Subscribe to Updates
Get the latest creative news from FooBar about art, design and business.
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
- ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ
- ರಾಜ್ಯ ಮಟ್ಟದ ಕನ್ನಡ ಸೇವಾರತ್ನ ಪ್ರಶಸ್ತಿಗೆ ಡಾ.ಸತ್ಯಕ್ಕ ಗಡ್ಡೆ ಆಯ್ಕೆ
- ನರಹಂತಕ ವ್ಯಾಘ್ರನ ಸೆರೆ: ಜನರ ನಿದ್ದೆಗೆಡಿಸಿದ 9 ವರ್ಷದ ಹುಲಿಯನ್ನು ಹಿಡಿದ ಅರಣ್ಯ ಇಲಾಖೆ
- ನರಹಂತಕ ಹುಲಿಯ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ: ಡ್ರೋನ್ ಕ್ಯಾಮೆರಾದಲ್ಲಿ ಹುಲಿ ಪತ್ತೆ!
- ಮಧುಗಿರಿ: ಎರಡು ವರ್ಷದ ಚಿರತೆ ಸೆರೆ
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಕನಕದಾಸರ ಕೊಡುಗೆ ಅಪಾರ: ಪ.ಪಂ. ಅಧ್ಯಕ್ಷ ಶಿವಕುಮಾರ್
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
Author: admin
ನಟ ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ‘ಲಕ್ಕಿ ಮ್ಯಾನ್’ ಸಿನಿಮಾ ಸೆ.9ರಂದು ಬಿಡುಗಡೆಯಾಗುತ್ತಿದೆ. ‘ಈ ಅವಕಾಶವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ’ ಎಂದು ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ. ‘ಸಿನಿಮಾ ರಿಲೀಸ್ ಆದಾಗ ಪ್ರತಿಯೊಬ್ಬರು ಎರಡೂ ಕೈಗಳನ್ನು ಬಾಚಿ ತಬ್ಬಿಕೊಂಡು ನೋಡಿ. ಯಾಕೆಂದರೆ, ಮತ್ತೆ ಬೇಕು ಎಂದರೂ ಇದು ಸಿಗಲ್ಲ. ಚಿತ್ರದಲ್ಲಿ ಅಪ್ಪು ದೇವರ ಪಾತ್ರ ಮಾಡಿದ್ದಾರೆ. ಅದೊಂದು ನಂಬಿಕೆ. ಅವರು ಬದುಕಿದ ರೀತಿಯೇ ಅದು. ಅವರಿಗೆ ಈ ಸಿನಿಮಾ ಹೆಚ್ಚು ಹೊಂದಿಕೆ ಆಗುತ್ತದೆ’ ಎಂದಿದ್ದಾರೆ. ಇರುವಾಗ ನಾವು ಬೆಲೆ ಕೊಡುತ್ತೇವೆ. ಕಳೆದುಕೊಂಡ ನಂತರ ಅದಕ್ಕೆ ಇನ್ನೂ ಜಾಸ್ತಿ ಬೆಲೆ ಕೊಡುತ್ತೇವೆ. ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರು ದೇವರ ಪಾತ್ರ ಮಾಡಿದ್ದಾರೆ. ಅದೊಂದು ನಂಬಿಕೆ. ಅವರು ಬದುಕಿದ ರೀತಿಯೇ ಆಗಿತ್ತು. ನಾವೆಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಟ್ರೇಲರ್ ನೋಡುವಾಗ ನಾನು ಸ್ಮೈಲ್ ಮಾಡುತ್ತಿದ್ದೆ. ಯಾಕೆಂದರೆ ಅವರಿಗೆ ಈ ಸಿನಿಮಾ ಹೆಚ್ಚು ಹೊಂದಿಕೆ ಆಗುತ್ತಿದೆ. ಎಲ್ಲರೂ ಈ ಸಿನಿಮಾವನ್ನು ತಬ್ಬಿಕೊಂಡು ಅನುಭವಿಸಿ’ ಎಂದು…
ಬಳ್ಳಾರಿ: ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಕೌಲ್ ಬಜಾರ್ ಫ್ಲೈಓವರ್ ಮೇಲೆ ನಡೆದಿದೆ. ಘಟನೆಯಲ್ಲಿ ದಂಪತಿ ಹಾಗೂ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ವೀರೇಶ್, ಪತ್ನಿ ಅಂಜಲಿ ಹಾಗೂ ಮಗು ದಿನೇಶ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಅದು ಒಂದೇ ಕುಟುಂಬ, ಒಂದೇ ಬುಡಕಟ್ಟು,ಒಂದೇ ಮನೆ ದೇವರಿಗೆ ಪೂಜೆ ಮಾಡೋ ಕುಟುಂಬವದು,ಒಟ್ಟು 20 ಕುಟುಂಬ ಇರುವವರಿಗೆ ಅದೊಂದು ಶಾಪ ಕಾಡುತ್ತಿದೆ,ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಅವರ ಮನೆತನದಲ್ಲಿ ಸಾವುವಾಗುತ್ತಿದೆ. ಅದು ಕೂಡ ಕೇವಲ ಅರ್ಧ ಕಿಲೋಮೀಟರ್ ದೂರದ ಅಂತರದಲ್ಲಿ, ಇಷ್ಟಕ್ಕೂ ಏನದು ಯಾಕೆ ಅಂತೀರಾ ,ಈ ವರದಿ ನೋಡಿ.. ಹೌದು..ನಾವು ಇವತ್ತು ಹೇಳಲು ಹೋರಟಿರೋ ಸ್ಟೋರಿ ನಿಜಕ್ಕೂ ನಂಬಲಾರದ, ಊಹೆಗೂ ನಿಲುಕದ ಸಂಗತಿ, ಈ ಸಂಗತಿಗಳನ್ನು ಕೇಳಿದ್ರೇ ನೀವು ಬೆಚ್ಚಿಬೀಳೋದು ಗ್ಯಾರಂಟಿ. ಇದು ಕಲ್ಪತರು ನಾಡು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ತೊಗರಿಘಟ್ಟ ಗ್ರಾಮ. ಗ್ರಾಮದಲ್ಲಿ ದೊಡ್ಡ ದೊಡ್ಡ ಕುಟುಂಬಗಳು ವಿದ್ಯಾವಂತರು ಇರೋದು ಸಹಜ, ಹೀಗಿರುವಾಗ ಆ ಒಂದು ಮನೆತನದಲ್ಲಿ ಪ್ರತಿ ನಾಲ್ಕು ಅಥವಾ ಐದು ವರ್ಷಕ್ಕೆ ಒಂದು ಅನಾಹುತ ನಡೆದುಹೋಗುತ್ತಿದೆ. ಅಂದುಕೊಳ್ಳದಿದ್ದ ರೂಪದಲ್ಲಿ ಸಾವು ಎದುರಾಗುತ್ತಿದೆ. ಈ ಗ್ರಾಮದ ಧರ್ಮಣ್ಣ ಎನ್ನೋವವರ ಕುಟುಂಬ, ದೊಡ್ಡ ಕುಟುಂಬ. ಒಟ್ಟು20 ಕುಟುಂಬ ಅಣ್ಣ ತಮ್ಮಂದಿರು ಇದ್ದಾರೆ. ಈ ಮೊದಲು ಎಲ್ಲಾರೂ ಒಂದಾಗೇಯೇ ಇದ್ದರು.…
ಹಿರಿಯೂರು: ಸರ್ಕಾರ ಬುಡಕಟ್ಟು ಹಿನ್ನೆಲೆ ಹೊಂದಿರುವ ಕಾಡುಗೊಲ್ಲ ಜನಾಂಗವನ್ನು ಅವಮಾನಿಸುತ್ತಿರುವುದು ನಿಜಕ್ಕೂ ಸಹ ನೋವಿನ ಸಂಗತಿ ಎಂದು ಕಾಡುಗೊಲ್ಲ ಮುಖಂಡರಾದ ಗೋಪಿ ಯಾದವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಕಾಡು ಗೊಲ್ಲರನ್ನು ಕಡೆಗಣಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಿ 15ರಿಂದ 18 ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಸಮುದಾಯ ಗೆಲ್ಲಿಸಿದೆ. ಆದರೆ ಅಧಿಕಾರ ದೊರಕಿದ ಬಳಿಕ ಬಿಜೆಪಿ ಸಮುದಾಯವನ್ನು ಕಡೆಗಣಿಸಿದೆ ಎಂದರು. ಸರ್ಕಾರವು ಕಾಡುಗೊಲ್ಲರ ಅಭಿವೃದ್ಧಿ ನಿಗಮ ಘೋಷಿಸಿದೆಯಾದರೂ ಈವರೆಗೆ ಅದಕ್ಕೆ ಅಧ್ಯಕ್ಷರನ್ನೂ ನೇಮಕ ಮಾಡದೇ ಪದೇ ಪದೇ ಕುಂಟು ನೆಪ ಹೇಳುತ್ತಾ ಸಮುದಾಯವನ್ನು ಅವಮಾನಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಾಡುಗೊಲ್ಲರು 18 ಲಕ್ಷ ಜನಸಂಖ್ಯೆ ಇದ್ದರೂ, ಅವರ ಅಭಿವೃದ್ಧಿಗೆಂದು ಮೂರು ನಾಮ ಹಾಕಿದಂತೆ ಕೇವಲ 3 ಕೋಟಿ ಅನುದಾನ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕಾಡುಗೊಲ್ಲ ರಿಗೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನಕ್ಕೆ ತರಲಾಗಿತ್ತು. ಆ ಸಂದರ್ಭದಲ್ಲಿ ಜಯಮ್ಮ ಬಾಲರಾಜ್…
ತುಮಕೂರು: ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಬ್ರೇಕ್ ಫೈಲ್ ಆದ ಪರಿಣಾಮ ಡಿವೈಡರ್ ಗೆ ಡಿಕ್ಕಿಯಾಗಿ ಮಗುಚಿ ಬಿದ್ದ ಘಟನೆ ರಿಂಗ್ ರೋಡ್ ನಲ್ಲಿ ನಡೆದಿದೆ. ಬೆಳಗ್ಗಿನ ಜಾವ 5:45ರ ಸುಮಾರಿಗೆ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಲಾರಿಯು ಕನಕಪುರಕ್ಕೆ ಸಿಮೆಂಟ್ ತುಂಬಿಕೊಂಡು ಹೋಗುತ್ತಿತ್ತು ಎನ್ನಲಾಗಿದೆ. ಬ್ರೇಕ್ ಫೈಲ್ ಆದ ಕೂಡಲೇ ಲಾರಿ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದು, ಲಾರಿಯನ್ನು ಡಿವೈಡರ್ ಗೆ ಡಿಕ್ಕಿ ಹೊಡೆದು ನಿಲ್ಲಿಸಿದ್ದಾರೆನ್ನಲಾಗಿದೆ. ಇದರಿಂದಾಗಿ ನಡೆಯಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತುಮಕೂರು: ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ, ಹೆಣ ಬೀಳುತ್ತದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿಕೆ ನೀಡಿದ್ದು, ಪ್ರತಿಭಟನೆ ಅವಕಾಶ ಕೊಟ್ಟು ಹೆಣ ಬಿದ್ದು ದೊಡ್ಡ ಗಲಾಟೆಯಾಗಲು ಯಾಕೆ ಅವಕಾಶ ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಕೊಡಗಿಗೆ ಕಾಂಗ್ರೆಸ್ ಚಲೋ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತನೇ ಮೊಟ್ಟೆ ಎಸೆದಿದ್ದಾನೆ. ಆತನ ಯಾವುದೊ ವಿಚಾರಕ್ಕೆ ಬೇಸರಗೊಂಡು ಎಸೆದಿದ್ದಾನೆ. ಇದು ಜಗತ್ಜಾಹೀರಾಗಿದೆ. ಆತನ ಸಂದೇಶಗಳನ್ನು ನೋಡಿದ್ದೇನೆ. ಆತ ನಾನು ಜೆಡಿಎಸ್ ನಲ್ಲಿದ್ದೆ ಆನಂತ ಕಾಂಗ್ರೆಸ್ ಗೆ ಬಂದೆ ಎಂದಿದ್ದಾನೆ. ಈಗ ಆತನನ್ನು ಅರೆಸ್ಟ್ ಮಾಡಲಾಗಿದೆ ಎಂದು ಜಗ್ಗೇಶ್ ಹೇಳಿದರು. ಕಾಂಗ್ರೆಸ್ ಹೋರಾಟ ನೆಕ್ಸ್ಟ್ ಜೂನ್ ವರೆಗೂ ಇರಬಹುದು. ಆಮೇಲೆ ಎಲ್ಲಾ ತಣ್ಣಾಗಿ ಬಿಡುತ್ತೆ. ರಾಜ್ಯದ ಜನತೆಗೆ ಗೊತ್ತಿದೆ ಯಾಕೆ ಈಗ ಪ್ರತಿಭಟನೆ ಆಗ್ತಿದೆ ಅಂತ . ಪ್ರತಿಯೊಬ್ಬರಿಗೂ ಆ ಜಾಗ ಹಿಡಿಬೇಕು ಎಂಬ ಹುಮ್ಮಸಿದೆ. ಬಟ್ ವಿಷಯಗಳಿಲ್ಲ, ವಿಷಯ ಇದ್ದಿದ್ದೆ ಆದ್ರೆ ಅದ್ಭುತ ಡಿಬೇಟ್ ನಡೆಯುತ್ತಿತ್ತು. ಡಿಬೇಟ್ ನಡೆಯದೆ ಬರೀ ಮೊಟ್ಟೆ…
ಮುಂಬೈ: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಗೆ ಮತ್ತೆ ಕೋವಿಡ್ ಸೋಂಕು ತಗುಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ನನ್ನ ಸಂಪರ್ಕಕ್ಕೆ ಬಂದವರೂ ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. 79 ವರ್ಷದ ಅಮಿತಾಬ್ ಬಚ್ಚನ್‌ಗೆ 2ನೇ ಬಾರಿಗೆ ಕೊರೊನಾ ಸೋಂಕು ತಗುಲಿದೆ. 2020 ರಲ್ಲಿ ಕೋವಿಡ್ ಪಾಸಿಟಿವ್ ಬಂದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಬಚ್ಚನ್ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಬೆಳಗಾವಿ: ನಗರದ ಗಾಲ್ಫ್ ಮೈದಾನದಲ್ಲಿ ಕಳೆದ 19 ದಿನಗಳಿಂದ ಅವಿತುಕೊಂಡಿರುವ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೇಬೈಲು ಆನೆಬಿಡಾರದಿಂದ ಬಂದ ಎರಡು ಆನೆಗಳು ಕಾರ್ಯಾಚರಣೆ ಆರಂಭಿಸಿವೆ. ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿರುವ ಈ ಎರಡೂ ಆನೆಗಳು ಈಗಾಗಲೇ ಗಾಲ್ಫ್ ಕೋರ್ಸ್ ನ ಪೊದೆಯೊಳಗೆ ನುಗ್ಗಿವೆ. ಡಾಟಿಂಗ್ ಸ್ಪೆಷಲಿಸ್ಟ್ ವನ್ಯಜೀವಿ ತಜ್ಞ ಡಾ.ವಿನಯ ನೇತೃತ್ವದಲ್ಲಿ ಈ ಸ್ಪೇಷಲ್ ಟೀಂ ಬಂದಿವೆ. ಸಕ್ರೇಬೈಲು ಬಿಡಾರದ ಅರ್ಜುನ ಹಾಗೂ ಆಲೆ ಆನೆ ಬಂದಿವೆ. ವೈದ್ಯರು, ಸಹಾಯಕ ಸಿಬ್ಬಂದಿ, ಸೇರಿದಂತೆ 8 ಜನರ ತಂಡ ಆಗಮಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದರಿಂದ ಅವರ ಅವಲಂಬಿತ ಕಿರಿಯ ಸಹೋದರನಿಗೆ ಕೇವಲ 24 ಗಂಟೆಯಲ್ಲಿ ಅನುಕಂಪ ಆಧಾರಿತ ನೇರ ನೇಮಕಾತಿ ಆದೇಶ ನೀಡುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಳಕಳಿಯನ್ನು ಮೆರೆದಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಚಿನ್ ಮಹಾದೇವ ಬಾದುಲೆ ಅವರು ದಿನಾಂಕ ಆಗಸ್ಟ್ 22 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು. ತಮ್ಮ ಸಹೋದರ ಸೇವೆಯಲ್ಲಿರುವಾಗ ನಿಧನ ಹೊಂದಿರುವುದರಿಂದ ಕುಟುಂಬ ನಿರ್ವಹಣೆಗಾಗಿ ತಮಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಬಸವರಾಜ ಮಹಾದೇವ ಬಾದುಲೆ ಅವರು ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಮೃತ ಸಚಿನ್ ಬಾದುಲೆ ಅವರ ಅವಲಂಬಿತ ಸಹೋದರ ಬಸವರಾಜ ಮಹಾದೇವ ಬಾದುಲೆ ಅವರನ್ನು ಕೇವಲ 24 ಗಂಟೆಗಳ ಅವಧಿಯಲ್ಲಿ ಗ್ರುಪ್ “ಸಿ” ಹುದ್ದೆಗೆ ನೇರ ನೇಮಕಾತಿ ಮಾಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ. ಬಿ.ಎ.…
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಪ್ರಭಾವಕ್ಕೆ ಒಳಗಾಗಿ ಸರಿಯಾದ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ವಿರುದ್ಧ ಮೃತ ಸಂತೋಷ್ ಸೋದರ ಸಂಬಂಧಿ ಪ್ರಶಾಂತ್ ಪಾಟೀಲ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪೂರ್ವಾಗ್ರಹ ಪೀಡಿತರಾಗಿ, ಪ್ರಭಾವಕ್ಕೊಳಗಾಗಿ ಪೊಲೀಸರು ತನಿಖೆ ನಡೆಸಿದ್ದು, ಪ್ರಕರಣದ ತನಿಖೆಯನ್ನು ಮತ್ತೊಂದು ತನಿಖಾ ಸಂಸ್ಥೆಗೆ ವಹಿಸುವಂತೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz