Author: admin

ಬೆಳಗಾವಿ: 132 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದಂತ 12 ಜನ ಆರೋಪಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಗಡಿಪಾರು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಉಪ ವಿಭಾಗದಲ್ಲಿ ಮದಬಾವಿ ಗ್ರಾಮದ ಮೀರಸಾಬ್ ಬಾಗಡಿ, ರಡ್ಡೇರಹಟ್ಟಿ ಗ್ರಾಮದ ಸದಾಶಿವ ಗೊಡಮಾಲೆ, ಕೋಹಳಿ ಗ್ರಾಮದ ರವಿ ಶಿಂಗೆ, ಉಗಾರ ಬಿ.ಕೆ ಗ್ರಾಮದ ಮಹಾದೇವ ಕಾಂಬಳೆ, ಕಮರಿ ಗ್ರಾಮದ ಪ್ರದೀವ್ ಕರಡಿ, ಹಾಲಳ್ಳಿ ಗ್ರಾಮದ ಕಾಶಪ್ಪ ಕಾರಿಕೊಳ್ಳ ಸೇರಿದಂತೆ 12 ಮಂದಿ ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸಮಾಜಘಾತುಕ ಕೃತ್ಯಗಳನ್ನು ತಡೆಗಟ್ಟೋ ನಿಟ್ಟಿನಲ್ಲಿ ಈ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ. 132 ಕೃತ್ಯಗಳಲ್ಲಿ ಭಾಗಿಯಾಗಿದ್ದಂತ 12 ಆರೋಪಿಗಳನ್ನು ಗಡಿಪಾರು ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವಂತ ಕೆಲಸ ಮಾಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ರಾಜ್ಯದ ಹಲವು ಕಡೆ ಇಂದು ಧಾರಾಕಾರ ಮಳೆಯಾಗಿದ್ದು, ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು, ಸಮುದ್ರ ಮಟ್ಟದಿಂದ 7.7 ಕಿ.ಲೋ ಎತ್ತರದವರೆಹೆ ವ್ಯಾಪಿಸಿದೆ. ಈ ಮೇಲ್ಮೈ ಸುಳಿಗಾಳಿಯು ಉತ್ತರ ಒಳನಾಡಿನವರೆಗೂ ವ್ಯಾಪಿಸಿದೆ. ಹಾಗಾಗಿ ಮುಂದಿನ 5 ದಿನಗಳು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಇನ್ನೂ 5 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಮಲೆನಾಡು, ಉತ್ತರ ಒಳನಾಡು, ಕರಾವಳಿ, ಬೆಂಗಳೂರು ಭಾಗದಲ್ಲಿ ಇಂದಿನಿಂದ 5 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮೈಸೂರು ದಸರಾ ಸೇರಿ ಬೇರೆ ಬೇರೆ ಉತ್ಸವಗಳಿಗೆ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಆದರೆ ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಒಂದು ರೂಪಾಯಿ ಹಣ ನೀಡುವುದಿಲ್ಲ, ರಾಜ್ಯ ಸರ್ಕಾರದ ಈ ಮಲತಾಯಿ ದೊರಣೆಯು ಕನ್ನಡ ಪರ ಸಂಘಟನೆಗಳು ಆಕ್ರೋಶ ಕಾರಣವಾಗಿದೆ. ಸರಕಾರದ ಬಿಡಿಗಾಸು ಅನುದಾನವಿಲ್ಲದೇ 12 ಗಂಟೆಗಳ ಕಾಲ ಅದ್ಧೂರಿಯಿಂದ ವೈಭವದಿಂದ ನಡೆಯುವ ಏಕೈಕ ರಾಜ್ಯೋತ್ಸವ ಮೆರವಣಿಗೆಯೆಂದರೆ ಬೆಳಗಾವಿ ಮೆರವಣಿಗೆ! ರಾಜ್ಯ ಸರ್ಕಾರ ಮೈಸೂರು ದಸರಾ ಹಬ್ಬಕ್ಕೆ ಹತ್ತು ಕೋಟಿ ಅನುದಾನ ನೀಡುತ್ತದೆ. ವಿಧಾನ ಸೌಧದ ಸಮೀಪವಿರುವ ಕನ್ನಡ ಸಂಘಟನೆಗಳಿಗೆ ಕೋಟ್ಯಾವಧಿ ಹಣ ಕೊಡುತ್ತದೆ.ಬೆಳಗಾವಿಯ 75 ಕ್ಕೂ ಅಧಿಕ ಕನ್ನಡ ಸಂಘಟನೆಗಳಿಗೆ ಬೆಳಗಾವಿಯಲ್ಲಿ ನವ್ಹೆಂಬರ್ ತಿಂಗಳಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲುಒಂದು ಕೋಟಿ ರೂ.ಅನುದಾನ ನೀಡಲುಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ನವ್ಹೆಂಬರ್ ಒಂದರ ಮೆರವಣಿಗೆಯಲ್ಲಿ ಈ ಬಾರಿ ನಾಲ್ಕು ಲಕ್ಷ ಮೀರಿದ ಜನಸಾಗರವೇ ಸೇರಿತ್ತು ಇದೊಂದು ಐತಿಹಾಸಿಕ ದಾಖಲೆ. ಮೆರವಣಿಗೆಯ ಮಾರ್ಗ ಹೊರತುಪಡಿಸಿ ಬೆಳಗಾವಿಯ ಇನ್ನುಳಿದ ಪ್ರಮುಖ ರಸ್ತೆಗಳು,ವೃತ್ತಗಳು ಸಹಸ್ರಾರು ಯುವಕರಿಂದ…

Read More

ಹುಬ್ಬಳ್ಳಿ : ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆ ಸಂಪೂರ್ಣ ಸುಟ್ಟುಹೋದ ಘಟನೆ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮಾಬೂಸಾಬ್ ಅಲಿಸಾಬ ಸಂಶಕಿ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸ್ಪೋಟದ ಶಬ್ದ ಕೇಳಿ ಮನೆಯಿಂದ ಮಾಬೂಸಾಬ್ ಕುಟುಂಬಸ್ಥರು ಹೊರಗೆ ಒಡಿ ಬಂದಿದ್ದು, ಮನೆಯಲ್ಲಿದ್ದ ಬಟ್ಟೆ, ಗೃಹ ವಸ್ತುಗಳು ಬೆಂಕಿಗಾಹುತಿಯಾಗಿವೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ : ಶೀಘ್ರವೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳ ಮಾರ್ಜಿನ್ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 6 ರೂ. ನಷ್ಟಿದೆ.ಹೀಗಾಗಿ ಶೀಘ್ರದಲ್ಲೇ ಡೀಸೆಲ್ ಮೇಲಿನ ಅಂಡರ್ ರಿಕವರಿ 10 ರೂ. ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರ ಸರ್ಕಾರವು 2022 ರ ಮೇ 10 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ಮತ್ತು 6 ರೂ. ಕಡಿಮೆ ಮಾಡಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಿಯಾಲಿಟಿ ಶೋ ನಡೆಸಿಕೊಡುವ ಸೃಜನ್ ಲೋಕೇಶ್ ಮತ್ತು ಸಚಿವ ಸೋಮಣ್ಣ ಪುತ್ರರ ಗುಂಪುಗಳ ನಡುವೆ ಬೆಂಗಳೂರಿನಲ್ಲಿ ಬುಧವಾರ ತಡರಾತ್ರಿ ಕ್ಲಬ್ ನಲ್ಲಿ ಹೊಡೆದಾಟ ನಡೆದಿದೆ. ಅಪ್ಪು ಕಪ್ ಬ್ಯಾಡ್ಮಿಂಟನ್​ ಟೂರ್ನಮೆಂಟ್​ಗೆ​ ಪ್ರಾಕ್ಟೀಸ್​ ವೇಳೆ ಜಗಳ ನಡೆದಿದೆ. ಟೂರ್ನಮೆಂಟ್​ಗೆ ಸೃಜನ್​ ಲೋಕೇಶ್​ ಟೀಂ ಪ್ರಾಕ್ಟೀಸ್ ಮಾಡಿ ನಂತರ ಪಾರ್ಟಿ ಮಾಡಿದ್ದಾರೆ. ಈ ವೇಳೆ ಯಾಕೆ ಜೋರಾಗಿ ಕಿರುಚಾಡುತ್ತಿದ್ದೀರಾ ಎಂದು ಅರುಣ್ ಪ್ರಶ್ನಿಸಿದ್ದಾರೆ. ಈ ಸಮಯ ಅರುಣ್, ಸೃಜನ್​ ಲೋಕೇಶ್​ ಟೀಂ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಹೊಡೆದಾಟವಾಗಿದೆ. ಆದ್ರೆ ಘಟನೆ ಬಗ್ಗೆ ಗುಂಪುಗಳು, ಕ್ಲಬ್​ ಆಡಳಿತ ಮಂಡಳಿ ದೂರು ನೀಡಿಲ್ಲ. ಗಲಾಟೆ ವೇಳೆ ನಟ ಸೃಜನ್ ಲೋಕೇಶ್​ ಕಿಂಗ್ಸ್​ ಕ್ಲಬ್​ನಲ್ಲಿ ಇರಲಿಲ್ಲ. ವಿಕಾಸ್ ಮತ್ತು ಅರುಣ್ ಸೋಮಣ್ಣ ನಡುವೆ ಘಟನೆ ನಡೆದಿದೆ ಎನ್ನಲಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧ ಟಿವಿ9ಗೆ ವಸತಿ ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಪ್ರತಿಕ್ರಿಯೆ ನೀಡಿದ್ದಾರೆ.…

Read More

ಪ್ರಭಾವಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ಬಳಕೆದಾರರು ಬ್ಲೂ ಟಿಕ್ ಗಳಿಸಬೇಕಾದರೆ ಮಾಸಿಕ 8 ಡಾಲರ್ ಅಂದರೆ 660 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಸುಮಾರು ಒಂದು ತಿಂಗಳ ಗೊಂದಲದ ನಂತರ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಎಲಾನ್ ಮಸ್ಕ್, ಟ್ವಿಟರ್ ನಿಯಮಗಳಲ್ಲಿ ಬದಲಾವಣೆ ರೂಪಿಸುತ್ತಿದ್ದು, ಇದುವರೆಗೆ ಟ್ವಿಟರ್ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಲಾಗುತ್ತಿರಲಿಲ್ಲ. ಎಲಾನ್ ಮಸ್ಕ್ ಎರಡು ದಿನಗಳ ಹಿಂದೆಯಷ್ಟೇ ಟ್ವಿಟರ್ ಬ್ಲೂ ಟಿಕ್ ಗ್ರಾಹಕರು 20 ಡಾಲರ್ ಅಂದರೆ ಮಾಸಿಕ ಸುಮಾರು 1500 ರೂ. ಮಾಸಿಕ ಶುಲ್ಕ ಪಾವತಿಸಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ 8 ಡಾಲರ್ ಅಂದರೆ 660 ರೂ. ಶುಲ್ಕ ವಿಧಿಸುವುದಾಗಿ ಹೇಳಿದ್ದಾರೆ. ಬ್ಲೂ ಟಿಕ್ ಗ್ರಾಹಕರು ಮಾಸಿಕ 660 ರೂ. ಪಾವತಿಸಿದರೆ ನಕಲಿ ಖಾತೆಗಳ ಹಾವಳಿ ತಡೆಗಟ್ಟಬಹುದು. ಟ್ವಿಟರ್ ಗೆ ನಿಜವಾದ ಸಮಸ್ಯೆ ಇರುವುದು ನಕಲಿ ಖಾತೆಗಳ ಹಾವಳಿ ಎಂದು ಎಲಾನ್ ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ನವದೆಹಲಿ: ಬಹುನಿರೀಕ್ಷಿತ ಗುಜರಾತ್​ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ, ಕೇಂದ್ರ ಚುನಾವಣಾ ಆಯುಕ್ತ ರಾಜೀವ್​ ಕುಮಾರ್, ಗುಜರಾತದಲ್ಲಿ ಡಿಸೆಂಬರ್​ 1 ಮತ್ತು 5ಕ್ಕೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಫಲಿತಾಂಶ ಹೊರ ಬೀಳಲಿದೆ ಎಂದು ಹೇಳಿದರು. ಗುಜರಾತ್ ಅಸೆಂಬ್ಲಿಯ ಅವಧಿಯು ಮುಂದಿನ ವರ್ಷ ಫೆಬ್ರವರಿ 18ಕ್ಕೆ ಕೊನೆಗೊಳ್ಳುತ್ತದೆ. ಹಿಮಾಚಲ ಪ್ರದೇಶ ಸದನದ ಅವಧಿಯು 2023ರ ಜನವರಿ 8ಕ್ಕೆ ಮುಗಿಯಲಿದೆ. ಹಾಗಾಗಿ ಈ ಎರಡೂ ರಾಜ್ಯಗಳಿಗೆ ಒಂದೇ ಸಮಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗವು ಅಕ್ಟೋಬರ್ 14ರಂದು ಹಿಮಾಚಲ ಪ್ರದೇಶಕ್ಕೆ ಮಾತ್ರ ಚುನಾವಣೆ ದಿನಾಂಕ ಘೋಷಿಸಿತು. ಇದೀಗ ಗುಜರಾತ್​ ಚುನಾವಣೆ ದಿನಾಂಕವೂ ಘೋಷಣೆಯಾಗಲಿದೆ. ಕಳೆದ ಅಕ್ಟೋಬರ್ 14ರಂದು ಚುನಾವಣಾ ಆಯೋಗ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಹಿಮಾಚಲ ಪ್ರದೇಶದ 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.12ರಂದು ಮತದಾನ ನಡೆಯಲಿದೆ…

Read More

ತೆಲಂಗಾಣ ಸೇರಿದಂತೆ ಇಂದು 6 ರಾಜ್ಯಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಎಲ್ಲರ ಕಣ್ಣು ತೆಲಂಗಾಣ ಹಾಗೂ ಬಿಹಾರದ ಮೇಲಿದೆ. ತೆಲಂಗಾಣ ಮತ್ತು ಬಿಹಾರದಲ್ಲಿ ತಲಾ 2 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪಾರ್ಟಿ ಸದಸ್ಯರನ್ನು ಬಿಜೆಪಿ ಆಪರೇಷನ್ ಕಮಲ ಮಾಡಲು ಹೋಗಿ ಸಿಕ್ಕಿಬಿದ್ದಿದ್ದರಿಂದ ಇಲ್ಲಿನ ಚುನಾವಣೆ ಪ್ರಮುಖ ಆಕರ್ಷಣೆಯಾಗಿದೆ. ತೆಲಂಗಾಣದ ಮನುಗೊಡೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ಆಗಿದ್ದರಿಂದ ಈ ಕ್ಷೇತ್ರದ ಮೇಲೆ ಬಿಜೆಪಿ ಹಾಗೂ ಟಿಆರ್ ಎಸ್ ಪಕ್ಷ ದೃಷ್ಟಿ ನೆಟ್ಟಿದೆ.ಟಿಆರ್ ಎಸ್ ನ ಕುಶುಕುಂಟ್ಲಾ ಪ್ರಭಾಕರ ರೆಡ್ಡಿ, ಬಿಜೆಪಿಯ ರಾಜಗೋಪಾಲ ರೆಡ್ಡಿ ಹಾಗೂ ಕಾಂಗ್ರೆಸ್ ನ ಪಳವಿ ಶ‍್ರಾವಂತಿ ಸ್ಪರ್ಧಿಸುತ್ತಿದ್ದಾರೆ. ಮತ್ತೊಂದೆಡೆ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡ ನಂತರ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಬಿಜೆಪಿ ಹಾಗೂ ಬಿಜೆಡಿ ನಡುವಿನ ಸಂಘರ್ಷದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಮೊಕಾಮ ಮತ್ತು…

Read More

ಉತ್ತರ ಕೊರಿಯಾ ದೂರಗಾಮಿ ಮತ್ತು ಸಮೀಪದ ಮೂರು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದರಿಂದ ದಕ್ಷಿಣ ಕೊರಿಯಾ ಹಾಗೂ ಜಪಾನ್ ನಾಗರಿಕರಿಗೆ ಅಲರ್ಟ್ ಘೋಷಿಸಿದೆ. ದಕ್ಷಿಣ ಕೊರಿಯಾದ ದ್ವೀಪಗಳಲ್ಲಿ ಆಸರೆ ಪಡೆದಿರುವ ನಾಗರಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಪಾನ್ ಸೂಚಿಸಿದೆ. ಪಿಯೊಗಾಂಗ್ ಬಳಿಯ ಸುನಾನ್ ದ್ವೀಪದ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು ತಲುಪುವ ಸಾಮರ್ಥ್ಯದ ದೂರಗಾವಿ ಕ್ಷಿಪಣಿ ಬುಧವಾರ ಬೆಳಿಗ್ಗೆ 7.30ಕ್ಕೆ ಉಡಾಯಿಸಲಾಗಿದೆ ಎಂದು ಉತ್ತರ ಕೊರಿಯಾದ ಸೇನೆ ಹೇಳಿಕೆ ನೀಡಿದೆ. ಇದೇ ವೇಳೆ ಎರಡು ಕಡಿಮೆ ದೂರ ಗುರಿ ಮುಟ್ಟುವ ಕ್ಷಿಪಣಿಗಳನ್ನು ಬುಧವಾರ ಬೆಳಿಗ್ಗೆ 8.49ಕ್ಕೆ ಪರೀಕ್ಷಿಸಲಾಯಿತು ಎಂದು ಸೇನೆ ಹೇಳಿಕೊಂಡಿದೆ. ಹಿಂದಿನ ದಿನವಷ್ಟೇ ಒಂದೇ ದಿನ 20 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷೆಗೊಳಪಡಿಸಿದ್ದು, ಇದರಲ್ಲಿ ಒಂದು ಕ್ಷಿಪಣಿ ದಕ್ಷಿಣ ಕೊರಿಯಾ ವ್ಯಾಪ್ತಿಯ ಸಮುದ್ರದಲ್ಲಿ ಬಿದ್ದಿದೆ ಎಂದು ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More