Subscribe to Updates
Get the latest creative news from FooBar about art, design and business.
- ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು
- ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ
- ಕೂಲಿ ಕೊಡದೇ ಗಾರ್ಮೆಂಟ್ಸ್ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
- ಸರಗೂರು | ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ
- ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ
- ಕರ್ತವ್ಯ ಲೋಪ: ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ, ಕಾಡುಪ್ರಾಣಿಗಳ ಹಾವಳಿ ತಡೆಗೆ ಡಿಎಸ್ ಎಸ್ ಒತ್ತಾಯ
- ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು
- ವಿದ್ಯಾರ್ಥಿಗಳಿಗೆ ಶಿಕ್ಷಕರು ಹೃದಯವಂತಿಕೆಯಿಂದ ಶಿಕ್ಷಣ ನೀಡಬೇಕು: ಬಿ.ಅಬ್ದುಲ್ ರಹಮಾನ್
Author: admin
ಆಸ್ತಿ ಕಬಳಿಸುವ ಉದ್ದೇಶದಿಂದ ಗ್ಯಾಂಗ್ ರೇಪ್ ಕತೆ ಕಟ್ಟಿದ ಮಹಿಳೆ ಹಾಗೂ ಮೂವರು ಸಹಚರರನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಮಹಿಳೆ ಹಾಗೂ ಆಕೆಗೆ ಸಹಕರಿಸಿದ ಆಜಾದ್, ಅಫ್ಜಲ್ ಮತ್ತು ಗೌರವ್ ಬಂಧಿತರು. ಐವರು ನನ್ನನ್ನು ಅಪಹರಿಸಿ ಎರಡು ದಿನಗಳ ಕಾಲ ಗ್ಯಾಂಗ್ ರೇಪ್ ಮಾಡಿದರು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ಭೇದಿಸಿದ ಪೊಲೀಸರು ಮಹಿಳೆಯ ಮೇಲೆ ವಂಚನೆ ಹಾಗೂ ನಕಲಿ ಸಹಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. 36 ವರ್ಷದ ಮಹಿಳೆ ಬ್ಯಾಗ್ ನಲ್ಲಿ ಕೈಕಾಲು ಕಟ್ಟಿದ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಗುಪ್ತಾಂಗಕ್ಕೆ ರಾಡ್ ಇರಿಸಲಾಗಿತ್ತು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಹೇಳಿದ್ದರು. ಆದರೆ ಪೊಲೀಸರು ಅವರ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಮಹಿಳೆ ಆರೋಪ ಮಾಡಿದ ನಾಲ್ವರ ವಿರುದ್ಧ ಕ್ಲೀನ್ ಚಿಟ್ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಅವರ ವಿರುದ್ಧ ಯಾವುದೇ…
ಕೊರಟಗೆರೆ: ಠಾಣೆಗೆ ಬಂದ ಖಚಿತ ಮಾಹಿತಿ ಆಧಾರದ ಮೇಲೆ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮದ ಸಿದ್ದರಾಜುರವರ ಜಮೀನಿನ ಬಳಿ ಇಸ್ಪೀಟು ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಸುಮಾರು ಏಳರಿಂದ ಎಂಟು ಜನ ಆರೋಪಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂದು ಗುಂಪು ಗೂಡಿಕೊಂಡು ಜೂಜಾಟವಾಡುತ್ತಿದ್ದವರ ಮೇಲೆ ಶನಿವಾರ ಸಂಜೆ 3 ಗಂಟೆಯ ಸಮಯದಲ್ಲಿ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಅಸಾಮಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಅಖಾಡದಲ್ಲಿದ್ದ ಮಾಲುಗಳಾದ 10140 ನಗದು ಹಣ, 8 ಮೊಬೈಲ್ ಪೋನ್, 6 ದ್ವಿಚಕ್ರ ವಾಹನನ, 52 ಇಸ್ಪೀಟು ಕಾರ್ಡ್ಸ್, 1 ಪ್ಲಾಸ್ಟಿಕ್ ಪೇಪರ್ ನ್ನು ವಶಪಡಿಸಿಕೊಳ್ಳುವಲ್ಲಿ ಪಿಎಸ್ಐ ಚೇತನ್ ಕುಮಾರ್.ಜಿ ಅವರ ತಂಡ ಸದಸ್ಯರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದ್ದು, ಸಿಪಿಐ ಸುರೇಶ್ ಕೆ. ಹಾಗೂ ಪಿಎಸ್ ಐ ಚೇತನ್ ಕುಮಾರ್ ಜಿ., ಹೆಚ್ಚಿನ ತನಿಖೆ…
ಚಾಮರಾಜನಗರ: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ವಸತಿ ಸಚಿವ ವಿ.ಸೋಮಣ್ಣ ಕಪಾಳಕ್ಕೆ ಹೊಡೆದಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಮಯದ ಬೆಲೆ ಗೊತ್ತಿಲ್ಲದ ಸಚಿವ ಸಂಜೆ ವಿ. ಸೋಮಣ್ಣ 6:30 ಕ್ಕೆ ಸಚಿವರು ಆಗಮಿಸಿದ್ದಾರೆ. ಹೀಗಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿದೆ. ತನ್ನ ಸಮಸ್ಯೆ ಹೇಳಿಕೊಳ್ಳಲು ಮಹಿಳೆ ಸಚಿವರ ಬಳಿ ತೆರಳಿದ್ದಾರೆ. ಈ ವೇಳೆ ಸೋಮಣ್ಣ ಮಹಿಳೆಗೆ ಕಪಾಳ ಹೊಡೆದಿದ್ದಾರೆ. ಘಟನೆ ನಂತರ ಪರಿಸ್ಥಿತಿಯನ್ನ ಪೊಲೀಸರು ತಿಳಿಗೊಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ದಾವಣಗೆರೆ: ಅರ್ಚಕರೊಬ್ಬರು ದೇವರಿಗೆ ವಿಚಿತ್ರ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಶಾಸಕ ಎಂಪಿ. ರೇಣುಕಾಚಾರ್ಯ ಕ್ಷೇತ್ರ ಹೊನ್ನಾಳಿ ತಾಲೂಕು ಕತ್ತಿಗೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ವಿಚಿತ್ರ ಪೂಜೆಯಿಂದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಡುವಂತೆ ಈ ಅರ್ಚಕ ಮಹೇಶ್ವರಯ್ಯ, ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುತ್ತಾರೆ. ಅರ್ಚಕನ ಪೂಜೆ ವಿಧಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ದಾವಣಗೆರೆ : ರಾಜ್ಯ ಕುರುಬ ಸಂಘದ ನಿರ್ದೇಶಕರಾಗಿದ್ದ ಪಿ.ರಾಜಕುಮಾರ(63) ಅವರು ಹೃದಯಾಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ. ಪಿ.ರಾಜಕುಮಾರ ಅವರಿಗೆ ತಡರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸ್ವಗ್ರಾಮ ದ್ವಾರನಕುಂಟೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಪಿ. ರಾಜಕುಮಾರ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನ ಆಗಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಮಂಡ್ಯ: ವಿದ್ಯುತ್ ಸ್ಪರ್ಶದಿಂದ ಇಬ್ಬರು ಫೋಟೋಗ್ರಾಫರ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ನಡೆದಿದೆ. ವಿವೇಕ್ (45), ಮಧುಸೂದನ್ (35) ಮೃತ ದುರ್ದೈವಿಗಳು. ದೀಪಾವಳಿ ಹಬ್ಬದ ಹಿನ್ನೆಲೆ ಸ್ಟೂಡಿಯೋ ಸ್ವಚ್ಛ ಮಾಡುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಬೆಂಗಳೂರು: ಎಸ್ ಡಿ ಎಂ ಸಿಗೆ ಶಾಲೆಗಳ ಅಭಿವೃದ್ಧಿಗಾಗಿ 100 ರೂ. ದೇಣಿಗೆ ಸಂಗ್ರಹಕ್ಕೆ ಅನುಮತಿ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರುಸುತ್ತೋಲೆ ಹೊರಡಿಸಿದ್ದರು. ಈ ಆದೇಶ ಭಾರಿ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ರಾಜ್ಯ ಸರ್ಕಾರದ ದಿವಾಳಿ ತನವನ್ನು ಎತ್ತಿ ತೋರಿಸುತ್ತಿದೆ ಎಂಬುದಾಗಿ ವಿಪಕ್ಷಗಳ ನಾಯಕರು, ಸಾರ್ವಜನಿಕರು ಗುಡುಗಿದ್ದರು. ಈ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ 100 ರೂ. ದೇಣಿಗೆ ಸಂಗ್ರಹದ ಆದೇಶವನ್ನು ಹಿಂಪಡೆಯಲಾಗಿದೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಶಿಕ್ಷಣ ಸಚಿವರ ಸೂಚನೆಯ ಮೇರೆಗೆ, 100 ರೂ. ದೇಣಿಗೆ ಸಂಗ್ರಹದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಆದೇಶ ಹೊರಡಿಸುವ ಮುನ್ನ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ನಾಗೇಶ್ ಕೆಲವೊಂದು ಸುತ್ತೋಲೆಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. 100 ರೂ ಸಂಗ್ರಹ ಸಂಬಂಧ ಹೊರಡಿಸಿರುವಂತ ಸುತ್ತೋಲೆ ಶಿಕ್ಷಣ ಇಲಾಖೆಯಿಂದ ಹೊರಡಿಸಿರೋದಾಗಿದೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ…
ಹುಬ್ಬಳ್ಳಿ : ಪಿಎಸ್‌ಐ ಕೆಲಸ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕರೊಬ್ಬರಿಗೆ 11.90 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ವಿರೂಪಾಕ್ಷಪ್ಪ ಮಜ್ಜಿಗೌಡರ ಎಂಬುವವರೇ ವಂಚನೆಗೊಳಗಾದ ನಿವೃತ್ತ ಸೈನಿಕ. ವಿರೂಪಾಕ್ಷಪ್ಪ ಅವರು ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾಗ, ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ನಾಗರಾಳ ಗ್ರಾಮದ ಹೊನ್ನಪ್ಪ ಮೇಟಿ ಮತ್ತು ವಿಜಯಪುರ ಜಿಲ್ಲೆಯ ಈರಪ್ಪ ಬೂದಿಹಾಳ ಎಂಬುವವರು ಪರಿಚಯವಾಗಿದ್ದರು. ಇವರಿಬ್ಬರು ಸೇರಿ ವಿರೂಪಾಕ್ಷಪ್ಪ ಅವರಿಗೆ ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿದ್ದರು ಎನ್ನಲಾಗ್ತಿದೆ. ಇವರನ್ನು ನಂಬಿದ ವಿರೂಪಾಕ್ಷಪ್ಪ ಇಬ್ಬರಿಗೆ 11.90 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ ಈ ಇಬ್ಬರು ಉದ್ಯೋಗ ನೀಡದೆ 85 ಸಾವಿರ ಮರಳಿಸಿದ್ದು, ಉಳಿದ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ವಿರೂಪಾಕ್ಷಪ್ಪ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಬೆಂಗಳೂರು : ವಿಧಾನಭೆಯ ಉಪ ಸಭಾಪತಿ, ಸವದತ್ತಿ ಮತ ಕ್ಷೇತ್ರದ ಶಾಸಕ ಆನಂದ್ ಮಾಮನಿ(56) ಇಂದು ರಾತ್ರಿ12 ಗಂಟೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್ ಮಾಮನಿ ಅವರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಈ ಮೊದಲು ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂದ್ ಮಾಮನಿ ಅವರ ಪಾರ್ಥಿವ ಶರೀರವನ್ನ ಬೆಳಗಾವಿ ಜಿಲ್ಲೆಯ ಸವದತ್ತಿಗೆ ಆಂಬುಲೆನ್ಸ್ ಮೂಲಕ ರವಾನೆ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನ ಸವದತ್ತಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಅಂತ ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಚಿತ್ರದುರ್ಗ: ಬೆಳೆ ಹಾನಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಕ್ಷಣವೇ ಸ್ಪಂದಿಸಿ, ಪರಿಹಾರ ಕೊಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಇಕ್ಕನೂರು ಗ್ರಾಮದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಇಕ್ಕನೂರು ಗ್ರಾಮದ ರೈತರಾದ ಓದೋ ಸಿದ್ದಪ್ಪರವರ ಜಮೀನು ಬಳಿ ಸೇರಿದ ರೈತರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಕಾರ್ಯಕ್ಕೆ ಧನ್ಯವಾದಗಳನ್ನು ತಿಳಿಸಿದರು. ಈ ವೇಳೆ ಇಕ್ಕನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ, ಶಾಸಕರಾದ ಕೆ. ಪೂರ್ಣಿಮಾ ಶ್ರೀನಿವಾಸ್ ರವರು ಕೃಷಿ, ಕಂದಾಯ ತೋಟಗಾರಿಕೆ ಇಲಾಖಾ ಅಧಿಕಾರಿಗಳ ಎರಡು ಮೂರು ಸಭೆ ನಡೆಸಿ ತಾಲ್ಲೂಕಿನಲ್ಲಿ ಸುಮಾರು ಇಪ್ಪತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಹಾನಿಯಾಗಿದ್ದ ಬೆಳೆಗೆ 28 ಕೋಟಿ ಪರಿಹಾರ ಮುಂಜೂರು ಮಾಡಿಸಿರುತ್ತಾರೆ. ಇದರಿಂದಾಗಿ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು. ಈ ಸಂದರ್ಭದಲ್ಲಿ ಇಕ್ಕನೂರು ಗ್ರಾಮದ ರೈತ ಮುಖಂಡರಾದ ತಮ್ಮಣ್ಣ, ಮೋಹನ್ ಕುಮಾರ್ , ನಿಂಗಣ್ಣ, ಧನಂಜಯ್ , ರಂಗನಾಥ್ , ಶಿವನಗರ ಶಂಕ್ರಣ್ಣ , ರಂಗನಾಥಪುರ ಮೋಹನ್ ಗೌಡ್ರು,…