Author: admin

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದೂರು ದಾಖಲಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರುತ್ತದೆ ಎಂದು ಹೇಳಿದರು. ಶಿವಮೊಗ್ಗದಲ್ಲಿ ಇಂದು ಮಾತಾನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಅನಗತ್ಯವಾಗಿ ಆರೋಪ ಮಾಡುವುದು ಸಾಮಾನ್ಯವಾಗಿದೆ. ಕಿಕ್ ಬ್ಯಾಕ್ ಪಡೆದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ. ತನಿಖೆ ನಂತರ ಅವರದಾಗಲಿ ನಮ್ಮದಾಗಲಿ ಗೊತ್ತಾಗಲಿದೆ ಎಂದರು. ಭಾರತ ಜೋಡೊ ಯಾತ್ರೆ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ: ಕಳೆದ ಐದು ವರ್ಷಗಳಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನಾಧರಿಸಿ ನ್ಯಾಕ್ ಮಾನ್ಯತೆಯನ್ನು ನವೀಕರಿಸಲು ನ್ಯಾಕ್ ಮಾನ್ಯತಾ ತಂಡ ಕಾಲೇಜಿಗೆ ಭೇಟಿ ನೀಡಿ, ಶಿಕ್ಷಣಕ್ಕೆ ಪೂರಕವಾದ ಎಲ್ಲ ಅಂಶಗಳು, ಸೌಲಭ್ಯಗಳನ್ನು ಪರಿಶೀಲಿಸಿದ್ದು, ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2.94 ಅಂಕಗಳಿಸಿ “ಬಿ ಪ್ಲಸ್ ಪ್ಲಸ್” (++) ಶ್ರೇಣಿಯನ್ನು ನೀಡಿದ್ದು, ಈ ಶ್ರೇಣಿ ಪಡೆದ ಜಿಲ್ಲೆಯ ಮತ್ತು ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಾಗಿದೆ ಎಂದು ಪ್ರಾಂಶುಪಾಲರಾದ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ತಿಳಿಸಿದ್ದಾರೆ.  ನ್ಯಾಕ್ ಮಾನ್ಯತೆಯ ಪ್ರಮಾಣ ಪತ್ರ ಮತ್ತು ಗ್ರೇಡ್ ಪ್ರಮಾಣಪತ್ರವನ್ನು ಸ್ವೀಕರಿಸಿದ ಪ್ರಯುಕ್ತ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಧ್ಯಾಪಕರನ್ನುದ್ದೇಶಿಸಿ ಮಾತನಾಡಿ, ನ್ಯಾಕ್ ಪೀರ್ ಟೀಮ್ ಅಕ್ಟೋಬರ್ 28 ಮತ್ತು 29 ರಂದು ಭೇಟಿ ನೀಡಿತ್ತು. ಆನ್ಲೈನ್ ಮೂಲಕ ಸಲ್ಲಿಕೆಯಾದ ದಾಖಲೆಗಳನ್ನು ಪರಿಶೀಲಿಸಿ, ಶಾಸಕರು ಮತ್ತು ಕಾಲೇಜು ಅಭಿವೃದ್ದಿ ಸಮಿತಿ ಸಭೆ ನಡೆಸಿ, ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಕಛೇರಿಯ ಎಲ್ಲ ವಿವರಗಳನ್ನು ಪರಿಶೀಲಿಸಿ ಪ್ರಗತಿಯನ್ನು…

