Author: admin

ಪಾವಗಡ: ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಪಾವಗಡ ತಾಲೂಕಿನಲ್ಲಿ ದಲಿತ ಸಂಘಟನೆಗಳು ಒಕ್ಕೂಟ, ದಲಿತ ಮುಖಂಡರು ಪ್ರತಿಭಟನೆ ನಡೆಸಿದರು. ತಾಲೂಕಿನನಿರೀಕ್ಷಣ ಮಂದಿರದಿಂದ ಜಾಥಾ ಆರಂಭಿಸಿದ ಪ್ರತಿಭಟನಾಕಾರರು ಶನೇಶ್ವರ ಸ್ವಾಮಿ ವೃತ್ತದ ಬಳಿ ತೆರಳಿ ಮಾನವ ಸರಪಳಿ ರಚಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಕಚೇರಿ ಆವರಣಕ್ಕೆ ತೆರಳಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೊಟ್ರ ಶಂಕರ್, ಈ ದೇಶದಲ್ಲಿ ನಮ್ಮ ಪರವಾಗಿ ಯಾವುದೇ ಸ್ವಾಮೀಜಿ ಅಥವಾ ರಾಜಕಾರಣಿಯೂ ಇಲ್ಲ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ನಮ್ಮ ಜೊತೆಗಿದೆ. ಸರ್ಕಾರ ಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ಸಿಹಿ ಸುದ್ದಿ ಕೊಡದಿದ್ದರೆ. ಸರ್ಕಾರದ ಹಣೆಬರಹವನ್ನು ನಾವು ಕಿತ್ತು ಹಾಕುತ್ತೇವೆ ಎಂದು ಅವರು ಹೇಳಿದರು. ಹನುಮಂತರಾಯಪ್ಪ ಕಡಪಲಕೆರೆ ಹೆಚ್.ಆರ್.ಎಫ್. ಡಿ.ಎಲ್. ಮಾತನಾಡಿ, ಎ ಬಿ ಸಿ ಡಿ ವರ್ಗೀಕರಣ ಇವತ್ತು ನಿನ್ನೆಯದ್ದಲ್ಲ . ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ತಕ್ಷಣವೇ…

Read More

ರಾಜಸ್ಥಾನದ ಜೈಪುರದಲ್ಲಿ ಹರೀಶ್ ಕುಮಾವತ್ ಎಂಬ ಯುವಕ 5 ವರ್ಷದ ಬಾಲಕಿಗೆ ಮಿಠಾಯಿ ನೀಡುವುದಾಗಿ ಹೇಳಿ   ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಆರೋಪಿಯು ಸೋಮವಾರ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಿಹಾರದ ಕಕಾಡಿಯಾ ಜಿಲ್ಲೆಯ ಪಾಕಿಯಾ ಗ್ರಾಮದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ ಸೇರಿದ ಗುವಾಹಟಿ-ಬರೌನಿ ಪೈಪ್‌ಲೈನ್ ಒಡೆದು ಪೆಟ್ರೋಲ್ ಕಳವು ಮಾಡಲಾಗಿದೆ. ಈ ವಿಷಯ ತಿಳಿದ ಪ್ರದೇಶದ ಜನರು ಪೆಟ್ರೋಲ್ ಹಾಕಿಸಲು ಜಮಾಯಿಸಿದರು. ಈ ಘಟನೆಯ ನಂತರ, ಸಾವಿರಾರು ಲೀಟರ್ ತೈಲವು ಹೊಲದಲ್ಲಿ ವ್ಯರ್ಥವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಐಒಸಿ ಅಧಿಕಾರಿಗಳು ಎಂಜಿನಿಯರ್ ಗಳ ನೆರವಿನಿಂದ ಪೈಪ್ ಒಡೆದು ಹೋಗಿರುವುದನ್ನು ಸರಿಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ ಆಸ್ಕರ್​ ರೇಸ್​​ಗೆ ಎಂಟ್ರಿ ಕೊಟ್ಟಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿಅರ್ಹತಾ ಸುತ್ತನ್ನು ಪ್ರವೇಶಿಸಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಟ್ವೀಟ್ ಮಾಡಿದೆ. ‘ಕಾಂತಾರ ಸಿನಿಮಾ 2 ಆಸ್ಕರ್ ಅರ್ಹತೆ ಪಡೆದಿರುವ ವಿಚಾರ ತಿಳಿಸಲು ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ’ ಎಂದು ಟ್ವಿಟ್ಟರ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಅಂದಹಾಗೆ ಇತ್ತೀಚೆಗಷ್ಟೇ ‘ಕಾಂತಾರ’ ಸಿನಿಮಾ 100 ದಿನ ಪೂರೈಸಿತ್ತು. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿತ್ತು. ಅದೇ ರೀತಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಆಸ್ಕರ್ ಅರ್ಹತೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜನವರಿ 12ರಂದು ಮತ್ತೆ ಹೋರಾಟ ನಡೆಸುತ್ತೇವೆ. ಸಿಎಂ ಬೊಮ್ಮಾಯಿ ಮನೆ ಮುಂದೆಯೇ ಸಂಕ್ರಾಂತಿ ಆಚರಿಸಿ ಪ್ರತಿಭಟಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,2D ಮತ್ತು 2Cಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿತು. ನಾವು ಕಾನೂನು ತಜ್ಞರನ್ನು ಕರೆದು ಚರ್ಚಿಸಿದೆವು. 110ಕ್ಕೂ ಹೆಚ್ಚು ವಕೀಲರನ್ನು ಸೇರಿಸಿ ಚರ್ಚಿಸಿದೆವು. ನಮ್ಮ ಕಾನೂನು ತಜ್ಞರು ಇದನ್ನು ತಿರಸ್ಕರಿಸಲು ಹೇಳಿದ್ದಾರೆ. ಆದರೆ ನಾವು ಜನವರಿ 13 ರಂದು ಸಿಎಂ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ. ಒಂದು ವಾರ ಕಾಯೋಣ ಎಂದು ಕಾದೆವು. ಕೊನೆಗೂ ಏನು ಸ್ಪಂದಿಸದೆ ಹೋರಾಟಕ್ಕೆ ಬಂದ ಜನರ ಮನಸ್ಸಿಗೆ ಭಾರವಾದರೂ ನಮ್ಮ ಮನವಿಗೆ ವಾಪಸ್ ಮನೆಗಳಿಗೆ ತೆರಳಿದ್ದರು ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ತ್ರಿಶೂರ್‌: ಆರ್‌ಪಿಎಫ್ 54 ಲಕ್ಷ ಮೌಲ್ಯದ ಚಿನ್ನಾಭರಣ ಬೇಟೆಯಾಡಿದ್ದು ಕಾಂಡೋಮ್‌ಗಳಲ್ಲಿ ದ್ರವರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿತ್ತು. ಮಲಪ್ಪುರಂ ವೆಂಗಾಡ್ ಮೂಲದ ಮಣಿಕಂಠನ್ (35) ಬಂಧಿತ ಆರೋಪಿ. ಪರಶುರಾಮ್ ಎಕ್ಸ್ ಪ್ರೆಸ್ ನಲ್ಲಿ ಚಿನ್ನ ಕಳ್ಳಸಾಗಣೆ ಯತ್ನ ನಡೆದಿದೆ. ತ್ರಿಶೂರ್‌ಗೆ ತಂದಿದ್ದ ಚಿನ್ನವನ್ನು ರೈಲ್ವೇ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಒಂದು ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಕರಿಪುರದಲ್ಲಿ ಪೊಲೀಸರ ಚಿನ್ನದ ಬೇಟೆ ನಡೆದಿತ್ತು. ಜಿದ್ದಾದಿಂದ ಕರಿಪುರ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲು ಯತ್ನಿಸಿದ 59 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಯುವಕ ಸಿಕ್ಕಿಬಿದ್ದಿದ್ದಾನೆ. ಮಲಪ್ಪುರಂನ ವೆಂಗರಾ ಮೂಲದ ಶಂಸುದ್ದೀನ್ (29) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ 1.059 ಕೆಜಿ 24 ಕ್ಯಾರೆಟ್ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಚಿನ್ನವನ್ನು ಮಿಶ್ರ ರೂಪದಲ್ಲಿ ನಾಲ್ಕು ಕ್ಯಾಪ್ಸುಲ್‌ಗಳಲ್ಲಿ ಸಾಗಿಸಿ ದೇಹದೊಳಗೆ ಬಚ್ಚಿಡಲು ಯತ್ನಿಸಿದ್ದಾನೆ. ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್ ಸುಜಿತ್ ದಾಸ್ ಐಪಿಎಸ್ ಅವರಿಗೆ ದೊರೆತ ರಹಸ್ಯ ಮಾಹಿತಿಯ…

Read More

ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಬಿಎಂಆರ್ ಸಿಎಲ್ 20 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ. ನಗರದ ನಾಗವಾರ – ಗೊಟ್ಟಿಗೆರೆ ಮಾರ್ಗದಲ್ಲಿ ಮೆಟ್ರೋ ಮಾರ್ಗ ಕಾಮಗಾರಿ ನಡೆಯುತ್ತಿತ್ತು. ನಾಗವಾರ ಬಳಿ (ಹೆಣ್ಣೂರು ಕ್ರಾಸ್) ಮೆಟ್ರೋ ಪಿಲ್ಲರ್ ನೆಲಕ್ಕೆ ಉರುಳಿ ತಾಯಿ ತೇಜಸ್ವಿನಿ(35) ಎರಡುವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದರು. ಇದೀಗ ಬಿಎಂಆರ್ ಸಿಎಲ್ ಎಂಡಿ ಅಂಜುಂ ಪರ್ವೇಜ್ ಅವರು ಮೃತರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಇನ್ನು ಘಟನಾ ಸ್ಥಳಕ್ಕೆ ಬಿಎಂಆರ್ ಸಿಎಲ್ ನ ಎಂಡಿ ಅಂಜುಂ ಪರ್ವೇಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕನ್ನಡದ ಹಿರಿಯ ಸಾಹಿತಿ, ಲೇಖಕಿ ಡಾ.ಸಾರಾ ಅಬೂಬಕರ್(87) ಇಂದು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಮೂಲತಃ ಕಾಸರಗೋಡಿನ ಚಂದ್ರಗಿರಿ ತೀರದವರಾದ ಸಾರಾ ವಿವಾಹವಾದ ಬಳಿಕ ಮಂಗಳೂರಿನ ಹ್ಯಾಟ್ ಹಿಲ್ ಎಂಬಲ್ಲಿ ವಾಸವಾಗಿದ್ದರು. ‘ಚಂದ್ರಗಿರಿ ತೀರದಲ್ಲಿ‌’ ಕಾದಂಬರಿಯ ಮೂಲಕ ಪ್ರಸಿದ್ಧಿಗೆ ಬಂದಿದ್ದ ಸಾರಾ ಅಬೂಬಕರ್ ಅನೇಕ ಕೃತಿಗಳನ್ನು ರಚಿಸಿ ಖ್ಯಾತರಾಗಿದ್ದರು. ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮಹಿಳಾ ಧ್ವನಿಯಾಗಿದ್ದ ಸಾರಾ ಅಬೂಬಕರ್ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ನ್ಯಾಯವಾದಿ ಪಿ.ಅಹ್ಮದ್ ಮತ್ತು ಜೈನಾಬಿ ದಂಪತಿಯ ಪುತ್ರಿಯಾಗಿರುವ ಅವರು ಹುಟ್ಟೂರಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು. ಕಾಸರಗೋಡಿನಲ್ಲಿ ಹೈಸ್ಕೂಲ್ ಪೂರೈಸಿದ ಸಾರಾ ತನ್ನ ಅಜ್ಜಿ ಹೇಳುತ್ತಿದ್ದ ಕಥೆಗಳಿಂದಾಗಿ ಅವರು ಎಳೆಯದರಲ್ಲೇ ಸಾಹಿತ್ಯ ಕ್ಷೇತ್ರದತ್ತ ಆಕರ್ಷಿತರಾಗಿದ್ದರು. ಇಂಜಿನಿಯರ್ ಆಗಿದ್ದ ಅಬೂಬಕರ್ ಅವರೊಡನೆ ವಿವಾಹವಾದ ಬಳಿಕ ಅವರ ಶಿಕ್ಷಣ ಅರ್ಧದಲ್ಲೇ ಮೊಟಕುಗೊಂಡಿತು. ಸಾರಾ ಅಬೂಬಕರ್ ಅವರ ಪ್ರಥಮ ಕಾದಂಬರಿ ‘ಚಂದ್ರಗಿರಿಯ…

Read More

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಜನಾರ್ಧನ ರೆಡ್ಡಿ ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ ಎಂದು ಆಸ್ತಿ ಜಪ್ತಿಗೆ ಸಿಬಿಐ ರಾಜ್ಯ ಸರ್ಕಾರದ ಅನುಮತಿಯನ್ನು ಕಳೆದ ಆಗಸ್ಟ್ ತಿಂಗಳಿನಲ್ಲಿಯೇ ಕೇಳಿತ್ತು. ಜನಾರ್ಧನ ರೆಡ್ಡಿಯವರ 219 ಆಸ್ತಿಗಳನ್ನು ಹೊಸದಾಗಿ ಪತ್ತೆ ಹಚ್ಚಲಾಗಿದ್ದು, ಆಂಧ್ರ ತೆಲಂಗಾಣ ರಾಜ್ಯಗಳಲ್ಲಿಯೂ ಆಸ್ತಿ ಪತ್ತೆಯಾಗಿದೆ. ಹೀಗಾಗಿ ಆಸ್ತಿ ಜಪ್ತಿಗೆ ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಕೋರಿತ್ತು. ಆದರೆ ರಾಜ್ಯ ಸರ್ಕಾರ ಈವರೆಗೆ ಅನುಮತಿ ನೀಡಿಲ್ಲ. ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಿಬಿಐ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ವಿಳಂಬ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿ ಪ್ರಭಾವಿ ಎಂಬ ಕಾರಣಕ್ಕೆ ವಿಳಂಬ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ. ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿದೆ. ನಮ್ಮತುಮಕೂರು.ಕಾಂನ…

Read More

ಹೆಚ್.ಡಿ.ಕೋಟೆ: ತಾಲ್ಲೂಕಿನ ಶಂಖಹಳ್ಳಿ ಗ್ರಾಮದ ಶಂಖಮ್ಮ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಡಿಯಲ್ಲಿ ಶಂಖಮ್ಮ ದೇವಸ್ಥಾನವನ್ನು ಸ್ವಚತಾ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಯಿತು. ಮೈಸೂರು ಜಿಲ್ಲಾ ನಿರ್ದೆಶಕರಾದ ಲಕ್ಷಣ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು, ನಮ್ಮ ಊರಿನ ದೇವಸ್ಥಾನಗಳನ್ನೂ  ನಾವೇ ಶುಚಿಯಾಗಿ ಇಡಬೇಕು ಏನ್ನುವ ಉದ್ದೇಶದಿoದ ಡಾ.ಡಿ.ವೀರೇoದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕರ್ನಾಟಕದಾದ್ಯಂತ ಸಂಕ್ರಾತಿ ಹಬ್ಬದ ಪ್ರಯುಕ್ತ  ಎಲ್ಲ ದೇವಸ್ಥಾನಗಳ ಸ್ವಚ್ಛತೆಯನ್ನುಮಾಡಲು ಹಮ್ಮಿಕೂoಡಿರುತ್ತೇವೆ ಹಾಗೂ ತಾಲ್ಲೂಕಿನಲ್ಲಿ 70 ದೇವಸ್ಥಾನಗಳ ಸ್ವಚತೆ ಮಾಡಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಯೋಜನಾಧಿಕಾರಿಯವರಾದ ಶಶಿಧರ್ ಎಂ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಎಚ್.ಜಿ. ಸೇವಾಪ್ರತಿನಿದಿ ಭಾಗ್ಯಮ್ಮ ಹಾಗೂ ಶಂಖಮ್ಮ ಜ್ಞಾನವಿಕಾಸ ಸದಸ್ಯರು ಭಾಗವಹಿಸಿದರು. ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More