Author: admin

ಬೆಂಗಳೂರು : ಸೆಪ್ಟೆಂಬರ್ 12 ರಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದ್ದು, ಸೆಪ್ಟೆಂಬರ್ 12 ರಿಂದ 10 ದಿನಗಳ ವಿಧಾನಮಂಡಲ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಾಜ್ಯದ ಹೆಚ್ಚಿನ ಶಿಕ್ಷಕಿಯರಿಗೆ ಅನಾರೋಗ್ಯ ಕಾಡುತ್ತಿದೆ. ಶಿಕ್ಷಣ, ಆರೋಗ್ಯ ಇಲಾಖೆಯ ಜಂಟಿ ಸಮೀಕ್ಷೆಯಲ್ಲಿ ಬಹುತೇಕರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಕಂಡುಬಂದಿದೆ. ಶೇ.06 ಮಂದಿಯಲ್ಲಿ ಸ್ತನ, ಬಾಯಿ, ಗರ್ಭಕೋಶದ ಕ್ಯಾನ್ಸರ್ ಪತ್ತೆಯಾಗಿದೆ. ಒಟ್ಟು 2,20,066 ಸರ್ಕಾರಿ ಶಿಕ್ಷಕರ ಪೈಕಿ 60% ಮಂದಿ ಶಿಕ್ಷಕಿಯರಾಗಿದ್ದಾರೆ. ‘ವ್ಯಾಯಾಮ ಕೊರತೆ, ಕೆಲಸದ ಒತ್ತಡ, ಮನೆಯ ಆರ್ಥಿಕ ಸ್ಥಿತಿಯೇ ಇದಕ್ಕೆ ಕಾರಣ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಒಳ್ಳೆಯದು’ ಎಂಬುದು ವೈದ್ಯರ ಸಲಹೆ. ಇಂದಿನ ಆಹಾರ ಪದ್ದತಿ, ಮಾನಸಿಕ ಒತ್ತಡ, ಜೀವನ ಶೈಲಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ಜನರು ಬಹುಬೇಗ ತುತ್ತಾಗುತ್ತಿದ್ದಾರೆ. ಆರೋಗ್ಯ ತಪಾಸಣೆಗೆ ಒಳಗಾದರೆ ವೈದ್ಯರು ಕಾಯಿಲೆ ಇದೆ ಎಂದು ಎಲ್ಲಿ ಹೇಳಿಬಿಡುತ್ತಾರೋ ಎಂಬ ಭಯದಿಂದಾಗಿ ಬಹಳಷ್ಟು ಜನರು ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೋಗ ಉಲ್ಭಣಿಸಿದ ನಂತರ ಪಡಿಪಾಟಲು ಪಡುವ ಪರಿಸ್ಥಿತಿ ಉಂಟಾಗುತ್ತಿದೆ. ಇದು ಮನುಷ್ಯನ ಆರೋಗ್ಯದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು. ಪ್ರತಿಯೊಬ್ಬರೂ ಭಯ ತೊರೆದು…

