Author: admin

ಬೆಳಗಾವಿ : 2022-23ನೇ ಸಾಲಿಗೆ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಾದ IIM, IIT, IISc, IIITs, NITs, IISERs, AIIMS, NLU, ISM, IIP, ISI, JIPMER ಅಥವಾ SPA ಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಪ್ರೋತ್ಸಾಹ ಧನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಜನವರಿ 30, 2023 ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್ ಸೈಟ್ ವಿಳಾಸ :https://bcwd.karnataka.gov.in ನ್ನು ನೋಡಬಹುದು ಅಥವಾ ಸಹಾಯವಾಣಿ ಸಂಖ್ಯೆ: 8050770004 ಯನ್ನು ಸಂಪರ್ಕಿಸಬಹುದು ಎಂದು (ಕಚೇರಿ ಕರ್ಯನಿರ್ವಹಿಸುವ ಸಮಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ) ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ…

Read More

ಅನೇಕ ಜನರು ಚಳಿಗಾಲದಲ್ಲಿ ಕಿವಿ ನೋವಿನಿಂದ ಬಳಲುತ್ತಿದ್ದಾರೆ. ಆದರೆ ಇದನ್ನು ನಮ್ಮ ಅಡುಗೆಮನೆಯಲ್ಲಿ ಲವಂಗದಿಂದ ಗುಣಪಡಿಸಬಹುದು. ಲವಂಗವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಕಿವಿ ನೋವಿಗೆ ಲವಂಗದ ಎಣ್ಣೆಯನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಕಿವಿ ನೋವಿಗೆ ಒಂದು ಚಮಚ ತುಪ್ಪದಲ್ಲಿ ಒಂದು ಲವಂಗವನ್ನು ಕುದಿಸಿ. ಅದನ್ನು ಸೋಸಿಕೊಂಡು 1 ರಿಂದ 2 ಹನಿಗಳನ್ನು ಕಿವಿಗೆ ಹಾಕಿ. ತಕ್ಷಣ ಪರಿಹಾರ ಪಡೆಯಿರಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಜಮ್ಮು ಮತ್ತು ಕಾಶ್ಮೀರದ ತೋಡಾ ನಿವಾಸಿ ಮನಜಿತ್ ಸಿಂಗ್ ಅವರು ತಮ್ಮ ವ್ಯವಹಾರಕ್ಕಾಗಿ ವಿವಿಧ ಬ್ಯಾಂಕ್‌ಗಳು ಮತ್ತು ಖಾಸಗಿ ವ್ಯಕ್ತಿಗಳಿಂದ 30 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಈ ಪರಿಸ್ಥಿತಿಯಲ್ಲಿ ಡಿಸೆಂಬರ್ 20 ರಂದು ಪತ್ನಿ ಮತ್ತು ಮಗಳ ಜೊತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಆತನಿಗಾಗಿ ತೀವ್ರ ಶೋಧ ನಡೆಸಿದಾಗ ಚೆನಾಬ್ ನದಿಗೆ ಬಿದ್ದ ಕಾರಿನಲ್ಲಿ ಆತನ ಗುರುತಿನ ಚೀಟಿ ಸಿಕ್ಕಿದೆ. ಸಂಸಾರ ಸಮೇತ ಸಾವಿಗೀಡಾಗಿದ್ದಾರೆ ಎಂದು ಆ ಭಾಗದ ಜನ ಭಾವಿಸಿದ್ದಾರೆ, ಸಾಲಬಾಧೆಯಿಂದ ಪಾರಾಗಲು ನಾಟಕವಾಡಿರುವುದು ಇದೀಗ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.ಮತ್ತು ಅವರನ್ನು ಹುಡುಕಿ ಪ್ರಕರಣವನ್ನು ದಾಖಲಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಾಸ್ಕೋ-ಗೋವಾ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆಯ ನಂತರ ತನಿಖೆ ಮುಂದುವರೆದಿದೆ. ಪ್ರಯಾಣಿಕರನ್ನು ವಿಮಾನದಿಂದ ಹೊರತೆಗೆಯಲಾಗುತ್ತದೆ ಮತ್ತು ವಿವರವಾದ ತಪಾಸಣೆ ನಡೆಸಲಾಗುತ್ತದೆ. ಗುಜರಾತಿನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ದಿಕ್ಕು ತಪ್ಪಿಸಲಾಯಿತು. ವಿಮಾನದಲ್ಲಿದ್ದ 236 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂಬುದು ಅಧಿಕಾರಿಗಳ ಆರಂಭಿಕ ತೀರ್ಮಾನ.ಪೊಲೀಸರು, ಬಾಂಬ್ ಪತ್ತೆ ದಳ ಮತ್ತು ಸ್ಥಳೀಯ ಆಡಳಿತದ ನೇತೃತ್ವದಲ್ಲಿ ಪ್ರಬಲ ತನಿಖೆ ನಡೆಸಲಾಗಿದೆ ಎಂದು ರಾಜ್ ಕೋಟ್ ಐಜಿ ಅಶೋಕ್ ಕುಮಾರ್ ಯಾದವ್ ಹೇಳಿದ್ದಾರೆ. ವಿಮಾನವು ಮಾಸ್ಕೋದಿಂದ ಹೊರಟು ದಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗೋವಾ ಪೊಲೀಸರು ದಾಬೋಲಿಮ್ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಸ್ಕೋದಿಂದ ವಿಮಾನ ಹೊರಡುತ್ತಿದ್ದಂತೆ ಅಧಿಕಾರಿಗಳು ರಷ್ಯಾದ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದು, ಭಾರತೀಯ ಅಧಿಕಾರಿಗಳು ಕಠಿಣ ತಪಾಸಣೆ ನಡೆಸುತ್ತಿದ್ದಾರೆ ಎಂದು ರಷ್ಯಾದ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಉತ್ತರ ಭಾರತದ ರಾಜ್ಯಗಳಲ್ಲಿ ವಿಪರೀತ ಚಳಿ ಮುಂದುವರಿದಿದೆ. ದೆಹಲಿಯಲ್ಲಿ ದಟ್ಟ ಮಂಜು ಕವಿದಿದೆ. ಮಂಜಿನಿಂದಾಗಿ ರಸ್ತೆ, ರೈಲು ಮತ್ತು ವಿಮಾನ ಸಂಚಾರಕ್ಕೆ ತೊಂದರೆಯಾಗಿದೆ.ಮಬ್ಬಿನ ಕಾರಣ ಕಳೆದ ಎರಡು ದಿನಗಳಲ್ಲಿ 260 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ. ನಾಳೆ ಮತ್ತು ಮರುದಿನ ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲದಲ್ಲಿ ಹಿಮಪಾತವಾಗಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಗಾಳಿಯ ಗುಣಮಟ್ಟ ಕಳಪೆಯಾಗಿರುವ ಕಾರಣ ಶುಕ್ರವಾರದವರೆಗೆ ದೆಹಲಿಯಲ್ಲಿ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ಕಾರುಗಳನ್ನು ನಿಷೇಧಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ಬೀದಿಬದಿ ವ್ಯಾಪಾರಿಗಳು ಮುಂಬರುವ ದಿನಗಳಲ್ಲಿ ದೊಡ್ಡ ವ್ಯಾಪಾರಿಗಳಾಗುವ ಯೋಜನೆ ರೂಪಿಸಿ, ಬೃಹತ್ ವ್ಯಾಪಾರದಲ್ಲಿ ತೊಡಗಿಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಮೂಲಕ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಬೀದಿಬದಿ ವ್ಯಾಪಾರಸ್ಥರಿಗೆ ಸಲಹೆ ನೀಡಿದರು. ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸೋಮವಾರ (ಜ9) ನಡೆದ ಆತ್ಮನಿರ್ಭರ ಬೀದಿಬದಿ ವ್ಯಾಪಾರಸ್ಥರ ಸಂಭ್ರಮ ಆಚರಣೆ 2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹುಟ್ಟಿನಿಂದಲೂ ಯಾರು ದೊಡ್ಡ ವ್ಯಕ್ತಿಗಳಾಗಿರುವುದಿಲ್ಲ ಚಹಾ ಮಾರುವಂತ ವ್ಯಕ್ತಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿದ್ದಾರೆ, ಹಾಗೇ ನೀವು ಏಕೆ ದೊಡ್ಡ ವ್ಯಾಪಾರಿಗಳಾಗಬಾರದು? ನೀಮ್ಮಲ್ಲಿಆತ್ಮಸ್ಥೈರ್ಯ ಇಚ್ಚಾಶಕ್ತಿ ಇಟ್ಟುಕೊಂಡು ನೀವು ಸಹ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳುವುದು ಖಚಿತ ಎಂದು ಶಾಸಕ ಅನೀಲ ಬೆನಕೆ ಅವರು ಹೇಳಿದರು. ಕೋವಿಡ್ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳು ಅನೇಕ ಸಮಸ್ಯೆಗಳಿಗೆ ತುತ್ತಾದಾಗ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ 10 ಸಾವಿರ ರೂ…

Read More

ಕೊರಟಗೆರೆ: ತಾಲೂಕಿನಲ್ಲಿ ಹಲವು ಪ್ರಕರಣಗಳ ಅಡಿಯಲ್ಲಿ ದ್ವಿಚಕ್ರ ವಾಹನಗಳನ್ನು ಕೆಲವು ತಿಂಗಳ ಹಿಂದೆ ಅಮಾನತುಪಡಿಸಲಾಗಿರುತ್ತದೆ. ಇದುವರೆಗೂ ದ್ವಿಚಕ್ರವಾಹನ ಮಾಲೀಕರು ಯಾರು ಕೂಡ ಬಂದು ತಮ್ಮ ವಾಹನಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ತೋರಿಸಿ ಬಿಡಿಸಿಕೊಳ್ಳದ ಕಾರಣ ಅಂತಹ ದ್ವಿಚಕ್ರ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಬಹಿರಂಗ ಹರಾಜು ಮಾಡಲಾಗುತ್ತದೆ.. ಈ ಕೆಳಕಂಡ ಪ್ರಕರಣಗಳ ಅಡಿಯಲ್ಲಿ ವಾಹನಗಳನ್ನು ಅಮಾನತು ಪಡಿಸಲಾಗಿದೆ: ಜಿ. ಎಸ್. ಸಿ. ನಂಬರ್ :-po1643220600296/2022 ಜಿ. ಎಸ್. ಸಿ. ನಂಬರ್:-po1643220600300/2022 ಜಿ. ಎಸ್. ಸಿ. ನಂಬರ್:-po1643220600304/2022 ಜಿ. ಎಸ್. ಸಿ. ನಂಬರ್:-po1643220600316/2022 ಜಿ. ಎಸ್. ಸಿ. ನಂಬರ್:-po1643220600326/2022 ಈ ಪ್ರಕರಣದ ಅಡಿಯಲ್ಲಿ ಅಮಾನತು ಪಡಿಸಲಾಗಿರುವ ವಾಹನಗಳ ವಾರಸುವುದಾರರು ಒಂದು ವಾರದ ಒಳಗಾಗಿ ತಮ್ಮಲ್ಲಿ ದ್ವಿಚಕ್ರ ವಾಹನಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ತಂದು ಪೊಲೀಸ್ ಠಾಣಾ ಅಧಿಕಾರಿಗಳಿಗೆ ತೋರಿಸಿ ತಮ್ಮ ವಾಹನವನ್ನು ತೆಗೆದುಕೊಂಡು ಹೋಗಬಹುದು. ಒಂದು ವಾರದ ಒಳಗೆ ಯಾರು ಬಾರದೆ ಹೋದರೆ, ತದನಂತರ ಆ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಸಾರ್ವಜನಿಕರ ಬಹಿರಂಗ ಹರಾಜು ಮಾಡಲಾಗುತ್ತದೆ…

Read More

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ವಿಪಕ್ಷ ನಾಯಕ ಸಿದ್ಧರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸುವ ನಿರ್ಧಾರವನ್ನ ಬಿಜೆಪಿ ಮುಖಂಡ ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ವಾಗತಿಸಿದರು. ಈ ಕುರಿತು ಮಾತನಾಡಿದ ವರ್ತೂರು ಪ್ರಕಾಶ್, ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ ಸ್ವಾಗತ, ಸಿದ್ಧರಾಮಯ್ಯ ಅವರದ್ದು ತಪ್ಪು ತೀರ್ಮಾನ.  ಸಿದ್ದರಾಮಯ್ಯ  ನನ್ನ ಗುರುವಲ್ಲ ಕೋಲಾರದಲ್ಲೇ ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯವಾಗುತ್ತದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ನಲ್ಲೇ  ಅವರ ವಿರೋಧಿಗಳಿದ್ದಾರೆ. ಸಿದ್ಧರಾಮಯ್ಯ ಅಹಿಂದ ನಾಯಕನೇ ಅಲ್ಲ . ಅದೃಷ್ಟದ ನಾಯಕ . ಸಿದ್ದು ಕುರುಬರ ಲೀಡರ್ ಅಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ವಿಜಯಪುರ: ಇತ್ತೀಚಿಗೆ ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿಗಳನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಾಣ ಮಾಡಿದ್ದ ಕಟ್ಟೆಯನ್ನು ಇಂದು ತೆರವುಗೊಳಿಸಲಾಗಿದೆ. ಯಾವುದೇ ಮಠ, ಮಂದಿರ ತಮ್ಮ ಹೆಸರಲ್ಲಿ ನಿರ್ಮಾಣ ಮಾಡಬಾರದು ಎಂದು ಸಿದ್ದೇಶ್ವರ ಶ್ರೀಗಳು 2014ರಲ್ಲಿ ಉಯಿಲು ಬರೆದಿದ್ದರು. ಅದರಂತೆ ಜನವರಿ 2ರಂದು ಲಿಂಗೈಕ್ಯರಾದ ಶ್ರೀಗಳ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗಿತ್ತು. ನಂತರ ಅವರ ಚಿತಾಭಸ್ಮವನ್ನು ಭಾನುವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಕೂಡಮ ಸಂಗಮ ಗ್ರಾಮದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಲಾಗಿತ್ತು. ಶ್ರೀಗಳ ಆಶಯದಂತೆ ಅವರನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಿಸಿದ್ದ ಕಟ್ಟೆಯೂ ತೆರವುಗೊಳಿಸಲಾಗಿದೆ. ನಿನ್ನೆ ತಡರಾತ್ರಿ ಗೋಕರ್ಣದಿಂದ ಬಂದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಕಟ್ಟೆಯನ್ನು ತೆರವು ಮಾಡಲಾಗಿದೆ. ನಂತರ ಆಶ್ರಮದ ಸಿಬ್ಬಂದಿ ಅಂತ್ಯ ಸಂಸ್ಕಾರ ಮಾಡಿದ ಸ್ಥಳವನ್ನು ನೀರಿನಿಂದ ಶುಚಿಗೊಳಿಸುತ್ತಿದ್ದಾರೆ. ಇದರ ನಡುವೆಯೂ ಆಶ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಆಶ್ರಮ ಭೇಟಿ ನೀಡಿದವರು ಶ್ರೀಗಳನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳ ದರ್ಶನ ಮಾಡುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ತುರುವೇಕೆರೆ: ಜನವರಿ 2ರಂದು ನಡೆದ ಆದಿ ಜಾಂಬವ ಸಮ್ಮೇಳನ ಯಶಸ್ವಿಯ ಹಿನ್ನೆಲೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಸಾಲ ಜಯರಾಮ್ ಮಾದಿಗ ಸಮಾಜದ ಮುಖಂಡರುಗಳಿಗೆ ಶಾಲು ಹಾಕಿ ಸನ್ಮಾನಿಸಿದರು. ತಾಲೂಕು ಆದಿಚಾಂಬವ ಸಮಾಜದ ಅಧ್ಯಕ್ಷರಾದ ವಿ.ಟಿ.ವೆಂಕಟರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಮಾದಿಗ ಸಮಾಜವನ್ನು ಒಂದೇ  ವೇದಿಕೆಯಲ್ಲಿ ಒಗ್ಗೂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರಿಗೆ ಶಾಸಕರು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿ,  ಶಾಸಕ ಮಸಾಲ ಜಯರಾಮ್,  ನಾನು ಕೂಡ ನಿಮ್ಮ ಸಮಾಜದ ಯಾವುದೇ ಹೋರಾಟದಲ್ಲಿ ಸದಾ ನಿಮ್ಮೊಂದಿಗೆ ಭಾಗಿಯಾಗಿ ಇರುತ್ತೇನೆ. ಈಗ ನಡೆಸುತ್ತಿರುವ ಒಳ ಮೀಸಲಾತಿಯ ಹೋರಾಟವನ್ನು ಬರುವ ಚುನಾವಣೆಯೊಳಗೆ ಜಾರಿಗೆ ತರಲಾಗುತ್ತದೆ. ಇದರ ಬಗ್ಗೆ ನಮ್ಮ ಕೇಂದ್ರ ಹಾಗೂ ಆಯೋಗದ ಅಧ್ಯಕ್ಷರು ಕೂಡ ನನ್ನೊಂದಿಗೆ ಚರ್ಚಿಸಿ ಭರವಸೆಯನ್ನು ನೀಡಿದ್ದಾರೆ  ಎಂದರು. ಈ ಸಂದರ್ಭದಲ್ಲಿ ಆದಿ ಜಾಂಬವ ಸಮಾಜದ ತಾಲೂಕು ಅಧ್ಯಕ್ಷರಾದ ವಿ.ಟಿ.ವೆಂಕಟರಾಮಯ್ಯ, ಗೌರವಾಧ್ಯಕ್ಷರಾದ ನೊಣವಿನಕೆರೆ ರಾಮಕೃಷ್ಣಯ್ಯ,  ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾದ ಟಿ.ಕೆ.ಚಿದಾನಂದ, ಮುಲ್ಲೂರು ತಿಮ್ಮೇಶ್,…

Read More