Read More

ಬೆಂಗಳೂರು/ತುಮಕೂರು: ಮಾಜಿ ಸಂಸದ ಎಸ್.ಪಿ.ಮುದ್ದ ಹನುಮಗೌಡ,ಹಿರಿಯ ನಟ ಶಶಿಕುಮಾರ್,ಮಾಜಿ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಬೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಅಶ್ವಥ್ ನಾರಾಯಣ್, ರಾಜ್ಯಸಭಾ ಸದಸ್ಯ ಜಗ್ಗೇಶ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಿ.ಪಿ.ಯೋಗೇಶ್ವರ್, ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ, ಶಾಸಕ ಮಸಾಲೆ ಜಯರಾಂ ಇನ್ನು ಮುಂತಾದ ರಾಜ್ಯಮಟ್ಟದ ಮುಖಂಡರುಗಳ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ತುಮಕೂರು ಜಿಲ್ಲೆಯ ಬಲಿಷ್ಟ ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಹಾಗೂ ನಿವೃತ್ತ ನ್ಯಾಯಮೂರ್ತಿಗಳಾದ ಎಸ್ ಪಿ ಮುದ್ದಹನುಮೇಗೌಡ, ಲೋಕೋಪಯೋಗಿ ಇಲಾಖೆಯ ನಿವೃತ್ತ ಐ ಎ ಎಸ್ ಅಧಿಕಾರಿ ಬಿ.ಹೆಚ್.ಅನಿಲ್ ಕುಮಾರ್, ಚಲನ ಚಿತ್ರ ನಟ ಹಾಗೂ ಮಾಜಿ ಸಂಸದರಾದ ಶಶಿಕುಮಾರ್, ಮೈಸೂರಿನ ರಮೇಶ್ ಮುನಿಯಪ್ಪ, ತೆಂಗು ಮತ್ತು ನಾರು ಮಂಡಳಿಯ ಮಾಜಿ ಅಧ್ಯಕ್ಷ ವೆಂಕಟಾಚಲಯ್ಯ, ರೈತ ಮುಖಂಡ ಸಂಜೀವ ರೆಡ್ಡಿ, ದಲಿತ ಮುಖಂಡರಾದ ದಾಡಿ ವೆಂಕಟೇಶ್ ಮೂರ್ತಿ, ಕಲ್ಬುರ್ಗಿ ಜಿಲ್ಲೆಯ ಹನುಮಂತ ರಾವ್ ಬಿಜೆಪಿಗೆ…

Read More

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ತಯಾರಿ ಜೋರಾಗಿದೆ. ಚುನಾವಣೆಗೆ ಸ್ಪರ್ಧಿಸಲು ಬಯಸುವವರು ಅರ್ಜಿ ಸಲ್ಲಿಸಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ  ಈ ಸಂಬಂಧ ಮಾತನಾಡಿದ ಡಿ.ಕೆ .ಶಿವಕುಮಾರ್ , ಮುಂದಿನ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ, ಚುನಾವಣೆಗೆ ಸ್ಪರ್ಧಿಸಲು ಬಯಸುವವರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ 5 ಸಾವಿರ ಕೊಟ್ಟು ಅರ್ಜಿ ಪಡೆಯಬಹುದು, ಅರ್ಜಿ ಜೊತೆ 2 ಲಕ್ಷ ಡಿಡಿ ಶುಲ್ಕ ನೀಡಬೇಕು. ಎಸ್ ಸಿ ಹಾಗೂ ಎಸ್ ಟಿ ಗೆ 1 ಲಕ್ಷ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಯಾರಿಗೆ ಟಿಕೆಟ್ ಬೇಕು ಅವರು ಅರ್ಜಿ ಸಲ್ಲಿಸಬಹುದು, ವಲಸೆ ಹೋದವರಿಗೆ ಮುಕ್ತ ಆಹ್ವಾನವಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಯಾರು ಕಾಂಗ್ರೆಸ್ ಟಿಕೆಟ್ ಬಯಸುತ್ತಾರೋ ಅವರು ಅರ್ಜಿ ಹಾಕಬಹುದು. ನಾನು ಸ್ಪರ್ಧಿಸಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಬೇಕು. ಕಾಂಗ್ರೆಸ್ ಟಿಕೆಟ್ ಗೆಯಾರು ಬೇಕಾದರೂ ಅರ್ಜಿ ಹಾಕಬಹುದು. ವಲಸೆ ಹೋದವರಿಗೂ ಮುಕ್ತ ಆಹ್ವಾನ ಎಂದು…

Read More

ಹುಬ್ಬಳ್ಳಿ : ಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಮೂವರು ಆರೋಪಿಗಳನ್ನು ಹುಬ್ಬಳ್ಳಿಯ ಕಸಬಾಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಮ್​, ಮಲಿಕ್, ಮುಬಾರಕ್​ ಬಂಧಿತ ಆರೋಪಿಗಳು. ಬುಕ್ ಫ್ಯಾಕ್ಟರಿ ಕೆಲಸ ಮಾಡ್ತಿದ್ದ 36 ವರ್ಷದ ಮಹಿಳೆ ಮಧ್ಯಾಹ್ನ ಊಟಕ್ಕೆ ಬಂದು ವಾಪಸ್ ಹೋಗುತ್ತಿದ್ದರು. ಈ ವೇಳೆ ಆರೋಪಿಗಳು ಮಹಿಳೆಗೆ ಚಾಕು ತೋರಿಸಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಕಿರುಚಾಡಿದಾಗ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದವರು ಓಡಿ ಬರುತ್ತಲೇ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಪರಾರಿಯಾದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ವಿಜಯನಗರ: ಮುಳುಗುತ್ತಿದ್ದ ಸಹೋದರ ರಕ್ಷಣೆ ಮಾಡಲು ಹೋಗಿ ತಮ್ಮ ಸೇರಿ ಮೂವರು ಅಕ್ಕಂದಿರು ಕೂಡ ಸಾವನ್ನಪ್ಪಿರುವ ಘಟನೆ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದಲ್ಲಿ ನಡೆದಿದೆ. ಒಂದೇ ಕುಟುಂಬದ ಅಭಿ (13), ಅಶ್ವಿನಿ(14), ಕಾವೇರಿ(18), ಅಪೂರ್ವ(18) ಮೃತಪಟ್ಟಿದ್ದಾರೆ. ತಾಂಡಾದ ಅಭಿ ಹೊಂಡದಲ್ಲಿ ಮುಳುಗುತ್ತಿದ್ದನು, ಇದನ್ನು ಕಂಡ ಅಕ್ಕಂದಿರು ಒಬ್ಬರಾದಂತೆ ಒಬ್ಬರು ಹೋಗಿ ರಕ್ಷಣೆಗೆ ತೆರಳಿ ನೀರುಪಾಲಾಗಿದ್ದಾರೆ. ಮೂವರ ಶವ ಪತ್ತೆಯಾಗಿದ್ದು ಅಪೂರ್ವಾ ಶವಕ್ಕಾಗಿ ಹುಡುಕಾಟ ನಡೆದಿದೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮಧುಗಿರಿ: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ, ತಾಲೂಕು ದಂಡಾಧಿಕಾರಿ ಸುರೇಶ್ ಆಚಾರ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಹಲವು ಗಣ್ಯರು ಪಟ್ಟಣದ ಪಾವಗಡ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನಂತರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಾಲ್ನಡಿಗೆ ಮೆರೆವಣಿಗೆ ಮುಖಾಂತರ ಸಾಗಿದರು. ಕ್ರೀಡಾಂಗಣದಲ್ಲಿ ಮೊದಲಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಉಪವಿಭಾಗಾಧಿಕಾರಿಗಳು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ನಾಡಗೀತೆ ಹಾಡುವ ಮೂಲಕ ಶಾಸಕರು ನಾಡ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಪವಿಭಾಗ ಅಧಿಕಾರಿ ಸೋಮಪ್ಪ ಕಡಕೋಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ, ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ ಎಂದು ತನ್ನ ತಾಯಿನಾಡಿನ ಬಗ್ಗೆ ಇರುವ ಪ್ರೀತಿಯನ್ನು ಮಹಾಕವಿ ಪಂಪ ವ್ಯಕ್ತಪಡಿಸಿರುತ್ತಾರೆ ಎಂದರು. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಬದುಕು…

Read More

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಸಾಧನೆ ಪ್ರಗತಿಯನ್ನ ಕೊಂಡಾಡಿದರು. ಸಮಾವೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಕನ್ನಡಿಗರು ಕನ್ನಡ ಭಾಷೆಯನ್ನೇ ಜೀವಾಳವಾಗಿಸಿಕೊಂಡಿದ್ದಾರೆ. ಇದು ಶ್ರೀಮಂತ ಸಂಸ್ಕೃತಿ ಹೊಂದಿರುವ ನಾಡು. ಕರ್ನಾಟಕದ ಮಣ್ಣು ಎಲ್ಲದಕ್ಕಿಂತ ಸುಂದರ. ಪ್ರತಿಭೆ ತಂತ್ರಜ್ಞಾನದ ಬ್ರಾಂಡ್ ಹೊಂದಿರುವ ಬೆಂಗಳೂರು. ಮೃದು ಭಾಷೆ ಕನ್ನಡ. ಕರ್ನಾಟಕ ಅಪಾರ ಪ್ರಾಕೃತಿಕ ಸಂಪತ್ತು ಹೊಂದಿರುವ ರಾಜ್ಯ. ಕರ್ನಾಟಕದಲ್ಲಿ ತಂತ್ರಜ್ಞಾನದ ಜೊತೆ ಸಂಸ್ಕೃತಿಯೂ ಇದೆ. ಕರ್ನಾಟಕದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಳವಾಗುತ್ತಿದೆ. ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಸಾಕಷ್ಟು ಮುಂಚೂಣಿಯಲ್ಲಿದೆ ಎಂದು ನುಡಿದರು. ಭಾರತದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ಅಪಾರ. ಕರ್ನಾಟಕ ಇಡೀ ಜಗತ್ತನ್ನೇ ಸೆಳೆದ ರಾಜ್ಯ. ಕರ್ನಾಟಕ ಎಲ್ಲದರಲ್ಲೂ ಮುನ್ನಡೆಯುತ್ತಿದೆ. ಹೂಡಿಕೆಯಿಂದಾಗಿ ಉದ್ಯೋಗ ಸೃಷ್ಠಿಯಾಗುತ್ತದೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಶಕ್ತಿ ಇದೆ. ಕೇಂದ್ರ ರಾಜ್ಯದಲ್ಲಿ ಒಂದೇ ಪಕ್ಷ ಇರುವುದರಿಂದ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು. ಹಾಗೆಯೇ ಭಾರತದ ಅರ್ಥ ವ್ಯವಸ್ಥೆ…

Read More

ಬೆಂಗಳೂರಿನಲ್ಲಿ ಸುಮಾರು 2 ಸಾವಿರ ಮೆಟ್ರೊ ಪ್ರಯಾಣಿಕರು ನವೆಂಬರ್ 1 ರಂದು ನಮ್ಮ ಮೆಟ್ರೊ ಪರಿಚಯಿಸಿರುವ ನಮ್ಮ ಮೆಟ್ರೊ ಆ್ಯಪ್ ಹಾಗೂ ವಾಟ್ಸ್ ಆ್ಯಪ್ ಆ್ಯಪ್ ಆಧಾರಿತ ಟಿಕೆಟ್ ವ್ಯವಸ್ಥೆ ಮೂಲಕ ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸಿದ್ದಾರೆ. ಈಗ ನಮ್ಮ ಮೆಟ್ರೊ ಪ್ರಯಾಣಿಕರು ನಮ್ಮ ಮೆಟ್ರೊ ಆ್ಯಪ್‌ಗೆ ಲಾಗ್ ಆನ್ ಆಗಿ, ಅಥವಾ ವಾಟ್ಸಪ್ ನ ಚಾಟ್‌ಬಾಟ್ ಸಂಖ್ಯೆ (೮೧೦ ೫೫೫ ೬೬ ೭೭) ಮೂಲಕ ಟಿಕೆಟ್‌ ಗಳನ್ನು ಖರೀದಿಸಬಹುದು. ಈ ಆ್ಯಪ್‌ ಗಳ ಮೂಲಕವೇ ಹಣ ಪಾವತಿಸಿ, ಜೊತೆಗೆ ಟಿಕೆಟ್ ದರದ ಮೇಲೆ ಶೇ.5ರಷ್ಟು ರಿಯಾಯಿತಿಯನ್ನೂ ಪಡೆದುಕೊಳ್ಳಬಹುದಾಗಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ನ ಪ್ರಕಾರ, ಮಂಗಳವಾರದಂದು ರಾತ್ರಿ ೮.೪೫ರವರೆಗೆ ನಮ್ಮ ಮೆಟ್ರೊ ಆ್ಯಪ್ ಹಾಗೂ ವಾಟ್ಸ್ ಆ್ಯಪ್ ಮೂಲಕ ಸುಮಾರು ೧,೬೬೯ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ ಗಳನ್ನು ಖರೀದಿಸಿದ್ದರು ಎಂದು ಮಾಹಿತಿ ನೀಡಿದೆ. ಬೆಳಗಿನ ಸಮಯದಲ್ಲಿ ಸುಮಾರು ೧೪,೪೦೦ ಜನರು ವಾಟ್ಸ್ ಆ್ಯಪ್ ಚಾಟ್‌ ಬಾಟ್ ಅನ್ನು…

Read More

ವಿದ್ಯುತ್ ತಂತಿ ಮೇಲಿದ್ದ ವಸ್ತು ತೆಗೆಯಲು ಹೋದಾಗ ಶಾಕ್ ಹೊಡೆದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಉದಯಗಿರಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಲ್ಲಪ್ಪ ಮೃತಪಟ್ಟ ವ್ಯಕ್ತಿ. ಮನೆ ಮುಂದೆ ಹಾದುಹೋಗಿದ್ದ ವಿದ್ಯುತ್ ತಂತಿ ಮೇಲೆ ಬಿದ್ದು ವಸ್ತು ತೆಗೆಯಲು ಮಲ್ಲಪ್ಪ ಮುಂದಾಗಿದ್ದಾರೆ. ನೆಲ ಒರೆಸುವ ಮಾಪ್ ಬಳಸಿ ತಂತಿ ಮೇಲಿದ್ದ ವಸ್ತು ತೆಗೆಯಲು ಮುಂದಾಗಿದ್ದು ಈ ವೇಳೆ ವಿದ್ಯುತ್ ಶಾಕ್ ಹೊಡೆದು ಮಲ್ಲಪ್ಪ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More