Author: admin

ಮಧುಗಿರಿ: ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾನಿಗೀಡಾಗಿರುವ ಸೇತುವೆ ಹಾಗೂ ರಸ್ತೆಗಳ ದುರಸ್ಥಿಗೆ ಅಧಿಕಾರಿಗಳಿಂದ ವರದಿ ಪಡೆದುಕೊಂಡು ಶೀಘ್ರ ನೆರವು ನೀಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ತಾಲೂಕಿನ ಕಸಬಾ ಬೆಲ್ಲದಮಡುಗು ಕೆರೆ ಕೋಡಿ ಒಡೆದ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಪಟ್ಟಣದ ಚೊಳೇನಹಳ್ಳಿ ಕೆರೆ ಕೋಡಿ ದುರಸ್ಥಿ ಕಾರ್ಯ ಹಾಗೂ ಕಾಳೇನಹಳ್ಳಿಯ ಬೃಹತ್ ಸೇತುವೆಗೆ ಆದ ಹಾನಿಯನ್ನು  ಪರಿಶೀಲಿಸಿದ ಸಚಿವರು ಬಳಿಕ ಇಮ್ಮಡಗೊಂಡನಹಳ್ಳಿಯಲ್ಲಿ ಉಂಟಾದ ನೆರೆ ಹಾನಿಯನ್ನು ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಣ್ಣ ನೀರಾವರಿ ಇಲಾಖೆಯ ಎಲ್ಲ ಕೆರೆಗಳು ತುಂಬಿದ್ದು, ನದಿಗಳಿಂದ ಹೆಚ್ಚುವರಿ ನೀರು ಹರಿದ ಪರಿಣಾಮ, ಕೆಲವೆಡೆ ಸೇತುವೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ. ಇದಕ್ಕಾಗಿ ಅಗತ್ಯ ನೆರವನ್ನು ಅಧಿಕಾರಿಗಳ ವರದಿ ಬಂದಾಕ್ಷಣ ಬಿಡುಗಡೆ ಮಾಡಲಾಗುವುದು ಎಂದರು. ಸಣ್ಣ ನೀರಾವರಿ ಇಲಾಖೆಯ ಕೆರೆಗಳೆಲ್ಲ ತುಂಬಿದ್ದು, ಬೆಲ್ಲದಮಡುಗು ಕೆರೆ ಹೊರತು ಪಡಿಸಿ ಉಳಿದವು ಸುಭದ್ರವಾಗಿವೆ. ಬೆಲ್ಲದಮಡುಗು ಕೆರೆ ಕೋಡಿ, ಚೊಳೇನಹಳ್ಳಿ ಕೆರೆ ಕೋಡಿಯ ದುರಸ್ಥಿಕಾರ್ಯವನ್ನು ಶೀಘ್ರವಾಗಿ ಕೈಗೊಂಡು ಪೂರ್ಣಗೊಳಿಸಲು…

Read More

ಸರಗೂರು: ತಾಲ್ಲೂಕಿನ ನುಗು ಜಲಾಶಯದ ಹಿನ್ನೀರಿನಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಮೀನುಗಾರಿಕಾ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಅಕ್ರಮವಾಗಿ ಮೀನು ಹಿಡಿಯಲಾಗುತ್ತಿದೆ. ಈ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನುಗು ಜಲಾಶಯದ ಮೀನಾಪಾಶುವಾರು ಹಕ್ಕಿನ ವಿಲೇವಾರಿ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು, ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೂ ಮೀನುಗಾರಿಕೆ ನಡೆಸುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ, ಸೆಪ್ಟಂಬರ್ 1ರಂದು ಸಂಜೆ ಸುಮಾರು 30 ದೋಣಿಗಳಲ್ಲಿ ಬಲೆ ಹಾಕಿರುವ ಆರೋಪಿಗಳು, ಸೆಪ್ಟಂಬರ್ 2ರಂದು ಬರೋಬ್ಬರಿ 3 ಟನ್ ನಷ್ಟು ಮೀನುಗಳನ್ನು ರಾಜಾರೋಷವಾಗಿ ಹಿಡಿದು ಸಾಗಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನ್ಯಾಯಾಲಯದ ಆದೇಶ ಧಿಕ್ಕರಿ ಮೀನು ಹಿಡಿಯುತ್ತಿರುವುದನ್ನು ಕಂಡು ವಿಚಾರಿಸಲು ಹೋದವರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಇಷ್ಟೆಲ್ಲ ನಡೆದರೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು,…

Read More

ಹಿರಿಯೂರು: ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಅಣೆಕಟ್ಟು ಎಂದು ಕರೆಸಿಕೊಳ್ಳುವ ವಾಣಿ ವಿಲಾಸ ಸಾಗರ 88 ವರ್ಷಗಳ ನಂತರ ಐತಿಹಾಸಿಕ 2ನೇ ಬಾರಿಗೆ ಗುರುವಾರ ರಾತ್ರಿ ಕೋಡಿ ಬೀಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಮೈಸೂರು ಮಹಾರಾಜರ ಕೊಡುಗೆಯನ್ನು ಸ್ಮರಿಸಬೇಕಿದೆ ಎಂದು ಮಾಜಿ ಶಾಸಕರಾದ ಡಿ.ಸುಧಾಕರ್ ಹೇಳಿದರು. ವಿಲಾಸ ಸಾಗರಕ್ಕೆ ಗಂಗಾ ಪೂಜೆ ಸಲ್ಲಿಸಿದ ಮಾತನಾಡಿದ ಅವರು, ವಾಣಿ ವಿಳಾಸ ಸಾಗರ ಕೋಡಿ ಹರಿಯುವ ಮೂಲಕ ಚಿತ್ರದುರ್ಗ ಜಿಲ್ಲೆಯ ಜನತೆಯ ಮೊಗದಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದರು. ಈ ಜಿಲ್ಲೆಗೆ ಭದ್ರಾ ಮೇಲ್ದಾಂಡನೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಿಲ್ಲೆಯ ರೈತ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ಶ್ರಮಿಸಿದ್ದವು. ಕೋದಂಡರಾಮ ಅವರು ಭದ್ರಾ ಮೇಲ್ದಾಂಡ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ್ದರು ಎಂದು ಇದೇ ವೇಳೆ ಸುಧಾಕರ್ ತಿಳಿಸಿದರು. ಹಿರಿಯೂರು ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್ ಮಾತನಾಡಿ, ಬರದ ನಾಡಾಗಿದ್ದ ಚಿತ್ರದುರ್ಗ ಜಿಲ್ಲೆಯು ಇಂದು ಹಚ್ಚ ಹಸಿರಿನ ಕ್ರಾಂತಿಯಿಂದ ಕೂಡಿರಲು ಕಾರಣಕರ್ತರಾದ…

Read More

ಸರ್ಕಾರಿ ಶಾಲೆಗೆ ಸೇರಿದ ಜಾಗವು ಒತ್ತುವರಿಯಾಗಿದ್ದು, ಶಾಲೆಗೆ ಸೇರಿದ ಜಾಗವನ್ನು ಉಳಿಸುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ರವರಿಗೆ ಗ್ರಾಮಸ್ಥರು ಕೈ ಮುಗಿದು ಮನವಿ ಮಾಡಿದ ಘಟನೆ ನಡೆದಿದೆ. ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ದೊಡ್ಡತ್ತರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಜಾಗವನ್ನು ಗ್ರಾಮದ ಪ್ರಭಾವಿ ಮುಖಂಡರುಗಳು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮೇಗೌಡ ಒತ್ತಾಯಿಸಿದರು. ನ್ಯಾಯಾಲಯದ ಆದೇಶದಂತೆ ಶಾಲೆಯ ಜಾಗವನ್ನು ಗುರುತಿಸಿ, ಒತ್ತುವರಿಯಾದ ಜಾಗವನ್ನು ತೆರವುಗೊಳಿಸಲು ಇಂದು ಸರ್ವೇ ಅಧಿಕಾರಿ ಹಾಗೂ ಆನೆಗೊಳ ಗ್ರಾಮ ಪಂಚಾಯತಿಯ ಪಿ.ಡಿ.ಓ ಕುಮಾರ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಗೋಪಾಲಕೃಷ್ಣ, ಗ್ರಾಮ ಲೆಕ್ಕದಿಕಾರಿ ಕಾಂತೇಶ್ ರವರು ನೇತೃತ್ವದಲ್ಲಿ ಸರ್ವೇ ಮಾಡಿ ಶಾಲೆಯ ಜಾಗವನ್ನು ಗುರುತಿಸಲೆಂದು ಶಾಲೆಗೆ ಬಂದಾಗ ಶಾಲೆಯ ಜಾಗ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ಮುಖಂಡರು ಸರ್ವೇ ಮಾಡದಂತೆ ತಡೆಗಟ್ಟಿ ವಿನಾ ಕಾರಣ ತೊಂದರೆ…

Read More

ವಿಜಯಪುರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಖಾಸಿಂಸಾಬ್ ಹುಸೇನಸಾಬ್ ಬಿಜಾಪುರ(88) ನಿಧನರಾಗಿದ್ದಾರೆ. ಮೆದುಳಿಗೆ ಪಾರ್ಶ್ವವಾಯುವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾಹು ಭಾನುವಾರ ತಡರಾತ್ರಿ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಕೃಷಿ ಮಾಡಿ ಕಾಹು ಎಂದೇ ಹೆಸರುವಾಸಿಯಾಗಿದ್ದರು. 1935 ಫೆಬ್ರವರಿ 4 ರಂದ ಜನಿಸಿದ್ದ ಕಾಹು 2003 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಮೃತರು ಇಬ್ಬರು ಪುತ್ರರು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಕಾಹು ಬಿಜಾಪುರ ಅಗಲಿಕೆಗೆ ಜಾನಪದ ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವಿಕ್ರಾಂತ್ ರೋಣ’ ಚಿತ್ರದ ಮೂಲಕ ಕಿಚ್ಚ ಸುದೀಪ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಅನುಪ್ ಭಂಡಾರಿ ನಿರ್ದೇಶನದ ಈ ಚಿತ್ರ ಜುಲೈ 28 ರಂದು ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ಈ ಚಿತ್ರ ಸುದೀಪ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಯಿತು. ಇದಲ್ಲದೆ, ಬಿಡುಗಡೆಯಾದ ಪ್ರತಿಯೊಂದು ಭಾಷೆಯಲ್ಲೂ ಭಾರೀ ಕಲೆಕ್ಷನ್ ಗಳಿಸುವ ಮೂಲಕ ಡಬಲ್ ಬ್ಲಾಕ್ ಬಸ್ಟರ್ ಆಯಿತು. ‘ಕೆಜಿಎಫ್’ ನಂತರ ‘ವಿಕ್ರಾಂತ್ ರೋಣ’ ಮೊದಲ ವಾರಾಂತ್ಯದಲ್ಲಿಯೇ ಬ್ರೇಕ್ ಈವೆನ್ ಮಾಡಿ ಆ ಮಟ್ಟದಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ಕನ್ನಡ ಚಿತ್ರವಾಯಿತು. ಇತ್ತೀಚೆಗಷ್ಟೇ ಈ ಸಿನಿಮಾದ ಕನ್ನಡ ಅವತರಣಿಕೆ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಈ ಚಿತ್ರ ಒಟಿಟಿಯಲ್ಲೂ ದಾಖಲೆ ಸೃಷ್ಟಿಸಲಿದೆ. ಚಿತ್ರದ ಕನ್ನಡ ಆವೃತ್ತಿಯು ಶುಕ್ರವಾರದಿಂದ ಪ್ರಮುಖ OTT ಚಾನೆಲ್ ‘G-5’ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಚಿತ್ರವು ಕೇವಲ 24 ಗಂಟೆಗಳಲ್ಲಿ 500 ಮಿಲಿಯನ್ ವೀಕ್ಷಣೆಯನ್ನು ಗಳಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ…

Read More

ಅಹಮದಾಬಾದ್ ಸೆಪ್ಟೆಂಬರ್ 3: ಗುಜರಾತ್ ಭೇಟಿಯ ಅಂತಿಮ ದಿನವಾದ ಇಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೇಸರಿ ಪಕ್ಷವನ್ನು ತೊರೆಯದೆ ‘ಒಳಗಿನಿಂದ’ ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಬಿಜೆಪಿಯ ಭದ್ರಕೋಟೆಯಾದ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಹಾಗೂ ಎಎಪಿ ಭರ್ಜರಿ ಸಿದ್ಧತೆ ನಡೆದಿವೆ. ಅದರಲ್ಲೂ ಆಡಳಿತ ಪಕ್ಷಕ್ಕೆ ಆಮ್‌ ಆದ್ಮಿ ಪಕ್ಷ ನೇರ ಪೈಪೋಟಿ ನಡೆಸಲಿದೆ. ಈಗಾಗಲೇ ಎಎಪಿಯ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುಜರಾತ್‌ನಲ್ಲಿ ಮತಭೇಟೆಯನ್ನು ಆರಂಭಿಸಿದ್ದಾರೆ. ಹಲವಾರು ಭರವಸೆಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಗುಜರಾತ್ ಭೇಟಿಯ ಎರಡನೇ ದಿನವಾದ ಇಂದು ಅರವಿಂದ್ ಕೇಜ್ರಿವಾಲ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಬಿಜೆಪಿಯಿಂದ “ಹಣ” ಪಡೆಯುವುದನ್ನು ಮುಂದುವರಿಸಬೇಕು. ಆದರೆ ಆಪ್‌ಗಾಗಿ “ಒಳಗಿನಿಂದ” ಕೆಲಸ ಮಾಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ಜೊತೆಗೆ ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ…

Read More

ಕಳೆದ ಕೆಲ ವಾರಗಳಿಂದ ಪಾಕಿಸ್ತಾನದಲ್ಲಿ ಪ್ರವಾಹಕ್ಕೆ ಸಿಲುಕಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಪರಿಸ್ಥಿತಿ ಈಗಾಗಲೇ ಕೆಟ್ಟದಾಗಿದೆ. ಜೊತೆಗೆ ಪ್ರವಾಹದ ವಿನಾಶವು ಇಸ್ಲಾಮಾಬಾದ್ ಅನ್ನು ಜರ್ಜರಿತಗೊಳಿಸಿದೆ. ಒಂದು ಅಂದಾಜಿನ ಪ್ರಕಾರ, ತೀವ್ರ ಪ್ರವಾಹದಿಂದಾಗಿ ದೇಶವು ಅಂದಾಜು ಹತ್ತು ಶತಕೋಟಿ ಡಾಲರ್ ನಷ್ಟವನ್ನು ಅನುಭವಿಸಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) ಉಪಗ್ರಹ ಚಿತ್ರಗಳ ಪ್ರಕಾರ, ಪಾಕಿಸ್ತಾನದ ಮೂರನೇ ಒಂದು ಭಾಗದಷ್ಟು ಭೂಮಿ ತೀವ್ರ ಪ್ರವಾಹದ ಹಿಡಿತದಲ್ಲಿದೆ. ಇದು ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಎಂದು ಹೇಳಲಾಗಿದೆ. ಸಿಎನ್ಎನ್ ಪ್ರಕಾರ, ಪಾಕಿಸ್ತಾನದಲ್ಲಿ ತೀವ್ರ ಪ್ರವಾಹದಿಂದಾಗಿ ಇನ್ನೂ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿ ಆಹಾರದ ಕೊರತೆ ಎದುರಾಗಿದೆ. ಸಾವಿರಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಪ್ರವಾಹದಿಂದಾಗಿ ಜನರು ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತಿದೆ. ಒಟ್ಟಿನಲ್ಲಿ ಪಾಕಿಸ್ತಾನ ಸದ್ಯಕ್ಕೆ ಭೀಕರ ಪ್ರಕೃತಿ ವಿಕೋಪವನ್ನು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ದೊಡ್ಡ…

Read More

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರು ‘ಸನಾತನ ಪಂಚಾಂಗ – 2023′ ನ್ನು ಆ.30ರಂದು ಲೋಕಾರ್ಪಣೆ ಮಾಡಿದರು. ಪಂಚಾಂಗದ ರಚನೆಯ ಬಗ್ಗೆ ಹೆಗ್ಗಡೆಯವರು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಉದ್ಯಮಿಗಳು ಹಾಗೂ ಹಿಂದೂ ಜಾಗರಣ ವೇದಿಕೆಯ ಪದ್ಮನಾಭ ಶೆಟ್ಟಿಗಾರ್, ವಕೀಲರಾದ ಉದಯಕುಮಾರ್ ಬಂದಾರು, ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು ಹಾಗೂ ಒಕ್ಕಲಿಗ ಯಾನೆ ಗೌಡರ ಯುವ ವೇದಿಕೆ ನಿಡ್ಲೆ ಗ್ರಾಮದ ಅಧ್ಯಕ್ಷರಾದ ಗಿರೀಶ್ ಗೌಡ ನಿಡ್ಲೆ, ಸನಾತನ ಸಂಸ್ಥೆಯ ಆನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಎಂ ಗೌಡ ಮತ್ತಿತರರು ಉಪಸ್ಥಿತರಿದ್ದರು. ಸನಾತನ ಪಂಚಾಂಗವು ಕಳೆದ 17 ವರ್ಷಗಳಿಂದ 7 ಭಾಷೆಗಳಲ್ಲಿ ಲಕ್ಷಾಂತರ ಪ್ರತಿಗಳಲ್ಲಿ ಮುದ್ರಣವಾಗುತ್ತಿದೆ. ಈ ಪಂಚಾಂಗದಲ್ಲಿ ಪ್ರತಿ ತಿಂಗಳುಗಳಲ್ಲಿ ಬರುವ ಹಬ್ಬ-ಹರಿದಿನಗಳನ್ನು ಧರ್ಮಶಾಸ್ತ್ರದಂತೆ ಹೇಗೆ ಆಚರಿಸಬೇಕು…

Read More

ಬೆಂಗಳೂರು: ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ದಾಖಲಾದ ಪೋಕ್ಸೋ ಕೇಸ್ ನಲ್ಲಿ ಬಂಧಿಸಲಾಗಿದೆ. ಈ ಕಾರಣದಿಂದಾಗಿ ಅವರನ್ನು ಅನಾಥಸೇವಾಶ್ರಮದ ವಿಶ್ವಸ್ಥ ಸಮಿತಿಯ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ವಿಶ್ವಸ್ತ ಸಮಿತಿಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಇ ರಾಧಾಕೃಷ್ಣ ಅವರು, ಕ್ರಿಮಿನಲ್ ಆಪಾದನೆಯನ್ನು ಎದುರಿಸುತ್ತಿರುವ ಶ್ರೀ ಶಿವಮೂರ್ತಿ ಮುರುಘಾಶರಣರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನಾಥಸೇವಾಶ್ರಮದ ಅಧ್ಯಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನದಿಂದ ವಿಮುಕ್ತಿಗೊಳಿಸಲಾಗಿದೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy  

Read More