Subscribe to Updates
Get the latest creative news from FooBar about art, design and business.
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿನ ಹಾಹಾಕಾರ: ಸ್ಥಳಕ್ಕೆ ತಾಲೂಕು ಅಧಿಕಾರಿಗಳ ಭೇಟಿ, ಭರವಸೆ
- ಸರಗೂರು: ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ.ಪಿ. ಮಂಜುನಾಥ್ ನೇಮಕ
- ತುಮಕೂರು: ವಿಮೆ ಹಣ, ಮದ್ಯದ ಅಮಲಿಗೆ ನಡೆದಿದ್ದ 3 ಭೀಕರ ಕೊಲೆ ಕೇಸ್ ಭೇದಿಸಿದ ಪೊಲೀಸರು; 7 ಮಂದಿ ಬಂಧನ
- ಉತ್ತಮ ಆರೋಗ್ಯಕ್ಕೆ ರಕ್ತ ಪರೀಕ್ಷೆ ಸಹಕಾರಿ: ಮುರಳೀಧರ್ ಹಾಲಪ್ಪ
- ತುಮಕೂರು: ಆನ್‍ಲೈನ್ ಕೌನ್ಸಿಲಿಂಗ್ ಮೂಲಕ 41 ಸರ್ಕಾರಿ ನೌಕರರ ವರ್ಗಾವಣೆ
- ವೃದ್ದೆಯನ್ನು ಕೊಲೆ ಮಾಡಿ ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
- ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ
- ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ
Author: admin
ಸುಮಲತಾ ಬಿಜೆಪಿ ಅಸೋಸಿಯೇಟ್ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದೆ. ನನ್ನ ಪತಿ ಅಂಬರೀಶ್ 25 ವರ್ಷ ಕಾಂಗ್ರೆಸ್ ನಲ್ಲೇ ಇದ್ದರು. ಹೀಗಾಗಿ ನಾನು ಟಿಕೆಟ್ ಕೇಳಿದ್ದೆ. ಆದರೆ ಡಿ.ಕೆ. ಶಿವಕುಮಾರ್ ನಿರಾಕರಿಸಿದರು. ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಹಾಗಾದ್ರೆ ಡಿ.ಕೆ. ಶಿವಕುಮಾರ್ ಜೆಡಿಎಸ್ ಅಸೋಸಿಯೇಟಾ..? ಎಂದು ಟಾಂಗ್ ನೀಡಿದರು. ಅಂದು ಸಿದ್ಧರಾಮಯ್ಯ ನನ್ನ ಪರವಾಗಿ ಇದ್ದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ನನ್ನನ್ನು ಕೇಳದೇ ಸುಖಾ ಸುಮ್ಮನೇ ಹೇಳಿಕೆ ಕೊಡೋದು ಎಷ್ಟು ಸರಿ ಎಂದು ಸುಮಲತಾ ಅಂಬರೀಶ್ ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಂಗಳೂರು ಪೊಲೀಸರು ಭಾರೀ ಹೈಪ್ರೊಫೈಲ್ ಗಾಂಜಾ ದಂಧೆಯನ್ನು ಭೇದಿಸಿದ್ದು, ಇಬ್ಬರು ವೈದ್ಯರು, ನಾಲ್ವರು ವೈದ್ಯ ವಿದ್ಯಾರ್ಥಿನಿಯರು ಸೇರಿ 10 ಮಂದಿಯನ್ನ ಬಂಧಿಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರು ಈ ದಂಧೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ. ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಯೆನೇಪೋಯಾ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ (38) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದು ಈ ವೇಳೆ ಮತ್ತಷ್ಟು ವಿಚಾರ ಬೆಳಕಿಗೆ ಬಂದಿತ್ತು. ನೀಲ್ ಕಿಶೋರಿಲಾಲ್ ರಾಮ್‌ನ ಮಾಹಿತಿ ಆಧಾರದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಹಾಗೂ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯರಾದ ಡಾ. ಸಮೀರ್(32), ಮಣಿಮಾರನ್ ಮುತ್ತು(28)ರನ್ನು ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ (26), ಡಾ.ರಿಯಾ ಚಡ್ಡ(22), ಡಾ. ಹೀರಾ ಬಸಿನ್(23), ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ (27),…
ಚಿಕ್ಕೋಡಿ: “ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ. ಕಣ್ಣು ಕಾಣದ, ಕಿವಿ ಕೇಳದ ಬಿಜೆಪಿ ಸರಕಾರವನ್ನು ಕಿತ್ತೆಸೆಯಿರಿ,” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀಹೆಬ್ಬಾಳಕರ್ ಜನತೆಗೆ ಕರೆ ನೀಡಿದರು. ಚಿಕ್ಕೋಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಒಬ್ಬ ಮಹಿಳೆಯಾಗಿ ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿ ಮಹಿಳೆಯರು ಪಡುತ್ತಿರುವ ಸಂಕಟಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂದರು. ಇಂದು ಅಡುಗೆ ಅನಿಲ, ಬೇಳೆಕಾಳು, ಗೋದಿ ಹಿಟ್ಟು ಪ್ರತಿಯೊಂದರ ಬೆಲೆ ಗಗನಕ್ಕೇರಿದೆ. ಮನಮೋಹನ ಸಿಂಗ್ ಅವರ ಸರ್ಕಾರದಲ್ಲಿ ಸೋನಿಯಾ ಗಾಂಧಿಯವರ ಆದ್ಯತೆಯಿಂದಾಗಿ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬರದಿದ್ದರೆ ಇಂದು ಮಹಿಳೆಯರಿಗೆ ಒಂದು ಹೊತ್ತಿನ ಊಟಕ್ಕೂಗತಿಯಿರುತ್ತಿರಲಿಲ್ಲ,” ಎಂದರು. “ಮುಂಬರುವ ದಿನಗಳಲ್ಲಿ ಎಲ್ಲ ರೀತಿಯ ಜನಪರ ಯೋಜನೆಗಳನ್ನು ನೀಡಲು ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು, ರೈತರು, ಯುವಜನರು ಸಂಕಲ್ಪಿಸಬೇಕು,” ಎಂದು ಅವರು ಕರೆ ನೀಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ…
ಬೆಂಗಳೂರು: 1323 ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ. 1,122 ಹಾಗೂ ಹೈದರಾಬಾದ್ ಕರ್ನಾಟಕದ 201 ಸೇರಿ ಒಟ್ಟು 1,323 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಆಯ್ಕೆ ಪಟ್ಟಿ ಹಾಗೂ ಕಟ್ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ. 2020ರ ಮೇ 14ರಂದು ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಕಳೆದ ನವೆಂಬರ್ 25ರಂದು ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಗೊಳಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಇದೀಗ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ : ಇಂದು ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಹುಬ್ಬಳ್ಳಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಯುವಜನೋತ್ಸವ 5 ದಿನಗಳ ಕಾಲ ನಡೆಯಲಿದೆ. ಮಧ್ಯಾಹ್ನ ಮೂರು ಗಂಟೆಗೆ ಹುಬ್ಬಳ್ಳಿ ಏರ್ ಪೋರ್ಟ್ ಗೆ ಆಗಮಿಸಲಿದ್ದು, ನಾಲ್ಕು ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಹಾವೇರಿ: ದುಷ್ಕರ್ಮಿಗಳು4 ಏಕರೆ ಮೆಕ್ಕೆಜೋಳ ತೆನೆ ರಾಶಿಗೆ ಬೆಂಕಿ ಇಟ್ಟಿರುವಂತಹ ಘಟನೆ ಜಿಲ್ಲೆಯ ಹಾನಗಲ್ ತಾಲೂಕು ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಎಂಬ ರೈತನಿಗೆ ಸೇರಿದ ರಾಶಿ ಎನ್ನಲಾಗಿದೆ. ಅಂದಾಜು ಮೂರು ಲಕ್ಷಕ್ಕೂ ರೂಪಾಯಿಗೂ ಅಧಿಕ ಮೌಲ್ಯದ ತೆನೆರಾಶಿ ಬೆಂಕಿಗಾಹುತಿಯಾಗಿದೆ. ರಾತ್ರಿಯ ವೇಳೆ ಜಮೀನಿನಲ್ಲಿ ಮೆಕ್ಕೆಜೋಳ ತೆನೆಯ ರಾಶಿ ಹಾಕಲಾಗಿತ್ತು. ಈ ವೇಳೆ ದ್ವೇಷದಿಂದ ಅಪರಿಚಿತರು ರಾಶಿಗೆ ಬೆಂಕಿ ಹಾಕಿದ್ದಾರೆ ಎನ್ನಲಾಗಿದೆ. ಬೆಂಕಿ ನಂದಿಸಲು ಹರಸಾಹಸ ಪಟ್ಟರು ರಾಶಿಗಳು ಸುಟ್ಟು ಹೋಗಿವೆ. ಆಡೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಧುಗಿರಿ : ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ‘ನಮ್ಮ ಮನೆ ಸೇವಾ ಟ್ರಸ್ಟ್’ ವತಿಯಿಂದ ನೇತ್ರ ತಪಾಸಣಾ, ಕಣ್ಣಿನ ಶಸ್ತ್ರ ಚಿಕಿತ್ಸಾ ತಪಾಸಣಾ ಹಾಗೂ ಉಚಿತ ಕನ್ನಡ ವಿತರಣಾ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಎಲ್ಲಾ ಜನಾಂಗವನ್ನು ಒಳಪಟ್ಟು ಶಿಬಿರದಲ್ಲಿ 260 ಮಂದಿಗೆ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ನೀಡಿದರು. ಉಚಿತ ಕಣ್ಣಿನ ಪೊರೆ ತಪಾಸಣೆ ನಡೆಸಿ ಕನ್ನಡಕ ಅವಶ್ಯಕತೆ ಇರುವವರಿಗೆ ಈ ದಿನ ಒಟ್ಟಾರೆ 162 ಉಚಿತ ಕನ್ನಡಕ ಸ್ಥಳದಲ್ಲೇ ವಿತರಿಸಲಾಯಿತು ಮತ್ತು 42 ಜನರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವುಳ್ಳವರಿಗೆ ನಿಗದಿತ ದಿನಾಂಕಕ್ಕೆ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ಮಾಡಿಸಲು ನಿರ್ಧರಿಸಲಾಗಿದೆ. ಮನುಷ್ಯನಿಗೆ ಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು. ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಸೂಕ್ಷ್ಮ ಅಂಗ ಕಣ್ಣು ಬದುಕಿಗೆ ಬೆಳಕಾಗಿರಬೇಕಾದರೆ ಹಿರಿಯರಿಗೆ ಮಕ್ಕಳು ಇಂತಹ ಉಚಿತ ತಪಾಸಣೆಗೆ ಕರೆತರುವ ಮೂಲಕ ಹಿರಿಯರ ಸೇವೆಗೆ…
ಬೆಂಗಳೂರು : ಮುಂಬರುವಂತ ದಿನಗಳಲ್ಲಿ 25 ತಾಲ್ಲೂಕುಗಳಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರ್ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ಧ ಉಡುಪು ತಯಾರಿಕೆವರೆಗಿನ ಎಲ್ಲ ಹಂತಗಳ ಸೌಲಭ್ಯಗಳನ್ನು ಒಳಗೊಂಡ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸುವ ಮೂಲಕ ನೇಕಾರರಿಗೆ ಅನುಕೂಲ ಮಾಡಿಕೊಡುವಂತೆ ಅವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ : 2022-23ನೇ ಸಾಲಿಗೆ 21 ರಿಂದ 50 ವರ್ಷದೊಳಗಿನ ಅರ್ಹ ಪರಿಶಿಷ್ಟ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ, ಜಿಲ್ಲಾ ಕಚೇರಿ ವತಿಯಿಂದ ಅರ್ಹ ಫಲಾಪೇಕ್ಷಿಗಳಿಂದ ಸೇವಾಸಿಂಧು ಪೋರ್ಟಲ್ ಮೂಲಕ ವಿವಿಧ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಸಣ್ಣ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆ ಘಟಕದಡಿ ವೆಚ್ಚ ಗರಿಷ್ಟ ರೂ.1 ಲಕ್ಷಗಳು ಇದರಲ್ಲಿ 50% ಅವಧಿ ಸಾಲ ಮತ್ತು 50% ಸಹಾಯಧನ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಐ.ಎಸ್.ಬಿ)-1: ಇ.ವಿ ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ (ಇ-ಕಾಮರ್ಸ್‍ನಡಿಯಲ್ಲಿ ಕಂಪನಿಗಳಿಂದ ಗ್ರಾಹಕರಿಗೆ ಸರಕು ತಲುಪಿಸಲು) ಗರಿಷ್ಟ ರೂ.50 ಸಾವಿರ ಸಹಾಯಧನ ಹಾಗೂ ರೂ. 20 ಸಾವಿರ ಸಾಲ ಮಂಜೂರು ಮಾಡಲಾಗುವುದು ಅದೇ ರೀತಿಯಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ಗರಿಷ್ಟ ರೂ. 3.50 ಲಕ್ಷ, ಸಹಾಯಧನ ಉಳಿದ ಮೊತ್ತ ಬ್ಯಾಂಕ್ ಸಾಲ ಮಂಜೂರು ಮಾಡಲಾಗುವುದು. ಅರ್ಜಿ ಸಲ್ಲಿಸಬೇಕಾದ ದಾಖಲಾತಿಗಳು: ಜಾತಿ ಮತ್ತು ಆದಾಯ…
ಹುಬ್ಬಳ್ಳಿ: ಫೆಬ್ರವರಿ 17 ರಂದು ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ ಮೂರನೇ ವಾರ ಬಜೆಟ್ ಮಂಡಿಸುವುದಾಗಿ ತಿಳಿಸಿದ್ದಾರೆ. ಚುನಾವಣೆ ಸಮೀಪದಲ್ಲಿ ಇರುವುದರಿಂದ ಈ ಬಾರಿ ಬಜೆಟ್ ನಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಕಳೆದ ಬಜೆಟ್ ನಲ್ಲಿ ಘೋಷಣೆಯಾದ ಯೋಜನೆಗಳ ಅನುಷ್ಠಾನ, ಅನುದಾನ ಕುರಿತಾಗಿ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy