ನವದೆಹಲಿ: ಶತ ಕೋಟ್ಯಾಧೀಶ ಮುಖೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟಿಷ್ ಬ್ಯಾಟರಿ ತಯಾರಿಕಾ ಸಂಸ್ಥೆ ಫರಾಡಿಯಾನ್ ಲಿಮಿಟೆಡ್ ನ್ನು 100 ದಶಲಕ್ಷ ಜಿಬಿಪಿ ಔದ್ಯಮಿಕಮೌಲ್ಯಕ್ಕೆ ಸ್ವಾಧೀನಪಡಿಸಿಕೊಂಡಿದೆ.
ತೈಲದಿಂದ-ಚಿಲ್ಲರೆ ವಹಿವಾಟಿನವರೆಗೆ ಕಂಪನಿ ಎನಿಸಿರುವ ಔದ್ಯಮಿಕ ದೈತ್ಯ ಪರಿಶುದ್ಧ ಇಂಧನ ಖಾತೆಗೋಸ್ಕರ ಅತ್ಯಾಧುನಿಕ ತಂತ್ರಜ್ಞಾನ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರೆಸಿದೆ. ದೇಶದ ಅತ್ಯಂತ ಮೌಲಿಕ ಕಂಪನಿಯ ಒಂದು ಘಟಕವಾಗಿರುವ ರಿಯಲನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ 100 ದಶಲಕ್ಷ ಜಿಬಿಪಿ ಮೌಲ್ಯಕ್ಕೆ ಫರಾಡಿಯನ್ ಕಂಪನಿಯ ಶೇ.100ರಷ್ಟು ಷೇರುಗಳನ್ನು ಖರೀದಿಸಿ ಮತ್ತು ವಾಣಿಜ್ಯಕ ಪಾತ್ರತ್ವದ ಪ್ರವರ್ಧನೆಗಾಗಿ ಹೆಚ್ಚುವರಿ 25 ದಶಲಕ್ಷ ಜಿಬಿಪಿಯ ಬೆಳವಣಿಗೆ ಬಂಡವಾಳವನ್ನು ಹೂಡಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬ್ರಿಟನಿನ್ನ ಷೆಫೀಲ್ಡ್ ಮತ್ತು ಆಕ್ಸ್ ಫರ್ಡ್ ಮೂಲದ ಫರಾಡಿಯಾನ್ ಕಂಪೆನಿ ಸೋಡಿಯಂ ಅಯಾನ್, ಬ್ಯಾಟರಿ ತಂತ್ರಜ್ಞಾನದ ಪೇಟೆಂಟ್ ಪಡೆದಿದೆ. ಇದು ಜಗತ್ತಿನ ಮುಂಚೂಣಿ ಬ್ಯಾಟರಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದೆ.ಫರಾಡಿಯಾನ್, ಸರ್ವೋತ್ಕøಷ್ಟ, ಕಾರ್ಯತಂತ್ರಾತ್ಮಕ, ವಿಶಾಲ ವ್ಯಾಪ್ತಿಯ, ವಿಸ್ತೃತ ಸೇಡಿಯಂ-ಅಯಾನ್ ಬ್ಯಾಟರಿಗಳ ತಯಾರಿಕೆಯಲ್ಲಿ ಸ್ಪರ್ಧಾತ್ಮಕ ಗುಣಮಟ್ಟ ಹೊಂದಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy