Subscribe to Updates
Get the latest creative news from FooBar about art, design and business.
- ತುಮಕೂರು: ಜಿಲ್ಲೆಯಲ್ಲಿ ಮಲಹೊರುವ ಅನಿಷ್ಟ ಪದ್ಧತಿ ಇನ್ನೂ ಜೀವಂತ: ಕೆಇಬಿ ಇಂಜಿನಿಯರ್ಸ್ ಸಂಘದ ಆವರಣದಲ್ಲೇ ಅಮಾನವೀಯ ಕೃತ್ಯ!
- ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ: ಜೂನ್ 30 ಕೊನೆಯ ದಿನ
- ಸಿರಾ: ಜುಲೈ 19 ರಂದು ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ
- ಜೂ.27—28ರಂದು ಉಚಿತ ಕಿವಿ ತಪಾಸಣೆ ಶಿಬಿರ
- ಸಾಹಿತ್ಯ ಎಂಬುದು ಕತ್ತಲಲ್ಲಿ ಅಡಗಿರುವ ಸಂಪತ್ತು: ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ
- ತುರುವೇಕೆರೆ: ಜೂ.27ರಂದು ಕೆಂಪೇಗೌಡರ ಜಯಂತ್ಯುತ್ಸವ ಆಚರಣೆ
- ಬರ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮವಹಿಸಿ: ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆ
- ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ
Author: admin
ಬೆಳಗಾವಿ: ಚಂಡೀಗಡ ನಗರದಲ್ಲಿ ನಡೆದ 190ನೇ ಇಎಸ್ಆಯ್ ಕಾರ್ಪೋರೇಶನ ಸಭೆಯಲ್ಲಿ ಬೆಳಗಾವಿಯಲ್ಲಿ 100 ಹಾಸಿಗೆಗಳ ಇ.ಎಸ್.ಆಯ್.ಸಿ ಆಸ್ಪತ್ರೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಕಿತ್ತೂರು ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆ ಈಡೇರಿಕೆಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹರ್ಷ ವ್ಯಕ್ತಪಡಿಸಿದರು. ಸೋಮವಾರ ಫೆ.20 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಕಳೆದ 2 ವರ್ಷಗಳ ಸತತ ಪ್ರಯತ್ನದಿಂದ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸುವ ಮೂಲಕ, ಖುದ್ದು ವೈಯಕ್ತಿಕ ಭೇಟಿಯಾಗುವ ಮೂಲಕ, ರಾಜ್ಯಸಭೆಯ ಕಲಾಪದ ಶೂನ್ಯ ವೇಳೆಯಲ್ಲಿ ಮತ್ತು ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿತ್ತು. ಜಿಲ್ಲೆಯಲ್ಲಿ ಸುಮಾರು 1 ಲಕ್ಷ 25 ಸಾವಿರಕ್ಕೂ ಹೆಚ್ಚು ನೋಂದಾಯಿತ ಕಾರ್ಮಿಕ ವರ್ಗವಿದ್ದು ಈ ಎಲ್ಲಾ ಕುಟುಂಬದ ಸದಸ್ಯರುಗಳಿಗೆ ಉಚಿತ ಆರೋಗ್ಯ…
ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕಿತ್ತಾಡಿಕೊಂಡು, ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ. ಡಿ. ರೂಪಾ ಅವರ ಪತಿ, ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನೂ ಸಹ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನಿನ್ನೆಯಷ್ಟೇ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದ ಸರ್ಕಾರ, ಇಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹಾಗೂ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಡಿ. ರೂಪಾ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಂಡೋಣಿ ಗ್ರಾಮದ ಸಿದ್ದರಾಜು ಬಿ ಎನ್ ಬಿನ್ ನರಸಿಂಹಯ್ಯ (45) ಎಂಬ ಬಡರೈತ ಸಾಲಬಾಧೆ ತಾಳಲಾರದ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.. ಬೆಂಡೋಣಿ ಗ್ರಾಮದ ಸರ್ವೆ ನಂಬರ್ 22/2 ರ ತನ್ನ ಜಮೀನಿನ ತುಗಲಿ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರಟಗೆರೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ಜಮೀನಿನ ಅಭಿವೃದ್ಧಿಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಸಾಲವನ್ನು ಪಡೆದಿದ್ದರು ಮತ್ತು ವಿಎಸ್ ಎಸ್ ಎನ್ ಬೆಂಡೋಣಿ ಶಾಖೆಯಲ್ಲಿ 1 ಲಕ್ಷ ಸಾಲ ಪಡೆದಿದ್ದರು. ನಂತರ ಖಾಸಗಿ ಫೈನಾನ್ಸ್ ಸಂಸ್ಥೆಯಾದ ಸಮಸ್ತ ಫೈನಾನ್ಸ್ ನಲ್ಲಿ 70,000 ರೂ ಗಳನ್ನೂ ಹೈನುಗಾರಿಕೆಗಾಗಿ ಸಾಲ ಪಡೆದಿದ್ದರು ಮತ್ತು ತನ್ನ ಮಗನ ಆರೋಗ್ಯದ ಕಾರಣದಿಂದ ಸ್ಥಳೀಯ ಸಾರ್ವಜನಿಕರೊಂದಿಗೆ ಕೈಸಾಲವನ್ನು ಸಹ ಮಾಡಿಕೊಂಡಿದ್ದರು. ಸಾಲವನ್ನು ತೀರಿಸಲಾಗದೆ ಪ್ರತಿನಿತ್ಯ ಪರದಾಡುತ್ತಿದ್ದ ವ್ಯಕ್ತಿಗೆ ಕೆನರಾ ಬ್ಯಾಂಕ್ ಸಾಲವನ್ನು ತೀರಿಸುವಂತೆ ನೋಟಿಸನ್ನು ನೀಡಲಾಗಿತ್ತು ಹೀಗಾಗಿ ಸಾಲವನ್ನು ತೀರಿಸಲಾಗದೆ ಮಕ್ಕಳ ವಿದ್ಯಾಭಾಸವನ್ನು ಮಾಡಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡ ಈ…
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಚಿಕ್ಕಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರದಂದು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಮುತ್ತುರಾಜು, ಶ್ರದ್ಧೆಯಿಂದ ಚೆನ್ನಾಗಿ ಶಿಕ್ಷಣಭ್ಯಾಸವನ್ನು ಮಾಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಚೆನ್ನಾಗಿ ಓದಿಕೊಂಡು ಸಮಾಜದಲ್ಲಿ ಉನ್ನತ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಈ ವೇಳೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು ಮತ್ತು ಶಾಲೆಯ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಮಾರ್ತೀಶ್, ಸೋಮಶೇಖರ್, ರಾಜಕುಮಾರ್, ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ಲತಾ, ಮತ್ತು ಶಿಕ್ಷಕ ವೃಂದ ಹಾಜರಿದ್ದರು. ವರದಿ: ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್…
ವರುಣಾ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷ ಸುಳಿವು ನೀಡಿದ್ದಾರೆ. ಮೇಘಳಾಪುರ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ ನಿಮ್ಮ ಶಾಸಕರಾಗಿರುವುದು ಭಾಗ್ಯ. ಸಿದ್ದರಾಮಯ್ಯ ಅವರಿಗೆ ಎಲ್ಲಿ ಬೇಕಾದರೂ ಚುನಾವಣೆಗೆ ನಿಂತುಕೊಳ್ಳುವ ಶಕ್ತಿ ನೀಡಿದ್ದೀರಿ. ವರುಣಾ ಕ್ಷೇತ್ರದ ಜನರ ಸಹಾಯ ಮರೆಯಲು ಸಾಧ್ಯವಿಲ್ಲ ಎಂದರು. ವರುಣಾ ಕ್ಷೇತ್ರದಿಂದ ಸದ್ಯ ಯತೀಂದ್ರ ಒಬ್ಬರೇ ಅರ್ಜಿ ಹಾಕಿದ್ದಾರೆ. ಈ ಬಾರಿ ವರುಣಾದಲ್ಲಿ ಯತೀಂದ್ರ ಸಿದ್ಧರಾಮಯ್ಯ ಅವರನ್ನು ಹೆಚ್ಚು ಮತ ನೀಡಿ ಗೆಲ್ಲಿಸಿ. ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ನಂತರ ದುಲ್ಕರ್ ಸಲ್ಮಾನ್ ಧನ್ಯವಾದ ಹೇಳಿದರು. ದುಲ್ಕರ್ ಸಲ್ಮಾನ್ ತಮ್ಮ ಫೇಸ್ ಬುಕ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಹಿಂದಿಯಲ್ಲಿ ಇದು ನನ್ನ ಮೊದಲ ಪ್ರಶಸ್ತಿ. ಮತ್ತು ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ನನ್ನ ಮೊದಲ ಗೆಲುವು. ಈ ಗೌರವಕ್ಕಾಗಿ ದಾದಾಸಾಹಿಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರಿಗೆ ಧನ್ಯವಾದಗಳು. ನಿರ್ದೇಶಕ ಬಾಲ್ಕಿ ಸರ್ ಮತ್ತು ಚುಪ್ ಚಿತ್ರದ ಸಹನಟರಿಗೂ ಧನ್ಯವಾದಗಳು. ಚುಪ್ನಲ್ಲಿ ನನಗೆ ಉತ್ತಮ ಅನುಭವವನ್ನು ನೀಡಿದ ಬಾಲ್ಕಿ ಸರ್, ನನ್ನ ಸ್ನೇಹಿತರು, ಎಲ್ಲಾ ಬೆಂಬಲಿಗರು ಮತ್ತು ಹೋಪ್ ಪ್ರೊಡಕ್ಷನ್ನಲ್ಲಿರುವ ಎಲ್ಲರಿಗೂ ಧನ್ಯವಾದಗಳು. ಇದು ನಿಮ್ಮೆಲ್ಲರಿಗಾಗಿ ಎಂದು ದುಲ್ಕರ್ ಸಲ್ಮಾನ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ: ವಿಶೇಷ ಎನಿಸಿತು! ಹಿಂದಿಯಲ್ಲಿ ನನ್ನ ಮೊದಲ ಪ್ರಶಸ್ತಿ. ಮತ್ತು ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ನನ್ನ ಮೊದಲ ಗೆಲುವು. ಈ ಗೌರವಕ್ಕಾಗಿ ಅಭಿಷೇಕ್ ಮಿಶ್ರಾ ಮತ್ತು ದಾದಾಸಾಹಿಬ್ ಫಾಲ್ಕೆ…
ಇಬ್ಬರು ಅಧಿಕಾರಿಗಳಾದ ಡಿ.ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿನಡುವಿನಕಿತ್ತಾಟದಿಂದಮುಜುಗರ ಕ್ಕೀಡಾಗಿರುವ ರಾಜ್ಯ ಸರ್ಕಾರ ಇದೀಗ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರಿಗೆ ನೋಟಿಸ್ ನೀಡಿರುವ ಸಿಬ್ಬಂದಿ ಆಡಳಿತ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್, ಬಹಿರಂಗ ಹೇಳಿಕೆ ನೀಡದಂತೆ, ಫೇಸ್ ಬುಕ್ ಪೋಸ್ಟ್ ಹಾಕದಂತೆ ಇಬ್ಬರಿಗೆ ಸೂಚನೆ ನೀಡಿದ್ದಾರೆ. ಇಬ್ಬರ ಕಿತ್ತಾಟದಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ ಇದು ಭಾರತೀಯ ಸರ್ವಿಸ್ ನಿಯಮ ಉಲ್ಲಂಘನೆಯಾಗಿದೆ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಸಕ್ಷಮ ಪ್ರಾಧಿಕಾರದ ಮುಂದೆ ಆರೋಪ ಮಾಡಬಹುದು. ಆದರೆ ಮಾಧ್ಯಮದ ಮುಂದೆ ಆರೋಪ ಮಾಡಿದ್ದೀರಾ..? ಹೀಗಾಗಿ ಮಾಧ್ಯಮದ ಮುಂದೆ ಹೋಗಬಾರದು ಇಬ್ಬರು ಅಧಿಕಾರಿಗಳು ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರುವಂತೆ ರಾಜ್ಯ ಸರ್ಕಾರ ಸೂಚನೆ ನೀಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ದಾಳಿಂಬೆ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ಅನೇಕರಿಗೆ ಅರಿವಿದೆ ಆದರೆ ದಾಳಿಂಬೆಯ ಸಿಪ್ಪೆಯಲ್ಲಿ ಹಲವಾರು ಪ್ರಯೋಜನಗಳಿವೆ . ಆರೋಗ್ಯ ಮತ್ತು ಸೌಂದರ್ಯವನ್ನು ಸುಧಾರಿಸಲು ನಾವು ದಾಳಿಂಬೆ ಸಿಪ್ಪೆಯನ್ನು ಬಳಸಬಹುದು. ಈಗ ದಾಳಿಂಬೆಯ ಸಿಪ್ಪೆಯವನ್ನು ಎಸೆಯುವ ಮೊದಲು, ಈ ಕೆಳಗಿನವುಗಳನ್ನು ಪ್ರಯತ್ನಿಸಿ. ನೀವು ಕೆಮ್ಮು