Author: admin

ಕೊರಟಗೆರೆ : ತಾಲ್ಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಗ್ರಾಮದ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ತಾಯಿಯ ಜಲಧಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರೆವೇರಿತು. ದೇವಿಗೆ ವಿಶೇಷ ಹೂವಿನ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ  ನಡೆಯಿತು. ದೇವಿ ಕುಣಿತದ ನಂತರ ಸಾಮೂಹಿಕ ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ಮಾತನಾಡಿ, ಸುಮಾರು 250 ವರ್ಷಗಳ ಇತಿಹಾಸವುಳ್ಳ ದೇವಗಾನಿಕೆ ಶ್ರೀ ಬೇವಿನಮ್ಮ ತಾಯಿ ಏಳು ಜನ ಅಕ್ಕತಂಗಿಯರಲ್ಲಿ ತಾಯಿಯು ಒಬ್ಬಳು. ಈ ತಾಯಿಯ ಜಾತ್ರೆ–ಜಲಧಿ ವಿಶೇಷವಾಗಿ ಆಚರಣೆ ಮಾಡುತ್ತಾ ನಮ್ಮ ಪೂರ್ವಿಕರು ಬಂದಿದ್ದಾರೆ ಹಾಗೆ ನಾವು ಕೂಡ ಈ ಆಚರಣೆಯನ್ನು ಮುಂದುವರಿಸುತ್ತಾ ಬಂದಿದ್ದೇವೆ. ಈ ದೇವಿಯ ಜಾತ್ರೆಯನ್ನು ಐದು ವರ್ಷಕ್ಕೊಮ್ಮೆ ಮಾಡುತ್ತಿದ್ದು,ಜಲದಿಯನ್ನು ವರ್ಷಕ್ಕೊಮ್ಮೆ ಬಹಳ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದರು. ಜಟ್ಟಿ ಅಗ್ರಹಾರ ಎಂದರೇ ಜಟ್ಟಿ ಮನೆತನದವರಿಗೆ ರಾಜರು ಮಹಾರಾಜರು ಉಡುಗೊರೆಯಾಗಿ ನೀಡಿದಂತಹ ಇತಿಹಾಸವುಳ್ಳ ಗ್ರಾಮವಾಗಿದ್ದು, ಇಲ್ಲಿ ನೆಲೆಸಿರುವ…

Read More

ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: ಪೂರ್ವ ಮುಂಗಾರು ಸತತ ಮೂರ್ನಾಲ್ಕು ಸಹಿತ ದಿನಗಳಿಂದ ಗುಡುಗು ಸಹಿತ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ಅವಾಂತರ ಸೃಷ್ಟಿಸಿ ಇಡೀ ರಾತ್ರಿ ಮಳೆ ನೀರು ಹೊರ ಹಾಕುವ ಮೂಲಕ 4 –5 ಕುಟುಂಬಗಳು ಹೈರಾಣಾದ ಘಟನೆ ತಾಲೂಕಿನ ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಗಡಿ ಭಾಗದ ಅರಸಾಪುರ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಗೆ ಚರಂಡಿ ಹಾಗೂ ರಸ್ತೆಯಲ್ಲಿ ಹರಿಯಬೇಕಾದ ಕೊಳಚೆ ನೀರು ಮನೆ ಒಳಗೆ ನುಗ್ಗಿ ಮನೆ ಗೃಹಪಯೋಗಿ ವಸ್ತುಗಳು ಸೇರಿದಂತೆ ದಿನಬಳಕೆ ವಸ್ತುಗಳು ನಾಶವಾಗಿ ಸಾರ್ವಜನಿಕರು ಮಳೆ ನೀರು ಹೊರ ಹಾಕುವುದರಲ್ಲಿ ಇಡೀ ರಾತ್ರಿ ಕಳೆದು ವ್ಯವಸ್ಥೆಯ ವಿರುದ್ಧ ಇಡೀ ಶಾಪ ಹಾಕಿದ ಘಟನೆ ಜರುಗಿದೆ. ಅರಸಾಪುರ ಗ್ರಾಮದಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ರಸ್ತೆ ಹಾಗೂ ಚರಂಡಿ ನೀರು ನಾಲ್ಕೈದು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದ್ದು, ಕಷ್ಟದಿಂದ ಕೂಲಿ ನಾಲಿ ಮಾಡಿ ಸಂಪಾದಿಸಿದ ಅಲ್ಪಸ್ವಲ್ಪ ದಿನಸಿ…

Read More

ತುಮಕೂರು: ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿ 2024–25ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿರುವ 8 ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಗರದ ಹೊರವಲಯದ ಸಿದ್ಧಾರ್ಥ ನಗರದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ, ಅಭಿನಂದನಾ ಸಮಾರಂಭದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ನರೇಗಾ ಯೋಜನೆಯಡಿ ಶಾಲಾ ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನಕ್ಕಾಗಿ ಮಲ್ಲಸಂದ್ರ ಗ್ರಾಮಪಂಚಾಯತಿ, ಅತ್ಯುತ್ತಮ ಆಡಳಿತ ನಿರ್ವಹಣೆಗಾಗಿ ಕೆಸರಮಡು, ಹಸಿರು ಗ್ರಾಮ ಅಭಿಯಾನಕ್ಕಾಗಿ ಸ್ವಾಂದೇನಹಳ್ಳಿ, ಪಾರಂಪರಿಕ ವೀರಗಲ್ಲು ಹಾಗೂ ಶಾಸನಗಳ ಸಂರಕ್ಷಣಾ ಕಾಮಗಾರಿಗಾಗಿ ಚಿಕ್ಕತೊಟ್ಲುಕೆರೆ, ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಗಣನೀಯ ಸಾಧನೆಗಾಗಿ ಕೆಸ್ತೂರು, ಅತೀ ಹೆಚ್ಚು ಇ-ಸ್ವತ್ತು ಸೃಜನೆಗಾಗಿ ಹೊಳಕಲ್ಲು, ಅತ್ಯುತ್ತಮ ಸ್ವಚ್ಛ ಗ್ರಾ.ಪಂ ಅಭಿಯಾನಕ್ಕಾಗಿ ದೇವಲಾಪುರ ಹಾಗೂ ಸಂಜೀವಿನಿ ಎನ್ಆರ್ಎಲ್ಎಂ ಅತ್ಯುತ್ತಮ ಒಕ್ಕೂಟಕ್ಕಾಗಿ ಗೂಳೂರು ಶ್ರೀ ಮಹಾಗಣಪ ಸಂಜೀವಿನಿ…

Read More

ತುಮಕೂರು: ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ 17 ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಸ್ವಾಭಾವಿಕವಾಗಿ ದೊರೆಯುವ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತದೆ. ಸಸ್ಯಗಳಿಗೆ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೋಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಲಘು ಪೋಷಕಾಂಶಗಳಾದ ಕಾಲ್ಸಿಯಂ, ಮೆಗ್ನಿಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಿಬ್ಡಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಅಗತ್ಯವಿರುತ್ತದೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗಿರುತ್ತದೆ. ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ, ಮಣ್ಣಿನಿಂದ ಎಲ್ಲಾ ಪೋಷಕಾಂಶಗಳು ಬೇಕಾದ ಪ್ರಮಾಣದಲ್ಲಿ ಬೆಳೆಗಳಿಗೆ ದೊರೆಯುವುದಿಲ್ಲವಾದ್ದರಿಂದ ಬಾಹ್ಯವಾಗಿ ನೀಡುವುದು ಅನಿವಾರ್ಯ. ಬೆಳೆಗಳಿಗೆ ಬೇಕಾಗುವ ಈ ಬಾಹ್ಯ ಪೋಷಕಾಂಶಗಳನ್ನು ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕು. ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರವಾಗಿ…

Read More

ತುಮಕೂರು:  ತಿಪಟೂರು ತಾಲ್ಲೂಕು ಹೊನ್ನವಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025–26ನೇ ಶೈಕ್ಷಣಿಕ ಸಾಲಿಗಾಗಿ NCVT ಕೋರ್ಸುಗಳ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಆನ್ಲೈನ್ www.cite.karnataka.gov.in ಮೂಲಕ ಮೇ 28ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9900251218/ 9972066417/ 9448711012/ 7892193187/ 8095359616ನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು:  ತೋಟಗಾರಿಕೆ ಇಲಾಖೆಯು 2025–26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಸೌಲಭ್ಯಕ್ಕಾಗಿ ತೋಟಗಾರಿಕಾ ರೈತರು ಹಾಗೂ ಉದ್ದಿಮೆದಾರರಿಂದ ಅರ್ಜಿ ಆಹ್ವಾನಿಸಿದೆ. ಸ್ಟಾçಬೇರಿ, ಬಾಳೆ, ಮಾವು, ಪಪ್ಪಾಯ ಹಾಗೂ ದಾಳಿಂಬೆ ಹಣ್ಣಿನ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಡ್ರ‍್ಯಾಗನ್, ಬೆಣ್ಣೆಹಣ್ಣು, ಹಲಸು, ಹುಣಸೆ ಹಣ್ಣಿನಂತಹ ಅಪ್ರಧಾನ ಹಣ್ಣಿನ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಸುಗಂದರಾಜ, ಚೆಂಡುಹೂ, ಸೇವಂತಿಗೆ ಹಾಗೂ ಇತರೆ ಬಿಡಿ ಹೂವಿನ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಹೈಬ್ರಿಡ್ ತರಕಾರಿ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಗೋಡಂಬಿ, ಕೋಕೊ, ಕಾಳುಮೆಣಸು ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಅಣಬೆ ಉತ್ಪಾದನಾ ಘಟಕ, ಹಸಿರು ಮನೆ ಹಾಗೂ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳ ನಿರ್ಮಾಣ; ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ ಅಳವಡಿಕೆ, ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ; ಕೋಯ್ಲೋತ್ತರ ನಿರ್ವಹಣೆ; ಪಾರಂಗೇಟ್; ಪ್ಯಾಕ್ಹೌಸ್; ಪ್ರಾಥಮಿಕ ಸಂಸ್ಕರಣಾ ಘಟಕ; ಎರೆಹುಳುಗೊಬ್ಬರ ಉತ್ಪಾದನಾ ಘಟಕ; ಕಡಿಮೆ…

