Subscribe to Updates
Get the latest creative news from FooBar about art, design and business.
- ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ
- ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ
- ಭಯ ಬೇಡ, ಪೊಲೀಸರನ್ನು ಸಮುದಾಯದ ಭಾಗವಾಗಿ ಕಾಣಿ: ಸಿಪಿಐ ಶ್ರೀನಿವಾಸ್ ಡಿಜೆ
- ತುಮಕೂರು: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
- ಸಾಗುವಳಿದಾರ ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಆರೋಪ; ಕೆಪಿಟಿಸಿಎಲ್ ಖಾಸಗೀಕರಣಕ್ಕೆ ತೀವ್ರ ಆಕ್ರೋಶ
- ಕದ್ದ ಹಣದಲ್ಲಿ ದಂಪತಿ ಮೋಜು–ಮಸ್ತಿ: ಕೊನೆಗೂ ಕುಣಿಗಲ್ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಜೋಡಿ!
- ಏಕಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಲೇರಿಯಾ ಜಾಗೃತಿ ಹಾಗೂ ಆರೋಗ್ಯ ಶಿಕ್ಷಣ
- ಸರಗೂರು: ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
Author: admin
ರಾಹುಲ್ ಗಾಂಧಿ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಲು ನನ್ನ ಅಭ್ಯಂತರವಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಒಮ್ಮತ ಮೂಡಿಸಬೇಕು ಎಂದರು. ಜೋಡೋ ಯಾತ್ರೆಯೊಂದಿಗೆ ರಾಹುಲ್ ಈ ಹುದ್ದೆಗೆ ಅರ್ಹರು ಎಂದು ಕಮಲ್ ನಾಥ್ ಹೇಳಿಕೊಂಡಿದ್ದಾರೆ. ಇದೇ ವೇಳೆ, ಪ್ರತಿಪಕ್ಷಗಳ ಒಗ್ಗಟ್ಟಿನ ವೇದಿಕೆಯಾಗುವಂತೆ ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಕರೆ ನೀಡಿದರು. ಮರುದಿನ ಆರಂಭವಾಗಲಿರುವ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವನ್ನು ನಿರ್ಣಾಯಕ ರಾಜಕೀಯ ನಡೆಗಳಿಗೆ ವೇದಿಕೆಯಾಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳ ಮೂಲಕ ಸಾಗಿ ಕಾಶ್ಮೀರದಲ್ಲಿ ಕೊನೆಗೊಳ್ಳುವ ಪಯಣದಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ನೇರ ಪ್ರಯತ್ನ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಿಜೋರಾಂನ ವಿವಿಧೆಡೆ ನಡೆಸಿದ ಶೋಧದಲ್ಲಿ ಅಪಾರ ಪ್ರಮಾಣದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 7.39 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಮೆಥಾಂಫೆಟಮೈನ್ ಮಾತ್ರೆಗಳು, ಹೆರಾಯಿನ್ ಮತ್ತು ವಿದೇಶಿ ಸಿಗರೇಟ್ ಸೇರಿವೆ. ಐಜ್ವಾಲ್ ಜಿಲ್ಲೆಯ ತುಖುರ್ಹ್ಲು ಎಂಬಲ್ಲಿ ನಡೆದ ದಾಳಿಯಲ್ಲಿ 6.66 ಕೋಟಿ ಮೌಲ್ಯದ 20,000 ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯವನ್ನು ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೋಧದ ವೇಳೆ ನಾಲ್ವರು ಕಳ್ಳಸಾಗಣೆದಾರರು ಸಿಕ್ಕಿಬಿದ್ದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮತ್ತೊಂದು ಕಾರ್ಯಾಚರಣೆಯಲ್ಲಿ ಅಸ್ಸಾಂ ರೈಫಲ್ಸ್ ಮ್ಯಾನ್ಮಾರ್ ಗಡಿಯಲ್ಲಿರುವ ಚಂಪೈ ಜಿಲ್ಲೆಯ ಸೊಖೌತಾರ್ ಗ್ರಾಮದಲ್ಲಿ 41.60 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಸಿಗರೇಟ್ ವಶಪಡಿಸಿಕೊಂಡಿದೆ. ಚಂಪೈ ಜಿಲ್ಲೆಯ ಚಂಪೈ-ಐಸ್ವಾಲ್ ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 31.05 ಲಕ್ಷ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಮೂವರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಒಟಿಟಿ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ 142 ದಿನಗಳನ್ನು ಪೂರೈಸಿ ಫೈನಲ್ ತಲುಪಿದ್ದರು. ಬಿಗ್ ಬಾಸ್ ಕನ್ನಡ ವಿನ್ನರ್ ಆದ ರೂಪೇಶ್ ಶೆಟ್ಟಿ ಅವರಿಗೆ 60 ಲಕ್ಷರೂಪಾಯಿಬಹುಮಾನ ಮೊತ್ತ ಲಭಿಸಿದೆ. ಈ ಮೂಲಕ ತುಳುನಾಡಿನ ನಟ ರೂಪೇಶ್ ಶೆಟ್ಟಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸರ್ 9ರ ವಿನ್ನರ್ ಆಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮೈಸೂರು, ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿಯೂ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಹೊಸ ವರ್ಷಕ್ಕೆ ಸ್ವಾಗತ ಕೋರಲಾಯಿತು. ಇನ್ನು ಇಂದು ಬೆಳಗ್ಗೆಯಿಂದಲೇ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ನೂರಾರು ವಾಹನಗಳು ಬೆಟ್ಟಕ್ಕೆ ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಆಗಿದೆ. ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರು ಸರದಿಯಲ್ಲಿ ಆಗಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಮಹಾನಗರಗಳಲ್ಲಿ ಲಕ್ಷಾಂತರ ಜನರು ಕುಣಿದು-ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು : ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ಭರ್ಜರಿ ಲಾಭವಾಗಿದ್ದು, ಕೋಟಿ ಕೋಟಿ ಲಾಭಗಳಿಸಿದೆ. ನಿನ್ನೆ ಒಂದೇ ದಿನದ 181 ಕೋಟಿ ರೂಪಾಯಿ ಮೌಲ್ಯದ ಭರ್ಜರಿ ಮದ್ಯ ಮಾರಾಟವಾಗಿದೆ. ಡಿಸೆಂಬರ್ 27ರಂದು 3.57 ಲಕ್ಷ ಲೀಟರ್ ಐಎಂಎಲ್ ಮಾರಾಟ ಮಾಡಿದ್ದು, 2.41 ಲಕ್ಷ ಲೀಟರ್ ಬಿಯರ್ ಮಾರಾಟ ನಡೆಸಿದೆ. ಈ ಮೂಲಕ ಐದು ದಿನಗಳಲ್ಲಿ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಬರೋಬ್ಬರಿ 657 ಕೋಟಿ ಹರಿದು ಬಂದಿದೆ. ಡಿಸೆಂಬರ್ 23ರಿಂದ 20.66 ಲಕ್ಷ ಲೀಟರ್ IML, 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ : ಮೋಟರ್ ರಿವೈಂಡಿಂಗ್ ಪಂಪಸೆಟ್ ರಿಪೇರಿ ಮತ್ತು ಸರ್ವೀಸಿಂಗ್ 30 ದಿನಗಳ ತರಬೇತಿಯನ್ನು 2023 ಜನವರಿ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. `ತರಬೇತುದಾರರಿಗೆ ಇರಬೇಕಾದ ಅರ್ಹತೆಗಳು : 18 ರಿಂದ 45 ವಯಸ್ಸಿನವರಾಗಿರಬೇಕು, ಗಾಮೀಣ ಪ್ರದೇಶದವರಾಗಿದ್ದು, BPL ಕಾರ್ಡ್ ಹೊಂದಿರಬೇಕು. BPL, ಕಾರ್ಡ್ ಆಧಾರ ಕಾರ್ಡ್ ,ಬ್ಯಾಂಕ್ ಪಾಸ್ ಬುಕ್, 4 ಭಾವಚಿತ್ರಗಳು ಸಲ್ಲಿಸಬೇಕು. ತರಬೇತಿಯಲ್ಲಿ ಊಟ, ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಜನವರಿ 4, 2023, ಆಗಿದ್ದು, ಸಂಸ್ಥೆಯ ಅರ್ಜಿ ನಮೂನೆ ಭರ್ತಿ ಮಾಡಿ ನೇರವಾಗಿ ಕಾರ್ಯಾಲಯಕ್ಕೆ, ಪೋಸ್ಟ್ ಮುಖಾಂತರ ಅಥವಾ ಗೂಗಲ್ ಪಾರ್ಮ https://docs.google.com/forms/d/e/1FAIpQLSdZEI9npV5dVuQbdqFXUGc6yt__7daI02YrhyvRSLywjlFfKA/viewform?vc=0&c=0&w=1&flr=0 ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‍ಸೆಟಿ), ಪ್ಲಾಟ ನಂ. ಸಿ ಎ -03 (ಪಾರ್ಟ) ಕಣಬರ್ಗಿ ಇಂಡಸ್ತ್ರಿಯಲ್ ಎರಿಯಾ, ಆಟೋ ನಗರ. ಬೆಳಗಾವಿ –…
ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದೇಶ್ವರ ಶ್ರೀಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರಕ್ಕೆ ಆಗಮಿಸಿ ಜ್ಞಾನ ಯೋಗಾಶ್ರಮದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ನಂತರ ಮಾತನಾಡಿದ ಅವರು, ಕಳೆದೊಂದು ವಾರದಿಂದ ಪ್ರತಿದಿನ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೇನೆ. ಅವರ ಆರೋಗ್ಯದ ಮೇಲೆ ಕಾಳಜಿ ವಹಿಸಲು ಸೂಚಿಸಿದ್ದೇನೆ ಎಂದರು. ಪ್ರಧಾನಿ ಮೋದಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಾತನಾಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಧಾನಿ ಹಾರೈಸಿದ್ದಾರೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿ, ಶ್ರೀಗಳ ಬದುಕೇ ನಮಗೆ ಮಾದರಿ. ಅವರ ಮಾತು, ನಡೆ, ನುಡಿ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಪುಣ್ಯಭೂಮಿ ವಿಜಯಪುರವನ್ನು ಅವರ ಕರ್ಮಭೂಮಿ ಮಾಡಿಕೊಂಡಿದ್ದು ನಮ್ಮ ಪುಣ್ಯ ಎಂದು ಬಣ್ಣಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಯುವತಿಯೋರ್ವಳಿಗೆ ಕಿಡಿಗೇಡಿಗಳು ಕಿರುಕುಳ ನೀಡಿದ್ದು, ಈ ವೇಳೆ ಯುವತಿಯ ಗೆಳೆಯ ಹಾಗೂ ಕಿಡಿಗೇಡಿಗಳ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ. ಚರ್ಚ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರನೊಂದಿಗೆ ಬಂದಿದ್ದ ಯುವತಿಯೊಬ್ಬಳಿಗೆ ಕಿಡಿಕೇಡಿಗಳು ಕಿರುಕುಳ ನೀಡಿದ್ದಾರೆ. ಈ ವೇಳೆ ಆಕೆಯ ಗೆಳೆಯ ದುಷ್ಕರ್ಮಿಗಳೊಂದಿಗೆ ಜಗಳಕ್ಕಿಳಿದಿದ್ದು, ಕೈಕೈ ಮಿಲಾಯಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರದಲ್ಲಿ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ತಿಳಿದುಬಂದಿದೆ. ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಪಬ್ ಗಳಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದರು. ಪಬ್ ನಲ್ಲಿ ಡಾನ್ಸ್ ಮಾಡುವುದನ್ನು ನೋಡಲು ಹೊರಗಡೆ ದೊಡ್ಡ ಜನಸಂದಣಿ ನಿಂತಿದ್ದು, ಈ ವೇಳೆ ಜನ ಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಕೋರಮಂಗಲದಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆಂದು ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತುರುವೇಕೆರೆ: ಹಾಸನದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ದಿ ಇಂಡಿಯನ್ ಡಾಡ್ಜ್ ಬಾಲ್ ಫೆಡರೇಷನ್ ಕರ್ನಾಟಕ, ಫೆಡರೇಷನ್ ಮತ್ತು ಹಾಸನ ಜಿಲ್ಲಾ ಡಾಡ್ಜ್ವಾಲ್ ಅಸೋಸಿಯೇಷನ್ ಇವರುಗಳ ಸಹಯೋಗದೊಂದಿಗೆ ಡಿ. 27ರಿಂದ 29ರವರೆಗೆ ನಡೆದ ರಾಷ್ಟ್ರಮಟ್ಟದ ಡಾಡ್ಜ್ವಾಲ್ ಪಂದ್ಯಾವಳಿಯಲ್ಲಿ ಎಸ್ ಬಿ ಜಿ ವಿದ್ಯಾಲಯ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಪಂದ್ಯಾವಳಿಯಲ್ಲಿ ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನವನ್ನು ಮತ್ತು ಸಬ್ ಜೂನಿಯರ್ ಬಾಲಕರ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ತಂಡದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಎಸ್ ಬಿ ಜಿ ವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜುಗಳ ಕಾಲೇಜಿನ ವಿದ್ಯಾರ್ಥಿಗಳಾದ ಮಾನಸ ಜಿ., ವೇದಾವತಿ, ಕುಮುದಾ, ವಿನಯ್, ಆರ್.ಪ್ರಮೋದ್, ಕೇಶವ್ ಈ ಕ್ರೀಡಾಪಟುಗಳು ರಾಜ್ಯಕ್ಕೆ ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಮತ್ತು ತುರುವೇಕೆರೆ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ. ಇದರ ಮುಖ್ಯ ತರಬೇತುದಾರರಾದ ಉದಯ್ ಕುಮಾರ್ ಸಿ.ಪಿ. ಹಾಗೂ ಮಕ್ಕಳಿಗೂ ಆದಿಚುಂಚನಗಿರಿ ಶಿಕ್ಷಣ ಆಡಳಿತ…
ತುರುವೇಕೆರೆ : ಪಟ್ಟಣದ ಗುರುಭವನದ ಆವರಣದಲ್ಲಿ ಜನವರಿ 2ರ ಸೋಮವಾರ ಆದಿ ಜಾಂಬವ ಸಮ್ಮೇಳನ ಮತ್ತು ಎಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಈ ಸಮ್ಮೇಳನಕ್ಕೆ ಆಗಮಿಸುವಂತೆ ಆದಿ ಜಾಂಬವ ಸಮಾಜದ ಅಧ್ಯಕ್ಷರು ಆದ ವಿ ಟಿ ವೆಂಕಟರಾಮಯ್ಯನವರು (ವಿಠಲ ದೇವರಹಳ್ಳಿ,) ಮಾಧ್ಯಮದ ಮೂಲಕ ಮನವಿ ಮಾಡಿದರು. ಜೊತೆಗೆ ಈ ಸಮಾವೇಶಕ್ಕೆ ಕೇಂದ್ರದ ಮಂತ್ರಿಗಳು, ರಾಜ್ಯದ ಮಂತ್ರಿಗಳು, ಹೋರಾಟಗಾರರು, ಸಾಹಿತಿಗಳು, ಸ್ವಾಮೀಜಿಗಳು, ಆಗಮಿಸಲಿದ್ದು, ಸಮ್ಮೇಳನದ ಉದ್ದೇಶ, ಒಳ ಮೀಸಲಾತಿಯ ಎ ಜೆ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಒತ್ತಾಯಿಸುವುದರ ಮೂಲಕ ಈ ಸಮಾವೇಶ ಮಾಡಲು ತೀರ್ಮಾನಿಸಿದೆ ಎಂದರು. ಜೊತೆಗೆ ಈ ಸಮಾವೇಶದಲ್ಲಿ 10 ರಿಂದ 15 ಸಾವಿರ ಈ ಸಮಾಜದ ಬಂಧುಗಳು ಸೇರುವ ನಿರೀಕ್ಷೆಯಿದ್ದು, ಇವರುಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಇನ್ನು ಈ ಸಮ್ಮೇಳನದಲ್ಲಿ ಈ ಸಮಾಜದ ಎಸ್, ಎಸ್, ಎಲ್, ಸಿ, & ಪಿ ,ಯು, ಸಿ, ವಿದ್ಯಾರ್ಥಿಗಳಿಗೆ ಮತ್ತು…