Read More

ಇಟಲಿಯ ಓರ್ವ ವ್ಯಕ್ತಿಗೆ ಮೂರು ಮಾರಕ ವೈರಸ್ ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ. ಆತನಿಗೆ ಕೊರೋನಾ, ಮಂಕಿಪಾಕ್ಸ್ & ಎಚ್‌ಐವಿ ಬಾಧಿಸಿವೆ. ಇತ್ತೀಚೆಗೆ, ಆತ ಸ್ಪೇನ್‌ನಲ್ಲಿ ಬೇರೊಬ್ಬ ಯುವಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಹೊಂದಿದ್ದ ಎಂದು ವೈದ್ಯರು ತಿಳಿಸಿದ್ದಾರೆ. 9 ದಿನಗಳ ನಂತರ ಕೋವಿಡ್, ಮಂಕಿಪಾಕ್ಸ್ ಮತ್ತು ಎಚ್‌ಐವಿ ಲಕ್ಷಣಗಳು ಕಾಣಿಸಿಕೊಂಡಿದ್ದವು. ಪರೀಕ್ಷೆ ನಡೆಸಿದಾಗ ಆತನಲ್ಲಿ ಮೂರು ವೈರಸ್‌ಗಳು ದೃಢಪಟ್ಟಿವೆ. ಅಲ್ಲಿಂದ ಮರಳಿ ಮನೆಗೆ ಬಂದವನೇ ಜ್ವರ, ಕಂಟಲು ನೋವು ಎಂದು ಮಲಗಿಬಿಟ್ಟಿದ್ದ. ವೈದ್ಯರಿಗೆ ತೋರಿಸಿದಾಗ ಕೊರೊನಾ ಪರೀಕ್ಷೆ (Covid 19 Test) ಮಾಡಿಸಿದ. ಪರೀಕ್ಷೆಯಲ್ಲಿ ಪಾಸಿಟಿವ್ ಬಂತು.ಕೊವಿಡ್ ಬಂತು ಅಂದುಕೊಂಡು ಎರಡೇ ದಿನಕ್ಕೆ ದೇಹದ ಭಾಗಗಳಲ್ಲಿ ಗುಳ್ಳೆಗಳು ಏಳಲಾರಂಭಿಸಿದವು. ಆ ಗುಳ್ಳೆಗಳು ನೋಯುತ್ತಿದ್ದವು. ಆಸ್ಪತ್ರೆಯಲ್ಲಿ ಒಂದು ವಾರದ ಚಿಕಿತ್ಸೆ ಪಡೆದುಕೊಂಡ ವ್ಯಕ್ತಿಯ ಆರೋಗ್ಯ ಸದ್ಯ ಸ್ಥಿರವಾಗಿದೆ. ಕೋವಿಡ್-19 ಮತ್ತು ಮಂಕಿಪಾಕ್ಸ್‌ನಿಂದ ಚೇತರಿಸಿಕೊಂಡ ನಂತರ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಹೆಚ್​ಐವಿ ಸೋಂಕು ಮಾತ್ರ ಹಾಗೇ ಇದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಬೆಂಗಳೂರು: ಶಾಲೆಗಳಲ್ಲಿ ವಿನಾಯಕನ ಪ್ರತಿಷ್ಠಾಪನೆಗೆ ಯಾವುದೇ ನಿರ್ಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಲೆಗಳಲ್ಲಿ ಗಣೇಷ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧವಿಲ್ಲ. ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯುತ್ತಿದೆ. ಮುಂದೆಯೂ ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯಲಿದೆ ಎಂದರು. ಶಾಲೆಗಳಲ್ಲಿ ಈ ಪದ್ಧತಿಯು ಬಾಲಗಂಗಾಧರ ತಿಲಕ್ ಕಾಲದಿಂದಲೂ ಇದೆ. ಆದರೇ ಯಾವುದೇ ನಮಾಜ್, ಕೃಷ್ಣ ಪೂಜೆ, ಅಯ್ಯಪ್ಪ ಪೂಜೆ, ಕ್ರೈಸ್ತರ ಪ್ರಾರ್ಥನೆಗೆ ಶಾಲೆಗಳಲ್ಲಿ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ: ನೊಣದ ಕಾಟದಿಂದ ತಪ್ಪಿಸಿಕೊಳ್ಳಲು ಗ್ರಾಮಸ್ಥರು ಊರು ತೊರೆದ ಘಟನೆ ನಡೆದಿದ್ದು, ಕೊರಟಗೆರೆ ತಾಲೂಕಿನ ಬೋಮ್ಮಲದೇವಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತೊಗರಿಘಟ್ಟ ಗ್ರಾಮದ ಪಕ್ಕ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕೋಳಿ ಫಾರಂನಿಂದಾಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕೋಳಿಗಳನ್ನು ಈ ಕೋಳಿ ಸಾಕಾಣಿಕೆ ಫಾರಂ ಸಾಕಲಾಗುತ್ತಿದೆ. ಪಕ್ಕದಲ್ಲಿಯೇ ಶ್ರೀ ಆದಿ ತಿಮ್ಮಪ್ಪ ದೇವಸ್ಥಾನ ಇದ್ದು, ಈ ಭಾಗದ ಸುತ್ತ ಮುತ್ತಲಿನ ಸುಮಾರು 15-20 ಗ್ರಾಮದವರು ಮದುವೆ, ಮುಂಜಿ, ನಾಮಕರಣ ಸೇರಿದಂತೆ ಇಂತಹ ಶುಭ ಸಮಾರಂಭಗಳನ್ನು ಮಾಡುತಿದ್ದರು. ಆದರೆ ಈ ಕೋಳಿ ಫಾರಂ ಆದಾಗಿನಿಂದ ನೊಣಗಳಕಾಟ ಹಾಗೂ ಗೊಬ್ಬರದ ಗಬ್ಬುನಾತ ಬೀರುತ್ತಿದೆ. ಈ ದುರ್ವಾಸನೆಗೆ ತೊಗರಿಘಟ್ಟ,ಮುದ್ದನಹಳ್ಳಿ ಬಿ.ಡಿ.ಪುರ ದುಗ್ಗೆನಹಳ್ಳಿ, ಶಕುನಿತಿಮ್ಮನಹಳ್ಳಿ , ಸೇರಿದಂತೆ ಸುಮಾರು ಹದಿನೈದು ಇಪ್ಪತ್ತು ಹಳ್ಳಿಗಳ ಜನರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜನ ಮಾತ್ರವಲ್ಲದೇ ಜಾನುವಾರುಗಳು ಕೂಡ ನೊಣದ ಕಾಟದಿಂದ ಸಂಕಷ್ಟಕ್ಕೀಡಾಗಿದೆ. ಕುರಿ, ಮೇಕೆಗಳ ಕಣ್ಣು ಮೂಗು ಬಾಯಿ ಮೇಲೆ ನೋಟಗಳ ಕಾಟದಿಂದ…

Read More

ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಕ್ಯಾತಗಾನಹಳ್ಳಿ ಗ್ರಾಮದ ರಂಗಪ್ಪನ ಮಗ ಮಹೇಶ್ ಎನ್ನುವ 35 ವರ್ಷದ ರೈತ ನಿನ್ನೆ ಸಂಜೆ ಮನೆಯಿಂದ ತನ್ನ ತೋಟಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಟಿದ್ದ ಮಹೇಶ್ ರಾತ್ರಿ 8ಗಂಟೆಯಾದರೂ ಮನೆಗೆ ಬರಲಿಲ್ಲ . ಮಹೇಶ್ ಪತ್ನಿ ಅನೇಕ ಬಾರಿ ಮಹೇಶ್ ಫೋನ್ ಗೆ ಕರೆ ಮಾಡಿದರೂ ಫೋನ್ ಸ್ವೀಕರಿಸದ ಕಾರಣ ಅನುಮಾನಗೊಂಡ ಕುಟುಂಬಸ್ಥರು . ತೋಟದ ಕಡೆ ಹುಡುಕಾಟ ನಡೆಸಿದ್ದು, ಅವರಿಗೆ ಅಕ್ಕಪಕ್ಕದ ಮನೆಯವರೂ ಹುಡುಕಾಟಕ್ಕೆ ಸಹಕಾರ ಮಾಡಿದ್ದಾರೆ. ತೋಟದ ಬಳಿ ಹೋಗಿ ನೋಡಿದಾಗ ಮಹೇಶ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವುದು ಕಂಡು ಬಂದಿತ್ತು. ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಬೆಸ್ಕಾಂ ಇಲಾಖೆಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ ವಿಷಯ ತಿಳಿದ ಕೋಳಾಲ ಬೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರದೆ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯತನ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಹೇಶ್ ಮದುವೆಯಾಗಿ ವರ್ಷ ಕೂಡ ಕಳೆದಿಲ್ಲ ಇದಕ್ಕೆಲ್ಲ ಕಾರಣ ಬೆಸ್ಕಾಂ ಇಲಾಖೆ ಅಧಿಕಾರಿಗಳೆಂದು ಮಹೇಶ್ ಸ್ನೇಹಿತರು…

Read More

ಬೆಂಗಳೂರು: ಬ್ರಿಟನ್ನಿನಲ್ಲಿದ್ದಾಗ ಸಾವರ್ಕರ್ ಗೋ ಮಾಂಸ ತಿಂದಿದ್ದರು, ಅವರು ಗೋಪೂಜೆಯನ್ನು ವಿರೋಧಿಸುತ್ತಿದ್ದರು ಎಂದು ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗೋವು ಮಾತೆಯಲ್ಲ, ಅದು ಅದರ ಕರುವಿನ ಮಾತೆ ಎಂದು ಸಾವರ್ಕರ್​ ಹೇಳಿದ್ದರು. ಭಗತ್ ಸಿಂಗ್ ನಿಜವಾದ ದೇಶಭಕ್ತರು, ಸಾವರ್ಕರ್​ ಅಲ್ಲ. ರವಿಕುಮಾರ್ ಇದರ ಇತಿಹಾಸವನ್ನು ಓದಿಕೊಳ್ಳಲಿ ಎಂದಿದ್ದಾರೆ. ಇನ್ನು ಜನೋತ್ಸವ ಮಾಡಲು ಸರ್ಕಾರದ ಪ್ರಯತ್ನ ನಡೆದಿತ್ತು. ಜನರ ಆಕ್ರೋಶದಿಂದ ಎರಡು ಮೂರು ಬಾರಿ ಮುಂದೂಡಿಕೆಯಾಗಿದೆ. ಇದೀಗ ಜನೋತ್ಸವ ಬಿಟ್ಟು ಸಾವರ್ಕರ್​​ ಉತ್ಸವ ಮಾಡುತ್ತಿದ್ದಾರೆ. ಬಿಜೆಪಿಯವರದ್ದು ವಾಟ್ಸಾಪ್ ಯೂನಿರ್ಸಿಟಿ ಹಾಗಾಗಿ ಅದರಲ್ಲಿ ಏನೂ ಇರುವುದಿಲ್ಲ ಎಂದು ಕಿಡಿಕಾರಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಧಾರವಾಡ: ಖಾಸಗಿ‌ ಬಸ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲಿಯೇ ಲಾರಿ ಕ್ಲೀನರ್ ಸಾವನ್ನಪ್ಪಿರುವ ಘಟನೆ ಧಾರವಾಡ ಹೊರವಲಯದ ಹಳಿಯಾಳ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಖಾಸಗಿ‌ ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಶೀಘ್ರದಲ್ಲೇ ಕೇಂದ್ರ ಸರ್ಕಾರ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲಿದೆ. ಇದರರ್ಥ ಇನ್ನು ಮುಂದೆ ಟೋಲ್ ಸಂಗ್ರಹ ಇರುವುದಿಲ್ಲವೆ? ಅಲ್ಲ, ಆದರೆ ಟೋಲ್ ಗೇಟ್ ಇರುವುದಿಲ್ಲ.. ಟೋಲ್ ಸಂಗ್ರಹ ಇರುತ್ತದೆ. ಮತ್ತು ಟೋಲ್ ಪ್ಲಾಜಾಗಳನ್ನು ತೆಗೆದುಹಾಕಿದರೆ, ಸಂಗ್ರಹಗಳು ಹೇಗೆ ಮಾಡುತ್ತವೆ ಎಂಬ ಅನುಮಾನ ಬರಬಹುದು. ಆದರೆ ತಂತ್ರಜ್ಞಾನ ಅಭಿವೃದ್ಧಿಯ ಭಾಗವಾಗಿ ಏನು ಬೇಕಾದರೂ ಆಗಬಹುದು. ಸರಕಾರವು ಅದರ ಭಾಗವಾಗಿ FASTAG ವ್ಯವಸ್ಥೆಯನ್ನು ಲಭ್ಯಗೊಳಿಸಿದೆ. ಆದರೆ ಇದು ಇನ್ನು ಮುಂದೆ ಇರುವುದಿಲ್ಲ. ಆದರೆ, ನೇರವಾಗಿ ಬ್ಯಾಂಕ್ ಖಾತೆಯಿಂದ ಟೋಲ್ ಸಂಗ್ರಹ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಟೋಲ್ ಪ್ಲಾಜಾಗಳಿಲ್ಲದೆ ದಟ್ಟಣೆ ಕಡಿಮೆಯಾಗಲಿದೆ. ಟೋಲ್ ಪ್ಲಾಜಾಗಳಿಲ್ಲದಿದ್ದರೆ ಏನಾಗಬಹುದು? ಇದರಿಂದ ವಾಹನ ಸವಾರರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅದೇ ಪ್ರೇರಣೆಯಿಂದ ಕೇಂದ್ರ ಸರ್ಕಾರವು ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಯೋಜನೆಗೆ ಹೆಜ್ಜೆ ಹಾಕುತ್ತಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಟೋಲ್ ಪ್ಲಾಜಾಗಳಿಲ್ಲದಿದ್ದರೆ, ಟೋಲ್…

Read More

ವಡಗಾವಿಯ ತೆಗ್ಗಿನಗಲ್ಲಿ ನಿವಾಸಿ ಶೋಭಾ ವಲ್ಲೇಪೂರಕರ ಅನ್ನುವ 40 ವರ್ಷದ ಮಹಿಳೆ ಆಗಸ್ಟ್ 21 ರಂದು ಬೆಳಿಗ್ಗೆ 8:7 ಗಂಟೆಗೆ ಶಹಾಪೂರದಲ್ಲಿರುವ ಚಂದ್ರಕಲಾ ಹೇಡಾ ಇವರ ಮನೆಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಮಹಿಳೆ ಚಹರೆ:4 ಅಡಿ 8 ಇಂಚು ಎತ್ತರ, ದುಂಡು ಮುಖ, ಗಿಡ್ಡ ಮೂಗು, ಸಡಪಾತಾಳ ಮೈಕಟ್ಟು, ಗೋದಿಗೆಂಪು ಮೈಬಣ್ಣ ಹೊಂದಿರುವ ಮಹಿಳೆ ನಾಪತ್ತೆ ವೇಳೆಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಸಾಡಿ ಹಳದಿ ಬಣ್ಣದ ಜಂಪರ್ ಧರಿಸಿದ್ದಳು.. ಕನ್ನಡ, ಹಿಂದಿ, ತೆಲಗು, ಮರಾಠಿ ಭಾಷೆ ಬಲ್ಲ ಮಹಿಳೆ ಸುಳಿವು ಸಿಕ್ಕವರು ತಕ್ಷಣವೇ ಶಹಾಪೂರ ಪೊಲೀಸ್ ಠಾಣೆ ದೂರವಾಣ ಸಂಖ್ಯೆ 9480804046, 0831-2405233 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲ ತಿಳಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More