Subscribe to Updates
Get the latest creative news from FooBar about art, design and business.
- ಕಾರಲ್ಲೇ ಪ್ರೇಮಿಗಳ ಗಲಾಟೆ: ಸ್ಫೋಟಕ ಸಿಡಿಸಿಕೊಂಡು ಯುವಕ ಸಜೀವ ದಹನ, ಯುವತಿಗೆ ಗಾಯ
- ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ
- ತುಮಕೂರು: ಜೂ.29ರಂದು ವಿವಿಧ ಹುದ್ದೆಗಳಿಗೆ ಕಾರ್ಯಾಗಾರ
- ವಚನ ಗಾಯನ, ಪ್ರಬಂಧ ಸ್ಪರ್ಧೆ: ನೋಂದಾಯಿಸಲು ಸೂಚನೆ
- ತೋಟಗಾರಿಕಾ ಬೆಳೆಗಳಿಗೆ ವಿಮಾ ಸೌಲಭ್ಯ: ರೈತರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿಗಾಗಿ ಮಹಿಳೆಯರ ಪರದಾಟ: ಅಧಿಕಾರಿಗಳ ವಿರುದ್ಧ ಆಕ್ರೋಶ
- ಪಂಚಗ್ಯಾರಂಟಿ ಯೋಜನೆಗಳ ಸ್ಥಗಿತ ಸಾಧ್ಯವಿಲ್ಲ: ಸಿ.ಡಿ. ಚಂದ್ರಶೇಖರ್
- ಜೂಜಾಟ: 12 ಮಂದಿ ಆರೋಪಿಗಳ ಬಂಧನ
Author: admin
ವನ್ಯಜೀವಿ ದಿನವು ಭೂಮಿಯ ಮೇಲಿನ ವನ್ಯಜೀವಿಗಳ ಪ್ರಾಮುಖ್ಯತೆ ಮತ್ತು ರಕ್ಷಣೆಯ ಬಗ್ಗೆ ಜನರಿಗೆ ನೆನಪಿಸುವ ದಿನವಾಗಿದೆ. ವಿಶ್ವ ವನ್ಯಜೀವಿ ದಿನವು ಮಾನವ ಅಭಿವೃದ್ಧಿಯೊಂದಿಗೆ, ವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಬೇಕು ಎಂದು ನಮಗೆ ನೆನಪಿಸುವ ದಿನವಾಗಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ರಕ್ಷಿಸುವುದು, ಮತ್ತು ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವುದು ಮುಂತಾದ ಹಲವು ಉದ್ದೇಶಗಳು ಇವೆ. ವಿಶ್ವಸಂಸ್ಥೆಯು 2013 ರಲ್ಲಿ ವಿಶ್ವ ವನ್ಯಜೀವಿ ದಿನವನ್ನು ಪ್ರಾರಂಭಿಸಿತು. ವನ್ಯ ಪ್ರಾಣಿ ಮತ್ತು ಸಸ್ಯಗಳ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಅಂತರಾಷ್ಟ್ರೀಯ ವ್ಯಾಪಾರದ ಸಮಾವೇಶವನ್ನು ಮಾರ್ಚ್ 3, 1973 ರಂದು ವಿಶ್ವಸಂಸ್ಥೆಯು ಅಂಗೀಕರಿಸಿತು. ಈ ವರ್ಷದ ವನ್ಯಜೀವಿ ದಿನವನ್ನು ಸೈಟ್‌ಗಳ ಸ್ಥಾಪನೆಯ 50 ನೇ ವಾರ್ಷಿಕೋತ್ಸವದಂದು ಆಚರಿಸಲಾಗುತ್ತದೆ ಎಂಬುದು ಉಲ್ಲೇಖನೀಯ. ಮಾನವ-ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಗಳು ಹೊರಬರುತ್ತಿರುವ ಹೊತ್ತಿನಲ್ಲಿ ಈ ಬಾರಿಯ ವನ್ಯಜೀವಿ ದಿನಾಚರಣೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಲಂಚ ಸ್ವೀಕರಿಸುತ್ತಿದ್ದ ಕರ್ನಾಟಕದ ಬಿಜೆಪಿ ಶಾಸಕನ ಪುತ್ರನ ಬಂಧನ. ಬೆಂಗಳೂರಿನಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ದಳದಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ನನ್ನು ಬಂಧಿಸಲಾಗಿದೆ. 