Subscribe to Updates
Get the latest creative news from FooBar about art, design and business.
- ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್
- ರೇಣುಕಾಸ್ವಾಮಿ ಕೊಲೆ ಕೇಸ್: ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ‘ಮಾಫಿ’ ಸಾಕ್ಷ್ಯ ದಾಖಲು!
- ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
- ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ ನ ಬ್ಯಾಟರಿ ಕಳವು!
- ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ
- ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.
- ಮಹಾ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀಗಳಿಂದ ಚಾಲನೆ
- ಕೋಟಗುಡ್ಡ ಸಹನಾ ಶಾಲೆಗೆ “ಪರಿಸರ ಶಾಲಾ ಪ್ರಶಸ್ತಿ”
Author: admin
ತುಮಕೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಹೊಸ ವರ್ಷ ಪ್ರಯುಕ್ತ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡು ಬಂತು. ತುಮಕೂರು ತಾಲೂಕಿನ ಹನುಮಂತಪುರ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಆಂಜನೇಯಸ್ವಾಮಿಗೆ ವಿಳ್ಯದೇಲೆ ಅಲಂಕಾರ ಮಾಡಿ, ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಹೊಸ ವರ್ಷಾಚರಣೆ ಎಂದರೆ, ಕೇಕ್ ಇದ್ದೆ ಇರುತ್ತೆ ಹಾಗಾಗಿ ಈ ಬಾರಿ ಭಕ್ತರಿಗೆ ಹೊಸ ವರ್ಷದ ಪ್ರಯುಕ್ತ ಪ್ರಸಾದ ರೂಪದಲ್ಲಿ ಮೊಟ್ಟೆ ರಹಿತ ಕೇಕ್ ನ್ನು ದೇವಸ್ಥಾನದ ಆಡಳಿತ ಮಂಡಳಿ ವಿತರಿಸಿದ್ದು, ವಿಶೇಷವಾಗಿತ್ತು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಹೊಸ ವರ್ಷದ ಹೊಸ್ತಿಲಿನಲ್ಲಿರುವ ನಮಗೆ ಹಳೆಯ ವರ್ಷದ ಹಾಗು ಹೋಗುಗಳ ನೆನಪು ಯಾವಾಗಲೂ ಇರಬೇಕಾಗುತ್ತದೆ. ವಿಜಯಪುರ ಜಿಲ್ಲೆಗೆ 2021 ಖುಷಿಗಿಂತ ಕಹಿಯೇ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಮಹಾಮಾರಿ ಕೊರೊನಾ, ಅಕಾಲಿಕ ಮಳೆ, ಪ್ರಕೃತಿ ಸೇರಿದಂತೆ ಹತ್ತು ಹಲವಾರು ಸಂಕಷ್ಟಗಳು ಜಿಲ್ಲೆಗೆ ಎದುರಾದವು. ಮೊದಲು ಅರ್ಧ ವರ್ಷ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಜೀವಗಳ ದೇಹ ತ್ಯಾಗ ಮಾಡಿದವು. ಆಕ್ಸಿಜನ್ ಇಲ್ಲದೇ ಎಷ್ಟೋ ಜೀವ ಪ್ರಾಣ ತ್ಯಾಗ ಮಾಡಿದವು. ಕೆಲ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೇ ಸಾಕಷ್ಟು ಜನ ಜೀವ ಕಳೆದುಕೊಳ್ಳಬೇಕಾಯಿತು. ಭೂಕಂಪನ ಭಯ: ವರ್ಷದ ಕಡೆಯ ಮೂರು ತಿಂಗಳು ಜಿಲ್ಲೆಯ ಮನಗೂಳಿ, ಕೊಲ್ಹಾರ್ , ಮುಳವಾಡ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಯಿತು. ಸೆಪ್ಟೆಂಬರ್ ದಿಂದ ಅಕ್ಟೋಬರ್ ತಿಂಗಳವರೆಗೆ 14ಬಾರಿ ಭೂಮಿ ಕಂಪಿಸಿತ್ತು.ನಂತರ ತಜ್ಞರ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಕಾಲಿಕ ಮಳೆ: ಸೆಪ್ಟೆಂಬರ್ ಮೊದಲು ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣ ಬೆಳೆ ಹಾನಿಗೊಳಗಾಯಿತು. 12.56…
ತುಮಕೂರು: ನಗರದ ಅಂತರಸನಹಳ್ಳಿ ಮಾರುಕಟ್ಟೆ ಬಳಿ ಶುಕ್ರವಾರ ಸಂಜೆ ಕಾರ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಕಾರ್ ಚಾಲಕರು ಮತ್ತು ಪ್ರಯಾಣಿಕರು ಪಾರಾದ ಘಟನೆ ನಡೆದಿದೆ. ಅಂತರಸನಹಳ್ಳಿ ಎಪಿಎಂಸಿ ಮಾರುಕಟ್ಟೆಯ ಬಳಿ ಸ್ಕಾರ್ಪಿಯೋ ವಾಹನದ ಚಾಲಕ ಅಜಾಗರೂಕತೆಯ ಚಾಲನೆಯಿಂದಾಗಿ ಮುಂದೆ ಚಲಿಸುತ್ತಿದ್ದ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ಪರಿಣಾಮ ಬುಲೆರೋ ವಾಹನ , ಅದರ ಮುಂದೆ ಚಲಿಸುತ್ತಿದ್ದ ಇನ್ನೂ ನೊಂದಣಿಯಾಗದ ಹೊಸ ಮಾರುತಿ ಬಲೆನೊ ಕಾರ್ ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ಕೂಡಲೇ ಸಾರ್ವಜನಿಕರು ಧಾವಿಸಿ ವಾಹನಗಳನ್ನು ರಸ್ತೆ ಬದಿಗೆ ತಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಅಪಘಾತದಲ್ಲಿ ಸ್ಕಾರ್ಪಿಯೋ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ರೇಡಿಯೇಟರ್ ಮತ್ತು ಎಂಜಿನ್ ಸಂಪೂರ್ಣ ಹಾಳಾಗಿದೆ, ಹಾಗೆಯೇ ಬುಲೆರೋ ಹಾಗೂ ಮಾರುತಿ ಬಲೆನೊ ಕಾರ್ ನ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ತುರುವೇಕೆರೆ: ತಾಲ್ಲೂಕಿನ ಪಟ್ಟಣಕ್ಕೆ ಆಗಮಿಸಿದ್ದ ಶ್ರೀ ವಾಲ್ಮೀಕಿ ನಾಯಕ ಸಮಾಜದ ಸ್ವಾಮೀಗಳಾದ ಶ್ರೀ ಪ್ರಸನ್ನಾನಂದ ಸ್ವಾಮಿಯವರು 2022 ರ ಕ್ಯಾಲೆಂಡರ್ ಅನ್ನು ಬಿಡುಗಡೆ ಗೊಳಿಸಿದ್ದರು. ಪಟ್ಟಣದ ಕನ್ನಡ ಭವನದಲ್ಲಿ ನಡೆದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಪ್ರಸನ್ನಾನಂದ ಸ್ವಾಮಿಜಿಯವರು ಈ ಬಗ್ಗೆ ಮಾತನಾಡಿ ” ಕಳೆದೆರಡು ವರ್ಷಗಳಿಂದ ಜಗತ್ತನ್ನು ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ‘ನ ಭಯವನ್ನು ಬಿಟ್ಟು ಧೈರ್ಯದಿಂದ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿದರೆ ಮಾತ್ರ ಈ ಹೆಮ್ಮಾರಿಯನ್ನು ತಡೆಯಲು ಸಾಧ್ಯ ಎಂದು ಧೈರ್ಯ ತುಂಬಿ, 2021 ರ ಕಹಿಘಟನೆಗಳನ್ನು ಮರೆತು 2022ರ ವರ್ಷ ಇಡೀ ಮಾನವ ಜನಾಂಗಕ್ಕೆ ಶುಭವಾಗಲಿ ” ಎಂದು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ವಸಂತ್ ಕುಮಾರ್, ಕರಿಯಪ್ಪ, ಕಲ್ಪನಾ ಮುನಿರಾಜು, ಪಿ.ಪ್ರಕಾಶ್, ಆನಂದರಾಜು, ಸೋಮಶೇಖರಯ್ಯ, ಶೀಲಾ ಶಿವಪ್ಪ ನಾಯಕ, ಟಿ.ಜಿ.ಶಿವಕುಮಾರ್, ಗಂಗರಂಗಯ್ಯ, ಶಂಕರಯ್ಯ, ಕೃಷ್ಣಪ್ಪ, ಶಿವಣ್ಣ, ಮಂಜುನಾಥ್ ಹಾಗೂ ಸಮಾಜದ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ : ವೆಂಕಟೇಶ…