Read More

ತುಮಕೂರು: ಮಾಧ್ಯಮರಂಗ ಇಂದು ಬಹಳ ವಿಸ್ತಾರವಾಗಿ ಹರಡಿಕೊಂಡಿದೆ. ಇದರಲ್ಲಿರುವ ವಿಫುಲ ಅವಕಾಶಗಳನ್ನು ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಸಂತ ಟಿ.ಡಿ. ತಿಳಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಮಾಧ್ಯಮ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಧ್ಯಮ ಕ್ಷೇತ್ರ ಇಂದು ಪತ್ರಿಕೆ, ಟಿವಿಗಳಿಗೆ ಸೀಮಿತವಾಗಿಲ್ಲ. ಡಿಜಿಟಲ್ ಯುಗ ನಮ್ಮನ್ನು ಆವರಿಸಿಕೊಂಡಿದೆ. ಯುವಜನರು ಮನಸ್ಸು ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಲು ಮಾಧ್ಯಮರಂಗವನ್ನು ಬಳಸಿಕೊಳ್ಳಬಹುದು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮಾಧ್ಯಮ ರಂಗದ ಉದ್ಯೋಗಾವಕಾಶಗಳ ಬಗ್ಗೆ ಮಾತನಾಡಿದ ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ.ಸಿಬಂತಿ ಪದ್ಮನಾಭ ಕೆ.ವಿ. ಮಾಧ್ಯಮರಂಗದಲ್ಲಿ ಉದ್ಯೋಗ ಪಡೆಯುವವರಿಗೆ ಜೀವನೋಪಾಯವಷ್ಟೇ ಮುಖ್ಯವಾಗುವುದಿಲ್ಲ. ಸಮಾಜದ ಬದಲಾವಣೆಯಲ್ಲಿ ಪಾತ್ರವಹಿಸಿದ ತೃಪ್ತಿ ಹಾಗೂ ಸಾಮಾಜಿಕ ಮನ್ನಣೆ ಕೂಡ ಇರುತ್ತದೆ ಎಂದರು. ಸಾಂಪ್ರದಾಯಿಕ…

Read More

ತುಮಕೂರು:  ರಾಜ್ಯ ಸರಕಾರ ದಿವಾಳಿ ಆಗಿದ್ದು ಭಿಕ್ಷುಕರ ಸರಕಾರವಾಗಿದೆ. ಭಿಕ್ಷುಕರಿಗಾದರೂ ಭಿಕ್ಷೆ ಬೇಡಿದರೆ ಮಾನವೀಯತೆ ದೃಷ್ಟಿಯಲ್ಲಿ ಭಿಕ್ಷೆ ಸಿಗುತ್ತದೆ. ಆದರೆ ಕಾಲು ಹಿಡಿದ್ರೂ ಅಲ್ಲ ಕೈ ಹಿಡಿದ್ರೂ ಇಲ್ಲ. ಸಚಿವ ಪರಮೇಶ್ವರ್ ಹೇಳಿದ್ರು ಕಪ್ಪು ಬಾವುಟ ಹಾರಿಸಿ ಅನುದಾನ ಕೊಡುತ್ತಾರೆ, 25 ಕೋ ರೂ. ಕೊಡಿಸುತ್ತೇನೆ. ಅದು ಆಗಲಿಲ್ಲ, ಶಾಸಕರುಗಳು ಭಿಕ್ಷುಕರಿಗಿಂತ ಕಡೆಯಾಗಿದ್ದೇವೆ ಎಂದು ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕತರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಶಾಸಕರೇ ಅನುದಾನ ಇಲ್ಲದೆ ಸೊರಗಿದ್ದಾರೆ, ಯಾವಾಗ ಈ ಸರಕಾರ ಹೋಗಲಿದೆ ಎನ್ನುತ್ತಿದ್ದಾರೆ.ಇಡೀ ಕನಾಟಕದಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೇ ಸ್ಥಿತಿ ಇದೆ. ಕುಣಿಗಲ್, ಮಧುಗಿರಿಯಲ್ಲಿರುವ ಶಾಸಕರಿಗೆ ತಾಕತ್ತಿದೆ ಅನುದಾನ ತರುತ್ತಿದ್ದಾರೆ ಎಂದರು. ವಿರೋಧ ಪಕ್ಷದ ಶಾಸಕರಿಗೆ ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಅನುದಾನ ಕೊಟ್ಟಿದ್ದಾರೆ. ಕನಿಷ್ಟ ಅನುದಾನ ಕೂಡ ಬಂದಿಲ್ಲ. 420 ಸರಕಾರ, ದಿವಾಳಿ ಸರಕಾರವಾಗಿದೆ ಮತ್ತು ಬ್ರಷ್ಟಾಚಾರ ಮತ್ತು ಹಗರಣದ ಸರಕಾರವಾಗಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ತುಮಕೂರು: ಆರೋಗ್ಯವಿಲ್ಲದ ಐಶ್ವರ್ಯ ವ್ಯರ್ಥ. ಐಶ್ವರ್ಯವಿದ್ದರೆ ಸುಖವಾಗಿ ಇರುತ್ತೇವೆ ಎಂದು ಭಾವಿಸುತ್ತೇವೆ. ಆದರೆ ಆರೋಗ್ಯವಿಲ್ಲದೆ ಸುಖವಾಗಿ ಬಾಳಲು ಸಾಧ್ಯವಿಲ್ಲ. ಸಕಲ ಐಶ್ವರ್ಯಕ್ಕಿಂತ ಆರೋಗ್ಯ ಮುಖ್ಯವಾದದ್ದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಡಿ.ಸಿ., ಸ್ವರ್ವೇಕ್ಷಣ ಘಟಕ, ಜಿಲ್ಲಾ ಆಸ್ಪತ್ರೆ, ತಾಲೂಕು ಆರೋಗ್ಯ ಕಛೇರಿ ಸಹಯೋಗದಲ್ಲಿ ಶನಿವಾರ ನಡೆದ ವಿಶ್ವ ರಕ್ತದೊತ್ತಡ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಕಡಿಮೆ ಆದ್ಯತೆ ನೀಡುತ್ತಾರೆ. ಇದು ಬದಲಾಗಬೇಕು. ಅಸಾಂಪ್ರದಾಯಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಮನುಷ್ಯನ ಜೀವಿತಾವಧಿ ಕುಸಿಯುತ್ತಿದೆ. ಮೊಬೈಲ್‌ನಿಂದ ದೂರವಿದ್ದಷ್ಟು ನೆಮ್ಮದಿ. ಯೋಗ ಮತ್ತು ಧ್ಯಾನಗಳೂ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದರು. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಛೇರಿಯ ಸಂಯೋಜಕ…

Read More

ತುಮಕೂರು:  ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸಭಾಂಗಣ ಕಟ್ಟಡದ ನಿರ್ಮಾಣಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಬೇಕು. ಯಾವುದೇ ರೀತಿಯ ಆಪೇಕ್ಷೆ ಇಲ್ಲದೆ ಜನಸಮುದಾಯದ ಕೆಲಸಗಳು ಆಗಬೇಕು ಎಂದು ಸಚಿವರು ಹೇಳಿದರು. ಸಾಮಾನ್ಯ ಪ್ರಜೆ, ಬಡ ರೈತರು ತಹಶೀಲ್ದಾರರ ಕಚೇರಿಗೆ ತೊಂದರೆ, ನೋವಿನಿಂದ ಬರುತ್ತಾರೆ. ಅಂತವರ ಕೆಲಸಗಳನ್ನು ಸುಲಭವಾಗಿ ಮಾಡಿಕೊಡಬೇಕು. ಆತ ನಗುವಿನಿಂದ ಹೋದರೆ ಅದೇ ಒಳ್ಳೆಯ ಆಡಳಿತ. ಒಂದು ದಾಖಲೆ ಪಡೆದುಕೊಳ್ಳಲು ಹತ್ತು ಬಾರಿ ಅಲೆಯಬಾರದು. ಈ ವಿಚಾರವನ್ನು ಅಧಿಕಾರಿಗಳು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು. ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಅವುಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು. ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳನ್ನು ಸುಂದರವಾಗಿ, ಕಾರ್ಯಾತ್ಮಕವಾಗಿ ಹಾಗೂ ಆಧುನಿಕ ಆಡಳಿತಕ್ಕೆ ತಕ್ಕಂತೆ ನಿರ್ಮಿಸಿದ್ದಾರೆ. ನಮ್ಮಲ್ಲಿ ಅಂತಹ ಕಟ್ಟಡಗಳು ಇಲ್ಲ ಎಂದು ಬೇಸರ…

Read More