ಹೊಸ ವರ್ಷದ ಹೊಸ್ತಿಲಿನಲ್ಲಿರುವ ನಮಗೆ ಹಳೆಯ ವರ್ಷದ ಹಾಗು ಹೋಗುಗಳ ನೆನಪು ಯಾವಾಗಲೂ ಇರಬೇಕಾಗುತ್ತದೆ. ವಿಜಯಪುರ ಜಿಲ್ಲೆಗೆ 2021 ಖುಷಿಗಿಂತ ಕಹಿಯೇ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ಮಹಾಮಾರಿ ಕೊರೊನಾ, ಅಕಾಲಿಕ ಮಳೆ, ಪ್ರಕೃತಿ ಸೇರಿದಂತೆ ಹತ್ತು ಹಲವಾರು ಸಂಕಷ್ಟಗಳು ಜಿಲ್ಲೆಗೆ ಎದುರಾದವು. ಮೊದಲು ಅರ್ಧ ವರ್ಷ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಜೀವಗಳ ದೇಹ ತ್ಯಾಗ ಮಾಡಿದವು. ಆಕ್ಸಿಜನ್ ಇಲ್ಲದೇ ಎಷ್ಟೋ ಜೀವ ಪ್ರಾಣ ತ್ಯಾಗ ಮಾಡಿದವು. ಕೆಲ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೇ ಸಾಕಷ್ಟು ಜನ ಜೀವ ಕಳೆದುಕೊಳ್ಳಬೇಕಾಯಿತು.
ಭೂಕಂಪನ ಭಯ: ವರ್ಷದ ಕಡೆಯ ಮೂರು ತಿಂಗಳು ಜಿಲ್ಲೆಯ ಮನಗೂಳಿ, ಕೊಲ್ಹಾರ್ , ಮುಳವಾಡ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಯಿತು. ಸೆಪ್ಟೆಂಬರ್ ದಿಂದ ಅಕ್ಟೋಬರ್ ತಿಂಗಳವರೆಗೆ 14ಬಾರಿ ಭೂಮಿ ಕಂಪಿಸಿತ್ತು.ನಂತರ ತಜ್ಞರ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಅಕಾಲಿಕ ಮಳೆ: ಸೆಪ್ಟೆಂಬರ್ ಮೊದಲು ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣ ಬೆಳೆ ಹಾನಿಗೊಳಗಾಯಿತು. 12.56 ಸೆಂಟರ್ ಮೀಟರ್ ಮಳೆಯಾದ ಕಾರಣ ಕೆರೆ ಕಟ್ಟೆಗಳು ಭರ್ತಿಯಾದವು. ನಂತರ ಡಿಸೆಂಬರ್ ಮೊದಲು ವಾರ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗೆ ಗೋನಿ ರೋಗ ಹಾಗೂ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆದ ತೊಗರಿ ಬೆಳೆಗೆ ಕೊಳೆತ ಕಂಡು ಬಂದ ಕಾರಣ ಅನ್ನದಾತನ ಆಕಾಶದ ಗೋಪುರವೇ ಕಳಚಿ ಹೋಯಿತು.
ಸಿಡಿ ಪ್ರಕರಣ ಸದ್ದು: ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಲೈಂಗಿಕ ರಾಸಲೀಲೆ ಪ್ರಕರಣ ಜಿಲ್ಲೆಗೂ ಅಂಟಿಕೊಂಡಿತ್ತು. ಸಿಡಿಯಲ್ಲಿದ್ದ ಸಂತ್ರಸ್ತೆ ಜಿಲ್ಲೆಯ ನಿಡಗುಂದಿಯವಳು ಎಂದು ಗೊತ್ತಾದ ಕ್ಷಣ ಆಕೆಯ ಮನೆಗೂ ಬೀಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.
ಘಟಿಕೋತ್ಸವ: ರಾಜ್ಯದ ಮೊದಲು ಮಹಿಳಾ ವಿಶ್ವವಿದ್ಯಾಲಯ ಆಗಿರುವ ಅಕ್ಕಮಹಾದೇವಿ ಮವಿವಿ ಘಟಿಕೋತ್ಸವ ನವೆಂಬರ್ 9ರಂದು ನಡೆಯಿತು. ವರ್ಚುವಲ್ ಮೂಲಕ ರಾಜ್ಯಪಾಲರು ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಗಣ್ಯರ ಅಗಲಿಕೆ: ಮಾಜಿ ಸಚಿವ ಎಂ.ಸಿ.ಮನಗೂಳಿ ವಯೋ ಸಹಜ ಕಾಯಿಲೆಯಿಂದ ನಿಧನರಾದರು. ಮಾಜಿ ಶಾಸಕ ಆರ್. ಆರ್.ಕಲ್ಲೂರ, ಮಾಜಿ ಶಾಸಕ ಎನ್.ಎಸ್. ಖೇಡ್ ಸಹ ನಿಧನರಾದರು.
ಹಾಸ್ಯನಟನ ಮೇಲೆ ಹಲ್ಲೆ: ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಅವರ ಸಂಸಾರಿಕ ಜೀವನದಲ್ಲಿ ಎದ್ದ ಬಿರುಗಾಳಿಯಿಂದ ಅವರ ಸಂಬಂಧಿಕರಿಂದಲೇ ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಬೇಕಾಯಿತು.
ಯೋಗಾಪುರ ಕಾಲೋನಿಯ ಅಕ್ಕನ ಮಗನ ಮಡದಿಗೆ ವಿಷ ಕುಡಿಸಿ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.
ಉಪಚುನಾವಣೆ: ಸಿಂದಗಿ ವಿಧಾನಸಭೆ ಮತಕ್ಷೇತ್ರದ ಶಾಸಕರಾಗಿದ್ದ ಎಂ.ಸಿ.ಮನಗೂಳಿ ನಿಧನಾಂತರ ನಡೆದ ಉಪಚುನಾವಣೆ ರಾಜಕೀಯ ಮಜಲನನ್ನು ಬದಲಿಸಿತ್ತು. ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿ ಅಲ್ಲಿಂದ ಸ್ಪರ್ಧೆಗೆ ಇಳಿದರೆ. ಎರಡು ಬಾರಿ ಕ್ಷೇತ್ರದ ಶಾಸಕರಾಗಿದ್ದ ರಮೇಶ ಭೂಸನೂರ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಯಾಗಿ ಕಣದಲ್ಲಿ ಉಳಿದು ಜಯ ಸಾಧಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy