Author: admin

ಮಧುಗಿರಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ತುಮಕೂರು ಇವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಯಿತು. ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಲಾಯಿತು. ಪುಟ್ಟರಂಗಮ್ಮ ಎಂಬವರು ಮಾತನಾಡಿ, ಲೋ ಬಿಪಿಯಿಂದಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ತಾನು ದಾಖಲಾಗಿದ್ದು, ಮುಂಚೆ ನನಗೆ ಚಿಕಿತ್ಸೆ ನೀಡಿದ ವೈದ್ಯರು ರಜೆಯಲ್ಲಿದ್ದ ಕಾರಣದಿಂದ ಇತರೆ ವೈದ್ಯರು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ನೀಡಿದರು. ಇದೇ ವೇಳೆ ಮಾತನಾಡಿದ ಲೋಕಾಯುಕ್ತ ಎಸ್.ಪಿ.ವಲಿಬಾಷ, ಸಾರ್ವಜನಿಕರು ಲೋಕಾಯುಕ್ತ ಕುಂದು ಕೊರತೆ ಸಭೆಗೆ ದೂರು ನೀಡುವಾಗ, ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರೆ ವಿಚಾರಣೆ ಮಾಡಿ ನ್ಯಾಯ ಒದಗಿಸಲು ಅನುಕೂಲವಾಗುತ್ತದೆ. ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಕೆಲಸ ಮಾಡಿಕೊಡಲು ನಿಮ್ಮನ್ನು ಪದೇ ಪದೇ ಕಚೇರಿಗೆ ಅಲೆದಾಡಿಸಿದಾಗ ಮೊದಲು ಕಾರಣ ತಿಳಿದು ದಾಖಲೆಗಳ ಸಮೇತ ದೂರು ಸಲ್ಲಿಸಿ ಎಂದು ತಿಳಿಸಿದರು. ತಾಲ್ಲೂಕಿನ ಸಾರ್ವಜನಿಕರಿಂದ ಲೋಕಾಯುಕ್ತರ ಸಬೆಗೆ ಸುಮಾರು 45 ಅರ್ಜಿಗಳು ಬಂದಿದ್ದು, ಅದರಲ್ಲಿ…

Read More

ತಿಪಟೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಪ್ರಮುಖವಾಗಿ ಮೂರು ಆಶಯಗಳಲ್ಲಿ ನಡೆಯುತ್ತಿದೆ ರಾಹುಲ್ ಗಾಂಧಿಯವರು ದ್ವೇಷ ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಶ್ನೆಯನ್ನು ಇಟ್ಟುಕೊಂಡು ಐಕ್ಯತೆಯ ಹೆಜ್ಜೆ ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಡಾಕ್ಟರ್ ಸಿ.ಎಸ್.ದ್ವಾರಕನಾಥ್ ಹೇಳಿದರು. ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಭಾರತ್ ಜೋಡೋ ಯಾತ್ರೆ ಕುರಿತು ಮಾಹಿತಿ ನೀಡಿದರು. ಕಾಂಗ್ರೆಸ್ ಮುಖಂಡ ಸಿಬಿ ಶಶಿಧರ್ ಮಾತನಾಡಿ, ಇದು ಕಾಂಗ್ರೆಸ್ ಯಾತ್ರೆ ಮಾತ್ರವಲ್ಲ ಹೊಡೆದ ಮನಸ್ಸುಗಳನ್ನು ಜೋಡಿಸುವ ಯಾತ್ರೆ. ಬಿಜೆಪಿ ಹಾಗೂ ಕೋಮುವಾದಿ ಮನಸ್ಥಿತಿಯನ್ನು ವಿರೋಧಿಸುವ ಪಾದಯಾತ್ರೆಯಾಗಿದೆ. ಇದರಲ್ಲಿ ಇಡೀ ನಾಗರಿಕ ಸಮಾಜ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಪಾದಯಾತ್ರೆಯಲ್ಲಿ ಜನಸ್ಪಂದನ ಟ್ರಸ್ಟ್ ಹಾಗೂ ಬೆಂಗಳೂರಿನ ಬಿ ಕಲ್ಚರ್ ಎಂಬ ಅಂತರಾಷ್ಟ್ರೀಯ ಮಟ್ಟದ ಸುಮಾರು 20ರಿಂದ 30 ಕಲಾವಿದರು ರಚಿಸಿರುವ ಭಾರತ್ ಜೋಡೋಗೆ ಸಂಬಂಧಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ಈ ಕಲಾಕೃತಿಗಳ ಪ್ರದರ್ಶನವನ್ನು ರಾಹುಲ್ ಗಾಂಧಿಯವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಈ…

Read More

ಹೆಚ್.ಡಿ.ಕೋಟೆ: ಪಟ್ಟಣದ ವರದರಾಜಸ್ವಾಮಿ ದೇವಾಲಯದ ಮುಂಭಾಗ ಗ್ರಾಮೀಣ ದಸರಾ ಮಹೋತ್ಸವ ಮೆರವಣಿಗೆಗೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಆದಿವಾಸಿ ಮಹಿಳೆ ಸೋಮಮ್ಮ ಚಾಲನೆ ನೀಡಿದರು. ವರದರಾಜಸ್ವಾಮಿ ದೇವಾಲಯದ ಮುಂಭಾಗ ಗುರುವಾರ ಪಟ್ಟಣದಲ್ಲಿ ಗ್ರಾಮೀಣ ದಸರಾ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾರ್ಯಗಳನ್ನು ಕೈಗೊಂಡಿದ್ದು, ಪಟ್ಟಣದಾದ್ಯಂತ ಬೀದಿಗಳಲ್ಲಿ ಮಹಿಳೆಯರು ರಂಗೋಲಿ ಹಾಕಿ ಅಲಂಕೃತಗೊಳಿಸಿದರು. ಪ್ರಮುಖ ವೃತ್ತಗಳಲ್ಲಿ ವಿಶೇಷವಾದ ಅಲಂಕಾರ ಹಾಗೂ ವಿವಿಧ ಇಲಾಖೆಗಳಿಂದ ಸರ್ಕಾರದ ಸಾಧನೆ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತಹ ಫ್ಲೆಕ್ಸ್ ಫಲಕಗಳನ್ನು ಹಾಕುವ ಮೂಲಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣದ ಮಿನಿ ವಿಧಾನಸೌಧದ ಮಿನಿ ಆವರಣದಲ್ಲಿ ಪಟ್ಟಣದಲ್ಲಿ ಗುರುವಾರ ತೆರೆದ ವಾಹನದಲ್ಲಿ ಶ್ರೀ ಚಾಮುಂಡೇಶ್ವರಿ ಭಾವಚಿತ್ರವನ್ನು ಇಟ್ಟು ವಿಶೇಷ ಹಸಿರು ತೋರಣ ಹೂವಿನ ಅಲಂಕಾರಗಳಿಂದ ಶೃಂಗರಿಸಿ ಕಲಾತಂಡದೊಂದಿಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು, ಆದಿವಾಸಿ ಮಹಿಳೆ ಸೋಮಮ್ಮ ರವರು ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೂಡಿ ಅಲಂಕೃತ ವಾಹನದಲ್ಲಿ ಇರಿಸಿದ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪಟ್ಟಣದಲ್ಲಿ ಗ್ರಾಮೀಣ…

Read More

ಹಿರಿಯೂರು: ನಗರಸಭೆ ಅಧ್ಯಕ್ಷೆಯಾದ ಎಸ್ .ಶಿವರಂಜಿನಿ ಯಾದವ್, ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ಸಂಧ್ಯಾ ಹಾಗೂ ಮೀನಾಕ್ಷಿ ಅವರು ವಾರ್ಡ್ ಪರಿಶೀಲನೆ ನಡೆಸುತ್ತಿದ್ದ ವೇಳೆ ವಾರ್ಡ್ ನಂಬರ್ 2ರಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿದ ವ್ಯಕ್ತಿಯೋರ್ವನಿಗೆ ಸ್ವಚ್ಛತೆ ಪಾಠ ಹೇಳಿ, ಆತ ಸುರಿದ ಕಸವನ್ನು ಆತನಿಂದಲೇ, ಕಸದ ಗಾಡಿಗೆ ತುಂಬಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಧ್ಯಾ ಅವರು, ಎಲ್ಲಾ 31 ವಾರ್ಡ್ ಗಳಲ್ಲಿಯೂ ಸ್ವಚ್ಛತಾ ಕಾರ್ಯ ಮಾಡಲು ಹೆಚ್ಚಿನ ಶ್ರಮ ವಹಿಸಲಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕರೂ ಸ್ವಚ್ಚತೆ ಕಾಪಾಡಲು ಸ್ವಯಂ ಸಂಕಲ್ಪಮಾಡಿಕೊಳ್ಳಬೇಕಾಗಿದೆ ಎಂದರು. ಇದು ನಮ್ಮ ಹೊಣೆಗಾರಿಕೆಯಲ್ಲ ಎಂಬ ಉದಾಸೀನತೆಯ ಮನೋಭಾವದಿಂದ ಪ್ರತಿಯೊಬ್ಬ ನಾಗರಿಕರೂ ಹೊರಬಂದು, ನಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣ ಹಾಗೂ ನಾವು ನಡೆದಾಡುವ ಜಾಗವನ್ನು ನಾವೇ ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು. ಮೀನಾಕ್ಷಿ ಅವರು ಮಾತನಾಡಿ, ನಮ್ಮ ಮನೆಯ ಕಸ ಮತ್ತು ನಗರದ ಕಸವನ್ನು ಸ್ವಚ್ಛ ಮಾಡುವುದು ಕೇವಲ ನಗರಸಭೆ, ಪೌರಕಾರ್ಮಿಕರ ಕೆಲಸ…

Read More

ಇನ್ನೆರಡು ವರ್ಷದಲ್ಲಿ ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿರುವ ತಾಳೆಗರಿ ಹಾಗೂ ಹಸ್ತಪ್ರತಿಗೆ ಡಿಜಿಟಲ್‌ ಸ್ಪರ್ಶ ಸಿಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಮತ್ತು ದಿ ಮಿಥಿಕ್ ಸೊಸೈಟಿ ಸಹಯೋಗದೊಂದಿಗೆ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ನಡೆದ ಹಸ್ತಪ್ರತಿ ಸಂರಕ್ಷಣಾ ಮತ್ತು ಪ್ರಧೂಮೀಕರಣ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ನಮ್ಮ ಪ್ರಾಚೀನ ಪರಂಪರೆ ಹಾಗೂ ಜ್ಞಾನ ಭಂಡಾರವನ್ನು ಹಿರಿಯರು ತಾಳೆಗರಿಯಲ್ಲಿ ಸಂಗ್ರಹಿಸಿದ್ದಾರೆ. ತಾಳೆಗರಿಯಲ್ಲಿ ಸಾಧಕರ ಬಗ್ಗೆ ಮಾಹಿತಿ ಇದೆ. ಇದು ಸಂರಕ್ಷಣೆ ಆಗಬೇಕು. ಇದರ ಪ್ರಯೋಜನ ಮುಂದಿನ ಪೀಳಿಗೆಗೆ ಸಿಗಬೇಕೆಂಬ ಉದ್ದೇಶದಿಂದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಡಿಜಿಟಲೀಕರಣ ನಡೆಯುತ್ತಿದೆ.‌ ಈ ನಿಟ್ಟಿನಲ್ಲಿ ಈಗಾಗಲೇ ಐದು ತಿಂಗಳ‌ ಕೆಲಸ ಮುಗಿದಿದೆ. ಇನ್ನೆರಡು ವರ್ಷದಲ್ಲಿ ತಾಳೆಗರಿ ಮತ್ತು ಹಸ್ತಪ್ರತಿ ಸಂಪೂರ್ಣ ಡಿಜಿಟಲ್ ಆಗಲಿದೆ ಎಂದು ತಿಳಿಸಿದರು. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಜ್ಞಾನದ ಸಂಪನ್ಮೂಲ ತಾಳೆಗರಿ. ಮೈಸೂರು ವಿವಿ ಜಗತ್ತಿಗೆ ಜ್ಞಾನದ ದಾಸೋಹ ಕೊಟ್ಟಿದೆ.‌ ಮೈಸೂರು ವಿವಿ ಶುರುವಾಗುವ…

Read More

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಫ್ಲೆಕ್ಸ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.ಫ್ಲೆಕ್ಸ್ ಹಾಕುವವರು ಯಾರೇ ಆದರೂ ಸರಿ ಅನುಮತಿ ಪಡೆಯಬೇಕು. ಯಾವುದೇ ಪಕ್ಷದ ಫ್ಲೆಕ್ಸ್ ಹರಿಯುವ ಅವಶ್ಯಕತೆ ಇಲ್ಲ ಎಂದರು. ಪಿಎಫ್ ಐ ಬ್ಯಾನ್ ಎಲೆಕ್ಷನ್ ಗಿಮಿಕ್ ಎಂದ ಬಿಕೆ ಹರಿಪ್ರಸಾದ್ ಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಬಿಕೆ ಹರಿಪ್ರಸಾದ್ ಗೆ ವ್ಯಾಖ್ಯಾನ ಮಾಡಲು ಬರಲ್ಲ. ಪಿಎಫ್ ಐ ಬ್ಯಾನ್ ಗೆ ಎಲ್ಲರೂ ಒತ್ತಾಯಿಸಿದ್ದರು. ಈಗ ಎಲೆಕ್ಷನ್ ಗಿಮಿಕ್ ಅಂತಿರೋದು ಎಷ್ಟು ಸರಿ…? ಎಂದು ಪ್ರಶ್ನಿಸಿದರು. ಎಸ್ ಡಿಪಿಐ ರಾಜಕೀಯ ಪಕ್ಷ ಅದಕ್ಕೆ ಬೇರೆ ಕಾನೂನಿದೆ ಎಸ್ ಡಿಪಿಐ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗದುಕೊಂಡಿಲ್ಲ ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ. ಅವರು ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದರು. ಈ ದೇಶದ ಪ್ರಧಾನಿ ಆರ್ ಎಸ್ ಎಸ್ ನಿಂದ ಬಂದವರು, ರಾಷ್ಷ್ರಪತಿ ಆರ್ ಎಸ್ ಎಸ್ ನಿಂದ ಬಂದವರು, ನಾವೆಲ್ಲರೂ ಆರ್ ಎಸ್ ಎಸ್ ನಿಂದ ಬಂದವರಾಗಿದ್ದೇವೆ. ಸಿದ್ದರಾಮಯ್ಯನವರು ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು, ಸೆಪ್ಟಂಬರ್ 29: ಸ್ಥಳೀಯ ನಿವಾಸಿಗಳ ನಿರಂತರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ರಸ್ತೆಯಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಮೂಲಕ ಜನರ ಆತಂಕ ದೂರವಾಗಿಸಿದ್ದಾರೆ. ರಾಜಧಾನಿ ಬೆಂಗಳೂರಿನ ಮಹಾದೇವಪುರ ವ್ಯಾಪ್ತಿಯ ಬಳಗೆರೆ ಮುಖ್ಯ ರಸ್ತೆಯಲ್ಲಿಯೇ ವಿದ್ಯುತ್ ಕಂಬ ಒಂದನ್ನು ಅಳವಡಿಸಲಾಗಿತ್ತು. ನಿತ್ಯ ನೂರಾರು ವಾಹನಗಳು ಓಡಾಡುವ ಜಾಗದಲ್ಲೇ ವಿದ್ಯುತ್ ಕಂಬ ನಿಲ್ಲಿಸಲಾಗಿತ್ತು. ಇದು ರಸ್ತೆ ಅಪಘಾತ ಸೇರಿದಂತೆ ವಿವಿಧ ಗಂಡಾಂತರಗಳಿಗೆ ಆಹ್ವಾನ ನೀಡುವಂತೆ ರಸ್ತೆಯಲ್ಲೇ ಅಳವಡಿಸಲಾಗಿತ್ತು. ಈ ಸಂಬಂಧ ಬಳಗೆರೆ ಮುಖ್ಯ ರಸ್ತೆಯ ಸ್ಥಳಿಯ ನಿವಾಸಿಗಳು ವಿದ್ಯುತ್ ಪೂರೈಸುವ ಸರ್ವೀಸ್ ಲೈನ್‌ ಇರುವ ವಿದ್ಯುತ್ ಕಂಬವನ್ನು ರಸ್ತೆ ಮಧ್ಯೆ ನಿಲ್ಲಿಸಲಾಗಿದ್ದು, ಕೂಡಲೇ ತೆರವು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಬಗ್ಗೆ ಬೆಸ್ಕಾಂ ನಿರ್ಲಕ್ಷ್ಯ ವಹಿಸಲಾಗಿತ್ತು ಎನ್ನಲಾಗಿದೆ. ಸಾರ್ವಜನಿಕರ ಮನವಿ ಮೇರೆಗೆ ಮಹದೇವಪುರ ಟಾಸ್ಕ್ ಫೋರ್ಸ್ ಮೊಬಿಲಿಟಿ ತಂಡವು ಕಾರ್ಯಾಚರಣೆ ನಡೆಸಿದೆ. ‘ಬಳಗೆರೆ ಮುಖ್ಯ ರಸ್ತೆಯಲ್ಲಿನ ನಿವಾಸಿಗಳ ಬಹುಬೇಡಿಕೆಯಂತೆ ವಿದ್ಯುತ್ ಕಂಬ ತೆರವುಗೊಳಿಸಲಾಗಿದೆ. ಅದಕ್ಕು ಮೊದಲು ಇಲ್ಲಿನ ಭೂ ಮಾಲೀಕರ ಜತೆಗಿನ ವ್ಯಾಜ್ಯ…

Read More

ಚಿತ್ರದುರ್ಗ, ಸೆಪ್ಟೆಂಬರ್‌, 29: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಉಳಿದಿದೆ. ಈಗಿನಿಂದಲೇ ಟಿಕೆಟ್ ಖಾತ್ರಿ ಪಡಿಸಿಕೊಳ್ಳಲು ಟಿಕೆಟ್ ಆಕಾಂಕ್ಷಿಗಳು ಆಯಾ ಪಕ್ಷದ ವರಿಷ್ಠರ ಬೆನ್ನು ಬಿದ್ದಿದ್ದಾರೆ. 2018ರ ಜೆಡಿಎಸ್ ಪರಾಜಿತ ಅಭ್ಯರ್ಥಿ, ಕ್ಯಾಸಿನೊ ದೊರೆ ಹಾಗೂ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ ಸೇರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. “ಭಾರತ್ ಜೋಡೋ” ಪಾದಯಾತ್ರೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಂಗಳವಾರ ಚಿತ್ರದುರ್ಗಕ್ಕೆ ಬಂದಿದ್ದರು. ಆಗ ಪಪ್ಪಿ ಅವರಿಗೆ ಟಿಕೆಟ್ ನೀಡುವಂತೆ ಅಭಿಮಾನಿಗಳು ಭಾವಚಿತ್ರ, ಫೋಟೋ ಹಿಡಿದು ಡಿ.ಕೆ.ಶಿವಕುಮಾರ್‌ ಬಳಿ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿದೆ ಎನ್ನಬಹುದು. 2018ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸುಮಾರು 49 ಸಾವಿರ ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು. 2023ಕ್ಕೆ ಚಿತ್ರದುರ್ಗ ಕ್ಷೇತ್ರ ಬಿಟ್ಟು,…

Read More

ಮೊದಲು ಕಾಂಗ್ರೆಸ್ ಪಕ್ಷವನ್ನೇ ಬ್ಯಾನ್ ಮಾಡಬೇಕು ಎಂದು ಹೇಳಿಕೆ ನೀಡಿದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಬಿ.ಕೆ ಹರಿಪ್ರಸಾದ್, ನಳೀನ್ ಕಟೀಲು ಮಂಪರು ಪರೀಕ್ಷೆ ಮಾಡಬೇಕು. ಮಂಗಳೂರಿನಲ್ಲಿ ಯಾರ ಜತೆ ಪಿಎಫ್ ಐ ಸಂಬಂಧ ಇದೆ ಎಂದು ಗೊತ್ತಾಗುತ್ತೆ. ಚುನಾವಣೆ ವೇಳೆ ಮೋದಿಗೆ ಜೀವ ಬೆದರಿಕೆ ವಿಚಾರ ಹೊರ ಬರುತ್ತೆ ಎಂದರು. ಇನ್ನು ಲೂಟಿ ರವಿಯ ಟೀಕೆಗಳಿಗೂ ನಾವು ಉತ್ತರಿಸುವ ಅಗತ್ಯವಿಲ್ಲ ಎಂದು ಬಿಕೆ ಹರಿಪ್ರಸಾದ್ ಟಾಂಗ್ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More