40 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್ ಅವರನ್ನು ಬಂಧಿಸಿದ್ದಾರೆ. ಅವರ ಕಚೇರಿಯಿಂದ 1.7 ಕೋಟಿ ರೂಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ದಳ ಶುಕ್ರವಾರ ಪ್ರಶಾಂತ್ ಮಂಡಲ್ ಅವರ ನಿವಾಸದ ಮೇಲೆ ದಾಳಿ ನಡೆಸಿ 6 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ ಎಂದು ಎಎನ್‌ಐ ವರದಿ ಮಾಡಿದೆ. ತನಿಖೆ ಇನ್ನೂ ಮುಂದುವರಿದಿದೆ. ಗುರುವಾರ ಬೆಳಗ್ಗೆ 40 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ವಿರೂಪಾಕ್ಷಪ್ಪ ಅವರ ಪುತ್ರನನ್ನು ಬಂಧಿಸಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸಲಾಗಿತ್ತು. ಮದಲ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (BWSSB) ಮುಖ್ಯ ಲೆಕ್ಕಾಧಿಕಾರಿಯಾಗಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನ ಅಧ್ಯಕ್ಷರು. ಹೆಚ್ಚಿನ ತನಿಖೆ ನಡೆಯುತ್ತಿದೆ…
ನಿರ್ದೇಶಕ ರಾಜಮೌಳಿ ತಮ್ಮ ಚಿತ್ರಗಳು ರಾಮಾಯಣ ಮತ್ತು ಮಹಾಭಾರತದಿಂದ ಪ್ರೇರಿತವಾಗಿವೆ ಎಂದು ಹೇಳುತ್ತಾರೆ. ಆರ್‌ಆರ್‌ಆರ್ ಜಾಗತಿಕ ಮನ್ನಣೆ ಪಡೆದ ನಂತರ ದಿ ನ್ಯೂಯಾರ್ಕರ್‌ಗೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಬಹಿರಂಗಪಡಿಸಿದ್ದಾರೆ. ರಾಮಾಯಣ ಮತ್ತು ಮಹಾಭಾರತಗಳು ಸಮುದ್ರದಂತೆ ಅಗಾಧವಾಗಿದ್ದು, ಪ್ರತಿ ಬಾರಿ ಓದಿದಾಗಲೂ ಹೊಸ ವಿಷಯಗಳು ಅರ್ಥವಾಗುತ್ತವೆ ಎಂದು ಅವರು ಹೇಳಿದರು. ಅವರು ಬಾಲ್ಯದಲ್ಲಿ ರಾಮಾಯಣ ಮತ್ತು ಮಹಾಭಾರತಗಳನ್ನು ಓದಲು ಪ್ರಾರಂಭಿಸಿದರು. ಆಗ ಅವುಗಳನ್ನು ಸಣ್ಣ ಕಥೆಗಳಾಗಿ ಓದಲಾಗುತ್ತಿತ್ತು. ಮೊದಲಿಗೆ ಅವು ನನಗೆ ಕೇವಲ ಕಥೆಗಳಾಗಿದ್ದವು. ಅವನು ಬೆಳೆದಂತೆ ಕಥೆಗಳೂ ಬೆಳೆಯತೊಡಗಿದವು. ಕಥೆ ಮತ್ತು ಪಾತ್ರದ ಸೂಕ್ಷ್ಮ ಹಂತಗಳನ್ನು ಗಮನಿಸಲು ಪ್ರಾರಂಭಿಸಿದೆ. ಕಥೆಗಳು, ಪಾತ್ರಗಳು, ಪಾತ್ರಗಳೊಳಗಿನ ಸಂಘರ್ಷಗಳು ಮತ್ತು ಅವರ ಭಾವನೆಗಳು, ರಾಮ ಮತ್ತು ಮಹಾಭಾರತ ನನಗೆ ಆಳವಾದ ಸಾಗರಗಳಿದ್ದಂತೆ. ನೀವು ಅದನ್ನು ಓದಿದಾಗಲೆಲ್ಲಾ ನೀವು ಹೊಸ ಆಲೋಚನೆಗಳನ್ನು ಕಾಣಬಹುದು. ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ಭೀಕರ ಅಪಘಾತವೊಂದರಲ್ಲಿ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಫರಿದಾಬಾದ್-ಗುರುಗ್ರಾಮ್ ರಸ್ತೆಯಲ್ಲಿ ನಡೆದಿದ್ದು, ರಸ್ತೆಯಲ್ಲಿ ವೇಗವಾಗಿ ಬಂದ ಡಂಪರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮಂಗರ್ ಪೊಲೀಸ್ ಪೋಸ್ಟ್ ಬಳಿ ಗುರುವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಮೃತರು ಮಾರುತಿ ಆಲ್ಟೊ ಕಾರಿನಲ್ಲಿ ಗುರುಗ್ರಾಮದಿಂದ ಫರಿದಾಬಾದ್ ಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮೃತಪಟ್ಟವರೆಲ್ಲರೂ ಪಲ್ವಾಲ್ ನಿವಾಸಿಗಳಾಗಿದ್ದಾರೆ. ಎಲ್ಲರು ಕೂಡ ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪುತಿನ್, ಜತಿನ್, ಆಕಾಶ್, ಸಂದೀಪ್, ಬಲ್ಜಿತ್ ಮತ್ತು ವಿಶಾಲ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪೊಲೀಸರು ಡಂಪರ್ ಅನ್ನು ವಶಪಡಿಸಿಕೊಂಡಿದ್ದಾರೆ ಆದರೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಡಿಜಿಟಲ್ ಯುಗದಲ್ಲಿ ಎಲ್ಲವೂ ಅಂಗೈಯಲ್ಲೇ ಸಿಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಎರಡನೇ ದರ್ಜೆಯ ಪಟ್ಟಣದಲ್ಲಿದ್ದುಕೊಂಡೇ ಉದ್ಯಮವನ್ನು ಎಲ್ಲೆಡೆಗೆ ಕೊಂಡೊಯ್ಯಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಯುವಕ ಬಸವಂತ್ ಕುಮಾರ್ ಎಂ.ಪಿ. ಮೇಧಾವಿ ಸೂಪರ್ ಫುಡ್ ಡಾಟ್ ಕಾಮ್ ವೆಬ್ ಸೈಟ್ ಮೂಲಕ ಈ ಕಾಮರ್ಸ್ ಉದ್ಯಮ ಆರಂಭಿಸಿರುವ ಬಸವಂತ್ ಕುಮಾರ್ ಅವರು ಕೊಳ್ಳೇಗಾಲದಂತಹ ಚಿಕ್ಕ ಪಟ್ಟಣದಲ್ಲಿದ್ದುಕೊಂಡೇ ತಮ್ಮ ಉದ್ಯಮವನ್ನು ದೇಶದ ಮೂಲೆ ಮೂಲೆಗೆ ಕೊಂಡೊಯ್ಯಬಹುದು ಎಂಬುದನ್ನು ನಿರೂಪಿಸುತ್ತಿದ್ದಾರೆ. ಇದರೊಂದಿಗೆ ಈ ಕಾಮರ್ಸ್ ಉದ್ಯಮದಲ್ಲಿ ಬೆಳೆಯುತ್ತಿರುವ ದೇಶದ ಟಾಪ್ 10 ಉದಯೋನ್ಮುಖ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಅನ್ನದಿಂದ ಹಿಡಿದು ಎಲ್ಲ ಆಹಾರ ಪದಾರ್ಥಗಳಿಗೂ ರಾಸಾಯನಿಕಗಳು ಸೇರುತ್ತಿವೆ. ಇದರಿಂದ ಆಹಾರದ ಗುಣಮಟ್ಟ ಕುಸಿದು ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಇನ್ನೂ ಅಡುಗೆ ಎಣ್ಣೆ ವಿಷಯದಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ. ಇಂತಹ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಈ ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ…
ಬೆಂಗಳೂರಿನ ರಾಜಾಜಿನಗರದ ಶಿವನಹಳ್ಳಿಯಲ್ಲಿರುವ ಶಿವಣ್ಣ ಎಂಬುವವರು ತನ್ನ ಐಶ್ವರ್ಯ ಅಪಾರ್ಟ್ಮೆಂಟ್ ಅನ್ನು ಬ್ಯಾಂಕ್ ಒಂದರಲ್ಲಿ ಅಡವಿಟ್ಟು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಸಾಲ ಮರುಪಾವತಿಸದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಬ್ಯಾಂಕ್ ಸಿಬಂದ್ದಿಗಳು ಅಪಾರ್ಟ್ಮೆಂಟ್ನ 29 ಫ್ಲ್ಯಾಟ್ ಗಳನ್ನು ಸೀಜ್ ಮಾಡಿದ್ದಾರೆ. ಈ ಮೂಲಕ ಲೀಸ್ ಮತ್ತು ಬಾಡಿಗೆಗೆ ಇದ್ದ ನಿವಾಸಿಗಳಿಗೆ ಬ್ಯಾಂಕ್ ಸಿಬ್ಬಂದಿ ಶಾಕ್ ನೀಡಿದ್ದಾರೆ. ಮನೆ ತೆರವು ವೇಳೆ ಬ್ಯಾಂಕ್ ಸಿಬ್ಬಂದಿ ಹಾಗೂ ನಿವಾಸಿಗಳ ನಡುವೆ ವಾಗ್ವಾದ ಉಂಟಾಗಿದ್ದು, ಸದ್ಯ ಮನೆಗಳಲ್ಲಿದ್ದ ಸಾಮಾಗ್ರಿಗಳನ್ನ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಹೊರ ಹಾಕಿದ್ದಾರೆ. ಇದರಿಂದಾಗಿ ಸುಮಾರು 100ಕ್ಕೂ ಹೆಚ್ಚು ಜನರು ಬೀದಿಗೆ ಬಿದ್ದಿರುವ ಪರಿಸ್ಥಿತಿ ಕಂಡು ಬಂದಿದೆ. ಅಪಾರ್ಟ್ಮೆಂಟ್ ಅಡವಿಟ್ಟು ಮಾಲೀಕ ಲೋನ್ ಪಡೆದು ಮರುಪಾವತಿಸದ ಹಿನ್ನೆಲೆ ಅಪಾರ್ಟ್ಮೆಂಟ್ನ 29 ಫ್ಲ್ಯಾಟ್ ಗಳನ್ನು ಬ್ಯಾಂಕ್ ಸೀಜ್ ಮಾಡಿದ್ದು ಇದರಿಂದಾಗಿ ಬಾಡಿಗೆ ಮತ್ತು ಲೀಸ್ ಗಿದ್ದ ನಿವಾಸಿಗಳು ಸಂಕಷ್ಟಕ್ಕೊಳಗಾಗಿರುವ ಘಟನೆ ನಡೆದಿದೆ. ಬಾಡಿಗೆ ನಿವಾಸಿಗಳು, ನಮ್ಮ ಹಣ ನಮಗೆ ವಾಪಾಸ್ ಕೊಡಿ…
ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿ ಧರಣಿ ಮುಂದುವರೆದಿದ್ದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿ 48ನೇ ದಿನಕ್ಕೆ ಕಾಲಿಟ್ಟಿದ್ದರೂ ಸರಕಾರ ಮೌನವಹಿಸಿದ್ದು ಇದೀಗ ಮಾ.4ರಂದು ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಬಸವ ಜಯಮೃತ್ಯುಂಜಯಶ್ರೀ ಹೆದ್ದಾರಿ ತಡೆದು ಪ್ರತಿಭಟನೆ ಆಡಲು ಕರೆ ಕೊಟ್ಟಿದ್ದು ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿಯೇ ಮೀಸಲಾತಿ ಒಡೆಯುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಹೋರಾಟ ಆರಂಭಿಸಲಾಗಿತ್ತು. ಇದಕ್ಕೆ ಮಣಿದಿದ್ದ ಸರ್ಕಾರ ಬೆಳಗಾವಿ ಅಧಿವೇಶನದ ಕೊನೆಯ ದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಲಿಂಗಾಯತ, ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗವನ್ನು ಸೃಷ್ಟಿಸಿ ಮೀಸಲಾತಿ ನೀಡಲು ಮುಂದಾಗಿತ್ತು. ಆದರೆ, ಈ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ಶಿವಮೊಗ್ಗ: ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಕೋಟೆಯಾಗಿರುವ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಆಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದ್ದು ಹೆಚ್ ಡಿ ಕುಮಾರಸ್ವಾಮಿ ಅವರು ಅಭ್ಯರ್ಥಿ ಯಾರು ಎಂದು ಸ್ಪಷ್ಟನೆ ನೀಡದೆ ನಡುಗೋಡೆಯ ಮೇಲೆ ದೀಪವಿಡುವ ಕೆಲಸ ಮಾಡಿದ್ದಾರೆ. ಹಾಸನ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿ ಯಾರು ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡದೇ ಜಾರಿಕೊಂಡಿದ್ದು ಯಾರಿಗೆ ಟಿಕೇಟ್ ಸಿಗಲಿದೆ ಎಂಬಗೊಂದಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಪಕ್ಷದ ವರಿಷ್ಠರೆಲ್ಲ ಕೂತು ಒಂದು ನಿರ್ಣಯ ತೆಗೆದುಕೊಳ್ಳುತ್ತೇವೆ, ಅಭ್ಯರ್ಥಿಯ ಆಯ್ಕೆ ಪಕ್ಷದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಬಾರದು, ಕಳೆದ ಎರಡೂವರೆ ತಿಂಗಳಿಂದ ತಾನು ಜೆಡಿಎಸ್ ಪಕ್ಷಕ್ಕೆ ಕನಿಷ್ಟ 125 ಸೀಟು ಬರುವಂತಾಗಲು ರಾಜ್ಯಾದಂತ ಓಡಾಡುತ್ತಿರಿವುದರಿಂದ ತನ್ನ ಶ್ರಮ ವ್ಯರ್ಥವಾಗಬಾರದು ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಟಿಕೇಟ್ ಗುದ್ದಾಟ ಶುರುವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿಯು ಟಿಕೇಟ್ ಕದನ ಶುರುವಾಗಿದ್ದು ಬೆಳಗಾವಿಯಲ್ಲಿ ಟಿಕೆಟ್‍ಗಾಗಿ ಸಿದ್ದರಾಮಯ್ಯ ಮುಂದೆ ಗಲಾಟೆಯು ನಡೆದಿದೆ . ಇದೆಲ್ಲವನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಿಕೆಟ್ ಸಿಗದ ನಿಷ್ಠಾವಂತ ಅಭ್ಯರ್ಥಿಗಳಿಗೆ ಬೇರೆ ಸ್ಥಾನಮಾನಗಳನ್ನು ಕೊಡುತ್ತೇವೆ ಎಂದು ಹೇಳುವುದರ ಮೂಲಕ ಆಕಾಂಕ್ಷಿಗಳನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ. ಟಿಕೆಟ್ ಸಿಗದ ನಿಷ್ಠಾವಂತರಿಗೆ ವಿಧಾನ ಪರಿಷತ್ ಸ್ಥಾನ, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುತ್ತೇವೆ. ನಮ್ಮ ಪಕ್ಷದಲ್ಲಿ ಎಲ್ಲಾ ಕಡೆ ಆಕಾಂಕ್ಷಿಗಳು ಇದ್ದಾರೆ. 1,200 ಜನ ಟಿಕೆಟ್‍ಗೆ ಅರ್ಜಿ ಹಾಕಿದ್ದಾರೆ. ಟಿಕೆಟ್ ಕೇಳೋದ್ರಲ್ಲಿ ತಪ್ಪೇನೂ ಇಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಾರ್ಟಿ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಪತ್ನಿ, ಇಬ್ಬರು ಪುತ್ರಿಯರಿಗೆ ವಿಷವುಣಿಸಿ ಪತಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ಕೋಣನಕುಂಟೆಯ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯ ಮನೆಯೊಂದರಲ್ಲಿ ನಡೆದಿದೆ. ಪತ್ನಿ ವಿಜಯಾ(28), ಪುತ್ರಿಯರಾದ ನಿಶಾ(7), ದೀಕ್ಷಾ(5) ಮೃತ ದುರ್ದೈವಿಗಳು. ಪತಿ ನಾಗೇಂದ್ರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಊಟದಲ್ಲಿ ವಿಷವುಣಿಸಿ ಹತ್ಯೆ ಶಂಕೆ ವ್ಯಕ್ತವಾಗಿದೆ. ಇನ್ನು ಪತಿ ನಾಗೇಂದ್ರ ಕ್ಯಾನ್ಸರ್ನಿಂದ ಬಳತ್ತಿದ್ದು,ಬ್ಲೇಡ್ ನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. 2014ರಲ್ಲಿ ದಂಪತಿ ಮದುವೆಯಾಗಿದ್ದರು. ನಾಗೇಂದ್ರನಿಗೆ ವಿಪರೀತ ಕುಡಿದ ಚಟ ಇತ್ತು. ಪತ್ನಿ ವಿಜಯ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದರು. ವಿಜಯ ಆರ್ಥಿಕವಾಗಿ ಕುಟುಂಬಕ್ಕೆ ಆಧಾರವಾಗಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy