Author: admin

ಗಡಿ ವಿವಾದದ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬಹಿರಂಗ ಸಭೆ ನಡೆಸಲಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದಲ್ಲಿ ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ಎಂ.ಇ.ಎಸ್. ಮಹಾರಾಷ್ಟ್ರ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದು, ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಿದೆ. ಇಂದು ಬಹಿರಂಗ ಸಭೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಾದ್ಯಂತ ಪೊಲೀಸ್ ಬಿಗ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಡಿಸಿಪಿ, ನಾಲ್ವರು ಸಿಪಿಐ, 10 ಪಿಎಸ್ ಐ, 12 ಕೆಎಸ್ ಆರ್, 8 ಸಿಎಆರ್ ತುಕಡಿಗಳು ಹಾಗೂ ಅಶ್ರುವಾಯು ಪ್ರಯೋಗ ವರುಣಾ ವಾಹನ ನಿಯೋಜನೆ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಎಂಇಎಸ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಿಡಿದೆದ್ದಿದ್ದು, ಇಂದು ಕರವೇ ನಡಿಗೆ ಬೆಳಗಾವಿ ಕಡೆಗೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. ಗಡಿ ವಿವಾದ ಸಮಸ್ಯೆ ತಲೆದೂರಿದ್ದರೂ ಸಹ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ ನಂತರ ಎಚ್ಚೆತ್ತು ಮಹಾರಾಷ್ಟ್ರ ಸರ್ಕಾರ ಸಚಿವರ ಬೆಳಗಾವಿ ಭೇಟಿಯನ್ನ ರದ್ದುಗೊಳಿಸಿದೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡ, ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ. ಮಹಾಜನ್ ವರದಿಯನ್ನ ಎಲ್ಲರೂ ಒಪ್ಪಿಕೊಳ್ಳಬೇಕು. ಗಡಿ ವಿಚಾರಕ್ಕೆ ಬಂದ್ರೆ ನಾವು ಸುಮ್ಮನಿರಲ್ಲ. ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ನೀಡಲ್ಲ. ಯಾವುಧೇ ಖಾರಣನ್ನೂ ನಾವು ಹಿಂದೆ ಸರಿಯಲ್ಲ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಕರ್ನಾಟಕಕ್ಕೆ ದಿಕ್ಸೂಚಿ ಎಂದಿದ್ದ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಿದ‍್ಧರಾಮಯ್ಯ, ಗುಜರಾತ್ ಫಲಿತಾಂಶ ಕರ್ನಾಟಕ್ಕ್ಕೆ ದಿಕ್ಸೂಚಿಯಾತ್ರೆ ಪಂಜಾಬ್ ಫಲಿತಾಂಶ ಯಾಕೆ ದಿಕ್ಸೂಚಿ ಆಗಲಿಲ್ಲ. ಅಲ್ಲಿನ ರಾಜಕೀಯ, ಆಡಳಿತ, ಭಾವನೆಗಳು ಬೇರೆ. ಇಲ್ಲಿಯ ರಾಜಕೀಯ. ಭಾವನೆಗಳೇ ಬೇರೆ. ರಾಷ್ಟ್ರ ಚುನಾವಣೆ ಬೇರೆ, ರಾಜ್ಯ ಚುನಾವಣೆ ಬೇರೆ ಎಂದರು. ಎಕ್ಸಿಟ್ ಪೋಲ್ ವಿಚಾರ ಸಂಬಂಧ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುಂದಿದೆ. ಅಂತಾ ಹೇಳಿದೆ. ಗುಜರಾತ್ ನಲ್ಲಿ ಬಿಜೆಪಿ ಮುಂದಿದೆ ಎಂದು ಹೇಳಿದ್ದಾರೆ 8 ನೇ ತಾರೀಖು ನೋಡೋಣ. ಚುನಾವಣೇಯಲ್ಲಿ ಜನ ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು ಎಂದು ತಿಳಿಸಿದರು. ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಈಗಾಗಲೇ ಮಹಾಜನ್ ವರದಿ ಬಂದಿದೆ ಮಹಾಜನ್ ವರದಿಯೇ ಅಂತಿಮ. ಮಹಾರಾಷ್ಟ್ರದವರು ವರದಿ ಒಪ್ಪಲ್ಲ ಅಂದರೇ ಮಹಾರಾಷ್ಟ್ರದವರ ಪುಂಡಾಟಿಕೆಗೆ ಸರ್ಕಾರ ಹೆದರಬಾರದು. ಉತ್ತಮ ಲಾಯರ್ ಇಟ್ಟು ವಾದ ಮಾಡಲಿ. ಸಿಎಂ ಬೊಮ್ಮಾಯಿ ಸರ್ವಪಕ್ಷ ಸಭೆ ಕರೆಯುವುದಾಗಿ…

Read More

ಮಾಗಡಿ ತಾಲೂಕಿನ ನಾರಾಯಣಿಪಾಳ್ಯ ಗೇಟ್ ಬಳಿ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಸರಕು ಸಾಗಣೆ ಆಟೊ ಉರುಳಿ ಮೂವರು ಮೃತಪಟ್ಟಿದ್ದಾರೆ. ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದವರಾದ ರತ್ನಮ್ಮ (53), ಲಕ್ಕಮ್ಮ (40) ಹಾಗೂ ಮಂಜುನಾಥ (32) ಮೃತಪಟ್ಟವರು. ನೆಲಮಂಗಲದಲ್ಲಿ ತರಕಾರಿ ತೆಗೆದುಕೊಂಡು ಬೆಳ್ಳೂರಿಗೆ ವಾಪಸ್ ಹೋಗುವಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ. ಮಾರುತಿ ಚಿದಾನಂದ ನಾವ್ಹಿ (22) ಸಾವಿಗೀಡಾದ ವಿದ್ಯಾರ್ಥಿ. ಜಮಖಂಡಿಯ ಖಾಸಗಿ ಕಾಲೇಜುಗಳಲ್ಲಿ ಈತ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದನು. ಕಲಿಕೆಯ ಒತ್ತಡದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್​ ನೋಟಿನಲ್ಲಿ ಬರೆದಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಿಹಾರದ ಭಾಗಲ್ಪುರ ಜಿಲ್ಲೆಯ ಸಾರ್ವಜನಿಕ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಎದೆ, ಕೈ, ಕಿವಿ ಮತ್ತು ಮೂಗನ್ನು ಕತ್ತರಿಸಿದ್ದಾನೆ. ಭಾಗಲ್ಪುರ ಜಿಲ್ಲೆಯ ಪರಪೈಂಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯು ಮಹಿಳೆಯೊಂದಿಗೆ ಸಲುಗೆಯಿಂದ ಇದ್ದನು. ಆದರೆ ಮಹಿಳೆ ಆತನಿಂದ ದೂರವಿರಲು ನಿರ್ಧರಿಸಿದ್ದರಿಂದ ಹಾಗೂ ತನ್ನ ಮನೆಗೆ ಬರುವುದನ್ನು ವಿರೋಧಿಸಿದ್ದಕ್ಕೆ ಈ ಅಪರಾಧ ಎಸಗಿದ್ದಾನೆ ಎಂದು ಹೇಳಲಾಗಿದೆ. ಆರೋಪಿಯನ್ನು ಮೊಹಮ್ಮದ್ ಶಕೀಲ್ ಎಂದು ಗುರುತಿಸಲಾಗಿದ್ದು, ಮೊದಲೇ ಪ್ಲ್ಯಾನ್‌ ಮಾಡಿ ಆಯುಧವನ್ನು ಮಡಕೆಯೊಳಗೆ ಬಚ್ಚಿಟ್ಟಿದ್ದ ಎನ್ನಲಾಗಿದೆ. ದಿನಸಿ ಖರೀದಿಸಲು ಹೋದ ಮಹಿಳೆಗೆ ಹೊಂಚು ಹಾಕಿ ಈ ಕೃತ್ಯ ಎಸಗಿದ್ದಾನೆ. ನೀಲಂ ದೇವಿ ಎಂಬ ಮಹಿಳೆಯನ್ನು ಕೆಳಕ್ಕೆ ತಳ್ಳಿ, ಆಕೆಯ ದೇಹದ ವಿವಿಧ ಭಾಗಗಳನ್ನು ಕತ್ತರಿಸಿದ್ದಾನೆ. ಅವರನ್ನು ಭಾಗಲ್ಪುರದ ಜವಾಹರಲಾಲ್ ನೆಹರೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದೇಹದಿಂದ ತೀವ್ರ ರಕ್ತ ಸೋರಿಕೆಯಾಗಿ ಮೃತಪಟ್ಟಿದ್ದಾರೆ. ನೀಲಂ ದೇವಿಯೊಂದಿಗೆ ಹತ್ತಿರವಾಗುತ್ತಿರುವುದಕ್ಕೆ ಶಕೀಲ್‌ಗೆ ಮಹಿಳೆಯ ಮನೆಯವರು ಬೆದರಿಕೆ ಹಾಕಿದ್ದರು. ಆಕೆ ತನಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಆತ ಆಕ್ರೋಶಗೊಂಡಿದ್ದಾನೆ. ಮಹಿಳೆಗೆ ಚಿಕಿತ್ಸೆ…

Read More

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಗಂಡ ಮತ್ತು ಮಗ ಬೇಡವೆಂದು ದೂರವಿದ್ದವಳು ಆತನ ಮೂರೂವರೆ ಎಕರೆ ಆಸ್ತಿಯ ವ್ಯಾಮೋಹಕ್ಕೆ ಗಂಡನ ಹತ್ಯೆ ಮಾಡಿದ್ದಾಳೆ. ನವೆಂಬರ್ 29ರಂದು ನಡೆದಿದ್ದ ರೈತ ರವೀಶ್ ಅನುಮಾನಾಸ್ಪದ ಸಾವಿನ ನಿಜ ಕತೆ ಇದು. 28 ವರ್ಷದ ಹಿಂದೆ ಯಡವನಹಳ್ಳೀ ಗ್ರಾಮದ ರವೀಶ್ ಜೊತೆಗೆ ಮದುವೆಯಾಗಿದ್ದ ತಿಪಟೂರು ಹೊನ್ನೇನಹಳ್ಳಿ ಗ್ರಾಮದ ಶಿವಗಂಗಮ್ಮ ಮದುವೆಯಾದ ಎಂಟೇ ವರ್ಷಕ್ಕೆ ಗಂಡನಿಂದ ದೂರವಾಗಿದ್ದಳು. ಗಂಡನ ಜೊತೆಗಿದ್ದಾಗ ಬಗರ್ ಹುಕಂ ಯೋಜನೆಯಡಿ ಈಕೆಯ ಹೆಸರಿಗೆ 3 ಎಕರೆ 20 ಗುಂಟೆ ಜಮೀನು ಮಂಜೂರಾಗಿತ್ತು. ಈ ಜಮೀನನನು ರವೀಶ್‌ ಕೊಡಲು ಒಪ್ಪದಿದ್ದಾಗ ಒಪ್ಪದಿದ್ದಾಗ ಅವನನ್ನೇ ಮುಗಿಸೋ ಪ್ಲಾನ್ ಮಾಡಿ ಅಣ್ಣನ ಮಗ ಗುರುಪ್ರಸಾದ್ ಜೊತೆಗೆ ಜಮೀನಿನ ಬಳಿ ಬಂದಿದ್ದಾಳೆ. ಆಸ್ತಿ ಕೊಡದ ನಿನ್ನನ್ನ ಉಳಿಸೋದಿಲ್ಲ ಎಂದು ಗುರುಪ್ರಸಾದ್ ಜೊತೆ ಸೇರಿ ಕಲ್ಲು ದೊಣ್ಣೆಯಿಂದ ಹಲ್ಲೆ ಮಾಡಿ ಕೊಂದಿದ್ದಾಳೆ. ‌ ರೈತ ಮುಖಂಡನೆಂದು ಹೇಳಿಕೊಂಡು ಓಡಾಡುತ್ತಿದ್ದ ದಯಾನಂದ್ ಸಹಾಯ ಪಡೆದು ಜಮೀನಿನ ಬಳಿ ರವೀಶ್…

Read More

ಬಿಜೆಪಿಗೆ ರೌಡಿಗಳು, ದುಡ್ಡಿರುವವರು ಕಾಣುತ್ತಾರೆ, ಹಿಂದುತ್ವಕ್ಕಾಗಿ ದುಡಿದ ನಮ್ಮಂಥವರು ಕಾಣುವುದಿಲ್ಲ ಎಂದು ಶ್ರೀರಾಮಸೇನೆಯ ಮುಖಂಡ ಪ್ರಮೋದ್​ ಮುತಾಲಿಕ್ ಹೇಳಿದ್ದಾರೆ. ರೌಡಿಗಳ ಸೇರ್ಪಡೆ ವಿಚಾರ ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ. ಹಣ ಇದ್ದವರನ್ನು, ರೌಡಿಗಳನ್ನು, ಗೂಂಡಾಗಳನ್ನು ಪಕ್ಷದೊಳಗೆ ಸೇರಿಸಿಕೊಳ್ಳುತಿದ್ದಾರೆ. ತ್ಯಾಗ, ಬಲಿದಾನ ಮಾಡಿ ಶ್ರಮ ವಹಿಸಿ ದುಡಿದ ಹಿಂದೂ ಕಾರ್ಯಕರ್ತರು ಅವರಿಗೆ ಕಾಣುತ್ತಿಲ್ಲ. ನಮ್ಮ ಶ್ರೀರಾಮಸೇನೆಯ ಸಿದ್ಧಲಿಂಗ ಶ್ರೀ ಹಾಗೂ ನಾನು ರಾಜಕೀಯ ಪ್ರವೇಶಕ್ಕೆ ನಿರ್ಧಾರ ಮಾಡಿದರೆ ನಿಮಗೆ ಕಾಣುವುದಿಲ್ಲ. ಇಡೀ ಸಮಾಜದ ಸ್ವಾಸ್ಥ್ಯವನ್ನು, ನೈತಿಕತೆಯನ್ನು ಕೆಡಿಸುತ್ತಿರೋದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ. ಹಿಂದೂ ಸಂಘಟನೆಗಳ ಒಕ್ಕೂಟದಿಂದ 25 ಹಿಂದೂವಾದಿ ಅಭ್ಯರ್ಥಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಸುತ್ತೇವೆ. ಇದರಲ್ಲಿ ಐದು ಸ್ವಾಮೀಜಿಗಳು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಅಂಜನಾದ್ರಿ ಕ್ಷೇತ್ರದ ಆವರಣದಲ್ಲಿ 500 ಮೀಟರ್ ಅಂತರದಲ್ಲಿ ಅನ್ಯ ಧರ್ಮೀಯರ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಕೊಡಬಾರದು. ಅವಕಾಶ ಕೊಟ್ಟರೆ ಹನುಮ ಭಕ್ತರು ಅದಕ್ಕೆ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಚುನಾವಣೆಗಾಗಿ ಅದು ಮಾಡ್ತೀವಿ, ಇದು…

Read More

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಗವಾನ್ (89) ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ನಿರ್ದೇಶಕ ಭಗವಾನ್​ ಅವರನ್ನು ಸೋಮವಾರ ಸಂಜೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 1966 ರಲ್ಲಿ ತೆರೆಕಂಡ ‘ಸಂಧ್ಯಾರಾಗ’ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾದರು. ಬಳಿಕ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರರಾಗಿ ಚಿತ್ರನಿರ್ದೇಶಿಸಲು ಪ್ರಾರಂಭಿಸಿದರು. ದೊರೆ-ಭಗವಾನ್ ಎಂದೇ ಖ್ಯಾತರಾದ ಈ ಜೋಡಿ ಕನ್ನಡ ಚಿತ್ರರಂಗದ ಮತ್ತೋರ್ವ ನಿರ್ದೇಶಕರಾದ ದೊರೈರಾಜ್ ಜೊತೆಗೂಡಿ ಚಿತ್ರಗಳನ್ನು ನಿರ್ದೇಶಿಸಿದರು. ಈ ಜೊಡಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಡಾ.ರಾಜ್ ಕುಮಾರ್ ಜೊತೆ ಅತೀ ಹೆಚ್ಚು 30 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ರಾಜ್ಯದ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ರೈತರಿಗೆ ಸರ್ಕಾರ ಎಥೆನಾಲ್ ಮೇಲಿನ ಲಾಭಾಂಶ ನೀಡಲು ನಿರ್ಧರಿಸಿದೆ. ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಬಾಗಲಕೋಟೆ ಸೇರಿ ಹಲವು ಕಡೆ ಕಬ್ಬು ಬೆಳೆಗಾರರು ಭಾರೀ ಪ್ರತಿಭಟನೆ ನಡೆಸಿದ್ದರು.ರೈತರ ಒತ್ತಡಕ್ಕೆ ಮಣಿದು ಸರ್ಕಾರ ಪ್ರತಿ ಟನ್ ಕಬ್ಬಿಗೆ 50 ರೂ. ನಂತೆ ನೀಡಲು ನಿರ್ಧರಿಸಲಾಗಿದೆ. ವಿಕಾಸಸೌಧದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆಸಿದ , ಎಫ್‌ಆರ್ ಪಿ ದರ ಪಾವತಿ ಬಳಿಕ ಪ್ರತಿ ಟನ್ ಗೆ ಹೆಚ್ಚುವರಿಯಾಗಿ 50 ರೂ. ನಂತೆ ಒಟ್ಟು 204.47 ಕೋಟಿ ಬಿಡುಗಡೆ ಮಾಡಿದೆ. ಇಂದೇ ಆದೇಶ ಹೊರಡಿಸುವಂತೆ ಕಬ್ಬು ಅಭಿವೃದ್ದಿ ಆಯುಕ್ತರಿಗೆ ಸಚಿವರು ಸೂಚನೆ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More