ಹಿರಿಯೂರು: ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಹೊಸ ವರ್ಷದ ಪ್ರಯುಕ್ತವಾಗಿ ಗ್ರಾಮಸ್ಥರಿಗೆ ಕ್ಯಾಲೆಂಡರ್ ಗಳನ್ನು ಹಂಚಲಾಗಿತ್ತು . ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ಮಸ್ಕಲ್ ಗ್ರಾಮದಲ್ಲಿನ ಮಸ್ಕಲ್ ಮಟ್ಟಿ ಹಾಗೂ ಮಸ್ಕಲ್ ಗ್ರಾಮದ ಲಂಬಾಣಿ ತಂಡದಲ್ಲಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಸಚಿವರಾಗಿದ್ದಂತಹ ಡಿ ಸುಧಾಕರ್ ರವರ ನೀಡಿರುವ 2022 ರ ಹೊಸ ಕ್ಯಾಲೆಂಡರ್ ನ್ನು ಕಾರ್ಯಕರ್ತರು ಹಂಚಿದರು. ಈ ಸಂದರ್ಭದಲ್ಲಿ ಮಸ್ಕಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದಂತಹ ಶ್ರೀನಿವಾಸ್ ಅವರು ಮತ್ತು ಉಪಾಧ್ಯಕ್ಷರಾದ ಅಶೋಕ್ ಅವರು ಹಾಗೂ ಇತರರು ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ವಾಹನಗಳ ಸಂಖ್ಯೆಯು ದಿನಕ್ಕಿಂತಲೂ ದಿನ ಹೆಚ್ವುತ್ತಿರುವ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯ ಅರಿವಿದ್ದರೂ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಗಳಾದ ಎನ್ ಹೆಚ್ ೦4 , ನಿಂದ ಟಿ.ಬಿ. ಸರ್ಕಲ್ ವರೆಗೂ ಹಾಗೂ ಚರ್ಚ್ ರಸ್ತೆ , ಹುಳಿಯಾರ್ ರಸ್ತೆಗಳು , ಅರುಣ್ ಟೆಕ್ಸ್ ಟೈಲ್ ನಿಂದ ವಿ ವಿ ಪುರ ಹೋಗುವ ರಸ್ತೆಗಳಲ್ಲಿ ರಸ್ತೆಯ ಗುಂಡಿಗಳು ಪ್ರತಿದಿನ ಬೆಳಿಗ್ಗೆ ಕೆಲಸ , ಕಛೇರಿಗಳಿಗೆ ಹೋಗುವಂತಹ ಜನಸಾಮನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ. ಈ ರಸ್ತೆಯು ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಯ ಮೂಲಕವೇ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಗಳು , ದುರಾಸ್ತಿಗೊಂಡು ಸುಮಾರು ವರ್ಷಗಳಾದರೂ ಸರ್ಕಾರ ಇದರ ಬಗ್ಗೆ ಸ್ವಲ್ಪವೂ ಸಹ ತಲೆಕೆಡಿಸಿಕೊಂಡಿಲ್ಲ. ಇದರಿಂದಾಗಿ ಹಿರಿಯೂರು ತಾಲ್ಲೂಕಿನ ಸಾರ್ವಜನಿಕರು …
ಆದಾಯ ತೆರಿಗೆ ಇಲಾಖೆಯು ತೆರಿಗೆಗಳ್ಳತನದ ತನಿಖೆಯ ಭಾಗವಾಗಿ ಉತ್ತರ ಪ್ರದೇಶದ ಸುಗಂಧ ವ್ಯಾಪಾರಿಗಳು ಮತ್ತು ಇತರ ಕೆಲವರ ವಹಿವಾಟಿನ ಆವರಣಗಳ ಮೇಲೆ ಇಂದು ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಾನ್ಪುರ, ಕನೌಜ್, ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಕನೌಜ್ ನಲ್ಲಿ ತನ್ನ ಪಕ್ಷದ ಎಂಎಲ್ ಸಿ ಪುಷ್ಪರಾಜ್ ಅಲಿಯಾಸ್ ಸಂಪಿ ಜೈನ್ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷವು ತನ್ನ ಅಕೃತ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ. ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪತ್ರಿಕಾಗೋಷ್ಠಿ ಕರೆದ ಬೆನ್ನಲ್ಲೇ ಬಿಜೆಪಿ ಸರ್ಕಾರ ಈ ದಾಳಿಗಳನ್ನು ನಡೆಸುತ್ತಿದೆ ಎಂದು ಎಸ್ ಪಿ ಆರೋಪಿಸಿದೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಮುನ್ನ ಯಾದವ ಅವರು ಸಮಾಜವಾದಿ ಇತ್ರ ಎಂಬ ಹೆಸರಿನ ಸುಗಂಧ ದ್ರವ್ಯವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ಇದನ್ನು ಜೈನ್ ಅವರು ತಯಾರಿಸಿದ್ದರು…
ಶುಕ್ರವಾರದಂದು ದೇಶದಲ್ಲಿ ಓಮಿಕ್ರಾನ್ ರೋಗಿಗಳ ಸಂಖ್ಯೆ 1,000 ಗಡಿ ದಾಟಿದೆ. ಕೇವಲ 29 ದಿನಗಳಲ್ಲಿ, 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ರೋಗಿಗಳ ಒಟ್ಟು ಸಂಖ್ಯೆ 1315 ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರದ ಪ್ರಕರಣಗಳು 450 ಕ್ಕೆ ಏರಿಕೆಯಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು. ಗುರುವಾರ ಒಂದೇ ದಿನದಲ್ಲಿ ದಾಖಲೆಯ 198 ರೋಗಿಗಳು ಪತ್ತೆಯಾಗಿದ್ದಾರೆ. Omicron ನಿಂದ ಮೊದಲ ಸಾವು ಮಹಾರಾಷ್ಟ್ರದಲ್ಲಿಯೇ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ನಿಂದ ದೇಶದಲ್ಲಿ ಮೊದಲ ಸಾವು ದಾಖಲಾಗಿದೆ. 52 ವರ್ಷದ ಓಮಿಕ್ರಾನ್ ಸೋಂಕಿತ ವ್ಯಕ್ತಿ ಹೃದಯಾಘಾತದಿಂದ ಡಿಸೆಂಬರ್ 28 ರಂದು ಸಾವನ್ನಪ್ಪಿದ್ದಾನೆ.ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ನೈಜೀರಿಯಾದಿಂದ ಮರಳಿದ ವ್ಯಕ್ತಿ ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್‌ನ ಯಶವಂತ್ ಚವಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಹಾರಾಷ್ಟ್ರ ರಾಜ್ಯ ಸರ್ಕಾರ ಇದನ್ನು ಕೋವಿಡ್ ಅಲ್ಲದ ಕಾರಣಗಳಿಂದ ಸಾವು ಎಂದು ಪರಿಗಣಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಮಾದರಿಗಳ…
ಅಲೌಕಿಕ ವಿಚಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಹದಿನೇಳು ವರ್ಷದ ಹುಡುಗಿಯೊಬ್ಬಳು 2 ತಿಂಗಳಿನಿಂದ ಕಾಣೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಮನಿಸಂ ಎಂಬ ಪುರಾತನ ಧಾರ್ಮಿಕ ಆಚಾರದ ಬಗ್ಗೆ ತಿಳುದುಕೊಳ್ಳುವು ಕುತೂಹಲದಿಂದ ಕಾಣೆಯಾಗಿರಬಹುದು ಎಂದು ಪೊಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಮನಿಸಂ ಎಂಬುದೊಂದು ಧಾರ್ಮಿಕ ಆಚರಣೆಯಾಗಿದ್ದು ಇದನ್ನ ಅಭ್ಯಾಸ ಮಾಡಿದರು ಆತ್ಮಗಳೊಂದಿಗೆ ಸಂಹವಹನ ಮಾಡುತ್ತಾರೆ. ಆತ್ಮಗಳ ಪ್ರಪಂಚದ ಮೂಲಕ ಆಧ್ಯಾತ್ಮಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಪ್ರಾಚೀನ ಅಭ್ಯಾಸವಾಗಿದೆ. ಬೆಂಗಳೂರಿನ ಅನುಷ್ಕಾ ಎಂಬ ಯುವತಿ ಅಕ್ಟೋಬರ್ 31 ರಂದು ಎರಡು ಜೊತೆ ಬಟ್ಟೆ ಮತ್ತು 2,500 ರೂ.ನಗದು ಸಮೇತ ತನ್ನ ಮನೆಯಿಂದ ಹೊರಟಿರುವುದಾಗಿ ಪೋಷಕರು ಹೇಳಿದ್ದಾರೆ. ಶಾಮನಿಸಂ ತಂತ್ರದ ಬಗ್ಗೆ ಆನ್ ಲೈನ್ ನಲ್ಲಿ ಆಗಾಗ ಓದುತ್ತಿದ್ದಳು ಎಂದು ಪೋಷಕರು ತಿಳಿಸಿದ್ದಾರೆ. ಅನುಷ್ಕಾ 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಶಾಮನಿಸಂನತ್ತ ಆಕರ್ಷಿತರಾದರು. ಆಕೆಯ ಪೋಷಕರು ಆಧ್ಯಾತ್ಮಿಕ ಜೀವನ ಮತ್ತು ಸೈಕೆಡೆಲಿಕ್ ಶಿಕ್ಷಣ ತಜ್ಞರಾಗಿದ್ದು ಇದರಿಂದ ಮಗಳು ಪ್ರಭಾವಿತರಾಗಿದ್ದಳು. ಶಾಮನಿಸಂ ಅನ್ನು ಅಭ್ಯಾಸ ಮಾಡುವ ಬಯಕೆಯ ಬಗ್ಗೆ…
ನವದೆಹಲಿ: ಶತ ಕೋಟ್ಯಾಧೀಶ ಮುಖೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟಿಷ್ ಬ್ಯಾಟರಿ ತಯಾರಿಕಾ ಸಂಸ್ಥೆ ಫರಾಡಿಯಾನ್ ಲಿಮಿಟೆಡ್ ನ್ನು 100 ದಶಲಕ್ಷ ಜಿಬಿಪಿ ಔದ್ಯಮಿಕಮೌಲ್ಯಕ್ಕೆ ಸ್ವಾಧೀನಪಡಿಸಿಕೊಂಡಿದೆ. ತೈಲದಿಂದ-ಚಿಲ್ಲರೆ ವಹಿವಾಟಿನವರೆಗೆ ಕಂಪನಿ ಎನಿಸಿರುವ ಔದ್ಯಮಿಕ ದೈತ್ಯ ಪರಿಶುದ್ಧ ಇಂಧನ ಖಾತೆಗೋಸ್ಕರ ಅತ್ಯಾಧುನಿಕ ತಂತ್ರಜ್ಞಾನ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರೆಸಿದೆ. ದೇಶದ ಅತ್ಯಂತ ಮೌಲಿಕ ಕಂಪನಿಯ ಒಂದು ಘಟಕವಾಗಿರುವ ರಿಯಲನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ 100 ದಶಲಕ್ಷ ಜಿಬಿಪಿ ಮೌಲ್ಯಕ್ಕೆ ಫರಾಡಿಯನ್ ಕಂಪನಿಯ ಶೇ.100ರಷ್ಟು ಷೇರುಗಳನ್ನು ಖರೀದಿಸಿ ಮತ್ತು ವಾಣಿಜ್ಯಕ ಪಾತ್ರತ್ವದ ಪ್ರವರ್ಧನೆಗಾಗಿ ಹೆಚ್ಚುವರಿ 25 ದಶಲಕ್ಷ ಜಿಬಿಪಿಯ ಬೆಳವಣಿಗೆ ಬಂಡವಾಳವನ್ನು ಹೂಡಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬ್ರಿಟನಿನ್ನ ಷೆಫೀಲ್ಡ್ ಮತ್ತು ಆಕ್ಸ್ ಫರ್ಡ್ ಮೂಲದ ಫರಾಡಿಯಾನ್ ಕಂಪೆನಿ ಸೋಡಿಯಂ ಅಯಾನ್, ಬ್ಯಾಟರಿ ತಂತ್ರಜ್ಞಾನದ ಪೇಟೆಂಟ್ ಪಡೆದಿದೆ. ಇದು ಜಗತ್ತಿನ ಮುಂಚೂಣಿ ಬ್ಯಾಟರಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದೆ.ಫರಾಡಿಯಾನ್, ಸರ್ವೋತ್ಕøಷ್ಟ, ಕಾರ್ಯತಂತ್ರಾತ್ಮಕ, ವಿಶಾಲ ವ್ಯಾಪ್ತಿಯ, ವಿಸ್ತೃತ ಸೇಡಿಯಂ-ಅಯಾನ್ ಬ್ಯಾಟರಿಗಳ…