Author: admin

ಬೆಳಗಾವಿ: ಸಾಂಕ್ರಾಮಿಕ ರೋಗದಿಂದಾಗಿ ಬೆಳಗಾವಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜಾನುವಾರುಗಳು ಸಾವಿಗೀಡಾಗುತ್ತಿದ್ದು, ರೈತರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರವೊಂದರಲ್ಲೇ 50ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ. ರೋಗ ಎಲ್ಲೆಡೆ ಉಲ್ಬಣವಾಗುತ್ತಿದೆ. ಕೊರೋನಾ, ಪ್ರವಾಹ, ಜಾನುವಾರ ಸಂತೆ ನಿಷೇಧ ಮೊದಲಾದ ಕಾರಣಗಳಿಂದಾಗಿ ಮೊದಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಇನ್ನಷ್ಟು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಈ ಸಂಬಂಧ ಚರ್ಚೆಗೆ ವಿಶೇಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಜಾನುವಾರುಗಳಿಗೆ ಬಂದಿರುವ ರೋಗಕ್ಕೆ ಸೂಕ್ತವಾದ ಚಿಕಿತ್ಸೆಯೇ ಇಲ್ಲ. ಕುರಿ, ಆಡುಗಳಿಗೆ ನೀಡಲಾಗುವ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದು ಪರಿಣಾಮಕಾರಿಯಲ್ಲ. ಅದರಲ್ಲೂ ಮೊದಲೇ ವೈರಸ್ ಅವುಗಳ ದೇಹ ಪ್ರವೇಶಿಸಿದ್ದರೆ ಏನೇನೂ ಪ್ರಯೋಜನವಾಗುವುದಿಲ್ಲ. ಜಿಲ್ಲೆಯಲ್ಲಿ ವೆಟರ್ನರಿ ವೈದರೂ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಹೆಚ್ಚಿನ ವೈದ್ಯರನ್ನು ಜಿಲ್ಲೆಗೆ…

Read More

ಕೊರಟಗೆರೆ : ಬಹುನಿರೀಕ್ಷಿತ ಶಾಶ್ವತ ನೀರಾವರಿ ಯೋಜನೆ ಎತ್ತಿನಹೊಳೆ ಅಂತೂ ಇಂತೂ ಕೊರಟಗೆರೆ ತಾಲೂಕಿನಲ್ಲಿಯೇ ನೆಲೆಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆಯ ಗೊಂದಲದ ನಡುವೆ 5.78 ಟಿಎಂಸಿ ಯಿಂದ 2ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಂಗೆ ಪರಿಷ್ಕೃತ ಪ್ರಸ್ತಾವನೆ ರಾಜ್ಯ  ಸರ್ಕಾರ ಸಿದ್ಧಪಡಿಸಿದೆ ಎನ್ನಲಾಗಿದೆ. ತಾಲ್ಲೂಕಿನ ಬೈರಗೊಂಡ್ಲು ಬಳಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಫರ್ ಡ್ಯಾಮ್ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಎರಡೂ ತಾಲೂಕಿನ ಸಬ್ ರಿಜಿಸ್ಟರ್ ರೇಟ್ ವ್ಯತ್ಯಾಸದಿಂದ ಸೃಷ್ಠಿಯಾದ ಗೊಂದಲ ಕೊರಟಗೆರೆ ತಾಲೂಕಿನ ಜನತೆ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ 5.78 ಟಿ ಎಂ ಸಿ ಸಾಮರ್ಥ್ಯವನ್ನು ಹೊಸ ಪರಿಷ್ಕೃತ 2.78 ಟಿಎಂಸಿ ನೀರು ತಗ್ಗಿಸುವ ಮುಖೇನಾ 2 ಟಿಎಂಸಿ ಸಾಮರ್ಥ್ಯದ ನಿರ್ಮಾಣಕ್ಕೆ ಹೊಸ ಪ್ರಸ್ತುತ ಪ್ರಸ್ತಾವನೆ ಸರ್ಕಾರದಿಂದ ಸಿದ್ದಗೊಂಡಿದೆ. ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರಾದ ಡಾ ಜಿ ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಎತ್ತಿನಹೊಳೆ ಯೋಜನೆಯ ಗೊಂದಲ ನಿವಾರಣೆ ಹಾಗೂ ಸರ್ಕಾರದ ನಿಲುವಿನ ಬಗ್ಗೆ…

Read More

ಯಾದಗಿರಿ: ಸಿಡಿಲು ಬಡಿದು ತಾಯಿ,ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಗುರುಮಠಕಲ್‌ ತಾಲೂಕಿನ ಎಸ್ ಹೊಸಹಳ್ಳಿ ಬಳಿ ನಡೆದಿದೆ. ಗಾಜರಕೋಟ ಗ್ರಾಮದ ಮೋನಮ್ಮ (25) ಭಾನು (4) ಶ್ರೀನಿವಾಸ್ (2), ಸಾಬಣ್ಣ (17) ಮೃತ ದುರ್ದೈವಿಗಳು. ಓರ್ವನಿಗೆ ಗಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ಯಾದಗಿರಿಯಿಂದ ಊರಿಗೆ ಹೋಗುವಾಗ ಸುರಿದ ಮಳೆಯಿಂದಾಗಿ ಸಿಡಲು ಬಡಿದು ಸಾವನ್ನಪ್ಪಿದ್ದಾರೆ. ಗುರುಮಠಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ: ಕಸಬಾ ವ್ಯಾಪ್ತಿಯ ಲಿಂಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ರಸ್ತೆಯಲ್ಲಿ ಹೆಚ್ಚು ಅಪಘಾತವಾಗುತ್ತಿದ್ದು, ಈ ನಿಟ್ಟಿನಲ್ಲಿ ಈ ಪ್ರದೇಶವನ್ನು ಅಪಘಾತ ವಲಯ ಎಂದು ಘೋಷಿಸಿ ಸೂಚನಾ ಫಲಕ ಅಳವಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸಿಪಿಟಿ ರಾಮು ಒತ್ತಾಯಿಸಿದರು. ಮಂಗಳವಾರ ಸಂಜೆ ಶಾಲೆ ಮುಗಿಸಿ ವಾಪಸ್ ಬರುತ್ತಿದ್ದ ವಿದ್ಯಾರ್ಥಿ ಕುಶಾಲ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು, ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಮು ಮಾತನಾಡಿ,  ಈ ಸ್ಥಳದಲ್ಲಿ ಇತ್ತೀಚೆಗೆ ಹೆಚ್ಚು ಅಪಘಾತಗಳು ನಡೆಯುತ್ತಿದ್ದು, ಕಳೆದ ವಾರ ಶಿಕ್ಷಕರೊಬ್ಬರು ಮೃತಪಟ್ಟಿದ್ದರು.  ಇದರ ಬೆನ್ನಲ್ಲೇ ಶಾಲಾ ವಿದ್ಯಾರ್ಥಿಯೊಬ್ಬಳು ಅಪಘಾತಕ್ಕೆ ಬಲಿಯಾಗಿದ್ದಾಳೆ. ಇಲ್ಲಿ ಯಾವಾಗಲೂ ಅಪಘಾತಗಳು ಸಂಭವಿಸುತ್ತಿರುವುದರಿಂದ ಸಂಬಂಧ ಪಟ್ಟ ಇಲಾಖೆಯವರು ಇದನ್ನು ಅಪಘಾತವಲಯ ಎಂದು ಘೋಷಿಸಿ ಸೂಚನಾ ಫಲಕಗಳನ್ನು ಅಳವಡಿಸ ಬೇಕು, ಜೊತೆಗೆ ಸಾರ್ವಜನಿಕರ ಸುರಕ್ಷತೆಗಾಗಿ ವೈಜ್ಞಾನಿಕವಾಗಿ ರಸ್ತೆ ಹುಬ್ಬುಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ  ಶಿವಣ್ಣ, ಮೂರ್ತಣ್ಣ,  ಮಂಜುನಾಥ್,  ಸುವರ್ಣಮ್ಮ…

Read More

ಕೊರಟಗೆರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,  ಹುಲೀಕುಂಟೆ ಗ್ರಾಮ ಪಂಚಾಯತ್ ಇವರ ವತಿಯಿಂದ ದಸರಾ  ಅಂಗವಾಗಿ ಸರ್ಕಾರದ ಆದೇಶದ ಪಾಲನೆಯಂತೆ ಹುಲೀಕುಂಟೆ ನಾರಾಯಣಸ್ವಾಮಿ ಕ್ರೀಡಾ ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು. ತಾಪಂ ಕಾರ್ಯನಿರ್ವಹಣಾ ಅಧಿಕಾರಿ ದೊಡ್ಡಸಿದ್ದಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,  ಗ್ರಾಮೀಣಾ ಭಾಗದ ಕ್ರೀಡಾ ಪಟುಗಳಿಗೆ ಕ್ರೀಡೆಯ ಮೇಲೆ ಆಸಕ್ತಿಯೇ ಕಡಿಮೆಯಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಯುವಕರು ತೊಡಗದೇ ದೈಹಿಕ ಹಾಗೂ ಮಾನಸಿಕವಾಗಿ, ಸದೃಡರಾಗದೆ, ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ  ಎಂದರು. ಯುವಕರಿಗೆ  ಕಬಡ್ಡಿ, ಖೋಖೋ, ಕುಸ್ತಿ, ಎತ್ತಿನಗಾಡಿ ಓಟ ಇನ್ನೂ ಮುಂತಾದ ಕ್ರೀಡೆಗಳನ್ನು ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯತ್ ನವರು ಆಯೋಜನೆ ಮಾಡಬೇಕು. ಈ ಮೂಲಕ  ಕ್ರೀಡಾ ಆಸಕ್ತಿಯನ್ನು ಹೆಚ್ಚಿಸಿ ಎಂದು ಅವರು ಹೇಳಿದರು. ಹುಲೀಕುಂಟೆ ಗ್ರಾಮ ಪಂಚಾಯತ್  ಅಧ್ಯಕ್ಷ ಮಲ್ಲಣ್ಣ ಮಾತನಾಡಿ, ದೇಶದ ಕ್ರೀಡೆಗಳಲ್ಲಿ ಗ್ರಾಮೀಣ ಭಾಗದ ಜನರೇ ಹೆಚ್ಚಿನ ಸಾಧನೆ ಮಾಡಿದ್ದಾರೆ. ಹೀಗಾಗಿ ಕ್ರೀಡೆ ಮೇಲೆ ಇರುವಂತಹ ಆಸಕ್ತಿಯನ್ನು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಹೊರಹಾಕಿ ಎಂದು ಹೇಳಿದರು.…

Read More

ನವದೆಹಲಿ : ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರವು ಪಿಎಫ್‌ಐ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ದೇಶದ 15 ರಾಜ್ಯಗಳಲ್ಲಿ ಪಿಎಫ್ ಐ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿ ನೂರಾರು ಕಾರ್ಯಕರ್ತರನ್ನು ಬಂಧಿಸಿದ್ದು, ಈ ಸಂಘಟನೆ ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಬಗ್ಗೆ ಸಂಗ್ರಹಿಸಿರುವ ಸಾಕ್ಷ್ಯಗಳ ಆಧಾರದಲ್ಲಿ ಪಿಎಫ್ ಐ ಅನ್ನು ದೇಶದಲ್ಲಿ ಐದು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪಿಎಫ್‌ಐ ಬ್ಯಾನ್‌ಗೆ ವಿರೋಧವಿಲ್ಲ, ಆರ್ ಎಸ್ ಎಸ್ ಮೇಲೂ ಸರ್ಕಾರ ಕ್ರಮ ಕೈಗೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನಿನ ವಿರುದ್ಧ ಇರುವವರ ಮೇಲೆ ಕ್ರಮ ತೆಗೆದುಕೊಂಡರೆ ನಮ್ಮ ವಿರೋಧ ಇಲ್ಲ. ಆರ್‌ಎಸ್‌ಎಸ್‌ ನಿಷೇಧಕ್ಕೂ ಸರ್ಕಾರ ಮುಂದಾಗಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ದವೂ ಕ್ರಮ ಕೈಗೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ನೋಡಿರದ ಗ್ರಾಮೀಣ ಜನತೆಗೆ ದಸರಾ ವೀಕ್ಷಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಹಮ್ಮಿಕೊಂಡಿರುವ “ದಸರಾ ದರ್ಶನ” ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು. ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಮೈಸೂರು ಜಿಲ್ಲೆಯ 9 ತಾಲ್ಲೂಕಿನ ಮಹಿಳೆಯರು, ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಗ್ರಾಮೀಣ ಜನತೆಯನ್ನು ಕರೆತಂದು ದಸರಾವನ್ನು ದರ್ಶನ ಮಾಡಿಸುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ ಎಂದು ಹೇಳಿದರು. ಇಂದಿನಿಂದ 3 ದಿನಗಳ ಕಾಲ ನಿಗಮದ 81 ವಾಹನಗಳಲ್ಲಿ ಸುಮಾರು 4455 ಜನತೆಯನ್ನು ಕರೆತಂದು ಅರಮನೆ, ಮೃಗಾಲಯ, ಜೆ.ಕೆ.ಗ್ರೌಂಡ್ಸ್ ನಲ್ಲಿ ನಡೆಯುವ ಮಹಿಳಾ ಮತ್ತು ಮಕ್ಕಳ ದಸರಾ ವೀಕ್ಷಿಸಲು ಮತ್ತು ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆಯಲು…

