Subscribe to Updates
Get the latest creative news from FooBar about art, design and business.
- ತುಮಕೂರು: ಇಬ್ಬರು ಅಪರಿಚಿತ ವ್ಯಕ್ತಿಗಳ ಸಾವು: ವಾರಸುದಾರರು ಇದ್ದಲ್ಲಿ ಸಂಪರ್ಕಿಸಿ
- ಆಗಸ್ಟ್ 21 ರಿಂದ 3 ದಿನ ವಿಶೇಷ ಲೋಕ್ ಅದಾಲತ್: ವಿಡಿಯೋ ಕಾನ್ಫರೆನ್ಸ್ ಮೂಲಕ ಇತ್ಯರ್ಥ
- ತುರುವೇಕೆರೆ: ಪೇಪರ್ ಲೆಸ್ ನೋಂದಣಿ ವಿರುದ್ಧ ಹೋರಾಟ
- ತುಮಕೂರು: ಮತ್ತೆ ಮೂರು ನವಿಲುಗಳು ಸಾವು
- ತಿಪಟೂರು: ಎಟಿಎಂ ಯಂತ್ರ ಒಡೆದು 5 ಲಕ್ಷಕ್ಕೂ ಅಧಿಕ ಹಣ ದರೋಡೆ
- ಮೇ 9ರಂದು ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ತುಮಕೂರಿನಿಂದ 50 ಸಾವಿರ ಜನ
- ಕನ್ನಡ ಸಾಹಿತ್ಯ ದ್ವೇಷ ಸಾಹಿತ್ಯದ ಹಿಂದೆ ಚಲಿಸುತ್ತಿರುವುದು, ವಿಷಾದನೀಯ: ಚಿಂತಕ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ
- ಮೇ 8ರವರೆಗೆ ಶ್ರೀ ಮಾರುತಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ: ಶಾಸಕ ಎಂ.ಟಿ.ಕೃಷ್ಣಪ್ಪ
Author: admin
ಬೆಂಗಳೂರು: ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಡಿಸೆಂಬರ್ 9ರಂದು ಪೂರ್ವಾಹ್ನ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ’ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಎಸ್ ಅಧಿಕಾರಿಗಳಾದ ವಿ. ಬಾಲಸುಬ್ರಮಣ್ಯನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೆ.ಆರ್.ಎಸ್. ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಬಿ.ಎಸ್.ಮಲ್ಲಿಕಾರ್ಜುನಯ್ಯ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯದರ್ಶಿ ವಿ.ಆರ್.ಮರಾಠೆ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಪರಿವರ್ತನಾ ಸಮುದಾಯ ಧಾರವಾಡ ಇದರ ಎಸ್.ಎ.ಮಕ್ಕಾಭಿ, ತುಮಕೂರು ಜಿಲ್ಲಾ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಬೆಂಗಳೂರು ಜನಾಧಿಕಾರ ಸಂಘರ್ಷ ಪರಿಷತ್ ನ ಪ್ರಕಾಶ್ ಬಾಬು, ಚಾಮರಾಜನಗರ ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಹೋರಾಟಗಾರರಾದ ದೊರೆಸ್ವಾಮಿ, ಬೆಂಗಳೂರಿನ ನಿವೃತ್ತ ಸರ್ಕಾರಿ ನೌಕರ ಪಾಪೇಗೌಡ ಅವರನ್ನು ಸನ್ಮಾನಿಸಲಾಗುವುದು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ಆಂಟೋನಿ ಬೇಗೂರು ಪ್ರತಿ ವರ್ಷ ಡಿಸೆಂಬರ್ 9 ರಂದು, UN ನಿಂದ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಇಂದು ಆಚರಿಸಲಾಗುವ ಈ ವಿಶೇಷ ದಿನದ ಮಾಹಿತಿ. ಅಕ್ಟೋಬರ್ 31, 2003 ರಂದು, ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ನಿರ್ಣಯವನ್ನು ಅಂಗೀಕರಿಸಿತು. ಕೌನ್ಸಿಲ್ ಡಿಸೆಂಬರ್ 9 ಅನ್ನು ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಎಂದು ಘೋಷಿಸಿದೆ. ಅಂದಿನಿಂದ, ಈ ದಿನವನ್ನು ವಿಶ್ವಸಂಸ್ಥೆಯಿಂದ ವಾರ್ಷಿಕವಾಗಿ ಆಚರಿಸಲಾಗುತ್ತದೆ. ಭ್ರಷ್ಟಾಚಾರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವಿಶ್ವದ 180 ದೇಶಗಳನ್ನು ಅಧ್ಯಯನ ಮಾಡಿದ ನಂತರ ಅತ್ಯಂತ ಭ್ರಷ್ಟ ದೇಶಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಭಾರತವು 2016 ರಲ್ಲಿ 79 ನೇ, 2017 ರಲ್ಲಿ 81 ನೇ ಮತ್ತು 2018 ರಲ್ಲಿ 78 ನೇ ಸ್ಥಾನದಲ್ಲಿತ್ತು. ಭ್ರಷ್ಟಾಚಾರವು ಒಂದು ದೇಶದ ಸಂಘಟನೆಯ ತಳದಿಂದ ನಾಯಕತ್ವ, ಆಡಳಿತಾತ್ಮಕ ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆಯವರೆಗೆ ಕ್ಯಾನ್ಸರ್‌ನಂತೆ…
ಪ್ರೀತಿಸಿ ಮದುವೆಯಾಗಿರುವ ತಮ್ಮ ಆನಂದ್ ಚಾಲಕನಾಗಿದ್ದು ಇತ್ತೀಚೆಗೆ ಕಾಣೆಯಾಗಿದ್ದಾನೆಂದು ಸೋದರ ವೆಂಕಟೇಶ್ ಮಾಲೂರು ತಾಲೂಕು ಮಾಸ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಬೆನ್ನತ್ತಿ ಹೋದ ಪೊಲೀಸರಿಗೆ ಈ ನಾಪತ್ತೆ ಪ್ರಕರಣದ ಸುಳಿವು ಆರಂಭದಲ್ಲಿ ಸಿಗಲಿಲ್ಲ. ದೂರು ನೀಡಿದ್ದ ವೆಂಕಟೇಶ್ ಮತ್ತೆ ಠಾಣೆಗೆ ಹೋಗಿ ಕಾಣೆಯಾಗಿದ್ದ ಆನಂದ್ ಪತ್ನಿ ಹಾಗೂ ಆಕೆಯ ಕೆಲವು ಸ್ನೇಹಿತರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟರಲ್ಲಿ ಹೊಸಕೋಟೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಮಾಕನಹಳ್ಳಿ ಗ್ರಾಮದ ಬಳಿಯ ನೀರಿನ ಹಳ್ಳದಲ್ಲಿ ಕೊಲೆ ಮಾಡಿ ಬಿಸಾಡಿದ್ದ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಪರಿಶೀಲಿಸಿದಾಗ ಆನಂದ್ ಕೊಲೆಯಾಗಿರುವುದು ಖಚಿತವಾಗಿದೆ. ಆನಂದ್ ಅಣ್ಣ ವೆಂಕಟೇಶ್ ಅನುಮಾನ ವ್ಯಕ್ತಪಡಿಸಿದ್ದಂತೆ ಆತನ ಪತ್ನಿ ಚೈತ್ರಾ ಸೇರಿದಂತೆ ಆಕೆಯ ಮೂರು ಸ್ನೇಹಿತರನ್ನು ವಶಕ್ಕೆ ಪಡೆದ ನಂದಗುಡಿ ಪೊಲೀಸರು ವಿಚಾರಣೆ ನಡೆಸಿದ ವೇಳೆ ಆಕೆಯೇ ಪ್ರಿಯಕನ ಜೊತೆಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ. ಡ್ರೈವರ್ ಆನಂದ್ ಕಾರಂಗುಟ್ಟೆ ಗ್ರಾಮದ ಚೈತ್ರಾ ಎಂಬ ಹುಡುಗಿಯನ್ನು ಪ್ರೀತಿಸಿ ಆರು…
ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರದ ಚಟ್ನಳ್ಳಿ ಪಾಳ್ಯ ಗ್ರಾಮದ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಬಸವಭವನ ಹಾಗೂ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತಿಂದ್ರ ಸಿದ್ದರಾಮಯ್ಯನವರು ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ನಮ್ಮ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ಹದಿಮೂರು ಕೋಟಿಗೂ ಹೆಚ್ಚು ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಮೊದಲಿಗೆ ನಮ್ಮ ಕ್ಷೇತ್ರಕ್ಕೆ ಸೇರುವ ಹಳ್ಳಿಕೆರೆಹುಂಡಿ ಚಟ್ನಳ್ಳಿ ಪಾಳ್ಯ ವಾಜಮಂಗಲ ಎಂ.ಸಿ ಹುಂಡಿ ಗ್ರಾಮಗಳ ರಸ್ತೆಯ ಅಭಿವೃದ್ಧಿ ಸೇರಿದಂತೆ ಸಮುದಾಯ ಭವನಗಳಿಗೆ ಸುಮಾರು ಎರಡುವರೆ ಕೋಟಿ ರೂಗಳ ವೆಚ್ಚದಲ್ಲಿ ಭೂಮಿ ಪೂಜೆ ನೆರವೇಸಲಾಗಿದೆ. ಇನ್ನುಳಿದ ಅಭಿವೃದ್ಧಿ ಕಾಮಗಾರಿಗಳನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಉಪಾಧ್ಯಕ್ಷ ರವಿ, ಮಲೆಯ ಮಾದೇಶ್ವರ ಬೆಟ್ಟದ ಮಾಜಿ ಧರ್ಮದರ್ಶಿ ಕೀಳನಪುರ ಮಹಾದೇವಪ್ಪ, ಮೆಲ್ಲಹಳ್ಳಿ ಗಂಗತಿಮ್ಮಯ್ಯ ,ಚಿಕ್ಕದೇವಯ್ಯ, ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ಪಾಳ್ಯ ಸ್ವಾಮಿ…
ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಳಬಾಗಿಲಿನ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಆಂಧ್ರ ಪ್ರದೇಶದ ರಾಮಸಮುದ್ರದ ನಿವಾಸಿ ಜ್ಯೋತಿ ಮಕ್ಕಳಾದ ಉದಯಶ್ರೀ (8) ಹಾಗೂ ಅಕ್ಷರ(6) ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ ತಾನೂ ಬೆಂಕಿ ಹಚ್ಚಿಕೊಂಡಿದ್ದ್ದಾದು, ಆರು ವರ್ಷದ ಹೆಣ್ಣು ಮಗು ಮೃತಪಟ್ಟಿದೆ. ಮತ್ತೊಂದು ಮಗು ಹಾಗೂ ತಾಯಿ ಸುಟ್ಟಗಾಯಗಳಿಂದ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಮುಳಬಾಗಿಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆತ್ತಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಪಿಎಸ್ ಐವೊಬ್ಬರು ಗಾಯಗೊಂಡಿದ್ದ ಮಗುವನ್ನು ಎತ್ತಿಕೊಂಡು ಓಡಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಮಗು ಜೀವನ್ಮರಣದ ನಡುವೆ ಹೋರಾಟ ನಡೆಸಿದೆ. ಗಂಡ ಬಿಟ್ಟು ಹೋಗಿರೋದಕ್ಕೆ ಮನನೊಂದು ಜ್ಯೋತಿ ಗಂಡನಿಲ್ಲದೇ ಜೀವನ ಸಾಗಿಸೋದಕ್ಕೆ ಕಷ್ಟವಾಗುತ್ತೆ ಎಂದು ನಿರ್ಧರಿಸಿ, ಮೊದಲು ಮಕ್ಕಳನ್ನು ಸಾಯಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಇಬ್ಬರು ಮಕ್ಕಳೊಂದಿಗೆ…
ಅಂತ್ಯಸಂಸ್ಕಾರಕ್ಕೆ ಗುಬ್ಬಿ ಶಾಸಕ ವಾಸು ಬರಬೇಕು ಹಾಗೂ ನನ್ನ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಬರೆದಿಟ್ಟು ಕೆರೆಗೆ ಹಾರಿ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಗುಬ್ಬಿ ಪಟ್ಟಣದ ನಿವಾಸಿ ಜಯಪ್ರಕಾಶ್ (39) ಆತ್ಮಹತ್ಯೆ ಮಾಡಿಕೊಂಡವರು. ಗ್ರಾನೆಟ್ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದ ಜಯಪ್ರಕಾಶ್ ಸಣ್ಣ ಪುಟ್ಟ ಸಾಲ ಮಾಡಿಕೊಂಡಿದ್ದು, ಗೋಮಾಳದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದು, ಸಾಗುವಳಿ ಚೀಟಿ ಸಹ ನೀಡಲಾಗಿತ್ತು. ಆದರೆ ಅದರ ಪಹಣಿ ಆತನ ಹೆಸರಿಗೆ ಬಂದಿರಲಿಲ್ಲ. ಈ ಬಗ್ಗೆ ನೊಂದಿದ್ದ ಜಯಪ್ರಕಾಶ್ ವಿಸ್ತೃತವಾದ ಡೆತ್ ನೋಟ್ ಬರೆದಿಟ್ಟು ಮನೆದೇವರಾದ ದೇವರ ಹೊಸಹಳ್ಳಿಯ ವೀರಭದ್ರ ಸ್ವಾಮಿಯ ಗ್ರಾಮದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡೆತ್ ನೋಟ್‌ನಲ್ಲಿ ನನ್ನ ಅಂತ್ಯಸಂಸ್ಕಾರಕ್ಕೆ ಗುಬ್ಬಿ ಶಾಸಕ ವಾಸು ಬರಬೇಕು ಹಾಗೂ ನನ್ನ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಬರೆದಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಡಾಬಸ್ ಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಮ್ಮತುಮಕೂರು.ಕಾಂನ…
ಡಬಲ್ ಎಂಜಿನ್ ಸರ್ಕಾರ ಎಂದು ಎದೆ ಬಡಿದುಕೊಂಡರೆ ಸಾಲದು. ಆ ಅವಕಾಶವನ್ನು ಬಳಸಿಕೊಂಡು ಕರ್ನಾಟಕ –ಮಹಾರಾಷ್ಟ್ರ ನಡುವೆ ಉದ್ಭವಿಸಿರುವ ಗಡಿ ವಿವಾದವನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರದ ನೆರವನ್ನು ಪಡೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗಡಿ ವಿವಾದವನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ವಿವಾದಗಳನ್ನು ಬೆಳೆಯಲು ಬಿಟ್ಟು ರಾಜಕೀಯಕ್ಕೆ ಬಳಸುವುದು ಬಿಜೆಪಿ ಪಕ್ಷದ ಹುಟ್ಟುಗುಣ. ಸಂಧಾನದ ಮೂಲಕ ಪರಿಹರಿಸಬೇಕಿದ್ದ ಬೆಳಗಾವಿ ಗಡಿ ವಿವಾದವನ್ನು ಬೆಳೆಯಲು ಬಿಟ್ಟು ರಾಜ್ಯ ಸರ್ಕಾರ ಚಂದ ನೋಡುತ್ತಾ ಕೂತಿದೆ ಎಂದು ಟೀಕಿಸಿದ್ದಾರೆ. ಬೆಳಗಾವಿ-ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿರುವ ಕಾರಣ ಜನ ಪರದಾಡುವಂತಾಗಿದೆ. ಎರಡೂ ಕಡೆಗಳಲ್ಲಿ ಜನ ಉದ್ರಿಕ್ತರಾಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಕಾಪಾಡಬೇಕು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ವಿರುದ್ಧ ಅಲ್ಲಿನ ಸರ್ಕಾರ ಅತಿರೇಕದ ಕ್ರಮಗಳಿಗೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ ರಾಜ್ಯದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮಹಾರಾಷ್ಟ್ರದ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.…
ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಗಂಡನೊಬ್ಬ ಹೆಂಡತಿಯನ್ನೇ ಕೊಂದಿದ್ದು, ಇದಕ್ಕೆ ತಂದೆಯ ಮಗನೂ ಕೈಜೋಡಿಸಿರುವ ದುರಂತ ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ. ವಿಶ್ವೇಶ್ವರ ಭಟ್(69) ಮತ್ತು ಮಗ ಮಧುಕರ ಭಟ್(33) ಕುಡಿಯಲು ಹಣ ನೀಡಲಿಲ್ಲವೆಂದು ಗೀತಾ ಭಟ್ ಅವರನ್ನು (64) ಕೊಲೆ ಮಾಡಿದ್ದಾರೆ. ಆರೋಪಿ ಮಧುಕರ್ ಭಟ್ನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿತಕ್ಕೆ ಹಣ ನೀಡುವಂತೆ ಗೀತಾ ಭಟ್ಗೆ ಮಗ ಮತ್ತು ಗಂಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಅವರ ಮನೆಯಲ್ಲಿ ದಿನವೂ ಜಗಳ ನಡೆಯುತ್ತಲೇ ಇತ್ತು. ಹಣ ನೀಡದ ಕಾರಣ ತಂದೆ-ಮಗ ಸೇರಿಕೊಂಡು ಗೀತಾ ಭಟ್ಅವರನ್ನು ಕಟ್ಟಿಗೆಯಿಂದ ಹೊಡೆದು ಕೊಂದ್ದಿದ್ದಾರೆ. ಕುಮಟಾ ಪಿಎಸ್‌ಐ ನವೀನಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕಳೆದ ಕೆಲವು ವರ್ಷಗಳಿಂದ ಉತ್ತರ ಭಾರತದಲ್ಲಿ ಸಾವಿರಾರು ಜನರನ್ನು ಬಲಿ ಪಡೆದಿರುವ ಬಿಸಿಗಾಳಿ ಈ ಬಾರಿ ಮನುಷ್ಯರ ತಡೆಯುವ ಮಿತಿಗಿಂತ ಅಧಿಕ ಪ್ರಮಾಣದ ಬಿಸಿಗಾಳಿ ಬೀಸಲಿದೆ ಎಂದು ವಿಶ್ವಬ್ಯಾಂಕ್ ಭಾರತಕ್ಕೆ ಎಚ್ಚರಿಕೆ ನೀಡಿದೆ. ಮನುಷ್ಯರು ಬಿಸಿಲು ತಡೆದುಕೊಳ್ಳುವ ಮಿತಿಗಿಂತ ಹೆಚ್ಚಿನ ಪ್ರಮಾಣದ ಬಿಸಿಗಾಳಿ ಮೊದಲ ಬಾರಿ ಬೀಸಲಿದ್ದು, ಜಗತ್ತಿನ ಕೆಲವು ದೇಶಗಳ ಪೈಕಿ ಭಾರತವೂ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಕೂಲಿಂಗ್ ಕ್ಷೇತ್ರದಲ್ಲಿ ಹವಾಮಾನ ವೈಪರಿತ್ಯದ ಮೇಲೆ ಬಂಡವಾಳ ಹೂಡಿಕೆಯ ಅವಕಾಶಗಳು ಭಾರತದಲ್ಲಿ ಹೆಚ್ಚಾಗಲಿವೆ. ಏಕೆಂದರೆ ಭಾರತದಲ್ಲಿ ಸುಡುಬಿಸಿಲು ಹೆಚ್ಚಾಗಲಿದ್ದು, ಇದು ಅತ್ಯಂತ ಬೇಗ ಕಾಲಿಡಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2022 ಏಪ್ರಿಲ್ ನಲ್ಲಿ ಭಾರತದಲ್ಲಿ ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಗಾಳಿಯ ಆರಂಭ ಆಗಲಿದೆ. ಆರಂಭದಲ್ಲೆ 46 ಡಿಗ್ರಿ ಸೆಲ್ಸಿಯಸ್ ಇರುವ ಈ ಬಿಸಿಗಾಳಿ ಇದು ನಂತರ ಹೆಚ್ಚಾಗಲಿದೆ. 2035-65ರ ವೇಳೆಗೆ ಶೇ.25ರಷ್ಟು ಹೆಚ್ಚಾಗಲಿದ್ದು, ಕಾರ್ಬನ್ ಪ್ರಮಾಣ ಅತ್ಯಧಿಕವಾಗಲಿದೆ ಎಂದು ಹೇಳಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ಬೆಳಗಾವಿ : ಗಡಿ ವಿವಾದ ದಿನೇ ದಿನೆ ತಾರಕಕ್ಕೇರುತ್ತಿದ್ದು, ಪ್ರತಿಭಟನೆಗಳು, ಆಕ್ರೋಶಗಳು ಹೆಚ್ಚತೊಡಗಿವೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಎರಡು ಬಣಗಳು ಸಹ ಅತಿರೇಕದಿಂದ ವರ್ತನೆ ಮಾಡುತ್ತಿವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಿವಸೇನೆಯ ಕಾರ್ಯಕರ್ತರು ಮೀರಜ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕುವ ಮೂಲಕ ಉದ್ದಟತನವನ್ನು ಪ್ರದರ್ಶನ ಮಾಡಿವೆ. ಜತ್ತ ತಾಲೂಕಿನ ಹಳ್ಳಿಗರು ಕರ್ನಾಟಕಕ್ಕೆ ಸೇರ್ಪಡೆಯಾಗಬೇಕು ಎಂದು ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅವರಿಗೆ ಇಷ್ಟವಿದ್ದರೆ ಕರ್ನಾಟಕಕ್ಕೆ ಸೇರ್ಪಡೆಯಾಗಲಿ ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೊಮ್ಮಾಯಿ ವಿರುದ್ಧ ಆಕ್ರೋಶ ಹೊರಹಾಕಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy