ ಇಲಾಖೆ ಅಧಿಕಾರಿಗಳು ಸಿಕ್ಕಿಬಿದಿದ್ದಾರೆ. ಬಿಲ್ ಕ್ಲಿಯರ್ ಮಾಡಲು 5-10 ಸಾವಿರ ರೂ. ಲಂಚ ಕೇಳಿದ್ದಾರೆ. ಬಳ್ಳಾರಿ ಮೂಲದ ಗುತ್ತಿಗೆದಾರ ಈಶ್ವರಯ್ಯ ನೀಡಿದ ದೂರಿನನ್ವಯ ಲಂಚ ಪಡೆಯುವಾಗ ರೆಡ್​ಹ್ಯಾಂಡ್ ಆಗಿ ಇಂಜಿನಿಯರ್ಸ್ ಸಿಕ್ಕಿಬಿದಿದ್ದಾರೆ. ಸದ್ಯ ನಾಲ್ಕು ಇಂಜಿನಿಯರ್ ​ಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಮಿಳುನಾಡು ಚೆನ್ನೈ : ತಿನ್ನುತ್ತಿದ್ದಾಗ ಬಿರಿಯಾನಿ ಸ್ವಲ್ಪ ಕೊಡ್ರಿ ಎಂದು ಕೇಳಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿದ ಪತಿ ನಂತರ ಆಕೆಯನ್ನೂ ತಬ್ಬಿಕೊಂಡು ನಂದಿಸಲು ಹೋಗಿ ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ. 74 ವರ್ಷದ ಪತಿ ಬೆಂಕಿ ಹಚ್ಚಿದ ಬಳಿಕ ಪತ್ನಿಯನ್ನು ಅಪ್ಪಿಕೊಂಡಿದ್ದಾನೆ. ಇದರಿಂದ ಇಬ್ಬರೂ ಸುಟ್ಟ ಗಾಯಗಳಿಂದ ನರಳುತ್ತಿದ್ದರು. ಶೋಚನೀಯ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಚೆನ್ನೈನ ಅಯನವರಂನ ಟ್ಯಾಗೊ ನಿವಾಸಿಗಳಾದ ನಿವೃತ್ತ ರೈಲ್ವೆ ನೌಕರ ಕರುಣಾಕರನ್ ಮತ್ತು ಪತ್ನಿ ಪದ್ಮಾವತಿ ಮೃತ ನಿವಾಸಿಗಳು. ದಂಪತಿಗೆ 4 ಮಕ್ಕಳಿದ್ದು ನಗರದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದು, ಸೋಮವಾರ ರಾತ್ರಿ ದಂಪತಿಯ ಮನೆಯಿಂದ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಅಲ್ಲಿಗೆ ಓಡಿಬಂದರು. ಗಂಡ ಹೆಂಡತಿ ಸುಟ್ಟು ಕರಕಲಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಸಾಯುವ ಮೊದಲು ಪದ್ಮಾವತಿ ನೀಡಿದ ಕಾರಣ ತುಂಬಾ…

Read More

ದೇಶೀಯ ಮದ್ಯ ಸೇವಿಸಿದ 24 ಆನೆಗಳು ಗಂಟೆಗಟ್ಟಲೆ ಮೈಮರೆತು ಮಲಗಿದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಸಾಂಪ್ರದಾಯಿಕ ಮವುಹಾ ದೇಶೀಯ ಮದ್ಯ ಸೇವಿಸಿದ ಆನೆಗಳು ಗಂಟೆಗಟ್ಟಲೆ ಸುಖವಾಗಿ ನಿದ್ರಿಸಿ ಎಂಜಾಯ್ ಮಾಡಿವೆ. ಗ್ರಾಮಸ್ಥರು ಗ್ರಾಮದ ಸಮೀಪದ ಕಾಡಿನಲ್ಲಿ ಸಾಂಪ್ರದಾಯಿಕ ಮದ್ಯ ತಯಾರಿಸುತ್ತಿದ್ದರು ಹೀಗೆ ತಯಾರಿಸಿದ ಮದ್ಯ ತರಲು ಹೋದಾಗ ಹೂವಿನ ವಾಸನೆ ನೋಡಿ ಬಂದ ಆನೆಗಳನ್ನು ನೋಡಿ ಓಡಿ ಹೋಗಿದ್ದಾರೆ. ಆದರೆ ಸ್ಥಳಕ್ಕೆ ಬಂದ ಆನೆಗಳು ಎಣ್ಣೆ ಹೊಡೆದು ಮತ್ತು ಏರಿ ಮಲಗಿವೆ. ಕೆಂಜೊಹರ್ ಜಿಲ್ಲೆಯಲ್ಲಿ ಮಹುವಾ ಹೂವುಗಳನ್ನು ನೀರು ತುಂಬಿದ ಹೊಂಡದಲ್ಲಿ ಕೆಲವು ಸಮಯ ಮುಚ್ಚಿಡಲಾಗುತ್ತದೆ. ನಂತರ ಅವರು ಹೋದಾಗ ಆನೆಗಳು ಮಡಿಕೆ ಒಡೆದು ಕುಡಿದು ಮಲಗಿವೆ. ನಾವು ಬೆಳಿಗ್ಗೆ 6 ಗಂಟೆಗೆ ಕಾಡಿಗೆ ಹೋದಾಗ ಮಡಿಕೆಗಳು ಒಡೆದು ಹೋಗಿದ್ದವು. ಅಲ್ಲದೇ ಸುಮಾರು 24 ಆನೆಗಳು ಮತ್ತಿನಲ್ಲಿ ಮಲಗಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಚಿತ್ರದುರ್ಗ: ಮದರ್ ಟ್ರೀಮ್ಸ್ ರೂರಲ್ ಮತ್ತು ಅರ್ಬನ್ ಎಜುಕೇಷನ್ ಡೆವಲಪ್ ಮೆಂಟ್ ಸೊಸೈಟಿ, ಶ್ರೀ ಆಂಜನೇಯ ಸ್ವಾಮಿ ಪ್ರೌಢ ಶಾಲೆ ಕಡ್ಲೇಗುದ್ದು ಹಾಗೂ ಶ್ರೀ ಮಲಾರಲಿಂಗೇಶ್ವರ ನರ್ಸಿಂಗ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು  ಆಯೋಜಿಸಲಾಗಿದೆ. ನವೆಂಬರ್ 19ರಂದು ವೀರಯೋಧ ಜಿ.ಎಸ್. ಪ್ರಭಾಕರ ಸಭಾಂಗಣದಲ್ಲಿ ರಾಜ್ಯ ಮಟ್ಟದ ಗ್ರಾಮೀಣ ಮಕ್ಕಳ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಕಾರ್ಯಕ್ರಮದ ದಿನ ಬೆಳಗ್ಗೆ 8:30ಕ್ಕೆ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣ ನಡೆಯಲಿದೆ.  ಕಡ್ಲೆಗುದ್ದು ಗ್ರಾ.ಪಂ. ಸದಸ್ಯರಾದ ಕುಮಾರ್ ಜೆ.ಡಿ. ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ ಪರಿಷತ್ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಶಿವಸ್ವಾಮಿ  ಕೆ.ಎಂ. ಅವರು ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಚಿತ್ರದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಾಮಲಿಂಗ ಶೆಟ್ರು ಪರಿಷತ್ ನ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಬಳಿಕ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.…

Read More

ಬೆಂಗಳೂರು : ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯದ ಮೇಲಿದ್ದಾಗ ಮೃತಪಟ್ಟಲ್ಲಿ ಮೃತರ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ.20.00 ಲಕ್ಷಗಳನ್ನು ವಿಮಾ ಕಂಪನಿಯ ಮೂಲಕ ಪಡೆಯಲು ರಾಜ್ಯ ಸರ್ಕಾರ ಮಂಜೂರಾತಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದಲ್ಲಿ 2022-23ನೇ ಸಾಲಿನಲ್ಲಿ ಒಟ್ಟು 93,013 ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಮೇಲಿರುವಾಗ ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟಲ್ಲಿ ಮೃತರ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ.20.00 ಲಕ್ಷಗಳನ್ನು ವಿಮಾ ಕಂಪನಿಯ ಮೂಲಕ ಪಡೆಯಲು ಮಂಜೂರಾತಿ ಆದೇಶ ಹೊರಡಿಸಿದೆ. ಅಧಿಕಾರಿಗಳು ಮೃತರ ಕುಟುಂಬದವರಿಗೆ ವಿಮಾ ಪರಿಹಾರ ಮೊತ್ತ ರೂ.20.00 ಲಕ್ಷಗಳನ್ನು ಮಂಜೂರು ಮಾಡುವ ಸಂಬಂಧ, ವಿವರವಾದ ವರದಿಯೊಂದಿಗೆ 15 ದಿನಗಳ ಒಳಗೆ ಕೈಂ ಫಾರಂ ಅನ್ನು ಭರ್ತಿ ಮಾಡಿ, ಸೂಚಿಸಿರುವ ದಾಖಲೆಗಳನ್ನು ಘಟಕಾಧಿಕಾರಿಗಳೇ ಖುದ್ದು ದೃಢೀಕರಿಸಿ ನೇರವಾಗಿ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಗೆ ಪೋಸ್ಟ್ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿದೆ. ಕರ್ತವ್ಯದ ಮೇಲಿರುವಾಗ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಯ ಮಾಹಿತಿಯನ್ನು ನಿಗಧಿತ ಸಮಯದೊಳಗೆ…

Read More

ವಿಜಯಪುರ: ಕ್ರೂಸರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿ ಚಲಿಸುತ್ತಿದ್ದ ತಂದೆ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ರಸ್ತೆಯಲ್ಲಿ ನಡೆದಿದೆ. ರಮೇಶ ನಾಟಿಕಕಾರ(45) ಮಗಳು ಖುಷಿ(8) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ಶ್ರೀದೇವಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಬಸವನ ಬಾಗೇವಾಡಿ ತಾಲೂಕಿನವರು ಎಂದು ತಿಳಿದು ಬಂದಿದೆ. ಬಾಗೇವಾಡಿ ಮೂಲಕ ಪತಿ, ಪತ್ನಿ ಹಾಗೂ ಮಗಳು ಬೈಕ್​ನಲ್ಲಿ ಚಲಿಸುತ್ತಿದ್ದಾಗ ಎದುರಿಗೆ ಬಂದ ಕ್ರೂಸರ್​ಗೆ ಬೈಕ್​ ಡಿಕ್ಕಿ ಹೊಡೆದಿದ್ದು, ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More