Read More

ಮೈಸೂರು ದಸರಾ 2022ರ ನಾಡ ಹಬ್ಬದ ವೀಕ್ಷಣೆಗಾಗಿ ವಿದೇಶಿ-ದೇಶಿ ಪ್ರವಾಸಿಗರು/ಸಾರ್ವಜನಿಕರ ಅನುಕೂಲಕ್ಕಾಗಿ “ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಇದರಿಂದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. “ಗೋಲ್ಡ್ ಕಾರ್ಡ್” ಖರೀದಿಯನ್ನು ಆನ್ ಲೈನ್ ಮುಖಾಂತರ ಮಾಡಬಹುದಾಗಿದೆ. ಇದರ ಬೆಲೆ ರೂ.4,999/- ಮಾಡಲಾಗಿದೆ. ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿ ಆನ್ ಲೈನ್ ಮೂಲಕ www.mysoredasara.gov.in ವೆಬ್‌ ಸೈಟ್‌ನಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿಗೆ ಗರಿಷ್ಟ ಎರಡು “ಗೋಲ್ಡ್ ಕಾರ್ಡ್” ಖರೀದಿಸಬಹುದಾಗಿದೆ. ಒಮ್ಮೆ ಆನ್‌ ಲೈನ್ ಪಾವತಿ ದೃಢೀಕರಿಸಿದ ನಂತರ ಪ್ರವಾಸಿಗರು “ಗೋಲ್ಡ್ ಕಾರ್ಡ್” ಅನ್ನು ದಿನಾಂಕ: 29-09-2022 ಕೆಎಸ್‌ಡಿಟಿಸಿ (ಪ್ರವಾಸೋದ್ಯಮ ಇಲಾಖೆ) ಮಯೂರ ಹೋಟೆಲ್ ಹತ್ತಿರ ಮೈಸೂರು ಇಲ್ಲಿ ಬೆಳಿಗ್ಗೆ 11.00 ರಿಂದ ಸಂಜೆ 5.30 ರವರೆಗೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗೋಲ್ಡ್ ಕಾರ್ಡ್ ಪಡೆದುಕೊಳ್ಳುವಾಗ ಪಾವತಿ, ನಂತರ ಸ್ವೀಕೃತವಾಗುವ ಇಮೇಲ್ ಪ್ರತಿ ಹಾಗೂ ಯಾವುದಾದರೂ ಒಂದು ಐಡಿ ಪ್ರೂಫ್ ಅನ್ನು ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ. ಗೋಲ್ಡ್ ಕಾರ್ಡ್ ವಿಶೇಷತೆಗಳು ಹೀಗಿವೆ ನೋಡಿ.…

Read More

ವಿಜಯನಗರ: ಗಂಡನೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿ ನಡೆದಿದೆ. ದೀಪಾ (22) ಕೊಲೆಯಾದವರು. ಬ್ಯಾಸಿಗಿದೇರಿ ಗ್ರಾಮದ ನಿವಾಸಿ ರವಿ (27) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಕಳೆದ 10 ತಿಂಗಳ ಹಿಂದೆ ವಿವಾಹವಾಗಿದ್ದ ಈ ದಂಪತಿ ನಡುವೆ ಆಗಾಗ ಮನಸ್ತಾಪ ಉಂಟಾಗುತಿತ್ತು. ಪತ್ನಿ ತಮ್ಮ ಸಂಬಂಧಿಯೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಪತ್ನಿ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಮಧ್ಯಾಹ್ನ ಜಗಳ ತಾರಕಕ್ಕೇರಿದ ಪರಿಣಾಮ, ಪತ್ನಿಯ ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ನಂತರ ತನ್ನ ಬೈಕ್‌ನಲ್ಲಿ ಮೃತದೇಹವನ್ನು ನಂದಿಪುರದ ಸಂಬಂಧಿಗಳ ಮನೆ ಮುಂದೆ ಇಟ್ಟು ಬಂದಿದ್ದಾನೆ. ಆರೋಪಿ ರವಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More