ಮತ್ತು ಗಂಟಲು ನೋವಿನಿಂದ ಬಳಲುತ್ತಿರುವಾಗ, ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ನೀರಿಗೆ ಸೇರಿಸಿ ಕುಡಿಯಬಹುದು. ಒಣಗಿಸಿ ಪುಡಿಮಾಡಿದ ದಾಳಿಂಬೆಯ ಸಿಪ್ಪೆಯನ್ನು ನೀರು ಅಥವಾ ಹಾಲಿನೊಂದಿಗೆ ಫೇಸ್ ಪ್ಯಾಕ್ ಆಗಿ ಹಚ್ಚುವುದರಿಂದ ಮೊಡವೆಗಳನ್ನು ತಡೆಯುತ್ತದೆ. ದಾಳಿಂಬೆ ಸಿಪ್ಪೆಯೊಂದಿಗೆ ತೆಂಗಿನ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ. ಒಣಗಿದ ದಾಳಿಂಬೆ ಸಿಪ್ಪೆಯನ್ನು ಸೇವಿಸುವುದರಿಂದ ರೋಗಗಳ ಅಪಾಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಭೂವೈಜ್ಞಾನಿಕ ಸಮೀಕ್ಷೆಗಳು ದೇಶದ ಭೂಪ್ರದೇಶ ಮತ್ತು ಜಲಾನಯನದ ಬಗ್ಗೆ ಹೆಚ್ಚಿನದನ್ನು ಬಹಿರಂಗಪಡಿಸಬಹುದು. ಆದರೆ ಅಂತಹ ಮಹತ್ತರವಾದ ಬಹಿರಂಗಪಡಿಸುವಿಕೆ ಇನ್ನೂ ನಡೆದಿದೆಯೇ ಎಂದು ಹೇಳುವುದು ಕಷ್ಟ. ಒಂದು ದಿನ ನಿಮ್ಮ ದೇಶವು ಇನ್ನೂ ಯಾರಿಗೂ ತಿಳಿದಿಲ್ಲದ 7,000 ದ್ವೀಪಗಳಿಂದ ಆವೃತವಾಗಿದೆ ಎಂಬ ಸುದ್ದಿಯನ್ನು ನೀವು ಹೇಗೆ ಹೀರಿಕೊಳ್ಳುತ್ತೀರಿ? ಪ್ರಸ್ತುತ ಸಮೀಕ್ಷೆಯು 1987 ರ ನಂತರ ಸ್ಥಳೀಯ ಜಲಗಳ ಸರ್ಕಾರದ ಮೊದಲ ಸಮೀಕ್ಷೆಯನ್ನು ಅನುಸರಿಸುತ್ತದೆ. ಅಧಿಕೃತ ದ್ವೀಪಗಳ ಸಂಖ್ಯೆಯು 6,852 ರಿಂದ 14,125 ಕ್ಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಡಿಸೆಂಬರ್ 2021 ರಲ್ಲಿ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಅಂಕಿಅಂಶಗಳ ವಿವಾದದ ನಂತರ ಸಮೀಕ್ಷೆಗೆ ಆದೇಶಿಸಲಾಗಿದೆ. ಈ ಅಂಕಿಅಂಶಗಳು ಹಳೆಯದಾಗಿವೆ ಮತ್ತು ಪ್ರಸ್ತುತ ದ್ವೀಪಗಳ ಸಂಖ್ಯೆಯು ತುಂಬಾ ಭಿನ್ನವಾಗಿರಬಹುದು ಎಂದು ಸೂಚಿಸಲಾಗಿದೆ. ದ್ವೀಪಗಳ ಸಂಖ್ಯೆಯ ನಿಖರವಾದ ತಿಳುವಳಿಕೆಯು ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ಆಡಳಿತಾತ್ಮಕ ವಿಷಯವಾಗಿದೆ ಎಂದು ಅಂದಿನ ಲಿಬರಲ್ ಡೆಮೋಕ್ರಾಟ್ ಶಾಸಕರು ಹೇಳಿದರು. ಹೊಸ ಸಮೀಕ್ಷೆಯನ್ನು ಜಪಾನ್ನ ಜಿಯೋಸ್ಪೇಷಿಯಲ್ ಇನ್ಫರ್ಮೇಷನ್ ಅಥಾರಿಟಿ ನಡೆಸಿದೆ. ಇದು ದೇಶದ ವಿಸ್ತೀರ್ಣವನ್ನು…
ವೇತನ ಪರಿಷ್ಕರಣೆ ಮಾಡುವಂತೆ ಸಾರಿಗೆ ನೌಕರರು ಬೇಡಿಕೆ ಇಟ್ಟಿದ್ದಾರೆ. ಹಣಕಾಸು ಇತಿಮಿತಿಯಲ್ಲಿ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವೋಲ್ವೋ, ಅಂಬಾರಿ ಬಸ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಾರಿಗೆ ನೌಕರರ 7ರಿಂದ 8 ಬೇಡಿಕೆ ಈಡೇರಿಸಲಾಗಿದೆ. ಈಗ ವೇತನ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ. ಹಣಕಾಸು ಇತಿಮಿತಿಯಲ್ಲಿ ಇದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆ ಆರಂಭವಾದಾಗ ಎಲ್ಲಾ ತಾಲ್ಲೂಕುಗಳಲ್ಲಿ 4 ರಿಂದ 5 ಮಿನಿಬಸ್ ಓಡಾಡುತ್ತಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಏಪ್ರಿಲ್ 1ರಿಂದ ಉಚಿತ ಬಸ್ ಪಾಸ್ ನೀಡುವಂತೆ ಸಾರಿಗೆ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy