ನಂದಿನಿ ಬ್ರಾಂಡ್ನ ಹಲವು ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ತುಪ್ಪದ ದರವನ್ನು ಹೆಚ್ಚಿಸಿದೆ.
ಎರಡೂವರೆ ತಿಂಗಳಲ್ಲಿ ಒಂದು ಲೀಟರ್ ತುಪ್ಪದ ಬೆಲೆ ಬರೋಬ್ಬರಿ 180 ರೂ. ಹೆಚ್ಚಳವಾಗಿದ್ದು, ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ನಂದಿನಿ ತುಪ್ಪ ಈಗ ಬಿಸಿ ತುಪ್ಪವಾಗಿ ಪರಿಣಮಿಸಿದೆ.
2022ರ ಆಗಸ್ಟ್ 22 ರಂದು 450 ರೂ.ಗೆ ಮಾರಾಟವಾಗಿದ್ದ ಒಂದು ಲೀಟರ್ ನಂದಿನಿ ತುಪ್ಪ ಈಗ ಲೀಟರ್‌ಗೆ 630 ರೂ.ಗೆ ಮಾರಾಟವಾಗುತ್ತಿದೆ. ಹಬ್ಬದ ಋತು ಆರಂಭವಾಗುವ ಪೂರ್ವದಲ್ಲಿ ಒಂದು ಲೀಟರ್ ತುಪ್ಪ 450 ರೂ.ಗೆ ಮಾರಾಟ ಮಾಡಲಾಗಿತ್ತು. ಹಬ್ಬದ ಋತುವಿನಲ್ಲಿ ಕೆಎಂಎಫ್ ನಿಯಮಿತವಾಗಿ ತುಪ್ಪದ ಬೆಲೆ ಏರಿಕೆಯನ್ನು ಪ್ರಾರಂಭಿಸಿತು.
ನಂದಿನಿ ತುಪ್ಪ ಸೆಪ್ಟೆಂಬರ್ ಮೊದಲ ವಾರ ಲೀಟರ್‌ಗೆ 470 ರೂ.ಗೆ ಮಾರಾಟವಾಗುತ್ತಿತ್ತು. ಅಕ್ಟೋಬರ್‌ನಲ್ಲಿ ಒಂದು ಲೀಟರ್ ತುಪ್ಪವನ್ನು 518 ರೂ.ಗೆ ಮಾರಾಟ ಮಾಡಲಾಗಿತ್ತು. ಈಗ ಕಳೆದ ಒಂದು ವಾರದಿಂದ 620 ರೂ.ನಿಂದ 630 ರೂ.ಗೆ ಮಾರಾಟವಾಗುತ್ತಿದೆ ಎಂದು ಕೆಎಂಎಫ್ ರೀಟೇಲ್ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ 113 ರೂ.ಗೆ ಮಾರಾಟವಾದ 200 ಮಿಲಿಮೀಟರ್ ನಂದಿನಿ ತುಪ್ಪದ ಸ್ಯಾಚೆ ಈಗ 135 ರೂ. ಬೆಲೆಯಿದೆ. ಪೆಟ್ ಬಾಟಲ್ ಬೆಲೆಯೂ 122 ರೂ.ನಿಂದ 145 ರೂ.ಗೆ ಏರಿಕೆಯಾಗಿದೆ.
ಅದೇ ರೀತಿ 259 ರೂ.ಗೆ ಲಭ್ಯವಿದ್ದ ಅರ್ಧ ಲೀಟರ್ ಸ್ಯಾಚೆ ಈಗ 305 ರೂ.ಗೆ ಮಾರಾಟವಾಗುತ್ತಿದ್ದು, ಅದೇ ಪ್ರಮಾಣದ ಪೆಟ್ ಬಾಟಲ್ ಅನ್ನು ಹಿಂದೆ 268 ರೂ.ಗಳಿಗೆ ಮಾರಾಟ ಜನಕ ಮಾಡಲಾಗುತ್ತಿತ್ತು, ಈಗ 315 ರೂ.ಗೆ ಮಾರಾಟವಾಗುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy