ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೀಗ ಹಾಕಿದ ಬಾಡಿಗೆ ಮನೆಯೊಳಗೆ ಇರಿಸಲಾಗಿದ್ದ ಡ್ರಮ್‌ನಲ್ಲಿ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿವೆ. ಆ ಮೃತದೇಹ ವರ್ಷದಿಂದ ಅದೇ ಡ್ರಮ್ನಲ್ಲಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ವಿಶಾಖಪಟ್ಟಣಂನ ಮಧುರವಾಡದಲ್ಲಿ ಹಲವು ತಿಂಗಳುಗಳಿಂದ ಬಾಡಿಗೆದಾರರು ಬಾಡಿಗೆಯನ್ನು ಪಾವತಿಸದ ಕಾರಣ ಮನೆಯ ಮಾಲೀಕರು ಮನೆಯ ಬಾಗಿಲು ಒಡೆದು ನೋಡಿದಾಗ ಡ್ರಮ್ ಒಳಗೆ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿವೆ.
ಬಾಡಿಗೆ ಕೊಡದ ಹಿನ್ನೆಲೆಯಲ್ಲಿ ಆ ಮನೆಯಲ್ಲಿದ್ದ ಸಾಮಾನುಗಳನ್ನು ಹೊರಗೆ ಹಾಕಲು ಮನೆಯ ಮಾಲೀಕರು ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿದಾಗ ಶವವನ್ನು ಬಚ್ಚಿಟ್ಟಿರುವುದು ಗೊತ್ತಾಗಿದೆ. 2021ರ ಜೂನ್‌ನಲ್ಲಿ ಬಾಡಿಗೆದಾರ ಹೆಂಡತಿ ಗರ್ಭಿಣಿ ಎಂದು ಹೇಳಿ ಊರಿಗೆ ಹೋಗಿದ್ದ. ಬಳಿಕ ಮನೆ ಬಾಡಿಗೆಯನ್ನು ಕಟ್ಟಿರಲಿಲ್ಲ. ಒಂದೆರಡು ಬಾರಿ ಆ ಮನೆಗೆ ಬಂದಿದ್ದರೂ ಬಾಡಿಗೆಯನ್ನು ಕೊಟ್ಟಿರಲಿಲ್ಲ.
1 ವರ್ಷಕ್ಕೂ ಹೆಚ್ಚು ಕಾಲ ಕಾದ ಬಳಿಕ ಮಾಲೀಕ ಮನೆಗೆ ನುಗ್ಗಿ ಬಾಡಿಗೆದಾರನ ಸಾಮಾನುಗಳನ್ನು ಹೊರಗೆ ಹಾಕಿದ್ದಾರೆ. ಆಗ ಮನೆಯೊಳಗೆ ಇದ್ದ ಡ್ರಮ್‌ನಲ್ಲಿ ಮಹಿಳೆಯ ಕೊಳೆತ ದೇಹದ ಭಾಗಗಳು ಪತ್ತೆಯಾಗಿವೆ.
ಆ ಶವ ಯಾರದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆತನ ಹೆಂಡತಿಯದ್ದೇ ಇರಬಹುದು ಎಂದು ನಮಗೆ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದು, ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy